Tag: ಮೈಸೂರ

  • MUDA Scam | ಹೊಸ ಟ್ವಿಸ್ಟ್‌ – ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ವೈಟ್​ನರ್ ಬಳಸಿ ತಿರುಚಿದ್ದಾರಾ?

    MUDA Scam | ಹೊಸ ಟ್ವಿಸ್ಟ್‌ – ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ವೈಟ್​ನರ್ ಬಳಸಿ ತಿರುಚಿದ್ದಾರಾ?

    ಮೈಸೂರು: ಮುಡಾ ಹಗರಣಕ್ಕೆ (MUDA Scam) ಸಂಬಂಧಿಸಿದಂತೆ ಸಿಎಂ ವಿರುದ್ಧ ರಾಜ್ಯಪಾಲರು ಪ್ರಾಸಿಕ್ಯೂಷನ್‌ಗೆ ಅನುಮತಿ ನೀಡಿದ ಬೆನ್ನಲ್ಲೇ ಸಿದ್ದರಾಮಯ್ಯ (Siddaramaiah) ಪತ್ನಿ ಪಾರ್ವತಿ ಬರೆದ ಪತ್ರವನ್ನು ಅಧಿಕಾರಿಗಳು ತಿರುಚಿದ್ದಾರಾ ಎಂಬ ಗಂಭೀರ ಪ್ರಶ್ನೆ ಈಗ ಎದ್ದಿದೆ.

    ಹೌದು. ಸಿಎಂ ಪತ್ನಿ ಬರೆದ ಬರೆದ ಪತ್ರ ಈಗ ಮಾಧ್ಯಮಗಳಿಗೆ ಲಭ್ಯವಾಗಿದೆ. ಈ ಪತ್ರದಿಂದಾಗಿ ತಮ್ಮ ಭೂಮಿಗೆ 50:50 ಅನುಪಾತದಲ್ಲಿ ಪರ್ಯಾಯ ನಿವೇಶನ ಕೊಡುವಂತೆ ಸಿಎಂ ಪತ್ನಿ ಬರೆದ ಪತ್ರವನ್ನೇ ಅಧಿಕಾರಿಗಳು ತಿರುಚಿದ್ದಾರಾ ಎಂಬ ಅನುಮಾನ ಎದ್ದಿದೆ.

    ಅನುಮಾನ ಯಾಕೆ?
    ನಾವು ವಿಜಯನಗರ ಬಡಾವಣೆಯಲ್ಲೇ ಸೈಟ್‌ ನೀಡಬೇಕೆಂದು ಕೇಳಿಲ್ಲ. ಮುಡಾದಿಂದಲೇ 14 ಸೈಟ್‌ ಹಂಚಿಕೆಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದರು. ಆದರೆ ಪಾರ್ವತಿ ಬರೆದ ಪತ್ರದಲ್ಲಿ ವಿಜಯನಗರದ 2 ಮತ್ತು ಮೂರನೇ ಹಂತದಲ್ಲೇ ನಿವೇಶನ ಕೊಡುವಂತೆ ಕೇಳಿದ್ದಾರಾ ಎಂಬ ಅನುಮಾನ ಎದ್ದಿದೆ. ಲಭ್ಯವಾಗಿರುವ ಪತ್ರದಲ್ಲಿ ವೈಟ್​ನರ್ ಹಾಕಿ ಅಳಿಸಿದ್ದರಿಂದ ಈ ಪ್ರಶ್ನೆ ಮೂಡಿದೆ.

