Tag: ಮೈದುನ

  • ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ಮೈದುನನ ಜೊತೆ ಲವ್ವಿಡವ್ವಿ – ಪತಿ ಕೊಂದು ಆಕಸ್ಮಿಕ ಸಾವು ಅಂತ ಬಿಂಬಿಸಿದ್ದ ಮಹಿಳೆ ಬಂಧನ

    ನವದೆಹಲಿ: ಆಕಸ್ಮಿಕ ವಿದ್ಯುತ್‌ ಆಘಾತದಿಂದ ದೆಹಲಿಯ ದೋಹ್ರದ ವ್ಯಕ್ತಿ ಸಾವು ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಮೈದುನನ ಜೊತೆ ಸೇರಿಕೊಂಡು ತನ್ನ ಗಂಡನನ್ನೇ ಮಹಿಳೆ ಕೊಲೆ ಮಾಡಿರುವುದು ತನಿಖೆಯಿಂದ ತಿಳಿದುಬಂದಿದೆ.

    ಜು.13 ರಂದು ಕರಣ್ ದೇವ್ (36) ಅವರನ್ನು ಮಾತಾ ರೂಪಾನಿ ಮ್ಯಾಗೊ ಆಸ್ಪತ್ರೆಗೆ ಪತ್ನಿ ಸುಶ್ಮಿತಾ ದಾಖಲಿಸಿದ್ದರು. ಆಕಸ್ಮಿಕವಾಗಿ ವಿದ್ಯುತ್ ಆಘಾತಕ್ಕೊಳಗಾಗಿದ್ದಾರೆ ಎಂದು ಹೇಳಿಕೊಂಡಿದ್ದರು. ವೈದ್ಯಕೀಯ ಪರೀಕ್ಷೆ ನಡೆಸಿದಾಗ, ವ್ಯಕ್ತಿ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸಿದರು. ಮೃತ ವ್ಯಕ್ತಿಯ ವಯಸ್ಸು ಮತ್ತು ಸಾವಿನ ಸಂದರ್ಭವನ್ನು ಉಲ್ಲೇಖಿಸಿ ದೆಹಲಿ ಪೊಲೀಸರು ಮರಣೋತ್ತರ ಪರೀಕ್ಷೆಗೆ ಒತ್ತಾಯಿಸಿದರು. ಇದಕ್ಕೆ ಮೃತ ವ್ಯಕ್ತಿಯ ಪತ್ನಿ ಮತ್ತು ಆತನ ಸೋದರಸಂಬಂಧಿ ರಾಹುಲ್ ಆಕ್ಷೇಪ ವ್ಯಕ್ತಪಡಿಸಿದರು.

    ಕೊನೆಗೆ ಪೊಲೀಸರು ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ದೀನ್ ದಯಾಳ್ ಉಪಾಧ್ಯಾಯ ಆಸ್ಪತ್ರೆಗೆ ರವಾನಿಸಿದರು. ಘಟನೆ ನಡೆದ ಮೂರು ದಿನಗಳ ನಂತರ, ಮೃತ ವ್ಯಕ್ತಿಯ ಕಿರಿಯ ಸಹೋದರ ಕುನಾಲ್ ಪೊಲೀಸ್‌ ಠಾಣೆಯಲ್ಲಿ ಕೊಲೆ ಪ್ರಕರಣ ದಾಖಲಿಸಿದ್ದಾರೆ. ಕರಣ್‌ನನ್ನು ಆತನ ಪತ್ನಿ ಮತ್ತು ಮೃತನ ಸೋದರಸಂಬಂಧಿ ಕೊಲೆ ಮಾಡಿದ್ದಾರೆ ಎಂದು ಪೊಲೀಸರಿಗೆ ತಿಳಿಸಿದ್ದಾನೆ. ಸುಶ್ಮಿತಾ ಮತ್ತು ರಾಹುಲ್ ನಡುವಿನ ಇನ್‌ಸ್ಟಾಗ್ರಾಮ್ ಚಾಟ್‌ನ ಪುರಾವೆಗಳನ್ನು ಸಹ ಒದಗಿಸಿದ್ದಾನೆ. ಚಾಟ್‌ನಲ್ಲಿ ಇಬ್ಬರೂ ಕೊಲೆ ಮಾಡುವ ಬಗ್ಗೆ ಸಂಚು ರೂಪಿಸಿರುವುದು ಬಹಿರಂಗವಾಗಿದೆ.

    ಮೃತನ ಪತ್ನಿ ಮತ್ತು ಆಕೆಯ ಮೈದುನನ ನಡುವೆ ಅನೈತಿಕ ಸಂಬಂಧವಿತ್ತು. ಇದರಿಂದಾಗಿ ಇಬ್ಬರೂ ಸೇರಿಕೊಂಡು ಕರಣ್‌ನನ್ನು ಕೊಲ್ಲಲು ನಿರ್ಧರಿಸಿದ್ದರು. ಊಟದ ಸಮಯದಲ್ಲಿ 15 ನಿದ್ರೆ ಮಾತ್ರೆಗಳನ್ನು ನೀಡಿ ಪ್ರಜ್ಞೆ ತಪ್ಪಿಸಿ, ಆಕಸ್ಮಿಕ ಸಾವು ಎಂದು ಬಿಂಬಿಸಲು ಕರಣ್‌ಗೆ ವಿದ್ಯುತ್ ಶಾಕ್ ನೀಡಿದ್ದಾರೆ.

    ಆರೋಪಿ ಪತ್ನಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ವಿಚಾರಣೆಯ ಸಮಯದಲ್ಲಿ ಆಕೆ ತನ್ನ ಪ್ರಿಯಕರ ಮೈದುನನ ಜೊತೆ ಸೇರಿಕೊಂಡು ಪತಿಯನ್ನು ಕೊಂದಿರುವುದಾಗಿ ಒಪ್ಪಿಕೊಂಡಿದ್ದಾಳೆ. ಪ್ರಾಥಮಿಕ ತನಿಖೆಯ ಆಧಾರದ ಮೇಲೆ, ಸೂಕ್ತ ವಿಭಾಗಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಬಂಧನ ಪ್ರಕ್ರಿಯೆ ನಡೆಯುತ್ತಿದೆ ಎಂದು ಡಿಸಿಪಿ ದ್ವಾರಕಾ ಅಂಕಿತ್ ಸಿಂಗ್ ಹೇಳಿದ್ದಾರೆ.

  • 10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    10 ಮದ್ವೆಯಾದ್ರೂ ಮಕ್ಕಳಾಗಲಿಲ್ಲ – ಸಾವಿಗೆ ಕಾರಣವಾಯ್ತು ಕೊನೆಯ ನಿರ್ಧಾರ

    – ಕಣ್ಣು ಕೆಂಪಾಗಿಸಿತ್ತು ಮೈದುನನ ನಿರ್ಧಾರ

    ಲಕ್ನೋ: 10 ಮದುವೆಯಾದರೂ ಮಕ್ಕಳಾಗದ ವ್ಯಕ್ತಿ ಅತ್ತಿಗೆಯಿಂದಲೇ ಕೊಲೆಯಾದ ಘಟನೆ ಉತ್ತರ ಪ್ರದೇಶದ ರಾಯಬರೇಲಿ ಜಿಲ್ಲೆಯ ಬೋಜಿಪುರದಲ್ಲಿ ನಡೆದಿದೆ.

    55 ವರ್ಷದ ಜಗನ್ ಲಾಲ್ ಕೊಲೆಯಾದ ವ್ಯಕ್ತಿ. ಜನವರಿ 20ರಂದು ಜಗನ್ ಕತ್ತು ಹಿಸುಕಿ ಕೊಲೆಗೈಯಲಾಗಿತ್ತು. ಸದ್ಯ ಪ್ರಕರಣವನ್ನ ಭೇದಿಸಿರುವ ಪೊಲೀಸರು ಜಗನ್ ಅತ್ತಿಗೆ ಸೇರಿದಂತೆ ನಾಲ್ವರನ್ನ ಬಂಧಿಸಿದ್ದಾರೆ. ಜಗನ್ 10 ಪತ್ನಿಯರ ಪೈಕಿ ಕೆಲವರು ಮೃತಪಟ್ಟಿದ್ರೆ, ಕೆಲವರು ಈತನಿಂದ ದೂರವಾಗಿದ್ದಾರೆ. ಇಬ್ಬರು ಪತ್ನಿಯರ ಜೊತೆ ಜಗನ್ ಗ್ರಾಮದಲ್ಲಿ ವಾಸವಾಗಿದ್ದನು. ಸಂತಾನಕ್ಕಾಗಿ ಜಗನ್ ಒಟ್ಟು 10 ಮದುವೆಯಾಗಿದ್ದರು.

    ಸಾವಿಗೆ ಕಾರಣ ‘ಆ’ ನಿರ್ಧಾರ: ಯೆಸ್, 10 ಮದುವೆಯಾದ ಜಗನ್ ತನಗೆ ಮಕ್ಕಳಾಗಲ್ಲೆಂಬ ಸತ್ಯ ಅರಿತಕೂಡಲೇ ತನ್ನ ಕೋಟ್ಯಂತರ ರೂ. ಮೌಲ್ಯದ 14 ಎಕರೆ ಜಮೀನು ತಮ್ಮನ್ನ ನೋಡಿಕೊಳ್ಳುತ್ತಿದ್ದ ಸಂಬಂಧಿ ಯುವಕನ ಹೆಸರಿಗೆ ಬರೆಯುವ ಬಗ್ಗೆ ಕುಟುಂಬಸ್ಥರ ಜೊತೆ ಚರ್ಚೆ ನಡೆಸಿದರು. ಈ ವಿಷಯ ಕೇಳಿದ ಜಗನ್ ಅತ್ತಿಗೆ ಮುನ್ನಿದೇವಿಯ ಚಡಪಡಿಸಿದ್ದಳು. 14 ಎಕರೆ ಜಮೀನು ಬೇರೆಯವರ ಪಾಲಾಗೋದನ್ನ ತಡೆಯಲು ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು.

    ಆಸ್ತಿಗಾಗಿ ಹಂತಕಿಯಾದ ಅತ್ತಿಗೆ: ತನ್ನ ಪರಿಚಯದ ಕೆಲ ಯುವಕರಿಗೆ ಹಣದಾಸೆ ತೋರಿಸಿದ ಮುನ್ನಿದೇವಿ ಮೈದುನನ ಕೊಲೆಗೆ ಸುಪಾರಿ ನೀಡಿದ್ದಳು. ಜನವರಿ 20ರಂದು ರಾತ್ರಿ ಒಂಟಿಯಾಗಿ ಹೊರಟಿದ್ದ ಜಗನ್ ಕತ್ತು ಹಿಸುಕಿ ಕೊಲ್ಲಲಾಗಿತ್ತು. ಕೊಲೆಯ ಬಳಿಕ ಆರೋಪಿಗಳು ಪರಾರಿಯಾಗಿದ್ದರು. ಕೊಲೆ ಬಳಿಕ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಆಸ್ತಿಗಾಗಿ ಹಂತಕಿಯಾಗಿದ್ದ ಮುನ್ನಿದೇವಿಯನ್ನ ಕತ್ತಲು ಮನೆಗೆ ಅಟ್ಟಿದ್ದಾರೆ.

    ಕೆಂಪಾಗಿತ್ತು ಮುನ್ನಿದೇವಿ ಕಣ್ಣು: ಪ್ರಕರಣದ ತನಿಖೆ ನಡೆಸಲು ಬೋಜಿಪುರಿ ಠಾಣೆಯ ಇನ್‍ಸ್ಪೆಕ್ಟರ್ ಮನೋಜ್ ಕುಮಾರ್ ನೇತೃತ್ವದಲ್ಲಿ ತಂಡ ರಚಿಸಲಾಗಿತ್ತು. 10 ಮದುವೆಯಾದರೂ ಮಕ್ಕಳಗಾದ ಕಾರಣ ಜಗನ್ ತಮಗೆ ಆಸರೆಯಾಗಿದ್ದ ಯುವಕನ ಹೆಸರಿಗೆ ಆಸ್ತಿ ಬರೆಯಲು ನಿರ್ಧರಿಸಿದ್ದರು. ಈ ವಿಷಯ ಅತ್ತಿಗೆ ಮುನ್ನಿದೇವಿಯ ಕಣ್ಣು ಕೆಂಪಾಗಿಸಿತ್ತು. ಜಮೀನಿಗಾಗಿ ಮೈದುನ ಕೊಲೆಗೆ ಸುಪಾರಿ ನೀಡಿದ್ದಳು. ಸದ್ಯ ದೇವ್‍ಸಿಂಗ್, ಪ್ರಹ್ಲಾದ್, ದರ್ಶನ್ ಸಿಂಗ್ ಮತ್ತು ಮುನ್ನಿದೇವಿಯನ್ನ ಬಂಧಿಸಲಾಗಿದೆ. ಪ್ರಕರಣದ ತನಿಖೆ ಮುಂದುವರಿದಿದೆ ಎಂದು ಎಸ್‍ಎಸ್‍ಪಿ ರೋಹಿತ್ ಸಿಂಗ್ ಹೇಳಿದ್ದಾರೆ.

