Tag: ಮೈಸೂರು ಪೊಲೀಸರು

  • Mysuru | 60 ಗ್ರಾಂ ಚಿನ್ನ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

    Mysuru | 60 ಗ್ರಾಂ ಚಿನ್ನ ಕದ್ದು ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನ ಬರ್ಬರ ಹತ್ಯೆ

    – ನಾಲ್ವರು ಆರೋಪಿಗಳ ಬಂಧನ, ಪ್ರಮುಖ ಆರೋಪಿ ಎಸ್ಕೇಪ್

    ಮೈಸೂರು: ಚಿನ್ನ ಕದ್ದು (Gold Theft) ಗಿರವಿಯಿಟ್ಟು ಅದ್ಧೂರಿಯಾಗಿ ನಿಶ್ಚಿತಾರ್ಥ ಮಾಡಿಕೊಂಡಿದ್ದ ಯುವಕನನ್ನು ಬರ್ಬರವಾಗಿ ಹತ್ಯೆ ಮಾಡಿರುವ ಘಟನೆ ಮೈಸೂರಿನಲ್ಲಿ (Mysuru) ನಡೆದಿದೆ.

    ಚಾಮರಾಜನಗರ ಜಿಲ್ಲೆ ಬ್ಯಾಡರಪುರದ ಮೋಹನ್ ಕುಮಾರ್ (31) ಕೊಲೆಯಾದ ಯುವಕ. 60 ಗ್ರಾಂ ಚಿನ್ನಕ್ಕಾಗಿ ಯುವಕನನ್ನು ಕಾರಿನಲ್ಲೇ ಹೊಡೆದು ಹತ್ಯೆ ಮಾಡಿದ ಆರೋಪಿಗಳು ಶವ ಸುಟ್ಟು ಹಾಕಿದ್ದರು. ಅಪರಿಚಿತ ವ್ಯಕ್ತಿ ಶವ ಸುಟ್ಟ ಕೇಸ್ ಅನ್ನು ಮೈಸೂರು ಜಿಲ್ಲಾ ಪೊಲೀಸರು ಬೇಧಿಸಿದ್ದಾರೆ. ಏ.18 ರಂದು ನಡೆದಿದ್ದ ಕೊಲೆ ಕೇಸ್‌ನಲ್ಲಿ ಒಟ್ಟು 4 ಆರೋಪಿಗಳ ಬಂಧನವಾಗಿದ್ದು, ಪ್ರಮುಖ ಆರೋಪಿ ಎಸ್ಕೇಪ್ ಆಗಿದ್ದಾನೆ. ಇದನ್ನೂ ಓದಿ: ಚಪ್ಪಲಿಯಿಂದ ಹೊಡೆದ ಪ್ರಕರಣ – ಆಟೋ ಚಾಲಕನ ಕಾಲಿಗೆ ಬಿದ್ದು ಕ್ಷಮೆ ಕೇಳಿದ ದಂಪತಿ

    ಮೈಸೂರು ಮೂಲದ ಶ್ರೀನಿವಾಸ್ ಪ್ರಮುಖ ಆರೋಪಿ. ಮೋಹನ್ ಕುಮಾರ್ ಕೊಲೆ ಕೇಸ್‌ನಲ್ಲಿ ಪ್ರಜ್ವಲ್, ಚಂದು, ಕಬೀರ್ ಕಾಳಯ್ಯ, ದರ್ಶನ್ ಬಂಧನವಾಗಿದೆ. ಹತ್ಯೆಯಾದ ಮೋಹನ್ ಕುಮಾರ್ ಬೋಗಾದಿ ಲಾಡ್ಜ್ ಒಂದರಲ್ಲಿ ಮ್ಯಾನೇಜರ್ ಆಗಿದ್ದ. ಲಾಡ್ಜ್ನಲ್ಲಿ ಇಸ್ಪೀಟ್ ಆಟವಾಡಲು ಕೊಲೆ ಆರೋಪಿ ಶ್ರೀನಿವಾಸ್ ಬರುತ್ತಿದ್ದ. ಶ್ರೀನಿವಾಸ್ ಜೂಜಿಗಾಗಿ ಪತ್ನಿಯ 60 ಗ್ರಾಂ ಚಿನ್ನದ ಸರ ತಂದಿದ್ದ. ಅವತ್ತು ಹುಣ್ಣಿಮೆ ಕಾರಣ ಮಾರವಾಡಿ ಅಂಗಡಿಯವನು ಗಿರವಿ ಇಟ್ಟುಕೊಳ್ಳಲ್ಲ ಎಂದಿದ್ದ. ಇದನ್ನೂ ಓದಿ: ರಾಜ್ಯದಲ್ಲಿ ‘ಥಗ್ ಲೈಫ್’ ಸಿನಿಮಾ ರಿಲೀಸ್ ಮಾಡಿದ್ರೆ ಬೆಂಗಳೂರು ಬಂದ್: ಪ್ರವೀಣ್ ಶೆಟ್ಟಿ ಎಚ್ಚರಿಕೆ

