ಬೆಂಗಳೂರು: ಮಂಡ್ಯದಲ್ಲಿ ಹೊಸ ಮೈಶುಗರ್ ಕಾರ್ಖಾನೆ ನಿರ್ಮಾಣ ಮಾಡಲು ಹೊರಟಿರುವುದಕ್ಕೆ ಸಂಸದೆ ಸುಮಲತಾ ಅಂಬರೀಶ್ (Sumalatha Ambareesh) ತೀವ್ರ ವಿರೋಧ ವ್ಯಕ್ತಪಡಿಸಿದ್ದಾರೆ.
ಈ ಸಂಬಂಧ ತಮ್ಮ ಸಾಮಾಜಿಕ ಜಾಲತಾಣದ ಖಾತೆಯಲ್ಲಿ ಬರೆದುಕೊಂಡಿರುವ ಸಂಸದೆ, ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ (My Sugar Factory) ಮತ್ತಷ್ಟು ಬಲಪಡಿಸಲಿ ಎಂದು ಆಗ್ರಹಿಸಿದ್ದಾರೆ.
ಪೋಸ್ಟ್‌ನಲ್ಲೇನಿದೆ..?: ಮಂಡ್ಯದ ಅಸ್ಮಿತೆ, ರೈತರ ಒಡನಾಡಿಯಾಗಿರುವ ಮೈ ಶುಗರ್ ಫ್ಯಾಕ್ಟರಿಗೆ ಮರುಜೀವ ಕೊಡುವುದಕ್ಕಾಗಿ ನಾನು ಮಾಡಿದ ಹೋರಾಟ ತಮಗೆಲ್ಲ ಗೊತ್ತಿದೆ. ಆ ಫ್ಯಾಕ್ಟರಿಗೆ ಮತ್ತಷ್ಟು ಶಕ್ತಿ ತುಂಬುವ ಬದಲು, ಹೊಸ ಕಾರ್ಖಾನೆ ಹಾಗೂ ಅದೇ ಆವರಣದಲ್ಲಿ ಐಟಿ ಹಬ್ ಮಾಡಲು ಕರ್ನಾಟಕ ಸರಕಾರ ಹೊರಟಿರುವುದಕ್ಕೆ ನನ್ನ ವಿರೋಧವಿದೆ.
ಅಗತ್ಯ ಬಿದ್ದರೆ ಮೈ ಶುಗರ್ ಫ್ಯಾಕ್ಟರಿಯ ಆಸ್ತಿಯನ್ನು ಮಾರಾಟಕ್ಕೆ ಇಡುತ್ತೇವೆ ಎನ್ನುವ ಸರಕಾರದ ನಿಲುವಿಗೆ ನನ್ನ ತೀವ್ರ ವಿರೋಧವಿದೆ. ಇದನ್ನು ಯಾವುದೇ ಕಾರಣಕ್ಕೂ ಒಪ್ಪುವುದಕ್ಕೆ ಸಾಧ್ಯವಿಲ್ಲ. ಜೊತೆಗೆ ಐಟಿ ಹಬ್ ಅನ್ನು ಬೇರೆ ಯಾವುದಾದರೂ ಸ್ಥಳದಲ್ಲಿ ಮಾಡಿ, ಮೈ ಶುಗರ್ ಆವರಣದಲ್ಲಿ ಮಾಡುವುದಕ್ಕೆ ನಾನಂತೂ ಬಿಡುವುದಿಲ್ಲ. ಇದನ್ನೂ ಓದಿ: ಶಿವರಾತ್ರಿ ಮೆರವಣಿಗೆ ವೇಳೆ ವಿದ್ಯುತ್ ಶಾಕ್ – 14 ಮಕ್ಕಳು ಆಸ್ಪತ್ರೆಗೆ ದಾಖಲು
ಈವರೆಗೂ ಮೈ ಶುಗರ್ ಫ್ಯಾಕ್ಟರಿಗೆ ಬಂದಿರುವ ಹಣ ಏನಾಯಿತು ಎನ್ನುವುದಕ್ಕೆ ಉತ್ತರವೇ ಇಲ್ಲ. ಆದರೂ, ಹೊಸ ಕಾರ್ಖಾನೆ ಪ್ರಾರಂಭ ಮಾಡುತ್ತಿರುವುದು ಹಲವು ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಹೊಸ ಸಕ್ಕರೆ ಕಾರ್ಖಾನೆ ಬದಲು, ಮೈ ಶುಗರ್ ಫ್ಯಾಕ್ಟರಿಯನ್ನೇ ಮತ್ತಷ್ಟು ಬಲಪಡಿಸಲಿ ಎಂದು ಸಂಸದೆ ಆಗ್ರಹಿಸಿದ್ದಾರೆ.
ಮಂಡ್ಯ: ಜಿಲ್ಲೆಯ ಜನರ ಜೀವನಾಡಿಯಂತಿದ್ದ ಮೈಶುಗರ್ ಸಕ್ಕರೆ ಕಾರ್ಖಾನೆ ಅವಧಿಗೂ ಮುನ್ನವೇ ಸ್ಥಗಿತವಾಗಿದೆ. ಚುನಾವಣೆ ಹಿನ್ನೆಲೆಯಲ್ಲಿ ತರಾತುರಿಯಲ್ಲಿ ಕಾರ್ಖಾನೆ ಶುರು ಮಾಡಿದ್ದ ಬಿಜೆಪಿ ಸರ್ಕಾರದ ನಡೆ ಬಟಾಬಯಲಾಗಿದೆ. ಮಂಡ್ಯ (Mandya) ಜಿಲ್ಲೆಯ ರೈತರಿಗೆ ಸಿಹಿ ಕೊಡುತ್ತೇವೆ ಎಂದ ಬೊಮ್ಮಾಯಿ (Basavaraj Bommai) ಸರ್ಕಾರ ಕಡೆಗೆ ಕೊಟ್ಟಿದ್ದೇನು ಎಂದು ಪ್ರಶ್ನಿಸುವಂತಾಗಿದೆ.
