Tag: ಮೈಸೂರು ರೋಡ್

  • ಬೆಂಗಳೂರು| ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು

    ಬೆಂಗಳೂರು| ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್ ಡಿಕ್ಕಿ – ಇಬ್ಬರು ಸಾವು

    ಬೆಂಗಳೂರು: ಓವರ್‌ಟೇಕ್ ಮಾಡಲು ಹೋಗಿ ಪರಸ್ಪರ ಬೈಕ್‌ಗಳು ಟಚ್ ಆಗಿದ್ದು, ಸ್ಥಳದಲ್ಲಿಯೇ ಇಬ್ಬರು ಸಾವನ್ನಪ್ಪಿರುವ ಘಟನೆ ಬೆಂಗಳೂರಿನ (Bengaluru) ಮೈಸೂರು ರೋಡ್ (Mysuru Road) ಫ್ಲೈಓವರ್‌ನಲ್ಲಿ ನಡೆದಿದೆ.

    ಮೃತರನ್ನು ಆಕಾಶ್ ಮತ್ತು ಅಫ್ಜಲ್ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಮಣಿ ಮತ್ತು ಆಸಿಮ್ ಗಂಭೀರವಾಗಿ ಗಾಯಗೊಂಡಿದ್ದಾರೆ.ಇದನ್ನೂ ಓದಿ: ಅನೈತಿಕ ಸಂಬಂಧದಲ್ಲಿ ಮನಸ್ತಾಪ – ನಿವೃತ್ತ ಇನ್ಸ್‌ಪೆಕ್ಟರ್ ಮೇಲೆ ಸೀಮೆಎಣ್ಣೆ ಸುರಿದು ಸುಟ್ಟುಹಾಕಿದ ಮಹಿಳೆ

    ಸೋಮವಾರ ರಾತ್ರಿ ಈ ಅವಘಡ ಸಂಭವಿಸಿದೆ. ಮಂಗಳೂರು ಮೂಲದವರಾದ ಆಸಿಮ್, ಅಫ್ಜಲ್ ವಿಜಯನಗರದ ಬಟ್ಟೆ ಅಂಗಡಿಯೊಂದರಲ್ಲಿ ಕೆಲಸ ಮಾಡುತ್ತಿದ್ದರು. ಸೋಮವಾರ ರಾತ್ರಿ 2ರ ಸುಮಾರಿಗೆ ಊಟಕ್ಕೆಂದು ಹೊರಗೆ ಹೊರಟಿದ್ದರು. ಇದೇ ವೇಳೆ ಕೆಪಿ ಅಗ್ರಹಾರ ನಿವಾಸಿಗಳಾದ ಮೆಕಾನಿಕ್ ಕೆಲಸ ಮಾಡುತ್ತಿದ್ದ ಮಣಿ, ಆಕಾಶ್ ಅದೇ ರಸ್ತೆಯಲ್ಲಿ ಹೊರಟಿದ್ದರು. ಈ ವೇಳೆ ಓವರ್‌ಟೇಕ್ ಮಾಡಲು ಬೈಕ್ ಸವಾರರಿಬ್ಬರು ವೇಗವಾಗಿ ಓಡಿಸಿದ್ದಾರೆ. ಪರಿಣಾಮ ಬೈಕ್‌ಗಳು ಪರಸ್ಪರ ಟಚ್ ಆಗಿದ್ದು, ರಸ್ತೆಗೆ ಬಿದ್ದಿದ್ದಾರೆ.

    ಬಿದ್ದ ರಭಸಕ್ಕೆ ಇಬ್ಬರು ಸ್ಥಳದಲ್ಲಿಯೇ ಸಾವನ್ನಪ್ಪಿದ್ದಾರೆ. ಇನ್ನಿಬ್ಬರು ಗಂಭೀರವಾಗಿ ಗಾಯಗೊಂಡಿದ್ದಾರೆ. ಸದ್ಯ ಇಬ್ಬರನ್ನು ಆಸ್ಪತ್ರೆಗೆ ಸೇರಿಸಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ.

