Tag: ಮೈತ್ರಿ ಒಕ್ಕೂಟ

  • ವಿಪಕ್ಷಗಳ ಒಗ್ಗಟ್ಟು ಮೋದಿಯನ್ನು ಮಣಿಸಬಹುದೇ?

    ವಿಪಕ್ಷಗಳ ಒಗ್ಗಟ್ಟು ಮೋದಿಯನ್ನು ಮಣಿಸಬಹುದೇ?

    ನವದೆಹಲಿ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಪ್ರಧಾನಿ ನರೇಂದ್ರ ಮೋದಿ (Narendra Modi) ನೇತೃತ್ವದ ಎನ್‌ಡಿಎ (NDA) ಒಕ್ಕೂಟವನ್ನು ಮಣಿಸಲು ವಿರೋಧ ಪಕ್ಷಗಳ ನಾಯಕರು ಒಟ್ಟಾಗಿ ಇಂಡಿಯಾ (INDIA) ಹೆಸರಿನ ಹೊಸ ಬಣವೊಂದನ್ನು ಸ್ಥಾಪಿಸಿದ್ದಾರೆ. ಈ ಹೊಸ ಒಕ್ಕೂಟದ ಮೂಲಕ ಎಲ್ಲಾ ನಾಯಕರು ಒಂದಾದರೂ ಮೋದಿ ಮಣಿಸುವುದು ಕಷ್ಟ ಎಂದು ವಿಶ್ಲೇಷಣೆ ಮಾಡಲಾಗುತ್ತಿದೆ.

    ಇಂತಹದೊಂದು ವಿಶ್ಲೇಷಣೆಗೆ ಮುಖ್ಯ ಕಾರಣ ಪ್ರಧಾನಿ ನರೇಂದ್ರ ಮೋದಿ ಅವರ ಮತ ಪ್ರಮಾಣದ ಗಳಿಕೆಯ ಗುರಿ. ವಿಪಕ್ಷ ನಾಯಕರು ಇಂಡಿಯಾ ಹೊಸ ಒಕ್ಕೂಟವನ್ನು ಸ್ಥಾಪಿಸಿದ ದಿನದಂದೇ ಪ್ರಧಾನಿ ನರೇಂದ್ರ ಮೋದಿ 2024ರ ಚುನಾವಣೆಯಲ್ಲಿ 50% ಅಧಿಕ ಮತ ಪ್ರಮಾಣ ಪಡೆಯುವ ಗುರಿಯನ್ನು ಘೋಷಿಸಿದ್ದಾರೆ. ಇದನ್ನೂ ಓದಿ: ‘ಜೀತೇಗ ಭಾರತ್’ INDIA ಒಕ್ಕೂಟಕ್ಕೆ ಹೊಸ ಟ್ಯಾಗ್‌ಲೈನ್

    ವಿರೋಧ ಪಕ್ಷಗಳು ಮೈತ್ರಿ (Alliance Meeting) ಮೂಲಕ ಚುನಾವಣೆಯಲ್ಲಿ ಸಾಮಾನ್ಯ ಅಭ್ಯರ್ಥಿಯನ್ನು ಹಾಕುವ ನಿರ್ಧಾರ ಮಾಡುತ್ತಿವೆ. ಆದರೆ ಇದಕ್ಕೂ ಮೊದಲು ಇಂಡಿಯಾ ಒಕ್ಕೂಟಕ್ಕೆ ಒಂದು ಪ್ರಬಲ ನಾಯಕತ್ವದ ಅಗತ್ಯವಿದೆ. ಪ್ರಧಾನಿ ನರೇಂದ್ರ ಮೋದಿ ಅವರ ಜನಪ್ರಿಯತೆಗೆ ಸಮಾನಾಗಿ ನಿಲ್ಲಬಲ್ಲ ನಾಯಕತ್ವದ ಟ್ರಂಪ್ ಕಾರ್ಡ್ ಬೇಕಿದೆ. ಸದ್ಯ ಮೋದಿ ವಿರುದ್ಧ ಯಾವುದೇ ನಾಯಕತ್ವದ ಮುಖವಿಲ್ಲ. ಭ್ರಷ್ಟಾಚಾರದ ಕಳಂಕವಿಲ್ಲದ, ವಂಶಪಾರಂಪರ್ಯವಲ್ಲದ ಮತ್ತು ಪ್ರಬಲ ಹಾಗೂ ನಿರ್ಣಾಯಕ ನಿರ್ಧಾರಗಳನ್ನು ತೆಗೆದುಕೊಳ್ಳಬಲ್ಲ ನಾಯಕನ ಅಗತ್ಯ ಇಂಡಿಯಾ ಒಕ್ಕೂಟಕ್ಕಿದೆ. ಮತ ಬ್ಯಾಂಕ್ ಬಲವರ್ಧಿಸುವ ಮುಖದ ಅಗತ್ಯವಿದೆ. ಆ ನಾಯಕತ್ವ ಇನ್ನೂ ಘೋಷಣೆಯಾಗಿಲ್ಲ. ಇದನ್ನೂ ಓದಿ: INDIA ಹೆಸರಿಗೆ ಮೈತ್ರಿಯಲ್ಲೇ ವಿರೋಧ – ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್

