Tag: ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ

  • ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

    ಕಡ್ಲೇಪುರಿಯಂತೆ ಮುಡಾ ಸೈಟ್ ಹಂಚಿಕೆ – 1962ರಲ್ಲಿ ವಶಪಡಿಸಿಕೊಂಡ ಭೂಮಿಗೆ 2023ರಲ್ಲಿ ಪರಿಹಾರ!

    ಮೈಸೂರು: ಮುಡಾ 50:50 ಸೈಟು ಹಂಚಿಕೆ ಹಗರಣ (50:50 Site Scam) ಮತ್ತೊಂದು ತಿರುವು, ಸಂಚಲನ ಸೃಷ್ಟಿಸಿದೆ. 50:50 ಅನುಪಾತದಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ ಎಂಬ ಆರೋಪದ ಹೊತ್ತಲ್ಲೇ 50:50 ಅನುಪಾತದ ಫಲಾನುಭವಿಗಳ ಮೊದಲ ಲಿಸ್ಟ್ `ಪಬ್ಲಿಕ್ ಟಿವಿ’ಗೆ (Public TV) ಲಭ್ಯವಾಗಿದೆ.

    ಈ ಪಟ್ಟಿಯಲ್ಲಿ ಇರುವ ಬೇರೆಯವರ ಹೆಸರು ಇದುವರೆಗೆ ಬಹಿರಂಗ ಆಗಿರಲಿಲ್ಲ. ಈಗ ಅದರ ಮೊದಲ ಕಂತು ಬಹಿರಂಗವಾಗಿದ್ದು 300 ಜನರಿಗೆ ಸೈಟ್ ಸಿಕ್ಕಿರುವ ಲಿಸ್ಟ್ ಬೆಳಕಿಗೆ ಬಂದಿವೆ. ಪ್ರಾಧಿಕಾರದಲ್ಲಿ ಸೈಟ್‌ಗಳನ್ನು ಕಡ್ಲೇಪುರಿ ಥರ ಹಂಚಲಾಗಿದೆ. 50:50 ಅನುಪಾತದ ಸೈಟ್ ಹಂಚುವಲ್ಲಿ ಶರವೇಗವೂ ಕೂಡ ಇರೋದು ಗೊತ್ತಾಗಿದೆ. ಒಬ್ಬ ವ್ಯಕ್ತಿಗೆ ಮುಡಾದಿಂದ (MUDA) ಪರಿಹಾರ ರೂಪದಲ್ಲಿ ಹತ್ತಲ್ಲ, ಹದಿನೈದಲ್ಲ ಬರೋಬ್ಬರಿ 25 ಸೈಟ್ ಸಿಕ್ಕಿವೆ. ಇದನ್ನೂ ಓದಿ: ನೀಟ್‌ ಆಕಾಂಕ್ಷಿಗಳ ಮೇಲೆ ವಿಜ್ಞಾನ ಶಿಕ್ಷಕರಿಂದ ತಿಂಗಳಾನುಗಟ್ಟಲೆ ರೇಪ್‌, ಬ್ಲ್ಯಾಕ್‌ಮೇಲ್‌ – ಕಾಮುಕರು ಅರೆಸ್ಟ್‌

    ಅಬ್ದುಲ್ ವಾಜಿದ್‌ಗೆ 26 ಸೈಟ್
    ವಾಜಿದ್ ವಂಶಸ್ಥರ ಜಮೀನನ್ನು 1962ರಲ್ಲಿ ಸ್ವಾಧೀನ ಪಡಿಸಿ ಕೊಳ್ಳಲಾಗಿತ್ತು. 61 ವರ್ಷಗಳ ಬಳಿಕ 2022ರ ಡಿಸೆಂಬರ್‌ನಲ್ಲಿ ಮುಡಾಗೆ ಅರ್ಜಿ ಹಾಕಲಾಗಿದೆ. ಮುಡಾ ಆಯುಕ್ತರು 2023ರ ಫೆಬ್ರವರಿಯಲ್ಲಿ ಅಂದರೆ ಅರ್ಜಿ ಕೊಟ್ಟ ಎರಡೇ ತಿಂಗಳಿಗೆ 25 ಸೈಟ್ ಮಂಜೂರು ಮಾಡಿದ್ದಾರೆ. ಸರ್ಕಾರದ ಕಾನೂನು ಹೇಳುವಂತೆ, 2009ರ ಹಿಂದಿನ ಬಡಾವಣೆಗಳಿಗೆ 50:50 ಅನುಪಾತ ಅನ್ವಯವಾಗಲ್ಲ. ಆದರೆ, ಇದು 1962ರ ಕೇಸ್ ಎಂಬುದು ದಾಖಲೆಯಲ್ಲಿದೆ. ಇದನ್ನೂ ಓದಿ: ನಾಯಿ ಮರಿಯ ಶಬ್ದ ಕೇಳಲಾಗದೇ ಮೀರತ್‌ನಲ್ಲಿ 5 ನಾಯಿ ಮರಿಗಳಿಗೆ ಬೆಂಕಿ ಹಚ್ಚಿದ ಮಹಿಳೆಯರು: ಕೇಸ್ ದಾಖಲು

