Tag: ಮೈತ್ರಿ ಪಕ್ಷ

  • ಮೂಡ್ ಅಂದ್ರೆ ಬೇರೆ ಕಣಪ್ಪ – ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ: ಸಿದ್ದು ಹಾಸ್ಯದ ಹೇಳಿಕೆ

    ಮೂಡ್ ಅಂದ್ರೆ ಬೇರೆ ಕಣಪ್ಪ – ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ: ಸಿದ್ದು ಹಾಸ್ಯದ ಹೇಳಿಕೆ

    ಮೈಸೂರು: ಮೂಡ್ ಅಂದ್ರೆ ಬೇರೆ ಕಣಪ್ಪ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ಹಾಸ್ಯ ಮಿಶ್ರಿತ ಹೇಳಿಕೆ ನೀಡಿದ್ದಾರೆ.

    ಮೈಸೂರಿನಲ್ಲಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಜನರು ಕಾಂಗ್ರೆಸ್ ಪರವಾಗಿ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಅದು ಮೂಡ್ ಅಲ್ಲ ಅದು ಜನರ ಅಭಿಪ್ರಾಯ. ಮೂಡ್ ಅಂದ್ರೆ ಬೇರೆ. ಮೂಡ್ ಬರೋದು ಬೇರೆ ಬೇರೆ ಕೆಲಸಗಳಿಗೆ. ಈಗ ಇರೋದು ಜನರ ಅಭಿಪ್ರಾಯ ಅಷ್ಟೇ ಎಂದರು.

    ಜನರು ಕಾಂಗ್ರೆಸ್ ಪರವಾಗಿ, ಮೈತ್ರಿ ಅಭ್ಯರ್ಥಿ ಪರವಾಗಿ ಕೆಲಸ ಮಾಡಲು ನಿರ್ಧಾರ ಮಾಡಿದ್ದಾರೆ. ಅದು ಮೂಡ್ ಅಲ್ಲ. ಅದು ಜನರ ಅಭಿಪ್ರಾಯ. ನೀವ್ ಯಾವ್ ಮೂಡ್ ಅಲ್ಲಿ ಕೇಳ್ತಿದ್ದೀರೋ ನನಗೆ ಗೊತ್ತಿಲ್ಲ. ಮೂಡ್ ಬೇರೆ, ಜನರ ಅಭಿಪ್ರಾಯ ಬೇರೆ ಎಂದು ಮಾಧ್ಯಮದವರ ಜೊತೆ ಹಾಸ್ಯವಾಗಿ ಮಾತನಾಡಿದರು.

    ಇದೇ ವೇಳೆ ಭಾನುವಾರ ನಂಗೆ ಚುನಾವಣೆ ಸಾಕಾಗಿ ಹೋಗಿದೆ. ರಾಹುಲ್ ಗಾಂಧಿ ಪ್ರಧಾನಿ ಆದ್ರೆ ಸಾಕು ಎಂದು ಓಡಾಡುತ್ತಿದ್ದೇನೆ ಎಂದು ಹೇಳಿದರು.

  • ಪ್ರತಾಪ್ ಸಿಂಹ ಅಲ್ಲ, ತಿಮ್ಮ ಎಂದ ಕೈ ನಾಯಕ

    ಪ್ರತಾಪ್ ಸಿಂಹ ಅಲ್ಲ, ತಿಮ್ಮ ಎಂದ ಕೈ ನಾಯಕ

    ಮೈಸೂರು: ಹುಣಸೂರಿನ ಮೈತ್ರಿ ಕಾರ್ಯಕರ್ತರ ಸಭೆಯಲ್ಲಿ ಸಂಸದ ಪ್ರತಾಪ್ ಸಿಂಹ ಹೆಸರನ್ನೇ ಮಾಜಿ ಶಾಸಕ ಹಾಗೂ ಕಾಂಗ್ರೆಸ್ ಮುಖಂಡ ಎಚ್.ಪಿ.ಮಂಜುನಾಥ್ ಟೀಕಿಸಿದ್ದಾರೆ.

