Tag: ಮೈಸೂರು ಪೊಲೀಸ್

  • ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮನೆ ಮುಂದೆ ಸಾರ್ವಜನಿಕ ವಾಹನ ಸಂಚಾರ ಬಂದ್!

    ಪರಿಷತ್ ಸದಸ್ಯ ಸಂದೇಶ್ ನಾಗರಾಜ್ ಮನೆ ಮುಂದೆ ಸಾರ್ವಜನಿಕ ವಾಹನ ಸಂಚಾರ ಬಂದ್!

    ಮೈಸೂರು: ವಿಧಾನ ಪರಿಷತ್ ಸದಸ್ಯ ಹಾಗೂ ಅವರ ಕುಟುಂಬದವರಿಗೆ ಕಿರಿಕಿರಿಯಾಗಬಾರದೆಂಬ ಕಾರಣಕ್ಕೆ ಅವರ ಮನೆಯ ಮುಂದೆ ಸಾರ್ವಜನಿಕರು ಸಂಚರಿಸುವ ದಾರಿಯ ಮಧ್ಯದಲ್ಲಿ ಕಬ್ಬಿಣದ ರಾಡ್ ಗಳನ್ನು ನಿಲ್ಲಿಸಿ ವಾಹನ ಸಂಚಾರ ಬಂದ್ ಮಾಡಲಾಗಿದೆ.

    ಜಿಲ್ಲೆಯ ಇಟ್ಟಿಗೆಗೂಡು ಬಡಾವಣೆಯಲ್ಲಿ ಸಂದೇಶ್ ನಾಗರಾಜ್ ಅವರ ಮನೆ ಇದೆ. ಈ ರಸ್ತೆಯಲ್ಲಿ ಸಾರ್ವಜನಿಕರ ವಾಹನಗಳು ಸಾಗದಂತೆ ರಸ್ತೆಯ ಮಧ್ಯದಲ್ಲಿ ಕಬ್ಬಿಣಿದ ರಾಡ್‍ಗಳನ್ನು ಹಾಕಿ ವಾಹನ ಸಂಚಾರವನ್ನು ನಿರ್ಬಂಧಿಸಲಾಗಿದೆ.

    ವಿಧಾನ ಪರಿಷತ್ ಸದಸ್ಯನ ಮನೆ ಮುಂದೆ ಸಾರ್ವಜನಿಕರು ತಮ್ಮ ವಾಹನಗಳಲ್ಲಿ ಸಾಗಬಾರದು. ಸಾರ್ವಜನಿಕ ವಾಹನಗಳು ಸಂಚರಿಸಿದರೆ ಪರಿಷತ್ ಸದಸ್ಯರ ಕುಟುಂಬಕ್ಕೆ ಕಿರಿ ಕಿರಿಯಾಗುತ್ತೆ ಎಂದು ಹೀಗೆ ರಸ್ತೆಯನ್ನೆ ಬಂದ್ ಮಾಡಲಾಗಿದೆ.

    ಸಂದೇಶ್ ನಾಗರಾಜ್ ಮನೆಯ ಪಕ್ಕದಲ್ಲೇ ಮಾಲ್ ಆಫ್ ಮೈಸೂರು ಇದೆ. ಇದರಿಂದ ಹೆಚ್ಚು ವಾಹನಗಳ ಸಂಚಾರ ಹಾಗೂ ಪಾರ್ಕಿಂಗ್‍ನಿಂದ ಕಿರಿಕಿರಿ ಆಗುತ್ತಿರುವುದು ಸಹಜ. ಈ ಹಿನ್ನೆಲೆಯಲ್ಲಿ ಅಧಿಕಾರಿಗಳ ಮೇಲೆ ಒತ್ತಡ ತಂದು ರಸ್ತೆ ಬಂದ್ ಮಾಡಿಸಲಾಗಿದೆ ಎಂಬ ಆರೋಪ ಸಾರ್ವಜನಿಕರಿಂದ ಕೇಳಿ ಬಂದಿದೆ.

    ಇದು ಮೈಸೂರು ಮಹಾನಗರ ಪಾಲಿಕೆ ಅಥವಾ, ಸಂಚಾರಿ ಪೊಲೀಸರ ಕೆಲಸ ಇರಬಹುದು ಎನ್ನಲಾಗುತ್ತಿದೆ. ಇದೇ ಮಾರ್ಗದ ಪಕ್ಕದ ರಸ್ತೆಗಳಲ್ಲಿ ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಲಾಗಿದೆ. ಆದರೂ ಸಂದೇಶ್ ನಾಗರಾಜ್ ಮನೆ ಇರುವ ರಸ್ತೆಗೆ ಮಾತ್ರ ಕಬ್ಬಿಣದ ರಾಡ್ ಗಳನ್ನು ಹಾಕಿ, ಸಾರ್ವಜನಿಕ ವಾಹನ ಸಂಚಾರಕ್ಕೆ ನಿರ್ಬಂಧ ಹೇರಲಾಗಿದೆ.

