Tag: ಮೈಸೂರು ಪೊಲೀಸ್

  • ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

    ಮೈಸೂರಿನಲ್ಲಿ ಬಾಲಕಿ ಅತ್ಯಾಚಾರ & ಕೊಲೆ ಪ್ರಕರಣ – ಸಿದ್ದರಾಮಯ್ಯಗೆ ಕಪ್ಪು ಚುಕ್ಕೆ: ಆರ್.‌ ಅಶೋಕ್‌

    – ಸಿಎಂ ತವರಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡದ ಸರ್ಕಾರ ಅಂತ ಕಿಡಿ

    ಮೈಸೂರು: ನಗರದಲ್ಲಿ ಬಾಲಕಿ ಅತ್ಯಾಚಾರ ಮತ್ತು ಕೊಲೆ ಪ್ರಕರಣ (Girl Rape And Murder) ಸಿದ್ದರಾಮಯ್ಯಗೆ ಕಪ್ಪುಚುಕ್ಕೆ, ಇದು ಸರ್ಕಾರದ ವೈಫಲ್ಯದ ಪರಿಣಾಮ ಎಂದು ವಿಪಕ್ಷ ನಾಯಕ ಆರ್. ಅಶೋಕ್ (R Ashok) ಕಿಡಿಕಾರಿದ್ರು.

    ಬೆಂಗಳೂರಿನಲ್ಲಿ ಮಾತಾಡಿದ ಆರ್. ಅಶೋಕ್, ಮೈಸೂರಿನ (Mysuru) ಘಟನೆ ರಾಜ್ಯವನ್ನು ತಲ್ಲಣಗೊಳಿಸಿದೆ. ಬಾಲಕಿ ಅತ್ಯಾಚಾರ ತಡೆಯೋಕಾಗದವರು ಯಾವ ಪುರುಷಾರ್ಥಕ್ಕೆ ದಸರಾ‌ ಮೆರವಣಿಗೆ ಮಾಡಿದ್ರು? ರಾಜ್ಯದಲ್ಲಿ ರೇಪ್ ಮೆರವಣಿಗೆ ಸಾಗಿದೆ. ಸಿಎಂ ಸ್ವತಃ ತಮ್ಮ ಜಿಲ್ಲೆಯಲ್ಲೇ ಬಾಲಕಿ ರಕ್ಷಣೆ ಮಾಡುವಲ್ಲಿ ವಿಫಲರಾಗಿದ್ದಾರೆ. ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ.‌ ಸರ್ಕಾರ ತಲೆತಗ್ಗಿಸುವ ಘಟನೆ ಇದು ಎಂದು ವಾಗ್ದಾಳಿ ನಡೆಸಿದ್ರು. ಇದನ್ನೂ ಓದಿ: ಮೈಸೂರು | ಬಾಲಕಿಯ ರೇಪ್‌ ಬಳಿಕ ಎದೆ, ಹೊಟ್ಟೆ, ಮರ್ಮಾಂಗಕ್ಕೆ 19 ಬಾರಿ ಚಾಕು ಇರಿದು ಕೊಂದಿದ್ದ ಕಾಮುಕ

    ನೈಟ್ ಬೀಟ್ ಪೊಲೀಸರು ಏನ್ ಮಾಡ್ತಿದ್ರು? ಪೋಸ್ಟಿಂಗ್‌ಗಾಗಿ ಕಾಸು ಕಲೆಕ್ಷನ್‌ಗೆ ಹೋಗಿದ್ರಾ ಪೊಲೀಸರು? ಸಿಎಂ ತವರು ಜಿಲ್ಲೆಯಲ್ಲಿ ಅತ್ಯಾಚಾರ ಪ್ರಕರಣ ನಡೆದಿದ್ದರೂ ಸಿಎಂ, ಡಿಸಿಎಂ ಚಕಾರ ಇಲ್ಲ. ಕಾನೂನು ಸುವ್ಯವಸ್ಥೆ ಕಾಪಾಡದೇ ಸರ್ಕಾರ ಕೈಚೆಲ್ಲಿದೆ. ಸರ್ಕಾರ ಕ್ರಮ ಕೈಗೊಳ್ಳದೇ ನಿದ್ದೆಯಲ್ಲಿದೆ, ಇದು ಅವಮಾನವೀಯ ಘಟ‌ನೆ. ಪೊಲೀಸರು ದಸರಾ (Dasara) ಗುಂಗಲ್ಲೇ ಇದ್ದಿದ್ರೆ ಅಲರ್ಟ್ ಆಗಿರ್ಬೇಕಿತ್ತು. ಇಡೀ ಮೈಸೂರು ವಿದ್ಯುದ್ದೀಪಾಲಂಕಾರದ ಬೆಳಕಿನಿಂದ ಝಗಮಗಿಸ್ತಿತ್ತು. ನಾಲ್ಕೈದು ಜಿಲ್ಲೆಗಳ ಪೊಲೀಸರು ಭದ್ರತೆಗಿದ್ರು. ಇಷ್ಟಿದ್ರೂ ಬಾಲಕಿ ರೇಪ್ ತಡೆಯಲು ಆಗಿಲ್ಲ. ದೆಹಲಿಯಲ್ಲಿ ಮೋದಿ ಮನೆ ಮುಂದೆ ರಸ್ತೆಗುಂಡಿ ಪತ್ತೆ ಹಚ್ಚೋರು ಬಾಲಕಿ ಅತ್ಯಾಚಾರ ತಡೆಯಲು ಆಗಿಲ್ಲ ಎಂದು ಅಶೋಕ್ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮೈಸೂರಿನ ಪೊಲೀಸರಿಗೆ ಸಿಎಂ ಪುತ್ರ ಯತೀಂದ್ರನ ಕಾಟ ಹೆಚ್ಚಾಗಿದೆ: ಪ್ರತಾಪ್ ಸಿಂಹ ಆರೋಪ

    ಇನ್ನು ಮೈಸೂರು ಪೊಲೀಸರಿಗೆ ಯತೀಂದ್ರ ಕಾಟ ಎಂದು ಪ್ರತಾಪ್ ಸಿಂಹ (Pratap Simha) ಆರೋಪ ಸರಿ ಇದೆ. ಪ್ರತಾಪ್ ಸಿಂಹ ಸತ್ಯ ಹೇಳಿದ್ದಾರೆ. ಪೋಸ್ಟಿಂಗ್ ವ್ಯವಹಾರ ಸರ್ಕಾರದಲ್ಲಿ ನಡೀತಿದೆ. ಪೊಲೀಸರು ಫೀಲ್ಡ್‌ನಲ್ಲಿಲ್ಲ, ಪೋಸ್ಟಿಂಗ್‌ಗಾಗಿ ಶಾಸಕರು, ಸಚಿವರ ಮನೆ ಮುಂದೆ ಇದ್ದಾರೆ ಎಂದು ಅಶೋಕ್ ಹೇಳಿದ್ರು. ಇದನ್ನೂ ಓದಿ: ಚಾಮುಂಡಿ ತಾಯಿಗೆ ಮುಡಿ ಉತ್ಸವ; ರಾಜರ ವಜ್ರ-ವೈಡೂರ್ಯ ಅಲಂಕಾರದಲ್ಲಿ ಕಂಗೊಳಿಸಿದ ದೇವಿ

  • ಮೈಸೂರಲ್ಲಿ ನಡುರಸ್ತೆಯಲ್ಲೇ ಕೊಲೆ ಪ್ರಕರಣ; ಡಾನ್ ಪಟ್ಟಕ್ಕಾಗಿ ನಡೀತು ರೌಡಿಶೀಟರ್ ಆಪ್ತನ ಹತ್ಯೆ

    ಮೈಸೂರಲ್ಲಿ ನಡುರಸ್ತೆಯಲ್ಲೇ ಕೊಲೆ ಪ್ರಕರಣ; ಡಾನ್ ಪಟ್ಟಕ್ಕಾಗಿ ನಡೀತು ರೌಡಿಶೀಟರ್ ಆಪ್ತನ ಹತ್ಯೆ

    – ಪೊಲೀಸರಿಗೆ ಶರಣಾಗಿ ತಪ್ಪೊಪ್ಪಿಕೊಂಡ ಐವರು ಆರೋಪಿಗಳು

    ಮೈಸೂರು: ನಗರದ ಅರಮನೆ ಬಳಿ ನಿನ್ನೆ ಮಧ್ಯಾಹ್ನ ರೌಡಿ ಶೀಟರ್ (Rowdy Sheeter) ಸಹವರ್ತಿಯ ಬರ್ಬರ ಕೊಲೆಯಾಗಿತ್ತು. ಕೊಲೆಗೆ ಡಾನ್ ಪಟ್ಟಕ್ಕಾಗಿ ಶುರುವಾದ ಪೈಪೋಟಿಯೆ ಕಾರಣ ಅನ್ನೋದು ಈಗ ಸ್ಪಷ್ಟವಾಗಿದೆ. ಅಲ್ಲದೇ ಆರೋಪಿಗಳೇ ಪೊಲೀಸರಿಗೆ ಶರಣಾಗಿರೋದು ಅಚ್ಚರಿ.

