Tag: ಮೈಸೂರು ಕೇಸ್

  • ಮೈಸೂರು ಅತ್ಯಾಚಾರ ಪ್ರಕರಣ- ಸದನದಲ್ಲಿ ಮಹಿಳಾ ಶಾಸಕಿಯರು ಭಾವುಕ, ಕಣ್ಣೀರು ಹಾಕಿದ ಅಂಜಲಿ ನಿಂಬಾಳ್ಕರ್

    ಮೈಸೂರು ಅತ್ಯಾಚಾರ ಪ್ರಕರಣ- ಸದನದಲ್ಲಿ ಮಹಿಳಾ ಶಾಸಕಿಯರು ಭಾವುಕ, ಕಣ್ಣೀರು ಹಾಕಿದ ಅಂಜಲಿ ನಿಂಬಾಳ್ಕರ್

    ಬೆಂಗಳೂರು: ಮೈಸೂರು ಅತ್ಯಾಚಾರ ಪ್ರಕರಣದ ಕುರಿತು ಸದನದಲ್ಲಿ ಇಂದು ಭಾರೀ ಚರ್ಚೆ ನಡೆದಿದ್ದು, ಕಾಂಗ್ರೆಸ್‍ನ ಮಹಿಳಾ ಶಾಸಕಿಯರು ಭಾವುಕರಾಗಿ ಮಾತನಾಡಿದ್ದಾರೆ. ಅಲ್ಲದೆ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಕಣ್ಣೀರು ಹಾಕಿದ್ದಾರೆ.

    ಅತ್ಯಾಚಾರ ಪ್ರಕರಣದ ಬಗ್ಗೆ ಮಾತಾಡಲು ಅವಕಾಶ ಕೊಡುತ್ತಿಲ್ಲ ಎಂದು ಆರಂಭದಲ್ಲಿ ಸದನದ ಬಾವಿಗಳಿದು ಕಾಂಗ್ರೆಸ್‍ನ ಮಹಿಳಾ ಶಾಸಕಿಯರು ಪ್ರತಿಭಟನೆ ನಡೆಸಿದರು. ಅಂಜಲಿ ನಿಂಬಾಳ್ಕರ್ ಹಾಗೂ ಸೌಮ್ಯ ರೆಡ್ಡಿ ಬಾವಿಗಿಳಿದು ಧರಣಿ ಕುಳಿತರು. ಬಳಿಕ ಸ್ಪೀಕರ್ ವಿಶ್ವೇಶರ ಹೆಗಡೆ ಕಾಗೇರಿ ಅವರನ್ನು ಸಮಧಾನ ಪಡಿಸಿ ಕಳುಹಿಸಿದರು. ಸ್ಪೀಕರ್ ಮಾತಿನ ನಂತರ ಮಹಿಳಾ ಶಾಸಕಿಯರು ಧರಣಿ ವಾಪಸ್ ಪಡೆದರು. ಇದನ್ನೂ ಓದಿ: 116.16 ಎಕರೆಯನ್ನು ಕೇವಲ 50 ಕೋಟಿಗೆ ಕೊಟ್ಟರೆ ಹೇಗೆ – ಸರ್ಕಾರಕ್ಕೆ ಡಿಕೆಶಿ ಪ್ರಶ್ನೆ

    ಅತ್ಯಾಚಾರ ಸಂಬಂಧ ಸದನದಲ್ಲಿ ನಡೆಯುತ್ತಿರುವ ಚರ್ಚೆ ಕೇಳಿ, ನೊಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅತ್ತಿದ್ದಾರೆ. ಶಾಸಕ ರಾಜೂ ಗೌಡ ಅವರು ಶಾಸಕಿ ಬಳಿ ಹೋಗಿ ಸಮಾಧಾನ ಮಾಡಲು ಯತ್ನಿಸಿದರು. ಬಳಿಕ ಹೊರಗೆ ಬಂದು ಮೊಗಸಾಲೆಯಲ್ಲಿ ಕೂತು ಅಂಜಲಿ ನಿಂಬಾಳ್ಕರ್ ಅತ್ತಿದ್ದಾರೆ.

