Tag: ಮೈಸೂರು ಪಾಕ್

  • ಬೀಫ್ ರಫ್ತಿನಲ್ಲಿ ದೇಶ ಮುಂಚೂಣಿಯಲ್ಲಿದೆ, ತಾಕತ್ತಿದ್ದರೆ ಈಶ್ವರಪ್ಪ ತಡೆಯಲಿ: ಉಗ್ರಪ್ಪ ಸವಾಲು

    ಬೀಫ್ ರಫ್ತಿನಲ್ಲಿ ದೇಶ ಮುಂಚೂಣಿಯಲ್ಲಿದೆ, ತಾಕತ್ತಿದ್ದರೆ ಈಶ್ವರಪ್ಪ ತಡೆಯಲಿ: ಉಗ್ರಪ್ಪ ಸವಾಲು

    ಬೆಂಗಳೂರು: ಬೀಫ್(ದನದ ಮಾಂಸ) ರಫ್ತಿನಲ್ಲಿ ಭಾರತ ಮುಂಚೂಣಿಯಲ್ಲಿದ್ದು, ಈಶ್ವರಪ್ಪನವಗೆ ಧಮ್ಮು, ತಾಕತ್ತು ಇದ್ದರೆ ದೇಶದ ಬೀಫ್ ರಫ್ತನ್ನು ತಡೆಯಲಿ ಎಂದು ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ಸಚಿವ ಕೆ.ಎಸ್.ಈಶ್ವರಪ್ಪನವರಿಗೆ ಮಾಜಿ ಸಂಸದ ವಿ.ಎಸ್.ಉಗ್ರಪ್ಪ ಸವಾಲು ಹಾಕಿದ್ದಾರೆ.

    ಕೆಪಿಸಿಸಿ ಕಚೇರಿಯಲ್ಲಿ ನಡೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ಸಿದ್ದರಾಮಯ್ಯನವರ ಬಗ್ಗೆ ಉಡಾಫೆಯಾಗಿ ಮಾತನಾಡುವುದನ್ನು ಬಿಡಬೇಕು ಮಿಸ್ಟರ್ ಈಶ್ವರಪ್ಪ. ನಿನ್ನೆಯಷ್ಟೇ ಈಶ್ವರಪ್ಪನವರು ಬಿಜೆಪಿಗೆ ಮತ ಹಾಕದವರು ಪಾಕ್ ಪರ ಇರುತ್ತಾರೆ ಎಂದು ಹೇಳಿಕೆ ನೀಡಿದ್ದರು ಇದಕ್ಕೆ ಇಂದು ಉಗ್ರಪ್ಪ ತಿರುಗೇಟು ನೀಡಿದ್ದಾರೆ.

    ಹಿಂದಿ ಹೇರಿಕೆ ಬಗ್ಗೆ ಅಮಿತ್ ಶಾ ಮಾತನಾಡಿದ್ದಾರೆ. ದೇಶದಲ್ಲಿ ಹಲವು ಭಾಷೆಗಳಿವೆ. ಗುಜರಾತಿ, ಕನ್ನಡ, ಮಲೆಯಾಳಿ, ತಮಿಳು, ತೆಲುಗು, ಅಸ್ಸಾಮಿ, ಪಂಜಾಬಿ ಸೇರಿ 22 ಭಾಷೆಗಳಿವೆ. ನಿಮ್ಮ ಗುಜರಾತಿ ಕೂಡ ಪ್ರಾಂತೀಯ ಭಾಷೆ. ಇದನ್ನು ನೋಡಿಯೂ ನೀವು ಹಿಂದಿ ಹೇರಿಕೆಗೆ ಹೊರಟಿದ್ದೇಕೆ, ವಿವಿಧತೆಯಲ್ಲಿ ಏಕತೆಯನ್ನು ಮುರಿಯೋಕೆ ನೋಡುತ್ತಿದ್ದೀರಾ, ಸಂವಿಧಾನದ ಬಗ್ಗೆ ನಿಮಗೆ ಗೌರವವಿದ್ದರೆ ಈ ನಿರ್ಧಾರವನ್ನು ಕೈಬಿಡಿ ವಾಗ್ದಾಳಿ ನಡೆಸಿದ್ದಾರೆ.

    ರಾಜ್ಯ ಮತ್ತು ಕೇಂದ್ರದ ಬಿಜೆಪಿ ನಾಯಕರಿಗೆ ಮನುಷ್ಯತ್ವ ಇಲ್ಲ. ನೆರೆ ವಿಚಾರದಲ್ಲಿ ಒಂದು ರೂಪಾಯಿ ಪರಿಹಾರ ಬಿಡುಗಡೆ ಮಾಡಲಿಲ್ಲ. ಈಶ್ವರಪ್ಪ, ಮಾಧುಸ್ವಾಮಿ, ಲಕ್ಷ್ಮಣ ಸವದಿ ಬಳಸಿರುವ ಪದಗಳು ಅಧಿಕಾರದ ಮದ ನೆತ್ತಿಗೇರಿರುವುದನ್ನು ಸಾಬೀತುಪಡಿಸುತ್ತವೆ. ನಾನು ನೀಲಿ ಚಿತ್ರ ನೋಡಿದ್ದೇನಷ್ಟೇ. ಕಾಂಗ್ರೆಸ್ ಅವರು ನೀಲಿಚಿತ್ರ ಮಾಡುತ್ತಾರೆ ಎಂದು ಸವದಿ ಹೇಳಿದ್ದಾರೆ. ಯಾರು ಮಾಡುತ್ತಿದ್ದಾರೆ ಎಂದು ಬಹಿರಂಗ ಪಡಿಸಲಿ. ಒಬ್ಬ ಉನ್ನತ ಹುದ್ದೆಯಲ್ಲಿ ಇರುವವರಿಗೆ ಈ ರೀತಿ ಮಾತು ಜಾರಬಾರದು ಎಂದು ಎಚ್ಚರಿಸಿದ್ದಾರೆ.