    ಬಳಿಕ ಶ್ರೀನಿವಾಸ್ ಲಾಡ್ಜ್ನ ರೂಂನ ಹಾಸಿಗೆ ದಿಂಬಿನ ಕೆಳಗೆ ಚಿನ್ನದ ಸರ ಇಟ್ಟಿದ್ದ. ಇದೇ ವೇಳೆ ಮೋಹನ್ ಕುಮಾರ್ ಚಿನ್ನದ ಸರ ಕಳವು ಮಾಡಿದ್ದ. ಬಳಿಕ ಸ್ವಗ್ರಾಮ ಬ್ಯಾಡರಪುರಕ್ಕೆ ಹೋಗಿ ಕದ್ದ ಚಿನ್ನದ ಸರ ಗಿರವಿ ಇಟ್ಟು ನಿಶ್ಚಿತಾರ್ಥ ಮಾಡಿಕೊಂಡಿದ್ದ. ಈ ಬಗ್ಗೆ ಸರಸ್ವತಿ ಪುರಂ ಠಾಣೆಯಲ್ಲಿ ಕೇಸ್ ದಾಖಲಾಗಿತ್ತು. ಆರೋಪಿ ಶ್ರೀನಿವಾಸ್ ತನ್ನ ಗೆಳೆಯರ ಗ್ಯಾಂಗ್ ಕಟ್ಟಿಕೊಂಡು ಮೋಹನ್ ಕುಮಾರ್ ನನ್ನು ಮನೆಯಿಂದ ಕರೆಸಿ ಕಾರಿನಲ್ಲಿ ಕರೆದೊಯ್ದು ಹತ್ಯೆ ಮಾಡಿದ್ದ. ಬಳಿಕ ಯಾರಿಗೂ ತಿಳಿಯದಂತೆ ಮೈಸೂರು ತಾಲೂಕಿನ ಗುಮಚನಹಳ್ಳಿ ಬಳಿ ಹಾಡಹಗಲೇ ಶವ ಸುಟ್ಟುಹಾಕಿ ಆರೋಪಿಗಳು ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡಿದ್ದ ಜಯಪುರ ಠಾಣೆ ಪೊಲೀಸರು ತನಿಖೆ ನಡೆಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಇದನ್ನೂ ಓದಿ: ಕಾರವಾರ-ದೇವಿಮನೆ ಘಟ್ಟಭಾಗದಲ್ಲಿ ಲಘು ವಾಹನ ಸಂಚಾರಕ್ಕೆ ಅನುಮತಿ

  • 15 ಸಿಮ್‌ ಕಾರ್ಡ್‌ ಬದಲಾಯಿಸಿ,  ವಿಗ್‌ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    15 ಸಿಮ್‌ ಕಾರ್ಡ್‌ ಬದಲಾಯಿಸಿ, ವಿಗ್‌ ತೆಗೆದು, ಮೀಸೆ ಬೋಳಿಸಿದ್ದ ಸ್ಯಾಟ್ರೋ ರವಿ ಕೊನೆಗೂ ಸಿಕ್ಕಿಬಿದ್ದ

    ಬೆಂಗಳೂರು: ವರ್ಗಾವಣೆ ದಂಧೆಯ ಕಿಂಗ್‌ಪಿನ್, ವೇಶ್ಯಾವಾಟಿಕೆ ದಂಧೆಯ ಮಾಸ್ಟರ್ ಸ್ಯಾಂಟ್ರೋ ರವಿ (Santro Ravi) ಕೊನೆಗೂ ಗುಜರಾತ್‌ನಲ್ಲಿ (Gujarat) ಮೈಸೂರು ಪೊಲೀಸರ (Mysuru Police) ಕೈಗೆ ಸಿಕ್ಕಿಬಿದ್ದಿದ್ದಾನೆ. ಈತನಿಗಾಗಿ ತೀವ್ರ ಹುಡುಕಾಟ ನಡೆಸುತ್ತಿದ್ದ ಪೊಲೀಸರಿಗೆ ಚಳ್ಳೆ ಹಣ್ಣು ತಿನ್ನಿಸಲು ರವಿ ಬರೋಬ್ಬರಿ 15 ಸಿಮ್ ಕಾರ್ಡ್‌ಗಳನ್ನು ಬದಲಿಸಿದ್ದ ಎಂದು ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

    ವರ್ಗಾವಣೆ ದಂಧೆ, ವೇಶ್ಯಾವಾಟಿಕೆಗಳಂತಹ ಹಲವು ಆರೋಪಗಳ ಮೇಲೆ ಸ್ಯಾಂಟ್ರೋ ರವಿ ವಿರುದ್ಧ ಜನವರಿ 4 ರಂದು ಪ್ರಕರಣ ದಾಖಲಾಗಿತ್ತು. ಸಣ್ಣ ಸುಳಿವನ್ನೂ ನೀಡದೇ ರಾಜ್ಯ ಬಿಟ್ಟಿದ್ದ ಸ್ಯಾಂಟ್ರೋ ಹುಡುಕಾಟ ಪೊಲೀಸರಿಗೂ ಸವಾಲಾಗಿತ್ತು. ಸುಮಾರು 7 ರಾಜ್ಯಗಳಲ್ಲಿ ಪೊಲೀಸರು ಆತನಿಗಾಗಿ ಹುಡುಕಾಟ ನಡೆಸಿದ್ದು, ಕೊನೆಗೂ 10 ದಿನಗಳ ನಂತರ ಶುಕ್ರವಾರ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ.

    4 ಐಪಿಎಸ್ ಅಧಿಕಾರಿಗಳ ನೇತೃತ್ವದಲ್ಲಿ 11 ಟೀಂಗಳಾಗಿ ಪೊಲೀಸರು ಸ್ಯಾಂಟ್ರೋಗಾಗಿ ಹುಡುಕಾಟ ನಡೆಸಿದ್ದಾರೆ. ಆತ ಪದೇ ಪದೇ ಸಿಮ್ ಕಾರ್ಡ್‌ಗಳನ್ನು ಬದಲಿಸುತ್ತಿದ್ದ. ಒಮ್ಮೆ ಬಳಸಿದ ಸಿಮ್ ಅನ್ನು ಆತ ಮತ್ತೊಮ್ಮೆ ಬಳಸುತ್ತಿರಲಿಲ್ಲ. ಅಷ್ಟೇ ಅಲ್ಲದೇ ಆನ್‌ಲೈನ್ ಖಾತೆಯ ಮೂಲಕ ಎಲ್ಲಿಯೂ ವ್ಯವಹಾರ ನಡೆಸಿರಲಿಲ್ಲ. ಇದರಿಂದ ಪೊಲೀಸರಿಗೆ ಆತನನ್ನು ಪತ್ತೆಹಚ್ಚುವುದು ಸವಾಲಾಗಿತ್ತು.

    ಗುರುವಾರ ರಾತ್ರಿ ಗುಜರಾತ್‌ನ ಪ್ರತಿಷ್ಠಿತ ಹೋಟೆಲ್ ಒಂದರಲ್ಲಿ ರವಿ ಇರುವ ಬಗ್ಗೆ ಖಚಿತ ಮಾಹಿತಿ ಪಡೆದ ಪೊಲೀಸರ ತಂಡ ಶುಕ್ರವಾರ ಮಧ್ಯಾಹ್ನ ಆತನನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಇಬ್ಬರು ಐಪಿಎಸ್ ತಂಡಗಳ ನೇತೃತ್ವದಲ್ಲಿ ಸ್ಯಾಂಟ್ರೋ ರವಿಯನ್ನು ಪೊಲೀಸರು ಬಂಧಿಸಿದ್ದಾರೆ. ಇದನ್ನೂ ಓದಿ:  ತಲೆಮರೆಸಿಕೊಂಡಿದ್ದ ಸ್ಯಾಂಟ್ರೋ ರವಿ ಗುಜರಾತ್‌ನಲ್ಲಿ ಬಂಧನ

    ರವಿ ಈ ಹಿಂದೆ ತನ್ನ ಗ್ರಾಹಕರಾಗಿದ್ದವರ ಬಳಿ ಆಶ್ರಯ ಪಡೆದಿದ್ದ. ಆತನಿಗೆ ಪೊಲೀಸ್ ಇಲಾಖೆಯ ಆಳ ಅಗಲದ ಅರಿವಿತ್ತು. ಹೀಗಾಗಿ ಪೊಲೀಸರು ಚಾಪೆ ಕೆಳಗೆ ತೂರಿದರೆ ಆತ ರಂಗೋಲಿ ಕೆಳಗೆ ತೂರುತ್ತಿದ್ದ. ರಾಜ್ಯ ಬಿಟ್ಟವನು ಸೀದಾ ಬಾಂಬೆ ಸೇರಿದ್ದ. ಆ ಬಳಿಕ ಬಾಂಬೆ ದಾಟಿ ಗುಜರಾತ್‌ಗೆ ಎಂಟ್ರಿ ಕೊಟ್ಟಿದ್ದ. ರವಿ ಬಂಧನಕ್ಕಾಗಿ ಪೊಲೀಸರು ರಾಜ್ಯದಲ್ಲಿ ಮಾತ್ರವಲ್ಲದೇ ಅಕ್ಕಪಕ್ಕದ ರಾಜ್ಯಗಳಲ್ಲೂ ಹುಡುಕಾಟ ನಡೆಸುತ್ತಿದ್ದರು. ಆತ ಗುಜರಾತ್‌ನಲ್ಲಿ ಇರುವ ಬಗ್ಗೆ ಮಾಹಿತಿ ಪಡೆದ ಪೊಲೀಸರು ಶುಕ್ರವಾರ ಮಧ್ಯಾಹ್ನ ಆತನನ್ನು ಅರೆಸ್ಟ್ ಮಾಡಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಜ.31 ರಿಂದ 66 ದಿನ ಸಂಸತ್ ಬಜೆಟ್ ಅಧಿವೇಶನ – ಪ್ರಹ್ಲಾದ್ ಜೋಶಿ

    ಗುಜರಾತ್‌ನಲ್ಲಿ ರವಿಯನ್ನು ಬಂಧಿಸಿರುವ ಮೈಸೂರು ಪೊಲೀಸರು ಶನಿವಾರ ಮುಂಜಾನೆ ಕಾರ್ನಾಟಕಕ್ಕೆ ಕರೆತರುವ ಸಾಧ್ಯತೆಯಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೃತನ ಕುಟುಂಬಕ್ಕೆ ಬಹುಮಾನದ ಹಣ ನೀಡಿದ ಮೈಸೂರು ಪೊಲೀಸರು