    ಕಾಂಗ್ರೆಸ್ ಆಡಳಿತಾವಧಿಯಲ್ಲಿ ಎಷ್ಟು ರೇಪ್ ಆಗಿದೆ ಎಂದು ಆಡಳಿತ ಪಕ್ಷದವರು ತಿರುಗೇಟು ನೀಡಿದ್ದರು. ಈ ಕುರಿತು ಮಾತನಾಡಿದ ಅಂಜಲಿ ನಿಂಬಾಳ್ಕರ್, ರೇಪ್‍ಗೆ ಆ ಕಾಲ, ಈ ಕಾಲ ಅಂತ ಇಲ್ಲ ಎಂದು ಕಾಂಗ್ರೆಸ್ ಮಹಿಳಾ ಸದಸ್ಯರು ಸಿಡಿದೆದ್ದರು. ಈ ರೀತಿ ರೇಪ್ ರೇಪ್ ಎಂದು ಹೇಳ್ಬೇಡಿ, ನಮ್ಮ ಮನಸ್ಸಿಗೆ ನೋವಾಗುತ್ತೆ ಎಂದು ಕಣ್ಣೀರು ಹಾಕಿದ್ದಾರೆ. ಇದನ್ನೂ ಓದಿ: ಪಂಚೆ ಕಳಚಿದೆ ಅಂತ ಸಿದ್ದರಾಮಯ್ಯನವರ ಕಿವಿಯಲ್ಲಿ ಹೇಳಿದ್ರು ಡಿಕೆಶಿ!

    ಇದೇ ವೇಳೆ ಚಿತ್ರದುರ್ಗದಲ್ಲಿ 13 ವರ್ಷದ ಬಾಲಕಿ ಮೇಲಿನ ಅತ್ಯಾಚಾರ ಪ್ರಕರಣವನ್ನು ಪ್ರಸ್ತಾಪಿಸಿ ಶಾಸಕಿ ರೂಪಾ ಶಶಿಧರ್ ಭಾವುಕ ಭಾಷಣ ಮಾಡಿದ್ದಾರೆ. ತಾಯಿ ತನ್ನ ಮಗಳನ್ನು ಮನೆಯಲ್ಲಿ ಬಿಟ್ಟು ಆಚೆ ಹೋಗಿದ್ದರು, ವಾಪಸ್ ಬಂದಾಗ ಘಟನೆ ಬಗ್ಗೆ ಗೊತ್ತಾಗಿದೆ. ಆ ತಾಯಿ ಹೃದಯಕ್ಕೆ ಎಂಥ ನೋವಾಗಿರಬಹುದು? ಒಬ್ಬ ತಾಯಿಯಾಗಿ ಆ ತಾಯಿಯ ನೋವು ನನಗೆ ಅರ್ಥ ಆಗುತ್ತೆ ಎಂದು ಹೇಳಿದರು.

    ಈ ಸದನದಲ್ಲಿ ರೇಪ್ ಅನ್ನೋ ಪದ ಬಳಕೆ ಮಾಡಬೇಡಿ ಎಂದು ಇದೇ ವೇಳೆ ಸದನಕ್ಕೆ ಶಾಸಕಿ ರೂಪಾ ಶಶಿಧರ್ ಮನವಿ ಮಾಡಿದರು. ಬೆಂಗಳೂರಿಗೆ ಅತ್ಯಾಚಾರ ಪ್ರಕರಣಗಳ ಸಂಖ್ಯೆಯಲ್ಲಿ ನಾಲ್ಕನೇ ಸ್ಥಾನ ಬಂದಿದೆ. ಬೆಂಗಳೂರಿನಲ್ಲಿ ವಾರ್ಷಿಕ 12 ಅತ್ಯಾಚಾರ ಪ್ರಕರಣಗಳು ನಡೆಯುತ್ತಿವೆ. 5 ಸಾವಿರ ಕೇಸ್ ಗಳಲ್ಲಿ ಇನ್ನೂ ಆರೋಪಿಗಳು ಪತ್ತೆಯಾಗಿಲ್ಲ ಎಂದು ಕಿಡಿಕಾರಿದರು.