    ಯರ‍್ಯಾರಿಗೆ ಎಷ್ಟೆಷ್ಟು ಮುಡಾ ಸೈಟ್?
    ಸೈಯದ್ ಯೂಸಫ್: 21 ಸೈಟ್
    ಮಲ್ಲಪ್ಪ: 19 ಸೈಟ್
    ಎಸ್.ವಿ.ವೆಂಕಟಪ್ಪ: 17 ಸೈಟ್
    ದೇವಮ್ಮ: 16 ಸೈಟ್
    ಮಹದೇವು & ಗೀತಾ: 12 ಸೈಟ್
    ಸುರೇಶಮ್ಮ: 11 ಸೈಟ್
    ವೈರಮುಡಿ: 10 ಸೈಟ್
    ಚೌಡಯ್ಯ: 7 ಸೈಟ್

    ಇನ್ನು, ಕಡತಗಳು ಮಿಸ್ಸಾಗಿರುವ ಬಗ್ಗೆ ಸಭೆಯಲ್ಲಿ ಅಧಿಕಾರಿಗಳೇ ಒಪ್ಪಿಕೊಂಡಿದ್ದಾರೆ ಎಂದು ಬಿಜೆಪಿ ಶಾಸಕ ಶ್ರೀವತ್ಸ ಹೇಳಿದ್ದಾರೆ. ಜೊತೆಗೆ, ಮನೆ ನಿರ್ಮಿಸಲು ನಕ್ಷೆಗೆ ಅನುಮತಿ ಕೊಡುವುದನ್ನು ನಿಲ್ಲಿಸಬೇಕು. ಕಾಮಗಾರಿ ಮಾಡುತ್ತಿರುವವರಿಗೆ ತಡೆಯಾಜ್ಞೆ ನೀಡಬೇಕು ಅಂತ ಆಗ್ರಹಿಸಿದ್ದಾರೆ. ಆಯ್ದ ಸೈಟ್‌ಗಳ ಕಡತಗಳೇ ಮಾಯವಾಗಿರೋ ವಿಚಾರವನ್ನು ಲೋಕಾಯುಕ್ತ ನೋಡಿಕೊಳ್ಳುತ್ತೆ ಅಂತ ಗೃಹ ಸಚಿವ ಪರಮೇಶ್ವರ್ ಹೇಳಿದ್ದಾರೆ. ಈ ಮಧ್ಯೆ, ಮುಡಾ ಮಾಜಿ ಆಯುಕ್ತ ನಟೇಶ್‌ಗೆ ಇಡಿ ಡ್ರಿಲ್ ಮಾಡಿದೆ.

  • ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಪಾತ್ರ ಇದೆಯಾ? – ಸಚಿವ ಬೈರತಿ ಸುರೇಶ್ ಹೇಳಿದ್ದೇನು?

    ಮುಡಾ ಹಗರಣದಲ್ಲಿ ಸಿಎಂ ಪುತ್ರ ಯತೀಂದ್ರ ಪಾತ್ರ ಇದೆಯಾ? – ಸಚಿವ ಬೈರತಿ ಸುರೇಶ್ ಹೇಳಿದ್ದೇನು?

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) (MUDA) ಹಗರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಈ ಕ್ಷಣಕ್ಕೆ ಕಂಡುಬಂದಿಲ್ಲ ಎಂದು ಸಚಿವ ಬೈರತಿ ಸುರೇಶ್ (Byrathi Suresh) ಹೇಳಿದ್ದಾರೆ.