    ಬೆಳಗಾವಿಯಲ್ಲಿ ಅಧಿವೇಶನ ನಡೆಸಲೇ ಬೇಕು. ಅಲ್ಲಿ ಅಧಿವೇಶನ ನಡೆಸದಿದ್ದರೆ ಆ ಭಾಗದ ಜನರಿಗೆ ಸರ್ಕಾರ ಮೋಸ ಮಾಡಿದಂತೆ. ಅಲ್ಲದೆ, ಅನ್ಯಾಯ ಮಾಡಿದಂತೆ. ಇದು ಬಿಜೆಪಿಗರ ಮನಸ್ಥಿತಿಯನ್ನು ತೋರಿಸುತ್ತದೆ. ಅಲ್ಲದೆ, ಎಸ್‍ಇಪಿ, ಟಿಎಸ್‍ಪಿ ಹಣವನ್ನು ನೆರೆ ಪರಿಹಾರಕ್ಕೆ ಬಳಸಿಕೊಳ್ಳಲು ಸರ್ಕಾರ ತೀರ್ಮಾನಿಸಿದೆ. ಶೋಷಿತ ಜನರ ಅಭಿವೃದ್ಧಿಗೆ ಮೀಸಲಿಟ್ಟ ಹಣವನ್ನು ಡೈವರ್ಟ್ ಮಾಡಲು ಹೊರಟಿರುವುದು ಸರಿಯಲ್ಲ. ರಾಜ್ಯದ ಆರ್ಥಿಕ ಸ್ಥಿತಿ ಹದಗೆಟ್ಟು ಹೋಗಿದೆ. ಅತ್ಯಾಚಾರ ಸಂತ್ರಸ್ತರಿಗೆ, ಮೃತಪಟ್ಟವರ ಕುಟುಂಬಕ್ಕೆ ಪರಿಹಾರ ನೀಡಲು ಸಹ ರಾಜ್ಯ ಸರ್ಕಾರದ ಬಳಿ ಹಣ ಇಲ್ಲ ಎಂದು ವಾಗ್ದಾಳಿ ನಡೆಸಿದ್ದಾರೆ.

  • ‘ಮೈಸೂರು ಪಾಕ್’ ಹೆಸರಿನಲ್ಲೇ ಮೈಸೂರು ಇದೆ, ಅದನ್ನು ಪ್ರತ್ಯೇಕ ಮಾಡೋಕ್ಕಾಗಲ್ಲ: ಪ್ರತಾಪ್ ಸಿಂಹ

    ‘ಮೈಸೂರು ಪಾಕ್’ ಹೆಸರಿನಲ್ಲೇ ಮೈಸೂರು ಇದೆ, ಅದನ್ನು ಪ್ರತ್ಯೇಕ ಮಾಡೋಕ್ಕಾಗಲ್ಲ: ಪ್ರತಾಪ್ ಸಿಂಹ

    ಮೈಸೂರು: ಲೇಖಕ ಆನಂದ್ ರಂಗನಾಥನ್ ಅವರ ಟ್ವೀಟ್‍ಗೆ ಸಂಸದ ಪ್ರತಾಪ್ ಸಿಂಹ ಸಖತ್ ಟಾಂಗ್ ಕೊಟ್ಟಿದ್ದಾರೆ. ಮೈಸೂರು ಪಾಕ್ ಹೆಸರಲ್ಲೇ ಮೈಸೂರು ಇದೆ. ‘ಪಾಕ್’ದಿಂದ ಮೈಸೂರು ತೆಗೆದರೆ ಅದಕ್ಕೆ ಬೆಲೆ ಇಲ್ಲ. ಅದನ್ನು ಪ್ರತ್ಯೇಕ ಮಾಡಲು ಸಾಧ್ಯವಿಲ್ಲ ಎಂದು ತಿರುಗೇಟು ನೀಡಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಪ್ರತಾಪ್ ಸಿಂಹ ಅವರು, ಸದ್ಯ ಭಾರೀ ಚರ್ಚೆಗೆ ಕಾರಣವಾಗಿರುವ ಮೈಸೂರ್ ಪಾಕ್ ಜಿಐ ತಮಿಳು ನಾಡಿಗೆ ಕೊಟ್ಟಿರುವ ವಿಚಾರವಾಗಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ ಆನಂದ್ ರಂಗನಾಥನ್ ಟ್ವೀಟ್ ಬಗ್ಗೆ ಮಾತನಾಡಿ, ಮೈಸೂರು ತೆಗೆದು ‘ಪಾಕ್’ ಮಾತ್ರ ಇದ್ರೆ ಅದು ಬೇರೆ ಅರ್ಥ ಕೊಡಲಿದೆ. ಮೈಸೂರು ಪಾಕ್ ಅನ್ನು ಬೇರೆ ಅವ್ರಿಗೆ ಕೊಡುವ ಪ್ರಶ್ನೆಯೇ ಇಲ್ಲ. ನಾನೂ ಆನಂದ್ ರಂಗನಾಥ್ ಟ್ವಿಟ್ ಗಮನಿಸಿದ್ದೇನೆ. ಅವರು ಈ ರೀತಿಯ ಕೆಲಸ ಜಾಸ್ತಿ ಮಾಡುತ್ತಾರೆ. ಈ ರೀತಿ ಕಿಡಿಗೇಡಿತನದಿಂದ ಮಾಡುವ ಟ್ವೀಟ್‍ಗಳನ್ನು ನಿರ್ಲಕ್ಷಿಸಿ ಎಂದು ತಿರುಗೇಟು ನೀಡಿದರು. ಇದನ್ನೂ ಓದಿ:ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?

