Tag: ಮೈಲಾರ

  • ಸಂಚಾರಿ ವಿಜಯ್ ಕಾಣಿಸಿಕೊಂಡ ಕೊನೆ ಆಲ್ಬಂ : ಏಳುಕೋಟಿ ಮೈಲಾರನ ಗಾನಲಹರಿ ಬಿಡುಗಡೆ

    ಸಂಚಾರಿ ವಿಜಯ್ ಕಾಣಿಸಿಕೊಂಡ ಕೊನೆ ಆಲ್ಬಂ : ಏಳುಕೋಟಿ ಮೈಲಾರನ ಗಾನಲಹರಿ ಬಿಡುಗಡೆ

    ಳೆದ ಒಂದು ವರ್ಷದ ಹಿಂದೆಯಷ್ಟೇ ಅಗಲಿರುವ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್ ಕಾಣಿಸಿಕೊಂಡ ಕೊನೆ ಆಲ್ಬಂ ಇದೀಗ ರಿಲೀಸ್ ಆಗಿದೆ. ಹೊಸತನ ಹಾಗೂ ವಿಶೇಷಗಳಿಂದ ಕೂಡಿರುವ ಈ ಆಲ್ಬಂ ಮೈಲಾರ ಲಿಂಗೇಶ್ವರ ಸ್ವಾಮಿಯ ಭಕ್ತಿ ಪೂರ್ಣ ಗೀತೆಯಾಗಿದ್ದು, ನೋಡಿದವರೆಲ್ಲ ನಿಂತಲ್ಲೇ ಉಘೇ ಉಘೇ ಮೈಲಾರ ಸ್ವಾಮಿ ಎನ್ನುತ್ತಿದ್ದಾರೆ.

    ಜನಪದ ಹಿನ್ನೆಲೆ ಹಾಡುಗಳನ್ನು ಮಾಡಬೇಕೆಂಬ ಆತೀವ ಆಸಕ್ತಿ, ಶ್ರದ್ಧೆಯಿಂದ ಗಾಯಕ, ಸಂಗೀತ ನಿರ್ದೇಶಕ ಪ್ರದೀಪ್ ಚಂದ್ರ ಮೈಲಾರ ಆಲ್ಬಂ ಹಾಡು ತಯಾರಿಸಿದ್ದಾರೆ. ಮೈಸೂರು ಭಾಗದಲ್ಲಿ ಮಲೆ ಮಹದೇಶ್ವರ ಸ್ವಾಮಿ ಎಷ್ಟು ಪ್ರಸಿದ್ಧಿಯೋ ಅದೇ ರೀತಿ ಹಾವೇರಿ ಭಾಗದಲ್ಲಿ ಮೈಲಾರ ಲಿಂಗೇಶ್ವರ ಖ್ಯಾತಿ ಪಡೆದಿದೆ. ಹೀಗಾಗಿ ಮೈಲಾರ ಸ್ವಾಮಿಯ ಜಾತ್ರೆ ಸೊಬಗನ್ನು, ಅಲ್ಲಿ ಸಂಪ್ರದಾಯ, ಭವಿಷ್ಯ ನುಡಿಯುವ ಕಾರ್ಣಿಕ, ಅಲ್ಲಿನ ಪವಾಡಗಳನ್ನು ಮುಖ್ಯವಸ್ತುವನ್ನಾಗಿರಿಸಿಕೊಂಡು ಚೆಂದದ ಆಲ್ಬಂ ಸಾಂಗ್ ರೂಪಿಸಿದ್ದಾರೆ. ಇದನ್ನೂ ಓದಿ: ಬೈಕಾಟ್ ಸಾಯಿ ಪಲ್ಲವಿ ಫಿಲ್ಮ್ : ಇಂದು ವಿರಾಟ ಪರ್ವಂ ರಿಲೀಸ್

    ರಾಷ್ಟ್ರಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಇಷ್ಟಪಟ್ಟು ನಟಿಸಿರುವ ಮೈಲಾರ ಹಾಡಿಗೆ ಸಂಜಯ್ ಕುಲಕರ್ಣಿ ನಿರ್ದೇಶನ ಮಾಡಿದ್ದು, ವಿಜಯ್ ಪ್ರಕಾಶ್ ಧ್ವನಿ ಕುಣಿಸಿರುವ, ಪ್ರದೀಪ್ ಚಂದ್ರ ಮ್ಯೂಸಿಕ್ ಹಾಗೂ ಸಾಹಿತ್ಯದ ಇಂಪು, ಚಂದ್ರು ಹಾಗೂ ರಾಜಶೇಖರ್ ಛಾಯಾಗ್ರಹಣ ತಂಪು ಹಾಡಿನ ಸೊಬಗನ್ನು ಮತ್ತಷ್ಟು ಶ್ರೀಮಂತಗೊಳಿಸಿದೆ.

    ಕಮರ್ಷಿಯಲ್ ಹಾಡುಗಳಿಗಿಂತ ಅದ್ಧೂರಿಯಾಗಿ ಮೂಡಿ ಬಂದಿರುವ ಈ ಆಲ್ಬಂ ಗೀತೆ ಸೃಷ್ಟಿಯ ಹಿಂದೆ ನೂರಾರು ಜನರ ಪರಿಶ್ರಮವಿದೆ.  ಸರ್ಕಾರದಿಂದ ಅನುಮತಿ ಪಡೆದು ಇಡೀ ಹಾಡನ್ನು ಮೈಲಾರ ಲಿಂಗೇಶ್ವರ ಜಾತ್ರೆಯಲ್ಲಿಯೇ ಚಿತ್ರೀಕರಣ ಮಾಡಲಾಗಿದೆ. ಅತ್ಯಂತ ವೈಭವದಿಂದ ನಡೆಯುವ ಜಾತ್ರೆಯನ್ನು ಇಡೀ ನಾಡಿಗೆ ಪರಿಚಯಿಸಲು ರೂಪುಗೊಂಡಿರುವ ಮೈಲಾರ ಹಾಡಿನ ಹಿಂದಿನ ಸಾರಥಿ ನಿರ್ಮಾಪಕ ರಾಜಶೇಖರ್ ಮೆತ್ರಿ.

    ಸಾಕಷ್ಟು ಲೈವ್ ವಾದ್ಯಗಳಿಂದ, ಲಕ್ಷಾಂತರ ಜನರ ನಡುವೆ ಚಿತ್ರೀಕರಣವಾಗಿರುವ ಹಾಡಿನಲ್ಲಿ ಸಂಚಾರಿ ವಿಜಯ್ ಜೊತೆಗೆ ಪ್ರದೀಪ್ ಚಂದ್ರ ಹಾಗೂ ಯಶಸ್ವಿನಿ ನಟಿಸಿದ್ದಾರೆ. ಇಂತಹ ಅದ್ಬುತ ಆಲ್ಬಂ ಹಾಡು ನಿರ್ಮಾಣ ಮಾಡಲು ಸಾಹಸ ಮಾಡಿದ ನಿರ್ಮಾಪಕ ರಾಜಶೇಖರ್ ಹಾಗೂ ಇಡೀ ತಂಡಕ್ಕೊಂದು ಸಲಾಂ.

    Live Tv

  • ವೇದಿಕೆ ಮೇಲಿದ್ದ ನಿರೂಪಕಿಯನ್ನ ತಳ್ಳಿದ ಸಿದ್ದರಾಮಯ್ಯ

    ವೇದಿಕೆ ಮೇಲಿದ್ದ ನಿರೂಪಕಿಯನ್ನ ತಳ್ಳಿದ ಸಿದ್ದರಾಮಯ್ಯ

    ಹಾವೇರಿ: ಬಳ್ಳಾರಿಯ ಜಿಲ್ಲೆಯ ಶ್ರೀಕ್ಷೇತ್ರ ಮೈಲಾರದಲ್ಲಿ ನಡೆದ ಸಮಾರಂಭದಲ್ಲಿ ಕಾರ್ಯಕ್ರಮದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ತಳ್ಳಿ, ಏ ನಡಿಯಮ್ಮಾ. ನನಗೆ ಲೇಟ್ ಆಗುತ್ತೆ ಎಂದು ದರ್ಪ ಮೆರೆದಿದ್ದಾರೆ.

    ಮೈಲಾರದಲ್ಲಿ ಇಂದು ಕನಕ ಗುರುಪೀಠದ ಏಳುಕೋಟಿ ಭಕ್ತರ ಕುಟೀರ ಉದ್ಘಾಟನಾ ಸಮಾರಂಭ ನಡೆದಿತ್ತು. ನಿರೂಪಕಿ ವಚನಗಳನ್ನು ಹೇಳುತ್ತಿದ್ದರು. ಈ ವೇಳೆ ವೇದಿಕೆ ಮೇಲಿದ್ದ ಸಿದ್ದರಾಮಯ್ಯ ಅವರು ನಿರೂಪಕಿಯನ್ನು ತಳ್ಳಿ ಭಾಷಣ ಆರಂಭಿಸಿದರು.

    ಸಮಾವೇಶದಲ್ಲಿ ಸೇರಿದ್ದ ಜನರು ಸಿದ್ದರಾಮಯ್ಯ ಮತ್ತೆ ಮುಖ್ಯಮಂತ್ರಿ ಆಗಬೇಕೆಂದು ಕೂಗಿದರು. ಇದಕ್ಕೆ ಪ್ರತಿಕ್ರಿಯೆ ನೀಡಿದ ಮಾಜಿ ಸಿಎಂ, ಜನರ ಆಶೀರ್ವಾದ ಇದ್ದರೆ ಮತ್ತೆ ಮುಖ್ಯಮಂತ್ರಿಯಾಗುತ್ತೇನೆ. ಖುರ್ಚಿ ಕೊಡುವರು ಹಾಗೂ ಅಲ್ಲಿಂದ ಕೆಳಗೆ ಇಳಿಸುವವರು ಜನರೇ ಎಂದು ಹೇಳಿದರು.

    ಸಿದ್ದರಾಮಯ್ಯ ಅವರು ಸೋಲುವ ಕ್ಷೇತ್ರದಲ್ಲಿ ಹಿಂದುಳಿದವರಿಗೆ ಟಿಕೆಟ್ ಕೊಟ್ಟಿದ್ದಾರೆ ಎಂದು ಆರೋಪಿಸುತ್ತಾರೆ. ಆದರೆ ಮಾನಗೆಟ್ಟವರು, ನಾಚಿಕೆ ಬಿಟ್ಟವರು ಸೋಲುವ ಕಡೆ ಒಬ್ಬರಿಗಾದರೂ ಕೊಡಬೇಕಿತ್ತು. ನನ್ನ ಬಗ್ಗೆ ಮಾತನಾಡಲು ಅವರಿಗೆ ಯಾವ ನೈತಿಕತೆ ಇದೆ ಎಂದು ಪ್ರಶ್ನಿಸಿ ಬಿಜೆಪಿ ವಿರುದ್ಧ ಗುಡುಗಿದರು.

    ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕಾರ್ಯಕ್ರಮದಿಂದ ನಿರ್ಗಮಿಸುವಾಗ ನಿರೂಪಕಿಯನ್ನು ಕರೆದು ತಪ್ಪಾಯಿತು. ನನಗೆ ತುಂಬಾ ತಡವಾಗುತ್ತದೆ ಎಂದು ಹೇಳಿ ಕ್ಷಮೆ ಕೇಳಿದರು.