Tag: ಮೈನಿಂಗ್ ಕಂಪನಿ

  • ಕೊರೊನಾ ಹೋರಾಟಕ್ಕೆ ಗಣಿ ಕಂಪನಿಗಳು ಸಾತ್- ಸ್ಯಾನಿಟೈಜರ್ ಸಿಂಪಡಣೆ

    ಕೊರೊನಾ ಹೋರಾಟಕ್ಕೆ ಗಣಿ ಕಂಪನಿಗಳು ಸಾತ್- ಸ್ಯಾನಿಟೈಜರ್ ಸಿಂಪಡಣೆ

    ಬಳ್ಳಾರಿ: ಮಾಹಾ ಮಾರಿ ಕೊರೊನಾ ವಿರುದ್ಧ ಹೋರಾಡಲು ಗಣಿ ನಾಡು ಬಳ್ಳಾರಿಯ ಗಣಿ ಕಂಪನಿಗಳು ಸಹ ಸಾತ್ ನೀಡಿವೆ. ಬಳ್ಳಾರಿ ನಗರದ ಸುತ್ತ ಸ್ಯಾನಿಟೈಜರ್ ಸಿಂಪಡಣೆ ಮಾಡುವ ಮೂಲಕ ತಮ್ಮದೇ ಆದ ಸಹಾಯ ಮಾಡಿವೆ.

    ಲಾಕ್‍ಡೌನ್ ಸಮಯದಲ್ಲಿ ಜಿಲ್ಲೆಯ ಕೈಗಾರಿಕೆಗಳು ಸಹಾಯ ಮಾಡಬೇಕೆಂದು ಜಿಲ್ಲಾಧಿಕಾರಿ ಎಸ್.ಎಸ್.ನಕಲು ಕೇಳಿದ್ದರು. ಹೀಗಾಗಿ ಬಳ್ಳಾರಿಯ ಎನ್‍ಎಮ್‍ಡಿಸಿ ಕಂಪನಿ ಜಿಲ್ಲಾಡಳಿತಕ್ಕೆ ಸಾತ್ ನೀಡಿದ್ದು, ಕಂಪನಿ ವತಿಯಿಂದ ನಗರದ ನೈರ್ಮಲ್ಯೀಕರಣ ಕೈಗೊಳ್ಳಲು ಮುಂದಾಗಿದೆ.

    ನಗರದ ಜನ ನಿಬಿಡ ಪ್ರದೇಶಗಳಲ್ಲಿ ಸಾನಿಟೈಜರ್ ಸಿಂಪಡಣೆ ಮಾಡಿದೆ. ಜೊತೆಗೆ ನಗರದ ಪ್ರಮುಖ 19 ಪ್ರದೇಶವನ್ನು ಜಿಲ್ಲಾಡಳಿತ ಗುರುತಿಸಿದ್ದು, ಎಲ್ಲಿ ಎನ್‍ಎಮ್‍ಡಿಸಿ ವತಿಯಿಂದ ಸಾನಿಟೈಜರ್ ಸಿಂಪಡಣೆ ಮಾಡಲಾಗಿದೆ ಎಂಬುದನ್ನು ಗುರುತಿಸಲಾಗಿದೆ. ಬಳ್ಳಾರಿ, ಸಂಡೂರು ಅಕ್ಕಪಕ್ಕದ ಗ್ರಾಮಗಳಲ್ಲಿಯೂ ಕಂಪನಿ ಸ್ಯಾನಿಟೈಜರ್ ಸಿಂಪಡಣೆ ಮಾಡಿದೆ.