ಕಲಬುರಗಿ: ರಾಜ್ಯದಲ್ಲಿ ಸ್ವಲ್ಪ ದಿನ ಬಿಡುವು ನೀಡಿದ್ದ ಆಜಾನ್ ಯುದ್ಧ ಮತ್ತೆ ಸದ್ದು ಮಾಡ್ತಿದೆ. ಮಸೀದಿಗಳು ಧ್ವನಿ ವರ್ಧಕಗಳ ನಿಯಮ ಉಲ್ಲಂಘನೆ ಮಾಡುತ್ತಿದ್ದರೂ ಅವುಗಳ ವಿರುದ್ಧ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಆಜಾನ್ ವಿರುದ್ಧ ಹಿಂದೂ ಸಂಘಟನೆಗಳು ಹೋರಾಟಕ್ಕೆ ನಿರ್ಧರಿಸಿವೆ.
ಮಸೀದಿ ಧ್ವನಿವರ್ಧಕ ವಿರುದ್ಧ ಆಗಸ್ಟ್ 23ರಂದು, ರಾಜ್ಯಾದ್ಯಂತ ಶ್ರೀರಾಮಸೇನೆ ಬೃಹತ್ ಪ್ರತಿಭಟನೆಗೆ ಕರೆ ನೀಡಿದೆ. ಎಲ್ಲಾ ಜಿಲ್ಲೆಯ ಎಸ್‌ಪಿ ಕಚೇರಿಗಳ ಎದುರು ಪ್ರತಿಭಟನೆ ಮಾಡೋದಾಗಿ ಶ್ರೀರಾಮಸೇನೆ ಕರೆ ನೀಡಿದೆ. ಇದನ್ನೂ ಓದಿ: ಇಂಡಿಗೋ ವಿಮಾನದಲ್ಲಿ ಹೊಗೆ ಎಚ್ಚರಿಕೆ – ಕೋಲ್ಕತ್ತಾದಲ್ಲಿ ಲ್ಯಾಂಡಿಂಗ್
ಈ ಕುರಿತು ಮಾತನಾಡಿರುವ ಶ್ರೀರಾಮಸೇನೆ ರಾಜ್ಯಾಧ್ಯಕ್ಷ ಸಿದ್ದಲಿಂಗ ಸ್ವಾಮೀಜಿ ಅವರು, ರಾಜ್ಯದ ಅನೇಕ ಮಸೀದಿಗಳಲ್ಲಿ ಇನ್ನೂ ಅನಧಿಕೃತವಾಗಿ ಆಜಾನ್ ಕೂಗಲು ಮೈಕ್‌ಗಳನ್ನು ಬಳಸಲಾಗುತ್ತಿದೆ. ಸರ್ಕಾರದ ಸುತ್ತೋಲೆಯಂತೆ ಕಡಿಮೆ ಡೆಸಿಬಲ್ ಬಳಸುತ್ತಿಲ್ಲ. ಹೀಗಾಗಿ ಆಗಸ್ಟ್ 23 ರಂದು ಹೋರಾಟದ ಜೊತೆಗೆ ಬೃಹತ್ ಪ್ರತಿಭಟನೆ ನಡೆಸಲು ಮುಂದಾಗಿದ್ದೇವೆ ಎಂದು ಹೇಳಿದ್ದಾರೆ.
Live Tv
[brid partner=56869869 player=32851 video=960834 autoplay=true]
ಬೀದರ್: ಅಗ್ನಿಪಥ್ ಯೋಜನೆ ವಿರೋಧಿಸಿ ಬೀದರ್‌ನಲ್ಲಿ ಇಂದು ಕಾಂಗ್ರೆಸ್‍ನಿಂದ ಬೃಹತ್ ಧರಣಿ ಸತ್ಯಾಗ್ರಹ ಮಾಡಲಾಗಿತ್ತು. ಧರಣಿ ಸತ್ಯಾಗ್ರಹದ ವೇದಿಕೆಯ ಮೈಕ್ ಭಾಷಣಕ್ಕೆ ಪೊಲೀಸ್ ಇಲಾಖೆ ಅನುಮತಿ ನೀಡದೆ ಬ್ರೇಕ್ ಹಾಕಿದೆ.
ಸತ್ಯಾಗ್ರಹದಲ್ಲಿ ಕಾಂಗ್ರೆಸ್ ಮುಖಂಡರು ಮೈಕ್‍ನಲ್ಲಿ ಭಾಷಣ ಮಾಡುತ್ತಿದ್ದು, ಈ ವೇಳೆ ಸ್ಥಳಕ್ಕೆ ಬಂದ ಡಿವೈಎಸ್‍ಪಿ ಸತೀಶ್ ಮೈಕ್ ಭಾಷಣಕ್ಕೆ ಬ್ರೇಕ್ ಹಾಕಿದರು. ಡಿವೈಎಸ್‍ಪಿ ಬ್ರೇಕ್ ಹಾಕುತ್ತಿದಂತೆ ಕಾಂಗ್ರೆಸ್ ಮುಖಂಡರು ಮೈಕ್ ಭಾಷಣ ನಿಲ್ಲಿಸಿ, ಸ್ಥಳದಲ್ಲಿದ್ದ ಮೈಕ್ ಹೊತ್ತ ಆಟೋ ಅಲ್ಲಿಂದ ಕಣ್ಮರೆಯಾಯಿತು. ಇದನ್ನೂ ಓದಿ: ಮಹಾರಾಷ್ಟ್ರದಲ್ಲಿ ಇರೋದು ಮೂರಾಬಟ್ಟೆ ಸರ್ಕಾರ: ಕಾರಜೋಳ
ಅಗ್ನಿಪಥ್ ಯೋಜನೆ ವಿರೋಧಿಸಿ ಮಾಜಿ ಸಚಿವ ರಹೀಂಖಾನ್ ನೇತೃತ್ವದಲ್ಲಿ ಬೀದರ್‌ನಲ್ಲಿ ಧರಣಿ ಸತ್ಯಾಗ್ರಹ ಮಾಡಿದ್ರೆ, ಕೆಪಿಸಿಸಿ ಕಾರ್ಯಾಧ್ಯಕ್ಷ ಈಶ್ವರ್ ಖಂಡ್ರೆ ನೇತೃತ್ವದಲ್ಲಿ ಭಾಲ್ಕಿಯಲ್ಲೂ ಪ್ರತಿಭಟನೆ ಮಾಡಲಾಯಿತು.