  • ಮೈಸೂರು ನಗರ ಪೊಲೀಸರಿಗೆ ಸಿಹಿ ಸುದ್ದಿ

    ಮೈಸೂರು ನಗರ ಪೊಲೀಸರಿಗೆ ಸಿಹಿ ಸುದ್ದಿ

    ಮೈಸೂರು: ಮಕ್ಕಳ ಹುಟ್ಟುಹಬ್ಬಕ್ಕೆ ಪೊಲೀಸರಿಗೆ ಕಡ್ಡಾಯ ರಜೆ ನೀಡಲಾಗುವುದು ಎಂದು ಮೈಸೂರು ನಗರ ಪೊಲೀಸ್ ಆಯುಕ್ತ ಡಾ.ಎ.ಸುಬ್ರಹ್ಮಣೇಶ್ವರರಾವ್ ನೂತನ ಸುತ್ತೋಲೆಯನ್ನು ಹೊರಡಿಸಿದ್ದಾರೆ.

    ಪೊಲೀಸ್ ಇಲಾಖೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಸಿಬ್ಬಂದಿ ಎಲ್ಲಾ ಸಂದರ್ಭಗಳಲ್ಲೂ ಕರ್ತವ್ಯ ನಿರ್ವಹಿಸುತ್ತಾರೆ. ಹಾಗಾಗಿ ಹಬ್ಬದ ದಿನಗಳಂದು ಕುಟುಂಬದ ಸಂಭ್ರಮಗಳಿಂದ ವಂಚಿತರಾಗುತ್ತಾರೆ. ಇದರಿಂದ ಸಿಬ್ಬಂದಿ ದೈಹಿಕವಾಗಿ ಮಾನಸಿಕವಾಗಿ ಅವರ ಆತ್ಮಸ್ಥೈರ್ಯ ಕುಗ್ಗುತ್ತದೆ.

    ಈ ಪರಿಣಾಮ ಇಲಾಖೆಯಲ್ಲಿ ಸಿಬ್ಬಂದಿಗೆ ಕರ್ತವ್ಯ ನಿರ್ವಹಿಸುವುದಕ್ಕೆ ಅಡಚಣೆಯಾಗುತ್ತದೆ. ಈ ಹಿನ್ನೆಲೆಯಲ್ಲಿ ಪಿಸಿಯಿಂದ ಪಿಎಸ್‍ಐವರೆಗೆ ಎಲ್ಲಾ ಸಿಬ್ಬಂದಿಗೆ ಮಕ್ಕಳ ಹುಟ್ಟುಹಬ್ಬಕ್ಕೆ ಕಡ್ಡಾಯ ರಜೆಯನ್ನು ನೀಡಲಾಗುವುದು ಎಂದು ಸುತ್ತೋಲೆಯಲ್ಲಿ ತಿಳಿಸಲಾಗಿದೆ.

    ಠಾಣೆಯಲ್ಲಿ ಯಾವುದೇ ಪ್ರಮುಖ ಕೆಲಸವಿದ್ದರೂ ಪೊಲೀಸ್ ಸಿಬ್ಬಂದಿಗೆ ಅವರ ಮಕ್ಕಳ ಹುಟ್ಟುಹಬ್ಬದಂದು ರಜೆ ನೀಡಬೇಕು. ಪೊಲೀಸ್ ಠಾಣೆ, ಸಿಸಿಬಿ, ಸಿಎಸ್‍ಬಿ, ಸಿಸಿಆರ್‍ಬಿ, ಕಂಟ್ರೋಲ್ ರೂಂ, ವಿಮಾನ ನಿಲ್ದಾಣ, ಬೆರಳಚ್ಚು ಮುದ್ರೆ ಘಟಕದ ಸಿಬ್ಬಂದಿಗಳಿಗೂ ಈ ಸುತ್ತೋಲೆ ಅನ್ವಯವಾಗಲಿದೆ.

    ಎಲ್ಲಾ ಸಂದರ್ಭಗಳಲ್ಲೂ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ಮಾನಸಿಕ ಸ್ಥಿತಿ ಅರ್ಥ ಮಾಡಿಕೊಂಡು ಹೊಸ ಸುತ್ತೋಲೆ ಹೊರಡಿಸಲಾಗಿದೆ ಎಂದು ಮೈಸೂರು ನಗರ ಪೊಲೀಸ್ ಇಲಾಖೆ ಹೇಳಿದೆ. ಈ ಹೊಸ ಸುತ್ತೋಲೆಯಿಂದ ಪೊಲೀಸ್ ಸಿಬ್ಬಂದಿ ಫುಲ್ ಖುಷ್ ಆಗಿದ್ದಾರೆ.