    ನಮ್ಮ ದೇಶದಲ್ಲಿ ದೇವಿ ಪೂಜೆ ನಡೆಯುತ್ತೆ, ನಮಗೆ ಪೂಜೆ ಅಗತ್ಯ ಇಲ್ಲ. ನಮಗೆ ಗೌರವ ಬೇಕು, ಸುರಕ್ಷತೆ ಬೇಕು ಎಂದು ಶಾಸಕಿ ಸೌಮ್ಯ ರೆಡ್ಡಿ ಆಕ್ರೋಶ ವ್ಯಕ್ತಪಡಿಸಿದರು. ಇದೇ ವೇಳೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಮಾತನಾಡಿ, ಕೇಸ್ ಮುಚ್ಚಿ ಹಾಕ್ತೀವಿ ಅನ್ನೋದನ್ನು ನಾವು ಖಂಡಿಸುತ್ತೇವೆ ಎಂದರು. ಇದಕ್ಕೆ ಉತ್ತರಿಸಿದ ಮುಖ್ಯಮಂತ್ರಿ ಬಸರಾಜ್ ಬೊಮ್ಮಾಯಿ, ಮೈಸೂರು ಪ್ರಕರಣದಲ್ಲಿ ಅಗತ್ಯ ಕ್ರಮ ಕೈಗೊಂಡಿದ್ದೇವೆ. ಯಾವುದೇ ಲೋಪ ದೋಷ ಆಗಿಲ್ಲ ಹೇಳಿದರು. ಇದನ್ನೂ ಓದಿ: ಕೋರ್ಟ್ ಆದೇಶ ನೀಡಿದ್ರೂ ಕೆಲಸಕ್ಕೆ ನೇಮಿಸಿಲ್ಲ – ವಾಟರ್ ಮ್ಯಾನ್ ಆತ್ಮಹತ್ಯೆಗೆ ಯತ್ನ

  • ಮೈಸೂರು ಪ್ರಕರಣದ ಬಳಿಕ ಮಂಗಳೂರು ಪೊಲೀಸರು ಹೈ ಅಲರ್ಟ್- ಸುರಕ್ಷತೆಗೆ ಮಾಸ್ಟರ್ ಪ್ಲಾನ್

    ಮೈಸೂರು ಪ್ರಕರಣದ ಬಳಿಕ ಮಂಗಳೂರು ಪೊಲೀಸರು ಹೈ ಅಲರ್ಟ್- ಸುರಕ್ಷತೆಗೆ ಮಾಸ್ಟರ್ ಪ್ಲಾನ್

    ಮಂಗಳೂರು: ಸಾಂಸ್ಕೃತಿಕ ನಗರಿ ಮೈಸೂರಿನಲ್ಲಿ ನಡೆದ ಸಾಮೂಹಿಕ ಅತ್ಯಾಚಾರ ಘಟನೆ ಬೆಚ್ಚಿ ಬೀಳಿಸಿದೆ. ಈ ಘಟನೆ ಬಳಿಕ ಎಜುಕೇಶನ್ ಹಬ್ ಎಂದು ಕರೆಸಿಕೊಂಡಿರುವ ದಕ್ಷಿಣ ಕನ್ನದಲ್ಲಿ ಪೊಲೀಸರು ಇನ್ನಷ್ಟು ಅಲರ್ಟ್ ಆಗಿದ್ದಾರೆ. ಮಹಿಳೆಯರು, ವಿದ್ಯಾರ್ಥಿನಿಯರ ಸುರಕ್ಷೆತೆಗಾಗಿ ಅಧಿಕಾರಿ, ಸಿಬ್ಬಂದಿಗಳು ಹದ್ದಿನ ಕಣ್ಣಿಟ್ಟಿದ್ದಾರೆ.

    ಇಂದು ಮಂಗಳೂರು ನಗರ ಪೊಲೀಸ್ ಕಮೀಷನರೇಟ್ ವತಿಯಿಂದ ಮಹಿಳಾ ಸುರಕ್ಷೆತೆಗಾಗಿ ಒಂದು ದಿನ ಎಂಬ ಜಾಗೃತಿ ಕಾರ್ಯ ನಡೆಸಲಾಯಿತು. ಪೊಲೀಸ್ ಇಲಾಖೆಯಲ್ಲಿ ಲೋಕಾರ್ಪಣೆ ಮಾಡಿರುವ ಇ.ಆರ್.ಎಸ್.ಎಸ್ ಎಮರ್ಜೆನ್ಸಿ ವೆಹಿಕಲ್ ಹೆಚ್ಚು ಬಳಕೆ ಮಾಡುವ ಕುರಿತು ಜಾಗೃತಿ ಮೂಡಿಸಲಾಯಿತು. ಓಲಿಂಪಿಯನ್ ಎಂ.ಆರ್.ಪೂವಮ್ಮ ಅವರು ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಇದನ್ನೂ ಓದಿ: ಮೈಸೂರು ಕೇಸ್‍ಲ್ಲಿ ಪೊಲೀಸರ ಪಾಲಿಗೆ ಬೆಳಕಾಗಿದ್ದೇ ಬಸ್ ಟಿಕೆಟ್ ಕೊಟ್ಟ ಸುಳಿವು, ಆ ಮೊಬೈಲ್ ನಂಬರ್!

    ಇ.ಆರ್.ಎಸ್.ಎಸ್ ವೆಹಿಕಲ್‍ನ್ನು ಕಳೆದ ಎಂಟು ತಿಂಗಳ ಹಿಂದೆ ಲೋಕಾರ್ಪಣೆಗೊಳಿಸಲಾಗಿದೆ. ತುರ್ತು ಸಂದರ್ಭದಲ್ಲಿ 112 ನಂಬರ್‍ಗೆ ಕರೆ ಮಾಡಿದ ತಕ್ಷಣ ಬೆಂಗಳೂರಿನ ಕಂಟ್ರೋಲ್ ರೂಂಗೆ ಈ ಕರೆ ಹೋಗುತ್ತೆ. ಕ್ಷಣ ಮಾತ್ರದಲ್ಲಿ ಕರೆ ರಿಸೀವ್ ಆಗಿ ಕರೆ ಮಾಡಿದವರ ವಿವರ, ಸ್ಥಳ, ಆಗಿರುವ ತೊಂದರೆ ಮಾಹಿತಿ ಪಡೆದು ಸ್ಥಳಕ್ಕೆ ಹತ್ತಿರವಿರುವ ಇ.ಆರ್.ಎಸ್.ಎಸ್ ವೆಹಿಕಲ್, ಪೊಲೀಸ್ ಅಧಿಕಾರಿ, ಸಿಬ್ಬಂದಿಯನ್ನು ಕಳುಹಿಸಿಕೊಡಲಾಗುತ್ತೆ. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣದ ಆರೋಪಿಗಳಲ್ಲಿ ಓರ್ವ ಮಾವನನ್ನೇ ಕೊಲೆ ಮಾಡಿದವನು!

    ಮಂಗಳೂರು ಕಮೀಷನರೇಟ್ ವ್ಯಾಪ್ತಿಯಲ್ಲಿ ಕಳೆದ ಎಂಟು ತಿಂಗಳಲ್ಲಿ ಈ ರೀತಿ 4000ಕ್ಕೂ ಹೆಚ್ಚು ಕರೆ ಬಂದಿದ್ದು, ತುರ್ತು ಸಂದರ್ಭದಲ್ಲಿ ಪೊಲೀಸ್ ಇಲಾಖೆ ಸ್ಪಂದಿಸಿದೆ. ಇಂದು ಸ್ವತಃ ನಗರ ಪೊಲೀಸ್ ಕಮೀಷನರ್ ಎನ್.ಶಶಿಕುಮಾರ್, ಡಿಸಿಪಿ ಸೇರಿದಂತೆ ಎಲ್ಲ ಅಧಿಕಾರಿ ಸಿಬ್ಬಂದಿ ಈ ಕರೆ ಬಂದ ಸ್ಥಳಕ್ಕೆ ಭೇಟಿ ನೀಡಿ ಸ್ಪಂದಿಸಿದರು. ಪ್ರಾಯೋಗಿಕವಾಗಿ ಪೊಲೀಸ್ ಆಯುಕ್ತರೇ ಕರೆ ಮಾಡಿ ಚೆಕ್ ಮಾಡಿದರು.