    ಹೌದು.. ನಿನ್ನೆ ಮಧ್ಯಾಹ್ನ ಮೈಸೂರಿನ ಅರಮನೆ (Mysuru Palace) ಬಳಿಯೇ ನಡುರಸ್ತೆಯಲ್ಲಿ ರೌಡಿ ಶೀಟರ್ ಕಾರ್ತಿಕ ಸಹವರ್ತಿ ಗಿಲಿ ಗಿಲಿ ವೆಂಕಟೇಶ್‌ನನ್ನು ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಆಟೋ ಮತ್ತು ದ್ವಿಚಕ್ರ ವಾಹನದಲ್ಲಿ ಬಂದ ಆರು ಜನರು ಸ್ವಿಫ್ಟ್ ಕಾರಿನಲ್ಲಿ ಬರುತ್ತಿದ್ದ ವೆಂಕಟೇಶ್‌ನನ್ನು ನಿಲ್ಲಿಸಿ ಕಣ್ಣಿಗೆ ಖಾರದ ಪುಡಿ ಎರಚಿ ಮಾರಕಾಸ್ತ್ರಗಳಿಂದ ಕೊಚ್ಚಿ ಕೊಚ್ಚಿ ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ರು. ಈ ಘಟನೆ ಮೈಸೂರನ್ನ ಬೆಚ್ಚಿಬೀಳಿಸಿತ್ತು. ಈ ಹಿಂದೆ ಹತ್ಯೆ ಆಗಿದ್ದ ರೌಡಿಶೀಟರ್ ಕಾರ್ತಿಕ್ ಜೊತೆ ಹಣಕಾಸು ವ್ಯವಹಾರ ನಡೆಸುತ್ತಿದ್ದ ವೆಂಕಟೇಶ್‌ನನ್ನು ಹತ್ಯೆ ಮಾಡಲಾಗಿತ್ತು. ಕೊಲೆ ಮಾಡಿ ಪರಾರಿ ಆಗಿದ್ದ ಆರೋಪಿಗಳು ಇದೀಗ ತಡರಾತ್ರಿ ಪೊಲೀಸರಿಗೆ ಶರಣಾಗಿದ್ದಾರೆ.

    ಪೊಲೀಸರಿಗೆ ಶರಣಾದ ಆರೋಪಿಗಳು ಯಾತಕ್ಕಾಗಿ ಕೊಲೆ ಮಾಡಿದ್ದು ಎಂದು ತಪ್ಪೊಪ್ಪಿಕೊಂಡಿದ್ದು.. ರೌಡಿ ಫೀಲ್ಡ್‌ನಲ್ಲಿ ಡಾನ್ ಪಟ್ಟಕ್ಕಾಗಿ ನಡೆದ ಪೈಪೋಟಿಯಿಂದಲೇ ಕೊಲೆ ಎಂಬುದು ಬಯಲಾಗಿದೆ.

    ಒಂದೇ ಗ್ಯಾಂಗ್‌ನಲ್ಲಿದ್ದವರ ಮಧ್ಯೆ ಪಟ್ಟಕ್ಕಾಗಿ ಪೈಪೋಟಿ
    ಐದು ತಿಂಗಳ ಹಿಂದೆ ಮೈಸೂರಿನ ಕ್ಯಾತಮಾರನಹಳ್ಳಿಯ ರೌಡಿಶೀಟರ್ ಕಾರ್ತಿಕ್‌ನ ಮರ್ಡರ್ ಆಗಿತ್ತು. ಹೀಗಾಗಿ ಕಾರ್ತಿಕ್‌ಗೆ ಇದ್ದ ಡಾನ್ ಪಟ್ಟದಲ್ಲಿ ಯಾರು ಕೂರಬೇಕು ಎಂಬ ಬಗ್ಗೆ ಕಾರ್ತಿಕ್ ಗುಂಪಿನಲ್ಲೇ ಪೈಪೋಟಿ ಶುರುವಾಗಿತ್ತು. ಡಾನ್ ಪಟ್ಟಕ್ಕಾಗಿ ಕೊಲೆಯಾದ ವೆಂಕಟೇಶ್ ಹಾಗೂ ಕೊಲೆಯ ರೂವಾರಿ ಹಾಲಪ್ಪ ನಡುವೆ ಒಳ ಜಗಳ ನಡೆಯುತ್ತಿತ್ತು. ಕಾರ್ತಿಕ್ ಕೊಲೆಗೂ ಮುನ್ನ ಮನಃಸ್ತಾಪವಾಗಿ ವೆಂಕಟೇಶ್ ಈ ಗುಂಪಿನಿಂದ ಬೇರೆ ಆಗಿದ್ದ. ಕಾರ್ತಿಕ್ ಕೊಲೆ ನಂತರ ಫೀಲ್ಡ್‌ನಲ್ಲಿ ಮತ್ತೆ ಮೆರೆಯಲು ವೆಂಕಟೇಶ್ ಶುರು ಮಾಡಿದ್ದ. ಇದನ್ನು ಸಹಿಸದ ಹಾಲಪ್ಪ ಹಾಗೂ ಸಹಚರರು ಜಗಳ ಶುರು ಮಾಡಿದ್ದರು.

    ಹಾಲಪ್ಪ ತನ್ನ ಡಾನ್ ಪಟ್ಟಕ್ಕೆ ಅಡ್ಡಿಯಾಗಿದ್ದಾನೆ ಎಂದು ಗಿಲಿ ಗಿಲಿ ವೆಂಕಟೇಶ ಹಾಲಪ್ಪನ ಕೊಲೆಗೆ ಸ್ಕೆಚ್ ಹಾಕಿದ್ದ. ಹಾಲಪ್ಪನನ್ನು ಕೊಲ್ಲಲು ವೆಂಕಟೇಶ್ ಹಾಗೂ ಅವನ ಶಿಷ್ಯಂದಿರು ಹುಡುಕಾಟ ನಡೆಸಿದ್ದರು. ವಾರದ ಹಿಂದೆ ಹಾಲಪ್ಪ ಸ್ನೇಹಿತ ಮಂಜುನಾಥ್ ಮನೆ ಮುಂದೆ ಹಾಲಪ್ಪ ಎಲ್ಲಿ ಅಂತಾ ಜಗಳವಾಡಿದ್ದರು. ಈ ಸಂಬಂಧ ನಜರಬಾದ್ ಠಾಣೆಯಲ್ಲಿ ದೂರು ಕೂಡ ದಾಖಲಾಗಿತ್ತು.

    ಗಿಲಿಗಿಲಿ ವೆಂಕಟೇಶ್ ಗ್ಯಾಂಗ್ ಈ ನಡೆಗೆ ಬೆಚ್ಚಿದ್ದ ಹಾಲಪ್ಪ, ಪ್ರತಿಯಾಗಿ ಗಿಲಿಗಿಲಿ ವೆಂಕಟೇಶ್ ಕೊಲೆಗೆ ಸ್ಕೆಚ್ ಹಾಕಿದ್ದ. ತನ್ನ ಐವರು ಸಹಚರರನ್ನು ಬಿಟ್ಟು ವೆಂಕಟೇಶ್‌ನನ್ನ ನಡು ರಸ್ತೆಯಲ್ಲೇ ಅಡ್ಡಗಟ್ಟಿ ಮಚ್ಚಿನಿಂದ ಕೊಚ್ಚಿ ಕೊಲೆ ಮಾಡಿಸಿದ್ದಾನೆ. ಕೊಲೆಯಾದ ಬಳಿಕ ಹಾಲಪ್ಪ ಎಸ್ಕೇಪ್ ಆಗಿದ್ದಾನೆ. ಸಹಚರರು ಪೊಲೀಸರಿಗೆ ಶರಣಾಗಿದ್ದಾರೆ.

    ಈ ಕೊಲೆ ಮೂಲಕ ಮೈಸೂರಲ್ಲಿ ರೌಡಿಸಂ ಮತ್ತೆ ಗರಿ ಬಿಚ್ಚಿ ಕೊಂಡಿರುವುದು ಸ್ಪಷ್ಟವಾಗಿ ಗೊತ್ತಾಗುತ್ತಿದೆ. ಪೊಲೀಸರು ಈಗಲೇ ಈ ಗರಿಗಳ ಕತ್ತರಿ ಹಾಕಬೇಕಿದೆ.

  • ಪ್ರೀ ವೆಡ್ಡಿಂಗ್‌ಗೆ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಅಸಾಮಿ

    ಪ್ರೀ ವೆಡ್ಡಿಂಗ್‌ಗೆ ಫೋಟೋಗ್ರಾಫರ್ ಕರೆಸಿ 8 ಲಕ್ಷ ಮೌಲ್ಯದ ಕ್ಯಾಮೆರಾ ಕದ್ದ ಅಸಾಮಿ

    ಮೈಸೂರು: ಪ್ರೀ ವೆಡ್ಡಿಂಗ್ ಶೂಟ್‌ಗೆ (Pre Wedding Shoot)ಕರೆಸಿದ ವ್ಯಕ್ತಿ 8 ಲಕ್ಷ ರೂ. ಮೌಲ್ಯದ ಕ್ಯಾಮೆರಾ ಕದ್ದು ಪರಾರಿಯಾದ ಘಟನೆ ಮೈಸೂರಿನ ದೇವರಾಜ ಪೊಲೀಸ್ ಠಾಣೆ (Devaraja Police Station) ವ್ಯಾಪ್ತಿಯಲ್ಲಿ ನಡೆದಿದೆ.

    ನಿಮ್ಮ ಇನ್‌ಸ್ಟಾಗ್ರಾಮ್‌ ಫ್ರೋಪೈಲ್ ನೋಡಿದ್ದೇನೆ ಮೈಸೂರಿನಲ್ಲಿ ಪ್ರೀ ವೆಡ್ಡಿಂಗ್ ಶೂಟ್ ಮಾಡಬೇಕು ಎಂದು ಗಣೇಶ್ ಎಂಬ ವ್ಯಕ್ತಿ ಮೈಸೂರಿನ ಸಾಲಿಗ್ರಾಮದ ಭಾರ್ಗವ್ ಎನ್ನುವ ಫೋಟೋ ಗ್ರಾಫರ್‌ಗೆ ಕರೆ ಮಾಡಿದ್ದಾನೆ. ಬಳಿಕ 75,000 ರೂ.ಗೆ ಫೋಟೋ ಶೂಟ್ ಅಗ್ರಿಮೆಂಟ್ ಮಾಡಿಕೊಂಡು ಇದಕ್ಕೆ 2,000 ಹಣವನ್ನು ಆನ್‌ಲೈನ್‌ನಲ್ಲಿ ಗಣೇಶ್ ವರ್ಗಾವಣೆ ಸಹ ಮಾಡಿದ್ದಾನೆ. ದನ್ನೂ ಓದಿ: ಕ್ರಿಸ್‌ಮಸ್‌ ಸಂಭ್ರಮ – ನೀವೂ ವಿಶ್‌ ಮಾಡ್ಬೇಕಾ? ವಾಟ್ಸಪ್‌ ಸ್ಟೇಟಸ್‌ಗೆ ಇಲ್ಲಿದೆ ಸಿಂಪಲ್‌ ಟಿಪ್ಸ್‌

    ಮೈಸೂರಿಗೆ ಫೋಟೋಗ್ರಾಫರ್ ಭಾರ್ಗವ್‌ನನ್ನ ಕರೆಸಿದ ಗಣೇಶ್‌ ತಾನೇ ಬುಕ್ ಮಾಡಿದ ಲಾಡ್ಜ್‌ನಲ್ಲಿ ಉಳಿಯುವಂತೆ ಹೇಳಿದ್ದಾನೆ. ಬಳಿಕ ನಮ್ಮ ಕಡೆಯವರು ದೇವರಾಜ ಮಾರುಕಟ್ಟೆ ಬಳಿ ಇದ್ದಾರೆ, ಅವರ ಜೊತೆ ಊಟ ಮಾಡಿಕೊಂಡು ಬನ್ನಿ. ಫೋಟೋ ಶೂಟ್‌ಗೆ ಅವರಿಗೆ ಲೊಕೇಷನ್ ತೋರಿಸಿ ಎಂದು ಭಾರ್ಗವ್ ನನ್ನು ಹೊರಗಡೆ ಕಳುಹಿಸಿದ ಗಣೇಶ್‌ನಂತರ ಕೆಲಹೊತ್ತಿನ ನಂತರ ಮೊಬೈಲ್ ಸ್ವಿಚ್ ಆಫ್ ಮಾಡಿಕೊಂಡಿದ್ದಾನೆ. ಆಗ ಭಾರ್ಗವ್ ರೂಂ ನಲ್ಲಿ ಬಂದು ನೋಡಿದಾಗ ತನ್ನ ಕ್ಯಾಮೆರಾ ಅಲ್ಲಿ ಇರಲಿಲ್ಲ. ಸದ್ಯ ದೇವರಾಜ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ದನ್ನೂ ಓದಿ: ʻಸಾಂತಾಕ್ಲಾಸ್‌ʼನಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ ಸಂಭ್ರಮ – ವಿಲೇಜ್‌ ಇರೋದಾದ್ರೂ ಎಲ್ಲಿ?

  • Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌

    Mysuru | ಅನುಮತಿ ಪಡೆಯದೇ ಪಾರ್ಟಿ – 8 ಯುವತಿಯರು ಸೇರಿ 64 ಮಂದಿ ವಿರುದ್ಧ ಕೇಸ್‌

    ಮೈಸೂರು: ನಗರದ ಹೊರವಲಯದಲ್ಲಿ ಅನುಮತಿ ಪಡೆಯದೇ ಪಾರ್ಟಿ ನಡೆಸಿದ್ದ ಅಲ್ಲದೇ 64 ಮಂದಿ ವಿರುದ್ಧ ಪೊಲೀಸರು (Mysuru Police) ಪ್ರಕರಣ ದಾಖಲಿಸಿದ್ದಾರೆ ಎಂದು ಪೊಲೀಸ್‌ ಮೂಲಗಳು ತಿಳಿಸಿವೆ.

    ಬಿಎನ್‌ಎಸ್‌ ಕಲಂ 221, 223, 121(2), 15(A), 32, 34, 38(A) KE ಅನ್ವಯ ಪ್ರಕರಣ ದಾಖಲಾಗಿದೆ. ಬಂಧಿತರು ಮೈಸೂರು, ಮಡಿಕೇರಿ, ಬೆಂಗಳೂರು ಹಾಗೂ ತಮಿಳುನಾಡು (Tamil Nadu) ಮೂಲದವರು ಎಂದು ತಿಳಿದುಬಂದಿದೆ. ಇದನ್ನೂ ಓದಿ: ಶೂದ್ರರಿಗೆ ಮಾನ ಮರ್ಯಾದೆ ಇದ್ದರೆ ದೇವಸ್ಥಾನಕ್ಕೆ ಹೋಗಬಾರದು: ಪ್ರೊ.ಕೆ.ಎಸ್.ಭಗವಾನ್

    ಏನಾಗಿತ್ತು?
    ಕೆಆರ್‌ಎಸ್‌ ಹಿನ್ನೀರಿನ (KRS Back Water) ಬಳಿಯಿರುವ ಎಡಹಳ್ಳಿ ಗ್ರಾಮದಲ್ಲಿ ಮಧು ಎಂಬಾತನಿಗೆ ಸೇರಿದ ಜಮೀನಿನಲ್ಲಿ ಕೆ.ಆರ್.ನಗರ ತಾಲೂಕಿನ ಮೂಲೆಪೆಟ್ಲು ಗ್ರಾಮದ ಸಂತೋಷ್ ಅಂಬಾತ ಪಾರ್ಟಿ ಆಯೋಜನೆ ಮಾಡಿದ್ದ. ಅಧಿಕೃತವಾಗಿ ಪಾರ್ಟಿಗೆ ಅನುಮತಿ ಪಡೆಯಲಾಗಿದೆ ಎಂದು ಸೋಶಿಯಲ್‌ ಮೀಡಿಯಾದಲ್ಲಿಯೂ ಬರೆದುಕೊಂಡಿದ್ದ. ಈ ಹಿನ್ನೆಲೆ ಹೆಚ್ಚಿನ ಸಂಖ್ಯೆಯಲ್ಲಿ ಯುವಕ-ಯುವತಿಯರು ನೋಂದಣಿ ಮಾಡಿಕೊಂಡಿದ್ದರು. ಆದ್ರೆ ಡಿಜೆ ಮೂಲಕ ಅಬ್ಬರದ ಮ್ಯೂಸಿಕ್ ಹಾಕಿದ್ದ ಕಾರಣ ಪೊಲೀಸ್ ವರಿಷ್ಠಾಧಿಕಾರಿ ವಿಷ್ಣುವರ್ಧನ್ ಅವರಿಗೆ ಮಾಹಿತಿ ನೀಡಲಾಗಿತ್ತು. ಎಸ್ಪಿ ಆದೇಶದಂತೆ ಹೆಚ್ಚುವರಿ ಎಸ್ಪಿ ನಾಗೇಶ್ ಹಾಗೂ ಡಿವೈಎಸ್‌ಪಿ ಕರೀಂ ರಾವತರ್‌ ದಾಳಿ ನಡೆಸಿ ಸಾಕಷ್ಟು ಯುವಕ-ಯುವತಿಯರನ್ನ ವಶಕ್ಕೆ ಪಡೆದುಕೊಂಡಿದ್ದರು. ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪವೂ ವ್ಯಕ್ತವಾಗಿದೆ.

    ಇದಕ್ಕೆ ಸಂಬಂಧಿಸಿದಂತೆ ಎಸ್‌ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್‌ಎಸ್‌ಎಲ್ ತಂಡ ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಹಾಗೂ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ. ಇದನ್ನೂ ಓದಿ: ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

    ಇಸ್ರೇಲ್‌ನ ರ‍್ಯಾಪರ್ ಗ್ರೇನ್ ರಿಪ್ಪರ್ ಭಾಗಿ:
    ಒಟ್ಟು 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾರ್ಟಿಯಲ್ಲಿ ಇಸ್ರೇಲ್‌ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ ಬಂದಿದ್ದನು. ಆಯೋಜಕರಿಂದ ಪಾರ್ಟಿಗೆ ಬರಲು ತಲಾ 2000 ರೂ. ಹಣವನ್ನು ನಿಗದಿ ಮಾಡಿದ್ದರು. ಪೊಲೀಸರ ದಾಳಿ ವೇಳೆ ಅಲ್ಲಿದ್ದ ಯುವಕ-ಯುವತಿಯರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ. ಇದನ್ನೂ ಓದಿ: ಲಾ ಕಾಲೇಜ್‌ಗೆ ಸೇರಿಸದಿದ್ದರೇ ಆಸ್ತಿಯಲ್ಲಿ ಭಾಗ ಕೊಡು ಅಂತ ನಮ್ಮಪ್ಪನನ್ನ ಕೇಳಿದ್ದೆ: ಸಿಎಂ

  • ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

    ಮೈಸೂರಿನಲ್ಲಿ ರೇವ್ ಪಾರ್ಟಿ? – ಪೊಲೀಸರು ದಾಳಿ ನಡೆಸಿ 50ಕ್ಕೂ ಹೆಚ್ಚು ಯುವಕರು ವಶಕ್ಕೆ

    ಮೈಸೂರು: ನಗರದ ಹೊರವಲಯದಲ್ಲಿ ತಡರಾತ್ರಿ ನಡೆಯುತ್ತಿದ್ದ ರೇವ್ ಪಾರ್ಟಿ ಅನುಮಾನದ ಮೇರೆಗೆ (Rave Party) ಪೊಲೀಸರು ದಾಳಿ ನಡೆಸಿ, 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದಾರೆ.

    ಸಾಂಸ್ಕೃತಿಕ ನಗರಿ ಮೈಸೂರಿನ (Mysuru) ಹೊರವಲಯದಲ್ಲಿ ರೇವ್ ಪಾರ್ಟಿ ಬಗ್ಗೆ ಅನುಮಾನಗೊಂಡು ಮೈಸೂರು ಜಿಲ್ಲಾ ಪೊಲೀಸರು ಕಾರ್ಯಾಚರಣೆ ನಡೆಸಿದ್ದಾರೆ.

    ತಡರಾತ್ರಿ ಪಾರ್ಟಿ ಮಾಡುತಿದ್ದ ವೇಳೆ ಪೊಲೀಸರು ದಿಢೀರ್ ಎಂಟ್ರಿ ಕೊಟ್ಟಿದ್ದು, ಪಾರ್ಟಿಯಲ್ಲಿ 50ಕ್ಕೂ ಹೆಚ್ಚು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಕಾರ್ಯಾಚರಣೆ ವೇಳೆ ತಪ್ಪಿಸಿಕೊಳ್ಳಲು ಪೊಲೀಸರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಆರೋಪ ವ್ಯಕ್ತವಾಗಿದೆ. ಅಡಿಷನಲ್ ಎಸ್‌ಪಿ ನಾಗೇಶ್ ಹಾಗೂ ಡಿವೈಎಸ್‌ಪಿ ಕರೀಂ ನೇತೃತ್ವದಲ್ಲಿ ಕಾರ್ಯಾಚರಣೆ ನಡೆಸಿದ್ದಾರೆ.ಇದನ್ನೂ ಓದಿ: ಕ್ರಿಮಿನಲ್‍ಗಳ ಮಾಹಿತಿ ನೀಡಲು ನಿರಾಕರಣೆ – ವಾಟ್ಸಾಪ್ ನಿರ್ದೇಶಕರ ವಿರುದ್ಧ ಎಫ್‍ಐಆರ್

    ಇದಕ್ಕೆ ಸಂಬಂಧಿಸಿದಂತೆ ಎಸ್‌ಪಿ ವಿಷ್ಣುವರ್ಧನ್ ಮಾತನಾಡಿ, ಪಾರ್ಟಿಯಲ್ಲಿ ಯಾವುದೇ ಮಾದಕ ವಸ್ತು, ಮಾದಕ ದ್ರವ್ಯ ಸಿಕ್ಕಿಲ್ಲ. ಆದರೆ ಸ್ಥಳದಲ್ಲಿ ಮದ್ಯ ಹಾಗೂ ಸಿಗರೇಟ್ ದೊರೆತಿದೆ. ಎಫ್‌ಎಸ್‌ಎಲ್ ತಂಡ (FSL) ಕೂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ. ಜೊತೆಗೆ ಪಾರ್ಟಿಯಲ್ಲಿದ್ದ ಎಲ್ಲರ ರಕ್ತದ ಮಾದರಿ ಸಂಗ್ರಹಿಸಿ ಪರೀಕ್ಷೆಗೆ ಕಳುಹಿಸಲಾಗುವುದು ಹಾಗೂ ವರದಿ ಬಂದ ನಂತರ ಈ ಬಗ್ಗೆ ಸ್ಪಷ್ಟನೆ ಸಿಗಲಿದೆ ಎಂದು ಮಾಹಿತಿ ನೀಡಿದ್ದಾರೆ.

