Tag: ಮೈಸೂರು ಮುಡಾ ಹಗರಣ

  • ಕಡ್ಲೆಪುರಿಗಿಂತಲೂ ಕಡೆಯಾಯ್ತು ಮೈಸೂರಿನ ಸೈಟ್‌ಗಳು – ಕೇವಲ 3 ಸಾವಿರಕ್ಕೆ 60*40 ಸೈಟ್ ಬರೆದುಕೊಟ್ಟ ಮುಡಾ

    ಕಡ್ಲೆಪುರಿಗಿಂತಲೂ ಕಡೆಯಾಯ್ತು ಮೈಸೂರಿನ ಸೈಟ್‌ಗಳು – ಕೇವಲ 3 ಸಾವಿರಕ್ಕೆ 60*40 ಸೈಟ್ ಬರೆದುಕೊಟ್ಟ ಮುಡಾ

    – ಬರೀ 600 ರೂ. ಕಟ್ಟಿಸಿಕೊಂಡು ಸೈಟ್ ಮಾರಾಟ
    – ರಿಯಲ್ ಎಸ್ಟೇಟ್ ಉದ್ಯಮಿಗೆ ಬರೋಬ್ಬರಿ 23 ಸೈಟ್ ಹಂಚಿಕೆ

    ಮೈಸೂರು: ಮುಡಾ ಸೈಟ್ (MUDA Scam Case) ಅಕ್ರಮ ಹಗರಣ ಬಗೆದಷ್ಟು ಬಯಲಾಗುತ್ತಿದೆ. ಕೋಟಿ ಬೆಲೆ ಬಾಳುವ ನಿವೇಶನಗಳನ್ನು ಕೇವಲ 3,000, 6,000 ರೂ.ಗೆ ಮಾರಾಟ ಮಾಡಿರುವುದು ಬೆಳಕಿಗೆ ಬಂದಿದೆ.

    ಮೈಸೂರಿನಲ್ಲಿ 60*40 ಸೈಟ್‌ಗಳು ಕಡ್ಲೆಪುರಿಗಿಂತಲೂ ಕಡೆಯಾಗಿದೆ. ಮೂರು ಸಾವಿರಕ್ಕೆ ಒಂದರಂತೆ ಬರೋಬ್ಬರಿ 23 ಸೈಟ್‌ಗಳನ್ನ ರಿಯಲ್ ಎಸ್ಟೇಟ್ ಉದ್ಯಮಿಗೆ ಮುಡಾ ಬರೆದುಕೊಟ್ಟಿದೆ. ಮುಡಾ ಆಯುಕ್ತ ದಿನೇಶ್ ಮತ್ತು ರಿಯಲ್ ಎಸ್ಟೇಟ್ ಉದ್ಯಮಿ ಬಡಾವಣೆ ಮಂಜುನಾಥ್‌ನಿಂದ ಮಹಾ ಭೂಗಳ್ಳತನ ನಡೆದಿರುವ ಆರೋಪ ಕೇಳಿಬಂದಿದೆ. ಇದನ್ನೂ ಓದಿ: EXCLUSIVE: ಮುಡಾ ಕೇಸ್; 13 ವರ್ಷದಲ್ಲಿ 4,921 ಕ್ಕೂ ಹೆಚ್ಚು ಸೈಟ್‌ಗಳ ಅಕ್ರಮ ಹಂಚಿಕೆ

    5 ದಿನದಲ್ಲಿ ಪ್ರೋತ್ಸಾಹದಾಯಕ ಯೋಜನೆ ಹೆಸರಿನಲ್ಲಿ ಒಂದು ಸೈಟ್‌ಗೆ 3 ಸಾವಿರದ ರೀತಿ 23 ಸೈಟ್‌ಗಳನ್ನು ಉದ್ಯಮಿ ಮಂಜುನಾಥ್‌ಗೆ ಮುಡಾ ರಿಜಿಸ್ಟರ್ ಮಾಡಿಕೊಟ್ಟಿದೆ. ಕ್ರಯ ಪತ್ರದಲ್ಲಿ ಮಂಜುನಾಥ್ ಯಾವ ಜಾಗ ಕಳೆದುಕೊಂಡಿದ್ದರೆ ಎಂಬ ಮಾಹಿತಿಯೇ ಇಲ್ಲ. ಸುಮ್ಮನೆ ಪ್ರೋತ್ಸಾಹದಾಯಕ ಎಂದು ನಮೂದಿಸಿ ಸೈಟ್‌ಗಳ ರಿಜಿಸ್ಟರ್ ಮಾಡಲಾಗಿದೆ. ಎರಡೆರೆಡು ದಿನಗಳ ಅಂತರದಲ್ಲಿ ಒಟ್ಟು 6 ದಿನದಲ್ಲಿ ಪ್ರಾಧಿಕಾರಕ್ಕೆ ಸೇರಿದ ಎಲ್ಲಾ 23 ಸೈಟಗಳು ಉದ್ಯಮಿ ಮಂಜುನಾಥ್ ಹೆಸರಿಗೆ ರಿಜಿಸ್ಟರ್ ಮಾಡಲಾಗಿದೆ.