    ಕೆಸರೆ ಗ್ರಾಮದ ಜಮೀನನ್ನು ದೇವನೂರು ಮೂರನೇ ಹಂತದ ಬಡಾವಣೆ ನಿರ್ಮಾಣಕ್ಕಾಗಿ ಮುಡಾ ಸ್ವಾಧಿನ ಪಡಿಸಿಕೊಂಡಿತ್ತು. ಈ ಜಮೀನನ್ನು ಸಿಎಂ ಪತ್ನಿಯ ಸಹೋದರ 2004 ರಲ್ಲಿ ಖರೀದಿ ಮಾಡುತ್ತಾರೆ. ಮುಡಾ ಸ್ವಾಧೀನ ಪಡಿಸಿಕೊಂಡ ನಿವೇಶನ ಹಂಚಿದ ಜಾಗವನ್ನು ಸಿಎಂ ಸಹೋದರ ಖರೀದಿ ಮಾಡಿದ್ದು ಹೇಗೆ ಎನ್ನುವುದೇ ದೊಡ್ಡ ಪ್ರಶ್ನೆ ಎದ್ದಿದೆ. ಸಿಎಂ ಪತ್ನಿ ಪ್ರಾಧಿಕಾರಕ್ಕೆ ಬರೆದ ಪತ್ರದಿಂದ ಈಗ ಈ ಎಲ್ಲಾ ಅನುಮಾನಗಳು ಎದ್ದಿದೆ ಮತ್ತು ಪ್ರಕರಣಕ್ಕೆ ಹೊಸ ತಿರುವು ಸಿಕ್ಕಿದೆ.

  • ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ, ಅವರು ಬೇಗ ಹೊರಗೆ ಬರಲಿ: ಎಚ್. ವಿಶ್ವನಾಥ್

    ಮೈಸೂರು: ಮಾಜಿ ಸಿಎಂ ಸಿದ್ದರಾಮಯ್ಯ ಎಲ್ಲಿದ್ದಾರೋ ಗೊತ್ತಾಗುತ್ತಿಲ್ಲ. ಮೈಸೂರಲ್ಲೂ ಕಾಣುತ್ತಿಲ್ಲ, ಬಾದಾಮಿ ಕ್ಷೇತ್ರದಲ್ಲೂ ಕಾಣುತ್ತಿಲ್ಲ. ಅವರ ಬೇಗ ಹೊರಗೆ ಬಂದು ಸರ್ಕಾರಕ್ಕೆ ಮಾರ್ಗದರ್ಶನ ಮಾಡಬೇಕು ಎಂದು ಅನರ್ಹ ಶಾಸಕ ಎಚ್. ವಿಶ್ವನಾಥ್ ಹೇಳಿದ್ದಾರೆ.

    ಇಂದು ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಮಾಜಿ ಪ್ರಧಾನಿ ಹೆಚ್.ಡಿ. ದೇವೇಗೌಡರು ಸಿಎಂ ಯಡಿಯೂರಪ್ಪಗೆ ಬರೆದ ಪತ್ರದಲ್ಲಿ ಒಳ್ಳೆಯ ಸಲಹೆ ಕೊಟ್ಟಿದ್ದಾರೆ. ಒಬ್ಬ ಮತ್ಸದ್ದಿಯಾಗಿ ಅವರು ಕೊಟ್ಟ ಸಲಹೆಗಳು ಬಹಳ ಉತ್ತಮವಾಗಿವೆ ಎಂದು ಹೇಳಿದರು.

    ಇದೇ ವೇಳೆ ರಾಜ್ಯದಲ್ಲಿ ದೂರವಾಣಿ ಕದ್ದಾಲಿಕೆ ದೊಡ್ಡ ಮಟ್ಟದಲ್ಲಿ ನಡೆದಿದೆ. ಸಿದ್ದರಾಮಯ್ಯ ಅವರ ಪಿಎ ವೆಂಕಟೇಶ್ ಎಂಬವರ ಫೋನ್ ಕದ್ದಾಲಿಕೆ ಮಾಡಲಾಗಿದೆ. ರೆಬೆಲ್ ಶಾಸಕರ ದೂರವಾಣಿ ಕದ್ದಾಲಿಕೆ ಮಾಡಲಾಗಿದೆ. ಹೀಗೆ ಕದ್ದಾಲಿಕೆ ಮಾಡಿ ರೆಬೆಲ್ ಶಾಸಕರನ್ನು ಸಿಎಂ (ಹೆಚ್‍ಡಿಕೆ) ಕಚೇರಿಯಿಂದ ಬ್ಲಾಕ್ ಮೇಲ್ ಮಾಡಲಾಯಿತು. ಜೆಡಿಎಸ್ ರಾಜ್ಯಾಧ್ಯಕ್ಷನಾಗಿದ್ದವನ ದೂರವಾಣಿಯನ್ನು ಜೆಡಿಎಸ್ ಮುಖ್ಯಮಂತ್ರಿಯೇ ಕದ್ದಾಲಿಕೆ ಮಾಡಿದ್ದಾರೆ. ನಮ್ಮ ಮೇಲೆ ನಿಮಗೆ ವಿಶ್ವಾಸ ಇರಲಿಲ್ಲವೇ ಎಂದು ವಿಶ್ವನಾಥ್ ಪ್ರಶ್ನೆ ಮಾಡಿದರು.

    ವಿಶ್ವನಾಥ್ ಮಾತನಾಡಿರುವುದು ಸಿಕ್ಕಿದೆ ಚೀ ಚೀ ಕೇಳಿಸಿಕೊಳ್ಳಲು ಆಗಲ್ಲ ಎಂದು ಕುಮಾರಸ್ವಾಮಿ ಸದನದಲ್ಲಿ ಹೇಳಿದ್ದರು. ನಾನು ಮೊಬೈಲ್‍ನಲ್ಲಿ ಸಾವಿರ ಮಾತನಾಡುತ್ತೇನೆ. ಹೀಗೆ ಮಾತಾಡಬೇಕು ಎಂದು ಹೇಳೋಕೆ ನೀವು ಯಾರು? ಬೆಂಗಳೂರು ಪೊಲೀಸ್ ಆಯುಕ್ತರ ದೂರವಾಣಿಯೆ ಕದ್ದಾಲಿಕೆ ಮಾಡಲಾಗಿದೆ. ರಾಜ್ಯದ ಸಿಎಂ ಆಗಿ ಹೆಚ್‍ಡಿಕೆ ಎಲ್ಲಾ ಕಾನೂನು ಉಲ್ಲಂಘನೆ ಮಾಡಿದರು. ಹಳ್ಳಿ ಕಡೆ ಮನೆಯವರಿಗೆ ಮನೆಯವರೇ ಮದ್ದು ಹಾಕುತ್ತಾರೆ ಎನ್ನುವ ಮಾತಿದೆ ಇದು ಅದೇ ಕಥೆ ಎಂದು ವ್ಯಂಗ್ಯವಾಡಿದರು.

    ಜಿಟಿ ದೇವೇಗೌಡರ ಜೊತೆ ಸಿಎಂ ಭೇಟಿ ವಿಚಾರವಾಗಿ ಮಾತನಾಡಿದ ವಿಶ್ವನಾಥ್, ಸಿಎಂ ಭೇಟಿ ಸಹಜ, ಇಬ್ಬರು ರಾಜಕಾರಣಿಗಳು ಭೇಟಿಯಾದ ಮೇಲೆ ರಾಜಕಾರಣ ಮಾತನಾಡದೆ ಇರೋಕೆ ಆಗುತ್ತಾ? ಜಿಟಿ ದೇವೇಗೌಡರಿಗೆ ಬಿಜೆಪಿ ಹಳೆಯ ಪಾರ್ಟಿ, ಅವರೇನೂ ಬಿಜೆಪಿಗೆ ಹೊಸಬರಲ್ಲ. ನೆರೆ ಪ್ರವಾಹದ ಹಿನ್ನೆಲೆಯಲ್ಲಿ ಸರಳ ದಸರಾ ಮಾಡಬಾರದು, ದಸರಾ ಅದ್ಧೂರಿಯಾಗೆ ಮಾಡಬೇಕು. ದಸರಾದಲ್ಲಿ ಸರಳತೆ ಬೇಡ ಎಲ್ಲಾ ಕಷ್ಟ ನಿವಾರಿಸು ಅಂತಾನೇ ನಾಡಹಬ್ಬ ಮಾಡುವುದು ಇದರಲ್ಲಿ ಸರಳತೆ ಬೇಡ ಎಂದು ಹೇಳಿದರು.

    ಶಾಸಕರ ಅನರ್ಹತೆ ಪ್ರಕರಣದಲ್ಲಿ ನ್ಯಾಯಾಲಯದ ನಿಲುವಿಗೆ ಎಚ್.ವಿಶ್ವನಾಥ್ ಪ್ರತಿಕ್ರಿಯಿಸಿ, ಇದನ್ನು ತ್ವರಿತಗತಿಯಲ್ಲಿ ವಿಚಾರಣೆ ಸಾಧ್ಯವಿಲ್ಲ. ನಮಗೆ ಅನರ್ಹಗೊಳಿಸವಾಗ ನಿಯಮಗಳನ್ನು ಪಾಲಿಸಿಲ್ಲ. ನಮಗೆ ನ್ಯಾಯ ಸಿಕ್ಕಿಲ್ಲ. ಈ ವಿಚಾರವಾಗಿ ನಾವು ನ್ಯಾಯಾಲಯದ ಮೊರೆ ಹೋಗಿದ್ದೇವೆ. ನಾವು ಎಲ್ಲರೂ ಧೈರ್ಯವಾಗಿದ್ದೇವೆ. ನಾವೆಲ್ಲರೂ ಧೈರ್ಯವಂತರೇ ಇರುವುದು ಎಂದು ಹೇಳಿದರು.

  • ವಿಶ್ವಾಸಮತ ಯಾಚನೆಗೆ ವಾಜಪೇಯಿ 10 ದಿನ ತೆಗ್ದುಕೊಂಡಿದ್ದರು- ರೇವಣ್ಣ

    ವಿಶ್ವಾಸಮತ ಯಾಚನೆಗೆ ವಾಜಪೇಯಿ 10 ದಿನ ತೆಗ್ದುಕೊಂಡಿದ್ದರು- ರೇವಣ್ಣ

    ಮೈಸೂರು: ಮೂರನೇ ಆಷಾಢ ಶುಕ್ರವಾರ ಹಿನ್ನೆಲೆಯಲ್ಲಿ ನಾಡ ಅಧಿದೇವತೆ ಚಾಮುಂಡೇಶ್ವರಿ ದೇವಿಯ ಮೊರೆ ಹೋದ ಸಚಿವ ಹೆಚ್.ಡಿ ರೇವಣ್ಣ ಸರ್ಕಾರ ಉಳಿಸಲು ಸಿಎಂ ಹೆಸರಿನಲ್ಲಿ ವಿಶೇಷ ಪೂಜೆ ಮಾಡಿಸಿದ್ದಾರೆ.

    ದೇವಿಯ ದರ್ಶನದ ಬಳಿಕ ಮಾತನಾಡಿದ ರೇವಣ್ಣ, ನೋಡ್ರಿ.. ಇದೇ ಬಿಜೆಪಿಯ ಈ ಹಿಂದಿನ ಪ್ರಧಾನಿ ವಾಜಪೇಯಿ ಅವರು ವಿಶ್ವಾಸ ಮತ ತೋರಿಸಲು ಹತ್ತು ದಿನ ಸಮಯ ತೆಗೆದು ಕೊಂಡಿದ್ದರು. ಹೀಗಾಗಿ ಈ ಎಲ್ಲಾ ವಿಚಾರಗಳ ಬಗ್ಗೆ ಸ್ಪೀಕರ್ ಅವರು ಅಂತಿಮ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ಹೇಳಿದರು.

    ವಿಶ್ವಾಸ ಮತಕ್ಕಾಗಿಯೇ ಮುಖ್ಯಮಂತ್ರಿ ಅವರು ಜುಲೈ 12ರಂದು ಕೇಳಿದರು. ಅಲ್ಲದೆ 12ರಂದು ಮೀಟಿಂಗ್ ಕೂಡ ಕರೆದಿದ್ದು, ಬಿಜೆಪಿಯವರು ಬಂದಿಲ್ಲ. ಜುಲೈ 18ರಂದು ಮತ್ತೆ ವಿಶ್ವಾಸಮತಕ್ಕೆ ಬಂದೆವು. ಆಗ ಸುಪ್ರೀಂಕೋರ್ಟ್ ಕೆಲವು ಡೈರೆಕ್ಷನ್ ನೀಡಿತ್ತು ಎಂದರು.

    ಇಲ್ಲಿ ಯಾರು ಕಾಲ ಹರಣ ಮಾಡುತ್ತಿದ್ದಾರೆ ಎಂದು ಜನ ನೋಡುತ್ತಿದ್ದಾರೆ. ಈ ವಿಚಾರವಾಗಿ ಸುಪ್ರೀಂಕೋರ್ಟ್ ನಿರ್ದೇಶನದ ಮೇರೆಗೆ ಸ್ಪೀಕರ್ ತೀರ್ಮಾನ ತೆಗೆದುಕೊಳ್ಳುತ್ತಾರೆ ಎಂದು ತಿಳಿಸಿದರು.