Tag: ಮೈಸೂರು ಬೋಂಡಾ

  • ಸೊಸೆಯ ನಿರ್ಲಕ್ಷ್ಯದಿಂದ ಮೈಸೂರು ಬೋಂಡಾ ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

    ಸೊಸೆಯ ನಿರ್ಲಕ್ಷ್ಯದಿಂದ ಮೈಸೂರು ಬೋಂಡಾ ಸೇವಿಸಿ ನಾಲ್ವರು ಆಸ್ಪತ್ರೆಗೆ ದಾಖಲು

    – ಮದ್ವೆಯಾದ ವರ್ಷದೊಳಗೆ ದಂಪತಿ ಸಾವು

    ಚೆನ್ನೈ: ಕೀಟನಾಶಕ ಮಿಕ್ಸ್ ಆಗಿದ್ದ ಮೈಸೂರು ಬೋಂಡಾ ಸೇವಿಸಿ ಮದುವೆಯಾದ ಒಂದು ವರ್ಷದೊಳಗೆ ಜೋಡಿ ಮೃತಪಟ್ಟಿರುವ ಘಟನೆ ತಮಿಳುನಾಡಿನ ರಾಣಿಪೇಟಾ ಜಿಲ್ಲೆಯಲ್ಲಿ ನಡೆದಿದೆ.

    ಜಿಲ್ಲೆಯ ಎಸ್‍ಆರ್ ಕಂಡ್ರಿಗ ಗ್ರಾಮದಲ್ಲಿ ಘಟನೆ ನಡೆದಿದೆ. ಶಿವಕುಮಾರ್ (27) ಮತ್ತು ಭಾರತಿ (22) ಮೃತ ದಂಪತಿ. ಮನೆಯಲ್ಲಿ ಶಿವಕುಮಾರ್ ತಂದೆ ಪೆರಿಯಸ್ವಾಮಿ ತಮ್ಮ ತೋಟಕ್ಕಾಗಿ ಕೀಟನಾಶ ಸಿಂಪಡಿಸಲು ಕೀಟನಾಶಕ ಖರೀದಿ ಮಾಡಿ ಮನೆಗೆ ತಂದಿದ್ದರು. ಇದೇ ವೇಳೆ ಮನೆಯಲ್ಲಿ ಮೈಸೂರು ಬೋಂಡಾ ಮಾಡಲು ಮೈದಾ ಹಿಟ್ಟನ್ನು ಖರೀದಿ ಮಾಡಿದ್ದರು.

    ಮನೆಗೆ ಬಂದ ಪೆರಿಯಸ್ವಾಮಿ ವಸ್ತುಗಳನ್ನು ತೆಗೆದಿಡುವಂತೆ ಸೊಸೆ ಭಾರತಿಗೆ ಹೇಳಿದ್ದರು. ಆದರೆ ಭಾರತಿ ನಿರ್ಲಕ್ಷ್ಯದಿಂದ ವಸ್ತುಗಳನ್ನು ತೆಗೆದುಕೊಂಡು ಹೋಗುವ ವೇಳೆ ಕೀಟನಾಶಕ ಮೈದಾ ಹಿಟ್ಟಿನಲ್ಲಿ ಮಿಕ್ಸ್ ಆಗಿದೆ. ಆ ದಿನ ಮನೆಯಲ್ಲಿ ಅದೇ ಹಿಟ್ಟನ್ನು ಬಳಸಿ ಬೋಡಾ ಮಾಡಿದ್ದು, ಅದನ್ನು ನಾಲ್ವರು ಸೇವಿಸಿದ್ದಾರೆ. ಸ್ವಲ್ಪ ಸಮಯದ ನಂತರ ನಾಲ್ವರು ವಾಂತಿ ಮಾಡಿಕೊಳ್ಳಲು ಆರಂಭಿಸಿದ್ದರು. ಕೂಡಲೇ ಸ್ಥಳೀಯರು ನಾಲ್ವರನ್ನು ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು.

    ಶಿವಕುಮಾರ್ ಮತ್ತು ಭಾರತಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಚೆನ್ನೈನ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಲಾಗಿತ್ತು. ಆದರೆ ಚಿಕಿತ್ಸೆ ಫಲಕಾರಿಯಾಗದೆ ಭಾರತಿ ಮತ್ತು ಶಿವಕುಮಾರ್ ಮೃತಪಟ್ಟಿದ್ದಾರೆ. ಇನ್ನೂ ಪೆರಿಯಸ್ವಾಮಿ ಮತ್ತು ಲಕ್ಷ್ಮಿಯ ಪರಿಸ್ಥಿತಿ ಗಂಭೀರವಾಗಿದೆ.