ಕಾಂಗ್ರೆಸ್ ಮುಖಂಡರು ಹಾಗೂ ನೂರಾರು ಕಾರ್ಯಕರ್ತರು ಅಗ್ನಿಪಥ್ ಯೋಜನೆ ವಿರೋಧಿಸಿ ಪ್ರತಿಭಟನೆಯಲ್ಲಿ ಭಾಗಿಯಾಗಿ ಬಿಜೆಪಿ ಸರ್ಕಾರದ ವಿರುದ್ಧ ಧಿಕ್ಕಾರ ಕೂಗಿದ್ರು. ಟ್ರೈನಿಂಗ್ ಮಾಡಿ ಬಂದ ಮೇಲೆ ಯುವಕರಿಗೆ ವಾಚ್ ಮ್ಯಾನ್ ಕೆಲಸ ಕೊಡುತ್ತೇವೆ ಎಂದು ಬಿಜೆಪಿ ಹೇಳುತ್ತಿದೆ.
ಮಿಲಿಟರಿ ಎಂದರೆ ದೇಶದಲ್ಲಿ ಗೌರವವಿದೆ. ಹಿಗಾಗೀ ಅಗ್ನಿಪಥ್ ಯೋಜನೆಯನ್ನು ಈ ಕೂಡಲೇ ಕೇಂದ್ರ ಸರ್ಕಾರ ವಾಪಸ್ ಪಡೆಯಬೇಕು ಎಂದು ರಹೀಂಖಾನ್ ಅವರು ಆಗ್ರಹಿಸಿದರು. ಇದನ್ನೂ ಓದಿ: ಶಿವ ಪೂಜೆಗೆ ಹೋದ ರೌಡಿಯ ಬರ್ಬರ ಹತ್ಯೆ
ಬೆಂಗಳೂರು: ರಾಜ್ಯದಲ್ಲಿ ಆರಂಭಗೊಂಡಿದ್ದ ಲೌಡ್ ಸ್ಪೀಕರ್ ವಿವಾದಕ್ಕೆ ಇದೀಗ ಪೊಲೀಸರು ಫುಲ್‍ಸ್ಟಾಪ್ ಹಾಕಲು ಮುಂದಾಗಿದ್ದು, ಅನಧಿಕೃತ ಮೈಕ್‍ಗಳಿಗೆ ಮೇ 25ರೊಳಗೆ ಅನುಮತಿ ಪಡೆಯಲು ಡೆಡ್‍ಲೈನ್ ನೀಡಲಾಗಿದೆ.
ಸಾಂದರ್ಭಿಕ ಚಿತ್ರ
ಕೆಲ ದಿನಗಳ ಹಿಂದೆ ರಾಜ್ಯದಲ್ಲಿ ಲೌಡ್ ಸ್ಪೀಕರ್ ವಿವಾದ ತಾರಕಕ್ಕೇರಿತ್ತು. ಬಳಿಕ ಸರ್ಕಾರ ಅನಧಿಕೃತ ಮೈಕ್‍ಗಳ ವಿರುದ್ಧ ಕ್ರಮಕ್ಕೆ ಮುಂದಾಗಿದೆ. ಇದೀಗ ಅನಧಿಕೃತ ಇರುವ ಮೈಕ್‍ಗೆ 25ರ ಒಳಗಾಗಿ ಅನುಮತಿ ಪಡೆಯಬೇಕು. ಆಯಾ ಎಸಿಪಿ ವ್ಯಾಪ್ತಿಯ ಕಚೇರಿಯಲ್ಲಿ ಸಂಬಂಧಪಟ್ಟವರು ಅರ್ಜಿ ಸಲ್ಲಿಸಿ ಅಧಿಕೃತ ಮಾಡಿಕೊಳ್ಳಬೇಕಾಗಿ ಸೂಚಿಸಿದೆ. ಇದನ್ನೂ ಓದಿ: ಸಿಎಂ ದಾವೋಸ್ ಪ್ರವಾಸ ನಾಳೆ ನಿರ್ಧಾರ: ಕುತೂಹಲ ಮೂಡಿಸಿದ ಬಿಜೆಪಿ ಹೈಕಮಾಂಡ್ ಸಂದೇಶ
ಮೇ 25ರ ಒಳಗಾಗಿ ಅರ್ಜಿ ಸಲ್ಲಿಸಿ ಅನಧಿಕೃತ ಮೈಕ್‍ಗಳನ್ನು ಅಧಿಕೃತ ಮಾಡಿಕೊಳ್ಳದೇ ಹೊದರೆ ಕ್ರಮಕೈಗೊಳ್ಳುವ ಎಚ್ಚರಿಕೆ ನೀಡಿದ್ದು, ರಜೆ ದಿನ ಹೊರತುಪಡಿಸಿ ಉಳಿದ ದಿನಗಳಲ್ಲಿ ಹೋಗಿ ಅರ್ಜಿ ಸಲ್ಲಿಸುವಂತೆ ಸಂಬಂಧಪಟ್ಟವರಿಗೆ ಪೊಲೀಸ್ ಇಲಾಖೆ ಸೂಚನೆ ನೀಡಿದೆ. ಇದನ್ನೂ ಓದಿ: ಸ್ವಾಮೀಜಿ ವೇಷಧರಿಸಿ ತಲೆಮರೆಸಿಕೊಂಡಿದ್ದ ಆ್ಯಸಿಡ್ ನಾಗ ಅರೆಸ್ಟ್
ರಾಜ್ಯದಲ್ಲಿ ಮಾತ್ರವಲ್ಲದೆ ಉತ್ತರ ಪ್ರದೇಶ, ಮಹಾರಾಷ್ಟ್ರ ಸೇರಿದಂತೆ ಕೆಲ ರಾಜ್ಯಗಳಲ್ಲಿ ಲೌಡ್ ಸ್ಪೀಕರ್ ವಿವಾದ ಬಾರಿ ಚರ್ಚೆಗೆ ಗ್ರಾಸವಾಗಿದೆ. ಉತ್ತರ ಪ್ರದೇಶದಲ್ಲಿ ಈಗಾಗಲೇ ಸರ್ಕಾರ ಕಟ್ಟುನಿಟ್ಟಿನ ಕ್ರಮಕ್ಕೆ ಮುಂದಾಗಿದೆ.