    ಕೇಂದ್ರ ಹಣಕಾಸು ಸಚಿವೆ ನಿರ್ಮಲ ಸೀತಾರಾಮನ್ ಅವರ ಬಳಿ ಆನಂದ್ ಅವರು ಯಾವ ಉದ್ದೇಶದಿಂದ ಹೋಗಿದ್ದರೋ ಗೊತ್ತಿಲ್ಲ. ಆದರೆ ಕೇಂದ್ರ ಸರ್ಕಾರ ತಮಿಳುನಾಡಿಗೆ ಮೈಸೂರು ಪಾಕ್ ಕೊಟ್ಟಿಲ್ಲ, ಅದು ಶುದ್ದ ಸುಳ್ಳು ಸುದ್ದಿ. ಅವರು ಸಚಿವೆಯ ಜೊತೆ ಫೋಟೋ ಹಾಕಿಕೊಂಡು ಅದಕ್ಕೆ ಏನೋ ಕ್ಯಾಪ್ಷನ್ ಬರೆದುಕೊಂಡರೆ ಅದಕ್ಕೆ ನಾವು ಹೊಣೆಯಲ್ಲ. ಅದು ಅವರವರ ಹೊಣೆಗೇಡಿತನವನ್ನು ತೋರಿಸಿಕೊಡುತ್ತದೆ. ಇಂತಹ ಸುಳ್ಳು ಸುದ್ದಿಯನ್ನು ನಂಬಬೇಡಿ, ಕೇಂದ್ರ ಸರ್ಕಾರ ಮೈಸೂರು ಪಾಕ್ ಜಿಐ ಟ್ಯಾಗ್ ತಮಿಳುನಾಡಿಗೆ ಕೊಟ್ಟಿಲ್ಲ ಎಂದು ಸ್ಪಷ್ಟಪಡಿಸಿದ್ದಾರೆ.

    ಕೆಲವು ವಸ್ತುಗಳು, ತಿಂಡಿಗಳು ಇತರೇ ಸಾಮಾಗ್ರಿಗಳು ಆಯಾಯ ಪ್ರದೇಶದ ಹೆಸರಿನಿಂದ ಪ್ರಸಿದ್ಧಿಗಳಿಸಿರುತ್ತದೆ. ಉದಾಹರಣೆಗೆ ಮೈಸೂರು ವಿಳ್ಯದ ಎಲೆ, ಮೈಸೂರು ಮಲ್ಲಿಗೆ, ಮೈಸೂರು ಪಾಕ್, ಮೈಸೂರು ಸಿಲ್ಕ್ ಹೀಗೆ ಹೊಲವು ಪದಾರ್ಥಗಳು ಮೈಸೂರಿನಲ್ಲಿ ಮಾತ್ರ ತಯಾರಾಗುತ್ತದೆ ಆದ್ದರಿಂದ ಅವುಗಳ ಹೆಸರಿನೊಂದಿಗೆ ಮೈಸೂರನ್ನು ಕೂಡ ಸೇರಿಸಲಾಗಿದೆ. ಮೈಸೂರು ಪಾಕ್ ಯಾರದ್ದು ಎಂದು ಎಲ್ಲರಿಗೂ ಗೊತ್ತಿರುವ ಸಂಗತಿ. ಹಾಗಾಗಿ ಈ ಬಗ್ಗೆ ಯಾರೋ ವಿವೇಕವಿಲ್ಲದೆ ಮಾತನಾಡುತ್ತಾರೆ ಎಂದರೆ ಅವರ ಬಗ್ಗೆ ತಲೆಕೆಡಿಸಿಕೊಳ್ಳುವ ಅಗತ್ಯವಿಲ್ಲ ಎಂದು ತಿಳಿಸಿದರು.

  • ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?

    ಮೈಸೂರು ಪಾಕ್ ಯಾರಿಗೆ ಸೇರಿದ್ದು?- ಏನಿದು ಜಿಐ ಟ್ಯಾಗ್? ಕರ್ನಾಟಕಕ್ಕೆ ಎಷ್ಟು ಸಿಕ್ಕಿದೆ?

    ಬೆಂಗಳೂರು: ವಿಶ್ವವಿಖ್ಯಾತ ಮೈಸೂರು ಪಾಕ್ ಮೂಲ ಯಾರದ್ದು ಎಂಬುದರ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಈಗ ಮತ್ತೆ ಚರ್ಚೆ ಆರಂಭವಾಗಿದೆ. ಹೆಸರಿನಲ್ಲಿ ಮೈಸೂರು ಹೊಂದಿದ್ದರಿಂದ ಈ ಸಿಹಿ ಪದಾರ್ಥ ನಮ್ಮದು ಎಂಬುವುದು ಕರ್ನಾಟಕದ ವಾದ. ಕರ್ನಾಟಕ ಮೂಲದ್ದು ಎಂಬ ವಿಚಾರಕ್ಕೆ ಸಂಬಂಧಿಸಿದಂತೆ ಹಲವು ಉದಾಹರಣೆ, ಕಥೆಗಳು ನಮ್ಮ ಮುಂದಿವೆ. ಇತ್ತ ನೆರೆಯ ರಾಜ್ಯ ತಮಿಳುನಾಡು ಮೈಸೂರು ಪಾಕ್ ಭೌಗೋಳಿಕ ಸೂಚ್ಯಂಕ(ಜಿಐ) ನಮ್ಮದು ಎಂದು ತಮ್ಮದೇ ಕಾರಣಗಳಿಂದ ವಾದಿಸುತ್ತಾ ಬಂದಿದ್ದಾರೆ.

    ಕೇಂದ್ರ ಸಚಿವೆ ನಿರ್ಮಲಾ ಸೀತಾರಾಮನ್ ಅವರ ಜೊತೆಗೆ ಮೈಸೂರು ಪಾಕ್ ಹಿಡಿದುಕೊಂಡಿರುವ ಒಂದು ಫೋಟೋವನ್ನು ತಮಿಳುನಾಡಿನ ಲೇಖಕ ಆನಂದ್ ರಂಗನಾಥನ್ ಅವರು ಟ್ವೀಟ್ ಮಾಡಿದ್ದರು. ಈ ಟ್ವೀಟ್ ನಲ್ಲಿ ಏಕಸದಸ್ಯ ಸಮಿತಿಯ ಪರವಾಗಿ ತಮಿಳುನಾಡಿಗೆ ಮೈಸೂರು ಪಾಕ್ ತಿಂಡಿಯ ಭೌಗೋಳಿಕ ಸೂಚಂಕ್ಯವನ್ನು ನೀಡಬೇಕೆಂದು ಮನವಿ ಮಾಡುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ವ್ಯಂಗ್ಯವಾಗಿ ಈ ಟ್ವೀಟ್ ಮಾಡಿದ್ದರೂ ಸಾಮಾಜಿಕ ಜಾಲತಾಣದಲ್ಲಿ ಈಗ ಮೈಸೂರು ಪಾಕ್ ಮೂಲ ಯಾರದ್ದು ಎನ್ನುವ ಬಗ್ಗೆ ಚರ್ಚೆ ಆರಂಭಗೊಂಡಿದೆ.