    ಮೈಸೂರಿನಲ್ಲಿ (Mysuru) ಮುಡಾ ಸಭೆ ಬಳಿಕ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, `ಮುಡಾ ಹಗರಣದಲ್ಲಿ ಯತೀಂದ್ರ ಸಿದ್ದರಾಮಯ್ಯ ಪಾತ್ರ ಇದೆ’ ಎಂಬ ಮಾಜಿ ಸಚಿವ ಹೆಚ್. ವಿಶ್ವನಾಥ್ (H Vishwanath) ಅವರ ಆರೋಪಕ್ಕೆ ಸ್ಪಷ್ಟನೆ ನೀಡಿದ್ದಾರೆ. ಯತೀಂದ್ರ ಅವರ ಪಾತ್ರ ಈ ಕ್ಷಣಕ್ಕೆ ಕಂಡುಬಂದಿಲ್ಲ. ಯತೀಂದ್ರ (Yathindra Siddaramaiah) ಈಗ ಎಂಎಲ್‌ಸಿ ಆಗಿದ್ದಾರೆ. ಈ ಹಿಂದೆ ಶಾಸಕರಾಗಿದ್ದರು ಇದಕ್ಕೂ ಅವರಿಗೂ ಸಂಬಂಧವಿಲ್ಲ. ಹೆಚ್. ವಿಶ್ವನಾಥ್ ಅವರು ನಮಗಿಂತ ಹಿರಿಯರು. ಯತೀಂದ್ರ ಬಗ್ಗೆ ಹೇಳೋದಕ್ಕೆ ಏನು ಸಾಕ್ಷಿಯಿದೆ? ಅವರ ಹೇಳಿಕೆಯನ್ನ ಆ ದೇವರೇ ಮೆಚ್ಚಬೇಕು. ವಿಶ್ವನಾಥ್ ಅವರ ಬಳಿ ಸಾಕ್ಷಿ ಇದ್ದರೆ ತಂದು ಕೊಡಲಿ ಎಂದು ಸವಾಲು ಹಾಕಿದ್ದಾರೆ.

    ಇನ್ನೂ ಮುಡಾ ದಾಖಲಾತಿಗಳನ್ನ ಪೆನ್‌ಡ್ರೈವ್‌ನಲ್ಲಿ ಹಾಕಿ ಕೊಡುವಂತೆ ಕೇಳಿದ್ದ ವಿಶ್ವನಾಥ್ ಅವರ ಹೇಳಿಕೆಗೆ ಪ್ರತಿಕ್ರಿಯಿಸಿ, ನಮ್ಮಲ್ಲಿ ಪೆನ್‌ಡ್ರೈವ್‌ ಸಂಸ್ಕೃತಿ ಇಲ್ಲ. ಈ ಬಗ್ಗೆ ನನಗೆ ಗೊತ್ತಿಲ್ಲ, ವಿಶ್ವನಾಥ್ ಈಗ ಮಾತನಾಡುತ್ತಿದ್ದಾರೆ. ನನ್ನ ಬಳಿ ಸೈಟ್ ಕೊಡಿಸುವಂತೆ ವಿಶ್ವನಾಥ್ ಬಂದಿದ್ದರು. ಅದನ್ನ ನೆನಪು ಮಾಡಿಕೊಳ್ಳಲಿ. ಸುಮ್ಮನೆ ಆರೋಪಗಳನ್ನ ಮಾಡುವುದನ್ನ ನಿಲ್ಲಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ. ಇದನ್ನೂ ಓದಿ: ಮೋದಿ ಅಂದ್ರೆ ಪೂರ್ಣ ಹಿಂದೂ ಸಮಾಜ ಅಲ್ಲ, ಹಿಂದೂ ಅಂತ ಕರೆಸಿಕೊಳ್ಳೋರು ಹಿಂಸೆ, ದ್ವೇಷ ಹರಡುತ್ತಿದ್ದಾರೆ: ರಾಗಾ ವಾಗ್ದಾಳಿ

    ಬಿಜೆಪಿ ಸರ್ಕಾರ ಅವಧಿಯ ಆದೇಶ ರದ್ದು:
    ಮುಡಾ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. 7 ತಿಂಗಳ ಹಿಂದೆ ನಾನೇ ಆದೇಶ ಮಾಡಿದ್ದೇನೆ. ತುಂಡು ಭೂಮಿ ಹಂಚಿಕೆ ಮಾಡದಂತೆ ಆದೇಶ ಮಾಡಿದ್ದೇನೆ. ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದ ಆದೇಶಗಳನ್ನ ರದ್ದು ಮಾಡಲು ಸೂಚನೆ ನೀಡಿದ್ದೇನೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ. ಇದನ್ನೂ ಓದಿ: ಮೈಸೂರು ಮುಡಾದಲ್ಲಿ ಹಗರಣ ಆರೋಪ – ಆಯುಕ್ತ ದಿನೇಶ್ ಕುಮಾರ್‌ ತಲೆದಂಡ!