    ಮಾಧ್ಯಮಗಳ ಜೊತೆ ಮಾತನಾಡಿದ ಅವರು, ಎಲ್ಲರೂ ಸೇರಿ ಪ್ರತಾಪ್ ಅವರನ್ನು ಸಿಂಹ ಮಾಡಿಬಿಟ್ಟಿದ್ದಾರೆ. ಆದ್ರೆ ಅವರು ಪೇಪರ್‍ನ ಸಿಂಹ. ಅವರ ನಡವಳಿಕೆ ಜನರ ಮನಸಲ್ಲಿ ವಿಷತುಂಬಿಸುವ ಕೆಲಸ ಮಾಡುತ್ತೆ. ಆದ್ದರಿಂದ ಅವರು ಪ್ರತಾಪ್ ತಿಮ್ಮ. ಎಲ್ಲರು ಜನರಲ್ಲಿ ಪ್ರೀತಿ ವಿಶ್ವಾಸ ಮೂಡಿಸಬೇಕು. ಐದು ವರ್ಷಗಳ ಹಿಂದೆ ಪ್ರತಾಪ್ ಸಿಂಹ ಸಂಸದರಾಗಿ ಬಂದರು. ಆಗಿನಿಂದ ಕ್ಷೇತ್ರದಲ್ಲಿ ಏನೂ ಅಭಿವೃದ್ಧಿ ಮಾಡಿಲ್ಲ ಎಂದು ಕಿಡಿಕಾರಿದರು.

    ಪ್ರತಾಪ್ ಸಿಂಹ ಅವರ ಈ ಅವಧಿಯಲ್ಲಿ ಅವರ ಸಾಧನೆ ಏನು? ಶಾಂತಿಯುತವಾಗಿದ್ದ ಹುಣಸೂರನ್ನು ಮತ್ತೊಂದು ಮಂಗಳೂರು ಮಾಡಿದ್ದಾರೆ. ನೆಮ್ಮದಿಯಾಗಿ ಬದುಕುವ ವಾತಾವರಣ ಹಾಳು ಮಾಡಿದ್ದಾರೆ. ಈಗ ಚುನಾವಣೆ ಬಂದಿದೆ. ಸಿ.ಎಚ್.ವಿಜಯ ಶಂಕರ್ ಪುಣ್ಯ ಅನ್ನಿಸುತ್ತೆ ಜೆಡಿಎಸ್- ಕಾಂಗ್ರೆಸ್ ನಾಯಕರು ಒಟ್ಟಾಗಿದ್ದಾರೆ. ಕಿತ್ತಾಡುತ್ತಿದ್ದ ಸಿದ್ದರಾಮಯ್ಯ- ಜಿ.ಟಿ.ದೇವೇಗೌಡ ಅವರೇ ಒಂದಾಗಿದ್ದಾರೆ. ಇನ್ನು ನಾವು, ನೀವು ಒಂದಾಗುವುದರಲ್ಲಿ ಏನಿದೆ? ಜೆಡಿಎಸ್- ಕಾಂಗ್ರೆಸ್ ಕಾರ್ಯಕರ್ತರು ಪ್ರಚಾರಕ್ಕೆ ಇಳಿಯುವುದರಲ್ಲಿ ಹಿಂದೆ ಇದ್ದಾರೆ. ಅದೊಂದು ಬಿಟ್ಟರೆ ಉಳಿದೆಲ್ಲ ವಿಚಾರಗಳಲ್ಲೂ ನಾವು ಮುಂದೆ ಇದ್ದೇವೆ ಎಂದು ತಿಳಿಸಿದರು.

  • ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

    ಸುಮಲತಾರನ್ನು ಚುನಾವಣಾ ಕಣಕ್ಕಿಳಿಸಲು ಪಟ್ಟು ಹಿಡಿದ ಅಂಬಿ ಅಭಿಮಾನಿ ಬಳಗ

    ಮಂಡ್ಯ: ಈ ಬಾರಿ ಮಂಡ್ಯ ಲೋಕಸಭೆ ಚುನಾವಣಾ ಅಭ್ಯರ್ಥಿಯಾಗಿ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅಂತ ಅಭಿಮಾನಿಗಳು ಪಟ್ಟು ಹಿಡಿದಿದ್ದಾರೆ. ಹೀಗಾಗಿ ಇಂದು ಮಂಡ್ಯದಿಂದ ಸಾವಿರಾರು ಅಂಬಿ ಅಭಿಮಾನಿಗಳು ಬೆಂಗಳೂರಿನತ್ತ ಪ್ರಯಾಣ ಬೆಳೆಸಲಿದ್ದಾರೆ.