    ಕೇವಲ 600 ರೂಪಾಯಿ ಶುಲ್ಕ ಕಟ್ಟಿಸಿಕೊಂಡು ಸೈಟ್ ಮಾರಾಟ ಮಾಡಲಾಗಿದೆ. ಇದರಿಂದ ಸರ್ಕಾರಕ್ಕೆ ಪ್ರತಿ ನಿವೇಶನಕ್ಕೆ ಕನಿಷ್ಟ 97 ಲಕ್ಷ ನಷ್ಟ ಆಗಿದೆ. 5 ಲಕ್ಷ ಶುಲ್ಕ ಪಾವತಿ ಸ್ಥಳದಲ್ಲಿ ಕೇವಲ 600 ರೂಪಾಯಿ ಪಾವತಿಯಾಗಿದೆ. ಉಪ ನೋಂದಣಾಧಿಕಾರಿ ಶಾಮಿಲಿನಿಂದ ಭಾರಿ ಅಕ್ರಮ ಶಂಕೆ ವ್ಯಕ್ತವಾಗಿದೆ. ಇದನ್ನೂ ಓದಿ: ಮುಡಾದಲ್ಲಿ ರಾಜಕಾರಣಿಗಳು ಬೇನಾಮಿ ಹೆಸರಿನಲ್ಲಿ ಆಸ್ತಿ ಮಾಡಿದ್ದಾರೆ: ಕಾಂಗ್ರೆಸ್ ಶಾಸಕ ಸ್ಫೋಟಕ ಹೇಳಿಕೆ

    ಎಲ್ಲೆಲ್ಲಿ ಎಷ್ಟೆಷ್ಟು ಸೈಟ್ ಮಾರಾಟ?
    ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್‌ಗೆ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್ ಬರೆದುಕೊಟ್ಟಿರುವ ನಿವೇಶನಗಳ ವಿವರ:
    ದಿನಾಂಕ.05.04.2023 ರಂದು 60*40 ಅಳತೆಯ ಮೂರು ನಿವೇಶನ.
    06.04.2023 ರಂದು 60*40 ಅಳತೆಯ ಮೂರು ನಿವೇಶನ.
    18.04.2023ರಂದು 60*40 ಅಳತೆಯ 8 ನಿವೇಶನ.
    19.04.2023 ರಂದು 60*40 ಅಳತೆಯ 9
    23 ನಿವೇಶನಗಳು ರಿಜಿಸ್ಟರ್.

    ಮೂಲ ಮಾಲೀಕರ ಹೆಸರು ಕೈ ಬಿಟ್ಟು ಜಿಪಿಎ ಪ್ರತಿನಿಧಿ ಮಂಜುನಾಥ್ ನೇರವಾಗಿ ರಿಜಿಸ್ಟರ್ ಆಗಿದೆ. ವಿಜಯನಗರ ಬಡಾವಣೆಯ 3 ಮತ್ತು 4ನೇ ಹಂತದಲ್ಲಿ ನಿವೇಶನ ಮಂಜೂರಾಗಿದೆ. 60*40 ಅಳತೆಯ ನಿವೇಶನಗಳು ಮಂಜೂರು ಮಾಡಲಾಗಿದೆ. ಈ ಪ್ರದೇಶದಲ್ಲಿ ಈಗ 60*40 ನಿವೇಶನದ ಬೆಲೆ 2 ಕೋಟಿ ದಾಟಿದೆ. ಇಂತಹ ಬೆಲೆಬಾಳುವ ನಿವೇಶನಗಳನ್ನ ಕೇವಲ ಮೂರು ಸಾವಿರ ರೂಪಾಯಿಗೆ ಒಂದರAತೆ ಮುಡಾ ಕೊಟ್ಟಿದೆ.