    ಈ ಘಟನೆ ಕುರಿತು ಮಾಹಿತಿ ಪಡೆದು ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಶಿವಕುಮಾರ್ ಮತ್ತು ಭಾರತಿ ಮದುವೆಯಾಗಿ ಒಂದು ವರ್ಷದೊಳಗೆ ಮೃತಪಟ್ಟಿರುವುದರಿಂದ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿದೆ.

  • ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    ಸಿಂಪಲ್ ಮೈಸೂರು ಬೋಂಡಾ ಮಾಡುವ ವಿಧಾನ

    ನಾಡಿನಾದ್ಯಂತ ದಸರಾ ಹಬ್ಬದ ಸಂಭ್ರಮ ಆರಂಭವಾಗಿದೆ. ಇಂದು ದಸರಾ ಹಬ್ಬದ ಮೂರನೇ ದಿನದ ಹಬ್ಬ-ಆಚರಣೆಗಳು ಶುರುವಾಗಿದೆ. ದಸರಾ ಅಂದರೆ ಒಂಬತ್ತು ದಿನ ಒಂದೊಂದು ದೇವಿಯನ್ನು ಆರಾಧನೆ ಮಾಡಲಾಗುತ್ತದೆ. ಹಬ್ಬ ಅಂದರೆ ಸಿಹಿ ಮಾತ್ರವಲ್ಲದೇ ಬೇರೆ ತಿಂಡಿಯನ್ನು ಮಾಡಬೇಕಾಗುತ್ತದೆ. ಆದ್ದರಿಂದ ನಿಮಗಾಗಿ ಸಿಂಪಲ್ ಆಗಿ ಮೈಸೂರು ಬೋಂಡಾ ಮಾಡುವ ವಿಧಾನ ಇಲ್ಲಿದೆ..

    ಬೇಕಾಗುವ ಸಾಮಗ್ರಿಗಳು:
    1. ಮೈದಾ ಹಿಟ್ಟು – 1.5 ಬಟ್ಟಲು
    2. ಅಕ್ಕಿ ಹಿಟ್ಟು – 1 ಬಟ್ಟಲು
    3. ಗಟ್ಟಿ ಮೊಸರು – 1/4 ಲೀಟರ್
    4. ಜೀರಿಗೆ -ಸ್ವಲ್ಪ
    5. ಉಪ್ಪು – ರುಚಿಗೆ ತಕ್ಕಷ್ಟು
    6. ಎಣ್ಣೆ – ಕರಿಯಲು
    7. ಅಡುಗೆ ಸೋಡಾ – ಚಿಟಿಕೆ

    ಮಾಡುವ ವಿಧಾನ:
    * ಒಂದು ಬಟ್ಟಲಿಗೆ ಮೈದಾ ಹಿಟ್ಟು, ಅಕ್ಕಿಹಿಟ್ಟನ್ನು ಜರಡಿ ಹಿಡಿದು ಹಾಕಿಕೊಳ್ಳಿ
    * ಅದಕ್ಕೆ ಜೀರಿಗೆ, ಉಪ್ಪು, ಸೋಡಾ ಹಾಕಿ ಮಿಕ್ಸ್ ಮಾಡಿ.
    * ಈಗ ಗಟ್ಟಿ ಮೊಸರು ಹಾಕಿ ಬೋಂಡಾ ಹದಕ್ಕೆ ಕಲಸಿ. (ಹಿಟ್ಟು ಕಲಸಲು ನೀರು ಬಳಸಬೇಡಿ)
    * ಕಾದ ಎಣ್ಣೆಗೆ ಬೋಂಡಾ ರೀತಿ ಉಂಡೆಗಳನ್ನು ಹಾಕಿ ಗೋಲ್ಡನ್ ಬ್ರೌನ್ ಆಗೋ ತನಕ ಕರಿಯಿರಿ.
    * ಸಿಂಪಲ್ ಮೈಸೂರು ಬೋಂಡಾ ಸವಿಯಲು ಸಿದ್ಧ

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv