Tag: ಮೈನಾ

  • ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌

    ಫಸ್ಟ್‌ ಟೈಂ ಸೆಟ್‌ಗೆ ಬಂದಾಗ ದಪ್ಪಗಿದ್ದೇನೆ, ಕುಳ್ಳಗಿದ್ದೇನೆಂದು ಅಪಹಾಸ್ಯ ಮಾಡಿದ್ದರು: ನಿತ್ಯಾ ಮೆನನ್‌

    ಜೋಶ್, ಮೈನಾ (Mynaa) ಸಿನಿಮಾಗಳ ಮನೆಗೆದ್ದಿರೋ ನಿತ್ಯಾ ಮೆನನ್‌ಗೆ (Nithya Menen) ಪರಭಾಷೆಯಲ್ಲಿ ಭಾರೀ ಬೇಡಿಕೆ ಇದೆ. ಇದೀಗ ಸಂದರ್ಶನವೊಂದರಲ್ಲಿ ತಮ್ಮ ದೇಹದ ಅಂಗಾಂಗಗಳ (Body Shaming) ಬಗ್ಗೆ ತಾವು ಎದುರಿಸಿದ ಟೀಕೆಯ ಬಗ್ಗೆ ರಾಷ್ಟ್ರ ಪ್ರಶಸ್ತಿ ವಿಜೇತ ನಟಿ ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ. ಇದನ್ನೂ ಓದಿ:5 ತಿಂಗಳ ಹಸುಗೂಸಿನ ಜೊತೆ ಅಮಲಾ ದಂಪತಿ ಬಾಲಿ ವೆಕೇಷನ್

    ತೆಲುಗು ಸಿನಿಮಾವೊಂದರಲ್ಲಿ ನಿತ್ಯಾ ನಟಿಸುವಾಗ ಅವರ ಗುಂಗುರು ಕೂದಲನ್ನು ಯಾರು ಇಷ್ಟಪಡಲಿಲ್ಲವಂತೆ. ನಾನು ಫಸ್ಟ್ ಟೈಮ್ ಸೆಟ್‌ಗೆ ಬಂದಾಗ ಎಲ್ಲರೂ ವಿಚಿತ್ರವಾಗಿ ನೋಡುತ್ತಿದ್ದರು. ನಾಯಕಿ ಅಂದ್ಮೇಲೆ ದೇಹದ ತೂಕದ ಬಗ್ಗೆ ಮಾತನಾಡಿದರು. ಅದಕ್ಕೆಲ್ಲಾ ನಾನು ತಲೆ ಕೆಡಿಸಿಕೊಳ್ಳಲಿಲ್ಲ ಎಂದಿದ್ದಾರೆ.

    ನಾನು ದಪ್ಪ ಮತ್ತು ಕುಳ್ಳಗೆ ಇದ್ದೇನೆ ಎಂದು ಎಲ್ಲರೂ ಅಪಹಾಸ್ಯ ಮಾಡಿದರು. ನನಗೆ ಗುಂಗುರು ಕೂದಲು ಮತ್ತು ದೊಡ್ಡ ಹುಬ್ಬು ಇದೆ ಎಂದು ಅನೇಕರು ಟೀಕೆ ಮಾಡಿದರು. ಯಾರನ್ನಾದರೂ ಅವರ ರೂಪದ ಆಧಾರದ ಮೇಲೆ ನೀವು ಹೇಗೆ ಟೀಕಿಸುತ್ತೀರಿ? ಎಂದಿದ್ದಾರೆ. ಅದು ಅವರ ಕೀಳು ಮಟ್ಟದ ಮನಸ್ಥಿತಿ ಎಂದು ಖಡಕ್ ಆಗಿ ನಿತ್ಯಾ ಮಾತನಾಡಿದ್ದಾರೆ. ಸವಾಲುಗಳನ್ನು ಎದುರಿಸಿ ಉತ್ತಮ ವ್ಯಕ್ತಿಯಾಗಲು ಪ್ರಯತ್ನಿಸಬೇಕು ಎಂದು ನಟಿ ಹೇಳಿದ್ದಾರೆ.

  • ಕಾರು ಆಕ್ಸಿಡೆಂಟ್ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳೋದೇನು?

    ಕಾರು ಆಕ್ಸಿಡೆಂಟ್ ಬಗ್ಗೆ ನಿರ್ದೇಶಕ ನಾಗಶೇಖರ್ ಹೇಳೋದೇನು?

    ‘ಮೈನಾ’ ಚಿತ್ರದ ನಿರ್ದೇಶಕ ನಾಗಶೇಖರ್ (Nagashekar) ಅವರು ಕಾರು ಅಪಘಾತದ (Car Accident) ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ಕಾರಿನಲ್ಲಿ ಹೋಗುವಾಗ ಸ್ವಲ್ಪ ಕಣ್ಮುಚ್ಚಿದೆ ಇದರಿಂದ ಅಪಘಾತವಾಗಿದೆ ಎಂದು ನಿರ್ದೇಶಕ ‘ಪಬ್ಲಿಕ್ ಟಿವಿ’ಗೆ ಮಾತನಾಡಿದ್ದಾರೆ. ಇದನ್ನೂ ಓದಿ:ದರ್ಶನ್ ಹೊಡೆತದಿಂದಲೇ ರೇಣುಕಾಸ್ವಾಮಿ ಸಾವು? – ಆ 3 ಹೊಡೆತಗಳ ಬಗ್ಗೆ ಚಾರ್ಜ್‌ಶೀಟ್‌ನಲ್ಲಿ ಉಲ್ಲೇಖ

    ಇಂದು ಮಧ್ಯಾಹ್ನ 1:30ಕ್ಕೆ ಕಾರಿನಲ್ಲಿ ಹೋಗುತ್ತಿರುವಾಗ ಅಪಘಾತವಾಗಿದೆ. ಈ ವೇಳೆ ಓರ್ವ ಮಹಿಳೆಗೆ ಗಾಯವಾಗಿದ್ದು, ಆಸ್ಪತ್ರೆಗೆ ಕರೆದುಕೊಂಡು ಹೋಗಿ ಚಿಕಿತ್ಸೆ ಕೊಡಿಸಲಾಗಿದೆ. ಅವರ ಕಾಲಿಗೆ ಸಣ್ಣದಾಗಿ ಗಾಯವಾಗಿರೋದಾಗಿ ತಿಳಿಸಿದ್ದಾರೆ. ಕಾರಿನಲ್ಲಿ ಹೋಗುವಾಗ ಸ್ವಲ್ಪ ಕಣ್ಮುಚ್ಚಿದ ಪರಿಣಾಮ ಅಪಘಾತಕ್ಕೆ ಕಾರಣವಾಯಿತು. ಕಾರು ಡ್ಯಾಮೇಜ್ ಆಗಿದೆ, ಅದು ಬಿಟ್ಟರೆ ನನಗೇನು ತೊಂದರೆ ಆಗಿಲ್ಲ ಎಂದು ನಾಗಶೇಖರ್ ಮಾತನಾಡಿದ್ದಾರೆ.

    ಅಂದಹಾಗೆ, ಮೈನಾ, ಸಂಜು ವೆಡ್ಸ್ ಗೀತಾ, ಅಮರ್ ಸೇರಿದಂತೆ ಹಲವು ಸಿನಿಮಾಗಳಿಗೆ ನಿರ್ದೇಶನ ಮಾಡಿದ್ದಾರೆ. ಪ್ರಸ್ತುತ `ಸಂಜು ವೆಡ್ಸ್ ಗೀತಾ 2′ ಚಿತ್ರಕ್ಕೆ ನಿರ್ದೇಶನ ಮಾಡಿದ್ದಾರೆ ನಾಗಶೇಖರ್.

  • ʻಮೈನಾʼ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಚಿತ್ರತಾರೆ ಭವ್ಯಾ

    ʻಮೈನಾʼ ಧಾರಾವಾಹಿಯಲ್ಲಿ ಕಾಣಿಸಿಕೊಂಡ ಚಿತ್ರತಾರೆ ಭವ್ಯಾ

    ದಯ ಟಿವಿಯಲ್ಲಿ ಪ್ರತಿದಿನ ರಾತ್ರಿ 9 ಗಂಟೆಗೆ ಪ್ರಸಾರವಾಗುತ್ತಿರುವ ʻಮೈನಾʼ (Maina) ಧಾರಾವಾಹಿಯಲ್ಲಿ (Serial) 90ರ ದಶಕದ ಬಹುಬೇಡಿಕೆಯ ನಾಯಕಿ, ಚಿತ್ರತಾರೆ ಭವ್ಯಾ (Bhavya) ನಟಿಸುತ್ತಿದ್ದಾರೆ. ಪ್ರೇಮಪರ್ವ, ಪ್ರಳಯಾಂತಕ, ನೀ ಬರೆದ ಕಾದಂಬರಿ, ಕೃಷ್ಣ ನೀ ಬೇಗನೆ ಬಾರೋ, ಕರುಣಾಮಯಿ, ಹೃದಯಗೀತೆ, ಮತ್ತೆ ಹಾಡಿತು ಕೋಗಿಲೆ, ಹೃದಯ ಹಾಡಿತು‌, ಸಾಂಗ್ಲಿಯಾನ ಇತ್ಯಾದಿ ಸೂಪರ್‌ ಹಿಟ್‌ ಸಿನಿಮಾಗಳಲ್ಲಿ ವಿಷ್ಣುವರ್ಧನ್‌, ಶಂಕರನಾಗ್‌, ಅಂಬರೀಶ್‌, ರವಿಚಂದ್ರನ್ ಮತ್ತಿತರ ದಿಗ್ಗಜ ಕಲಾವಿದರ ಜೊತೆ ನಾಯಕಿಯಾಗಿ ಕನ್ನಡ ಚಿತ್ರರಂಗದಲ್ಲಿ ಛಾಪು ಮೂಡಿಸಿದ್ದ ಭವ್ಯಾ, ಟಿವಿ ಧಾರಾವಾಹಿಯಲ್ಲಿ ನಟಿಸುತ್ತಿರುವುದು ಇದೇ ಮೊದಲು.

    ಭವ್ಯಾ ಅವರದು ʻಮೈನಾʼ ಧಾರಾವಾಹಿಯಲ್ಲಿ ಮಹಿಳಾ ಹಾಸ್ಟೆಲ್‌ ಮುಖ್ಯಸ್ಥೆ ಅರುಂಧತಿಯ ಪಾತ್ರ. ಕಟ್ಟುನಿಟ್ಟಾದರೂ ತಾಯಿ ಹೃದಯಿ. ಊರು ಬಿಟ್ಟು ಪರವೂರಿಗೆ ಬಂದಿರುವ ಹೆಣ್ಣುಮಕ್ಕಳೇ ಹೆಚ್ಚಿರುವ ಜಾಗದಲ್ಲಿ ಎಲ್ಲರನ್ನೂ ನಿಯಂತ್ರಿಸುತ್ತ ಎಲ್ಲರ ಸಮಸ್ಯೆಗಳಿಗೂ ಸ್ಪಂದಿಸುತ್ತ ಎಲ್ಲರ ಭಾವನೆಗಳಿಗೂ ಬೆಲೆ ಕೊಡುವ ಅಪರೂಪದ ಪಾತ್ರ. ಮೈನಾ ಜೀವನದಲ್ಲಿ ಹಠಾತ್ತನೆ ಬರುವ ಅನಿರೀಕ್ಷಿತ ತಿರುವು ಕಂಗೆಡಿಸಿದಾಗ ಅವಳಿಗೆ ಆಸರೆಯಾಗಿ ನಿಲ್ಲುತ್ತಾಳೆ ಅರುಂಧತಿ. ಹಾಗೆಯೇ ಇವರ ಮಹಿಳಾ ಹಾಸ್ಟೆಲ್‌ನಲ್ಲಿರುವ ಇತರ ನಾಲ್ಕು ಹೆಣ್ಣುಮಕ್ಕಳೂ ʻಮೈನಾʼ ಧಾರಾವಾಹಿಯ ಮಹತ್ವದ ಪಾತ್ರಗಳಾಗಿ ಬರುತ್ತಾರೆ.

     

    ಮಹಿಳಾ ಹಾಸ್ಟೆಲ್‌ ಈ ಧಾರಾವಾಹಿಯಲ್ಲಿ ಒಂದು ಬಹುಮುಖ್ಯ ಅಂಗವೇ ಆಗಿದೆ.  ʻಮೈನಾʼ ಧಾರಾವಾಹಿ ಪ್ರತಿದಿನ(ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗುತ್ತದೆ.

  • ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ಕಿರುತೆರೆ ಲೋಕದಲ್ಲಿ ಮತ್ತೊಂದು ಹೊಸ ಧಾರಾವಾಹಿ: ಕಿರಿಮಗಳ ಹಿರಿ ಜವಾಬ್ದಾರಿ ಕಥೆ ಮೈನಾ

    ದಯ ಟಿವಿ ತನ್ನ ವಿಭಿನ್ನ ಧಾರಾವಾಹಿಗಳ ಮೂಲಕ ವೀಕ್ಷಕರಿಗೆ ಮನರಂಜನೆ ಉಣಬಡಿಸುತ್ತಿದೆ. ಸಂಜೆ 6 ರಿಂದ ರಾತ್ರಿ 10 ಗಂಟೆಯವರೆಗೆ ಕನ್ಯಾದಾನ, ಗಂಗೆಗೌರಿ, ಅಣ್ಣತಂಗಿ, ಶಾಂಭವಿ, ಸೇವಂತಿ, ರಾಧಿಕಾ, ಜನನಿ, ಗೌರಿಪುರದ ಗಯ್ಯಾಳಿಗಳು ವೈವಿಧ್ಯಮಯ ನೈಜ ಕತೆಗಳಿಂದ ಜನಮನ ಗೆದ್ದಿವೆ. ಹೊಸ ಧಾರಾವಾಹಿ (Serial) ʼಮೈನಾʼ (Maina) ಈ ಸಾಲಿಗೆ ವಿಶಿಷ್ಟ ಸೇರ್ಪಡೆ. ಫೆಬ್ರುವರಿ 19 ರಿಂದ ಪ್ರತಿದಿನ ರಾತ್ರಿ 9 ಗಂಟೆಗೆ ʻಮೈನಾʼ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

    ಮೈಲಾರಕೋಟೆ ಮೈನಾ ಮನೆಗೆ ಕಿರಿಮಗಳು. ಊರಲ್ಲಿ ಅಲೆಮಾರಿ, ಪರರಿಗೆ ಉಪಕಾರಿ. ಚಿಕ್ಕ ಪೆಟ್ಟಿಗೆ ಅಂಗಡಿ ನಡೆಸುತ್ತಿರುವ ನೀತಿವಂತ ಅಪ್ಪ ಮುತ್ತಣ್ಣ, ಅವರಿವರ ಹೊಲದಲ್ಲಿ ಕೂಲಿ ಮಾಡಿ ಸಂಸಾರದ ನೊಗಕ್ಕೆ ಹೆಗಲು ಕೊಟ್ಟಿರುವ ಅಮ್ಮ, ಸೀತೆಯಂಥ ಅಕ್ಕ ರಾಧೆ, ಕಾಲೇಜಿಗೆ ಹೋಗುತ್ತಿರುವ ಅಣ್ಣ.. ಮೈನಾಳ ಪುಟ್ಟ ಗೂಡಲ್ಲಿ ದುಡ್ಡಿಗೆ ಕೊರತೆ; ಪ್ರೀತಿ ವಾತ್ಸಲ್ಯಕ್ಕಲ್ಲ.

    ಅಕ್ಕ ರಾಧೆಗೆ ಮದುವೆ ವಯಸ್ಸು ಮೀರುತ್ತಿದೆ; ಸಂಬಂಧ ಕೂಡಿ ಬರುತ್ತಿಲ್ಲ. ಒಂದೊಂದು ಸಲವೂ ಒಂದೊಂದು ಕಾರಣಕ್ಕೆ ಮದುವೆ ಮುರಿದುಹೋಗುತ್ತಿದೆ. ಕೆಲವೊಂದು ಸಂಬಂಧ ಮುರಿಯಲು ಮೈನಾ ನೆಪವಾಗುತ್ತಾಳೆ. ಕಟ್ಟಕಡೆಯದಾಗಿ, ಜವಾಬ್ದಾರಿ ಹೊರಬೇಕಾದ ಅಣ್ಣನೇ ಕೈ ಕೊಟ್ಟು ಹೋದಾಗ ಕಿರಿಮಗಳಾದ ಮೈನಾ ಅಕ್ಕನ ಮದುವೆಯ ಹಿರಿಯ ಜವಾಬ್ದಾರಿ ಹೊತ್ತು ಪಟ್ಟಣಕ್ಕೆ ಹೊರಡುತ್ತಾಳೆ. ಅಲ್ಲಿಂದ ಅವಳ ಪ್ರಯಾಣ ಅನೂಹ್ಯ ತಿರುವುಗಳನ್ನು ಪಡೆದುಕೊಳ್ಳುತ್ತದೆ.

    ಮೈನಾ ಪಾತ್ರದಲ್ಲಿ ಜನಪ್ರಿಯ ಕಲಾವಿದೆ ವಿಜಯಲಕ್ಷ್ಮಿ ನಟಿಸುತ್ತಿದ್ದಾರೆ.  ನಾಗಾಭರಣ (Nagabharana), ಅಪೂರ್ವ, ಅಂಜಲಿ, ಮಾನಸಿ ಜೋಶಿ, ಸಚಿನ್, ಸಿದ್ದಾರ್ಥ್, ಪ್ರಭಂಜನ, ಸಾಗರ್, ಹರ್ಷಾರ್ಜುನ್, ಯಶಸ್ವಿನಿ, ಆಶಾ, ಅನುಷಾ, ಕು.ತಿಶ್ಯ, ಮಾ.ಅರುಣ್, ಮಾ.ರಣವೀರ್ ಮುಂತಾದವರ ತಾರಾಗಣವಿದೆ. ಚಿತ್ರತಾರೆ ಭವ್ಯ ಅಪರೂಪದ ವಿಶಿಷ್ಟ ಪಾತ್ರವೊಂದರಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.  ಈ ಧಾರಾವಾಹಿಯ ನಿರ್ದೇಶಕರು ಸಂತೋಷ್ ಗೌಡ ಹಾಸನ,  ಛಾಯಾಗ್ರಹಣ ಜಗದೀಶ್ ವಾಲಿ ಹಾಗೂ ದಯಾಕರ್, ಸಂಗೀತ ಮಣಿಕಾಂತ ಕದ್ರಿ, ಸಾಹಿತ್ಯ ಕೆ. ಕಲ್ಯಾಣ್, ಸಂಕಲನ ಪ್ರಕಾಶ ಕಾರಿಂಜ ಅವರದ್ದು.

     

    ಆನಂದ್ ಆಡಿಯೋ ಕಂಪನಿಯ ಸಹಸಂಸ್ಥೆ ʻಕೋಮಲ್ ಎಂಟರ್ಪ್ರೈಸಸ್ʼ ಬ್ಯಾನರ್ ಅಡಿ ಈ ಧಾರಾವಾಹಿ ನಿರ್ಮಾಣವಾಗುತ್ತಿದೆ. ಮಹಿಳೆಯರ ಆತ್ಮಬಲದ ಪ್ರತೀಕವಾಗಿ ʻಮೈನಾʼ ಮೂಡಿಬರಲಿದೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸುತ್ತಾರೆ ಉದಯ ಟಿವಿ ಕಾರ್ಯಕ್ರಮ ಮುಖ್ಯಸ್ಥರು. ʻಮೈನಾʼ ಧಾರಾವಾಹಿ ಫೆಬ್ರುವರಿ 19 ರಿಂದ ಪ್ರತಿದಿನ (ಸೋಮವಾರದಿಂದ ಭಾನುವಾರ) ರಾತ್ರಿ 9 ಗಂಟೆಗೆ ಉದಯ ಟಿವಿಯಲ್ಲಿ ಪ್ರಸಾರವಾಗಲಿದೆ.

  • ಮದುವೆ ಪ್ಲ್ಯಾನ್ ಬಗ್ಗೆ ಮೌನ ಮುರಿದ ‘ಮೈನಾ’ ನಟಿ ನಿತ್ಯಾ

    ಮದುವೆ ಪ್ಲ್ಯಾನ್ ಬಗ್ಗೆ ಮೌನ ಮುರಿದ ‘ಮೈನಾ’ ನಟಿ ನಿತ್ಯಾ

    ಬೆಂಗಳೂರಿನ ಬೆಡಗಿ ನಿತ್ಯಾ ಮೆನನ್ (Nithya Menen) ಅವರು ಬಹುಭಾಷಾ ನಟಿಯಾಗಿ ಗುರುತಿಸಿಕೊಂಡಿದ್ದಾರೆ. ಸಿನಿಮಾಗಳ ಜೊತೆ ಆಗಾಗ ವೈಯಕ್ತಿಕ ವಿಚಾರವಾಗಿ ‘ಮೈನಾ’ ನಟಿ ಸುದ್ದಿಯಾಗುತ್ತಾರೆ. ಹೀಗಿರುವಾಗ ಸಂದರ್ಶನವೊಂದರಲ್ಲಿ, ನಟಿ ತಮ್ಮ ಮದುವೆ (Wedding)  ಪ್ಲ್ಯಾನ್ ಬಗ್ಗೆ ಬಾಯ್ಬಿಟ್ಟಿದ್ದಾರೆ.

    ಮದುವೆ ಬಗ್ಗೆ ತಮ್ಮ ಆಲೋಚನೆ ಏನು ಎಂಬುದನ್ನ ನಟಿ ಮಾತನಾಡಿದ್ದು, ನಾನು ಎಲ್ಲವನ್ನೂ ಮೀರಿ ಬೆಳೆದಿದ್ದೆ ನಾನು ಏನು ಮಾಡಬೇಕು ಎಂಬುದನ್ನು ಮತ್ತೊಬ್ಬರು ಹೇಳಬೇಕು ಬಯಸೋದಿಲ್ಲ. ಪಾಲಕರು ಈ ವಿಚಾರದಲ್ಲಿ ನನ್ನನ್ನು ಅರ್ಥ ಮಾಡಿಕೊಂಡಿದ್ದಾರೆ. ನನಗೆ ಅವರು ಸ್ವಾತಂತ್ರ‍್ಯ ನೀಡಿದ್ದಾರೆ. ಸ್ವಾತಂತ್ರ‍್ಯ ಇಲ್ಲದೆ ನನಗೆ ಬದುಕೋಕೆ ಆಗಲ್ಲ. ಅದು ಅವರಿಗೆ ಗೊತ್ತು ಎಂದಿದ್ದಾರೆ ನಿತ್ಯಾ. ಇದನ್ನೂ ಓದಿ:ನಿಮ್ಮ ಚಿನ್ನದ ಮೊಬೈಲ್ ನನಗೆ ಸಿಕ್ಕಿದೆ, ನನ್ನ ಬೇಡಿಕೆ ಈಡೇರಿಸ್ತೀರಾ? ನಟಿಗೆ ಬಂತು ಇ-ಮೇಲ್

    ನನ್ನ ಅಜ್ಜಿ ಬದುಕಿದ್ದಾಗ ಅವರ ಕಡೆಯಿಂದ ಮದುವೆಯಾಗಬೇಕೆಂಬ ಒತ್ತಡವಿತ್ತು. ನಾನು ನಟಿ ಎಂಬ ಬಗ್ಗೆ ಅವರು ತಲೆಕೆಡಿಸಿಕೊಂಡಿರಲಿಲ್ಲ. ನೀನು ಜೀವನದಲ್ಲಿ ಏನನ್ನೂ ಮಾಡುತ್ತಿಲ್ಲ. ನೀನು ಯಾಕೆ ಮದುವೆಯಾಗಬಾರದು ಎಂದು ಅಜ್ಜಿ ನನಗೆ ಕೇಳುತ್ತಲೇ ಇದ್ದರು. ಅವರು ಇಂದು ನಮ್ಮೊಂದಿಗೆ ಇಲ್ಲ. ಅವರ ಬಿಟ್ಟು ಈ ವಿಚಾರದಲ್ಲಿ ಇನ್ಯಾರೂ ನಮ್ಮ ಮನೆಯಲ್ಲಿ ಹೆಚ್ಚು ತಲೆಕೆಡಿಸಿಕೊಂಡಿಲ್ಲ ಎನ್ನುತ್ತಾರೆ.

    30 ವರ್ಷ ದಾಟಿದಾಗ ಮದುವೆ ಬಗ್ಗೆ ಒತ್ತಡ ಬರುತ್ತದೆ. ಈ ಸಂದರ್ಭದಲ್ಲಿ ಹಲವು ಬಾಕ್ಸ್‌ಗಳನ್ನ ಟಿಕ್ ಮಾಡಬೇಕು. ಸಮಾಜ ಅಂದುಕೊಂಡ ವಿಚಾರವನ್ನು ಪಾಲಿಸಿದರೆ ಒಳ್ಳೆಯವರು ಎನಿಸಿಕೊಳ್ಳುತ್ತೀರಿ. ಇಲ್ಲವಾದರೆ ನಿಮಗೆ ಕೆಟ್ಟವರು ಎನ್ನುವ ಪಟ್ಟ ಸಿಗುತ್ತದೆ ಎಂದು ನಿತ್ಯಾ ಮುಕ್ತವಾಗಿ ಮಾತನಾಡಿದ್ದಾರೆ.

    ನಿತ್ಯಾ ಮೆನನ್ ಅವರು ನಟ ಚೇತನ್ ಜೊತೆ ಮೈನಾ(Mynaa), ಸುದೀಪ್ (Sudeep) ಜೊತೆ ಕೋಟಿಗೊಬ್ಬ 2, ‘ಐದು ಒಂದ್ಲಾ ಐದು’ ಎಂಬ ಚಿತ್ರಗಳಲ್ಲಿ ನಟಿಸಿದ್ದಾರೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

    ನಿತ್ಯಾ ಮೆನನ್ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ರಾ? ಮೈನಾ ನಟಿ ಸ್ಪಷ್ಟನೆ

    ನ್ನಡದ ನಟಿ ನಿತ್ಯಾ ಮೆನನ್ (Nithya Menen) ಮತ್ತೆ ಸುದ್ದಿಯಲ್ಲಿದ್ದಾರೆ. ನಟಿ ಜೊತೆ ತಮಿಳು ನಟ ಅನುಚಿತವಾಗಿ ವರ್ತಿಸಿದ್ದಾರೆ ಎನ್ನಲಾದ ಸುದ್ದಿ ಮತ್ತೆ ವೈರಲ್ ಆಗ್ತಿದ್ದು, ಈ ಬಗ್ಗೆ ‘ಮೈನಾ’ (Mynaa) ನಾಯಕಿ ನಿತ್ಯಾ ಮೆನನ್ ಸ್ಪಷ್ಟನೆ ನೀಡಿದ್ದಾರೆ.

    ಕಾಲಿವುಡ್‌ನ ನಾಯಕನೊಬ್ಬ (Kollywood Hero) ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ ಎಂಬ ಎನ್ನಲಾದ ಸುದ್ದಿಗೆ ನಿತ್ಯಾ ಮೆನನ್ ಪ್ರತಿಕ್ರಿಯಿಸಿ, ಈ ಸುದ್ದಿ ಸುಳ್ಳು ಎಂದು ನಟಿ ಸೋಶಿಯಲ್ ಮೀಡಿಯಾದಲ್ಲಿ ಸ್ಪಷ್ಟನೆ ನೀಡಿದ್ದಾರೆ.

    ತಮಿಳು ನಟ, ತಮಿಳು ಚಿತ್ರರಂಗದ ವಿರುದ್ಧ ತಾವು ಯಾವುದೇ ಹೇಳಿಕೆ ನೀಡಿಲ್ಲ. ಇದೆಲ್ಲಾ ಸುಳ್ಳು ಸುದ್ದಿ ಎಂದು ಸ್ವತಃ ನಟಿ ಸ್ಪಷ್ಟನೆ ನೀಡಿದ್ದಾರೆ. ಸುಳ್ಳು ಸುದ್ದಿ ವೈರಲ್ ಆಗಿರೋದ್ದಕ್ಕೆ ಅಸಮಾಧಾನ ಹೊರಹಾಕಿದ್ದಾರೆ.

    ಕುಮಾರಿ ಶ್ರೀಮತಿ ಎಂಬ ವೆಬ್ ಸಿರೀಸ್‌ನಲ್ಲಿ ನಿತ್ಯಾ ಮೆನನ್ ನಟಿಸಿದ್ದಾರೆ. ಸೆ.28ಕ್ಕೆ ಬಹುಭಾಷೆಗಳಲ್ಲಿ ಓಟಿಟಿಯಲ್ಲಿ ರಿಲೀಸ್ ಆಗುತ್ತಿದೆ.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ದಲಿತಕೇರಿಯಲ್ಲಿ ಮಾತ್ರ ಈ ರೀತಿ ನಡೆದಿದೆ: ಕಲುಷಿತ ನೀರು ಸೇವಿಸಿ ಐವರ ಸಾವಿನ ಬಗ್ಗೆ ಚೇತನ್‌ ಪ್ರತಿಕ್ರಿಯೆ

    ದಲಿತಕೇರಿಯಲ್ಲಿ ಮಾತ್ರ ಈ ರೀತಿ ನಡೆದಿದೆ: ಕಲುಷಿತ ನೀರು ಸೇವಿಸಿ ಐವರ ಸಾವಿನ ಬಗ್ಗೆ ಚೇತನ್‌ ಪ್ರತಿಕ್ರಿಯೆ

    ಕವಾಡಿಗರಹಟ್ಟಿಗೆ ಭೇಟಿ ನೀಡಿ ಮೃತರ ಕುಟುಂಬಸ್ಥರಿಗೆ ನಟ ಚೇತನ್‌ ಸಾಂತ್ವನ

    ಚಿತ್ರದುರ್ಗ (Chitradurga) ನಗರದ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು(Polluted Water Case) ಸೇವಿಸಿ ಐವರು ಸಾವನ್ನಪ್ಪಿದ್ದರು. ಮೃತರ ಕುಟುಂಬಗಳಿಗೆ ಸಾಂತ್ವನ ಹೇಳಲು ಸ್ಯಾಂಡಲ್‌ವುಡ್ ನಟ ಚೇತನ್ (Actor Chethan) ಭೇಟಿ ನೀಡಿದ್ದಾರೆ. ಈ ವೇಳೆ ನಟನ ಜೊತೆ ಡಿಎಸ್‌ಎಸ್ ಮುಖಂಡರು ಸಾಥ್ ನೀಡಿದ್ದಾರೆ.

    ಜುಲೈ 30ರಿಂದ ಇಲ್ಲಿಯವರೆಗೆ ಕವಾಡಿಗರಹಟ್ಟಿಯಲ್ಲಿ ಕಲುಷಿತ ನೀರು ಸೇವಿಸಿ ನೂರಾರು ಜನರು ಅಸ್ವಸ್ಥರಾಗಿದ್ದರು. ಬಳಿಕ ಐವರು ಮೃತಪಟ್ಟಿದ್ದರು. ಕವಾಡಿಗರಹಟ್ಟಿಯಲ್ಲಿ ಸೂತಕದ ಛಾಯೆ ಮನೆ ಮಾಡಿದ್ದು, ಮೈನಾ ಹೀರೋ ಚೇತನ್, ಕುಟುಂಬಸ್ಥರ ಮನೆಗೆ ಭೇಟಿ ನೀಡಿ ಬಂದಿದ್ದಾರೆ. ಬಳಿಕ ಈ ಪ್ರಕರಣದ ಬಗ್ಗೆ ನಟ ಪ್ರತಿಕ್ರಿಯೆ ನೀಡಿದ್ದಾರೆ.

    ದಲಿತಕೇರಿಯಲ್ಲಿ ಮಾತ್ರ ಈ ರೀತಿ ಪ್ರಕರಣ ನಡೆದಿದೆ. ಇಡೀ ಸರ್ಕಾರಿ ವ್ಯವಸ್ಥೆಯ ವೈಫಲ್ಯ ಈ ಪ್ರಕರಣದಿಂದ ಎದ್ದು ಕಾಣುತ್ತಿದೆ. ದ್ವೇಷದಿಂದ ವಿಷ ಬೆರೆಸಿದ ಆರೋಪದ ಬಗ್ಗೆಯೂ ತನಿಖೆ ನಡೆಯಲಿ. ಸರ್ಕಾರದಿಂದ ಪ್ರಕರಣ ಮುಚ್ಚಿ ಹಾಕುವ ಯತ್ನ ನಡೆಯುತ್ತಿದೆ. ಕವಾಡಿಗರಹಟ್ಟಿ ಪ್ರಕರಣದ ಬಗ್ಗೆ ಉನ್ನತಮಟ್ಟದ ತನಿಖೆ ಆಗಲೇಬೇಕು ಎಂದು ನಟ ಮಾತನಾಡಿದ್ದಾರೆ. ಎಸ್‌ಸಿಪಿ, ಟಿಎಸ್‌ಪಿ ಹಣ ಸರ್ಕಾರದಿಂದ ದುರ್ಬಳಕೆಯಾಗಿದೆ. ದಲಿತರ ಅಭಿವೃದ್ಧಿಗೆ ಎಂದು ಮೀಸಲಿದ್ದ ಹಣವನ್ನ 5 ಗ್ಯಾರಂಟಿಗೆ ಸರ್ಕಾರ ಬಳಕೆ ಮಾಡಿದೆ ಎಂದು ಚೇತನ್ ಆರೋಪ ಮಾಡಿದ್ದಾರೆ. ಇದನ್ನೂ ಓದಿ:ಬಿಪಾಶಾ ಬಸು ಮಗಳ ಹಾರ್ಟ್‌ನಲ್ಲಿ ಹೋಲ್- ಕಣ್ಣೀರಿಟ್ಟ ನಟಿ

    ಐವರು ಮೃತಪಟ್ಟ ಕುಟುಂಬಸ್ಥರ ಮನೆಗೆ ಆರೋಗ್ಯ ಸಚಿವ ದಿನೇಶ್ ಗಂಡೂರಾವ್ (Dinesh Gundu Rao) ಅವರು ಭೇಟಿ ನೀಡಿ ಸಾಂತ್ವನ ಹೇಳಿದ್ದರು. ಬಳಿಕ ಆ ಕುಟುಂಬಗಳಿಗೆ ತಲಾ 10 ಲಕ್ಷ ರೂಪಾಯಿ ಚೆಕ್ ನೀಡಿದ್ದರು.

    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ತಮಿಳಿನ ಆ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಿತ್ಯಾ

    ತಮಿಳಿನ ಆ ನಟ ನನ್ನೊಂದಿಗೆ ಅನುಚಿತವಾಗಿ ವರ್ತಿಸಿದ- ಕಾಸ್ಟಿಂಗ್ ಕೌಚ್ ಬಗ್ಗೆ ಕರಾಳ ಸತ್ಯ ಬಿಚ್ಚಿಟ್ಟ ನಿತ್ಯಾ

    ಕಾಸ್ಟಿಂಗ್ ಕೌಚ್ (Casting Couch) ಎಂಬುದು ಚಿತ್ರರಂಗದಲ್ಲಿರುವ ಕೆಟ್ಟ ಪಿಡುಗು. ಅವಕಾಶಕ್ಕಾಗಿ ಪಲ್ಲಂಗ ಏರುವ ಬಗ್ಗೆ ಈಗಾಗಲೇ ಅನೇಕ ನಟ-ನಟಿಯರು ಸಿಡಿದೆದಿದ್ದಾರೆ. ಕಾಸ್ಟಿಂಗ್ ಕೌಚ್ ಬಗ್ಗೆ ಅನೇಕ ನಟಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದೀಗ ತಾವು ಎದುರಿಸಿದ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ನಟಿ ನಿತ್ಯಾ ಮೆನನ್ (Nithya Menon) ಮಾತನಾಡಿದ್ದಾರೆ. ಕರಾಳ ಅನುಭವದ ಬಗ್ಗೆ ಬಿಚ್ಚಿದ್ದಾರೆ.

    ಕೋಟಿಗೊಬ್ಬ 2 (Kotigobba 2), ಮೈನಾ (Mynaa) ಕನ್ನಡದ ಹಲವು ಸಿನಿಮಾಗಳಲ್ಲಿ ನಿತ್ಯಾ ಮೆನನ್ ಗಮನ ಸೆಳೆದಿದ್ದಾರೆ. ಕನ್ನಡ, ತೆಲುಗು, ತಮಿಳು, ಮಲಯಾಳಂ, ಹಿಂದಿ, ಇಂಗ್ಲಿಷ್ ಭಾಷೆಯ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈಗ ಕಾಸ್ಟಿಂಗ್ ಕೌಚ್ ಬಗ್ಗೆ ಮೈನಾ ಬ್ಯೂಟಿ ನಿತ್ಯಾ ಮೆನನ್ ಬಾಯ್ಬಿಟ್ಟಿದ್ದಾರೆ. ಈ ಬಗ್ಗೆ ಮಾತನಾಡಿ, ಎಲ್ಲಾ ಭಾಷೆಯಲ್ಲಿ ನಟಿಸಿದ್ದೀನಿ, ಆದರೆ ಟಾಲಿವುಡ್‌ನಲ್ಲಿ ಯಾವುದೇ ಸಮಸ್ಯೆಯಾಗಿಲ್ಲ, ತೆಲುಗು ಚಿತ್ರರಂಗದಲ್ಲಿ ತನಗೆ ಯಾರೂ ತೊಂದರೆ ಕೊಟ್ಟಿಲ್ಲ ಎಂದು ಹೇಳಿದ್ದಾರೆ. ಆದರೆ ತಮಿಳು ಸಿನಿಮಾರಂಗದಲ್ಲಿ ಕೆಲವು ತೊಂದರೆಗಳನ್ನು ಎದುರಿಸಿದ್ದೇನೆ ಎಂದು ಹೇಳುವ ಮೂಲಕ ಶಾಕ್ ನೀಡಿದ್ದಾರೆ. ಇದನ್ನೂ ಓದಿ:ಅಪ್ಪಂದಿರ ದಿನಾಚರಣೆಗೆ ವಿಶೇಷ ಪೋಸ್ಟ್ ಹಂಚಿಕೊಂಡ ರಾಧಿಕಾ ಪಂಡಿತ್

    ಕಾಲಿವುಡ್‌ನ (Kollywood) ನಾಯಕನೊಬ್ಬ ತನ್ನೊಂದಿಗೆ ಅನುಚಿತವಾಗಿ ವರ್ತಿಸಿದ್ದಾನೆ. ಶೂಟಿಂಗ್ ಸಮಯದಲ್ಲಿ ಅವರು ತನ್ನನ್ನು ಸ್ಪರ್ಶಿಸುವ ಮೂಲಕ ತುಂಬಾ ಹಿಂಸೆ ನೀಡಿದ್ದರು ಎಂದು ನಿತ್ಯಾ ಹೇಳಿದರು. ಆದರೆ ಆ ನಾಯಕ ಯಾರು ಎನ್ನುವ ಬಗ್ಗೆ ನಿತ್ಯಾ ಬಹಿರಂಗಪಡಿಸಿಲ್ಲ. ನಾಯಕನ ಹುಚ್ಚು ವರ್ತನೆಯಿಂದ ಸರಿಯಾಗಿ ಶೂಟಿಂಗ್‌ನಲ್ಲಿ ಭಾಗವಹಿಸಲು ಆಗುತ್ತಿರಲಿಲ್ಲ ಎಂದು ನಿತ್ಯಾ ಮೆನನ್ ಹೇಳಿದ್ದಾರೆ. ಮಹಿಳೆಯರಿಗೆ ಆ ರೀತಿ ತೊಂದರೆ ಕೊಟ್ಟರೆ ಯಾವುದೇ ಕ್ಷೇತ್ರದಲ್ಲಿ ಕೆಲಸ ಮಾಡುವುದು ತುಂಬಾ ಕಷ್ಟ. ಹಾಗಾಗಿಯೇ ಈಗ ಎಷ್ಟೋ ಮಹಿಳೆಯರು ಹೊರಗೆ ಹೋಗಿ ಕೆಲಸ ಮಾಡಲು ಹೆದರುತ್ತಿದ್ದಾರೆ ಎಂದು ನಿತ್ಯಾ ಹೇಳಿದ್ದಾರೆ.

    ಇದೀಗ ನಿತ್ಯಾ ಮೆನನ್ ಹೋರಾಟಕ್ಕೆ ಬೆಂಬಲ ಸಿಕ್ಕಿದೆ. ಆದರೆ ನಿತ್ಯಾ ಮೆನನ್‌ಗೆ ಇಷ್ಟೊಂದು ಕಿರುಕುಳ ನೀಡಿದ ತಮಿಳಿನ ಹೀರೋ ಯಾರು ಎಂಬ ಬಗ್ಗೆ ಜನರಲ್ಲಿ ಭಾರೀ ಕುತೂಹಲ ಹೆಚ್ಚಾಗಿದೆ. ಯಾರೆಂದು ತಲೆಕೆಡಿಸಿಕೊಂಡಿದ್ದಾರೆ. ತಮಿಳಿನ ಅನೇಕ ಸಿನಿಮಾಗಳಲ್ಲಿ ನಿತ್ಯಾ ನಟಿಸಿದ್ದಾರೆ. ಹಾಗಾಗಿ ಯಾರೆಂದು ಗುರುತಿಸುವುದು ಕಷ್ಟವಾಗಿದೆ.

  • ಅಂಬೇಡ್ಕರ್‌ ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ: ನಟ ಚೇತನ್

    ಅಂಬೇಡ್ಕರ್‌ ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ: ನಟ ಚೇತನ್

    `ಆ ದಿನಗಳು’ (Aa Dinagalu) ಖ್ಯಾತಿಯ ಚೇತನ್ ಸದಾ ಒಂದಲ್ಲಾ ಒಂದು ಕಾಂಟ್ರವರ್ಸಿಯ ಮೂಲಕ ಸುದ್ದಿಯಲ್ಲಿರುತ್ತಾರೆ. ಇದೀಗ ನಾಟಕವೊಂದರಲ್ಲಿ ವಿದ್ಯಾರ್ಥಿಗಳು ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿರುವ ಆರೋಪ ಕೇಳಿ ಬಂದಿದೆ. ನಾಟಕದಲ್ಲಿ ನಟಿಸಿದ ವಿದ್ಯಾರ್ಥಿಗಳನ್ನು ವಿಶ್ವವಿದ್ಯಾನಿಲಯವು ಅಮಾನತು ಮಾಡಲಾಗಿದೆ. ವಿಶ್ವವಿದ್ಯಾನಿಲಯದ ನಡೆಯ ಬಗ್ಗೆ ನಟ ಚೇತನ್ ಕಿಡಿಕಾರಿದ್ದಾರೆ. ಅಂಬೇಡ್ಕರ್‌ (Ambedkar) ವಿರುದ್ಧ ಹಾಸ್ಯ ಮಾಡುವುದು ಅಪರಾಧವಲ್ಲ ಎಂದು ನಟ ಚೇತನ್‌ (Actor Chethan) ವಾಗ್ದಾಳಿ ಮಾಡಿದ್ದಾರೆ.

    ಇತ್ತೀಚಿಗೆ ಬೆಂಗಳೂರಿನ (Bengalore) ಜೈನ್ ವಿಶ್ವವಿದ್ಯಾಲಯದ (Jain University) ಪ್ರದರ್ಶಿಸಿದ ಕಿರು ನಾಟಕದಲ್ಲಿ ಡಾ. ಬಿ.ಆರ್ ಅಂಬೇಡ್ಕರ್ ಬಗ್ಗೆ ಅವಹೇಳನ ಮಾಡಿ, ಜಾತಿ ನಿಂದನೆ ಮಾಡಿರುವ ಆರೋಪ ಕೇಳಿ ಬಂದಿದೆ. ಈ ಬಗ್ಗೆ ರಾಜ್ಯದ ಎಲ್ಲೆಡೆ ಆಕ್ರೋಶ ವ್ಯಕ್ತವಾಗಿದೆ. ಅನೇಕರು ಈ ಕಿರು ನಾಟಕದ ವಿರುದ್ಧ ಕಿಡಿಕಾರಿದ್ದಾರೆ. ನಾಟಕದಲ್ಲಿ ಅಭಿನಯಿಸಿದ ವಿದ್ಯಾರ್ಥಿಗಳನ್ನು ಅಮಾನತು ಗೊಳಿಸಿಸುವ ಮೂಲಕ ವಿಶ್ವವಿದ್ಯಾಲಯ ಕ್ರಮ ಕೈಗೊಂಡಿದ್ದಾರೆ. ಹಾಗೆಯೇ ಹಲವು ಕಡೆ ವಿದ್ಯಾರ್ಥಿಗಳ ವಿರುದ್ಧ ಠಾಣೆಗಳಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಆರೋಗ್ಯದ ಬಗ್ಗೆ ಅಪ್‌ಡೇಟ್ ನೀಡಿದ ನಟಿ ಸಮಂತಾ

    ಇದೀಗ ಈ ಬೆಳವಣಿಗೆಯ ಕುರಿತು ನಟ ಚೇತನ್ ಸೋಷಿಯಲ್ ಮೀಡಿಯಾದಲ್ಲಿ ಅಭಿಪ್ರಾಯ ಹೊರಹಾಕಿದ್ದಾರೆ. ಬಲವಾದ ಪ್ರಜಾಪ್ರಭುತ್ವಕ್ಕಾಗಿ, ಎಲ್ಲವನ್ನೂ ಮತ್ತು ಎಲ್ಲರನ್ನೂ ತಮಾಷೆ ಮಾಡುವ ಹಕ್ಕು ನಮಗಿರಬೇಕು. ನಾವುಗಳು ಮೋದಿಯನ್ನು ಅಪಹಾಸ್ಯ ಮಾಡುವ ಸ್ಟ್ಯಾಂಡ್‌-ಅಪ್ ಕಾಮಿಕ್ಸ್ ಮತ್ತು ನಾಟಕಗಳನ್ನು ಹೇಗೆ ಸೆನ್ಸಾರ್ ಮಾಡಬಾರದು, ರಾಮ/ ಮಹಮ್ಮದ್/ಬಸವ ಅಂಬೇಡ್ಕರ್/ದಲಿತರ ವಿರುದ್ಧ `ಹಾಸ್ಯ’ವನ್ನು ಕೂಡ ಅಪರಾಧವೆಂದು ಪರಿಗಣಿಸುವುದು ಮಾಡುವುದು ಪ್ರಜಾಪ್ರಭುತ್ವವಲ್ಲ ಎಂದು ನಟ ಟ್ವೀಟ್ ಮಾಡಿದ್ದಾರೆ.

    ಜೈನ್ ಯುನಿವರ್ಸಿಟಿಯ 6 ವಿದ್ಯಾರ್ಥಿಗಳ (6 Students) ಮೇಲೆ ಎಫ್‌ಐಆರ್/ ಅಮಾನತು ವಾಕ್ ಸ್ವಾತಂತ್ರ್ಯದ ವಿರುದ್ಧವಾಗಿದೆ ಎಂದು ಟ್ವೀಟ್ ಮಾಡುವ ಮೂಲಕ ನಟ ಚೇತನ್ ಕಿಡಿಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k