Tag: ಮೈಕ್

  • ಮೈಕ್‍ಗಾಗಿ ಕಿತ್ತಾಡಿಕೊಂಡ ಕೈ ಕಾರ್ಯಕರ್ತರು

    ಮೈಕ್‍ಗಾಗಿ ಕಿತ್ತಾಡಿಕೊಂಡ ಕೈ ಕಾರ್ಯಕರ್ತರು

    ಬಳ್ಳಾರಿ: ಕಾಂಗ್ರೆಸ್ ಸಭೆಯಲ್ಲಿ ಮೈಕ್ ಗಾಗಿ ಕಾಂಗ್ರೆಸ್ ಕಾರ್ಯಕರ್ತರೇ ಕಿತ್ತಾಡಿಕೊಂಡ ಘಟನೆ ನಗರದಲ್ಲಿ ನಡೆದಿದೆ.

    ಕೃಷಿ ಸಚಿವ ಕೃಷ್ಣೇ ಭೈರೇಗೌಡ ಅಧ್ಯಕ್ಷತೆಯಲ್ಲಿಂದು ನಗರದ ಖಾಸಗಿ ಹೋಟೆಲ್‍ನಲ್ಲಿ ಕಾಂಗ್ರೆಸ್ ಮುಖಂಡರ ಸಭೆ ಹಮ್ಮಿಕೊಳ್ಳಲಾಗಿತ್ತು. ಸಭೆಯ ಅಧ್ಯಕ್ಷತೆ ವಹಿಸಿದ್ದ ಕೃಷ್ಣೇ ಭೈರೇಗೌಡ ಹಾಗೂ ಗ್ರಾಮೀಣ ಶಾಸಕ ನಾಗೇಂದ್ರ ಮಾತನಾಡುವುದು ಮುಗಿಯುತ್ತಿದ್ದಂತೆ, ಕೈ ಕಾರ್ಯಕರ್ತರು ಹಾಗೂ ಮುಖಂಡರ ನಡುವೆ ಮೈಕ್‍ಗಾಗಿ ಕಿತ್ತಾಟ ಏರ್ಪಟ್ಟಿತ್ತು.

    ಮೊದಲು ನಾನು ಮಾತನಾಡುತ್ತೀನಿ, ನನಗೂ ಅವಕಾಶ ಕೊಡಿ ಎಂದು ಒಬ್ಬರು ಮೈಕ್ ಹಿಡಿದುಕೊಂಡಿದ್ದಾರೆ. ಇದೇ ವೇಳೆ ಮತ್ತೊಬ್ಬರೂ ನಾನು ಮೊದಲು ಮಾತನಾಡಬೇಕು ಅಂತ ಇಬ್ಬರೂ ಪರಸ್ಪರ ಮೈಕ್ ಗಾಗಿ ಕಿತ್ತಾಡಿಕೊಂಡಿದ್ದಾರೆ. ಈ ಸಂಬಂಧ ವೇದಿಕೆಯಲ್ಲಿದ್ದ ಸಚಿವರು ಹಾಗೂ ಶಾಸಕರು ಎಷ್ಟೇ ಹೇಳಿದರೂ ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರ ಕಿತ್ತಾಟ ಮುಂದುವರಿದಿತ್ತು.

    ಇದೀಗ ಸಭೆಯಲ್ಲಿ ಕಾರ್ಯಕರ್ತರೇ ಕಿತ್ತಾಡಿಕೊಂಡಿದ್ದಕ್ಕೆ ಸಚಿವರು ಸೇರಿದಂತೆ ಇತರೆ ಮುಖಂಡರು ತಲೆ ತಗ್ಗಿಸುವಂತಾಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿ ಬಿದ್ದ ರಾಹುಲ್ ಗಾಂಧಿ

    ಚಿಕ್ಕಬಳ್ಳಾಪುರ: ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿ ಭಾಷಣ ಆರಂಭಕ್ಕೂ ಮುನ್ನ ಅರೆಕ್ಷಣ ಬೆಚ್ಚಿಬಿದ್ದಿದ್ದಾರೆ.

    ಕರ್ನಾಟಕ ವಿಧಾನಸಭಾ ಚುನಾವಣೆ ಪ್ರಚಾರಕ್ಕಾಗಿ ರಾಹುಲ್ ಗಾಂಧಿ ಅವರು ಜಿಲ್ಲೆಯ ಗೌರಿಬಿದನೂರು ಪಟ್ಟಣಕ್ಕೆ ಬಂದಿದ್ದರು. ನಗರದ ಗಾಂಧಿ ವೃತ್ತದಲ್ಲಿ ಸಮಾವೇಶದಲ್ಲಿ ರಾಹುಲ್ ಗಾಂಧಿ ಭಾಷಣ ಮಾಡುವಾಗ ಧ್ವನಿವರ್ಧಕದ ಕರ್ಕಶ ಶಬ್ದಕ್ಕೆ ಅರೆಕ್ಷಣ ಬೆಚ್ಚಿಬಿದ್ದಾರೆ.