    ಒಟ್ಟು 150ಕ್ಕೂ ಹೆಚ್ಚು ಯುವಕ-ಯುವತಿಯರು ಪಾರ್ಟಿಯಲ್ಲಿ ಭಾಗಿಯಾಗಿದ್ದರು. ಜೊತೆಗೆ ಪಾರ್ಟಿಯಲ್ಲಿ ಇಸ್ರೇಲ್‌ನಿಂದ ರ‍್ಯಾಪರ್ ಗ್ರೇನ್ ರಿಪ್ಪರ್ (Rapper Grain Ripper) ಬಂದಿದ್ದನು. ಆಯೋಜಕರಿಂದ ಪಾರ್ಟಿಗೆ ಬರಲು ತಲಾ 2000 ರೂ. ಹಣವನ್ನು ನಿಗದಿ ಮಾಡಿದ್ದರು. ಪೊಲೀಸರ ದಾಳಿ ವೇಳೆ ಅಲ್ಲಿದ್ದ ಯುವಕ-ಯುವತಿಯರು ಎದ್ನೋ ಬಿದ್ನೋ ಎಂದು ಓಡಿ ಹೋಗಿದ್ದಾರೆ.ಇದನ್ನೂ ಓದಿ: ತಮಿಳುನಾಡು ಡಿಸಿಎಂ ಆಗಿ ಉದಯನಿಧಿ ಸ್ಟಾಲಿನ್ ಇಂದು ಪ್ರಮಾಣವಚನ

  • ವಿಚ್ಛೇದಿತ ಮಹಿಳೆಯೊಂದಿಗೆ ಯುವಕನ ಲವ್ವಿ ಡವ್ವಿ – ಗರ್ಭಿಣಿ ಆದ್ಮೇಲೆ ಟೀಚರ್‌ಗೆ ಕೈಕೊಟ್ಟು ಜೂಟ್‌!

    ವಿಚ್ಛೇದಿತ ಮಹಿಳೆಯೊಂದಿಗೆ ಯುವಕನ ಲವ್ವಿ ಡವ್ವಿ – ಗರ್ಭಿಣಿ ಆದ್ಮೇಲೆ ಟೀಚರ್‌ಗೆ ಕೈಕೊಟ್ಟು ಜೂಟ್‌!

    ಮೈಸೂರು: ಮದುವೆಯಾಗುವುದಾಗಿ ನಂಬಿಸಿ ವಿಚ್ಛೇದಿತ ಮಹಿಳೆಯೊಂದಿಗೆ (Mysuru Women) ಲವ್ವಿ ಡವ್ವಿ ನಡೆಸುತ್ತಿದ್ದ ಯುವಕ, ಆಕೆಯನ್ನ ಗರ್ಭಿಣಿ (Pregnant Women) ಮಾಡಿ ನಂತರ ಪರಾರಿಯಾಗಿರುವ ಘಟನೆ ಮೈಸೂರಿನಲ್ಲಿ ಬೆಳಕಿಗೆ ಬಂದಿದೆ.

    34 ವರ್ಷದ ಸಂತ್ರಸ್ತೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ (Private School) ಶಿಕ್ಷಕಿಯಾಗಿ ಕೆಲಸ ಮಾಡುತ್ತಿದ್ದು, ಆರೋಪಿ ಯುವಕನನ್ನು ಹರೀಶ್ (25) ಎಂದು ಗುರುತಿಸಲಾಗಿದೆ. ಇದನ್ನೂ ಓದಿ: ಬೆಳಗಾವಿಯಲ್ಲಿ ಟ್ರೈಲರ್ ಸಮೇತ ನದಿಗೆ ಬಿದ್ದ ಟ್ರಾಕ್ಟರ್ – ಓರ್ವ ಕಣ್ಮರೆ, 12 ಮಂದಿ ಬಚಾವ್

    ಪಿರಿಯಾಪಟ್ಟಣ ಮೂಲದ ಮಹಿಳೆ ಮೈಸೂರಿನ ಖಾಸಗಿ ಶಾಲೆಯೊಂದರಲ್ಲಿ ಶಿಕ್ಷಕಿಯಾದ್ದಾರೆ. ಈಕೆ 2018ರಲ್ಲಿ ಗಂಡನಿಂದ ವಿಚ್ಛೇದನ ಪಡೆದು ಪ್ರತ್ಯೇಕವಾಗಿ ಬದುಕಿತ್ತಿದ್ದರು. ನಂತರ ಈಕೆಯ ಬಾಳಲ್ಲಿ ಎಂಟ್ರಿಯಾದ ಹರೀಶ್ ಮದುವೆಯಾಗುವುದಾಗಿ ನಂಬಿಸಿದ್ದಾನೆ. ಬಳಿಕ ಲೈಂಗಿಕವಾಗಿ ಬಳಸಿಕೊಂಡು ಗರ್ಭಿಣಿ ಮಾಡಿ ಇದೀಗ ಕೈಕೊಟ್ಟು ಪರಾರಿಯಾಗಿದ್ದಾನೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.

    ಆರೋಪಿ ಹರೀಶ್ ಮದ್ಯ ಕುಡಿಸಿ ನನ್ನ ಮೇಲೆ ಬಲವಂತವಾಗಿ ಅತ್ಯಾಚಾರ ಮಾಡಿದ್ದಾನೆ ಎಂಬ ಆರೋಪದಡಿ ಮಹಿಳೆ ದೂರು ನೀಡಿದ್ದು, ಸರಸ್ವತಿಪುರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಹರೀಶ್ ನನ್ನ ಮೇಲೆ ಅತ್ಯಾಚಾರ ಮಾಡಿ 2 ತಿಂಗಳಿನಿಂದ ಕಾಣೆಯಾಗಿದ್ದಾನೆ. ಯಾರ ಸಂಪರ್ಕಕ್ಕೂ ಸಿಗುತ್ತಿಲ್ಲ, ಪೊಲೀಸರಿಂದ ನನಗೆ ನ್ಯಾಯ ಸಿಗುವ ಭರವಸೆಯಿದೆ. ಆತ ನನ್ನನ್ನ ಮದುವೆಯಾದ್ರೆ ಕೇಸ್ ವಾಪಸ್ ಪಡೆಯುತ್ತೇನೆ ಎಂದು ಮಹಿಳೆ ಅಳಲು ತೋಡಿಕೊಂಡಿದ್ದಾರೆ. ಇದನ್ನೂ ಓದಿ: ನಮಗೆ ಫ್ರೀ ಬೇಡ, ಹೆಚ್ಚುವರಿ ಬಸ್ ಓಡಿಸಿ: ಕೆಎಸ್‌ಆರ್‌ಟಿಸಿ ಅಧಿಕಾರಿಗಳಿಗೆ ವಿದ್ಯಾರ್ಥಿನಿ ಕ್ಲಾಸ್

    ಮಹಿಳೆ ನೀಡಿದ ದೂರಿನಲ್ಲಿ ಏನಿದೆ?
    ನಾನು ಮೂಲತಃ ಪಿರಿಯಾಪಟ್ಟಣ ನಿವಾಸಿ, ಖಾಸಗಿ ಶಾಲೆಯೊಂದರಲ್ಲಿ ಕೆಲಸ ಮಾಡುತ್ತಿದ್ದೇನೆ. ನನ್ನ ತಮ್ಮ ವ್ಯವಸಾಯ ಮಾಡಿಕೊಂಡಿದ್ದಾನೆ. ನಾನು 2016ರಿಂದ ಮೈಸೂರಿನಲ್ಲಿ ವಾಸ್ತವ್ಯ ಹೂಡಿದ್ದೇನೆ. 2015ರಲ್ಲಿ ಆಂಧ್ರ ಮೂಲದ ವ್ಯಕ್ತಿಯೊಂದಿಗೆ ವಿವಾಹವಾಗಿತ್ತು. 6 ವರ್ಷದ ಹೆಣ್ಣು ಮಗಳಿದ್ದಾಳೆ. 2018ರಲ್ಲಿ ಪತಿಯಿಂದ ವಿಚ್ಛೇದನ ಪಡೆದಿದ್ದೇನೆ. ಹವ್ಯಾಸಿ ಗಾಯಕಿಯಾಗಿಯೂ ಕೆಲಸ ಮಾಡುತ್ತಿದ್ದೇನೆ. 6 ತಿಂಗಳ ಹಿಂದೆ ಹರೀಶ್ ಕಾರ್ಯುಕ್ರಮವೊಂದರಲ್ಲಿ ಪರಿಚಯವಾಗಿದ್ದ. ಆಗಾಗ್ಗೆ ನಮ್ಮ ಮನೆಗೆ ಬಂದು ಹೋಗುತ್ತಿದ್ದ. 2023ರ ಡಿ.31ರ ರಾತ್ರಿಯೂ ಹೊಸ ವರ್ಷ ಆಚರಣೆಗೆ ನಮ್ಮ ಮನೆಗೆ ಬಂದಿದ್ದ. ನನ್ನನ್ನು ಪ್ರೀತಿಸುವುದಾಗಿ ಹೇಳಿದ್ದ ಹರೀಶ್ ನಿನಗೆ ವಿಚ್ಛೇದನ ಆಗಿದೆ. ನಾನೇ ನಿನ್ನನ್ನ ಮದುವೆಯಾಗ್ತೀನಿ ಅಂತ ಹೇಳಿದ. ಅಲ್ಲದೇ ಅಂದು ಮದ್ಯ ತಂದು ಏನೂ ಆಗುವುದಿಲ್ಲ ಎಂದು ಹೇಳಿ ಬಲವಂತವಾಗಿ ಕುಡಿಸಿದ, ತಾನೂ ಕುಡಿದಿದ್ದ. ನಾನು ಎಷ್ಟೇ ನಿರಾಕರಿಸಿದರೂ ಬಿಡಲಿಲ್ಲ. ನಂತರ ನಾನು ನಿಶ್ಯಕ್ತಿಗೆ ಜಾರಿದ್ದರಿಂದ ಹೆಚ್ಚು ಪ್ರತಿರೋಧಿಸಲು ಆಗಲಿಲ್ಲ.

    ಮರುದಿನದಿಂದ ಅವನು ತನ್ನ ಬಟ್ಟೆಗಳನ್ನು ನನ್ನ ಮನೆಯಲ್ಲೇ ತಂದಿಟ್ಟಿದ್ದ. ನಾನು ಮದುವೆಯಾಗುವವರೆಗೆ ದೈಹಿಕ ಸಂಪರ್ಕ ಬೇಡವೆಂದು ಹೇಳಿದರೂ ಕೇಳದೇ ಪ್ರತಿದಿನ ನನ್ನೊಂದಿಗೆ ದೈಹಿಕ ಸಂಪರ್ಕ ಮಾಡುತ್ತಿದ್ದ. ಇತ್ತೀಚೆಗೆ ನನ್ನಿಂದ ದೂರವಿರುತ್ತಿದ್ದ. ಇದರಿಂದ ನಾನು ಆತ್ಮಹತ್ಯೆ ಮಾಡಿಕೊಳ್ಳೋಣವೆಂದು ನಿರ್ಧರಿಸಿದೆ. ಬಳಿಕ ನನ್ನ ಅಣ್ಣನಿಗೆ ವಿಷಯ ತಿಳಿಸಿದೆ. ಕೊನೆಗೆ ನನ್ನನ್ನು ಮದುವೆಯಾಗಲು ಮನೆಯವರ ಒಪ್ಪಿಗೆ ಪಡೆದುಬರುತ್ತೇನೆ ಎಂದು ಹೇಳಿಹೋದ ಹರೀಶ್ ಈವರೆಗೂ ಸಂಪರ್ಕಕ್ಕೆ ಸಿಕ್ಕಿಲ್ಲ. ನನ್ನನ್ನು ನಂಬಿಸಿ ಮೋಸ ಮಾಡಿರುವ ಹರೀಶನ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕು ಎಂದು ಸಂತ್ರಸ್ತೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿರಿಕೊಂಡಿರುವ ಪೊಲೀಸರು ಆರೋಪಿಗಾಗಿ ಶೋಧ ಕಾರ್ಯ ನಡೆಸಿದ್ದಾರೆ.

    ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲದ ತೇರಂಬಳ್ಳಿ ಗ್ರಾಮದ ಹರೀಶ್, ಮೈಸೂರಿನ ಖಾಸಗಿ ಕಂಪನಿಯೊಂದರಲ್ಲಿ ಕೆಲಸ ಮಾಡಿಕೊಂಡಿದ್ದನು. ಈತ ಸಹ ಹವ್ಯಾಸಿ ಹಾಡುಗಾರನಾಗಿದ್ದ. ಇದನ್ನೂ ಓದಿ: ಉಗಾಂಡಾ ವಿರುದ್ಧ 134 ರನ್‌ಗಳ ಜಯ – T20 ವಿಶ್ವಕಪ್‌ನಲ್ಲಿ ಮತ್ತೊಂದು ಇತಿಹಾಸ ಸೃಷ್ಠಿಸಿದ ವಿಂಡೀಸ್‌!

  • ಸಂಚಾರ ನಿಯಮ ಉಲ್ಲಂಘನೆ – ಮೈಸೂರಿನಲ್ಲಿ ಒಂದೇ ದಿನ ಬರೋಬ್ಬರಿ 7,336 ಕೇಸ್ ದಾಖಲು!

    ಸಂಚಾರ ನಿಯಮ ಉಲ್ಲಂಘನೆ – ಮೈಸೂರಿನಲ್ಲಿ ಒಂದೇ ದಿನ ಬರೋಬ್ಬರಿ 7,336 ಕೇಸ್ ದಾಖಲು!

    ಮೈಸೂರು: ನಗರದ ವಿವಿಧ ಸಂಚಾರ ಪೊಲೀಸ್ ಠಾಣೆಗಳಲ್ಲಿ ಒಂದೇ ದಿನ ಬರೋಬ್ಬರಿ 7,336 ಸಂಚಾರ ನಿಯಮ ಉಲ್ಲಂಘನೆ (Traffic Rules Violation) ಪ್ರಕರಣಗಳು ದಾಖಲಾಗಿವೆ.

    ನಗರದಲ್ಲಿ ವಿಶೇಷ ತಪಾಸಣಾ ಕಾರ್ಯಾಚರಣೆ ಹಮ್ಮಿಕೊಂಡಿದ್ದ ಮೈಸೂರು ಪೊಲೀಸರು (Mysuru City Police), ಪೊಲೀಸ್ ಆಯುಕ್ತ ಬಿ.ರಮೇಶ್ ಬಾನೋತ್ ನಿರ್ದೇಶನದ ಮೇರೆಗೆ ಮಂಗಳವಾರ ಬೆಳಗ್ಗೆಯಿಂದ ಮಧ್ಯರಾತ್ರಿವರೆಗೆ ವಾಹನಗಳ ತಪಾಸಣೆ ಕಾರ್ಯ ನಡೆಸಿದ್ದಾರೆ.