  • ಏಕಾಂತದಲ್ಲಿರೋದನ್ನ ನೋಡಿದ ಬಾಲಕನ ಉಸಿರು ನಿಲ್ಲಿಸಿದ ಅತ್ತಿಗೆ-ಮೈದುನ

    ಏಕಾಂತದಲ್ಲಿರೋದನ್ನ ನೋಡಿದ ಬಾಲಕನ ಉಸಿರು ನಿಲ್ಲಿಸಿದ ಅತ್ತಿಗೆ-ಮೈದುನ

    – ಕತ್ತು ಹಿಸುಕಿ, ಪಾಳು ಬಾವಿಗೆ ಎಸೆದು ಎಲ್ಲರೆದ್ರು ಕಣ್ಣೀರಿಟ್ಟ ಮಹಿಳೆ

    ರಾಂಚಿ: ಅಕ್ರಮ ಸಂಬಂಧ ನೋಡಿದ ಬಾಲಕನನ್ನು ಕೊಲೆ ಮಾಡಿರುವ ಘಟನೆ ಜಾರ್ಖಂಡ್ ರಾಜ್ಯದ ಗೊಡ್ಡಾ ಜಿಲ್ಲೆಯ ಮೆಹರಾಮ್ ವ್ಯಾಪ್ತಿಯ ಸಿಮಾನಪುರಿ ಗ್ರಾಮದಲ್ಲಿ ನಡೆದಿದೆ.

    ಮಹಿಳೆ ಪತಿಯ ಚಿಕ್ಕಪ್ಪನ ಮಗನ ಜೊತೆಯಲ್ಲಿಯೇ ಅಕ್ರಮ ಸಂಬಂಧ ಹೊಂದಿದ್ದಳು. ಮನೆಯಲ್ಲಿ ಯಾರಿಗೂ ತಿಳಿಯದಂತೆ ಅತ್ತಿಗೆ-ಮೈದುನ ಕಳ್ಳಾಟ ನಡೆದಿತ್ತು. ಕೆಲ ದಿನಗಳ ಹಿಂದೆ ಮನೆಗೆ ಬಂದಿದ್ದ ನಾದಿನಿಯ ಮಗ ಇಬ್ಬರ ಸಂಬಂಧವನ್ನ ನೋಡಿದ್ದನು. ಇದರಿಂದ ಭಯಗೊಂಡ ಮಹಿಳೆ ಪತಿಗೆ ವಿಷಯ ಗೊತ್ತಾದ್ರೆ ಹೇಗೆ ಅಂತ ಬಾಲಕನನ್ನ ಕೊಲ್ಲಲು ಮೈದುನನ ಜೊತೆ ಪ್ಲಾನ್ ಮಾಡಿದ್ದಳು.

    ಇಬ್ಬರು ಉಪಾಯದಿಂದ ಬಾಲಕನನ್ನು ಕೋಣೆಯೊಳಗೆ ಕರೆದಿದ್ದಾರೆ. ಬಾಲಕ ಒಳ ಬರುತ್ತಿದ್ದಂತೆ ಬಾಗಿಲು ಹಾಕಿ ಕತ್ತು ಹಿಸುಕಿ ಕೊಂದು ಶವವನ್ನ ಗ್ರಾಮದ ಹೊರವಲಯದಲ್ಲಿರುವ ಪಾಳು ಬಾವಿಗೆ ಎಸೆದು ಏನು ತಿಳಿಯದಂತೆ ಮನೆ ಸೇರಿಕೊಂಡಿದ್ದಾರೆ. ಬಾಲಕ ಕಾಣದಿದ್ದಾಗ ಕುಟುಂಬದ ಇತರೆ ಸದಸ್ಯರು ಗ್ರಾಮದ ತುಂಬೆಲ್ಲ ಹುಡುಕಾಡಿದ್ದಾರೆ. ಬಾಲಕ ಸಿಗದಿದ್ದಾಗ ಬೆಲಬಡ್ಡಾ ಪೊಲೀಸ್ ಠಾಣೆಗೆ ತೆರಳಿ ದೂರು ದಾಖಲಿಸಿದ್ದಾರೆ. ಇತ್ತ ಅನುಮಾನ ಬಾರದಿರಲಿ ಅಂತ ಮಹಿಳೆ ಕುಟುಂಬದ ಇತರೆ ಜೊತೆ ಸೇರಿ ಮೊಸಳೆ ಕಣ್ಣೀರು ಹಾಕಿದ್ದಾಳೆ.

    ದೂರಿನನ್ವಯ ಪ್ರಕರಣ ದಾಖಲಿಸಿಕೊಂಡ ಪೊಲೀಸರು ಗ್ರಾಮಕ್ಕೆ ಆಗಮಿಸಿ ತನಿಖೆ ಆರಂಭಿಸಿದ್ದರು. ಆರಂಭದಲ್ಲಿಯೇ ಪೊಲೀಸರಿಗೆ ಮಹಿಳೆ ಮೇಲೆ ಅನುಮಾನ ಬಂದು ವಶಕ್ಕೆ ಪಡೆದು ತೀವ್ರ ವಿಚಾರಣೆ ನಡೆಸಿದಾಗ ತಪ್ಪೊಪ್ಪಿಕೊಂಡಿದ್ದಾಳೆ. ಬಾಲಕನ ಶವವನ್ನ ಬಾವಿಯಿಂದ ತೆಗೆದು ಮರಣೋತ್ತರ ಪರೀಕ್ಷೆಗಾಗಿ ಆಸ್ಪತ್ರೆಗೆ ರವಾನಿಸಿ, ಇಬ್ಬರನ್ನ ಪೊಲೀಸರು ಬಂಧಿಸಿದ್ದಾರೆ.

  • ಅತ್ತಿಗೆ ಜೊತೆ ಮೈದುನನ ಕಳ್ಳ ಸಂಬಂಧ- ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಸೂಸೈಡ್

    ಅತ್ತಿಗೆ ಜೊತೆ ಮೈದುನನ ಕಳ್ಳ ಸಂಬಂಧ- ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಸೂಸೈಡ್

    – ಅಮ್ಮನಿಲ್ಲದೇ ಅನಾಥವಾಯ್ತು ಮೂರು ತಿಂಗಳ ಹಸುಗೂಸು
    – ಮೈದುನನ ಮದ್ವೆ ಫಿಕ್ಸ್ ಆಗಿದ್ದಕ್ಕೆ ಇಬ್ರೂ ಸೂಸೈಡ್

    ಲಕ್ನೋ: ಅತ್ತಿಗೆ ಮತ್ತು ಮೈದುನ ಒಂದೇ ಸೀರೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಉತ್ತರ ಪ್ರದೇಶದ ಫತೇಪುರ ಜಿಲ್ಲೆಯ ಗಾಜೀಪುರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಾಹ್ಮಣತಾರಾ ಗ್ರಾಮದಲ್ಲಿ ನಡೆದಿದೆ. ಇಂದು ಬೆಳಗ್ಗೆ ಕೋಣೆಯ ಬಾಗಿಲು ತೆಗೆದಾದ ಇಬ್ಬರ ಶವ ನೇತಾಡುತ್ತಿತ್ತು.

    ಸುನಿತಾ (28) ಮತ್ತು ರಾಮ್ ಮಿಲನ್ (22) ಆತ್ಮಹತ್ಯೆಗೆ ಶರಣಾದ ಅತ್ತಿಗೆ ಮೈದುನ. ಸುನಿತಾ ಮತ್ತು ರಾಮ್ ಮಿಲನ್ ಇಬ್ಬರೂ ಅನೈತಿಕ ಸಂಬಂಧ ಹೊಂದಿದ್ದರು. ಈ ವಿಷಯ ತಿಳಿದು ಕುಟುಂಬಸ್ಥರು ರಾಮ್ ಮದುವೆಯನ್ನ ನಿಶ್ಚಯಿಸಿ ಮೇ 7, 2021ರಂದು ದಿನಾಂಕ ಸಹ ನಿಗದಿ ಮಾಡಿದ್ದರು. ಮದುವೆ ತಮ್ಮ ಅನೈತಿಕ ಸಂಬಂಧ ಅಡ್ಡಿಯಾಗಲಿದೆ ಎಂದು ತಿಳಿದು ಇಬ್ಬರೂ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇತ್ತ ಮೂರು ತಿಂಗಳ ಮತ್ತು ಮೂರು ವರ್ಷದ ಮಕ್ಕಳು ಅಮ್ಮನಿಲ್ಲದೇ ಅನಾಥವಾಗಿದ್ದು, ಕುಟುಂಬಸ್ಥರು ಕಣ್ಣೀರು ಹಾಕುತ್ತಿದ್ದಾರೆ.

    ನನ್ನ ಪತ್ನಿ ಮತ್ತು ತಮ್ಮನ ಬಹಳ ದಿನಗಳಿಂದ ಅಕ್ರಮ ಸಂಬಂಧ ಹೊಂದಿದ್ದರು. ಮೂರು ವರ್ಷದ ಮಗ ಮತ್ತು ಮೂರು ವರ್ಷದ ಮಗಳು ಇದ್ದರೂ ಪತ್ನಿ ಅನೈತಿಕ ಸಂಬಂಧದಲ್ಲಿದ್ದಳು ಎಂದು ಸುನಿತಾ ಪತಿ ಹರಿಓಂ ಹೇಳಿದ್ದಾರೆ.ಸ್ಥಳಕ್ಕೆ ಪೊಲೀಸರು ಆಗಮಿಸಿ ಮೃತದೇಹಗಳನ್ನ ಆಸ್ಪತ್ರೆಗೆ ರವಾನಿಸಿ ಹೇಳಿಕೆಯನ್ನ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

  • ತಾಯಿ ಬಿಟ್ಟು ನನ್ನ ಜೊತೆಗಿರು ಎಂದ ಅತ್ತಿಗೆ – ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

    ತಾಯಿ ಬಿಟ್ಟು ನನ್ನ ಜೊತೆಗಿರು ಎಂದ ಅತ್ತಿಗೆ – ಕತ್ತು ಹಿಸುಕಿ ಕೊಲೆ ಮಾಡಿ ಪೊಲೀಸರಿಗೆ ಶರಣಾದ ಆರೋಪಿ

    – ಪತಿ ಸಾವನ್ನಪ್ಪಿದ ಬಳಿಕ ಮೈದುನನ ಜೊತೆಗಿದ್ದ ಮಹಿಳೆ

    ನವದೆಹಲಿ: ಅತ್ತಿಗೆ ಜೊತೆ ಜಗಳವಾಗಿದ್ದು, ಈ ವೇಳೆ ಅವಳ ಕತ್ತು ಹಿಸುಕಿ ಕೊಲೆ ಮಾಡಿ ಆರೋಪಿ ಪೊಲೀಸರಿಗೆ ಶರಣಾಗಿದ್ದಾನೆ.

    ಈಶಾನ್ಯ ದೆಹಲಿ ಪೊಲೀಸ್ ಠಾಣೆ ವ್ಯಾಪ್ತಿಯ ಕರವಲ್ ನಗರ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು, ಕರವಲ್ ನಗರದ ನಿವಾಸಿ ರೋಹಿತ್(26) ಡಿಸಿಪಿ ಕಚೇರಿಗೆ ಬಂದಿದ್ದು, ಅತ್ತಿಗೆಯನ್ನು ಕೊಲೆ ಮಾಡಿದ್ದೇನೆ ಎಂದು ಹೇಳಿದ್ದಾನೆ. ಅತ್ತಿಗೆಯ ದೇಹವನ್ನು ಮನೆಯಲ್ಲಿ ಬಿಟ್ಟು ವ್ಯಕ್ತಿ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾನೆ.

    ಕರವಲ್ ಪೊಲೀಸ್ ಸ್ಟೇಷನ್ ಹೌಸ್ ಆಫೀಸರ್ ಇತರ ಸಿಬ್ಬಂದಿಯೊಂದಿಗೆ ಕರವಲ್ ನಗರದ ಪೊಲೀಸ್ ಠಾಣೆಗೆ ಭೇಟಿ ನೀಡಿದ್ದು, ಮಹಿಳೆ ದೇಹವನ್ನು ಪತ್ತೆ ಹಚ್ಚಿದ್ದಾರೆ ಎಂದು ಡಿಸಿಪಿ ವೇದ ಪ್ರಕಾಶ್ ಸೂರ್ಯ ತಿಳಿಸಿದ್ದಾರೆ.

    ನನ್ನ ತಾಯಿಯನ್ನು ಬಿಟ್ಟು ನನ್ನೊಂದಿಗೆ ಇರು ಎಂದು ಅತ್ತಿಗೆ ಹೇಳುತ್ತಿದ್ದಳು. ಇದಕ್ಕಾಗಿ ಯಾವಾಗಲೂ ಜಗಳವಾಗುತ್ತಿತ್ತು. ನನ್ನ ಅಣ್ಣ ಮೂರು ವರ್ಷಗಳ ಹಿಂದೆ ಆತ್ಮಹತ್ಯೆ ಮಾಡಿಕೊಂಡ. ಆಗಿನಿಂದ ಅತ್ತಿಗೆ ನನ್ನೊಂದಿಗಿದ್ದಳು ಎಂದು ವಿಚಾರಣೆ ವೇಳೆ ರೋಹಿತ್ ಬಾಯ್ಬಿಟ್ಟಿರುವುದಾಗಿ ಪೊಲೀಸರು ತಿಳಿಸಿದ್ದಾರೆ.

    ಇದೇ ವಿಚಾರವಾಗಿ ಮಂಗಳವಾರ ಸಹ ಜಗಳ ನಡೆದಿದ್ದು, ಈ ವೇಳೆ ರೋಹಿತ್ ಅತ್ತಿಗೆಯ ಕುತ್ತಿಗೆಯನ್ನೇ ಹಿಸುಕಿ ಮಧ್ಯಾಹ್ನ 2:30ರ ಹೊತ್ತಿಗೆ ಕೊಲೆ ಮಾಡಿದ್ದಾನೆ. ಬಳಿಕ ತಾನೇ ಪೊಲೀಸ್ ಠಾಣೆಗೆ ತೆರಳಿ ಶರಣಾಗಿದ್ದಾನೆ. ಘಟನೆಗೆ ಸಂಬಂಧಿಸಿದಂತೆ ಕರವಲ್ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. ಆರೋಪಿ ರೋಹಿತ್‍ನನ್ನು ಬಂಧಿಸಲಾಗಿದೆ. ಬುಧವಾರ ಮರಣೋತ್ತರ ಪರೀಕ್ಷೆಯನ್ನು ಸಹ ನಡೆಸಲಾಗಿದೆ. ಮಹಿಳೆಗೆ ಒಬ್ಬ ಮಗ, ಒಬ್ಬಳು ಮಗಳಿದ್ದು, ಮಗ ಚಿಕ್ಕಪ್ಪನ ಮನೆಗೆ ಹೋಗಿದದ್ದಾನೆ. ಮಗಳು ಆಟವಾಡಲು ಹೊರಗೆ ಹೋಗಿದ್ದಾಳೆ. ಈ ವೇಲೆ ಕೊಲೆ ನಡೆದಿದೆ. ರೋಹಿತ್ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

  • ಅತ್ತಿಗೆಯನ್ನು ಕೊಲ್ಲಲು ಮನೆಕೆಲಸದವರಿಗೆ ಸುಪಾರಿ – ಜೈಲು ಸೇರಿದ ಮೈದುನ

    ಅತ್ತಿಗೆಯನ್ನು ಕೊಲ್ಲಲು ಮನೆಕೆಲಸದವರಿಗೆ ಸುಪಾರಿ – ಜೈಲು ಸೇರಿದ ಮೈದುನ

    ಮಡಿಕೇರಿ: ತಂದೆ ಮಾಡಿರುವ ಅಪಾರ ಆಸ್ತಿಯನ್ನು ತಾನೊಬ್ಬನೇ ಕಬಳಿಸಬೇಕೆಂಬ ದುರಾಸೆಯಿಂದ ಅಣ್ಣನ ಹೆಂಡತಿಯನ್ನೇ ಕೊಲೆ ಮಾಡಲು ಸುಪಾರಿ ಕೊಡಲು ಮುಂದಾಗಿದ್ದ ಮೈದುನನೋರ್ವ ಪೊಲೀಸರ ಅಥಿತಿಯಾಗಿದ್ದಾನೆ.

    ಕೊಡಗು ಜಿಲ್ಲೆ ಮಡಿಕೇರಿ ತಾಲೂಕಿನ ಚೇಲಾವಾರದಲ್ಲಿ ಘಟನೆ ನಡೆದಿದೆ. ಚೇಲಾವರದಲ್ಲಿರುವ 70 ಎಕರೆ ಕಾಫಿ ಎಸ್ಟೇಟ್ ಮತ್ತು ಎರಡು ಹೋಂ ಸ್ಟೇಗಳನ್ನು ತಾನೇ ಕಬಳಿಸಬೇಕು ಎನ್ನುವ ದುರಾಸೆಗೆ ಬಿದ್ದಿದ್ದ ಆರೋಪಿ ಸುಬ್ಬಯ್ಯ, ತನ್ನ ತೋಟದಲ್ಲಿ ಕೆಲಸ ಮಾಡುತ್ತಿದ್ದ ಅಸ್ಸಾಂ ಕಾರ್ಮಿಕರಿಗೆ 5 ಲಕ್ಷ ಕೊಡುತ್ತೇನೆ ತನ್ನ ಅತ್ತಿಗೆಯನ್ನ ಕೊಲೆ ಮಾಡಿ ಬಿಡಿ ಸುಪಾರಿ ಕೊಟ್ಟಿದ್ದಾನೆ.

    ಆದರೆ ಇದನ್ನು ಒಪ್ಪದ ಅಸ್ಸಾಂ ಕಾರ್ಮಿಕರು ಅವರ ಮನೆಯನ್ನೇ ಬಿಟ್ಟುಹೋಗಲು ರೆಡಿಯಾಗಿದ್ದಾರೆ. ಈ ಕಾರಣದಿಂದ ಸಿಟ್ಟಿಗೆದ್ದ ಸುಬ್ಬಯ್ಯ ಕಾರ್ಮಿಕರ ಆಧಾರ್ ಕಾರ್ಡ್ ಮತ್ತು ವೋಟರ್ ಐಡಿಗಳನ್ನು ಕಿತ್ತುಕೊಂಡು ಕೊಡೋದಿಲ್ಲ ಎಂದು ಧಮ್ಕಿ ಹಾಕಿದ್ದಾನೆ. ಇದರಿಂದ ಹೆದರಿದ ಅಸ್ಸಾಂ ಕಾರ್ಮಿಕರು ಕೊಡಗಿನ ಎಸ್‍ಪಿಗೆ ದೂರು ನೀಡಿದ್ದಾರೆ.

    ಅಷ್ಟೇ ಅಲ್ಲದೇ ಅಣ್ಣನ ಹೆಂಡತಿ ರೇಖಾ ಪೂವಯ್ಯ ಅವರನ್ನು ಮುಗಿಸಲು ಅನೇಕ ದಿನಗಳಿಂದ ಪ್ಲಾನ್ ಮಾಡುತ್ತಿದ್ದಾನೆ ಎಂದು ರೇಖಾ ಪೂವಯ್ಯ ಪೋಲಿಸರಿಗೆ ಮಾಹಿತಿ ನೀಡಿದ್ದಾರೆ. ಹೀಗಾಗಿ ಅತ್ತಿಗೆಯನ್ನೇ ಮುಗಿಸಲು ಸುಪಾರಿ ನೀಡಲು ಮುಂದಾಗಿದ್ದ ಸುಬ್ಬಯ್ಯನನ್ನು ಬಂಧಿಸಿದ ಪೊಲೀಸರು ಕಂಬಿ ಹಿಂದೆ ತಳ್ಳಿದ್ದಾರೆ.

  • ಅತ್ತಿಗೆ ಮೇಲೆ ಮೈದುನನಿಂದ ಆಸಿಡ್ ದಾಳಿ

    ಅತ್ತಿಗೆ ಮೇಲೆ ಮೈದುನನಿಂದ ಆಸಿಡ್ ದಾಳಿ

    ಬೆಂಗಳೂರು: ಮಹಿಳಾ ಕಂಡಕ್ಟರ್ ಮೇಲೆ ಆಸಿಡ್ ದಾಳಿ ಪ್ರಕರಣಕ್ಕೆ ಸ್ಫೋಟಕ ತಿರುವು ಸಿಕ್ಕಿದೆ. ಕಂಡಕ್ಟರ್ ಇಂದಿರಾಬಾಯಿ ಮೇಲೆ ಆಸಿಡ್ ಹಾಕಿದ್ದು ಮೈದುನ ಅರುಣ್ ನಾಯಕ್ ಎನ್ನುವುದು ಪೊಲೀಸರ ತನಿಖೆಯಿಂದ ಬಹಿರಂಗಗೊಂಡಿದೆ.

    ಅರುಣ್ ನಾಯಕ್ ಪೀಣ್ಯ ಡಿಪೋದಲ್ಲಿ ಡ್ರೈವರ್ ಆಗಿ ಕೆಲಸ ಮಾಡುತ್ತಿದ್ದರೆ, ಇಂದಿರಾಬಾಯಿ ಶಾಂತಿನಗರ ಡಿಪೋದಲ್ಲಿ ಕಂಡಕ್ಟರ್ ಆಗಿ ಕೆಲಸ ಮಾಡುತ್ತಿದ್ದರು. ಇಂದಿರಾಬಾಯಿ, ಅರುಣ್ ನಾಯಕ್ ಗೆ ಸಂಬಂಧದಲ್ಲಿ ಅತ್ತಿಗೆ ಆಗಬೇಕು. ಹೀಗಿದ್ದು ಇಬ್ಬರ ನಡುವೆ ಅಕ್ರಮ ಸಂಬಂಧ ಇತ್ತು ಎನ್ನಲಾಗಿದೆ.

    ಇತ್ತೀಚೆಗೆ ಇಂದಿರಾಬಾಯಿ ಬೇರೊಂದು ವ್ಯಕ್ತಿಯ ಜೊತೆಗೆ ಅಕ್ರಮ ಸಂಬಂಧ ಇಟ್ಟುಕೊಂಡಿರುವುದು ಅರುಣ್ ಕುಮರ್ ಗೆ ತಿಳಿಯಿತು. ಬಳಿಕ ಅರುಣ್ ಈ ವಿಷಯವಾಗಿ ತನ್ನ ಅತ್ತಿಗೆ ಇಂದಿರಾಬಾಯಿ ಜೊತೆ ಜಗಳವಾಡಿದ್ದನು. ಇದೇ ವಿಚಾರಕ್ಕೆ ಕೋಪಗೊಂಡ ಅರುಣ್ ನಾಯಕ್ ಆಸಿಡ್ ದಾಳಿ ನಡೆಸಿದ್ದಾನೆ ಎನ್ನುವುದು ತನಿಖೆಯಲ್ಲಿ ಗೊತ್ತಾಗಿದೆ.

    ಕಳೆದ ಎರಡು ದಿನಗಳ ಹಿಂದೆ ಬಿಎಂಟಿಸಿ ಮಹಿಳಾ ಕಂಡಕ್ಟರ್ ಇಂದಿರಾಬಾಯಿ ಕೆಲಸಕ್ಕೆ ಹೋಗುತ್ತಿದ್ದ ವೇಳೆ ಬೈಕಿನಲ್ಲಿ ಬಂದ ಇಬ್ಬರು ದುಷ್ಕರ್ಮಿಗಳು ಆ್ಯಸಿಡ್ ಎರಚಿ ಎಸ್ಕೇಪ್ ಆಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಮೈದುನ ಅರುಣ್ ನಾಯಕ್ ಆತನ ಸ್ನೇಹಿತ ಕುಮಾರ್ ನಾಯಕ್‍ನನ್ನು ಬಂಧಿಸಿದ್ದಾರೆ.

  • ‘ಲೋಕಸಮರ’ದ ಟಿಕೆಟ್‍ಗಾಗಿ ಲಾಬಿ: ವಿಜಯಪುರದಲ್ಲಿ ಅತ್ತಿಗೆ-ಮೈದುನನ ನಡುವೆಯೇ ಫೈಟ್

    ‘ಲೋಕಸಮರ’ದ ಟಿಕೆಟ್‍ಗಾಗಿ ಲಾಬಿ: ವಿಜಯಪುರದಲ್ಲಿ ಅತ್ತಿಗೆ-ಮೈದುನನ ನಡುವೆಯೇ ಫೈಟ್

    ವಿಜಯಪುರ: ಲೋಕಸಭಾ ಚುನಾವಣೆ ಹತ್ತಿರ ಬರುತ್ತಿದ್ದಂತೆ ಸೋಲು-ಗೆಲುವಿಗಿಂತ ಹೆಚ್ಚಾಗಿ ಟಿಕೆಟ್ ಫೈಟ್ ಜೋರಾಗಿದೆ. ನಗರದಲ್ಲಿ ಒಂದೇ ಕುಟುಂಬದ ಅತ್ತಿಗೆ-ಮೈದುನನ ನಡುವೆಯೇ ಟಿಕೆಟ್‍ಗಾಗಿ ಯುದ್ಧ ಶುರುವಾಗಿದೆ.

    ಲೋಕಸಭಾ ಚುನಾವಣೆಯ ದಿನಾಂಕ ಘೋಷಣೆಯಾಗುತ್ತಿದ್ದಂತೆಯೇ ಎಲ್ಲಾ ಪಕ್ಷಗಳಲ್ಲಿ ಟಿಕೆಟ್‍ಗಾಗಿ ಲಾಬಿ ಜೋರಾಗಿದೆ. ಅದೇ ರೀತಿ ಜೆಡಿಎಸ್ ಪಾಲಾಗಿರುವ ವಿಜಯಪುರದಲ್ಲಿ ಟಿಕೆಟ್‍ಗಾಗಿ ಅತ್ತಿಗೆ-ಮೈದುನನ ನಡುವೆ ಕಾದಾಟ ಶುರುವಾಗಿದೆ. ನಾಗಠಾಣಾ ಶಾಸಕ ದೇವಾನಂದ್ ಚವ್ಹಾಣ್‍ರ ಪತ್ನಿ ಸುನಿತಾ ಚವ್ಹಾಣ್ ಮತ್ತು ತಮ್ಮ ರವಿಕುಮಾರ್ ಜೆಡಿಎಸ್ ಟಿಕೆಟ್‍ಗಾಗಿ ಪಟ್ಟು ಹಿಡಿದಿದ್ದಾರೆ.

    ಈ ಹಿಂದೆ ದೇವಾನಂದ್ ಚವ್ಹಾಣ್ ಶಾಸಕರಾಗುವಲ್ಲಿ ತಮ್ಮ ರವಿಕುಮಾರ್ ಪಾತ್ರ ಮಹತ್ವದ್ದಾಗಿತ್ತು. ಹೀಗಾಗಿ ನನಗೆ ಟಿಕೆಟ್ ಕೊಡಿ ಎಂದು ರವಿಕುಮಾರ್ ಕೇಳುತ್ತಿದ್ದಾರೆ. ಆದರೆ ವಿಜಯಪುರದಲ್ಲಿ ಮಹಿಳೆಯರಿಗೆ ಟಿಕೆಟ್ ಕೊಡದೆ ಅದೆಷ್ಟೋ ವರ್ಷಗಳು ಉರುಳಿವೆ. ಹೀಗಾಗಿ ಈ ಬಾರಿಯಾದರೂ ನನಗೆ ಟಿಕೆಟ್ ಕೊಡಿ ಎಂದು ಸುನಿತಾ ಪಟ್ಟು ಹಿಡಿದಿದ್ದಾರೆ.

    ಒಟ್ಟಿನಲ್ಲಿ ಅತ್ತಿಗೆ- ಮೈದುನ ನಡುವಿನ ಟಿಕೆಟ್ ಯುದ್ಧದಿಂದ ಜೆಡಿಎಸ್ ವರಿಷ್ಠರಿಗೆ ಹೊಸ ತಲೆನೋವು ಶುರುವಾಗಿದೆ. ಟಿಕೆಟ್ ಕೊಡೋದು ಬಿಡೋದು ಜೆಡಿಎಸ್ ವರಿಷ್ಠ ದೇವೇಗೌಡ್ರ ಕೈಯಲ್ಲಿದ್ದು, ಅವರು ಏನ್ ಮಾಡ್ತಾರೆ..? ಹೇಗೆ ಸಮಸ್ಯೆ ಬಗೆಹರಿಸ್ತಾರೆ ಎಂಬುದನ್ನು ಕಾದು ನೋಡಬೇಕಿದೆ.

  • ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

    ಅಕ್ರಮ ಸಂಬಂಧವಿದೆ ಎಂದು ಅತ್ತಿಗೆ, ಆಕೆಯ ಸಂಬಂಧಿಕರ ಮೇಲೆ ಮೈದುನನಿಂದ ಹಲ್ಲೆ!

    ದಾವಣಗೆರೆ: ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ ಎಂದು ಅನುಮಾನಗೊಂಡು ಮೈದುನ ತನ್ನ ಅತ್ತಿಗೆ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ ಘಟನೆ ದಾವಣಗೆರೆ ಜಿಲ್ಲೆಯ ಹೊನ್ನೂರು ಗೊಲ್ಲರಹಟ್ಟಿಯಲ್ಲಿ ನಡೆದಿದೆ.

    ವೆಂಕಟೇಶ್ ಹಾಗೂ ಸುಶೀಲಾ ಹಲ್ಲೆಗೊಳಗಾದವರಾಗಿದ್ದು, ಮೈದುನ ತಿಮ್ಮೇಶ್ ಸಂತೆಬೆನ್ನೂರಿನಲ್ಲಿ ಪೊಲೀಸ್ ಪೇದೆಯಾಗಿದ್ದಾರೆ. ಸುಶೀಲಾ ಅಂಗನವಾಡಿಯಲ್ಲಿ ಸಹಾಯಕಿಯಾಗಿ ಕೆಲಸ ಮಾಡುತ್ತಿದ್ದು, ಮೊಬೈಲ್ ನಲ್ಲಿ ಬೇರೆಯವರೊಂದಿಗೆ ಬಹಳ ಮಾತನಾಡುತ್ತೀಯಾ ಎಂದು ಅಕ್ರಮ ಸಂಬಂಧ ಇದೆಯೊಂದು ಮೈದುನ ತಿಮ್ಮೇಶ್ ಜಗಳವಾಡಿ ಸಂಬಂಧ ಕಟ್ಟಿದ್ದಾನೆ.

    ಈ ಸಂಬಂಧ ಗ್ರಾಮಾಂತರ ಠಾಣೆಯಲ್ಲಿ ರಾಜಿ ಸಂಧಾನ ಸಹ ನಡೆದಿತ್ತು. ಆದರೆ ಕಳೆದ ರಾತ್ರಿ ತಿಮ್ಮೇಶ್ ಹಾಗೂ ಆತನ ಅಕ್ಕಂದಿರು ಸೇರಿ ಸುಶೀಲಾ ಹಾಗೂ ಆಕೆಯ ಸಂಬಂಧಿಕರ ಮೇಲೆ ಹಲ್ಲೆ ನಡೆಸಿದ್ದಾರೆ. ಸದ್ಯ ಹಲ್ಲೆಗೊಳಗಾದರು ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದು, ಚಿಕಿತ್ಸೆ ಪಡೆಯುತ್ತಿದ್ದರೆ. ಇನ್ನೂ ಮೈದುನ ತಿಮ್ಮೇಶ್ ಹಾಗೂ ಆತನ ಅಕ್ಕಂದಿರ ವಿರುದ್ಧ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ

  • ಅನುಮಾನಪಟ್ಟಿದ್ದಕ್ಕೆ ಮೈದುನನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

    ಅನುಮಾನಪಟ್ಟಿದ್ದಕ್ಕೆ ಮೈದುನನ ಜೊತೆ ಸೇರಿ ಪತ್ನಿಯಿಂದಲೇ ಪತಿಯ ಕೊಲೆ!

    ಲಕ್ನೋ: ಪತ್ನಿಯೊಬ್ಬಳು ತನ್ನ ಮೈದುನ ಜೊತೆ ಸೇರಿ ಪತಿಯನ್ನೇ ಗುಂಡಿಕ್ಕಿ ಕೊಂದ ಘಟನೆ ಉತ್ತರಪ್ರದೇಶದ ಬಾಂದಾ ಜಿಲ್ಲೆಯಲ್ಲಿ ನಡೆದಿದೆ.

    ದಿನೇಶ್ ಯಾದವ್(30) ಕೊಲೆಯಾದ ವ್ಯಕ್ತಿ. ಸ್ಯೋಯದ್ ಗ್ರಾಮದಲ್ಲಿ ಗುರುವಾರ ಸುಮಾರು 3.45ಕ್ಕೆ ದಿನೇಶ್ ಹೊಲದಲ್ಲಿ ಕೆಲಸ ಮಾಡುತ್ತಿದ್ದನು. ಆಗ ಆತನನ್ನು ಹಿಂದಿನಿಂದ ಗುಂಡಿಕ್ಕಿ ಕೊಲೆ ಮಾಡಿದ್ದರು. ಗುಂಡೇಟಿಗೆ ದಿನೇಶ್ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.

    ದಿನೇಶ್ ತಂದೆ ಈ ಕೊಲೆಗೆ ಸಂಬಂಧಪಟ್ಟಂತೆ ಇಬ್ಬರು ಅಪರಿಚಿತರ ಮೇಲೆ ದೂರು ದಾಖಲಿಸಿದ್ದರು. ದೂರು ದಾಖಲಿಸಿಕೊಂಡ ಕಮಾಸಿನ್ ಠಾಣೆ ಪೊಲೀಸರು ವಿಚಾರಣೆ ಶುರು ಮಾಡಿದ್ದರು. ಈ ಕೇಸ್ ವಿಚಾರಣೆ ಶುರು ಮಾಡಿದ ದಿನದಿಂದ ದಿನೇಶ್ ಪತ್ನಿ ಬಿಜಮಾ ದೇವಿ ಮೇಲೆ ಅನುಮಾನ ಮೂಡಿದೆ.

    ಬಿಜಮಾ ಹಾಗೂ ಆಕೆಯ ಮೈದುನ ಅಕಿಲೇಶ್ ಯಾದವ್ ನನ್ನು ವಿಚಾರಣೆ ಮಾಡಿದ್ದಾಗ ಸತ್ಯಾಂಶ ಹೊರಬಂದಿದೆ ಎಂದು ಬಬೇರೂ ಕ್ಷೇತ್ರದ ಹಿರಿಯ ಪೊಲೀಸ್ ಅಧಿಕಾರಿ ಓಂಪ್ರಕಾಶ್ ಹಾಗೂ ಕಮಾಸಿನ್ ಹಿರಿಯ ಅಧಿಕಾರಿ ರಾಕೇಶ್ ಪಾಂಡೆ ತಿಳಿಸಿದ್ದಾರೆ.

    ಬಿಜಮಾ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾಳೆ. ದಿನೇಶ್ ನನ್ನ ಮೇಲೆ ಯಾವಾಗಲೂ ಅನುಮಾನಪಡುತ್ತಿದ್ದ. ಅಷ್ಟೇ ಅಲ್ಲದೇ ನನ್ನ ಮೇಲೆ ಹಲ್ಲೆ ನಡೆಸುತ್ತಿದ್ದ. ನನಗೆ ಆತನ ತಾತ, ಚಿಕ್ಕಪ್ಪ ಹಾಗೂ ಗ್ರಾಮದ ಹಿರಿಯರ ಜೊತೆ ಅಕ್ರಮ ಸಂಬಂಧವಿದೆ ಎಂದು ಆರೋಪಿಸುತ್ತಿದ್ದ. ಇದ್ದರಿಂದ ನಾನು ಬೇಸತ್ತು ಆತನ ಕೊಲೆ ಮಾಡಲು ನಿರ್ಧರಿಸಿದೆ ಎಂದು ಬಿಜಮಾ ಪೊಲೀಸರ ಹತ್ತಿರ ತಿಳಿಸಿದ್ದಾಳೆ.

    ದಿನೇಶ್ ಹಾಗೂ ಬಿಜಮಾ ಮದುವೆಯಾಗಿ ಮೂರು ವರ್ಷವಾಗಿತ್ತು. ಅಖಿಲೇಶ್ ತನ್ನ ಅಣ್ಣನನ್ನು ಕೊಂದು ಆತ ಜೈಲಿಗೆ ಹೋಗಿ ಬಂದ ನಂತರ ಆತನನ್ನು ಮದುವೆಯಾಗುವುದ್ದಾಗಿ ಬಿಜಮಾ ಅಖಿಲೇಶ್‍ಗೆ ತಿಳಿಸಿದ್ದಳು. ಅಖಿಲೇಶ್ ಪುಣೆಯಲ್ಲಿ ಕೆಲಸ ಮಾಡುತ್ತಿದ್ದು, ಕೆಲ ದಿನಗಳ ಹಿಂದೆ ತನ್ನ ಮನೆಗೆ ಬಂದಿದ್ದನು ಎಂದು ಪೊಲೀಸರು ತಿಳಿಸಿದ್ದಾರೆ. ಸದ್ಯ ಪೊಲೀಸರು ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.