    ಮೈಸೂರು ಪಾಕ್ ಹೆಸರೇ ಸೂಚಿಸುವಂತೆ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ವಿಶೇಷ ಪಾಕ ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಟಿಪ್ಪಣಿ ಆಧರಿಸಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂದು ತಮಿಳಿಗರ ವಾದವಾಗಿದೆ. ಇದನ್ನೂ ಓದಿ: ಇಂಡಿ ನಿಂಬೆಗೆ ಜಿಐ ಮಾನ್ಯತೆ ಪಡೆಯಲು ಸದ್ದಿಲ್ಲದೆ ನಡೆಯುತ್ತಿದೆ ಸಿದ್ಧತೆ

    ಕನ್ನಡಿಗರ ವಾದ ಏನು?
    ಮೈಸೂರು ಪಾಕ್ ಮೊದಲು ತಯಾರಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರಾದ ಕಕಸುರ ಮಾದಪ್ಪ ಎಂಬವರು ಈ ಸಿಹಿಯನ್ನು ತಯಾರಿಸಿದ್ದರು. ಮೊದಲು ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು ‘ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). ಇದು ಸಾಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ.

    ಮೆಕಾಲೆ ಹೇಳುವುದೇನು?
    ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಈಗ ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.

    ಜಿಐ ಟ್ಯಾಗ್ ಲಾಭವೇನು?
    ಭೌಗೋಳಿಕ ಸೂಚ್ಯಂಕ ಒಂದು ನಿರ್ದಿಷ್ಟ ಪದಾರ್ಥ ಅಥವಾ ಊರನ್ನು ಸೂಚಿಸುತ್ತದೆ. ಕೇಂದ್ರ ಸರ್ಕಾರ ನೀಡುವ ಭೌಗೋಳಿಕ ಸೂಚ್ಯಂಕ ಪದಾರ್ಥ ಅಥವಾ ಸ್ಥಳದ ಮಹತ್ವವನ್ನು ವಿವರಿಸುತ್ತದೆ. ಜಿಐ ಟ್ಯಾಗ್ ಪಡೆದ ರಾಜ್ಯ ಸರ್ಕಾರ ಪದಾರ್ಥದ ಮೇಲಿನ ಸಂಪೂರ್ಣ ಹಕ್ಕು ಹೊಂದಿರುತ್ತದೆ. ಸರ್ಕಾರ ಪದಾರ್ಥದ ಬೆಲೆ ನಿಗದಿ ಮಾಡುವ ಹಕ್ಕು ಸಹ ಹೊಂದಿರುತ್ತದೆ. ಐಜಿ ಟ್ಯಾಗ್ ಅವಧಿ 10 ವರ್ಷ ಇರುತ್ತದೆ. ಸರ್ಕಾರಗಳು ಪ್ರತಿ 10 ವರ್ಷಕ್ಕೊಮ್ಮೆ ಐಟಿ ಟ್ಯಾಗ್ ನ್ನು ನವೀಕರಣಗೊಳಿಸಿಕೊಳ್ಳಬೇಕು.

    ಕರ್ನಾಟಕದ ಧಾರವಾಡ ಪೇಡಕ್ಕೆ ಐಜಿ ಟ್ಯಾಗ್ ಸಿಕ್ಕಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.

    ಯಾವುದೇ ಆಹಾರ ಪದಾರ್ಥ, ತರಕಾರಿಗಳಿಗೆ ಭೌಗೋಳಿಕ ಸೂಚ್ಯಂಕ ಪಡೆಯಬೇಕಾದರೆ ರಾಜ್ಯ ಸರ್ಕಾರದ ಮೂಲಕ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಬೇಕಾಗುತ್ತದೆ.

    ಕರ್ನಾಟಕದಲ್ಲಿ ಯಾವುದಕ್ಕೆ ಜಿಐ ಸಿಕ್ಕಿದೆ?
    ಮೈಸೂರು ಸಿಲ್ಕ್, ಮೈಸೂರು ಅಗರಬತ್ತಿ, ಮೈಸೂರು ಗಂಧದ ಎಣ್ಣೆ, ಮೈಸೂರು ಸ್ಯಾಂಡಲ್ ಸೋಪ್, ಮೈಸೂರು ಸಾಂಪ್ರದಾಯಿಕ ವರ್ಣಚಿತ್ರಗಳು, ಕೊಡಗಿನ ಕಿತ್ತಳೆ, ಮೈಸೂರು ವೀಳ್ಯದ ಎಲೆ, ನಂಜನಗೂಡು ಬಾಳೆಹಣ್ಣು, ಮೈಸೂರು ಮಲ್ಲಿಗೆ, ಉಡುಪಿ ಮಲ್ಲಿಗೆ, ಮೊಳಕಾಲ್ಮುರು ಸೀರೆಗಳು, ಮಲಬಾರ್ ಅರಾಬಿಕಾ ಕಾಫಿ, ಮಲಬಾರ್ ರೋಬಸ್ಟಾ ಕಾಫಿ, ಕೊಡಗು ಹಸಿರು ಏಲಕ್ಕಿ, ಧಾರವಾಡ ಪೇಡಾ, ದೇವನಹಳ್ಳಿ ಚಕ್ಕೊತ್ತಾ, ಅಪ್ಪೆಮಿಡಿ ಮಾವು, ಕಮಲಾಪುರ ಕೆಂಪು ಬಾಳೆಹಣ್ಣು, ಚನ್ನಪಟ್ಟಣದ ಗೊಂಬೆ, ಇಳಕಲ್ ಸೀರೆಗಳು ಸೇರಿದಂತೆ ರಾಜ್ಯದ 40 ಉತ್ಪನ್ನಗಳಿಗೆ ಜಿಐ ಮಾನ್ಯತೆ ಸಿಕ್ಕಿದೆ.