    ಈ ವೇಳೆ ತ್ರಿಬಲ್ ರೈಡಿಂಗ್ (Triple Riding) ಸಂಬಂಧ 169, ಹೆಲ್ಮೆಟ್ ಧರಿಸದ ಸಂಬಂಧ 6,680, ನಂಬರ್ ಪ್ಲೇಟ್ ಇಲ್ಲದ ವಾಹನ 113 ಕೇಸ್ ಹಾಗೂ ಸರಕು ಸಾಗಣೆ ವಾಹನದಲ್ಲಿ ಪ್ರಯಾಣಿಕರನ್ನ ಕರೆದೊಯ್ಯುವುದು 22 ಪ್ರಕರಣಗಳನ್ನ ದಾಖಲಿಸಲಾಗಿದೆ. ಇದನ್ನೂ ಓದಿ: ವಾಜಪೇಯಿ ಜೊತೆ ಸಹಿ ಹಾಕಿದ್ದ ಒಪ್ಪಂದವನ್ನು ನಾವು ಉಲ್ಲಂಘನೆ ಮಾಡಿದ್ದೆವು: ತಪ್ಪೊಪ್ಪಿಕೊಂಡ ನವಾಜ್‌ ಷರೀಫ್‌

    ಜೊತೆಗೆ ಡ್ರಂಕ್ ಅಂಡ್ ಡ್ರೈವ್‌ 33 ಪ್ರಕರಣಗಳು ಸೇರಿ ಒಟ್ಟು 7,336 ಸಂಚಾರಿ ನಿಯಮ ಉಲ್ಲಂಘನೆ ಪ್ರಕರಣಗಳನ್ನ ದಾಖಲಿಸಲಾಗಿದೆ. ಇದನ್ನೂ ಓದಿ: ಹವಾಮಾನ ವೈಪರಿತ್ಯ – 24 ಗಂಟೆಯಲ್ಲಿ 250ಕ್ಕೂ ಹೆಚ್ಚು ವಿಮಾನಗಳ ಹಾರಾಟ ಸ್ಥಗಿತ!

  • ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಿ – 24 ದಿನ ಉರಿಯುವ ಅಗರಬತ್ತಿಗೆ 2 ತಾಸು ಅನುಮತಿ

    ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಕ್ಕೆ ಹೆಜ್ಜೆ ಹೆಜ್ಜೆಗೂ ಅಡ್ಡಿ – 24 ದಿನ ಉರಿಯುವ ಅಗರಬತ್ತಿಗೆ 2 ತಾಸು ಅನುಮತಿ

    – ಸಿಎಂ ತವರಲ್ಲಿ ಶ್ರೀರಾಮನ ಸಂಭ್ರಮಾಚರಣೆಗೆ ಹೆಜ್ಜೆ-ಹೆಜ್ಜೆಗೂ ಅಡ್ಡಿ

    ಮೈಸೂರು: ಸಿಎಂ ತವರಿನಲ್ಲಿ ಶ್ರೀರಾಮನ (Sri Rama) ಸಂಭ್ರಮಾಚರಣೆಗೆ ಹೆಜ್ಜೆ-ಹೆಜ್ಜೆಗೂ ಅಡ್ಡಿಯುಂಟಾಗುತ್ತಿದೆ ಎಂದು ರಾಮಭಕ್ತರಿಂದ ಆಕ್ಷೇಪ ವ್ಯಕ್ತವಾಗುತ್ತಿದೆ. ಶ್ರೀರಾಮನಿಗಾಗಿ ಮೈಸೂರಿನಲ್ಲಿ 24 ದಿನ ಉರಿಯುವ 111 ಅಡಿ ಉದ್ದದ ಅಗರ ಬತ್ತಿ ತಯಾರಾಗಿದೆ. ಆದ್ರೆ ಈ ಅಗರಬತ್ತಿಯನ್ನಿಡಲು ಮೈಸೂರು ಪೊಲೀಸರು (Mysuru Police) ಕೇವಲ 2 ತಾಸು ಅನುಮತಿ ಕೊಟ್ಟಿದ್ದಾರೆ.

    ಮೈಸೂರು ಅರಮನೆಯ (Mysore Palace) ಕೋಟೆ ಆಂಜನೇಯ ಸ್ವಾಮಿ ದೇವಸ್ಥಾನದ ಮುಂಭಾಗದಲ್ಲಿ ಈ ಅಗರಬತ್ತಿಯನ್ನಿಡಲು ಸಿದ್ಧತೆ ಮಾಡಿಕೊಳ್ಳಲಾಗಿದೆ. ಆದ್ರೆ 24 ದಿನ ಉರಿಯುವ ಅಗರಬತ್ತಿಗೆ ಪೊಲೀಸರು 2 ತಾಸಿನ ಅನುಮತಿ ನೀಡಿದ್ದಾರೆ. ಇದನ್ನೂ ಓದಿ: ರಾಮಮಂದಿರ ಉದ್ಘಾಟನೆಗೆ ರಜೆ ಕೊಡೋ ಬಗ್ಗೆ ಬಿಜೆಪಿಯವ್ರು ಹೇಳಿಕೊಡಬೇಕಿಲ್ಲ: ಡಿಕೆ ಶಿವಕುಮಾರ್

    ಸಾಮ್ರಾಣಿ, ದೇವದಾರು, ಶ್ರೀಗಂಧ ಸೇರಿದಂತೆ ದಶಾಂಗಗಳನ್ನ ಬಳಸಿ ಅಗರಬತ್ತಿ ಮಾಡಿದ್ದೇವೆ. ಗಾಳಿ ಬೀಸಿದಾಗಲೂ ಕಿಡಿ ಹಾರುವುದಿಲ್ಲ. ಉತ್ತಮ ಸುವಾಸನೆ ಬೀರುತ್ತದೆ ಅನ್ನೋದ್ರಲ್ಲಿ ಎರಡು ಮಾತಿಲ್ಲ ಎಂದು ಆಯೋಕಜರು ತಿಳಿಸಿದ್ದಾರೆ.

    ಲಕ್ಷ ದೀಪೋತ್ಸವಕ್ಕೂ ಅನುಮತಿ ರದ್ದು: ಸಿಎಂ ತವರಲ್ಲಿ ಶ್ರೀರಾಮನ ವಿಚಾರದಲ್ಲಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮನ ಹೆಸರಿನ ಲಕ್ಷದೀಪೋತ್ಸವಕ್ಕೆ ಮೈಸೂರು ಪೊಲೀಸರು ಇದ್ದಕ್ಕಿದ್ದಂತೆ ಅನುಮತಿಯನ್ನ ರದ್ದುಗೊಳಿಸಿದ್ದಾರೆ. ಕಳೆದ 10 ದಿನಗಳ ಹಿಂದೆಯಷ್ಟೇ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊಟ್ಟಿದ್ದ ಪೊಲೀಸರು, ಶನಿವಾರ ಇದ್ದಕ್ಕಿದ್ದಂತೆ ಅನುಮತಿ ರದ್ದುಪಡಿಸಿದ್ದೇವೆ ಎಂದು ಪತ್ರ ನೀಡಿದ್ದಾರೆ.

    ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಿದ್ದೇವೆ ಎಂದು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಲಕ್ಷದೀಪೋತ್ಸವ ಆಯೋಜಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಸಮಯಕ್ಕೆ ಮೈಸೂರಿನಲ್ಲೂ ವಿಶೇಷ ಪೂಜೆ – ಶ್ರೀರಾಮನಿಗೆ ಸಪ್ತ ನದಿಗಳ ನೀರಿನಿಂದ ಜಲಾಭೀಷೇಕ! 

  • ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

    ಸಿಎಂ ತವರಲ್ಲಿ ಶ್ರೀರಾಮನ ಹೆಸರಿನ ಲಕ್ಷ ದೀಪೋತ್ಸವಕ್ಕೆ ಅನುಮತಿ ರದ್ದು – ರಾಮಭಕ್ತರಿಂದ ಆಕ್ಷೇಪ

    ಮೈಸೂರು: ಸಿಎಂ ತವರಲ್ಲಿ ಶ್ರೀರಾಮನ ವಿಚಾರದಲ್ಲಿ ಮತ್ತೆ ಪಾಲಿಟಿಕ್ಸ್ ಶುರುವಾಗಿದೆ ಎಂಬ ಆರೋಪ ಕೇಳಿಬಂದಿದೆ. ಜನವರಿ 22ರಂದು ರಾಮಲಲ್ಲಾ ಪ್ರಾಣಪ್ರತಿಷ್ಠೆ ಹಿನ್ನೆಲೆ ಹಮ್ಮಿಕೊಳ್ಳಲಾಗಿದ್ದ ಶ್ರೀರಾಮನ ಹೆಸರಿನ ಲಕ್ಷದೀಪೋತ್ಸವಕ್ಕೆ (Laksha Deepotsava) ಮೈಸೂರು ಪೊಲೀಸರು ಇದ್ದಕ್ಕಿದ್ದಂತೆ ಅನುಮತಿಯನ್ನ ರದ್ದುಗೊಳಿಸಿದ್ದಾರೆ.