    ಸ್ಯಾಂಡಲ್‍ವುಡ್ ಕಲಾವಿದರು ಒತ್ತಾಯ ಮಾಡಿದ್ದು ಆಯ್ತು, ಈಗ ಅಂಬರೀಶ್ ಅಭಿಮಾನಿಗಳ ಒತ್ತಾಯ ಶುರುವಾಗಿದೆ. ಹೌದು ಬರುವ ಲೋಕಸಭೆ ಚುನಾವಣೆಯಲ್ಲಿ ಸುಮಲತಾ ಅಂಬರೀಶ್ ಅವರನ್ನು ಕಣಕ್ಕಿಳಿಸುವಂತೆ ರೆಬೆಲ್ ಸ್ಟಾರ್ ಅಭಿಮಾನಿಗಳು ಹಾಗೂ ಕಾಂಗ್ರೆಸ್ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಈ ಕುರಿತು ಮನವಿ ಮಾಡಿಕೊಳ್ಳಲು ಇಂದು ಮಂಡ್ಯದಿಂದ ಬೆಂಗಳೂರಿನ ಅಂಬರೀಶ್ ಅವರ ನಿವಾಸಕ್ಕೆ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಬರಲಿದ್ದಾರೆ.

    ಲೋಕಸಭೆ ಚುನಾವಣೆ ಹತ್ತಿರವಾಗ್ತಿದ್ದಂತೆ ಸಕ್ಕರೆನಾಡಿನಲ್ಲಿ ರಾಜಕೀಯ ಗರಿಗೆದರಿದೆ. ಈ ಬಾರಿ ಲೋಕಸಭಾ ಚುನಾವಣೆಗೆ ಸುಮಲತಾ ಅಂಬರೀಶ್ ಸ್ಪರ್ಧೆ ಮಾಡಲೇ ಬೇಕು ಅನ್ನೋ ಒತ್ತಾಯ ತೀವ್ರವಾಗಿ ಕೇಳಿಬರ್ತಿದೆ. ಈ ಬಗ್ಗೆ ಕೆಲ ದಿನಗಳ ಹಿಂದೆ ಸ್ಯಾಂಡಲ್‍ವುಡ್‍ನ ಪ್ರಮುಖರು ಕೂಡ ಸುಮಲತಾ ಅವರನ್ನು ಚುನಾವಣೆಯಲ್ಲಿ ಸ್ಪರ್ಧಿಸುವಂತೆ ಮನವಿ ಮಾಡಿಕೊಂಡಿದ್ದರು. ಈಗ ಮತ್ತೆ ಮಂಡ್ಯದಲ್ಲಿ ಕಾಂಗ್ರೆಸ್ ಕಾರ್ಯಕರ್ತರು ಹಾಗೂ ಅಂಬಿ ಅಭಿಮಾನಿಗಳಿಂದ ಸುಮಲತಾ ಸ್ಪರ್ಧೆಗೆ ಒತ್ತಾಯ ಕೇಳಿ ಬಂದಿದೆ. ಇಷ್ಟೇ ಅಲ್ಲದೆ ಈಗಾಗಲೇ ಮೈತ್ರಿ ಪಕ್ಷದಿಂದ ಸುಮಲತಾರನ್ನು ಕಣಕ್ಕಿಳಿಸುವ ಉದ್ದೇಶದಿಂದ ಜೆಡಿಎಸ್ ವರಿಷ್ಠ ಹೆಚ್‍ಡಿ ದೇವೇಗೌಡರನ್ನ ಹಾಗೂ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಸಂಪರ್ಕಿಸಿದ್ದಾರೆ. ಹಾಗೆಯೇ ಅಂಬಿ ಅಭಿಮಾನಿಗಳು ಸುಮಲತಾ ಅವರನ್ನೇ ಅಭ್ಯರ್ಥಿಯನ್ನಾಗಿ ಮಾಡುವಂತೆ ಒತ್ತಾಯ ಮಾಡಲಾಗಿದೆ ಅಂತ ಮಾಹಿತಿ ಮೂಲಗಳು ತಿಳಿಸಿವೆ.