ಬೆಂಗಳೂರು: ಹಿಜಬ್, ಹಲಾಲ್, ವ್ಯಾಪಾರ ಬ್ಯಾನ್ ಬಳಿಕ ರಾಜ್ಯದಲ್ಲಿ ಆಜಾನ್ ಗಲಾಟೆ ತಾರಕಕ್ಕೇರಿದೆ. ಆಜಾನ್ ಕೂಗಿಗೆ ಟಾಂಗ್ ನೀಡುವ ನಿಟ್ಟಿನಲ್ಲಿ ನಾಳೆಯಿಂದ ಬೆಳಗ್ಗೆ 5 ಹಿಂದೂ ದೇವಾಲಯಗಳಲ್ಲಿ, ಮಠಗಳಲ್ಲಿ ಹನುಮಾನ್ ಚಾಲೀಸಾ, ಭಜನೆ ಹಾಗೂ ಸುಪ್ರಭಾತವನ್ನು, ಮೈಕ್ ಮೂಲಕ ಪಠಿಸುವ ಆಂದೋಲನಕ್ಕೆ ಶ್ರೀರಾಮ ಸೇನೆ ಮುಂದಾಗಿದೆ. ಈ ಅಭಿಯಾನಕ್ಕೆ ಕೈಜೋಡಿಸುವಂತೆ ಧಾರ್ಮಿಕ ಕ್ಷೇತ್ರಗಳಿಗೆ ಭೇಟಿ ನೀಡಿ ಮನವಿ ಮಾಡುತ್ತಿದ್ದಾರೆ.
ಹುಬ್ಬಳ್ಳಿ-ಧಾರವಾಡ ವ್ಯಾಪ್ತಿಯ ಪ್ರಮುಖ ದೇವಸ್ಥಾನ ಮತ್ತು ಮಠಗಳಿಗೆ ಭೇಟಿ ನೀಡಿದ ಶ್ರೀರಾಮಸೇನೆ ಸದಸ್ಯರು ಬೆಳಗ್ಗಿನ ಜಾವ ದೇವಸ್ಥಾನ ಮತ್ತು ಮಠದ ಮೈಕ್‍ನಲ್ಲಿ ಸುಪ್ರಭಾತ, ಹನುಮಾನ್ ಚಾಲೀಸಾ, ಭಕ್ತಿಗೀತೆಗಳನ್ನು ಹಾಕುವಂತೆ ಮನವಿ ಪತ್ರ ನೀಡುತ್ತಿದ್ದಾರೆ. ಹಾಸನದಲ್ಲೂ ಅಭಿಯಾನಕ್ಕೆ ಕೈ ಜೋಡಿಸಲಿದ್ದು, ಪ್ರತಿನಿತ್ಯ ಮೈಕ್ ಮೂಲಕ ಭಜನೆ ಮಾಡುವುದಾಗಿ ಶ್ರೀರಾಮಸೇನೆಯ ಜಿಲ್ಲಾಧ್ಯಕ್ಷ ಜಾನೆಕೆರೆ ಹೇಮಂತ್ ತಿಳಿಸಿದರು. ಇದನ್ನೂ ಓದಿ: ಪಬ್ಲಿಕ್ ಟಿವಿಯ ನಮ್ಮ ಮನೆ ಎಕ್ಸ್‌ಪೋಗೆ ಸಖತ್ ಸ್ಪಂದನೆ – ಇಂದೇ ಕಡೇ ದಿನ, ತಪ್ಪದೇ ಬನ್ನಿ
ಇತ್ತ ಆಜಾನ್ ವಿರುದ್ಧ ದೇವಸ್ಥಾನಗಳಲ್ಲಿ ಹನುಮಾನ್ ಚಾಲೀಸಾ ಹಾಗೂ ಭಕ್ತಿಗೀತೆ ಮೊಳಗಿಸುವ ಅಭಿಯಾನಕ್ಕೆ ಧಾರವಾಡದಲ್ಲಿ ಬೆಂಬಲ ವ್ಯಕ್ತವಾಗಿದೆ. ಧಾರವಾಡ ನಗರದ ಲೈನ್ ಬಜಾರ್ ಹನುಮಾನ್ ದೇವಸ್ಥಾನ, ನಗರದ ತುಳಜಾ ಭವಾನಿ ದೇವಸ್ಥಾನ, ಶಿವಾಲಯ, ದತ್ತಾತ್ರೇಯ ದೇವಸ್ಥಾನ ಸೇರಿ ಹಲವು ದೇವಸ್ಥಾನ ಕಮಿಟಿಯವರು ನಿರ್ಧರಿಸಿದ್ದಾರೆ.
ಉಡುಪಿಯಲ್ಲೂ ಆಜಾನ್ ವರ್ಸಸ್ ಹನುಮಾನ್ ಚಾಲೀಸಾಗೆ ಬೆಂಬಲ ಸೂಚಿಸಲಾಗಿದೆ. ಒಟ್ಟಿನಲ್ಲಿ ನಾಳೆಯಿಂದ ಮೈಕ್ ವರ್ಸಸ್ ಹನುಮಾನ್ ಚಾಲೀಸಾ ದಂಗಲ್ ಜೋರಾಗಲಿದ್ದು, ಮತ್ತೊಂದು ಆಯಾಮದಲ್ಲಿ ಧರ್ಮ ಸಂಘರ್ಷಕ್ಕೆ ನಾಂದಿ ಹಾಡಲಿದೆ.
ಮಡಿಕೇರಿ: ರಾಜ್ಯದಲ್ಲಿ ಹಿಜಬ್, ಮುಸ್ಲಿಂ ವರ್ತಕರಿಗೆ ನಿರ್ಬಂಧ, ಹಲಾಲ್ ಕಟ್ – ಜಟ್ಕಾ ಕಟ್ ವಿವಾದದ ಬಳಿಕ ಇದೀಗ ಮಸೀದಿಗಳಲ್ಲಿ ಧ್ವನಿವರ್ಧಕ ನಿಷೇಧದ ಬಗ್ಗೆ ಚರ್ಚೆಯಾಗುತ್ತಿದೆ. ಈ ನಡುವೆ ಧ್ವನಿವರ್ಧಕ ನಿಷೇಧ ಈ ಹಿಂದಿನಿಂದಲೇ ಜಾರಿಯಲ್ಲಿತ್ತು. 1990ರಲ್ಲೇ ಕೊಡಗು ಜಿಲ್ಲಾಡಳಿತಕ್ಕೆ ವಿಎಚ್‍ಪಿ ಮುಖಂಡರೊಬ್ಬರು ಮನವಿ ಸಲ್ಲಿಸಿದ್ದರು.
1964ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಆದೇಶ ಹೊರಡಿಸಿದೆ. ಅನುಮತಿ ರಹಿತ ಬಳಕೆಯನ್ನು ಸಂಪೂರ್ಣವಾಗಿ ನಿಷೇಧಿಸಲಾಗಿದೆ. ಹೀಗಿದ್ದರೂ ಇಷ್ಟು ವರ್ಷ ರಾಜಕೀಯ ತುಷ್ಟೀಕರಣದೊಂದಿಗೆ ಕಾನೂನು ಉಲ್ಲಂಘನೆ ಆಗುತ್ತದೆ. ಇದು ಹೊಸ ಬೆಳವಣಿಗೆ ಅಲ್ಲ. ಬಹು ವರ್ಷಗಳ ಹಿಂದೂಗಳ ಧ್ವನಿ ಆಗಿದೆ. ಪೊಲೀಸರು ಮತ್ತು ಸ್ಥಳೀಯ ಆಡಳಿತ ಒತ್ತಡದಿಂದ ದಿಟ್ಟ ಹೆಜ್ಜೆ ಇರಿಸಿಲ್ಲ. ಅದು ಮುಸ್ಲಿಂ ಸಮುದಾಯದ ಮುಖಂಡರು ಗೊತ್ತಿದ್ದರೂ ನಿರ್ಲಕ್ಷ್ಯ ವಹಿಸಿದ್ದಾರೆ ಎನ್ನುವುದು ಸ್ಪಷ್ಟವಾಗಿದೆ ಎಂದು ಆಕ್ರೋಶ ಹೊರಹಾಕಿದ್ದಾರೆ. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕೂಗುತ್ತ ಗೋರಖ್‍ನಾಥ ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವಕ ಬಂಧನ
ಕಾನೂನು ತನ್ನದೇ ರೀತಿಯಲ್ಲಿ ಕೆಲಸ ಮಾಡಬೇಕಿದೆ. 1964ರಲ್ಲಿಯೇ ಸರ್ವೋಚ್ಚ ನ್ಯಾಯಾಲಯ ಆದೇಶದಲ್ಲೇ ಸ್ಪಷ್ಟವಾಗಿ ಇದೆ. ರಾತ್ರಿ 10 ಗಂಟೆಯಿಂದ ಬೆಳಗ್ಗೆ 6 ಗಂಟೆಯ ವರೆಗೂ ಧ್ವನಿವರ್ಧಕ ಬಳಸುವಂತೆ ಇಲ್ಲ. ಧ್ವನಿವರ್ಧಕ ಬಳಕೆಯಾದರೆ ಮನೆಯಲ್ಲಿ ಇರುವ ಮಕ್ಕಳು, ವಯಸ್ಸಾದ ವೃದ್ಧರಿಗೂ ಸಮಸ್ಯೆ ಅಗುತ್ತದೆ ಎಂದು ಸಾಕಷ್ಟು ಜನರು ಹೇಳಿದ್ರು. ಇದೀಗಾ ಬಹುಶಃ ಕಾಲ ಕೂಡಿ ಬಂದಿದೆ. ಅದಷ್ಟು ಬೇಗ ಸಾರ್ವತ್ರಿಕವಾಗಿ ಸರ್ಕಾರ ದಿಟ್ಟತನದಿಂದ ಧ್ವನಿವರ್ಧಕ ನಿಷೇಧವನ್ನು ಜಾರಿಗೆ ತರಬೇಕು ಇದರಿಂದ ಸಮಾಜದ ಸ್ವಾಸ್ಥ್ಯ ಕಾಪಾಡಿಕೊಳ್ಳಬಹುದು ಎಂದು ಅಭಿಪ್ರಾಯಪಟ್ಟಿದ್ದಾರೆ.
ಧಾರವಾಡ: ಮಸೀದಿಗಳಲ್ಲಿ ಹಾಕಿರುವ ಧ್ವನಿವರ್ಧಕ ತೆಗೆಯದಿದ್ದರೆ ನಾವೂ ಬೆಳಗ್ಗೆ 5ಕ್ಕೆ ಮಂದಿರಗಳಲ್ಲಿ ಈಶ್ವರನ ಭಜನೆ, ಓಂಕಾರ ಹಾಕಿಸುತ್ತೇವೆ ಎಂದು ಶ್ರೀರಾಮ ಸೇನೆ ಮುಖ್ಯಸ್ಥ ಪ್ರಮೋದ್ ಮುತಾಲಿಕ್ ಹೇಳಿದ್ದಾರೆ.
6 ತಿಂಗಳ ಹಿಂದೆ ನಮ್ಮ ಸಂಘಟನೆಯೂ ಮೈಕ್ ಬಗ್ಗೆ ಮನವಿ ಮಾಡಿತ್ತು. ಸುಪ್ರೀಂಕೋರ್ಟ್ ತೀರ್ಪಿನ ಆಧಾರದ ಮೇಲೆ ನಡೆದುಕೊಳ್ಳಲು ಕೇಳಿದ್ದೇವೆ. ಬೆಳಗ್ಗೆ 5 ಗಂಟೆಗೆ ಲೌಡ್ ಸ್ಪೀಕರ್ ಹಾಕುವುದನ್ನು ತಡೆಯಲು ಮನವಿ ಮಾಡಿದ್ದೆವು. ಮೊದಲು ತಹಸೀಲ್ದಾರರಿಗೆ ಮನವಿ ಮಾಡಿದ್ದೆವು. ಆದರೆ ಎಲ್ಲಿಯೂ ತಹಸೀಲ್ದಾರರು ಕ್ರಮ ಕೈಗೊಳ್ಳಲಿಲ್ಲ. ಧ್ವನಿ ಮಾಲಿನ್ಯ ಆಗುತ್ತಿದೆ ಎಂದು ಮಾಲಿನ್ಯ ನಿಯಂತ್ರಣ ಮಂಡಳಿಗೂ ಮನವಿ ಮಾಡಿದ್ದೆವು. ಆದರೂ ಪ್ರಯೋಜನವಾಗಲಿಲ್ಲ ಎಂದರು. ಇದನ್ನೂ ಓದಿ: ಅಲ್ಲಾಹು ಅಕ್ಬರ್ ಎಂದು ಕೂಗುತ್ತ ಗೋರಖ್‍ನಾಥ ದೇವಾಲಯ ಪ್ರವೇಶಿಸಲು ಯತ್ನಿಸಿದ್ದ ಯುವಕ ಬಂಧನ
ಇದೀಗ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡುತ್ತೇವೆ. ಕೊನೆಯ ಎಚ್ಚರಿಕೆಯಾಗಿ ಮನವಿ ಸಲ್ಲಿಸುತ್ತಿದ್ದೇವೆ. ಕೋರ್ಟ್ ಆದೇಶ ಪಾಲಿಸಲು ಮುಸ್ಲಿಂ ಸಮಾಜಕ್ಕೆ ಸರ್ಕಾರ ಹೇಳಬೇಕು. ಅವರ ಪ್ರಾರ್ಥನೆಗೆ ನಮ್ಮ ವಿರೋಧ ಇಲ್ಲ. ಆದರೆ ಧ್ವನಿವರ್ಧಕಗಳ ಬಳಕೆಗೆ ವಿರೋಧ ಇದೆ. ಇದರಿಂದ ಸಾಕಷ್ಟು ಜನರಿಗೆ ತೊಂದರೆಯಾಗುತ್ತಿದೆ ಎಂದರು.
ಈಗ ಮಹಾರಾಷ್ಟ್ರದಲ್ಲಿ ರಾಜ್ ಠಾಕ್ರೆ ಧ್ವನಿ ಎತ್ತಿದ್ದಾರೆ. ಇದಕ್ಕೆ ನಾವು ಬೆಂಬಲ ಕೊಡುತ್ತೇವೆ. ಸರ್ಕಾರ ಈ ಲೌಡ್‌ಸ್ಪೀಕರ್ ನಿಲ್ಲಿಸಬೇಕು. ಮಸೀದಿಯಲ್ಲಿ ಮೈಕ್ ನಿಲ್ಲಿಸಲಾಗದ ಸರ್ಕಾರ ಹೇಡಿ ಸರ್ಕಾರ. ನಾವೂ ಇನ್ನು ಬೆಳಗ್ಗೆ 5 ಗಂಟೆಗೆ ಮಂದಿರ, ಮಠಗಳಲ್ಲಿ ಮೈಕ್ ಅಳವಡಿಸಿ ರಾಮ, ಈಶ್ವರನ ಭಜನೆ, ಓಂಕಾರ ಹಾಕುತ್ತೇವೆ ಎಂದರು.
ಚಿಕ್ಕಮಗಳೂರು: ಹಿಂದೂಯೇತರ ವರ್ತಕರಿಗೆ ನಿರ್ಬಂಧ ಹಾಕಬೇಕು ಎಂಬ ಕೂಗಿನ ಮಧ್ಯೆಯೇ ಈಗ ಆಪರೇಷನ್ `ಮೈಕ್’ ಅಭಿಯಾನ ಶುರುವಾಗಿದೆ. ಚಿಕ್ಕಮಗಳೂರಿನ 13 ವಾರ್ಡ್‍ಗಳಲ್ಲಿರುವ ಪ್ರಾರ್ಥನಾ ಮಂದಿರ, ಚರ್ಚ್, ಮಸೀದಿಗಳ ಅನಧಿಕೃತ ಮೈಕ್‍ಗಳ ತೆರವಿಗೆ ನಗರಸಭೆ ನಿರ್ಧರಿಸಿದೆ.
ಹಿಂದೂ-ಮುಸ್ಲಿಂ-ಕ್ರೈಸ್ತ ಸೇರಿದಂತೆ ಯಾವುದೇ ಧರ್ಮದ ಪ್ರಾರ್ಥನ ಮಂದಿರಗಳ ಮೇಲೆ ಅಕ್ರಮವಾಗಿ ಹಾಕಿರುವ ಮೈಕ್‍ಗಳನ್ನು ತೆರವುಗೊಳಿಸಲು ಚಿಕ್ಕಮಗಳೂರು ನಗರಸಭೆ ಮುಂದಾಗಿದೆ. ಮೂರು ವರ್ಷಗಳ ಬಳಿಕ ನಡೆದ ಚಿಕ್ಕಮಗಳೂರು ನಗರಸಭೆ ಚುನಾವಣೆಯಲ್ಲಿ ಬಿಜೆಪಿ ಬಹುಮತ ಪಡೆದು ಅಧಿಕಾರಿದ ಚುಕ್ಕಾಣಿ ಹಿಡಿದಿತ್ತು. ಮಾರ್ಚ್ 25ರಂದು ನಡೆದ ಬಜೆಟ್‍ನಲ್ಲಿ ನಗರಸಭೆ ಅಧ್ಯಕ್ಷ ವರಸಿದ್ಧಿ ವೇಣುಗೋಪಾಲ್ ಈ ತೀರ್ಮಾನ ಮಾಡಿದ್ದಾರೆ. ನಗರಸಭೆ ಅನುಮತಿ ಪಡೆಯದೆ, ನ್ಯಾಯಾಲಯದ ಸೂಚನೆಗಳನ್ನು ಮೀರಿ ಕಟ್ಟಿರುವ ಹಾಗೂ ಅವುಗಳನ್ನು ಬಳಸುತ್ತಿರುವ ಪ್ರಾರ್ಥನಾ ಮಂದಿರಗಳ ಮೇಲೆ ಕ್ರಮಕ್ಕೆ ಮುಂದಾಗಿದ್ದಾರೆ. ಇದನ್ನೂ ಓದಿ: ಮೋದಿ ವೆಬ್‍ಸೈಟ್ ಲಾಂಚ್ – ಈ ವೆಬ್‍ಸೈಟ್‍ನಲ್ಲಿದೆ ಮೋದಿಜಿ ಕುತೂಹಲಕಾರಿ ಕಥೆಗಳು
ಚಿಕ್ಕಮಗಳೂರು ನಗರದ ಹಲವು ವಾರ್ಡ್‍ಗಳಲ್ಲಿ ಅಕ್ರಮವಾಗಿ ಪ್ರಾರ್ಥನಾ ಮಂದಿರಗಳು ಮೈಕ್ ಕಟ್ಟಿ ಬಳಸುತ್ತಿರುವುದರ ಬಗ್ಗೆ ಸ್ಥಳೀಯರು ನಗರಸಭೆಗೆ ದೂರು ನೀಡಿದ್ದಾರೆ. ಹಾಗಾಗಿ ಈ ನಿರ್ಧಾರಕ್ಕೆ ಬಂದಿದ್ದೇವೆ ಎಂದು ವರಸಿದ್ಧಿ ವೇಣುಗೋಪಾಲ್ ಸ್ಪಷ್ಟಪಡಿಸಿದ್ದಾರೆ. ಪ್ರಾರ್ಥನ ಮಂದಿರಗಳ ಮೇಲೆ ಮೈಕ್‍ಗಳನ್ನು ಅಳವಡಿಸಲು ನಗರಸಭೆ ಅನುಮತಿ ಬೇಕು. ಹಾಗಾಗಿ, ಅಕ್ರಮವಾಗಿ ಮೈಕ್‍ಗಳನ್ನು ಬಳಸುತ್ತಿರುವವರಿಗೆ ನಗರಸಭೆ ನೋಟಿಸ್ ನೀಡಲಿದ್ದು, ನಿಗದಿತ ಕಾಲಮಿತಿಯೊಳಗೆ ತಾವು ಪಡೆದಿರುವ ಅನುಮತಿ ಪತ್ರವನ್ನು ನಗರಸಭೆಗೆ ನೀಡಬೇಕು. ಅನುಮತಿ ಪತ್ರವನ್ನು ನಗರಸಭೆಗೆ ನೀಡದಿದ್ದರೆ, ಅನುಮತಿ ಪಡೆಯದಿದ್ದರೆ ಅಂತಹಾ ಯಾವುದೇ ಧರ್ಮದ ಪ್ರಾರ್ಥನಾ ಮಂದಿರಗಳಾದರೂ ತೆರವುಗೊಳಿಸುವುದಾಗಿ ತಿಳಿಸಿದ್ದಾರೆ. ಇದನ್ನೂ ಓದಿ: ಸಿದ್ದರಾಮಯ್ಯ ಏಕಾಂಗಿ: ಡಿಕೆಶಿ ಅಂತರ ಕಾಯ್ದುಕೊಂಡಿದ್ದು ಏಕೆ..?
ಸ್ಥಳೀಯರು ಕೂಡ ಪ್ರಾರ್ಥನ ಮಂದಿರಗಳ ಮೈಕ್‍ಗಳ ಹಾವಳಿಯಿಂದ ಬೇಸತ್ತಿದ್ದಾರೆ. ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿರುವ ಸ್ಥಳೀಯರಾದ ವಿರೇಶ್, ಇಂತದ್ದೇ ಸಮಯದಲ್ಲಿ ಮೈಕ್‍ಗಳನ್ನು ಬಳಸಬೇಕೆಂದು ಹೈಕೋರ್ಟ್ ಹಾಗೂ ಸುಪ್ರೀಂ ಕೋರ್ಟ್ ಆದೇಶವಿದೆ. 11 ಡೆಸಿಬಲ್ ಒಳಗೆ ಇರಬೇಕು ಎಂದು ಕೋರ್ಟ್ ಹೇಳಿದೆ. ಆದರೆ ಮೈಕ್‍ಗಳ ಹಾವಳಿಯಿಂದ ಜನ ರೋಸಿ ಹೋಗಿದ್ದಾರೆ. ಮಕ್ಕಳು ಓದುವುದು ಕಷ್ಟವಾಗಿದೆ. ವೃದ್ಧರು ಮತ್ತು ಮಕ್ಕಳಿಗೂ ಸಮಸ್ಯೆಯಾಗಿದೆ. ಯಾವಾಗ ಬೇಕು ಆವಾಗ ಮೈಕ್‍ಗಳನ್ನು ಬಳಸುತ್ತಿರುವುದರಿಂದ ಮಾನಸಿಕ ನೆಮ್ಮದಿ ಕೂಡ ಹಾಳಾಗಿದೆ. ಹಾಗಾಗಿ ಕೋರ್ಟ್ ಆದೇಶದಂತೆ ಮೈಕ್‍ಗಳನ್ನು ಬಳಸುವುದು ಮತ್ತು ಆ ನಿಟ್ಟಿನಲ್ಲಿ ನಗರಸಭೆ ಕೈಗೊಂಡ ಕ್ರಮ ಸ್ವಾಗತಾರ್ಹ ಎಂದು ತಿಳಿಸಿದ್ದಾರೆ. ಇದನ್ನೂ ಓದಿ: ಹಿಜಬ್ ವಿಷಯವನ್ನು ಪ್ರಸ್ತಾಪ ಮಾಡೇ ಇಲ್ಲ: ಸ್ವಾಮೀಜಿಗಳ ಟೀಕೆ ಬಳಿಕ ಸಿದ್ದು ಸ್ಪಷ್ಟನೆ
ನಗರಸಭೆ, ಸಮಾಜ ಹಾಗೂ ಜನಸಾಮಾನ್ಯರಿಗೆ ಶಾಂತಿ ತರುವ ನಿಟ್ಟಿನಲ್ಲಿ ಈ ನಿರ್ಧಾರಕ್ಕೆ ಬಂದಿದೆ. ಆದರೆ ನಗರಸಭೆಯ ಈ ನಡೆಗೆ ಕೆಲ ಕಾಂಗ್ರೆಸ್ ನಗರಸಭೆ ಸದಸ್ಯರು ವಿರೋಧ ವ್ಯಕ್ತಪಡಿಸಿದ್ದಾರೆ. ನಗರಸಭೆ ಕಾನೂನಿನ ಮಿತಿಯೊಳಗೆ ಇದ್ದರೆ ಯಾವುದೇ ತೊಂದರೆ ಇಲ್ಲ. ತೆರವು ಮಾಡುವುದಿಲ್ಲ. ಕಾನೂನಿನ ಮಿತಿಯಲ್ಲಿ ಇಲ್ಲದೆ, ಅಕ್ರಮವಾಗಿದ್ದರೆ ಮಾತ್ರ ತೆರವು ಎಂದು ನಗರಸಭೆ ಅಧ್ಯಕ್ಷರು ಸ್ಪಷ್ಟಪಡಿಸಿದ್ದಾರೆ.
ಮಾತು ಬಲ್ಲವನಿಗೆ ಜಗಳವಿಲ್ಲ, ಊಟಬಲ್ಲವನಿಗೆ ರೋಗವಿಲ್ಲ ಎಂಬ ಗಾದೆ ಮಾತನ್ನು ನಾವೆಲ್ಲ ಕೇಳಿರಬಹುದು. ಹಾಗೆಯೇ ಬಿಗ್‍ಬಾಸ್ ಮನೆಯಲ್ಲಿ ಹೆಚ್ಚಾಗಿ ಯಾರು ಮಾತನಾಡುತ್ತಾರೆ ಎಂದು ಕೇಳಿದರೆ ಅದು ಮಂಜು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಸದ್ಯ ಬಿಗ್‍ಬಾಸ್.. ದೊಡ್ಮನೆ ಸದಸ್ಯರಿಗೆ ಮಾತುಗಾರ ಎಂಬ ಚಟುವಟಿಕೆಯೊಂದನ್ನು ನೀಡಿದ್ದರು. ಅದರ ಅನುಸಾರ ಮನೆಯ ಎಲ್ಲ ಸದಸ್ಯರು ಇಡೀ ಮನೆಯಲ್ಲಿ ಹೆಚ್ಚಾಗಿ ಮಾತನಾಡುವ ಸದಸ್ಯರನ್ನು ಆರಿಸಿ ಪ್ಲಾಸ್ಟರ್ ಬ್ಯಾಡ್ಜ್‍ನನ್ನು ನೀಡಬೇಕು ಹಾಗೂ ಅತೀ ಕಡಿಮೆ ಮಾತನಾಡುವ ಸದಸ್ಯರಿಗೆ ಮೈಕ್ ಬ್ಯಾಡ್ಜ್ ನನ್ನು ನೀಡಬೇಕು ಎಂದು ಸೂಚಿಸಿದ್ದರು.
ಈ ಚಟುವಟಿಕೆ ಆರಂಭಿಸಿದ ನಿಧಿ, ಮಂಜು ಮಾತೆಂದರೆ ನನಗೆ ಬಹಳ ಇಷ್ಟ. ಆದರೆ ಒಮ್ಮೊಮ್ಮೆ ಅವರ ಮಾತು ನನಗೆ ತಲೆನೋವು ಬರಿಸುತ್ತದೆ ಅಂತಾರೆ. ಇನ್ನು ನೋವಿಗೆ ಸ್ಪಂದಿಸುವ ಹಾಗೂ ಎಲ್ಲರನ್ನು ಮಾತಿನ ಮೂಲಕ ಆಕರ್ಷಿಸುವ ವ್ಯಕ್ತಿ ಮಂಜು ಎಂದು ಶಂಕರ್ ಹೇಳುತ್ತಾರೆ. ನಂತರ ಪ್ರಶಾಂತ್ ಸಂಬರ್ಗಿ ಮಾತು ಬೆಳ್ಳಿ, ಮೌನ ಚಿನ್ನ ಆದರೆ ಮಾತು ಹೆಚ್ಚಾದರೆ ಗಾರ್ಬೆಜ್ ಎಂದು ಹೇಳಿ ಪ್ಲಾಸ್ಟರ್ ನೀಡುತ್ತಾರೆ. ಮಂಜು ಮಾತನಾಡುವಾಗ ಸ್ವಲ್ಪ ವಾಲ್ಯೂಮ್ ಕಡಿಮೆ ಮಾಡಿಕೊಂಡರೆ ಒಳ್ಳೆಯದು ಅಂತ ಶಮಂತ್ ಹೇಳಿದರೆ, ಅರವಿಂದ್.. ನಿದ್ರೆಯ ಗೋರಕೆಯಲ್ಲಿ ಮಾತನಾಡುವ ವ್ಯಕ್ತಿ ಅಂದರೆ ಅದು ಮಂಜು ಅಂತ ಸೂಚಿಸುತ್ತಾರೆ. ಹೀಗೆ ವೈಷ್ಣವಿ ಸೇರಿದಂತೆ ಮನೆಯ ಬಹುತೇಕ ಮಂದಿ ಮಂಜುರನ್ನು ಮಾತುಗಾರ ಎಂದು ಸೂಚಿಸಿ ಪ್ಲಾಸ್ಟರ್ ನೀಡುತ್ತಾರೆ.
ಮನೆಯಲ್ಲಿ ಕಡಿಮೆ ಮಾತನಾಡುವ ವ್ಯಕ್ತಿ ಎಂದರೆ ವೈಷ್ಣವಿ ಅವರು ಹೆಚ್ಚಾಗಿ ಮಾತನಾಡಬೇಕು ಎಂದು ದಿವ್ಯಾ ಸುರೇಶ್, ಶಂಕರ್, ಶಮಂತ್, ಶುಭ ಹೀಗೆ ಮನೆಯ ಹೆಚ್ಚಿನ ಮಂದಿ ಸೂಚಿಸುತ್ತಾರೆ.