    ಸದ್ಯ ಈ ಸಂಬಂಧ ಸಿಟಿ ಮಾರ್ಕೆಟ್ ಸಂಚಾರಿ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.ಇದನ್ನೂ ಓದಿ: ಅಸ್ಸಾಂನಲ್ಲಿ ಭೀಕರ ಪ್ರವಾಹ – ಮುಖ್ಯಮಂತ್ರಿ ಹಿಮಂತ ಬಿಸ್ವಾ ಶರ್ಮಾಗೆ ಮೋದಿ ಕರೆ

  • ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್‌ಗೆ KSRTC ಬಸ್ ಡಿಕ್ಕಿ- ನಾಲ್ವರು ಗಂಭೀರ

    ರಸ್ತೆ ಗುಂಡಿ ತಪ್ಪಿಸಲು ಹೋಗಿ ಮೆಟ್ರೋ ಪಿಲ್ಲರ್‌ಗೆ KSRTC ಬಸ್ ಡಿಕ್ಕಿ- ನಾಲ್ವರು ಗಂಭೀರ

    ಬೆಂಗಳೂರು: ರಸ್ತೆ ಗುಂಡಿಯಿಂದಾಗಿ ಸಿಲಿಕಾನ್ ಸಿಟಿಯಲ್ಲಿ ಭೀಕರ ಅಪಘಾತ ಸಂಭವಿಸಿದ್ದು, 25 ಮಂದಿ ಗಾಯಗೊಂಡಿದ್ದಾರೆ. ಇದರಲ್ಲಿ ನಾಲ್ವರ ಸ್ಥಿತಿ ಗಂಭೀರವಾಗಿದೆ.

    ಬೆಂಗಳೂರಿನ ಮೈಸೂರು ರೋಡ್ ನಲ್ಲಿ ಮೆಟ್ರೋ ಪಿಲ್ಲರ್‍ಗೆ ಕೆಎಸ್‍ಆರ್ ಟಿಸಿ ಬಸ್ ಡಿಕ್ಕಿ ಹೊಡೆದಿದೆ. ಬಸ್ ಮಡಿಕೇರಿಯಿಂದ ಬೆಂಗಳೂರಿಗೆ ಬರುತ್ತಿದ್ದ ಸಂದರ್ಭದಲ್ಲಿ ಮೈಸೂರು ರೋಡ್‍ನ ಪೂರ್ಣಿಮಾ ಪ್ಯಾಲೇಸ್ ಬಳಿ ದುರ್ಘಟನೆ ನಡೆದಿದೆ. ಕೆಆರ್ ನಗರ ಡಿಪೋಗೆ ಸೇರಿದ ಬಸ್ಸಿನಲ್ಲಿ ಸುಮಾರು 45 ಮಂದಿ ಪ್ರಯಾಣಿಕರಿದ್ದರು.

    ಅಪಘಾತಕ್ಕೆ ರಸ್ತೆ ಗುಂಡಿ ಕಾರಣ..?
    ಗುಂಡಿಗೆ ಇಳಿದ ಬಸ್ ಚಾಲಕನ ನಿಯಂತ್ರಣ ತಪ್ಪಿ ಮೆಟ್ರೋ ಪಿಲ್ಲರ್ ಗೆ ಡಿಕ್ಕಿ ಹೊಡೆದಿದೆ ಎನ್ನಲಾಗಿದೆ. ಮೆಟ್ರೋ ಪಿಲ್ಲರ್ ಇಲ್ಲದೇ ಇದಿದ್ರೇ ಬಸ್ ಮತ್ತೊಂದು ಭಾಗದ ರಸ್ತೆಗೆ ಹೋಗಿ ದೊಡ್ಡ ಅನಾಹುತವೇ ಆಗಿ ಹೋಗ್ತಿತ್ತು. ನಾಲ್ಕು ಅಡಿಯ ತಡೆಗೋಡೆಗೆ ಗುದ್ದಿ ಕೊನೆಗೆ ಪಿಲ್ಲರ್ ನಂಬರ್ 545 ಗೆ ಬಸ್ ಗುದ್ದಿದೆ. ಪಿಲ್ಲರ್ ನಂಬರ್ 546 ಬಳಿ ದೊಡ್ಡ ಗುಂಡಿ ಬಿದ್ದಿದೆ. ಗುಂಡಿ ತಪ್ಪಿಸಲು ಹೋಗಿ ಅಪಘಾತವಾಗಿರುವ ಶಂಕೆ ವ್ಯಕ್ತವಾಗಿದೆ. ಇಲ್ಲವೇ ಗುಂಡಿಗೆ ಇಳಿದ ಬಸ್ ನಿಯಂತ್ರಣ ತಪ್ಪಿ ಅಪಘಾತವಾಗಿದೆ. ಘಟನೆಯಿಂದ ಡ್ರೈವರ್ ಬಿಜೆ ಮಂಜುನಾಥ್ ಹಾಗೂ ಕಂಡೆಕ್ಟರ್ ವೆಂಕಟರಮಣ ಅವರಿಗೆ ಗಾಯಗಳಾಗಿದ್ದು, ಇಬ್ಬರನ್ನೂ ಬಿಜಿಎಸ್ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

    ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಎಕ್ಸ್ ಕ್ಲ್ಯೂಸಿವ್ ಆಗಿ ಮಾತನಾಡಿದ ಬಸ್ ಚಾಲಕ, ದೊಡ್ಡ ಗುಂಡಿ ಇತ್ತು. ಹೀಗಾಗಿ ಆ ಗುಂಡಿ ತಪ್ಪಿಸೋಕೆ ಹೋದೆ. ಗೊತ್ತಾಗದೇ ನಾನು ಗಾಡಿಯನ್ನು ಪಿಲ್ಲರ್‍ಗೆ ಗುದ್ದಿದೆ. ಬಸ್ಸಿನಲ್ಲಿ 45 ಜನ ಪ್ಯಾಸೆಂಜರ್ ಇದ್ದರು. ಪ್ಯಾಸೆಂಜರ್ ಎಲ್ಲಾ ಅಲ್ಲಲ್ಲಿ ಟ್ರೀಟ್ ಮೆಂಟ್ ತಗೊಂಡ್ರು ಅನ್ಸುತ್ತೆ. ನಂಗೆ ಹೊಟ್ಟೆಗೆ ಏಟಾಗಿತ್ತು ಎಂದರು. ಇದನ್ನೂ ಓದಿ: 500ಕ್ಕೂ ಹೆಚ್ಚು ಮಸೀದಿಗಳು ಸೇರಿ ಸೂಕ್ಷ್ಮ ಪ್ರದೇಶದಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್‌

    ಅಪಘಾತದಿಂದಾಗಿ ಬಹುತೇಕರಿಗೆ ಬಾಯಿ, ಹಲ್ಲು, ಮುಖದ ಭಾಗಕ್ಕೆ ಗಾಯಗಳಾಗಿದ್ದು, ಗಾಯಾಳುಗಳೆಲ್ಲ ವಿಕ್ಟೊರಿಯಾ, ಬಿಜಿಎಸ್, ಕೆಂಗೇರಿ ಉಪನಗರದ ಸುಪ್ರ ಆಸ್ಪತ್ರೆ ಗೆ ದಾಖಲಾಗಿದ್ದಾರೆ. ಹಿಂಬದಿ ಮತ್ತು ಮುಂದೆ ಕೂತಿದ್ದವರಿಗೆ ಹೆಚ್ಚಿನ ಗಾಯಗಳಾಗಿವೆ. ಫಿನಾಕಲ್ ಆಸ್ಪತ್ರೆಯಲ್ಲಿ ಮೂವರು, ಸುಪ್ರದಲ್ಲಿ 12 ಹಾಗೂ ವಿಕ್ಟೋರಿಯಾದಲ್ಲಿ ನಾಲ್ವರು ಚಿಕಿತ್ಸೆ ಪಡೆಯುತ್ತಿದ್ದಾರೆ. ಬಹುತೇಕರು ಚಿಕಿತ್ಸೆ ಪಡೆದು ವಾಪಸ್ ಆಗಿದ್ದಾರೆ.

  • ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಸಿಲಿಕಾನ್ ಸಿಟಿಯಲ್ಲಿ ವರುಣನ ಅರ್ಭಟ: ಕೆರೆಗಳಂತಾದ ರಸ್ತೆಗಳು

    ಬೆಂಗಳೂರು: ಸಿಲಿಕಾನ್ ಸಿಟಿಯಲ್ಲಿ ಮತ್ತೆ ವರುಣನ ಅರ್ಭಟ ಮುಂದುವರೆದಿದ್ದು ತಡರಾತ್ರಿವರೆಗೂ ಸುರಿದ ಮಳೆಗೆ ರಸ್ತೆಗಳೆಲ್ಲಾ ಕೆರೆಗಳಂತಾಗಿದೆ. ಶಾಂತಿನಗರ, ಡಬ್ಬಲ್ ರೋಡ್, ಮೆಜೆಸ್ಟಿಕ್, ರಾಜಾಜಿನಗರ, ಯಶವಂತಪುರ, ಪೀಣ್ಯ ಸೇರಿದಂತೆ ಬಹುತೇಕ ಕಡೆಗಳಲ್ಲಿ ಭಾರೀ ಮಳೆಯಾಗಿದೆ. ವರುಣನ ಅಬ್ಬರಕ್ಕೆ ನಗರದ ಬಹುತೇಕ ರಸ್ತೆಗಳು ಕೆರೆಗಳಾಂತಾಗಿದೆ. ಕೋರಮಂಗಲದ ರಸ್ತೆಗಳು ಸಂಪೂರ್ಣ ಜಲಾವೃತಗೊಂಡಿದ್ದು ವಾಹನ ಸವಾರರು ಪರದಾಡುವಂತಾಯಿತು.