    ರಾಹುಲ್ ಗಾಂಧಿ ಭಾಷಣ ಆರಂಭಿಸುವಾಗ ಮೈಕ್ ಕೈಕೊಟ್ಟಿದೆ. ನಂತರ ಧ್ವನಿವರ್ಧಕದಿಂದ ದಿಢೀರ್ ಬಂದ ಕರ್ಕಶ ಶಬ್ದದಿಂದ ಅವರು ಅರೆಕ್ಷಣ ಬೆಚ್ಚಿದ್ದಾರೆ. ಕರ್ಕಶ ಧ್ವನಿ ನಿಂತ ನಂತರ ರಾಹುಲ್ ಗಾಂಧಿ ನಗುಮುಖದಿಂದ ನಮಸ್ಕಾರ ಎಂದು ಭಾಷಣ ಆರಂಭಿಸಿದ್ದಾರೆ.

    ರಾಹುಲ್ ಗಾಂಧಿ ಇಂದು ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ಪಟ್ಟಣದಲ್ಲಿ ರೋಡ್ ಶೋ ನಡೆಸಿದರು. ಕಾಂಗ್ರೆಸ್ ಅಭ್ಯರ್ಥಿ ಎನ್.ಎಚ್ ಶಿವಶಂಕರರೆಡ್ಡಿ ಪರವಾಗಿ ರೋಡ್ ಶೋ ನಡೆಸಿದ್ದು, ಕೆಪಿಸಿಸಿ ಅಧ್ಯಕ್ಷ ಜಿ.ಪರಮೇಶ್ವರ್, ಸಂಸದ ಮೊಯಿಲಿ ರಾಹುಲ್ ಗಾಂಧಿಗೆ ಸಾಥ್ ನೀಡಿದರು. ಬಸವಣ್ಣನವರ ವಚನದಂತೆ ಮುಖ್ಯಮಂತ್ರಿ ಸಿದ್ದರಾಮಯ್ಯನವರ ಸರ್ಕಾರ ನುಡಿದಂತೆ ನಡೆದ ಸರ್ಕಾರ ಎಂದು ಹೊಗಳಿದರು.

  • ಮೈಕ್ ಎಂದುಕೊಂಡು ಟಾರ್ಚ್ ಹಿಡಿದು ಮಮತಾ ಭಾಷಣ – ವಿಡಿಯೋ ವೈರಲ್

    ಮೈಕ್ ಎಂದುಕೊಂಡು ಟಾರ್ಚ್ ಹಿಡಿದು ಮಮತಾ ಭಾಷಣ – ವಿಡಿಯೋ ವೈರಲ್

    ಕೊಲ್ಕತ್ತಾ: ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಮೈಕ್ ಬದಲು ಟಾರ್ಚ್ ಹಿಡಿದುಕೊಂಡು ಭಾಷಣ ಮಾಡಿರುವ ವಿಡಿಯೋ ಒಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

    ತೃಣಮೂಲ ಕಾಂಗ್ರೆಸ್ ಪಕ್ಷದ ಕಾರ್ಯಕ್ರಮದಲ್ಲಿ ಮಾತನಾಡುವಾಗ ಈ ಎಡವಟ್ಟಾಗಿದ್ದು, ಮೈಕ್ ಎಂದು ಟಾರ್ಚ್ ಹಿಡಿದು ಸುಮಾರು 16 ಸೆಕೆಂಡ್ ಮಮತಾ ಮಾತನಾಡಿದ್ದಾರೆ.

    ಆಗಿದ್ದು ಏನು?
    ಟಿಎಂಸಿ ಕಾರ್ಯಕ್ರಮದಲ್ಲಿ ಮಮತಾ ಬ್ಯಾನರ್ಜಿ ಭಾಗವಹಿಸಿದ್ದರು. ಈ ಕಾರ್ಯಕ್ರಮದಲ್ಲಿ cordless mic ಬಳಸಲಾಗುತಿತ್ತು. ಮಮತಾ ಭಾಷಣ ಮಾಡುವುದಕ್ಕೂ ಮೊದಲು ಅವರ ಸಹಾಯಕರು ಟಾರ್ಚ್ ಹಿಡಿದು ನಿಂತಿದ್ದರು. ತಮ್ಮ ಭಾಷಣದ ಸರದಿ ಬಂದಾಗ ಮಮತಾ ನೇರವಾಗಿ ಸಹಾಯಕರ ಬಳಿ ತೆರಳಿ ಟಾರ್ಚ್ ಪಡೆದು ಮಾತನಾಡಲು ಆರಂಭಿಸಿದ್ದಾರೆ.