    ಅತಿ ಹೆಚ್ಚು ಜಿಐ ಮಾನ್ಯತೆ ಪಡೆದ ರಾಜ್ಯಗಳು?
    ರಾಜ್ಯಗಳ ಪ್ರಸ್ತಾಪವನ್ನು ಒಪ್ಪಿ ಕೇಂದ್ರ ಸರ್ಕಾರ ಜಿಯೋಗ್ರಫಿಕಲ್ ಐಡೆಂಟಿಫಿಕೇಷನ್ ಮಾನ್ಯತೆಯನ್ನು ನೀಡುತ್ತದೆ. ಪಟ್ಟಿಯಲ್ಲಿ 40 ಉತ್ಪನ್ನಗಳಿಗೆ ಮಾನ್ಯತೆ ಪಡೆಯುವ ಮೂಲಕ ಅತಿ ಹೆಚ್ಚು ಜಿಐ ಸಂಪಾದಿಸಿದ ಹೆಗ್ಗಳಿಕೆಯನ್ನು ಕರ್ನಾಟಕ ಪಡೆದುಕೊಂಡಿದೆ. ರಾಜ್ಯಕ್ಕೆ ಸಿಕ್ಕಿರುವ 40ರಲ್ಲಿ 13 ಮೈಸೂರಿನಿಂದ ಬಂದಿರುವ ಉತ್ಪನಗಳು ಎನ್ನುವುದು ವಿಶೇಷ.

    ಕರ್ನಾಟಕದ ಬಳಿಕ ಮಹಾರಾಷ್ಟ್ರ(30), ಕೇರಳ(27), ಉತ್ತರ ಪ್ರದೇಶ(24), ಆಂಧ್ರಪ್ರದೇಶ(18), ಪಶ್ಚಿಮ ಬಂಗಾಳ(15), ಒಡಿಶಾ(14), ರಾಜಸ್ಥಾನ(14), ಗುಜರಾತ್(13), ಬಿಹಾರ(11), ತೆಲಂಗಾಣ(11), ಅಸ್ಸಾಂ(8), ಮಧ್ಯಪ್ರದೇಶ(8), ಜಮ್ಮು ಕಾಶ್ಮೀರ(8) ರಾಜ್ಯಗಳ ಉತ್ಪನ್ನಗಳಿಗೆ ಜಿಐ ಸಿಕ್ಕಿದೆ.

  • ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    ಮೈಸೂರು ಪಾಕ್ ಕಂಡು ಹಿಡಿದಿದ್ದು ಯಾರು? ಇಲ್ಲಿದೆ ಮಾಹಿತಿ

    ನಾಡಿನಲ್ಲೆಡೆ ದಸಾರ ಹಬ್ಬದ ಸಂಭ್ರಮ ಮನೆ ಮಾಡಿದೆ. ಕುಟುಂಬದಿಂದ ದೂರು ಇರುವ ಹಲವರು ಹಬ್ಬಕ್ಕಾಗಿ ಊರುಗಳತ್ತ ಹೆಜ್ಜೆ ಹಾಕುತ್ತಿದ್ದರೆ, ಮತ್ತೆ ಕೆಲವರು ಈ ಬಾರಿ ಜಂಬೂ ಸವಾರಿ ನೋಡಬೇಕೆಂದು ಪ್ಲಾನ್ ಮಾಡುತ್ತಿರುತ್ತಾರೆ. ವಿಶ್ವಾದ್ಯಂತ ಜಂಬೂ ಸವಾರಿ ಹೇಗೆ ಪ್ರಸಿದ್ಧವೋ, ಹಾಗೆಯೇ ಮೈಸೂರು ಪಾಕ್ ಸಹ ಅಷ್ಟೇ ಪ್ರಖ್ಯಾತಿಯನ್ನು ಪಡೆದುಕೊಂಡಿದೆ. ಮೈಸೂರಿಗೆ ಬಂದ ಪ್ರವಾಸಿಗರು ‘ಮೈಸೂರು ಪಾಕ್’ ಸವಿಯಲೇ ಬೇಕು.

    ಮೈಸೂರು ಪಾಕ್ ಇತಿಹಾಸ:
    ಮೈಸೂರು ಅರಮನೆಯ ಪಾಕಶಾಲೆಯಲ್ಲಿ ಕಾಕಾಸುರ ಮಾದಪ್ಪ ಎಂಬ ಭಟ್ಟರು ಕೆಲಸ ಮಾಡಿಕೊಂಡಿದ್ದರು. ಮಹಾರಾಜ ನಾಲ್ವಡಿ ಕೃಷ್ಣರಾಜ ಒಡೆಯರ್ ಹಾಗೂ ಜಯ ಚಾಮರಾಜ ಒಡೆಯರ್ ಆಡಳಿತಾವಧಿಯಲ್ಲಿ ಅರಮನೆಯ ಪಾಕಶಾಲೆಯ ನೇತೃತ್ವವನ್ನು ಕಾಕಾಸುರ ಮಾದಪ್ಪನವರೇ ವಹಿಸಿಕೊಂಡಿದ್ದರು. ಒಂದು ದಿನ ಮಹಾರಾಜರು ಕಾಕಾಸುರು ಅವರಿಗೆ ಸಿಹಿ ತಿಂಡಿ ಮಾಡುವಂತೆ ಆದೇಶಿಸುತ್ತಾರೆ.

    ಮಹಾರಾಜರ ಆದೇಶ ಸ್ವೀಕರಿಸಿದ ಕಾಕಾಸರು ಭಟ್ಟರು, ಮೊದಲು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು `ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ).