    ಮೃತನ ಕುಟುಂಬಕ್ಕೆ ಬಹುಮಾನದ ಹಣ ನೀಡಿದ ಮೈಸೂರು ಪೊಲೀಸರು

    ಮೈಸೂರು: ಪೊಲೀಸರಿಗೆ ಮಾನವೀಯತೆ, ಅನುಕಂಪವೇ ಇಲ್ಲ ಎನ್ನುವ ಜನರಿಗೆ ಮೈಸೂರಿನ ಪೊಲೀಸರು ಮೃತಪಟ್ಟ ಯುವಕನ ಕುಟುಂಬಕ್ಕೆ ಹಣ ನೀಡುವ ಮೂಲಕ ಮಾನವೀಯತೆ ಮೆರೆದಿದ್ದಾರೆ.


    ಮೈಸೂರಿನ ವಿದ್ಯಾರಣ್ಯಪುರಂ ಠಾಣಾ ವ್ಯಾಪ್ತಿಯಲ್ಲಿ ಆ.23 ರಂದು ವಿದ್ಯಾರಣ್ಯಪುರಂನ ಅಮೃತ್ ಗೋಲ್ಡ್ ಅಂಡ್ ಸಿಲ್ವರ್ ಪ್ಯಾಲೇಸ್‍ನಲ್ಲಿ ನಡೆದಿದ್ದ ಶೂಟೌಟ್ ಮತ್ತು ದರೋಡೆ ಪ್ರಕರಣ ನಡೆದಿತ್ತು. ಗುಂಡಿನ ದಾಳಿಗೆ ದಡದಹಳ್ಳಿ ಯುವಕ ಚಂದ್ರು ತುತ್ತಾಗಿದ್ದರು. ಈ ಪ್ರಕರಣವನ್ನು ಪೊಲೀಸರು ಶೀಘ್ರವಾಗಿ ಬೇಧಿಸುವಲ್ಲಿ ಯಶಸ್ವಿಯಾಗಿದ್ದರು. ಇದನ್ನೂ ಓದಿ:  ರಾಜ್ಯದ ಹಲವೆಡೆ ನಾಲ್ಕು ದಿನ ಮಳೆ – ಹವಾಮಾನ ಇಲಾಖೆ ಮುನ್ಸೂಚನೆ

    ಈ ಹಿನ್ನೆಲೆ ರಾಜ್ಯ ಸರ್ಕಾರ ಮೈಸೂರು ಪೊಲೀಸರಿಗೆ 5 ಲಕ್ಷ ರೂ. ಬಹುಮಾನ ಘೋಷಿಸಿತ್ತು. ಅವರಿಗೆ ಬಂದ ಬಹುಮಾನದ ಹಣವನ್ನು ಕಮಿಷನರ್ ಮತ್ತು ಅವರ ತಂಡ ತಮ್ಮ ಚಂದ್ರು ಕುಟುಂಬಕ್ಕೆ ಒಂದು ಲಕ್ಷ ರೂ. ನೆರವು ನೀಡುವ ಮೂಲಕ ಪೊಲೀಸರಿಗೂ ಮಾನವೀಯತೆ ಇದೆ ಎಂದು ನಿರೂಪಿಸಿದ್ದಾರೆ. ಇದನ್ನೂ ಓದಿ:  ಕಲುಷಿತ ನೀರು ಕುಡಿದು 50ಕ್ಕೂ ಹೆಚ್ಚು ಜನ ಅಸ್ವಸ್ಥ

    ನಗರ ಪೊಲೀಸ್ ಆಯುಕ್ತ ಡಾ.ಚಂದ್ರಗುಪ್ತ ನಗದು ಹಣವನ್ನು ಮೃತನ ಕುಟುಂಬಕ್ಕೆ ಹಸ್ತಾಂತರಿಸಿದರು. ಈ ವೇಳೆ ಡಿಸಿಪಿಗಳಾದ ಪ್ರದೀಪ್ ಗುಂಟಿ, ಗೀತಾಪ್ರಸನ್ನ ಉಪಸ್ಥಿತಿಯಲ್ಲಿದ್ದರು.