    ಈ ಸಂದರ್ಭದಲ್ಲಿ ಅವರ ಮುಖದ ಮೇಲೆ ಟಾರ್ಚ್ ಬೆಳಕು ಬಿದ್ದಿದೆ. ಮಮತಾರ ಈ ಎಡವಟ್ಟನ್ನು ನೋಡಿದ ಕೂಡಲೇ ನಂತರ ಬೇರೊಬ್ಬ ವ್ಯಕ್ತಿ ಟಾರ್ಚ್ ವಾಪಸ್ ಪಡೆದುಕೊಂಡು ಮೈಕ್ ಕೊಟ್ಟಿದ್ದಾರೆ. ಬಳಿಕ ಮಮತಾ ಭಾಷಣ ಮುಂದುವರಿಸಿದ್ದಾರೆ.

    https://www.youtube.com/watch?v=wQP125OWayE

  • ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಸಂಸತ್ತಿನಲ್ಲಿ ಫೈಟಿಂಗ್: ಮೈಕ್ ಹಿಡಿದು, ಚೇರ್ ಎಸೆದು ಉಗಾಂಡ ಎಂಪಿಗಳ ಕಿತ್ತಾಟ

    ಕ್ಯಾಂಪಲ: ಉಗಾಂಡದ ಸಂಸತ್ ಅಧಿವೇಶನದ ವೇಳೆ ಸದಸ್ಯರು ಚರ್ಚೆಯೊಂದರಲ್ಲಿ ಆಕ್ರೋಶ ಭರಿತರಾಗಿ ಪರಸ್ಪರ ಹೊಡೆದಾಡಿಕೊಂಡಿದ್ದಾರೆ.

    ಉಂಗಾಡ ಅಧ್ಯಕ್ಷರಾಗಲು ಗರಿಷ್ಟ ವಯಸ್ಸಿನ ಮಿತಿಯನ್ನು ವಿಸ್ತರಿಸಬೇಕು ಎನ್ನುವ ವಿಚಾರದ ಬಗ್ಗೆ ಚರ್ಚೆ ನಡೆಯುತಿತ್ತು. ಈ ವೇಳೆ ಆಡಳಿತ ಪಕ್ಷ ಮತ್ತು ವಿರೋಧ ಪಕ್ಷಗಳ ನಡುವೆ ಮಾರಾಮಾರಿ ನಡೆದು ತಳ್ಳಾಟ ನೂಕಾಟ ನಡೆದಿದೆ.

    ಉಗಾಂಡದ ಕಾನೂನಿನ ಪ್ರಕಾರ 75 ವರ್ಷ ಮೀರಿದವರು ಅಧ್ಯಕ್ಷರಾಗಲು ಅರ್ಹತೆಯನ್ನು ಕಳೆದುಕೊಳ್ಳುತ್ತಾರೆ. ಈಗಿನ ಅಧ್ಯಕ್ಷ ಯೊವೆರೆ ಮ್ಯೂಸೆವೆನಿ ಅವರಿಗೆ 73 ವರ್ಷವಾಗಿದ್ದು ಮತ್ತೆ ಅಧ್ಯಕ್ಷರಾಗಲು ಬಯಸಿದ್ದಾರೆ. ಹೀಗಾಗಿ ಕಾನೂನು ತಿದ್ದುಪಡಿ ಮಾಡಲು ಆಡಳಿತ ಪಕ್ಷದವರು ಪಟ್ಟು ಹಿಡಿದರೆ ವಿರೋಧ ಪಕ್ಷಗಳು ಆಕ್ಷೇಪ ವ್ಯಕ್ತಪಡಿಸಿವೆ.

    ಚರ್ಚೆ ವಿಕೋಪಕ್ಕೆ ತಿರುಗಿ ಮೈಕ್ ಹಿಡಿದು ಟೇಬಲ್ ಮೇಲೆ ನಿಂತು ಸದಸ್ಯರು ರಂಪಾಟ ಮಾಡಿದ್ದಾರೆ. ಪುರುಷ ಸದಸ್ಯರು ಮಹಿಳಾ ಸದಸ್ಯೆಯ ಮೇಲೆ ಹಲ್ಲೆ ನಡೆಸಿರುವುದು ವಿಡಿಯೋದಲ್ಲಿ ನೋಡಬಹುದಾಗಿದೆ.