    ಇಂದು ಈ ಇ.ಆರ್.ಎಸ್.ಎಸ್ ವೆಹಿಕಲ್‍ನಲ್ಲಿ 100ಕ್ಕೂ ಹೆಚ್ಚು ಅಧಿಕಾರಿ, ಸಿಬ್ಬಂದಿ ಟೀಮ್ ವರ್ಕ್ ಮಾಡಿದರು. 20ಕ್ಕೂ ಹೆಚ್ಚು ಎಮರ್ಜೆನ್ಸಿ ಪೊಲೀಸ್ ವೆಹಿಕಲ್ ಬಳಕೆ ಮಾಡಲಾಯಿತು. ತುರ್ತು ಸಂದರ್ಭದಲ್ಲಿ ಗರಿಷ್ಠ 15 ನಿಮಿಷದೊಳಗೆ, ನಗರ ವ್ಯಾಪ್ತಿಯಲ್ಲಿ ಕನಿಷ್ಟ 5 ನಿಮಿಷದೊಳಗೆ ಸ್ಥಳಕ್ಕೆ ಬಂದು ರೆಸ್ಪಾನ್ಸ್ ಮಾಡುವ ಈ ಸೇವೆಯನ್ನು ಎಲ್ಲರೂ ಅಗತ್ಯ ಸಂದರ್ಭದಲ್ಲಿ ಬಳಸಬಹುದಾಗಿದೆ.

  • ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

    ಸಚಿವೆಯಾದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಹಾಗಾದ್ರೆ?: ಹೆಚ್.ಎಂ.ರೇವಣ್ಣ

    ಬೆಂಗಳೂರು: ಆ ಹೆಣ್ಣು ಮಗಳು ಶೋಭಾ ಕರಂದ್ಲಾಜೆ ನಾನು ಕೇಂದ್ರ ಸಚಿವೆ ಮೈಸೂರು ಅತ್ಯಾಚಾರ ಪ್ರಕರಣದ ಬಗ್ಗೆ ಮಾತನಾಡಲ್ಲ ಅಂತಾರೆ. ಸಚಿವೆ ಆದರೂ ಹೆಣ್ಣು ಹೆಣ್ಣೇ ಅಲ್ವಾ? ಅವರ ಮನೆಯಲ್ಲೇ ಆದರೆ ನಮ್ಮ ಮನೆಯಲ್ಲಿ ಆದರೆ ಹೀಗೆ ಮಾತಾಡೋದ? ಎಂದು ಮಾಜಿ ಸಚಿವ ಹೆಚ್.ಎಂ. ರೇವಣ್ಣ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ವಿರುದ್ಧ ಹರಿಹಾಯ್ದಿದ್ದಾರೆ.  ಇದನ್ನೂ ಓದಿ: ಬಿಯರ್ ಬಾಟ್ಲಿ, ಬಸ್ ಟಿಕೆಟ್ ಆಧರಿಸಿ ಅತ್ಯಾಚಾರಿಗಳ ಬಂಧನ

    Union minister Shobha karandlaje

    ಮೈಸೂರು ಅತ್ಯಾಚಾರ ಪ್ರಕರಣದ ಕಾಂಗ್ರೆಸ್ ಸತ್ಯ ಶೋಧನಾ ಸಮಿತಿ ಸದಸ್ಯರು ಆಗಿರುವ ರೇವಣ್ಣ ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ನಿವಾಸದ ಬಳಿ ಮಾತನಾಡಿದರು. ವೈದ್ಯರು ಅತ್ಯಾಚಾರ ನಡೆದಿದೆ ಅಂತಾರೆ. ಪೊಲೀಸರು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದಾರೆ. ಘಟನೆ 7-30 ರಿಂದ 9 ಗಂಟೆ ನಡುವೆ ನಡೆದಿದೆ. 10 ಗಂಟೆಗೆ ಆಸ್ಪತ್ರೆಗೆ ಹೋಗಿದ್ದಾರೆ. 10-45 ಕ್ಕೆ ಪೊಲೀಸರ ಗಮನಕ್ಕೆ ಬಂದರೂ ಕೇಸ್ ದಾಖಲಿಸಲು ತಡ ಮಾಡಿದ್ದಾರೆ. ಪೊಲೀಸರ ಮೇಲೆ ಸರ್ಕಾರ ಒತ್ತಡ ತಂದಿದೆ. ಮೈಸೂರಿನಂತ ನಗರದಲ್ಲಿ ಅತ್ಯಾಚಾರ ಆಗಿದೆ. ನಮ್ಮ ಸರ್ಕಾರದ ಅವಧಿಯಲ್ಲಿ ಆಯ್ತು ಅಂತ ಕೆಟ್ಟ ಹೆಸರು ಬರಬಾರದು ಅಂತ ಸರ್ಕಾರ ಪೊಲೀಸರ ಮೇಲೆ ಒತ್ತಡ ತಂದು ಕೇಸು ದಾಖಲಿಸಲು ತಡ ಮಾಡಿದೆ ಎಂದು ಆರೋಪಿಸಿದರು. ಇದನ್ನೂ ಓದಿ: ಗ್ಯಾಂಗ್‍ರೇಪ್ ಪ್ರಕರಣ- ಆರೋಪಿಗಳನ್ನು ಬಂಧಿಸಿದ ಪೊಲೀಸರ ತಂಡಕ್ಕೆ 5 ಲಕ್ಷ ರೂ. ಬಹುಮಾನ

    ಅತ್ಯಾಚಾರ ನಡೆದಿದ್ದು, ರಕ್ತಸ್ರಾವ ಆಗಿದೆ. ಮೈಮೇಲೆ ಸಾಕಷ್ಟು ಗಾಯ ಆಗಿದೆ. ಮಹಿಳಾ ವೈದ್ಯತೇ ಬಂದು ಅತ್ಯಾಚಾರ ಆಗಿದೆ ಅಂತ ಹೇಳಿದ್ರೂ ಪೊಲೀಸರ ಮೇಲೆ ಒತ್ತಡ ತಂದು ದರೋಡೆ ಪ್ರಕರಣ ದಾಖಲಿಸಲು ಮುಂದಾಗಿದ್ದರು. ಕಾಂಗ್ರೆಸ್ ಸತ್ಯಶೋಧನಾ ಸಮಿತಿ ಮೈಸೂರು ಭೇಟಿ ಸಂದರ್ಭದಲ್ಲಿ ಇದು ನಮಗೆ ಗೊತ್ತಾಗಿದೆ. ಇಡೀ ಪ್ರಕರಣದಲ್ಲಿ ಪೊಲೀಸರ ವೈಫಲ್ಯ ಇದೆ. ಗೃಹ ಸಚಿವರು ರಾಜೀನಾಮೆ ಕೊಡಬೇಕು ಎಂದು ಹೆಚ್.ಎಂ.ರೇವಣ್ಣ ಆಗ್ರಹಿಸಿದರು. ಇದನ್ನೂ ಓದಿ: ಮಹಿಳೆಯರ ವಿರುದ್ಧದ ಅಪರಾಧಗಳತ್ತ ಕಣ್ಣು ಮುಚ್ಚಬೇಡಿ, ಮಾತನಾಡಿ: ರಮ್ಯಾ