    ಇಂದು ಬೆಳಗ್ಗೆ ಮಂಡ್ಯದಿಂದ ಸಾವಿರಾರು ಸಂಖ್ಯೆಯಲ್ಲಿ ಅಭಿಮಾನಿಗಳು ಅಂಬರೀಶ್ ರವರ ಮನೆಗೆ ತೆರಳಲು ಸಿದ್ಧತೆ ಮಾಡಿಕೊಂಡಿದ್ದಾರೆ. ಇಂದು ಶತಾಯಾ-ಗತಾಯ ಸುಮಲತಾ ಅಂಬರೀಶ್ ರವರ ಮನವೊಲಿಸಿ ಈ ಬಾರಿ ಮಂಡ್ಯದಿಂದ ಸ್ಪರ್ಧೆ ಮಾಡುವಂತೆ ಒತ್ತಾಯ ಮಾಡಲಿದ್ದಾರೆ. ಬೆಳಗ್ಗೆ ಮಂಡ್ಯ ನಗರದಿಂದ ಎರಡು ಬಸ್ಸುಗಳನ್ನು ಮಾಡಲಾಗಿದ್ದು, ಜಿಲ್ಲಾದ್ಯಂತ ಹಲವಾರು ಬಸ್ ಮೂಲಕ ತೆರಳಲು ಅಭಿಮಾನಿಗಳು ತಯಾರಿ ನಡೆಸಿದ್ದಾರೆ.

    ಮತ್ತೊಂದು ಕಡೆ ಮಂಡ್ಯದಿಂದ ನಿಖಿಲ್ ಕುಮಾರಸ್ವಾಮಿಯವರನ್ನು ಕಣಕ್ಕಿಳಿಸಲು ಜೆಡಿಎಸ್ ಕೂಡ ತಯಾರಿ ನಡೆಸಿದೆ. ಈ ಹಿನ್ನೆಲೆಯಲ್ಲಿ ನಿಖಿಲ್ ಮಂಡ್ಯದ ಕಾರ್ಯಕ್ರಮಗಳಲ್ಲಿ ಹೆಚ್ಚಾಗಿ ಕಾಣಿಸಿಕೊಳ್ತಿದ್ದಾರೆ. ಇದಕ್ಕೆ ಪುಷ್ಟಿ ನೀಡುವಂತೆ ಈ ಹಿಂದೆ ಕುಮಾರಸ್ವಾಮಿಯವರು ಕೂಡ ಅಭಿಮಾನಿಗಳ ಒತ್ತಾಯ ಇದೆ. ಹೀಗಾಗಿ ನಿಖಿಲ್ ಮಂಡ್ಯದಿಂದ ಸ್ಪರ್ಧೆ ಮಾಡುವ ಸಾಧ್ಯತೆ ಇದೆ ಎಂದು ತಿಳಿಸಿದ್ದರು. ಸದ್ಯ ಮಂಡ್ಯದಲ್ಲಿ ಈ ಬಾರಿ ಯಾರು ಅಭ್ಯರ್ಥಿ ಆಗ್ತಾರೆ ಅನ್ನೋ ಗೊಂದಲ ಶುರುವಾಗಿದ್ದು, ಮೈತ್ರಿ ಪಕ್ಷ ಯಾವ ರೀತಿ ಇದನ್ನ ಸರಿಪಡಿಸಿಕೊಂಡು ಅಭ್ಯರ್ಥಿಯನ್ನ ಕಣಕ್ಕಿಳಿಸುತ್ತೆ ಅಂತ ಕಾದು ನೋಡಬೇಕಾಗಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv