Tag: ಮೈತ್ರಿ ಮೂವೀಸ್

  • ‘ಸಲಾರ್’ ನಂತರ ಮತ್ತೆ ಬಾಲಿವುಡ್ ಚಿತ್ರ ಒಪ್ಪಿಕೊಂಡ ಪ್ರಭಾಸ್

    ‘ಸಲಾರ್’ ನಂತರ ಮತ್ತೆ ಬಾಲಿವುಡ್ ಚಿತ್ರ ಒಪ್ಪಿಕೊಂಡ ಪ್ರಭಾಸ್

    ತೆಲುಗಿನ ಖ್ಯಾತ ನಟ ಪ್ರಭಾಸ್ ಸಾಲು ಸಾಲು ಚಿತ್ರಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ಈಗಾಗಲೇ ಆದಿಪುರಷ್ ಸಿನಿಮಾ ರಿಲೀಸ್ ಗೆ ರೆಡಿಯಾಗಿದೆ. ಸ್ಪಿರಿಟ್ ಮತ್ತು ಪ್ರಾಜೆಕ್ಟ್ ಕೆ ಚಿತ್ರಗಳು ಕೈಯಲ್ಲಿವೆ. ಸಲಾರ್ ಸಿನಿಮಾದ ಬಹುತೇಕ ಚಿತ್ರೀಕರಣ ಮುಗಿಯುವ ಹಂತದಲ್ಲಿದೆ. ಈ ನಡುವೆ ಪ್ರಭಾಸ್ ಮತ್ತೊಂದು ಸಿನಿಮಾವನ್ನು ಒಪ್ಪಿಕೊಂಡಿದ್ದಾರೆ. ಬಾಲಿವುಡ್ ನಲ್ಲಿ ಈ ಸಿನಿಮಾ ನಿರ್ಮಾಣವಾಗಲಿದ್ದು. ಸಿದ್ದಾರ್ಥ ಆನಂದ್ ಅವರು ಆ್ಯಕ್ಷನ್ ಕಟ್ ಹೇಳಲಿದ್ದಾರೆ.

    ಅಂದುಕೊಂಡಂತೆ ಆಗಿದ್ದರೆ ಪ್ರಭಾಸ್ ನಟನೆಯ ಆದಿಪುರುಷ್ ಚಿತ್ರ ಬಿಡುಗಡೆ ಆಗಬೇಕಿತ್ತು. ನಾನಾ ಕಾರಣಗಳಿಂದಾಗಿ ಅದು ತಡವಾಗುತ್ತಿದೆ. ವಿವಾದ ಕೂಡ ಆಗಿದ್ದರಿಂದ ಅದನ್ನು ತಿಳಿಗೊಳಿಸುವಲ್ಲಿ ನಿರ್ದೇಶಕರು ನಿರತರಾಗಿದ್ದಾರಂತೆ. ಈ ನಡುವೆಯೇ ಮತ್ತೊಂದು ಬಾಲಿವುಡ್ ಚಿತ್ರವನ್ನು ಪ್ರಭಾಸ್ ಒಪ್ಪಿಕೊಂಡಿದ್ದಾರೆ. ಈ ಮಾಹಿತಿಯನ್ನು ಚಿತ್ರ ನಿರ್ಮಾಣ ಮಾಡುವ ಮೈತ್ರಿ ಮೂವಿ ಸಂಸ್ಥೆಯೇ ಬಹಿರಂಗ ಪಡಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ಸ್ಪರ್ಧಿಗಳ ಸಮಾಗಮ: ವೈಷ್ಣವಿ ಜೊತೆ ದಿವ್ಯಾ- ಅರವಿಂದ್ ಕೆ.ಪಿ ಜೋಡಿ