    ಹೊಸ ಮೈತ್ರಿಕೂಟವು ಪ್ರಸ್ತುತ ಲೋಕಸಭೆಯಲ್ಲಿ ಸುಮಾರು 140 ಸ್ಥಾನಗಳಲ್ಲಿದೆ. ಎನ್‌ಡಿಎ 330ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುಂದಿದೆ. 2019ರಲ್ಲಿ ಎನ್‌ಡಿಎ 50%ಕ್ಕಿಂತ ಹೆಚ್ಚು ಮತಗಳ ಹಂಚಿಕೆಯೊಂದಿಗೆ 225 ಲೋಕಸಭಾ ಸ್ಥಾನಗಳನ್ನು ಗೆದ್ದಿದೆ ಎಂದು ಪ್ರಧಾನಿ ಮೋದಿ ಮಂಗಳವಾರ ಗಮನ ಸೆಳೆದರು. ಆ ಸ್ಥಾನಗಳನ್ನು ಕಸಿದುಕೊಳ್ಳುವುದು ಪ್ರತಿಪಕ್ಷಗಳಿಗೆ ದೊಡ್ಡ ಪ್ರಶ್ನೆಯಾಗಿದೆ. ಇದಲ್ಲದೇ 2014ರಲ್ಲಿ 38%ರಿಂದ 2019ರ ಚುನಾವಣೆಯಲ್ಲಿ ಎನ್‌ಡಿಎ ಮತ ಹಂಚಿಕೆ 44%ಕ್ಕೆ ಏರಿದೆ. ಇದನ್ನೂ ಓದಿ: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ರಾಹುಲ್, ಸೋನಿಯಾ ಗಾಂಧಿ ವಿಮಾನ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ

    ಬಿಹಾರದಂತಹ ಕೆಲವು ರಾಜ್ಯಗಳಲ್ಲಿ ಪ್ರತಿಪಕ್ಷಗಳ ಒಗ್ಗಟ್ಟು ಯಶಸ್ವಿಯಾಗಿರಬಹುದು ಆದರೆ ಈ ಫಲಿತಾಂಶ ಎನ್‌ಡಿಎ ನೇತೃತ್ವದಲ್ಲಿ ಕಂಡುಬಂದಿದೆ. 2019ರ ಲೋಕಸಭಾ ಚುನಾವಣೆಯಲ್ಲಿ ಎಸ್‌ಪಿ ಮತ್ತು ಬಿಎಸ್‌ಪಿ ಮೈತ್ರಿ ಮಾಡಿಕೊಂಡವು. ಅದಾಗಿಯೂ ಫಲಿತಾಂಶದಲ್ಲಿ ದೊಡ್ಡ ಬದಲಾವಣೆಯಾಗಿಲ್ಲ. 2014ರಲ್ಲಿ 73ರಿಂದ 2019ರಲ್ಲಿ 64ಕ್ಕೆ ಇಳಿಯಿತು. ಬಳಿಕ ಉಪ ಚುನಾವಣೆಯಲ್ಲಿ ಮತ್ತೆರಡು ಸ್ಥಾನಗಳನ್ನು ಬಿಜೆಪಿ ಗೆದ್ದುಕೊಂಡಿತು. ಇದನ್ನೂ ಓದಿ: ದೆಹಲಿಯಲ್ಲಿ ಎನ್‍ಡಿಎ ಮೆಗಾ ಮೀಟಿಂಗ್ – ಮೋದಿ ನಾಯಕತ್ವಕ್ಕೆ ನಮೋ ಎಂದ 38 ಪಕ್ಷಗಳು