  • ಮೈಸೂರು ಮುಡಾದಲ್ಲಿ ಹಗರಣ ಆರೋಪ – ಆಯುಕ್ತ ದಿನೇಶ್ ಕುಮಾರ್‌ ತಲೆದಂಡ!

    ಮೈಸೂರು ಮುಡಾದಲ್ಲಿ ಹಗರಣ ಆರೋಪ – ಆಯುಕ್ತ ದಿನೇಶ್ ಕುಮಾರ್‌ ತಲೆದಂಡ!

    – ಐಎಎಸ್ ಅಧಿಕಾರಿಗಳ ಹೆಗಲಿಗೆ ತನಿಖೆ ಹೊಣೆ

    ಮೈಸೂರು: ಮುಡಾ (ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ) (MUDA) 50:50 ಸೈಟು ಹಂಚಿಕೆ ವಿಚಾರಕ್ಕೆ ಸಂಬಂಧಿಸಿದಂತೆ ಮುಡಾ ಆಯುಕ್ತ ದಿನೇಶ್ ಕುಮಾರ್ ಅವರ ತಲೆದಂಡವಾಗಿದೆ.

    ಮುಡಾದಲ್ಲಿ ಹಗರಣ ನಡೆದಿದೆ ಎಂಬ ಬಿಜೆಪಿ ನಾಯಕರ ಆರೋಪ ಕೇಳಿಬಂದ ಬೆನ್ನಲ್ಲೇ ಸೋಮವಾರ ಸಚಿವ ಬೈರತಿ ಸುರೇಶ್ (Byrathi Suresh) ಉನ್ನತ ಮಟ್ಟದ ಸಭೆ ನಡೆಸಿದ್ದಾರೆ. ಬಿಗಿ ಪೊಲೀಸ್‌ ಭದ್ರತೆಯಲ್ಲಿ ಸಭೆ ನಡೆಸಿದ್ದಾರೆ. ಬಳಿಕ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮುಡಾ ಆಯುಕ್ತರ (MUDA Commissioner) ವರ್ಗಾವಣೆಗೊಳಿಸಿ ಮೌಖಿಕ ಆದೇಶ ಮಾಡಿರುವುದಾಗಿ ತಿಳಿಸಿದ್ದಾರೆ. ಮುಡಾ ಆಯುಕ್ತ, ಕಾರ್ಯದರ್ಶಿ, ಎಇಇ ಕೂಡ ವರ್ಗಾವಣೆಣೆ ಮಾಡಲಾಗಿದೆ. ಇದು ಕ್ರಮ ಅಲ್ಲ, ನಿಷ್ಪಕ್ಷಪಾತ ತನಿಖೆ ಹಿನ್ನೆಲೆ ಅಧಿಕಾರಿಗಳ ವರ್ಗಾವಣೆ ಮಾಡಲಾಗಿದೆ ಎಂದು ಸಚಿವರು ತಿಳಿಸಿದ್ದಾರೆ.

    50:50 ನಿವೇಶನ ಹಂಚಿಕೆ ಸಂಬಂಧ ತನಿಖೆ ನಡೆಸಲು ಇಬ್ಬರು ಐಎಎಸ್‌ ಅಧಿಕಾರಿಗಳು (IAS Officer) ಹಾಗೂ ನಾಲ್ಕು ಹೆಚ್ಚುವರಿ ಸಿಬ್ಬಂದಿಯನ್ನ ನೇಮಿಸಲಾಗಿದೆ. ಐಎಎಸ್ ಅಧಿಕಾರಿ ವೆಂಕಟಾಚಲಪತಿ, ಕವಳಗಿ ಅವರನ್ನು ತನಿಖೆಗೆ ನೇಮಿಸಲಾಗಿದ್ದು, 4 ವಾರಗಳಲ್ಲಿ ವರದಿ ನೀಡುವಂತೆ ಸೂಚಿಸಲಾಗಿದೆ. ಜೊತೆಗೆ ಮುಂದಿನ 1 ತಿಂಗಳು ಯಾವುದೇ ಸೈಟು ಹಂಚಿಕೆ ಮಾಡದಂತೆ, ಮುಡಾದಲ್ಲಿ ಸಭೆ ನಡೆಸದಂತೆ ಆದೇಶಿಸಿದ್ದಾರೆ. ಜೊತೆಗೆ ಈ ಹಿಂದೆ ಹಂಚಿಕೆಯಾಗಿರುವ ಎಲ್ಲಾ ಸೈಟುಗಳನ್ನು ಕೂಡ ತಡೆಹಿಡಿಯಲಾಗುತ್ತದೆ ಎಂದು ಸಚಿವರು ತಿಳಿಸಿದ್ದಾರೆ.

    ಬಿಜೆಪಿ ಸರ್ಕಾರ ಅವಧಿಯ ಆದೇಶ ರದ್ದು:
    ಮುಡಾ ಸಭೆಯಲ್ಲಿ ಹಲವು ವಿಚಾರಗಳು ಚರ್ಚೆಯಾಗಿವೆ. 7 ತಿಂಗಳ ಹಿಂದೆ ನಾನೇ ಆದೇಶ ಮಾಡಿದ್ದೇನೆ. ತುಂಡು ಭೂಮಿ ಹಂಚಿಕೆ ಮಾಡದಂತೆ ಆದೇಶ ಮಾಡಿದ್ದೇನೆ. ಜೊತೆಗೆ ಬಿಜೆಪಿ ಸರ್ಕಾರ ಇದ್ದಾಗ ಮಾಡಿದ್ದ ಆದೇಶಗಳನ್ನ ರದ್ದು ಮಾಡಲು ಸೂಚನೆ ನೀಡಿದ್ದೇನೆ ಎಂದು ಸಚಿವ ಬೈರತಿ ಸುರೇಶ್ ಹೇಳಿದ್ದಾರೆ.

  • 100 ಕೋಟಿ ರೂ. ಮೌಲ್ಯದ ಒತ್ತುವರಿ ತೆರವು ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ!

    100 ಕೋಟಿ ರೂ. ಮೌಲ್ಯದ ಒತ್ತುವರಿ ತೆರವು ಮಾಡಿದ ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರ!

    ಮೈಸೂರು: ನಗರಾಭಿವೃದ್ಧಿ ಪ್ರಾಧಿಕಾರವು ಭರ್ಜರಿ ಕಾರ್ಯಾಚರಣೆ ನಡೆಸಿದ್ದು, ಈ ವೇಳೆ 100 ಕೋಟಿ ರೂ. ಮೌಲ್ಯದ 5.14 ಎಕರೆ ಒತ್ತುವರಿ ತೆರವು ಮಾಡಿದೆ.

    ಮೈಸೂರು ತಾಲೂಕು ಬಸವನಹಳ್ಳಿ ಗ್ರಾಮದಲ್ಲಿ ಸರ್ವೇ ನಂ.118ರಲ್ಲಿ ಒತ್ತುವರಿ ತೆರವು ಮಾಡಲಾಗಿದೆ. ಮೈಸೂರು ನಗರಾಭಿವೃದ್ಧಿ ಪ್ರಾಧಿಕಾರವೂ ಈ ಗ್ರಾಮದ ಮಹದೇವಯ್ಯ ಅವರಿಗೆ ಸೇರಿದ ಜಮೀನು ಸ್ವಾಧೀನ ಮಾಡಿಕೊಂಡು ಪರಿಹಾರ ನೀಡಿತ್ತು. ಆದರೆ ಭೂಮಿ ಮಾಲೀಕರು ಭೂಮಿ ನೀಡದೆ ಸಿವಿಲ್ ನ್ಯಾಯಾಲಯದ ಮೊರೆ ಹೋಗಿದ್ದರು. ಇದನ್ನೂ ಓದಿ:  ಮಹಿಳೆಯರಿಗೆ ವೀಡಿಯೋ ಕಾಲ್ ಮಾಡಿ ಅಸಭ್ಯ ವರ್ತನೆ – CPI ಅಮಾನತು

    ಈ ಪರಿಣಾಮ ಮೈಸೂರು ಸಿವಿಲ್ ನ್ಯಾಯಾಲಯ ನಗರಾಭಿವೃದ್ಧಿ ಪ್ರಾಧಿಕಾರದ ಪರವೇ ಆದೇಶ ನೀಡಿತ್ತು. ಹೀಗಾಗಿ ಈ ಜಾಗದಲ್ಲಿ ನಿರ್ಮಾಣವಾಗಿದ್ದ ಶೆಡ್ ತೆರವುಗೊಳಿಸಿ ಮೂಡಾ ನಾಮಫಲಕ ಹಾಕಲಾಯಿತು. ಪ್ರಾಧಿಕಾರದ ಆಯುಕ್ತ ಡಾ.ಡಿ.ಬಿ.ನಟೇಶ್ ಅವರ ನೇತೃತ್ವದಲ್ಲಿ ಪೊಲೀಸ್ ಬಿಗಿ ಬಂದೊಬಸ್ತ್ ನಲ್ಲಿ ತೆರವು ಕಾರ್ಯಾಚರಣೆ ನಡೆಸಲಾಯಿತು.