Tag: ಮೈಕ್ರೋಸಾಫ್ಟ್

  • 10 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ಮೈಕ್ರೋಸಾಫ್ಟ್‌

    10 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮುಂದಾದ ಮೈಕ್ರೋಸಾಫ್ಟ್‌

    ವಾಷಿಂಗ್ಟನ್‌: ಫೇಸ್‌ಬುಕ್‌, ಅಮೆಜಾನ್‌ ಬಳಿಕ ಸಾಫ್ಟ್‌ವೇರ್‌ ದಿಗ್ಗಜ ಕಂಪನಿ ಮೈಕ್ರೋಸಾಫ್ಟ್‌ ಉದ್ಯೋಗಿಗಳನ್ನು ತೆಗೆಯುವ ಪ್ರಕ್ರಿಯೆಗೆ(Lay Off) ಮುಂದಾಗಿದೆ.

    ಮೈಕ್ರೋಸಾಫ್ಟ್‌ (Microsoft) ಶೀಘ್ರವೇ ಸಾವಿರರು ಉದ್ಯೋಗಿಗಳನ್ನು ತೆಗೆಯಲು ಮುಂದಾಗಿದೆ ಎಂದು ವರದಿಯಾಗಿದೆ. ಮಾನವ ಸಂಪನ್ಮೂಲ ಮತ್ತು ಎಂಜಿನಿಯರಿಂಗ್ ವಿಭಾಗ ಸೇರಿ ಸಾವಿರಾರು ಉದ್ಯೋಗಗಳನ್ನು ಕಡಿತಗೊಳಿಸಲು ಮೈಕ್ರೋಸಾಫ್ಟ್ ಯೋಜಿಸಿದೆ.  ಇದನ್ನೂ ಓದಿ: ಅಮೆಜಾನ್‌ನಲ್ಲಿ ಉದ್ಯೋಗ ಕಡಿತ – ಕ್ಯಾಬಿನ್‌ನಲ್ಲೇ ಕಣ್ಣೀರಿಟ್ಟ ಉದ್ಯೋಗಿಗಳು

    ಆರ್ಥಿಕ ಹಿಂಜರಿತದ (Economic Recession) ಕಾರಣ ನೀಡಿ ತನ್ನ ಉದ್ಯೋಗಿಗಳ ಶೇ.5 ರಷ್ಟು ಅಥವಾ ಸುಮಾರು 11 ಸಾವಿರ ಉದ್ಯೋಗಿಗಳನ್ನು ತೆಗೆಯಲು ಮೈಕ್ರೋಸಾಫ್ಟ್‌ ಚಿಂತನೆ ನಡೆಸಿದೆ ಎಂದು ವರದಿಯಾಗಿದೆ. ಇದನ್ನೂ ಓದಿ: ನನ್ನ ಸಂಬಳ ಭಾರೀ ಹೆಚ್ಚಾಯ್ತು: ಟಿಮ್‌ ಕುಕ್‌ ಸಂಬಳ ಅರ್ಧಕ್ಕರ್ಧ ಇಳಿಕೆ

    2022ರ ಜೂನ್‌ನಲ್ಲಿ ಸಲ್ಲಿಸಿದ ಫೈಲಿಂಗ್‌ನಲ್ಲಿ ಮೈಕ್ರೋಸಾಫ್ಟ್‌ನಲ್ಲಿ ಒಟ್ಟು 2.21 ಲಕ್ಷ ಉದ್ಯೋಗಿಗಳಿದ್ದರು. ಅಮೆರಿಕದಲ್ಲೇ 1.22 ಲಕ್ಷ ಉದ್ಯೋಗಿಗಳಿದ್ದರೆ ವಿವಿಧ ದೇಶಗಳಲ್ಲಿ ಒಟ್ಟು  99 ಸಾವಿರ ಉದ್ಯೋಗಿಗಳಿದ್ದರು.

    Live Tv
    [brid partner=56869869 player=32851 video=960834 autoplay=true]

    Join our Whatsapp group by clicking the below link
    https://chat.whatsapp.com/E6YVEDajTzH06LOh77r25k

  • ಮೈಕ್ರೋಸಾಫ್ಟ್‌ ಮುಖ್ಯಸ್ಥ ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರದಾನ

    ಮೈಕ್ರೋಸಾಫ್ಟ್‌ ಮುಖ್ಯಸ್ಥ ಸತ್ಯ ನಾಡೆಲ್ಲಾಗೆ ಪದ್ಮಭೂಷಣ ಪ್ರದಾನ

    ವಾಷಿಂಗ್ಟನ್‌: ಮೈಕ್ರೋಸಾಫ್ಟ್‌(Microsoft ) ಮುಖ್ಯಸ್ಥ ಮತ್ತು ಸಿಇಒ ಆಗಿರುವ ಸತ್ಯ ನಾಡೆಲ್ಲಾ(Satya Nadella) ಅವರಿಗೆ ಪದ್ಮಭೂಷಣ(Padma Bhushan) ಪ್ರಶಸ್ತಿಯನ್ನು ಪ್ರದಾನ ಮಾಡಲಾಗಿದೆ.

    ಅಮೆರಿಕದ ಸ್ಯಾನ್‌ಫ್ರಾನ್ಸಿಸ್ಕೋದಲ್ಲಿ ಭಾರತದ ಕಾನ್ಸುಲ್‌ ಜನರಲ್‌ ಡಾ.ಟಿ.ವಿ ನಾಗೇಂದ್ರ ಪ್ರಸಾದ್‌ ಪ್ರಶಸ್ತಿಯನ್ನು ಪ್ರದಾನ ಮಾಡಿದ್ದಾರೆ. ಇದನ್ನೂ ಓದಿ: ಮೈಕ್ರೋಸಾಫ್ಟ್ ಉದ್ಯೋಗಿಗಳಿಗೆ ಬಂಪರ್: ಒಂದೇ ಬಾರಿಗೆ ಸಂಬಳ ಡಬಲ್

    ಭಾರತದ ಮೂರನೇ ದೊಡ್ಡ ನಾಗರಿಕ ಪ್ರಶಸ್ತಿಯಾದ ಪದ್ಮಭೂಷಣ ಪ್ರಶಸ್ತಿಯನ್ನು ಸ್ವೀಕರಿಸುವುದು ದೊಡ್ಡ ಗೌರವವಾಗಿದೆ. ಹಲವಾರು ಅಸಾಧಾರಣ ವ್ಯಕ್ತಿಗಳೊಂದಿಗೆ ಗುರುತಿಸಿದ್ದಕ್ಕೆ ನಾನು ರಾಷ್ಟ್ರಪತಿ, ಪ್ರಧಾನ ಮಂತ್ರಿ ಮತ್ತು ಭಾರತದ ಜನರಿಗೆ ಕೃತಜ್ಞನಾಗಿದ್ದೇನೆ ಎಂದು ನಾಡೆಲ್ಲಾ ಹೇಳಿದ್ದಾರೆ.

    ನಾಡೆಲ್ಲಾ ಜನವರಿ 2023 ರಲ್ಲಿ ಭಾರತಕ್ಕೆ ಭೇಟಿ ನೀಡಲಿದ್ದಾರೆ. ಮೂರು ವರ್ಷಗಳ ನಂತರ ದೇಶಕ್ಕೆ ಅವರು ಮೊದಲ ಭೇಟಿ ನೀಡಲಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮೈಕ್ರೋಸಾಫ್ಟ್ ಟೀಮ್ಸ್ ಸರ್ವರ್ ಡೌನ್ – ಸಾವಿರಾರು ಬಳಕೆದಾರರಿಗೆ ಸಿಗ್ತಾ ಇಲ್ಲ ಪ್ರವೇಶ

    ಮೈಕ್ರೋಸಾಫ್ಟ್ ಟೀಮ್ಸ್ ಸರ್ವರ್ ಡೌನ್ – ಸಾವಿರಾರು ಬಳಕೆದಾರರಿಗೆ ಸಿಗ್ತಾ ಇಲ್ಲ ಪ್ರವೇಶ

    ವಾಷಿಂಗ್ಟನ್: ಮೈಕ್ರೋಸಾಫ್ಟ್ ಕಾರ್ಪೊರೇಶನ್‌ನ ಎಂಎಸ್ ಟೀಮ್ಸ್ ಆ್ಯಪ್‌ನಲ್ಲಿ ತಾಂತ್ರಿಕ ಸಮಸ್ಯೆ ಕಂಡುಬಂದಿದ್ದು, ಅದನ್ನು ಗುರುವಾರ ಬೆಳಗ್ಗೆಯಿಂದ ಸಾವಿರಾರು ಬಳಕೆದಾರರು ಬಳಸಲು ಸಾಧ್ಯವಾಗುತ್ತಿಲ್ಲ.

    ಮೈಕ್ರೊಸಾಫ್ಟ್ ಟೀಮ್ಸ್ ಅನ್ನು ವಿಶ್ವದಾದ್ಯಂತ ಸಾವಿರಾರು ಬಳಕೆದಾರರಿಗೆ ಪ್ರವೇಶಿಸಲು ಅಥವಾ ನಿಯಂತ್ರಿಸಲು ಸಾಧ್ಯವಾಗದೇ ನಿಲುಗಡೆ ಉಂಟಾಗಿದೆ. ಈ ಬಗ್ಗೆ ದೋಷವನ್ನು ಪತ್ತೆ ಹಚ್ಚಲಾಗುವುದು ಎಂದು ಕಂಪನಿ ತಿಳಿಸಿದೆ. ಇದನ್ನೂ ಓದಿ: INS ವಿಕ್ರಮಾದಿತ್ಯ ಯುದ್ಧ ನೌಕೆಯಲ್ಲಿ ಬೆಂಕಿ ಅವಘಡ

    ಮೈಕ್ರೋಸಾಫ್ಟ್ ಟೀಮ್ಸ್, ಕಂಪನಿ ಸ್ವಾಮ್ಯದ ಸಂವಹನ ವೇದಿಕೆಯಾಗಿದ್ದು, ಇದರಲ್ಲಿ ಬಳಕೆದಾರರು ಚ್ಯಾಟ್, ವೀಡಿಯೋ ಕಾನ್ಫರೆನ್ಸ್, ಫೈಲ್‌ಗಳ ಸಂಗ್ರಹಣೆಗಳನ್ನು ಮಾಡಬಹುದು. ಇದನ್ನೂ ಓದಿ: ಅಕ್ರಮ ಗಣಿಗಾರಿಕೆ ತಡೆಗೆ ಬೆಂಕಿ ಹಚ್ಚಿಕೊಂಡ ಸಾಧು- ಗೆಹ್ಲೋಟ್ ಸರ್ಕಾರದ ವಿರುದ್ಧ ಆಕ್ರೋಶ

    ಈ ಬಗ್ಗೆ ಮೈಕ್ರೋಸಾಫ್ಟ್ ತನ್ನ ಅಧಿಕೃತ ಟ್ವಿಟ್ಟರ್ ಖಾತೆಯಲ್ಲಿ ಟ್ವೀಟ್ ಮಾಡಿ, ಬಳಕೆದಾರರು ಮೈಕ್ರೊಸಾಫ್ಟ್ ಟೀಮ್ಸ್ ಅನ್ನು ಪ್ರವೇಶಿಸಲು ಅಥವಾ ಯಾವುದೇ ಫೀಚರ್‌ಗಳನ್ನು ಹೋತೋಟಿಗೆ ತರಲು ಸಾಧ್ಯವಾಗುತ್ತಿಲ್ಲ ಎಂಬ ಮಾಹಿತಿಯನ್ನು ಪಡೆದಿದೆ. ಈ ಸಮಸ್ಯೆ ಬಗೆ ಹರಿಸಲಾಗುತ್ತದೆ ಎಂದು ತಿಳಿಸಿದೆ.

    Live Tv
    [brid partner=56869869 player=32851 video=960834 autoplay=true]

  • ಮೈಕ್ರೋಸಾಫ್ಟ್‌ನೊಂದಿಗೆ ನೆಟ್‌ಫ್ಲಿಕ್ಸ್ ಪಾರ್ಟ್ನರ್‌ಶಿಪ್ – ಅಗ್ಗದ ಯೋಜನೆಗೆ ತಯಾರಿ

    ಮೈಕ್ರೋಸಾಫ್ಟ್‌ನೊಂದಿಗೆ ನೆಟ್‌ಫ್ಲಿಕ್ಸ್ ಪಾರ್ಟ್ನರ್‌ಶಿಪ್ – ಅಗ್ಗದ ಯೋಜನೆಗೆ ತಯಾರಿ

    ವಾಷಿಂಗ್ಟನ್: ಸ್ಟ್ರೀಮಿಂಗ್ ದೈತ್ಯ ನೆಟ್‌ಫ್ಲಿಕ್ಸ್ ಜಾಹೀರಾತು ಬೆಂಬಲಿತ ಯೋಜನೆಯನ್ನು ಪ್ರಾರಂಭಿಸಲು ಮೈಕ್ರೋಸಾಫ್ಟ್‌ನೊಂದಿಗೆ ಪಾಲುದಾರರಾಗುತ್ತಿರುವ ಬಗ್ಗೆ ತಿಳಿಸಿದೆ.

    ಇತ್ತೀಚೆಗೆ ನೆಟ್‌ಫ್ಲಿಕ್ಸ್ ಕಡಿಮೆಯಾಗುತ್ತಿರುವ ಚಂದಾದಾರರನ್ನು ಸೆಳೆಯಲು ಜಾಹೀರಾತು ಬೆಂಬಲಿತ ಅಗ್ಗದ ಚಂದಾದಾರಿಕೆಯನ್ನು ಘೋಷಿಸಿತ್ತು. ಇದರ ಬೆನ್ನಲ್ಲೇ ನೆಟ್‌ಫ್ಲಿಕ್ಸ್ ಈ ಯೋಜನೆಗಾಗಿ ಮೈಕ್ರೋಸಾಫ್ಟ್‌ನೊಂದಿಗೆ ಕೈ ಜೋಡಿಸುತ್ತಿರುವ ಬಗ್ಗೆ ತಿಳಿಸಿದೆ. ಇದನ್ನೂ ಓದಿ: 2 ಮಕ್ಕಳನ್ನು ಮಾತ್ರ ಹೊಂದುವ ಕಾನೂನನ್ನು ನಾನು ಬೆಂಬಲಿಸುವುದಿಲ್ಲ: ಅಸಾದುದ್ದೀನ್‌ ಓವೈಸಿ

    ನೆಟ್‌ಫ್ಲಿಕ್ಸ್‌ನ ತಂತ್ರಜ್ಞಾನ ಹಾಗೂ ಮಾರಾಟದ ಪಾಲುದಾರರಾಗಲು ನಾವು ಉತ್ಸುಕರಾಗಿದ್ದೇವೆ ಎಂದು ಮೈಕ್ರೋಸಾಫ್ಟ್ ತಿಳಿಸಿದೆ. ನೆಟ್‌ಫ್ಲಿಕ್ಸ್‌ನಲ್ಲಿ ನೀಡಲಾಗುವ ಎಲ್ಲಾ ಜಾಹೀರಾತುಗಳು ಮೈಕ್ರೋಸಾಫ್ಟ್ ಪ್ಲಾಟ್‌ಪಾರ್ಮ್‌ನಲ್ಲಿ ಪ್ರತ್ಯೇಕವಾಗಿ ಲಭ್ಯವಿರುತ್ತದೆ ಎಂದು ಹೇಳಿದೆ.

    ನೆಟ್‌ಫ್ಲಿಕ್ಸ್ ತನ್ನ ಅಸ್ತಿತ್ವದಲ್ಲಿರುವ ಜಾಹೀರಾತು ಮುಕ್ತ ಚಂದಾದಾರಿಕೆ, ಸ್ಟ್ಯಾಂಡರ್ಡ್ ಹಾಗೂ ಪ್ರೀಮಿಯಂ ಯೋಜನೆಗಳು ಹೊಸ ಹಾಗೂ ಹಳೆಯ ಎಲ್ಲಾ ಗ್ರಾಹರಿಗೂ ಲಭ್ಯವಿರುತ್ತದೆ ಎಂದು ತಿಳಿಸಿದೆ. ಇದನ್ನೂ ಓದಿ: ಬಿಗ್ ಬಾಸ್ ನಿರೂಪಣೆಗಾಗಿ ಸಲ್ಮಾನ್ ಖಾನ್ ಪಡೆದ ಸಂಭಾವನೆ ಕೇಳಿದ್ರೆ ನೀವು ಶಾಕ್ ಆಗುತ್ತೀರಾ

    ಈ ಬಗ್ಗೆ ಮಾಹಿತಿ ನೀಡಿದ ನೆಟ್‌ಫ್ಲಿಕ್ಸ್ ಸಿಒಒ, ಇದು ಕೇವಲ ಆರಂಭವಾಗಿದೆ. ನಾವು ಇನ್ನೂ ಸಾಕಷ್ಟು ಕೆಲಸಗಳನ್ನು ಮಾಡಬೇಕಿದೆ. ಆದರೆ ನಮ್ಮ ದೀರ್ಘಾವಧಿಯ ಗುರಿ ಸ್ಪಷ್ಟವಾಗಿದೆ. ಗ್ರಾಹಕರಿಗೆ ಹೆಚ್ಚಿನ ಆಯ್ಕೆಗಳನ್ನು ನಾವು ನೀಡಲು ಮುಂದಾಗುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • 27 ವರ್ಷಗಳ ಸೇವೆ ಬಳಿಕ ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ನಿವೃತ್ತಿ

    27 ವರ್ಷಗಳ ಸೇವೆ ಬಳಿಕ ಮೈಕ್ರೋಸಾಫ್ಟ್‌ನ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ನಿವೃತ್ತಿ

    ವಾಷಿಂಗ್ಟನ್: ಮೈಕ್ರೋಸಾಫ್ಟ್‌ನ ಹಳೆಯ ಬ್ರೌಸರ್ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ತನ್ನ ನಿವೃತ್ತಿಯನ್ನು ಘೋಷಿಸಿದೆ. 27 ವರ್ಷಗಳ ಸುದೀರ್ಘ ಸೇವೆಯ ಬಳಿಕ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅಂತಿಮವಾಗಿ ಜೂನ್ 15ರಂದು ಸ್ಥಗಿತಗೊಳ್ಳಲಿದೆ.

    ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅನ್ನು ಮೊದಲು 1995 ರಲ್ಲಿ ವಿಂಡೋಸ್ 95 ಗಾಗಿ ಆಡ್ ಆನ್ ಪ್ಯಾಕೇಜ್ ಆಗಿ ಬಿಡುಗಡೆ ಮಾಡಲಾಗಿತ್ತು. ಬಳಿಕ ಕಂಪನಿ ಪ್ಯಾಕೇಜ್‌ನ ಭಾಗವಾಗಿ ಬ್ರೌಸರ್ ಅನ್ನು ಉಚಿತವಾಗಿ ನೀಡಲು ಪ್ರಾರಂಭಿಸಿತು.

    2003ರಲ್ಲಿ ಶೇ.95 ರಷ್ಟು ಬಳಕೆಯನ್ನು ಮಾಡಲಾಗುತ್ತಿದ್ದು, ಇಂಟರ್‌ನೆಟ್ ಲೋಕದಲ್ಲೇ ಉತ್ತುಂಗಕ್ಕೇರಿತ್ತು. ಬಳಿಕ ಇತರ ಬ್ರೌಸರ್‌ಗಳು ಪ್ರಸಿದ್ಧಿ ಪಡೆದು, ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಅನ್ನು ಹಿಂದಿಕ್ಕಿದವು. ಈ ಕಾರಣ ಅದು ತನ್ನ ಸ್ಥಾನವನ್ನು ಉಳಿಸಿಕೊಳ್ಳಲು ಸಾಧ್ಯವಾಗಲಿಲ್ಲ. ಇದನ್ನೂ ಓದಿ: ಮಹಿಳಾ ಉದ್ಯೋಗಿಗಳಿಗೆ ತಾರತಮ್ಯ – 921 ಕೋಟಿ ನೀಡಲು ಮುಂದಾದ ಗೂಗಲ್‌

    ಅನೇಕ ಬ್ರೌಸರ್‌ಗಳು ಇಂಟರ್‌ನೆಟ್ ಎಕ್ಸ್‌ಪ್ಲೋರರ್‌ನ ಬಳಿಕ ಹುಟ್ಟಿಕೊಂಡಿದ್ದು, ಅವು ಬಳಕೆದಾರರಿಗೆ ಉತ್ತಮ ಇಂಟರ್‌ಫೇಸ್, ವೇಗದ ಇಂಟರ್‌ನೆಟ್ ಹಾಗೂ ಉತ್ತಮ ಕಾರ್ಯಕ್ಷಮತೆಯನ್ನೂ ನೀಡಲು ಪ್ರಾರಂಭಿಸಿತು. ಈ ಕಾರಣ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಇತರ ಬ್ರೌಸರ್‌ಗಳೊಂದಿಗೆ ಸ್ಪರ್ಧೆಯನ್ನು ಮುಂದುವರಿಸಲು ಸಾಧ್ಯವಾಗದೇ ಕೇವಲ ಡೀಫಾಲ್ಟ್ ಆಗಿ ಕಾಣಿಸಿಕೊಳ್ಳುತ್ತಿತ್ತು. ಇದನ್ನೂ ಓದಿ: ಪಕ್ಷಿಗಳಿಗೆ ಆಹಾರವಿಡುವ ಟ್ರೇ ಹೊಂದಿದ್ದಕ್ಕೆ 3 ವಾರದಲ್ಲಿ 3 ಬಾರಿ ವ್ಯಕ್ತಿ ಅರೆಸ್ಟ್

    ಇದೀಗ ವಿಂಡೋಸ್ 10ನ ಕೆಲವು ನಿರ್ದಿಷ್ಟ ಆವೃತ್ತಿಗಳಲ್ಲಿ ಇಂಟರ್‌ನೆಟ್ ಎಕ್ಸ್‌ಪ್ಲೋರರ್ ಕಾರ್ಯನಿರ್ವಹಿಸುವುದು ಸ್ಥಗಿತಗೊಳ್ಳಲಿದ್ದು, ಇನ್ನೂ ಬಳಕೆ ಮಾಡುತ್ತಿರುವ ಗ್ರಾಹಕರಿಗೆ ಮೈಕ್ರೋಸಾಫ್ಟ್ ಎಡ್ಜ್‌ಗೆ ವರ್ಗಾವಣೆಯಾಗುವಂತೆ ಸೂಚಿಸಿದೆ.

  • ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌

    ಮೈಕ್ರೋಸಾಫ್ಟ್‌ ಸಹ ಸಂಸ್ಥಾಪಕ ಬಿಲ್‌ ಗೇಟ್ಸ್‌ಗೆ ಕೊರೊನಾ ಪಾಸಿಟಿವ್‌

    ವಾಷಿಂಗ್ಟನ್‌: ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ ಅವರು ಕೋವಿಡ್-19 ಸೋಂಕಿಗೆ ಒಳಗಾಗಿದ್ದಾರೆ. ಸದ್ಯ ಮನೆಯಲ್ಲಿಯೇ ಕ್ವಾರಂಟೈನ್ ಆಗಿದ್ದಾರೆ.

    ಬಿಲ್‌ ಗೇಟ್ಸ್‌ ಅವರು ಸಂಪೂರ್ಣ ಕೋವಿಡ್‌ ಲಸಿಕೆ ಪಡೆದುಕೊಂಡಿದ್ದಾರೆ. ಈಗ ಕೋವಿಡ್‌ಗೆ ಒಳಗಾಗಿದ್ದು, ವೈದ್ಯಕೀಯ ಆರೈಕೆಯಲ್ಲಿದ್ದಾರೆ. ಇದನ್ನೂ ಓದಿ: ಸಾರ್ವಜನಿಕ ಆಸ್ತಿಗೆ ಹಾನಿ ಮಾಡುವವರನ್ನು ಗುಂಡಿಕ್ಕಿ ಕೊಲ್ಲಿ: ಶ್ರೀಲಂಕಾ ರಕ್ಷಣಾ ಸಚಿವಾಲಯ ಆದೇಶ

    ನಾನು ಕೊರೊನಾ ಸೋಂಕಿಗೆ ಒಳಗಾಗಿದ್ದೇನೆ. ನಾನು ಸೌಮ್ಯವಾದ ರೋಗಲಕ್ಷಣಗಳನ್ನು ಅನುಭವಿಸುತ್ತಿದ್ದೇನೆ. ನಾನು ಮತ್ತೆ ಗುಣಮುಖನಾಗುವವರೆಗೆ ಪ್ರತ್ಯೇಕವಾಗಿರುವುದರ ಮೂಲಕ ತಜ್ಞರ ಸಲಹೆಯನ್ನು ಅನುಸರಿಸುತ್ತಿದ್ದೇನೆ ಎಂದು ಟ್ವೀಟ್‌ ಮಾಡಿ ಬಿಲ್‌ ಗೇಟ್ಸ್‌ ತಿಳಿಸಿದ್ದಾರೆ.

    ‘ಅದೃಷ್ಟವಶಾತ್ ನಾನು ಕೋವಿಡ್ ಲಸಿಕೆ ಪಡೆದಿದ್ದೇನೆ. ಉತ್ತಮ ಚಿಕಿತ್ಸೆ ಪಡೆಯುವ ಅವಕಾಶಗಳು ಇರುವುದು ನನ್ನನ್ನು ಭಯ ಮುಕ್ತನನ್ನಾಗಿ ಮಾಡಿದೆ’ ಎಂದು ಹೇಳಿದ್ದಾರೆ. ಇದನ್ನೂ ಓದಿ: ಅಮೆರಿಕದ ಜನಪ್ರಿಯ ನಟಿ ಮರ್ಲಿನ್ ಮನ್ರೋ ವರ್ಣಚಿತ್ರ ದಾಖಲೆ ಬೆಲೆಗೆ ಮಾರಾಟ

    ಬಿಲ್‌ ಗೇಟ್ಸ್ ಅವರು ಕೋವಿಡ್–19 ನಂತರ ಜಗತ್ತಿನ ಅನೇಕ ಬಡ ರಾಷ್ಟ್ರಗಳಿಗೆ ಲಸಿಕೆ ಹಾಗೂ ಆರೋಗ್ಯ ಸಲಕರಣೆಗಳಿಗೆ ಉದಾರ ದಾನ ನೀಡಿದ್ದಾರೆ. ಅಲ್ಲದೇ ಮುಂದಿನ ದಿನಗಳಲ್ಲಿ ಔಷಧಗಳ ಖರೀದಿಗಾಗಿ ಬಡ ರಾಷ್ಟ್ರಗಳಿಗೆ 120 ಮಿಲಿಯನ್ ಡಾಲರ್‌ ನೀಡುವುದಾಗಿ ತಿಳಿಸಿದ್ದಾರೆ.

  • ಮುಂದಿನ 20 ವರ್ಷಗಳಲ್ಲಿ ಬರಲಿದೆ ಇನ್ನೊಂದು ಸಾಂಕ್ರಾಮಿಕ: ಬಿಲ್ ಗೇಟ್ಸ್ ಭವಿಷ್ಯ

    ವಾಷಿಂಗ್ಟನ್: 2014ರಲ್ಲಿ ಮೈಕ್ರೋಸಾಫ್ಟ್ ಸಹ ಸಂಸ್ಥಾಪಕ ಬಿಲ್ ಗೇಟ್ಸ್ 2020ರಲ್ಲಿ ಜಗತ್ತು ಸಾಂಕ್ರಾಮಿಕ ರೋಗಕ್ಕೆ ತುತ್ತಾಗುತ್ತದೆ ಎಂದು ಭವಿಷ್ಯ ನುಡಿದಿದ್ದರು. ಅವರ ಭವಿಷ್ಯ ನಿಜವೆಂಬಂತೆ ಕೋವಿಡ್-19 ಜಗತ್ತಿನಾದ್ಯಂತ ಹರಡಿತು. ಇದೀಗ ಬಿಲ್ ಗೇಟ್ಸ್ ಇನ್ನೊಂದು ಸಾಂಕ್ರಾಮಿಕ ರೋಗದ ಬಗ್ಗೆ ಭವಿಷ್ಯ ನುಡಿದಿದ್ದಾರೆ.

    ಬಿಲ್ ಗೇಟ್ಸ್ ವಿಶೇಷ ಸಂದರ್ಶನವೊಂದರಲ್ಲಿ, ಜಗತ್ತು ಮುಂದಿನ 20 ವರ್ಷಗಳಲ್ಲಿ ಇನ್ನೊಂದು ಸಾಂಕ್ರಾಮಿಕ ರೋಗಕ್ಕೆ ತುತ್ತಾಗಲಿದೆ ಎಂದಿದ್ದಾರೆ. 20 ವರ್ಷಗಳ ಬಳಿಕ ತಲೆದೋರಲಿರುವ ರೋಗವನ್ನು ಜಗತ್ತು ಎದುರಿಸಲು ಈಗಲೇ ತಯಾರಿ ನಡೆಸಲು ಕರೆ ನೀಡಿದ್ದಾರೆ. ಇದನ್ನೂ ಓದಿ: ಟ್ವಿಟ್ಟರ್‌ಗೆ ಎಲಾನ್‌ ಮಸ್ಕ್‌ ತಾತ್ಕಾಲಿಕ CEO?

    20 ವರ್ಷಗಳಲ್ಲಿ ನಾವು ಇನ್ನೊಂದು ಸಾಂಕ್ರಾಮಿಕ ರೋಗವನ್ನು ಎದುರಿಸುವ ಸಾಧ್ಯತೆ ಇದೆ. ಇದನ್ನು ಹತೋಟಿಗೆ ತರಲು ನಾವು ಸಿದ್ಧರಾಗಿರಬೇಕು. ಈ ರೋಗ ಜಾಗತಿಕವಾಗಿ ಹರಡುವುದಕ್ಕೂ ಮೊದಲು ಮುಂಜಾಗೃತೆ ವಹಿಸಬೇಕು. ಈ ಮೂಲಕ ಸಾವಿನ ಸಂಖ್ಯೆಯನ್ನು ಮಿತಿಗೊಳಿಸಲು ಪ್ರಯತ್ನಿಸಬೇಕು ಎಂದಿದ್ದಾರೆ. ಇದನ್ನೂ ಓದಿ: ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ

  • ಗೂಗಲ್, ಆಪಲ್, ಮೈಕ್ರೋಸಾಫ್ಟ್‌ಗಳಲ್ಲಿ ಶೀಘ್ರವೇ ಬರಲಿದೆ ಪಾಸ್‌ವರ್ಡ್ ಲೆಸ್ ಸೈನ್ ಇನ್ ಸೇವೆ

    ವಾಷಿಂಗ್ಟನ್: ಮೂರು ದೊಡ್ಡ ತಂತ್ರಜ್ಞಾನ ಕಂಪನಿಗಳಾದ ಗೂಗಲ್, ಆಪಲ್ ಹಾಗೂ ಮೈಕ್ರೋಸಾಫ್ಟ್ ಪಾಸ್‌ವರ್ಡ್ ಬಳಕೆಯನ್ನು ಸಂಪೂರ್ಣವಾಗಿ ತೆಗೆದು ಹಾಕಲು ನಿರ್ಧರಿಸಿವೆ.

    ಹೌದು, ಇನ್ನು ಮುಂದೆ ಜನರು ತಮ್ಮ ಮೊಬೈಲ್, ಡೆಸ್ಕ್ ಟಾಪ್ ಹಾಗೂ ಬ್ರೌಸರ್ ಸಾಧನಗಳಲ್ಲಿ ಪಾಸ್‌ವರ್ಡ್ಗಳನ್ನು ನಮೂದಿಸುವ ಅಗತ್ಯವಿರುವುದಿಲ್ಲ. ಈ ಮೂರು ದೈತ್ಯ ತಂತ್ರಜ್ಞಾನ ಕಂಪನಿಗಳು ಒಟ್ಟಾಗಿ ಬಳಕೆದಾರರಿಗೆ ಪಾಸ್‌ವರ್ಡ್ ರಹಿತ ಸೇವೆ ನೀಡಲು ಮುಂದಾಗಿವೆ.

    ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮೂಲಕ ಕಾರ್ಯನಿರ್ವಹಿಸುವ ಐಒಎಸ್, ಮ್ಯಾಕ್ ಒಎಸ್, ಆಂಡ್ರಾಯ್ಡ್, ವಿಂಡೋಸ್ ಬ್ರೌಸರ್‌ಗಳಾದ ಕ್ರೋಮ್, ಎಡ್ಜ್, ಸಫಾರಿ ಹಾಗೂ ಪ್ರಮುಖ ತಂತ್ರಜ್ಞಾನ ಸಾಧನಗಳ ಪ್ಲಾಟ್‌ಫಾರ್ಮ್ಗಳಿಗೆ ಪಾಸ್‌ವರ್ಡ್ ರಹಿತ ದೃಢೀಕರಣ ತರುವ ನಿಟ್ಟಿನಲ್ಲಿ ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿವೆ. ಇದನ್ನೂ ಓದಿ: 2024ರಲ್ಲಿ ಶುಕ್ರಯಾನಕ್ಕೆ ISRO ಸಜ್ಜು- ಇಲ್ಲಿದೆ ಶುಕ್ರಗ್ರಹದ ಸ್ವಾರಸ್ಯಕರ ಸಂಗತಿ

    ಬಳಕೆದಾರರ ಆನ್‌ಲೈನ್ ಖಾತೆಗಳಿಗೆ ಸೈನ್ ಇನ್ ಮಾಡಲು ತಯಾರಾಗುತ್ತಿರುವ ಪಾಸ್‌ವರ್ಡ್ ರಹಿತ ಸೇವೆ, ಪಾಸ್‌ವರ್ಡ್ ಮೂಲಕ ಅನ್‌ಲಾಕ್ ಮಾಡುವುದಕ್ಕಿಂತಲೂ ಸುಲಭ ಹಾಗೂ ಸುರಕ್ಷಿತವಾಗಿರಲಿದೆ. ನಿಮ್ಮ ಫೋನ್ ಅನ್ನು ಅನ್‌ಲಾಕ್ ಮಾಡಲು ನೀವು ಪಾಸ್‌ವರ್ಡ್, ಪಿನ್ ಅಥವಾ ಪ್ಯಾಟರ್ನ್ ಅನ್ನು ಬಳಸುತ್ತೀರಿ ಹಾಗೂ ಫೋನ್ ಅನ್ನು ಅನ್‌ಲಾಕ್ ಮಾಡಲು ಪ್ರತಿ ಬಾರಿಯೂ ಇದನ್ನೇ ಬಳಸುತ್ತೀರಿ. ನಿಮ್ಮ ಆನ್‌ಲೈನ್ ಖಾತೆಗಳಿಗೂ ಅನುಮತಿಸಲು ಇದೇ ಪ್ರಕ್ರಿಯೆಯನ್ನು ಬಳಸಿದರೆ ಆಯ್ತು. ಪಾಸ್‌ವರ್ಡ್ ನಮೂದಿಸುವ ಅಗತ್ಯ ಇರುವುದಿಲ್ಲ.

    ಈ 3 ಕಂಪನಿಗಳು ಕಾರ್ಯನಿರ್ವಹಿಸುತ್ತಿರುವ ಹೊಸ ಎಫ್‌ಐಡಿಒ(ಫಾಸ್ಟ್ ಐಡಿ ಆನ್‌ಲೈನ್) ಸೇವೆ ಸಹಾಯದಿಂದ ಪಾಸ್‌ವರ್ಡ್ ರಹಿತವಾಗಿ ಅನ್‌ಲಾಕ್ ಮಾಡಲು ಸಹಾಯವಾಗಲಿದೆ ಎಂದು ಕಂಪನಿಗಳು ತಿಳಿಸಿವೆ. ಇದನ್ನು ಪಾಸ್‌ಕೀ ಎಂತಲೂ ಕರೆಯಲಾಗುತ್ತಿದ್ದು, ಬಳಕೆದಾರರು ತಮ್ಮ ಮೊಬೈಲ್ ಹಾಗೂ ವೆಬ್‌ಸೈಟ್‌ಗಳಲ್ಲಿ ಪಾಸ್‌ವರ್ಡ್ ರಹಿತವಾಗಿ ಸೈನ್ ಇನ್ ಆಗಲು ಸಹಾಯವಾಗಲಿದೆ. ಇದನ್ನೂ ಓದಿ: ಭಾರತದಲ್ಲಿ ಡೆಬಿಟ್, ಕ್ರೆಡಿಟ್ ಕಾರ್ಡ್ ಮೂಲಕದ ಪಾವತಿಯನ್ನು ಸ್ಥಗಿತಗೊಳಿಸಿದ ಆಪಲ್

    ಪಾಸ್‌ಕೀ ಸಹಾಯದಿಂದ ಬಳಕೆದಾರರು ಇನ್ನು ಮುಂದೆ ತಮ್ಮ ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳುವ ಅಗತ್ಯ ಇರುವುದಿಲ್ಲ. ಕೆಲವರು ಪಾಸ್‌ವರ್ಡ್ಗಳನ್ನು ನೆನಪಿಟ್ಟುಕೊಳ್ಳಬೇಕೆಂಬ ಕಾರಣಕ್ಕೆ ತಮ್ಮ ಹಲವಾರು ಬೇರೆ ಬೇರೆ ರೀತಿಯ ಸಾಮಾಜಿಕ ಮಾಧ್ಯಮ ಅಕೌಂಟ್‌ಗಳಿಕೆ ಒಂದೇ ರೀತಿಯ ಪಾಸ್‌ವರ್ಡ್ ಬಳಸುತ್ತಾರೆ. ಈ ಕಾರಣದಿಂದ ಹ್ಯಾಕರ್‌ಗಳು ಸುಲಭವಾಗಿ ಬಳಕೆದಾರರ ಖಾತೆಗಳನ್ನು ಹ್ಯಾಕ್ ಮಾಡುತ್ತಾರೆ. ಆದರೆ ಪಾಸ್‌ಕೀ ಇಂತಹ ಅಪಾಯಗಳನ್ನು ಕಡಿಮೆ ಮಾಡುತ್ತದೆ ಎಂದು ಕಂಪನಿಗಳು ತಿಳಿಸಿವೆ.

    ಈ ಹೊಸ ಪಾಸ್‌ವರ್ಡ್ ರಹಿತ ದೃಢೀಕರಣ ವ್ಯವಸ್ಥೆಯನ್ನು ಆಪಲ್, ಗೂಗಲ್ ಹಾಗೂ ಮೈಕ್ರೋಸಾಫ್ಟ್ ಮುಂದಿನ ವರ್ಷ ಹೊರತರಲಿದೆ. ಒಂದುವೇಳೆ ನಿಮ್ಮ ಫೋನ್ ಅಥವಾ ಇತರ ಸಾಧನಗಳು ಕಳೆದು ಹೋದಲ್ಲಿ ಕ್ಲೌಡ್ ಬ್ಯಾಕ್‌ಅಪ್ ಮೂಲಕ ಪಾಸ್‌ಕೀಗಳನ್ನು ಹೊಸ ಸಾಧನಗಳಿಗೆ ಸಿಂಕ್ ಮಾಡಬಹುದು ಎಂದು ಗೂಗಲ್ ತಿಳಿಸಿದೆ.

  • ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್

    ಮಾಜಿ ಪತ್ನಿಯನ್ನೇ ಮತ್ತೊಮ್ಮೆ ಮದ್ವೆ ಆಗ್ತೀನಿ ಎಂದ ಬಿಲ್ ಗೇಟ್ಸ್

    ನ್ಯೂಯಾರ್ಕ್: ಮೈಕ್ರೋಸಾಫ್ಟ್ ಕಂಪನಿಯ ಸಹ-ಸಂಸ್ಥಾಪಕ ಬಿಲ್ ಗೇಟ್ಸ್, ಮಾಜಿ ಪತ್ನಿ ಮೆಲಿಂಡಾ ಅವರನ್ನು ಮತ್ತೆ ಮದುವೆಯಾಗುವುದಾಗಿ ಹೇಳಿಕೊಂಡಿದ್ದಾರೆ.

    ಈ ಕುರಿತು ಸಂದರ್ಶನವೊಂದರಲ್ಲಿ ಮಾತನಾಡಿದ ಅವರು, ಕಳೆದ ಎರಡು ವರ್ಷಗಳನ್ನು ಸಾಕಷ್ಟು ನಾಟಕೀಯವೆಂದು ಬಣ್ಣಿಸಿದರು. ಇದರೊಂದಿಗೆ ಕೊರೊನಾ ಸಾಂಕ್ರಾಮಿಕ ಮತ್ತು ಅವರ ವಿಚ್ಛೇದನದೊಂದಿಗಿನ ವಿಚಿತ್ರವಾದ ವಿಷಯವೆಂದರೆ ಮಕ್ಕಳನ್ನು ಬಿಟ್ಟು ದೂರವಿದ್ದದ್ದು ಎಂದು ಬೇಸರ ವ್ಯಕ್ತಪಡಿಸಿದ್ದಾರೆ.

    ಮಕ್ಕಳು ಬೆಳೆದು ಸಂಸಾರವನ್ನು ತೊರೆದ ನಂತರ ಪ್ರತಿಯೊಂದು ಮದುವೆಯೂ ಪರಿವರ್ತನೆಯ ಹಾದಿಯತ್ತ ಸಾಗುತ್ತವೆ. ಆದಾಗ್ಯೂ ಅವರು ತಮ್ಮ ಮದುವೆಯನ್ನು ಮಹಾನ್ ಮದುವೆ ಎಂದು ಕರೆದುಕೊಂಡಿದ್ದಾರೆ. ನಾನು ಬೇರೆ ಯಾರನ್ನೂ ಮದುವೆಯಾಗಲು ಇಷ್ಟಪಡುವುದಿಲ್ಲ ಎಂದು ತಿಳಿಸಿದ್ದಾರೆ.

    ನಾನು ಮತ್ತೆ ಮೆಲಿಂಡಾಳನ್ನು ಮದುವೆಯಾಗುತ್ತೇನೆ. ನನ್ನ ಭವಿಷ್ಯದ ವಿಷಯದಲ್ಲಿ, ನಾನು ಯಾವುದೇ ಯೋಜನೆಗಳನ್ನು ಹೊಂದಿಲ್ಲ ಎಂದಿದ್ದಾರೆ. ಇದನ್ನೂ ಓದಿ: ಮೇ 10ರ ಒಳಗಡೆ ಸಿಎಂ ಬದಲಾವಣೆ: ಯತ್ನಾಳ್‌ ಬಾಂಬ್‌

    ಮೆಲಿಂಡಾ ಅವರೊಂದಿಗಿನ ಅವರ ಪ್ರಸ್ತುತ ಸಂಬಂಧದ ಬಗ್ಗೆ ಪ್ರತಿಕ್ರಿಯಿಸಿದ ಅವರು, ಇನ್ನೂ ಅವಳೊಂದಿಗೆ ನಾನು ಒಳ್ಳೇಯ ಸ್ನೇಹಿತನಾಗಿಯೇ ಇದ್ದು, ಅವಳೊಂದಿಗೆ ನಾನು ಬಹಳ ಪ್ರಮುಖ ಹಾಗೂ ನಿಕಟ ಸಂಬಂಧವನ್ನು ಹೊಂದಿದ್ದೇನೆ ಎಂದು ತಿಳಿಸಿದರು.

    ಜೂನ್‍ನಲ್ಲಿ ನಾವಿಬ್ಬರು ಸೇರಿ ವಾರ್ಷಿಕ ಸಭೆಯನ್ನು ಒಟ್ಟಿಗೆ ಆಯೋಜಿಸಲಿದ್ದೇವೆ. ನಾವು ಒಟ್ಟಿಗೆ ಕೆಲಸ ಮಾಡಲು ಇಚ್ಚಿಸುತ್ತೇವೆ. ನನಗೆ ತುಂಬಾ ಸಂತೋಷವಾಗಿದ್ದು, ನಿಜ ಹೇಳಬೇಕಾದರೆ ನಾವಿಬ್ಬರು ಒಟ್ಟಾಗಿಯೇ ಮೈಕ್ರೋಸಾಫ್ಟ್ ಫೌಂಡೇಶನ್ ಅನ್ನು ನಿರ್ಮಿಸಿದ್ದೇವೆ ಎಂದರು. ಇದನ್ನೂ ಓದಿ: ಅಮಿತ್ ಶಾ ಭೇಟಿ – ಶೀಘ್ರವೇ ಹೊರಟ್ಟಿ ಬಿಜೆಪಿಗೆ ಸೇರ್ಪಡೆ

    ದಂಪತಿ 1994 ರಲ್ಲಿ ವಿವಾಹವಾಗಿದ್ದರು. ಅವರಿಗೆ ಜೆನ್ನರ್, ರೋರಿ ಮತ್ತು ಫೋಬೆ ಎಂಬ ಮೂರು ಮಕ್ಕಳಿದ್ದಾರೆ. 27 ವರ್ಷಗಳ ದಾಂಪತ್ಯದ ನಂತರ ವಿಚ್ಛೇದನ ಪಡೆಯುವುದಾಗಿ ಬಿಲ್ ಗೇಟ್ಸ್ ಮತ್ತು ಮೆಲಿಂಡಾ ಅವರು ಕಳೆದ ವರ್ಷ ಮೇ ತಿಂಗಳಲ್ಲಿ ಘೋಷಿಸಿದ್ದರು.

  • ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ ಗೌತಮ್‌ ಅದಾನಿ

    ವಿಶ್ವದ 4ನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮಿದ ಗೌತಮ್‌ ಅದಾನಿ

    ನವದೆಹಲಿ: ಅದಾನಿ ಗ್ರೂಪ್ ಮಾಲೀಕ ಗೌತಮ್ ಅದಾನಿ ಭಾರತ ಮತ್ತು ಏಷ್ಯಾದ ಶ್ರೀಮಂತ ವ್ಯಕ್ತಿಯಾಗಿ ಉಳಿದಿಲ್ಲ. ಈಗ ವಿಶ್ವದ ನಾಲ್ಕನೇ ಶ್ರೀಮಂತ ವ್ಯಕ್ತಿಯಾಗಿ ಹೊರಹೊಮ್ಮಿದ್ದಾರೆ. ಈಗ ಅದಾನಿ ಆಸ್ತಿಯು ಮೈಕ್ರೋಸಾಫ್ಟ್‌ ಸಂಸ್ಥಾಪಕ ಬಿಲ್ ಗೇಟ್ಸ್‌ಗೆ ಆಸ್ತಿಗೆ ಸಮನಾಗಿದೆ.

    ಬ್ಲೂಮ್‌ಬರ್ಗ್ ಬಿಲಿಯನೇರ್ಸ್(ಶತಕೋಟ್ಯಧಿಪತಿ) ರಿಯಲ್‌ ಟೈಂ ಇಂಡೆಕ್ಸ್ ಪ್ರಕಾರ, ಅದಾನಿ ಮತ್ತು ಬಿಲ್ ಗೇಟ್ಸ್ ಇಬ್ಬರೂ 125 ಬಿಲಿಯನ್ ಡಾಲರ್‌( 9.58 ಲಕ್ಷ ರೂ.)ಮೌಲ್ಯದ ಆಸ್ತಿಯನ್ನು ಹೊಂದಿದ್ದಾರೆ. ಗೌತಮ್ ಅದಾನಿ ವಿಶ್ವದ ಐದನೇ ಶ್ರೀಮಂತ ವ್ಯಕ್ತಿಯಾಗಿದ್ದಾರೆ. ಈ ಪಟ್ಟಿಯಲ್ಲಿ ಅವರು ಬಿಲ್ ಗೇಟ್ಸ್‌ಗಿಂತ ಸ್ವಲ್ಪ ಹಿಂದೆ ಇದ್ದಾರೆ. ಇದನ್ನೂ ಓದಿ: ಗುಜರಾತ್‌ನಿಂದ ಕರ್ನಾಟಕಕ್ಕೆ 3 ಶತಕೋಟಿ ಡಾಲರ್‌ ಹೂಡಿಕೆಯ ಚಿಪ್‌ ಘಟಕ ಶಿಫ್ಟ್‌?

    ಗೌತಮ್ ಅದಾನಿ ಅವರ ಸಂಪತ್ತು ಕೇವಲ ಒಂದೇ ದಿನದಲ್ಲಿ 6.3 ಬಿಲಿಯನ್ ಡಾಲರ್ ಏರಿಕೆ ಕಂಡಿದೆ. ಅದಾನಿಯವರ ಸಂಪತ್ತು ಈ ಒಂದೇ ವರ್ಷದಲ್ಲಿ 48.3 ಬಿಲಿಯನ್ ಡಾಲರ್‌ ಹೆಚ್ಚಾಗಿದೆ. 2021 ರ ಅಂತ್ಯದ ವೇಳೆಗೆ ಗೌತಮ್ ಅದಾನಿ ಅವರ ಆಸ್ತಿ 76.7 ಬಿಲಿಯನ್ ಡಾಲರ್‌ ಆಗಿತ್ತು. ಅದಾನಿ ಗ್ರೂಪ್ ಆಫ್ ಕಂಪನಿಗಳ ಷೇರು ಬೆಲೆಗಳು ನಿರಂತರವಾಗಿ ಏರುತ್ತಲೇ ಇರುವುದರಿಂದ ಆದಾನಿ ಅವರ ಆಸ್ತಿಯ ಮೌಲ್ಯ ಏರಿಕೆಯಾಗುತ್ತಿವೆ.

    ಬಿಲಿಯನೇರ್‌ಗಳ ಪಟ್ಟಿಯಲ್ಲಿ ಅದಾನಿಗಿಂತ ಮೊದಲಿನ ಸ್ಥಾನದಲ್ಲಿ  ಟೆಸ್ಲಾ ಮುಖ್ಯಸ್ಥ ಎಲೋನ್ ಮಸ್ಕ್(19 ಲಕ್ಷ ಕೋಟಿ ರೂ.), ಅಮೇಜಾನ್‌ ಸಂಸ್ಥಾಪಕ ಜೆಫ್ ಬೆಜೋಸ್(12.5 ಲಕ್ಷ ಕೋಟಿ ರೂ.), ಫ್ರಾನ್ಸಿನ ಉದ್ಯಮಿ ಎಲ್‌ವಿಎಂಎಚ್‌ ಮುಖ್ಯಸ್ಥ ಬರ್ನಾರ್ಡ್ ಅರ್ನಾಲ್ಟ್(10.2 ಲಕ್ಷ ಕೋಟಿ ರೂ.) ಮತ್ತು ಬಿಲ್ ಗೇಟ್ಸ್ ಹೆಸರುಗಳಿವೆ. ಆದರೆ ಅವರೆಲ್ಲರ ಆಸ್ತಿ ನಿರಂತರವಾಗಿ ಕುಸಿಯುತ್ತಿದೆ. ಆದರೆ ಅದಾನಿ ನಿರಂತರವಾಗಿ ಏರಿಕೆ ಕಾಣುತ್ತಿದೆ. ಗೌತಮ್ ಅದಾನಿ ಸಂಪತ್ತು ಈ ವೇಗದಲ್ಲೇ ಸಾಗಿದರೆ ಶೀಘ್ರದಲ್ಲೇ ಅವರು ವಿಶ್ವದ ಮೂರನೇ ಶ್ರೀಮಂತ ವ್ಯಕ್ತಿಯಾಗಿ ಹೊರ ಹೊಮ್ಮುವ ಸಾಧ್ಯತೆಯಿದೆ.