ರಾಜ್ಯದ ಏಕೈಕ ಸರ್ಕಾರಿ ಸ್ವಾಮ್ಯದ ಸಕ್ಕರೆ ಕಾರ್ಖಾನೆ ಮಂಡ್ಯ ಜಿಲ್ಲೆಯ ರೈತರ ಜೀವನಾಡಿಯಂತಿದ್ದ ಮೈಶುಗರ್ (Mysugr) ಸಕ್ಕರೆ ಕಾರ್ಖಾನೆ ಪುನಾರಂಭಕ್ಕೆ ಇಲ್ಲಿನ ರೈತರು ಸಾಕಷ್ಟು ಹೋರಾಟ ಮಾಡಿದ್ದರು. ಇತ್ತೀಚೆಗೆ ಜಿಲ್ಲೆಯಲ್ಲಿ ಹೋರಾಟ ತೀವ್ರಗೊಂಡ ಹಿನ್ನೆಲೆಯಲ್ಲಿ ರಾಜ್ಯ ಬಿಜೆಪಿ (BJP) ಸರ್ಕಾರ ತರಾತುರಿಯಲ್ಲಿ ಕಾರ್ಖಾನೆ ಪುನಾರಂಭ ಮಾಡಿತ್ತು. ಯಾವುದೇ ಪೂರ್ವ ಸಿದ್ಧತೆ ಇಲ್ಲದೇ ಕಾರ್ಖಾನೆ ಆರಂಭಿಸಿದ ಪರಿಣಾಮ ಇಲ್ಲಿವರೆಗೂ ನಷ್ಟದಲ್ಲೇ ಕಾರ್ಖಾನೆ ನಡೆಯುತ್ತ ಬಂತು.
ಸರ್ಕಾರ ಕೊಟ್ಟ ಪುಡಿಗಾಸು ಅನುದಾನದಲ್ಲಿ ಬೇಕಾಬಿಟ್ಟಿ ದುರಸ್ತಿ ಕಾರ್ಯ ಪೂರ್ಣಗೊಳಿಸಿದ ಸರ್ಕಾರ, ಆತುರಾತುರವಾಗಿ ಕಾರ್ಖಾನೆ ಶುರು ಮಾಡಿತ್ತು. ಸರ್ಕಾರ ಸೆಪ್ಟೆಂಬರ್‌ಗೆ ಕಾರ್ಖಾನೆ ಶುರು ಮಾಡಿದ್ದರ ಪರಿಣಾಮ ಅಷ್ಟರಲ್ಲಾಗಲೇ ಕಾರ್ಖಾನೆ ವ್ಯಾಪ್ತಿಯ ಕಬ್ಬನ್ನು ರೈತರು ಬೇರೆಡೆ ಸರಬರಾಜು ಮಾಡಿದರು. ಇದೀಗ ಕಬ್ಬು ಅಭಾವದ ನೆಪ ಹೇಳಿ ಅವಧಿಗೂ ಮುನ್ನವೇ ಕಾರ್ಖಾನೆ ಸ್ಥಗಿತಗೊಳಿಸಿದೆ.
ಸದ್ಯಕ್ಕಂತೂ ಕಾರ್ಖಾನೆಗೆ ಕಬ್ಬು ಸರಬರಾಜು ಮಾಡಿದ ರೈತರಿಗೆ ಹಣ ಪಾವತಿ ಏನೋ ಮಾಡಿದೆ. ಮುಂದಿನ ಹಂಗಾಮಿಗೆ ಕಾರ್ಖಾನೆ ಆರಂಭವಾಗಬೇಕಿದ್ದರೇ ಕಾರ್ಖಾನೆ ಸಂಪೂರ್ಣ ದುರಸ್ತಿ ಆಗಲೇಬೇಕಿದೆ. ಈ ದುರಸ್ತಿ ಕಾರ್ಯಕ್ಕೆ ಸರ್ಕಾರದ ಅನುದಾನ ಕೂಡ ಅಗತ್ಯವಿದೆ. ಹೀಗಾಗಿ ಸರ್ಕಾರ ಈ ಬಾರಿ ಬಜೆಟ್‌ನಲ್ಲಿ ಎಷ್ಟು ಅನುದಾನ ಘೋಷಿಸುತ್ತದೆ? ಆ ಅನುದಾನ ಬಿಡುಗಡೆಯಾಗಿ ಕಾರ್ಖಾನೆ ದುರಸ್ತಿ ಆದರೆ ಮಾತ್ರ ಪುನಾರಂಭದ ಮಾತು. ಇಲ್ಲವೇ ಎಂದಿನಂತೆ ಬಿಜೆಪಿ ಸರ್ಕಾರದ ಪೊಳ್ಳು ಭರವಸೆಗೆ ಜಿಲ್ಲೆಯ ಕಬ್ಬು ಬೆಳೆದ ರೈತ ಮತ್ತೆ ಸಂಕಷ್ಟಕ್ಕೀಡಾಗೋದು ಮಾಮೂಲಿ ಎಂದು ಇಲ್ಲಿನ ರೈತರು ಹೇಳುತ್ತಿದ್ದಾರೆ. ಇದನ್ನೂ ಓದಿ: ಮಟ ಮಟ ಮಧ್ಯಾಹ್ನವೇ ಯುವತಿ ಜೊತೆಗೆ ಅಸಭ್ಯವಾಗಿ ವರ್ತಿಸಿದ ನಾಲ್ವರು ಯುವಕರು
ಮಂಡ್ಯ: ಜಿಲ್ಲೆಯ ಜನರ ಜೀವನಾಡಿ ಮೈಶುಗರ್ ಸಕ್ಕರೆ ಕಾರ್ಖಾನೆ(Mysugar) ಪುನಾರಂಭ ಕುರಿತು ಸರ್ಕಾರ ನುಡಿದಂತೆ ನಡೆದುಕೊಂಡಿದೆ ಎಂದು ಜಿಲ್ಲಾ ಉಸ್ತುವಾರಿ ಮತ್ತು ಅಬಕಾರಿ ಸಚಿವ ಕೆ.ಗೋಪಾಲಯ್ಯ(Gopalaiah) ಹೇಳಿದರು.
ಈಗಾಗಲೇ ಕಾರ್ಖಾನೆ ಪ್ರಗತಿ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿ ಮಾಹಿತಿ ಪಡೆಯಲಾಗಿದೆ. ಮೊದಲ ಬಾಯ್ಲರ್ ಈಗಾಗಲೇ ಆರಂಭಗೊಂಡಿದ್ದು, ಎರಡನೇ ಬಾಯ್ಲರ್‌ಗೆ ಇದೇ 19ರಂದು ಚಾಲನೆ ನೀಡಲಾಗುವುದು. ಇದೇ 30ರಿಂದ ರೈತರಿಂದ ಸಂಪೂರ್ಣ ಕಬ್ಬು ಖರೀದಿಸಿ ಅರೆಯುವ ಕೆಲಸ ಮಾಡಲಾಗುವುದು ಎಂದರು.
ಕಬ್ಬು ಖರೀದಿ ತಡವಾದ ಹಿನ್ನೆಲೆಯಲ್ಲಿ ಬೇರೆ ಕಾರ್ಖಾನೆಯವರು ಒಂದು ಈಗಾಗಲೇ ಲಕ್ಷ ಟನ್ ಕಬ್ಬು ಖರೀದಿ ಮಾಡಿದ್ದರೆ, ನಮ್ಮ ಕಾರ್ಖಾನೆಯಿಂದ ಶೇ. ನೂರರಷ್ಟು ಕಬ್ಬು ಖರೀದಿ ಮಾಡಲಾಗುವುದು. ಮಂಡ್ಯ(Mandya) ಜಿಲ್ಲೆಯ ಎಲ್ಲ ತಾಲೂಕಿನ ರೈತರ ಕಬ್ಬು ಖರೀದಿ ಮಾಡಲಾಗುವುದು ಎಂದು ಹೇಳಿದರು.
ಕಾರ್ಖಾನೆ ಆರಂಭ ಕುರಿತು ಮಾತುಕೊಟ್ಟಂತೆ ನಡೆದುಕೊಂಡ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಂದ ಸೆ.30ರ ನಂತರ ಕಾರ್ಖಾನೆಯನ್ನು ವಿಧ್ಯುಕ್ತವಾಗಿ ಉದ್ಘಾಟಿಸಲಾಗುವುದು. ಶಾಶ್ವತವಾಗಿ ಈ ಕಾರ್ಖಾನೆ ನಡೆಯಬೇಕೆನ್ನುವುದು ಸರ್ಕಾರದ ಆಶಯವಾಗಿದೆ ಎಂದರು. ಇದನ್ನೂ ಓದಿ: ಶಕ್ತಿ, ಸ್ಫೂರ್ತಿ ಸದಾ ನಿಮ್ಮೊಂದಿಗಿರಲಿ: ಮೋದಿ ಹುಟ್ಟುಹಬ್ಬಕ್ಕೆ ರಮ್ಯಾ ವಿಶ್
ಈ ಸಂದರ್ಭದಲ್ಲಿ ಕ್ರೀಡಾ ಸಚಿವ ಡಾ.ಕೆ.ಸಿ.ನಾರಾಯಣ ಗೌಡ, ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಜಯರಾಮ್, ಜಿಲ್ಲಾಧಿಕಾರಿ ಎಸ್.ಅಶ್ವತಿ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಇದನ್ನೂ ಓದಿ:ಸಾಗರ ರಕ್ಷಣೆ ನಮ್ಮೆಲ್ಲರ ಹೊಣೆ: ಗೆಹ್ಲೋಟ್
Live Tv
[brid partner=56869869 player=32851 video=960834 autoplay=true]
ಮಂಡ್ಯ: ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಮಂಡ್ಯದ ಮೈಶುಗರ್ 4 ವರ್ಷದ ಬಳಿಕ ಆರಂಭವಾಗಿದೆ. ಸಚಿವ ಸಂಪುಟ ಸಭೆ ನಿರ್ಣಯದಂತೆ ಹಾಗೂ ಸರ್ಕಾರದ ಭರವಸೆಯಂತೆ ಮೈಶುಗರ್ ಕಾರ್ಖಾನೆ ಪುನರಾರಂಭಕ್ಕೆ ಇಂದು ಮುನ್ನುಡಿ ಬರೆಯಲಾಯಿತು.
ಸಂಪ್ರದಾಯದಂತೆ ಪೂಜೆ, ಗಣಪತಿ ಹೋಮದ ಮೂಲಕ ಕಾರ್ಖಾನೆ ಬಾಯ್ಲರ್‍ಗೆ ಅಗ್ನಿ ಸ್ಪರ್ಶ ಮಾಡಲಾಯಿತು. ಇದಕ್ಕಾಗಿ ಕಾರ್ಖಾನೆಯನ್ನು ಶುದ್ಧಿ ಮಾಡಿ, ಹೂವು, ತಳಿರು-ತೋರಣ ಕಟ್ಟಿ, ನವ ವಧುವಿನಂತೆ ಸಿಂಗಾರ ಮಾಡಲಾಗಿತ್ತು. ಸಚಿವರಾದ ಕೆ.ಗೋಪಾಲಯ್ಯ, ಕೆ.ಸಿ.ನಾರಾಯಣ ಗೌಡ, ಸಂಸದೆ ಸುಮಲತಾ, ಜಿಲ್ಲಾಡಳಿತದ ಅಧಿಕಾರಿಗಳು, ರೈತರು, ರೈತ ಮುಖಂಡರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು, ನೌಕರರು ಭಾಗಿಯಾಗಿದ್ದರು.
ಬಂದ್ ಆಗಿದ್ದು ಯಾಕೆ?
ರಾಜ್ಯದ ಏಕೈಕ ಸಕ್ಕರೆ ಕಾರ್ಖಾನೆ ಅಂದರೆ ಅದು ಮಂಡ್ಯದ ಮೈಶುಗರ್ ಕಾರ್ಖಾನೆ. ಒಂದು ಕಾಲದಲ್ಲಿ ಗತವೈಭವಕ್ಕೆ ಕಾರಣವಾಗಿದ್ದ ಈ ಕಾರ್ಖಾನೆ ಕೊಡುವ ದರವೇ ಇಡೀ ರಾಜ್ಯದ ಕಬ್ಬಿನ ದರವನ್ನು ನಿರ್ಧಾರ ಮಾಡುತ್ತಿತ್ತು. ಅಂತಹ ಇತಿಹಾಸ ಪ್ರಸಿದ್ಧ ಕಾರ್ಖಾನೆ ಅವ್ಯಾಹತ ಭ್ರಷ್ಟಾಚಾರ, ರಾಜಕೀಯ ಹಪಾಹಪಿಗೆ ನಶಿಸುವ ಹಂತ ತಲುಪಿತ್ತು. ಕಳೆದ ನಾಲ್ಕು ವರ್ಷಗಳಿಂದ ಈ ಕಾರ್ಖಾನೆ ಸಂಪೂರ್ಣ ಸ್ಥಬ್ಧವಾಗಿತ್ತು. ಇದನ್ನೂ ಓದಿ: ಪ್ರವೀಣ್ ಹತ್ಯೆಗೈದ ಆರೋಪಿಗಳ ಬಂಧನ- ಪೊಲೀಸ್ ಇಲಾಖೆಗೆ ಕುಟುಂಬಸ್ಥರು ಧನ್ಯವಾದ
ಕಾರ್ಖಾನೆ ಸ್ಥಗಿತದಿಂದ ಇಡೀ ಮಂಡ್ಯ ಜಿಲ್ಲೆಯ ಆರ್ಥಿಕ ಸ್ಥಿತಿ ಮತ್ತು ರೈತರು ಸಂಕಷ್ಟಕ್ಕೆ ಸಿಲುಕಿದ್ದರು. ಈ ಕಾರ್ಖಾನೆ ಆರಂಭಕ್ಕೆ ನಿರಂತರವಾಗಿ, ಸಾಕಷ್ಟು ಹೋರಾಟಗಳು ನಡೆದಿದ್ವು. ಕಾಲಕಳೆದಂತೆ ಮೈಶುಗರ್ ವಿಚಾರವಾಗಿ ನಡೆಯುತ್ತಿದ್ದ ಹೋರಾಟಗಳು ಕೂಡ ಕವಲೊಡೆದು ಗೊಂದಲದ ಗೂಡಾಗಿತ್ತು. ಕೆಲವರು ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಆರಂಭಕ್ಕೆ ಪಟ್ಟು ಹಿಡಿದಿದ್ದರೆ, ಮತ್ತೆ ಕೆಲವರು ಖಾಸಗಿಯಾದರೂ ಸರಿ, ಓ ಅಂಡ್ ಎಂ ಆದರೂ ಸರಿ. ಹೇಗಾದರೂ ಆಗಲಿ ಮೊದಲು ಕಾರ್ಖಾನೆ ಆರಂಭವಾಗಲಿ ಅಂತ ಒತ್ತಾಯಿಸಿದ್ದರು. ಇದು ಸರ್ಕಾರಕ್ಕೂ ತಲೆ ನೋವಾಗಿ ಪರಿಣಮಿಸಿತ್ತು. ಈ ಹಿಂದಿನ ಸಿಎಂ ಆಗಿದ್ದ ಯಡಿಯೂರಪ್ಪ ಸಚಿವ ಸಂಪುಟ ಸಭೆಯಲ್ಲಿ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸುವ ನಿರ್ಧಾರ ಮಾಡಿದ್ದರು.
ಕಾರ್ಖಾನೆ ಪುನರಾರಂಭಕ್ಕೆ ಸರ್ಕಾರ ಅನುದಾನ ಬಿಡುಗಡೆ ಮಾಡಿತ್ತು. 20 ಕೋಟಿ ವೆಚ್ಚದಲ್ಲಿ ಕಾರ್ಖಾನೆಯ ಯಂತ್ರೋಪಕರಣಗಳನ್ನು ದುರಸ್ತಿ ಮಾಡಲಾಗಿದೆ. ಪ್ರಸಕ್ತ ಸಾಲಿನಲ್ಲಿ 4 ಲಕ್ಷ ಟನ್ ಕಬ್ಬು ನುರಿಸಲು ಪ್ಲಾನ್ ಮಾಡಿಕೊಳ್ಳಲಾಗಿದೆ. ಇನ್ನು 10 ದಿನದೊಳಗೆ ಪ್ರಾಯೋಗಿಕವಾಗಿ ಕಬ್ಬು ನುರಿಸುವ ಕಾರ್ಯ ಆರಂಭಿಸಲಾಗುತ್ತದೆ. ಸಣ್ಣಪುಟ್ಟ ತಾಂತ್ರಿಕ ದೋಷ ಸರಿಪಡಿಸಿಕೊಂಡು 15-20 ದಿನಗಳಲ್ಲಿ ಸಿಎಂ ಮೂಲಕವೇ ಅಧಿಕೃತವಾಗಿ ಕಾರ್ಖಾನೆ ಕಬ್ಬು ನುರಿಸುವ ಕಾರ್ಯಕ್ಕೆ ಚಾಲನೆ ಕೊಟ್ಟು ಪುನರಾರಂಭ ಮಾಡಲಾಗುತ್ತದೆ ಅಂತ ಸಚಿವರು ಭರವಸೆ ನೀಡಿದ್ದರು. ಇದನ್ನೂ ಓದಿ: ಉಜ್ಜಯಿನಿ ಮಹಾಕಾಳೇಶ್ವರ ಮಂದಿರದಲ್ಲಿ ಸಂಸದ ತೇಜಸ್ವಿ ಸೂರ್ಯ ಬೆಂಬಲಿಗರ ಗಲಾಟೆ
ಮೈಶುಗರ್ ಕಾರ್ಖಾನೆಯಲ್ಲಿ ನಡೆದ ಪೂಜೆಯಿಂದ ಜಿಲ್ಲೆಯ ಜನಪ್ರತಿನಿಧಿಗಳು, ರೈತರಲ್ಲಿ ಸಂತಸ ಮನೆ ಮಾಡಿದೆ. ಹೇಗಾದರೂ ಮಾಡಿ ಕಾರ್ಖಾನೆ ಆರಂಭಕ್ಕೆ ನಡೆಸಿದ್ದ ಹೋರಾಟಕ್ಕೆ ಜಯ ಸಿಕ್ಕಿದೆ. ಇದಕ್ಕೆ ಸಹಕಾರ ನೀಡಿದ ಎಲ್ಲರಿಗೂ ಋಣಿಯಾರುತ್ತೇನೆ. ನಾನು ಸಂಸದೆಯಾಗಿ 3 ವರ್ಷ ಆದರೂ, ಇಂದಿನ ಸಂತಸದ ದಿನ ಯಾವತ್ತೂ ಇಲ್ಲ ಅಂತಾ ಸಂಸದೆ ಸುಮಲತಾ ಅಂಬರೀಶ್ ಹೇಳಿದರೆ, ರೈತ ನಾಯಕಿ ಸುನಂದ ಜಯರಾಂ ಮಾತ್ರ ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ನಡೆಸುವಂತೆ ಸರ್ಕಾರವನ್ನು ಒತ್ತಾಯಿಸಿದ್ದೆವು. ಸರ್ಕಾರ ಕೊಟ್ಟ ಭರವಸೆಯಂತೆ ಕಾರ್ಖಾನೆ ಆರಂಭಕ್ಕೆ ಮುಂದಾಗಿದೆ. ಸರ್ಕಾರಿ ಸ್ವಾಮ್ಯದಲ್ಲೇ ಕಾರ್ಖಾನೆ ಪುನರಾರಂಭಿಸಿರುವುದು ಸ್ವಾಗತಾರ್ಹ. ಸರ್ಕಾರದ ನಿರ್ಧಾರಕ್ಕೆ ಅಭಿನಂದಿಸುತ್ತೇವೆ ಅಂತಾ ಸಂತಸ ವ್ಯಕ್ತಪಡಿಸಿದರು. ಮಂಡ್ಯ ಜನರ ಬಹು ದಿನಗಳ ಕನಸು ಈಡೇರುವ ಕಾಲಕ್ಕೆ ಕ್ಷಣಗಣನೆ ಆರಂಭವಾಗಿದೆ
Live Tv
[brid partner=56869869 player=32851 video=960834 autoplay=true]
– ಶಾಸಕ ದಿನೇಶ್ ಗೂಳಿಗೌಡರಿಗೆ ಸಕಾರತ್ಮಕವಾಗಿ ಸ್ಪಂದಿಸಿದ ಸಿಎಂ
– ಬಾಕಿ 46.25 ಕೋಟಿ ರೂ. ಬಿಡುಗಡೆಗೆ ಮನವಿ
ಬೆಂಗಳೂರು: ಮೈಸೂರು ಸಕ್ಕರೆ ಕಂಪನಿ ನಿಗಮದ ಮಂಡ್ಯ ಕಾರ್ಖಾನೆಗೆ 3.75 ಕೋಟಿ ರೂ.ವನ್ನು ಬಿಡುಗಡೆ ಮಾಡಿದ್ದು, ಬಾಕಿ ಇರುವ 46.25 ಕೋಟಿ ರೂ. ಹಣವನ್ನು ಕೂಡಲೇ ಬಿಡುಗಡೆ ಮಾಡಿ, ಕಬ್ಬು ನುರಿಯುವ ಕೆಲಸ ಪ್ರಾರಂಭಕ್ಕೆ ಚಾಲನೆ ಮಾಡುವಂತೆ ಒತ್ತಾಯಿಸಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರಿಗೆ ಮಂಡ್ಯ ಶಾಸಕ ದಿನೇಶ್ ಗೂಳಿಗೌಡ ಅವರು ಮನವಿಪತ್ರ ಸಲ್ಲಿಸಿದರು.
ಬೊಮ್ಮಾಯಿ ಅವರ ಸರ್ಕಾರಿ ನಿವಾಸದಲ್ಲಿ ಭೇಟಿ ಮಾಡಿದ ಮನವಿ ಸಲ್ಲಿಸಿದರು. ಈ ಸಂಬಂಧ ಮಾತನಾಡಿದ ಮುಖ್ಯಮಂತ್ರಿ ಬೊಮ್ಮಾಯಿ ಶೀಘ್ರವೇ ಬಾಕಿ ಅನುದಾನಗಳನ್ನು ಬಿಡುಗಡೆ ಮಾಡುವುದಾಗಿ ತಿಳಿಸಿದರು.
ಪತ್ರದ ಸಾರಾಂಶ ಹೀಗಿದೆ: ಮಂಡ್ಯ ಜಿಲ್ಲೆ ಜನತೆಯ ಜೀವನಾಧಾರವಾಗಿರುವ ಮೈಸೂರು ಸಕ್ಕರೆ ಕಾರ್ಖಾನೆ ಪುನಾರಂಭ ಹಾಗೂ ಪುನಶ್ಚೇತನಕ್ಕಾಗಿ ಪ್ರಸಕ್ತ ಸಾಲಿನ ಬಜೆಟ್‍ನಲ್ಲಿ 50 ಕೋಟಿ ರೂ.ವನ್ನು ಮೀಸಲಿಟ್ಟಿದ್ದು, ಅದರಲ್ಲಿ ಪ್ರಥಮ ಹಂತವಾಗಿ 15 ಕೋಟಿ ರೂ.ವನ್ನು ಬಿಡುಗಡೆಗೊಳಿಸಲಾಗುತ್ತದೆ ಎಂಬ ಆಶ್ವಾಸನೆಯನ್ನು ಸಾರ್ವಜನಿಕವಾಗಿ ನೀಡಲಾಗಿತ್ತು. ಆದರೆ, ಇದೀಗ ಕೇವಲ 3.75 ಕೋಟಿ ರೂ.ವನ್ನು ಮಾತ್ರವೇ ಬಿಡುಗಡೆ ಮಾಡಲಾಗಿದ್ದು, ಸದರಿ ಹಣ ಜನರ ನಿರೀಕ್ಷೆ ಮತ್ತು ಕಾರ್ಖಾನೆ ಪುನಾರ್ ಆರಂಭಿಸುವ ಕಾರ್ಯಕ್ಕೆ ತೊಡಕನ್ನುಂಟು ಮಾಡಿದೆ.
ಕಾರ್ಖನೆಯಲ್ಲಿ ಸಾಕಷ್ಟು ತಾಂತ್ರಿಕ ಹಾಗೂ ಆಡಳಿತಾತ್ಮಕ ತೊಂದರೆಗಳು ಇದ್ದು, ಈಗಾಗಲೇ ಕಾರ್ಖಾನೆ ಆರಂಭವಾಗದೆ ಸುಮಾರು 2 ವರ್ಷಗಳು ಕಳೆದಿವೆ. ಜೊತೆಗೆ ಸಾಕಷ್ಟು ಯಂತ್ರಗಳ ದುರಸ್ತಿಯಾಗಬೇಕಿದ್ದು, ಇನ್ನು ಹೊಸ ಯಂತ್ರೊಪಕರಣಗಳು ಅಥವಾ ಬಿಡಿಭಾಗಗಳು ಬೇಕಿರುತ್ತವೆ. ಜೊತೆಗೆ ಇನ್ನಿತರ ಮೂಲಭೂತ ಸೌಲಭ್ಯವನ್ನು ಒದಗಿಸಿ ಸುಸ್ಥಿತಿಗೆ ತರಬೇಕಿದ್ದು, ಈ ಎಲ್ಲಾ ಪ್ರಕ್ರಿಯೆಗೆ ಈಗ ಬಿಡುಗಡೆ ಮಾಡಿರುವ 3.75 ಕೋಟಿ ರೂ. ಯಾವುದಕ್ಕೂ ಸಾಕಾಗುವುದಿಲ್ಲ.
ಈಗ ಜೂನ್ ತಿಂಗಳ ಆರಂಭಿಕ ಹಂತದಲ್ಲಿದ್ದೇವೆ. ಜುಲೈ ಮಾಸಾಂತ್ಯದಲ್ಲಿ ಕಾರ್ಖಾನೆಯನ್ನು ಆರಂಭಗೊಳಿಸುವುದಾಗಿ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಸಕ್ಕರೆ ಸಚಿವರು ಭರವಸೆಯನ್ನು ನೀಡಿದ್ದಾರೆ. ಹೀಗಾಗಿ ಕಬ್ಬು ನುರಿಯಲು ಗರಿಷ್ಠ ಎಂದರೆ ಇನ್ನು ಎರಡರಿಂದ ಎರಡೂವರೆ ತಿಂಗಳ ಅವಕಾಶ ಮಾತ್ರ ಇದೆ. ಇಂತಹ ಸಂದರ್ಭದಲ್ಲಿ ಯಂತ್ರೋಪಕರಣಗಳನ್ನು ಸರಿಪಡಿಸಿ, ಸಿಬ್ಬಂದಿಯನ್ನು ನಿಯೋಜಿಸಿಕೊಂಡು ಕಾರ್ಯನಿರ್ವಹಣೆ ಮಾಡಬೇಕೆಂದರೆ ಕೆಲಸ ಕಾರ್ಯಗಳು ಚುರುಕಾಗಿ ನಡೆಯಬೇಕು. ಇದಕ್ಕೆ ಸಾಕಷ್ಟು ಹಣದ ಅವಶ್ಯಕತೆ ಇರುತ್ತದೆ. ಹಣ ಬಿಡುಗಡೆ ನಿಧಾನವಾಗುತ್ತಾ ಹೋದಂತೆ ಕಾರ್ಖಾನೆ ಆರಂಭವೂ ವಿಳಂಬವಾಗುತ್ತಾ ಹೋಗುತ್ತದೆ. ತೀರಾ ವಿಳಂಬವಾದರೆ ಕಾರ್ಖಾನೆ ಪ್ರಾರಂಭಿಸಿಯೂ ಯಾರಿಗೂ ಪ್ರಯೋಜನ ಇರುವುದಿಲ್ಲ. ಇದನ್ನೂ ಓದಿ: ಗೋ ಪೂಜೆ ಮಾಡುವವರು ಗೋಮಾಂಸ ತಿಂತೀನಿ ಅಂದ್ರೆ ಅವರಿಗಿಂತ ಕಟುಕ ಈ ಪ್ರಪಂಚದಲ್ಲಿ ಯಾರು ಇಲ್ಲ: ಆರ್.ಅಶೋಕ್
ಇನ್ನು ಬಂದಿರುವ ಪ್ರಾಥಮಿಕ ಮಾಹಿತಿ ಪ್ರಕಾರ 15 ಕೋಟಿ ರೂ. ಹಣಕಾಸು ಇಲಾಖೆಯಲ್ಲಿ ಮಂಜೂರಾಗಿದ್ದು, ಆದರೆ ಕೇವಲ 3.75 ಕೋಟಿ ರೂ. ಬಿಡುಗಡೆಯಾಗಿರುತ್ತದೆ. ಆದರೆ, ಉಳಿದ ಮೊತ್ತವನ್ನು ಸಹ ಶೀಘ್ರದಲ್ಲಿ ಬಿಡುಗಡೆ ಮಾಡಿದರೆ ಮುಂದಿನ ಚಟುವಟಿಕೆಗೆ ಅನುಕೂಲವಾಗಿ ಈ ಭಾಗದ ರೈತರಿಗೆ ಸೂಕ್ತ ಸಮಯದಲ್ಲಿ ಕಬ್ಬು ನುರಿಸಲು ಅನುಕೂಲವಾದಂತೆ ಆಗುತ್ತದೆ.
ವಕಿರ್ಂಗ್ ಕ್ಯಾಪಿಟಲ್‍ಗೆ ವ್ಯವಸ್ಥೆ ಮಾಡಿ: ಯಾವುದೇ ಒಂದು ಕಾರ್ಖಾನೆ ಆರಂಭಕ್ಕೆ ಮೊದಲು ವರ್ಕಿಂಗ್ ಕ್ಯಾಪಿಟಲ್ ಇರುವುದು ಅತ್ಯವಶ್ಯಕ. ಈ ನಿಟ್ಟಿನಲ್ಲಿ ಬಜೆಟ್‍ನಲ್ಲಿಯೂ ಪ್ರಸ್ತಾಪವಾಗಿದೆ. ಬ್ಯಾಂಕ್ ಮೂಲಕ ವರ್ಕಿಂಗ್ ಕ್ಯಾಪಿಟಲ್‍ಗೆ ವ್ಯವಸ್ಥೆ ಮಾಡಲಾಗುತ್ತದೆ ಎಂದು ಹೇಳಲಾಗಿತ್ತಾದರೂ ಇನ್ನೂ ಆ ಬಗ್ಗೆ ಅಧಿಕೃತ ಕ್ರಮವಾಗಲಿ, ಆದೇಶವಾಗಲಿ ಹೊರಬಿದ್ದಿಲ್ಲ. ಇದನ್ನೂ ಓದಿ: ಕನ್ನಡಿಗರ ತಂಟೆಗೆ ಬಂದ್ರೆ ಹುಷಾರ್! – MES ಪುಂಡರಿಗೆ ಸಿಎಂ ಎಚ್ಚರಿಕೆ
ಕಾರ್ಖಾನೆ ಒಮ್ಮೆ ಪ್ರಾರಂಭವಾದ ಮೇಲೆ ಬರುವಂತಹ ಖರ್ಚು ವೆಚ್ಚಗಳು ಸೇರಿದಂತೆ ಕಾರ್ಖಾನೆಗೆ ಕಬ್ಬು ಹಾಕಿದ ರೈತರಿಗೆ ಹಣ ಪಾವತಿ ಮಾಡಲು ಅನುದಾನವು ಇರಬೇಕಾಗುತ್ತದೆ. ಈ ಮೂಲಕ ಸುಗಮವಾಗಿ ಚಾಲನೆಯನ್ನು ಮಾಡಬೇಕಿದೆ. ಆದರೆ, ಈ ಬಗ್ಗೆ ಇದುವರೆಗೂ ಯಾವುದೇ ಕ್ರಮವಾಗಿಲ್ಲ. ಹೀಗಾಗಿ ಈ ಎಲ್ಲಾ ವಿಷಯಗಳ ನಿಟ್ಟಿನಲ್ಲಿ ಗಮನಹರಿಸಿ, ಕಾರ್ಖಾನೆಗೆ ಬಾಕಿ ಇರುವ ಅನುದಾನವನ್ನು ಬಿಡುಗಡೆ ಮಾಡುವುದಲ್ಲದೆ, ಸಂಪೂರ್ಣ 50 ಕೋಟಿ ರೂ.ವನ್ನು (ಅಂದರೆ ಬಾಕಿ 46.25 ಕೋಟಿ ರೂ.) ಆದಷ್ಟು ಶೀಘ್ರವಾಗಿ ಬಿಡುಗಡೆಗೊಳಿಸಿ ರೈತರ ನೆರವಿಗೆ ದಾವಿಸಬೇಕು ಎಂದು ಮಂಡ್ಯ ಜಿಲ್ಲೆಯ ರೈತರ ಪರವಾಗಿ ಮನವಿ ಮಾಡಿದರು.
ಮಂಡ್ಯ: ಜಿಲ್ಲೆಯ ಮೈಶುಗರ್ ಕಾರ್ಖಾನೆಯನ್ನು ಸರ್ಕಾರದ ಒಡೆತನದಲ್ಲೇ ಪುನರಾಂಭ ಮಾಡಬೇಕೆಂದು ಆಗ್ರಹಿಸಿ ರೈತ ಸಂಘಟನೆಯ ಪದಾಧಿಕಾರಿಗಳು ಸಚಿವ ಆರ್.ಅಶೋಕ್ ಅವರ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿರುವ ಘಟನೆ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ರಂಗನಾಥಸ್ವಾಮಿ ದೇವಸ್ಥಾನದ ಬಳಿ ಜರುಗಿದೆ.
ಇಂದು ಕೊರೊನಾದಿಂದ ಸಾವನ್ನಪ್ಪಿ ಅನಾಥವಾಗಿ ಇದ್ದ ಅಸ್ತಿಗಳಿಗೆ ಪಿಂಡಪ್ರಧಾನ ಮಾಡುವ ನಿಟ್ಟಿನಲ್ಲಿ ಮಂಡ್ಯ ಜಿಲ್ಲೆಯ ಶ್ರೀರಂಗಪಟ್ಟಣದ ಗೋಸಾಯ್ ಘಾಟ್‍ಗೆ ಅಶೋಕ್ ಬಂದಿದ್ದರು. ಪಿಂಡಪ್ರಧಾನ ಮಾಡಿದ ಬಳಿಕ ರಂಗನಾಥಸ್ವಾಮಿ ದೇವಸ್ಥಾನಕ್ಕೆ ಬಂದು ಹೊರಡುವ ವೇಳೆ ರೈತ ಸಂಘಟನೆಯ ಪದಾಧಿಕಾರಿಗಳು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು. ಇದನ್ನೂ ಓದಿ: ಮಲ್ಪೆ ಬಂದರಿನಲ್ಲಿ ಸಿಕ್ತು ಹೆಲಿಕಾಪ್ಟರ್ ಫಿಶ್- ಭಾರೀ ಗಾತ್ರದ ಮೀನು ನೋಡಿ ಜನ ಶಾಕ್
ಮೈಶುಗರ್ ಕಾರ್ಖಾನೆಯನ್ನು ಖಾಸಗೀಕರಣ ಮಾಡದೇ, ಸರ್ಕಾರದ ಮಾಲೀಕತ್ವದಲ್ಲೇ ಪುನರಾಂಭ ಮಾಡಬೇಕು. ಇಲ್ಲವಾದಲ್ಲಿ ರೈತರಿಗೆ ಅನ್ಯಾಯ ಮಾಡಿದ ಹಾಗೆ ಆಗುತ್ತದೆ ಎಂದು ಅಶೋಕ್ ಕಾರನ್ನು ಅಡ್ಡಗಟ್ಟಿ ಪ್ರತಿಭಟನೆ ನಡೆಸಿದರು. ಇದಲ್ಲದೇ ಕೇಂದ್ರ ರೈತ ಮಸೂದೆಯನ್ನು ವಾಪಸ್ಸು ಪಡೆಯಬೇಕೆಂದು ಆಕ್ರೋಶ ವ್ಯಕ್ತಪಡಿಸಿದರು. ಈ ವೇಳೆ ಅಶೋಕ್ ಅವರ ಕಾರಿನ ಮುಂಭಾಗ ಇದ್ದ ರಾಷ್ಟ್ರ ಧ್ಜಜವಿದ್ದ ಕಡ್ಡಿಯನ್ನು ಮುರಿಯಲು ಸಹ ಯತ್ನಸಿದರು. ಇದನ್ನೂ ಓದಿ: ವಿಶ್ವ ಹಿಂದೂ ಪರಿಷತ್‍ನವರು ದೇಶ ಭಕ್ತರಾ?: ರಾಮಲಿಂಗಾರೆಡ್ಡಿ
ನಂತರ ಕಾರಿನಿಂದ ಕೆಳಗೆ ಇಳಿದ ಅಶೋಕ್ ರೈತರ ಮನವಿ ಸ್ವೀಕರಿಸಿದರು. ಬಳಿಕ ನಿಮ್ಮ ಬೇಡಿಕೆ ವಿಚಾರಗಳನ್ನು ಮುಖ್ಯಮಂತ್ರಿಗಳ ಗಮನಕ್ಕೆ ಹಾಗೂ ಸಂಬಂಧಪಟ್ಟ ಸಚಿವರ ಗಮನಕ್ಕೆ ತರುವುದಾಗಿ ಹೇಳಿದರು. ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಇವರ ಪ್ರತಿಭಟನೆ ವಿಚಾರಕ್ಕೆ ಸಂಬಂಧಿಸಿದ ಸಚಿವ ನಾನು ಅಲ್ಲ. ಅದಕ್ಕೆ ಸಕ್ಕರೆ ಸಚಿವರು ಇದ್ದಾರೆ, ಅವರ ಗಮನಕ್ಕೆ ನಾನು ತರುತ್ತೇನೆ. ಕಳೆದ ಎರಡು ದಿನಗಳ ಹಿಂದೆ ಮಂಡ್ಯದಲ್ಲಿ ಈ ಕುರಿತು ನಡೆಯುತ್ತಿರುವ ಪ್ರತಿಭಟನಾ ಸ್ಥಳಕ್ಕೆ ಅವರು ಕರೆಯದೆ ಇದ್ದರು ನಾನೇ ಭೇಟಿ ನೀಡಿ ಅವರ ಮನವಿಯನ್ನು ಸ್ವೀಕಾರ ಮಾಡಿದ್ದೆ. ಇಂದು ಯಾಕೆ ಈ ರೀತಿ ಮಾಡಿದರು ಎಂದು ಗೋತ್ತಿಲ್ಲ ಎಂದರು.