    ಹೊಸ ಸಿಹಿ ತಿಂಡಿಯ ರುಚಿ ನೀಡಿದ ಮಹಾರಾಜರು ಏನಿದರ ಹೆಸರು ಎಂದು ಕೇಳಿದ್ದರಂತೆ ಆಗಾಗ ಭಟ್ಟರು ಪಾಕದಿಂದ ಮಾಡಿದ ಸಿಹಿ ಅಂದರಂತೆ. ಹಾಗಾದರೆ ಮೈಸೂರು ಪಾಕ್ ಎಂದು ಹೆಸರು ಇಡೋಣ ಅಂತಾ ಹೇಳಿದ್ದರು ಎಂಬ ಕಥೆಯನ್ನು ಜನರು ಹೇಳುತ್ತಾರೆ. ಕಾಕಾಸುರ ಭಟ್ಟರ ವಂಶಸ್ಥರು ಮೈಸೂರು ನಗರದಲ್ಲಿ ವಾಸಿಸುತ್ತಿದ್ದು, ಗುರು ಸ್ವೀಟ್ಸ್ ಎಂಬ ಸಿಹಿ ಅಂಗಡಿಯನ್ನು ಹೊಂದಿದ್ದಾರೆ.

    ಗುರು ಸ್ವೀಟ್ಸ್ ಇಂದಿಗೂ ಮೈಸೂರು ಪಾಕ್ ರುಚಿಯನ್ನು ಉಳಿಸಿಕೊಂಡು ಬಂದಿದ್ದು, ಅಂಗಡಿಯ ಮಾಹಿತಿ ಇದ್ದವರೂ ಈಗಲೂ ಅಲ್ಲಿಯೇ ಮೈಸೂರು ಪಾಕ್ ಖರೀದಿ ಮಾಡುತ್ತಾರೆ.

    ಮೈಸೂರು ಪಾಕ್ ನಮ್ಮದು ತಮಿಳರ ವಾದ..?
    ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ ಹೇಳುವ ಪ್ರಕಾರ, 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.

    ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ (ಜಿಯಾಗ್ರಾಫಿಕಲ್ ಇಂಡಿಕೇಷನ್-ಐಜಿ) ಸಾಮಾಜಿಕ ಜಾಲತಾಣದಲ್ಲಿ ಈ ಹಿಂದೆ ಕನ್ನಡಿಗರು ಮತ್ತು ತಮಿಳರ ಮಧ್ಯೆ ಭಾರೀ ಚರ್ಚೆ ಆರಂಭವಾಗಿತ್ತು. ದಕ್ಷಿಣ ಭಾರತದ ಸಮೃದ್ಧ ಸಿಹಿ ತಿನಿಸಾದ ಮೈಸೂರು ಪಾಕ್ ತಯಾರಿಸಲು ಹೇರಳ ಪ್ರಮಾಣದ ಶುದ್ಧ ತುಪ್ಪ, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಲಾಗುತ್ತದೆ. ಆದರೆ ಮೈಸೂರು ಪಾಕ್ ಹಾಗೂ ಧಾರವಾಡ ಪೇಡಗಳಿಗೆ ಈಗಾಗಲೇ ಕರ್ನಾಟಕಕ್ಕೆ ಜಿಐ ಸ್ಥಾನದ ಹಕ್ಕು ನೀಡಲಾಗಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

    3. ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

  • ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    ದಸರಾಗೆ ನಿಮ್ಮ ಮನೆಯಲ್ಲಿರಲಿ ಮೈಸೂರು ಪಾಕ್

    ನಾಡಿನಾದ್ಯಂತ ದಸರಾ ಹಬ್ಬದ ವಾತಾವರಣ ಕಳೆಗಟ್ಟುತ್ತಿದೆ. ಈಗಾಗಲೇ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದಸರಾ ಅಂದರೆ ನವರಾತ್ರಿ, ಒಂಬತ್ತು ದಿನ ನವದುರ್ಗೆಯರನ್ನು ಪೂಜಿಸಲಾಗುತ್ತದೆ. ಪ್ರತಿದಿನ ಮನೆಯಲ್ಲಿ ಸಿಹಿ ಮಾಡಬೇಕಾಗುತ್ತದೆ. ಹೀಗಾಗಿ ದಸರಾ ಹಬ್ಬಕ್ಕಾಗಿ ಮೈಸೂರು ಪಾಕ್ ಮಾಡುವ ಸುಲಭ ವಿಧಾನ ಇಲ್ಲಿದೆ.

    ಬೇಕಾಗುವ ಸಾಮಾಗ್ರಿಗಳು
    1. ಕಡಲೆ ಹಿಟ್ಟು – ಅರ್ಧ ಕೆಜಿ
    2. ತುಪ್ಪ – 1 ಬಟ್ಟಲು
    3. ಎಣ್ಣೆ – 1 ಬಟ್ಟಲು
    4. ಸಕ್ಕರೆ – ಮುಕ್ಕಾಲು ಕೆಜಿ
    5. ನೀರು – 1 ಲೋಟ

    ಮಾಡುವ ವಿಧಾನ
    * ಒಂದು ಪ್ಯಾನ್‍ಗೆ ತುಪ್ಪ ಮತ್ತು ಎಣ್ಣೆಯನ್ನು ಹಾಕಿ ಕುದಿಸಿಡಿ.
    * ಈಗ ಒಂದು ಪ್ಯಾನ್‍ಗೆ ಸಕ್ಕರೆ, 1 ಲೋಟ ನೀರು ಹಾಕಿ ಕುದಿಸಿ.
    * ಒಂದು ಎಳೆ ಪಾಕ ಬಂದ ಮೇಲೆ ಅದಕ್ಕೆ(ಪಾಕ) ಸ್ವಲ್ಪ ಸ್ವಲ್ಪವೇ ಕಡಲೆಹಿಟ್ಟನ್ನು ಹಾಕಿಕೊಳ್ಳುತ್ತಾ ಸೌಟಿನಿಂದ ತಿರುಗಿಸುತ್ತಿರಿ.
    * ಕಡಲೆಹಿಟ್ಟು ಗಂಟುಗಳಿಲ್ಲದಂತೆ ಸಂಪೂರ್ಣವಾಗಿ ಸಕ್ಕರೆ ಪಾಕದೊಂದಿಗೆ ಮಿಕ್ಸ್ ಮಾಡಿ.
    * ಈಗ ಸ್ವಲ್ಪ ಸ್ವಲ್ಪವೇ ತುಪ್ಪ ಮತ್ತು ಎಣ್ಣೆ ಮಿಕ್ಸ್ ಅನ್ನು ಸೇರಿಸಿ ಕೈಯಾಡಿಸುತ್ತಿರಿ.
    * ಕಡಲೆಹಿಟ್ಟು ಈಗ ತುಪ್ಪ ಮತ್ತು ಎಣ್ಣೆಯನ್ನು ಹೀರಿಕೊಂಡು ಗಟ್ಟಿಯಾಗುತ್ತಾ ಬರುತ್ತದೆ.
    * ನಂತರ ತುಪ್ಪ ಸವರಿದ ಟ್ರೇಗೆ ಬಿಸಿ ಇರುವಾಗಲೇ ಕಡಲೆಹಿಟ್ಟು ಗಟ್ಟಿಯನ್ನು ಹಾಕಿ ಬೇಕಾದ ಶೇಪ್‍ಗೆ ಕತ್ತರಿಸಿ.
    * ಬಿಸಿ ಆರಿದ ಮೇಲೆ ಸ್ಲೈಸ್‍ ಗಳನ್ನು ಟ್ರೇನಿಂದ ಸಪರೇಟ್ ಮಾಡಿ ಸವಿಯಿರಿ..