    ಒಂದು ವರ್ಷದ ಹಿಂದೆಯೇ ಮುಡಾ ಭ್ರಷ್ಟಾಚಾರದ ಬಗ್ಗೆ ಲೋಕಾಯುಕ್ತದಲ್ಲಿ ದೂರು ದಾಖಲಾಗಿತ್ತು. ಮುಡಾ ಆಯುಕ್ತ ದಿನೇಶ್ ಉದ್ಯಮಿ ಮಂಜುನಾಥ್ ಮೇಲೆ ಲೋಕಾಯುಕ್ತ ಮೇಲೆ ಒಂದು ವರ್ಷದ ಹಿಂದೆಯೇ ದೂರು ಕೊಡಲಾಗಿತ್ತು. ಕೃಷ್ಣ ಎಂಬ ವ್ಯಕ್ತಿಯಿಂದ ಮೈಸೂರು ಲೋಕಾಯುಕ್ತಕ್ಕೆ ದಾಖಲೆ ಸಮೇತ ದೂರು ನೀಡಲಾಗಿದೆ. ಒಬ್ಬನೇ ವ್ಯಕ್ತಿಯಿಂದ ಸರ್ಕಾರಕ್ಕೆ 300 ಕೋಟಿಗೂ ಅಧಿಕ ನಷ್ಟವಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರದ ಆಯುಕ್ತ ಜಿ.ಟಿ.ದಿನೇಶ್‌ಕುಮಾರ್, ವಿಶೇಷ ತಹಶೀಲ್ದಾರ್ ಶಿವಕುಮಾರ್, ಹೆಚ್ಚುವರಿ ಜಿಲ್ಲಾ ನೋಂದಣಾಧಿಕಾರಿ ಕಾವ್ಯ, ರಿಯಲ್ ಎಸ್ಟೇಟ್ ಉದ್ಯಮಿ ಎನ್.ಮಂಜುನಾಥ್ ವಿರುದ್ಧ ದೂರು ದಾಖಲಾಗಿದೆ. ಪ್ರಾಧಿಕಾರದ ಸದಸ್ಯರು, ಅಧಿಕಾರಿಗಳು, ನೌಕರರುಗಳು ಮತ್ತು ತಪ್ಪಿತಸ್ಥರ ವಿರುದ್ಧ ಕಾನೂನು ಕ್ರಮಕ್ಕೆ ಒತ್ತಾಯಿಸಿ ದೂರು ನೀಡಲಾಗಿತ್ತು. ಇದನ್ನೂ ಓದಿ: ಮುಡಾದಲ್ಲಿ ನಡೆದಿರೋದು 4-5 ಸಾವಿರ ಕೋಟಿ ಹಗರಣ: ಆರ್‌. ಅಶೋಕ್‌ ಬಾಂಬ್‌

    150 ಪುಟದ ದಾಖಲೆ ಒಂದು ವರ್ಷದ ಹಿಂದೆಯೇ ಕೊಟ್ಟರು ಲೋಕಾಯುಕ್ತ ಮೌನವಹಿಸಿದ್ದೇಕೆ ಎಂಬ ಪ್ರಶ್ನೆ ಉದ್ಭವಿಸಿದೆ. ಇದರಿಂದ ಲೋಕಾಯುಕ್ತ ಅಂದಿನ ಎಸ್ಪಿ ಮೇಲೆಯೇ ಅನುಮಾನ ಮೂಡಿದೆ. ಎಲ್ಲಾ ದಾಖಲೆ ಇದ್ದರು ಒಂದೇ ಒಂದು ನೋಟಿಸ್ ಕೊಡುವ ಕೆಲಸವನ್ನು ಲೋಕಾಯುಕ್ತ ಏಕೆ ಮಾಡಲಿಲ್ಲ ಎಂಬ ಪ್ರಶ್ನೆ ವ್ಯಕ್ತವಾಗಿದೆ.