    ಪಶ್ಚಿಮ ಬಂಗಾಳ, ಉತ್ತರ ಪ್ರದೇಶ, ದೆಹಲಿ ಮತ್ತು ಪಂಜಾಬ್‌ನಂತಹ ರಾಜ್ಯಗಳಲ್ಲಿ ಪ್ರಾದೇಶಿಕ ಪಕ್ಷಗಳು ಕಾಂಗ್ರೆಸ್ (Congress) ಪಕ್ಷಕ್ಕೆ ಮತ್ತೆ ಜಾಗ ನೀಡಲು ಬಯಸುವುದಿಲ್ಲ. ಹೀಗಾಗಿ ಪ್ರಧಾನಿ ಮೋದಿ ಇಂಡಿಯಾ ಒಕ್ಕೂಟಕ್ಕೆ ದೊಡ್ಡ ಸವಾಲಾಗಿ ಉಳಿದಿದ್ದಾರೆ. ಇದನ್ನೂ ಓದಿ: ISI ನಂಟಿನ ಶಂಕೆ – ಅಕ್ರಮವಾಗಿ ಭಾರತ ಪ್ರವೇಶಿಸಿದ ಸೀಮಾ ಹೈದರ್ ತೀವ್ರ ವಿಚಾರಣೆ

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • INDIA ಹೆಸರಿಗೆ ಮೈತ್ರಿಯಲ್ಲೇ ವಿರೋಧ – ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್

    INDIA ಹೆಸರಿಗೆ ಮೈತ್ರಿಯಲ್ಲೇ ವಿರೋಧ – ಆಕ್ಷೇಪ ವ್ಯಕ್ತಪಡಿಸಿದ ನಿತೀಶ್ ಕುಮಾರ್

    ನವದೆಹಲಿ: ಬಿಜೆಪಿ (BJP) ವಿರುದ್ಧದ ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ನಾಮಕರಣ ಮಾಡಿರುವುದಕ್ಕೆ ಬಿಹಾರ (Bihar) ಮುಖ್ಯಮಂತ್ರಿ, ಜೆಡಿಯು ಮುಖ್ಯಸ್ಥ ನಿತೀಶ್ ಕುಮಾರ್ (Nitish Kumar) ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ಹೇಳಿವೆ.

    ಮಂಗಳವಾರ ಬೆಂಗಳೂರಿನಲ್ಲಿ (Bengaluru) ನಡೆದ ಸಭೆಯಲ್ಲಿ ಕಾಂಗ್ರೆಸ್ ಈ ಹೆಸರು ಘೋಷಣೆ ಮಾಡಿತ್ತು. ಘೋಷಣೆ ಬೆನ್ನಲ್ಲೇ ಸಭೆಯಲ್ಲಿ ನಿತೀಶ್ ಕುಮಾರ್ ಆಘಾತ ವ್ಯಕ್ತಪಡಿಸಿದ್ದು, INDIA ಎಂದು ಹೆಸರಿಡಲು ಹೇಗೆ ಸಾಧ್ಯ? ಈ ಬಗ್ಗೆ ಚರ್ಚೆ ಮಾಡದೇ ಹೆಸರು ಅಂತಿಮಗೊಳಿಸಿದೆ ಎಂದು ತಕರಾರು ಮಾಡಿದ್ದಾರೆ ಎನ್ನಲಾಗಿದೆ. ಇದನ್ನೂ ಓದಿ: ಬೆಂಗಳೂರಿನಿಂದ ದೆಹಲಿಗೆ ತೆರಳುತ್ತಿದ್ದ ರಾಹುಲ್, ಸೋನಿಯಾ ಗಾಂಧಿ ವಿಮಾನ ಭೋಪಾಲ್‌ನಲ್ಲಿ ತುರ್ತು ಭೂಸ್ಪರ್ಶ