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

    ದಸರಾ ಸುದ್ದಿಗಳು:

    1. ನವರಾತ್ರಿಯ ಕೊನೆಯ ದಿನ ಆಚರಿಸುವ ಆಯುಧ ಪೂಜೆಯ ಮಹತ್ವವೇನು?

    2. ಮೈಸೂರು ದಸರಾ: ರತ್ನ ಖಚಿತ ಸಿಂಹಾಸನದ ಜೋಡಣೆ ಕಾರ್ಯ ಆರಂಭ

  • ಮೈಸೂರು ಪಾಕ್ ಯಾರಿಗೆ ಸೇರಿದ್ದು? ಕನ್ನಡಿಗರು- ತಮಿಳಿಗರ ಮಧ್ಯೆ ಚರ್ಚೆ ಆರಂಭ

    ಮೈಸೂರು ಪಾಕ್ ಯಾರಿಗೆ ಸೇರಿದ್ದು? ಕನ್ನಡಿಗರು- ತಮಿಳಿಗರ ಮಧ್ಯೆ ಚರ್ಚೆ ಆರಂಭ

    ಮೈಸೂರು: ಕಳೆದ ಕೆಲ ತಿಂಗಳ ಹಿಂದೆಯಷ್ಟೇ ರಸಗುಲ್ಲ ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ (ಜಿಯಾಗ್ರಾಫಿಕಲ್ ಇಂಡಿಕೇಷನ್-ಐಜಿ) ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆ ಆರಂಭವಾಗಿತ್ತು. ಈಗ ಮೈಸೂರ್ ಪಾಕ್ ಹಕ್ಕಿಗಾಗಿ ಕರ್ನಾಟಕದಿಂದ ಹೋರಾಟವಾಗಬೇಕೆಂಬ ಚರ್ಚೆ ಆರಂಭವಾಗಿದ್ದು, ಉಭಯ ರಾಜ್ಯಗಳ ಜನರು ವಾದ-ಪ್ರತಿವಾದಗಳಲ್ಲಿ ತೊಡಗಿದ್ದಾರೆ.

    ಮೈಸೂರು ಪಾಕ್ ಹೆಸರೇ ಸೂಚಿಸುವಂತೆ ಮೈಸೂರು ಮಹಾರಾಜರ ಅರಮನೆಯ ಪಾಕ ಶಾಲೆಯಲ್ಲಿ ತಯಾರಿಸಲಾಗಿದ್ದ ಪಾಕ ವಿಶೇಷ ಎಂದು ಕನ್ನಡಿಗರ ವಾದವಾದರೆ, ಬ್ರಿಟಿಷ್ ಆಡಳಿತ ಅಧಿಕಾರಿಯಾಗಿದ್ದ ಲಾರ್ಡ್ ಮೆಕಾಲೆ ಟಿಪ್ಪಣಿ ಆಧಾರಿಸಿ ಮೈಸೂರು ಪಾಕ್ ಮದ್ರಾಸ್ ಸಂಸ್ಥಾನದ ಹಕ್ಕು ಎಂದು ತಮಿಳಿಗರ ವಾದವಾಗಿದೆ.

    ಎಲ್ಲರ ಬಾಯಲ್ಲಿ ನೀರೂರಿಸುವ ಮೈಸೂರು ಪಾಕ್ 74 ವರ್ಷಗಳ ಹಿಂದೆ ಆವಿಷ್ಕಾರಗೊಂಡಿದ್ದು, ಅಂದು ಮದ್ರಾಸ್ ಸರ್ಕಾರವಿದ್ದ ಕಾರಣ ಮೈಸೂರ್ ಪಾಕ್ ತಯಾರಿನ ಹೆಮ್ಮೆ ನಮ್ಮದು ಎನ್ನುತ್ತಿದ್ದಾರೆ ತಮಿಳಿಗರು. ಪ್ರಸ್ತುತ ಈ ವಿಚಾರದಲ್ಲಿ ಮೈಸೂರ್ ಪಾಕ್ ಭೌಗೋಳಿಕ ಸೂಚ್ಯಂಕ ಹಕ್ಕಿಗಾಗಿ ನ್ಯಾಯಾಲಯದ ಮೆಟ್ಟಿಲೇರುವ ಸಾಧ್ಯತೆ ಇದೆ.

    ದಕ್ಷಿಣ ಭಾರತದ ಸಮೃದ್ಧ ಸಿಹಿ ತಿನಿಸಾದ ಮೈಸೂರು ಪಾಕ್ ತಯಾರಿಸಲು ಹೇರಳ ಪ್ರಮಾಣದ ಶುದ್ಧ ತುಪ್ಪ, ಸಕ್ಕರೆ, ಕಡಲೆ ಹಿಟ್ಟು, ಏಲಕ್ಕಿಯನ್ನು ಬಳಸಲಾಗುತ್ತದೆ. ಆದರೆ ಮೈಸೂರು ಪಾಕ್ ಹಾಗೂ ಧಾರವಾಡ ಪೇಡಗಳಿಗೆ ಈಗಾಗಲೇ ಕರ್ನಾಟಕಕ್ಕೆ ಜಿಐ ಸ್ಥಾನದ ಹಕ್ಕು ನೀಡಲಾಗಿದೆ. ಇನ್ನುಳಿದಂತೆ ಮಂಗಳೂರು ಬನ್ಸ್ ಎಂದೇ ಹೆಸರು ಪಡೆದಿರುವ ಬೇಕರಿ ತಿಂಡಿ, ಶಿವಮೊಗ್ಗದ ಹಲಸಿನ ಹಣ್ಣಿನ ಕಡುಬು, ಬೆಳಗಾವಿಯ ಕುಂದ, ಉಡುಪಿಯ ಹಯಗ್ರೀವ, ಸಿರ್ಸಿಯ ತೊಡದೇವು ಆಹಾರ ಪದಾರ್ಥಗಳಿಗೆ ಭೌಗೋಳಿಕ ಹಕ್ಕು ದೊರೆಯಬೇಕಿದೆ.

    ಕನ್ನಡಿಗರ ವಾದ ಏನು?
    ಮೈಸೂರು ಪಾಕ್ ಮೊದಲು ತಯಾರಾಗಿದ್ದು, ನಾಲ್ವಡಿ ಕೃಷ್ಣರಾಜ ಒಡೆಯರ್ ಆಳ್ವಿಕೆಯ ಸಂದರ್ಭದಲ್ಲಿ ಅರಮನೆಯ ಅಡುಗೆ ಭಟ್ಟರಾದ ಕಕಸುರ ಮಾದಪ್ಪ ಎಂಬವರು ಈ ಸಿಹಿಯನ್ನು ತಯಾರಿಸಿದ್ದರು. ಮೊದಲು ಅವರು ಕಡಲೆ ಹಿಟ್ಟು, ತುಪ್ಪ ಮತ್ತು ಸಕ್ಕರೆ ಮೂವರನ್ನು ಮಿಶ್ರಣ ಮಾಡಿಕೊಂಡರು. ನಂತರ ಪಾಕವನ್ನು ತಯಾರಿಸಿಕೊಂಡು ತಮಗೆ ಬೇಕಾದ ಆಕಾರಕ್ಕೆ ಒಣಗಲು ಬಿಟ್ಟು ಬಳಿಕ ಅದು ಮಿಠಾಯಿ ರೀತಿಯಲ್ಲಿ ಮೂಡಿ ಬಂದಿತ್ತು. ಕೊನೆಗೆ ಅದರ ಹೆಸರು ಕೇಳಿದಾಗ ಇದು ‘ಮೈಸೂರು ಪಾಕ್’ ಎಂದು ಹೇಳಿದರು. (ಪಾಕ್ ಅಥವಾ ಪಾಕ, ನಿಖರವಾಗಿ, ಸಂಸ್ಕೃತ ಮತ್ತು ಇತರೆ ಭಾರತೀಯ ದೇಶೀಯ ಭಾಷೆಗಳಲ್ಲಿ ಸಿಹಿ ಎಂದು ಅರ್ಥ ಕೊಡುತ್ತದೆ). ಇದು ಸಂಪ್ರದಾಯಿಕವಾಗಿ ಮದುವೆ ಮತ್ತು ದಕ್ಷಿಣ ಭಾರತದ ಇತರೆ ಹಬ್ಬಗಳಲ್ಲಿ ವಿಶೇಷವಾಗಿ ಮಾಡುತ್ತಾರೆ.

    ಮೆಕಾಲೆ ಹೇಳುವುದೇನು?
    ಬ್ರಿಟಿಷ್ ಅಧಿಕಾರಿ ಲಾರ್ಡ್ ಮೆಕಾಲೆ 1853ರಲ್ಲಿ, ಆಹಾರ ಪ್ರಿಯರನ್ನು ಬೇಗನೇ ಸೆಳೆಯುವಂತಹ ಮೈಸೂರು ಪಾಕ್ ಅನ್ನು ಮೊದಲು ಮದ್ರಾಸ್ ತಮಿಳಿಗರು ತಯಾರಿಸುತ್ತಿದ್ದರು. ಆದರೆ ಯಾರೂ ಇದನ್ನು ನಂಬುವುದಿಲ್ಲ. ಅರಮನೆಯ ನ್ಯಾ.ರೊಬ್ಬರು 74 ವರ್ಷಗಳ ಹಿಂದೆಯೇ ಮದ್ರಾಸ್‍ನಿಂದ ಈ ಸಿಹಿಯನ್ನು ತಯಾರಿಸುವ ವಿಧಾನವನ್ನು ಕದ್ದು ತಂದಿದ್ದು, ಜೀವನದ ಕೊನೆಯ ಘಟ್ಟದ್ದಲ್ಲಿ ಮೈಸೂರು ರಾಜರಿಗೆ ತಿಳಿಸಿದ್ದಾರೆ. ನಂತರ ಮೈಸೂರಿನ ಮಹಾರಾಜರು ಮದ್ರಾಸ್‍ನ ಸಿಹಿ ತಿಂಡಿಗೆ ಮೈಸೂರು ಪಾಕ್ ಎಂದು ಹೆಸರಿಟ್ಟಿದ್ದಾರೆ. ಮೆಕಾಲೆ ಭಾವಚಿತ್ರದೊಂದಿಗೆ ಇರುವ ಮಾಹಿತಿಯನ್ನು ಆಧಾರವಾಗಿಟ್ಟುಕೊಂಡು ಈಗ ಮೈಸೂರು ಪಾಕ್ ತಮ್ಮದೆಂದು ತಮಿಳರು ವಾದಿಸುತ್ತಿದ್ದಾರೆ.

    https://twitter.com/yoganarasimha19/status/931026798195781632

    https://twitter.com/virendrasewag/status/930776669094211584