    ಶಾರುಖ್ ಖಾನ್ ನಿರ್ದೇಶನದ ಪಠಾಣ್ ಸಿನಿಮಾವನ್ನು ನಿರ್ದೇಶನ ಮಾಡಿರುವ ಸಿದ್ದಾರ್ಥ ಆನಂದ್, ಪಠಾಣ್ ಚಿತ್ರದ ನಂತರ ಪ್ರಭಾಸ್ ಸಿನಿಮಾವನ್ನು ಕೈಗೆತ್ತಿಕೊಂಡಿದ್ದಾರಂತೆ. ಹಿಂದಿ ಚಿತ್ರರಂಗದಲ್ಲಿ ಅನೇಕ ಹಿಟ್ ಚಿತ್ರಗಳನ್ನು ಕೊಟ್ಟಿರುವ ಇವರು, ಈ ಬಾರಿ ಪ್ರಭಾಸ್ ಜೊತೆ ಅದೃಷ್ಟಕ್ಕೆ ಇಳಿಯಲಿದ್ದಾರೆ. ಪ್ರಭಾಸ್ ಗಾಗಿಯೇ ಅವರು ಹೊಸ ರೀತಿಯ ಕಥೆಯನ್ನೂ ಸಿದ್ದಪಡಿಸಿದ್ದಾರಂತೆ. ಪಠಾಣ್ ಸಿನಿಮಾ ರಿಲೀಸ್ ನಂತರವೇ ಈ ಕುರಿತು ಹಲವು ಮಾಹಿತಿಗಳನ್ನು ಅವರು ಹಂಚಿಕೊಳ್ಳಲಿದ್ದಾರೆ.

    ತೆಲುಗು ಚಿತ್ರೋದ್ಯಮದಲ್ಲಿ ಪ್ರತಿಷ್ಠಿತ ನಿರ್ಮಾಣ ಸಂಸ್ಥೆ ಎಂದೇ ಖ್ಯಾತಿ ಪಡೆದಿರುವ ಮೈತ್ರಿ ಮೂವಿ ಮೇಕರ್ಸ್ ಸಂಸ್ಥೆಯು, ಭಾರೀ ಬಜೆಟ್ ಚಿತ್ರಗಳನ್ನೇ ತಯಾರು ಮಾಡುತ್ತಿದೆ. ಈ ಸಂಸ್ಥೆಯಿಂದ ಮೂಡಿ ಬಂದಿರುವ ವಾಲ್ತೇರು ವೀರಯ್ಯ ಹಾಗೂ ವೀರಸಿಂಹ ರೆಡ್ಡಿ ಚಿತ್ರಗಳು ಈ ವಾರ ದೇಶಾದ್ಯಂತ ಬಿಡುಗಡೆ ಆಗಿ, ಯಶಸ್ವಿ ಪ್ರದರ್ಶನ ಕಾಣುತ್ತಿವೆ. ಅಲ್ಲದೇ, ಇನ್ನೂ ಹಲವು ಚಿತ್ರಗಳನ್ನು ಈ ಸಂಸ್ಥೆ ನಿರ್ಮಾಣ ಮಾಡುತ್ತಿದೆ.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಪುಷ್ಪಾ ಸಿನಿಮಾ ಸಂಸ್ಥೆಯ ಮೇಲೆ ಐಟಿ ರೈಡ್: ಆತಂಕದಲ್ಲಿ ತೆಲುಗು ಚಿತ್ರೋದ್ಯಮ

    ಪುಷ್ಪಾ ಸಿನಿಮಾ ಸಂಸ್ಥೆಯ ಮೇಲೆ ಐಟಿ ರೈಡ್: ಆತಂಕದಲ್ಲಿ ತೆಲುಗು ಚಿತ್ರೋದ್ಯಮ

    ಪುಷ್ಪಾ ಸಿನಿಮಾದ ಮೂಲಕ ಸಾಕಷ್ಟು ಸದ್ದು ಮಾಡಿದ್ದ ತೆಲುಗಿನ ನಿರ್ಮಾಣ ಸಂಸ್ಥೆ ಮೈತ್ರಿ ಮೂವೀಸ್ ಮೇಲೆ 15ಕ್ಕೂ ಹೆಚ್ಚು ಕಡೆ ಆದಾಯ ತೆರಿಗೆ ಇಲಾಖೆ ದಾಳಿ ಮಾಡಿದೆ. ಹಲವು ಗಂಟೆಗಳ ಕಾಲ ಶೋಧ ಕಾರ್ಯ ಕೂಡ ನಡೆಸಿದೆ. ನವೀನ್ ಅರ್ನೇನಿ, ಚೆರುಕುರಿ, ಯಲಮಂಚಿಲಿ ರವಿಶಂಕರ್ ಹಾಗೂ ಅವರುಗಳ ಕಚೇರಿಗಳ ಮೇಲೆ ಸತತ ಹಲವು ಗಂಟೆಗಳ ಕಾಲ ಅಧಿಕಾರಿಗಳು ಶೋಧ ಕಾರ್ಯ ಮಾಡಿದ್ದಾರೆ. ಅಧಿಕಾರಿಗಳು ಬೇರೆ ಬೇರೆ ರಾಜ್ಯಗಳಿಂದ ಬಂದಿದ್ದಾರೆ ಎಂದು ಹೇಳಲಾಗುತ್ತಿದೆ.

    ರಂಗಸ್ಥಳಂ, ಶ್ರೀಮಂತುಡು ಸೇರಿದಂತೆ ಬ್ಲಾಕ್ ಬಸ್ಟರ್ ಸಿನಿಮಾಗಳನ್ನು ನಿರ್ಮಾಣ ಮಾಡಿರುವ ಸಂಸ್ಥೆ ಇದಾಗಿದ್ದು, ಪುಷ್ಪಾ ಸಿನಿಮಾದ ಮೂಲಕ ಮತ್ತೊಂದು ಸಾಕಷ್ಟು ಸದ್ದು ಮಾಡಿದ್ದರು. ಅವರು ಪುಷ್ಪಾ 2 ಸಿನಿಮಾ ಕೂಡ ಚಿತ್ರೀಕರಣದಲ್ಲಿ ತೊಡಗಿದ್ದು, ಭಾರೀ ಮೊತ್ತದಲ್ಲೇ ಈ ಸಿನಿಮಾವನ್ನು ನಿರ್ಮಾಣ ಮಾಡಲಾಗುತ್ತಿದೆ. ಅಲ್ಲದೇ ಇನ್ನೂ ಹಲವು ಸಿನಿಮಾಗಳನ್ನೂ ಅದು ಘೋಷಣೆ ಮಾಡಿದೆ. ಇದನ್ನೂ ಓದಿ: ಕೊನೆಗೂ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೊಟ್ರು ರಾಮ್ ಚರಣ್ ದಂಪತಿ

    ಇತ್ತೀಚಿನ ದಿನಗಳಲ್ಲಿ ವಿಜಯ್ ದೇವರಕೊಂಡ, ಚಿರಂಜೀವಿ, ಬಾಲಕೃಷ್ಣ, ಪವನ್ ಕಲ್ಯಾಣ್ ಸೇರಿದಂತೆ ಹಲವು ಸೂಪರ್ ಸ್ಟಾರ್ ಸಿನಿಮಾಗಳ ಘೋಷಣೆ ಮಾಡಿತ್ತು ಮೈತ್ರಿ ಮೂವೀಸ್. ಜೊತೆಗೆ ಸಂಭಾವನೆ ರೂಪದಲ್ಲಿ ಭಾರೀ ಮೊತ್ತದ ಹಣವನ್ನೇ ನೀಡಲಾಗಿದೆ ಎಂದು ಹೇಳಲಾಗುತ್ತಿದೆ. ಈಗಾಗಲೇ ಘೋಷಿಸಿರುವ ಚಿತ್ರಗಳ ಬಜೆಟ್ ಕೂಡ ಅಚ್ಚರಿ ಮೂಡಿಸುವಂತಿವೆ. ಈ ಕಾರಣದಿಂದಾಗಿಯೇ ಆದಾಯ ತೆರಿಗೆ ಅಧಿಕಾರಿಗಳು ಬೆಳ್ಳಂಬೆಳಗ್ಗೆ ನಿರ್ಮಾಣ ಸಂಸ್ಥೆಯ ಪಾಲುದಾರರ ಕಚೇರಿ ಮತ್ತು ಮನೆ ಮೇಲೆ ದಾಳಿ ಮಾಡಿದ್ದಾರೆ.

    Live Tv
    [brid partner=56869869 player=32851 video=960834 autoplay=true]