    ನಗರದಲ್ಲಿ ಮತ್ತೊಮೆ ಮಳೆ ತನ್ನ ಆರ್ಭಟ ತೋರಿಸಿದೆ. ಮೊನ್ನೆಯಷ್ಟೆ ನಾಲ್ವರನ್ನು ಬಲಿ ಪಡೆದ ಮಳೆ ಶನಿವಾರ ತಡರಾತ್ರಿ ಹಾಗೂ ಭಾನುವಾರ ಬೆಳಗಿನ ಜಾವದವರೆಗೂ ಎಡಬಿಡದೆ ಸುರಿದಿದೆ. ಇನ್ನೂ ನಾಯಂಡಹಳ್ಳಿ ಬಳಿ ವಿಪರೀತ ಮಳೆ ಬಂದ ಕಾರಣ ಮನೆಗಳಿಗೆ ನೀರು ನುಗ್ಗಿದ್ದರಿಂದ ರಾತ್ರಿಯಿಡೀ ಜಾಗರಣೆ ನಡೆಸುವಂತಾಗಿತ್ತು. ತಗ್ಗು ಪ್ರದೇಶವಾದ ಕಾರಣ ನೀರು ಮನೆಗೆ ನುಗ್ಗಿದ್ದು ಮನೆಯಲ್ಲಿದ್ದ ವಸ್ತುಗಳೆಲ್ಲವೂ ನಾಶವಾಗಿದೆ. ಇನ್ನು ಈ ಸಂಬಂಧದ ಬಗ್ಗೆ ಬಿಬಿಎಂಪಿ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ಸ್ಥಳೀಯರು ಆರೋಪಿಸಿದ್ದಾರೆ.

    ಬೆಂಗಳೂರಲ್ಲಿ ಮುಂದುವರೆದ ವರುಣನ ಆರ್ಭಟ ಶನಿವಾರ ರಾತ್ರಿ ಸುರಿದ ಧಾರಾಕಾರ ಮಳೆಗೆ ಸಿಲಿಕಾನ್ ಸಿಟಿ ಮುಳುಗಿದೆ. ನೆಲಮಂಗಲ ರಸ್ತೆ, ಮೈಸೂರು ರೋಡ್ ಸಂಪೂರ್ಣ ಜಲಾವೃತಗೊಂಡಿದ್ದು ಮೈಸೂರು ರೋಡ್ ಫ್ಲೆಓವರ್ ಬಳಿ ಸಾರಿಗೆ ಬಸ್ ಹಾಗೂ ಲಾರಿ ಮುಳುಗಿತ್ತು. ಮೈಸೂರು ರಸ್ತೆಯ ಕೆಂಗೇರಿ ಬಸ್ ನಿಲ್ದಾಣದ ಬಳಿ ಹೆದ್ದಾರಿ ಕೆರೆಗಳಂತೆ ಆಗಿದೆ. ಎರಡು ಬಸ್‍ಗಳು ಅರ್ಧಭಾಗ ಮುಳುಗಿತ್ತು. ರಾಜರಾಜೇಶ್ವರಿ ನಗರದ ಆರ್ಚ್ ವರೆಗೂ ಟ್ರಾಫಿಕ್ ಜಾಮ್ ಹಾಗೂ ವಾಹನಗಳು ನಿಂತಲ್ಲೇ ನಿಂತಿತ್ತು. ಎರಡೂ ಬದಿಯಲ್ಲಿ ಟ್ರಾಫಿಕ್ ಜಾಮ್ ಆಗಿತ್ತು.

    ಮೈಸೂರು ರಸ್ತೆ ಸಂಪೂರ್ಣ ಜಲಾವೃತ ಆಗಿದ್ದು ಮೆಟ್ರೋ ಕಾಮಗಾರಿ ನಡೆಯುತ್ತಿರುವ ಹಿನ್ನಲೆಯಲ್ಲಿ ರಸ್ತೆಗೆ ರಾಜಕಾಲುವೆ ನೀರು ನುಗಿತ್ತು. ಮೈಸೂರ್ ರೋಡ್, ಆರ್ ಆರ್ ನಗರ, ಆರ್‍ಟಿಓ ರೋಡ್‍ಗಳಲ್ಲಿ ಬಿಎಂಟಿಸಿ ಬಸ್‍ಗಳು ನೀರಿನಲ್ಲಿ ಮುಳುಗಿತ್ತು. ಮೈಸೂರು ರೋಡ್ ಸಂಚಾರ ಸಂಪೂರ್ಣ ಬಂದ್ ಆಗಿತ್ತು ಹಾಗೂ ಕೋರಮಂಗಲ ಮುಖ್ಯರಸ್ತೆಯಲ್ಲಿ ಸಂಪೂರ್ಣ ಜಲಾವೃತ ಆಗಿತ್ತು.