    ಮೂಲಗಳ ಪ್ರಕಾರ ವಿರೋಧ ಪಕ್ಷಗಳ ಒಕ್ಕೂಟಕ್ಕೆ INDIA ಎಂದು ಹೆಸರಿಡಲು ರಾಹುಲ್ ಗಾಂಧಿ (Rahul Gandhi) ಸೂಚಿಸಿದ್ದರು. ಅಂತೆಯೇ ಕಾಂಗ್ರೆಸ್ (Congress) ನಾಯಕರು ಈ ಹೆಸರನ್ನು ಅಂತಿಮಗೊಳಿಸಿದ್ದಾರೆ. ಆದರೆ ವಿರೋಧ ಪಕ್ಷಗಳ ಒಟ್ಟುಗೂಡಿಸುವ ರೂವಾರಿಯಾಗಿದ್ದ ತಮ್ಮನ್ನು ಈ ಬಗ್ಗೆ ಒಂದು ಮಾತು ಕೇಳಿಲ್ಲ ಎನ್ನುವುದು ನಿತೀಶ್ ಕುಮಾರ್ ವಾದ. ಇದನ್ನೂ ಓದಿ: ದೆಹಲಿಯಲ್ಲಿ ಎನ್‍ಡಿಎ ಮೆಗಾ ಮೀಟಿಂಗ್ – ಮೋದಿ ನಾಯಕತ್ವಕ್ಕೆ ನಮೋ ಎಂದ 38 ಪಕ್ಷಗಳು

    ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸುವಲ್ಲಿ ನಿತೀಶ್ ಕುಮಾರ್ ಪಾತ್ರವನ್ನು ಅಲ್ಲಗೆಳೆಯುವಂತಿಲ್ಲ. ಆದರೆ ಕಾಂಗ್ರೆಸ್ ಇಡೀ ಮೈತ್ರಿಯನ್ನು ಹೈಜಾಕ್ ಮಾಡಿರುವ ರೀತಿಗೆ ಈಗ ಜೆಡಿಯು ಮತ್ತು ಆರ್‌ಜೆಡಿ ನಾಯಕರು ಆಕ್ಷೇಪ ವ್ಯಕ್ತಪಡಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ನಡೀತಿರೋದು ಕಡು ಭ್ರಷ್ಟರ ಸಮ್ಮೇಳನ, ಹೆಚ್ಚು ಭ್ರಷ್ಟರಿಗೆ ಹೆಚ್ಚು ಗೌರವ – ಮಹಾಘಟಬಂಧನ್‌ ವಿರುದ್ಧ ಮೋದಿ ವಾಗ್ದಾಳಿ

    ಈ ಹಿಂದೆ ವಿರೋಧಿ ಬಣವನ್ನು ಯುಪಿಎ (United Progressive Alliance) ಎಂದು ಕರೆಯಲಾಗುತ್ತಿತ್ತು. ಇದು ಮಾಜಿ ಕಾಂಗ್ರೆಸ್ ಅಧ್ಯಕ್ಷೆ ಸೋನಿಯಾ ಗಾಂಧಿ (Sonia Gandhi) ನೇತೃತ್ವದಲ್ಲಿ 2004ರಿಂದ 2014ರವರೆಗೆ ದೇಶವನ್ನು ಆಳಿತು. ಇದನ್ನೂ ಓದಿ: ಮಾನಹಾನಿ ಪ್ರಕರಣದಲ್ಲಿ ರಾಹುಲ್ ಗಾಂಧಿಗೆ ಶಿಕ್ಷೆ – ಶುಕ್ರವಾರ ಅರ್ಜಿ ವಿಚಾರಣೆ ನಡೆಸಲಿರುವ ಸುಪ್ರೀಂಕೋರ್ಟ್

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]