  • ಮುಡಾ ಅಕ್ರಮ ಕೇಸ್‌: ಚರ್ಚೆಗೆ ಅವಕಾಶ ಇಲ್ಲವೆಂದು ಸ್ಪೀಕರ್ ರೂಲಿಂಗ್ – ವಿಧಾನಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ

    ಮುಡಾ ಅಕ್ರಮ ಕೇಸ್‌: ಚರ್ಚೆಗೆ ಅವಕಾಶ ಇಲ್ಲವೆಂದು ಸ್ಪೀಕರ್ ರೂಲಿಂಗ್ – ವಿಧಾನಸಭೆಯಲ್ಲಿ ಗದ್ದಲ, ಮಾತಿನ ಚಕಮಕಿ

    ಬೆಂಗಳೂರು: ಮುಡಾ ಅಕ್ರಮ ಪ್ರಕರಣದ (MUDA Scam Case) ಚರ್ಚೆ ಕುರಿತು ನಿಲುವಳಿ ಮಂಡನೆ ಪ್ರಸ್ತಾಪಕ್ಕೆ ವಿಧಾನಸಭೆಯಲ್ಲಿ ಬಿಜೆಪಿ – ಜೆಡಿಎಸ್ ಸದಸ್ಯರಿಗೆ (BJP – JDS Members) ಹಿನ್ನಡೆಯಾಗಿದ್ದು, ನಿಲುವಳಿ ತಿರಸ್ಕಾರ ಮಾಡಿ ಸ್ಪೀಕರ್ ಯು.ಟಿ ಖಾದರ್ (UT Khader) ರೂಲಿಂಗ್ ನೀಡಿದ್ದಾರೆ. ಎರಡು ಪಕ್ಷಗಳ ಸದಸ್ಯರ ವಾದ – ಪ್ರತಿವಾದ ಆಲಿಸಿ ಕೊನೆಗೆ ಸರ್ಕಾರದ ಆಗ್ರಹದಂತೆ ಸ್ಪೀಕರ್ ನಿಲುವಳಿ ತಿರಸ್ಕರಿಸಿದರು.

    ನಿಲುವಳಿ ತಿರಸ್ಕಾರದ ಬಳಿಕ ʻಶೇಮ್ ಶೇಮ್ʼ ಎಂದು ಬಿಜೆಪಿ ಸದಸ್ಯರಿಗೆ ಕಾಂಗ್ರೆಸ್ ಶಾಸಕರು ಛೇಡಿಸಿದ್ರು. ತುರ್ತು ವಿಚಾರ ಅಲ್ಲ, ಪ್ರಕರಣದ ತನಿಖೆ ವಿಚಾರಣಾ ಆಯೋಗದಲ್ಲಿದೆ. ಹಾಗಾಗಿ ನಿಲುವಳಿ ಪ್ರಸ್ತಾಪಕ್ಕೆ ಅವಕಾಶ ಇಲ್ಲ, ನಿಯಮ 69ರ ಅಡಿ ಚರ್ಚೆಗೂ ಅವಕಾಶ ಇಲ್ಲ ಎಂದು ಸ್ಪೀಕರ್ ರೂಲಿಂಗ್ ಕೊಟ್ಟು ಕಲಾಪ ಮುಂದೂಡಿದರು. ಇದನ್ನೂ ಓದಿ: ಸುಪ್ರೀಂ ಕೋರ್ಟ್‌ಗೆ ಹೋಗಿ ರಾಜ್ಯ ಸರ್ಕಾರ ಬರ ಪರಿಹಾರ ಹಣ ಪಡೆದುಕೊಂಡು ಬಂದಿದೆ – ಕೃಷ್ಣಬೈರೇಗೌಡ

    ಇದಕ್ಕೂ‌ ಮುನ್ನ ಕಲಾಪ ಆರಂಭವಾಗುತ್ತಿದಂತೆ ನಿಲುವಳಿ ಪ್ರಸ್ತಾಪಕ್ಕೆ ಬಿಜೆಪಿ ಆಗ್ರಹಿಸಿತು. ಆದರೆ ಪ್ರಶ್ನೋತ್ತರ ಕಲಾಪದ ಬಳಿಕ‌ ನಿರ್ಣಯ ತೆಗೆದುಕೊಳ್ಳುವುದಾಗಿ ಸ್ಪೀಕರ್ ಭರವಸೆ ನೀಡಿದರು. ಆಗ ಸದನದಲ್ಲಿ ವಾಕ್ಸಮರವೇ ನಡೆಯಿತು. ಮುಖ್ಯಮಂತ್ರಿಗಳೇ ಇದರಲ್ಲಿ ನೇರ ಪಾಲುದಾರರು ಇದ್ದಾರೆ, ಚರ್ಚೆ ಆಗಬೇಕು ಎಂದು ಆರ್‌‌.ಅಶೋಕ್ (R Ashoka) ಆಗ್ರಹಿಸಿದರೆ, ರಾಜ್ಯದ ಜನರೇ ನೋಡ್ತಿದ್ದಾರೆ, ಸಿಎಂ ಮೇಲೆಯೇ ಆರೋಪ ಇರೋದ್ರಿಂದ ಚರ್ಚೆಗೆ ತಗೊಳ್ಳಿ ಅಂತ ಅಶ್ವಥ್ ನಾರಾಯಣ್ ಒತ್ತಾಯಿಸಿದರು. ಆಗ ಸಚಿವ ಬೈರತಿ ಸುರೇಶ್ (Byrathi Suresh) ಆಕ್ರೋಶ ಹೊರಹಾಕಿ, ಮುಡಾದಲ್ಲಿ ನಿಮ್ಮದು ಭ್ರಷ್ಟಾಚಾರ ಇದೆ, ಚರ್ಚೆಗೆ ಕೊಡಿ‌. ನನ್ನ ಹತ್ರನೂ ದಾಖಲೆ ಇದೆ. ಇಲ್ಲಿ ಕುಳಿತಿರುವ ಮಹಾನುಭಾವರದ್ದು ಇದೆ, ಬರೀ ಒಬ್ಬರದ್ದೇ ಹೇಳೋದು ಅಲ್ಲ, ನಮಗೂ ಅವಕಾಶ ಕೊಡಿ, ನಾವು ಚರ್ಚೆ ಮಾಡ್ತೀವಿ ಎಂದು ಸುರೇಶ್ ಅಬ್ಬರಿಸಿದರು.

    ಎಲ್ಲರದ್ದೂ ಬಯಲಿಗೆ ಬರಲಿ, ರಾಜ್ಯ ಲೂಟಿ ಹೊಡೆದಿರುವ ಎಲ್ಲರ ಹೆಸರು ಹೊರಗೆ ಬರಲಿ, ಕ್ಲೀನ್ ಇಂಡಿಯಾ, ಕ್ಲೀನ್ ಕರ್ನಾಟಕ, ಕ್ಲೀನ್ ಆಲ್ ಪಾರ್ಟಿ ಎಂದು ಯತ್ನಾಳ್ ಗುಡುಗಿದರೆ, ಹೊರಗೆ ಬರಬೇಕು, ಎಲ್ಲ ತೆಗೆಯಿರಿ, ಮ್ಯಾಚ್ ಫಿಕ್ಸಿಂಗ್ ಮಾಡಿಕೊಂಡಿದ್ದಾರೆ ಅಂತಾರೆ, ಅದು ಹೊರಗೆ ಬರಲಿ ಎಂದು ಅಶ್ವಥ್‌ ನಾರಾಯಣ್ (Ashwath Narayan) ಆಗ್ರಹಿಸಿದರು. ಆಗ ಸದನದಲ್ಲಿ ಮಾತಿನ ಚಕಮಕಿ, ಗದ್ದಲ ಉಂಟಾಯಿತು. ಇದನ್ನೂ ಓದಿ: ಡಿಕೆಶಿ ಭಾಷಣದ ವೇಳೆ ‘ಡಿ ಬಾಸ್.. ಡಿ ಬಾಸ್’ ಘೋಷಣೆ ಕೂಗಿದ ದರ್ಶನ್ ಅಭಿಮಾನಿಗಳು