    ಲಕ್ಷ ದೀಪೋತ್ಸವ ನಡೆಸಿದರೇ ಕಾನೂನು ಸುವ್ಯವಸ್ಥೆಗೆ ಧಕ್ಕೆ ಉಂಟಾಗುತ್ತದೆ ಎಂಬ ಕಾರಣ ನೀಡಿ ಅನುಮತಿ ರದ್ದುಗೊಳಿಸಿರುವುದಾಗಿ ಪೊಲೀಸರು (Mysuru Police) ತಿಳಿಸಿದ್ದಾರೆ. ಇದನ್ನೂ ಓದಿ: ಪ್ರಾಣಪ್ರತಿಷ್ಠೆ ಮತ್ತೊಂದು ದೀಪಾವಳಿ, ಕ್ರಿಶ್ಚಿಯನ್ ಮಹಿಳೆಯಾದ್ರೂ ನಾನು ಆಚರಿಸುತ್ತೇನೆ – ಮೇರಿ ಮಿಲ್ಬೆನ್ ಸಂತಸ

    ಕಳೆದ 10 ದಿನಗಳ ಹಿಂದೆಯಷ್ಟೇ ಲಕ್ಷ ದೀಪೋತ್ಸವಕ್ಕೆ ಅನುಮತಿ ಕೊಟ್ಟಿದ್ದ ಪೊಲೀಸರು, ಶನಿವಾರ ಇದ್ದಕ್ಕಿದ್ದಂತೆ ಅನುಮತಿ ರದ್ದುಪಡಿಸಿದ್ದೇವೆ ಎಂದು ಪತ್ರ ನೀಡಿದ್ದಾರೆ. ಇದನ್ನೂ ಓದಿ: ಬಾಲರಾಮನ ಪ್ರಾಣಪ್ರತಿಷ್ಠೆಗೆ ಒಂದೇ ದಿನ ಬಾಕಿ – ಝಗಮಗಿಸಲು ಬೆಂಗ್ಳೂರಿನಲ್ಲಿ ಭರ್ಜರಿ ತಯಾರಿ

    ಸಂಚಾರಕ್ಕೆ ಅಡ್ಡಿ, ಕಾನೂನು ಸುವ್ಯವಸ್ಥೆ ಧಕ್ಕೆ ಆಗುವ ಸಾಧ್ಯತೆ ಹಿನ್ನೆಲೆಯಲ್ಲಿ ಅನುಮತಿ ರದ್ದು ಮಾಡಿದ್ದೇವೆ ಎಂದು ನಗರ ಪೊಲೀಸ್ ಉಪ ಆಯುಕ್ತರು ತಿಳಿಸಿದ್ದಾರೆ. ಈ ಬಗ್ಗೆ ಲಕ್ಷದೀಪೋತ್ಸವ ಆಯೋಜಕರಿಂದ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಇದನ್ನೂ ಓದಿ: ಎಲ್ಲೆಲ್ಲೂ ರಾಮಜಪ, ಜೈಶ್ರೀರಾಮ್ ಉದ್ಘೋಷ – ಇಟ್ಟಿಗೆಯಲ್ಲೇ ಸಾಕ್ಷಾತ್ ಶ್ರೀರಾಮನ ಕಂಡ ಕುಟುಂಬ!

  • ಮೈಸೂರಿನಲ್ಲಿ ವೃತ್ತಕ್ಕೆ ಸಿಎಂ ಹೆಸರು – ನಾಮಫಲಕ ತೆರವು ಮಾಡಿದ ಪೊಲೀಸರು

    ಮೈಸೂರಿನಲ್ಲಿ ವೃತ್ತಕ್ಕೆ ಸಿಎಂ ಹೆಸರು – ನಾಮಫಲಕ ತೆರವು ಮಾಡಿದ ಪೊಲೀಸರು

    ಮೈಸೂರು: ಇಲ್ಲಿನ ಲಿಂಗದೇವರ ಕೊಪ್ಪಲು ವೃತ್ತದಲ್ಲಿ ಅಳವಡಿಸಿದ್ದ ಸಿಎಂ ಸಿದ್ದರಾಮಯ್ಯ (Siddaramaiah) ನಾಮ ಫಲಕವನ್ನು ಪೊಲೀಸರು ತೆರವು ಮಾಡಿದ ಕಾರಣ ಸಿದ್ದರಾಮಯ್ಯ ಅಭಿಮಾನಿಗಳು ಪೋಲಿಸರ ವಿರುದ್ಧ ಪ್ರತಿಭಟಿಸಿ ರಸ್ತೆ ತಡೆದ ಘಟನೆ ಮೈಸೂರಿನಲ್ಲಿ ನಡೆದಿದೆ.

    ಹುಣಸೂರು ಮುಖ್ಯ ರಸ್ತೆಯ ಲಿಂಗದೇವರ ಕೊಪ್ಪಲು ಬಳಿ ಘಟನೆ ನಡೆದಿದೆ. ಲಿಂಗದೇವರ ಕೊಪ್ಪಲು ವೃತ್ತಕ್ಕೆ ಸಿದ್ದರಾಮಯ್ಯ ಅವರ ಹೆಸರಿಡಲು ಲಿಂಗ ದೇವರ ಕೊಪ್ಪಲು ಗ್ರಾಮಸ್ಥರು ಮುಂದಾಗಿ ನಾಮಫಲಕ (Road Name Plate) ಹಾಕಿದ್ದರು. ಆದ್ರೆ ಪೋಲಿಸರು ಏಕಾಏಕಿ ನಾಮ ಫಲಕ ತೆರವು ಮಾಡಿದ್ದರು. ಹೀಗಾಗಿ ಪೊಲೀಸರ ವಿರುದ್ಧ ಧಿಕ್ಕಾರ ಕೂಗಿ ಗ್ರಾಮಸ್ಥರು ಹಾಗೂ ಸಿದ್ದರಾಮಯ್ಯ ಅಭಿಮಾನಿಗಳು ಪ್ರತಿಭಟನೆ ನಡೆಸಿದ್ದಾರೆ. ಇದನ್ನೂ ಓದಿ: ಪಾಕ್‌ ವಾಯುನೆಲೆ ಮೇಲೆ ಆತ್ಮಹತ್ಯಾ ಬಾಂಬರ್‌ಗಳ ದಾಳಿ – ಮೂವರು ಉಗ್ರರ ಹತ್ಯೆ

    ಸರ್ಕಲ್‌ಗೆ ಸಿದ್ದರಾಮಯ್ಯ ನಾಮಫಲಕ ಮತ್ತೆ ಅಳವಡಿಸುವಂತೆ ಪ್ರತಿಭಟನಾಕಾರರು ಆಗ್ರಹಿಸಿದರು. ಪೊಲೀಸರು (Mysuru Police) ಮತ್ತು ಗ್ರಾಮಸ್ಥರ ನಡುವೆ ಮಾತಿನ ಚಕಮಕಿ ನಡೆಯಿತು. ಇದನ್ನೂ ಓದಿ: ದೀಪಾವಳಿ ಪ್ರಯುಕ್ತ ಉದ್ಯೋಗಿಗಳಿಗೆ ಕಾರುಗಳನ್ನು ಗಿಫ್ಟ್ ನೀಡಿದ ಕಂಪನಿ!

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]