    ಸರ್ಕಾರದ ಪರವಾಗಿ ಆಕ್ಷೇಪ ವ್ಯಕ್ತಪಡಿಸಿದ ಸಚಿವ ಹೆಚ್‌.ಕೆ ಪಾಟೀಲ್, ಸದನದ ನಿಯಮಾನುಸಾರ ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ. ಕಾರ್ಯವಿಧಾನ, ನಡವಳಿಕೆಯಲ್ಲಿ ಅವಕಾಶ ಇಲ್ಲ. ಈಗಾಗಲೇ ನಿವೃತ್ತ ನ್ಯಾಯಾಧೀಶರಾದ P.N ದೇಸಾಯಿ ಏಕಸದಸ್ಯ ಆಯೋಗದಿಂದ ವಿಚಾರಣೆ ನಡೆಯುತ್ತಿದೆ. ಆರು ತಿಂಗಳ ಒಳಗೆ ಸರ್ಕಾರಕ್ಕೆ ವರದಿ ಒಪ್ಪಿಸುವ ನಿರೀಕ್ಷೆ ಇದೆ. 2006 ರಿಂದ 2024ರ ವರೆಗೆ ನಡೆದಿರುವ ಅಕ್ರಮದ ಬಗ್ಗೆ ತನಿಖೆ ಆಗ್ತಿದೆ. ಹೀಗಾಗಿ ನಿಯಮ 63ರ ಪ್ರಕಾರ ಇದನ್ನು ಚರ್ಚೆಗೆ ತಗೊಳ್ಳೋಕೆ ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದರು. ಇದನ್ನೂ ಓದಿ: ತುಳುವನ್ನ 2ನೇ ಹೆಚ್ಚುವರಿ ಭಾಷೆಯಾಗಿ ಘೋಷಿಸಿ – ಕಾಂಗ್ರೆಸ್‌ ಶಾಸಕ ಅಶೋಕ್ ರೈ ಒತ್ತಾಯ; ತುಳುವಿನಲ್ಲೇ ಮನವಿ‌

    ಇದಕ್ಕೆ ವಿಪಕ್ಷ ನಾಯಕ ಆರ್.ಅಶೋಕ್ ಆಕ್ಷೇಪಿಸಿ, ನಿನ್ನೆ ಶಿವಲಿಂಗೇಗೌಡ ಜಾರಿ ನಿರ್ದೇಶನಾಲಯದ ಬಗ್ಗೆ ಸದನದಲ್ಲಿ ಚರ್ಚೆ ಮಾಡಿದ್ರಲ್ಲ ಹೇಗೆ ಅನುಮತಿ ಕೊಟ್ರಿ? ಎಂದು ಗುಡುಗಿದರು. ಸದನ ಆರಂಭವಾಗುವ ಹಿಂದಿನ ದಿನ ಸರ್ಕಾರ ‌ನಿವೃತ್ತ ನ್ಯಾಯಾಧೀಶರ ಸಮಿತಿ ರಚಿಸಿದೆ. ಅಂದರೆ ಸದನದಲ್ಲಿ ಇದರ ಬಗ್ಗೆ ಚರ್ಚೆ ಆಗಬಾರದೆಂದು ಮೊದಲೇ ನಿರೀಕ್ಷಣಾ ಜಾಮೀನು ಪಡೆದುಕೊಂಡಿದೆ ಅಂತ ಶಾಸಕ ಸುರೇಶ್ ಕುಮಾರ್ ಆರೋಪಿಸಿದರು. ನಂತರ ಮುಖ್ಯಮಂತ್ರಿಗಳ ಮನೆಯವರಿಗೆ 14 ಫ್ಲಾಟ್‌ಗಳನ್ನು ಕೊಟ್ಟಿದ್ದಾರೆ ಎಂದು ಬಿಜೆಪಿ ಶಾಸಕ ಅರವಿಂದ ಬೆಲ್ಲದ್ ಆರೋಪಿಸಿದರು. ಇದಕ್ಕೆ ಕೈ ಸದಸ್ಯರಿಂದ ಆಕ್ಷೇಪ ವ್ಯಕ್ತವಾಯಿತು. ಒಟ್ಟಾಗಿ ನಿಂತು ಬಿಜೆಪಿ ಶಾಸಕರಿಗೆ ಕೈ ಸದಸ್ಯರು ತಿರುಗೇಟು ನೀಡಿದ್ರು. ಅಂತಿಮವಾಗಿ ಸ್ಪೀಕರ್ ಚರ್ಚೆಗೆ ಅವಕಾಶ ಕೊಡದೇ ರೂಲಿಂಗ್ ಕೊಟ್ಟು, ಸದನ ಮುಂದೂಡಿದರು.