ಹೀಗೆ ಮನೆಯಲ್ಲಿ ಹೆಚ್ಚು ಮಾತನಾಡುವ ಸದಸ್ಯ ಮಂಜುಗೆ ಪ್ಲಾಸ್ಟರ್ ಬ್ಯಾಡ್ಜ್ ದೊರೆತ ಹಿನ್ನೆಲೆ ನಿನ್ನೆ ಬಿಗ್‍ಬಾಸ್ ತಮ್ಮ ಮುಂದಿನ ಆದೇಶದವರೆಗೂ ಮಂಜು ಮಾತನಾಡುವಂತಿಲ್ಲ ಎಂದು ತಿಳಿಸಿದ್ದಾರೆ. ಅಲ್ಲದೆ ತಾವು ಏನೇ ಮಾತನಾಡಬೇಕದರೂ ನೇರವಾಗಿ ಮಾತನಾಡದೇ ವೈಷ್ಣವಿ ಮೂಲಕವೇ ಮಾತನಾಡಬೇಕೆಂದು ಹೇಳಿದರು. ಜೊತೆಗೆ ವೈಷ್ಣವಿಯೊಂದಿಗೆ ಕೂಡ ಪದ ಬಳಕೆ ಮಾಡದೇ ಸನ್ನೆ, ಮೂಕ ಅಭಿನಯ, ನಟನೆಯೊಂದಿಗೆ ಅರ್ಥಮಾಡಿಸಬೇಕು ಎಂದು ತಿಳಿಸಿದರು. ಇದನ್ನು ಕೇಳಿದ ಮನೆಯ ಸದಸ್ಯರು ಹೊಟ್ಟೆ ಬಿರಿಯುಷ್ಟು ನಗುತ್ತಾ ಎಂಜಾಯ್ ಮಾಡಿದರು.
ಒಟ್ಟಾರೆ ಪಟಾಕಿಯಂತೆ ಯಾವಾಗಲೂ ಮಾತನಾಡುತ್ತಿದ್ದ ಮಂಜು ಬಾಯಿಗೆ ಬಿಗ್‍ಬಾಸ್ ಬೀಗ ಹಾಕಿದ್ದಾರೆ ಎಂದರೆ ತಪ್ಪಾಗಲಾರದು.
ಬೆಂಗಳೂರು: ಮೈಕ್‍ಗೂ ನಳಿನ್ ಕುಮಾರ್ ಕಟೀಲ್‍ಗೂ ಏನೋ ಒಂಥರಾ ಅಟ್ಯಾಚ್ಮೆಂಟ್ ಅನ್ಸುತ್ತೆ. ಆಗಾಗ್ಗೆ ಮೈಕ್ ವಿಚಾರಕ್ಕೆ ಕಟೀಲ್ ಸ್ವಲ್ಪ ಗಮನ ಸೆಳೆಯುತ್ತಾರೆ. ಇಂದು ಬೆಂಗಳೂರಿನಲ್ಲೂ ಮೈಕ್ ವಿಚಾರಕ್ಕೆ ಕಟೀಲ್ ಎಲ್ಲರ ನಗುವಿಗೆ ಕಾರಣಕರ್ತರಾದ್ರು. ಬೆಂಗಳೂರಲ್ಲಿ ನಡೆದ ಜಿಲ್ಲಾಧ್ಯಕ್ಷರ ಪದಗ್ರಹಣ ಸಮಾರಂಭದಲ್ಲಿ ಮೈಕ್ ಹಿಡಿದ ಕಟೀಲ್ ಹೇಳಿದ್ದನ್ನು ಕೇಳಿದ್ರೆ ನಗು ಉಕ್ಕಿಬಾರದೇ ಇರದು.
ಬಸವನಗುಡಿಯ ಮರಾಠ ಭವನದಲ್ಲಿ ಬೆಂಗಳೂರು ನಗರ ಜಿಲ್ಲೆಯ ದಕ್ಷಿಣ ಭಾಗದ ಜಿಲ್ಲಾಧ್ಯಕ್ಷರ ಅಧಿಕಾರ ಸ್ವೀಕಾರ ಸಮಾರಂಭ ಇತ್ತು. ಸಮಾರಂಭದಲ್ಲಿ ಭಾಗವಹಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್ ಮಾತನಾಡಲು ಪೋಡಿಯಂ ಮುಂದೆ ಬಂದು ನಿಂತ್ರು. ಪೋಡಿಯಂನಲ್ಲಿದ್ದ ಮೈಕ್ ಆಗಾಗ್ಗೆ ಕೆಳಭಾಗಕ್ಕೆ ಬಾಗುತ್ತಿತ್ತು. ಅದನ್ನ ಮತ್ತೆ ಮತ್ತೆ ಮೇಲೆತ್ತಲು ಪ್ರಯತ್ನಿಸಿದ ಕಟೀಲ್ ವೇದಿಕೆ ಮೇಲಿದ್ದವರನ್ನ ನೋಡಿ ನಕ್ಕರು. ಅದೇಕೋ ಈ ಮೈಕ್ ಸ್ವಲ್ಪ ನನ್ನ ಥರಾನೇ ಅಂತ ಹೇಳಿದ್ದೆ ತಡ, ಇಡೀ ಸಭೆ ನಗೆಗಡಲಿಲ್ಲ ತೇಲಿತ್ತು.
ಅಂದಹಾಗೆ ಕಟೀಲ್ ಮತ್ತು ಮೈಕ್ ನಡುವಿನ ಅಟ್ಯಾಚ್ಮೆಂಟ್ ಇಂದು ಹೊಸದೇನಲ್ಲ. 2019ರ ಲೋಕಸಭೆ ಚುನಾವಣೆಯ ಸಂದರ್ಭದಲ್ಲಿಯೂ ಕಟೀಲ್ ಮೈಕ್ ಹಿಡಿದು ಮತ ಕೇಳಿದ್ದರು. ಮೈಕನ್ನೇ ನಿಮ್ಮ ಕಾಲು ಅಂತ ತಿಳಿದುಕೊಂಡು ನಮಸ್ಕರಿಸುತ್ತೇನೆ, ನನಗೆ ಮತ ಹಾಕಿ ಎಂದು ಪ್ರಚಾರ ಮಾಡಿದ್ದರು. ಇದು ಅವತ್ತಿನ ಮಟ್ಟಿಗೆ ದೊಡ್ಡ ಮಟ್ಟದ ಟ್ರೋಲ್ ಆಗಿತ್ತು.
ನೆಲಮಂಗಲ: ಕ್ರಿಕೆಟ್ ಟೂರ್ನಿಯ ವೇಳೆ ವೀಕ್ಷಕ ವಿವರಣೆ ನೀಡುತ್ತಿದ್ದ ಯುವಕನಿಗೆ ವಿದ್ಯುತ್ ತಗುಲಿ ಸಾವನ್ನಪ್ಪಿರುವ ಘಟನೆ ನೆಲಮಂಗಲದ ಕೊಟ್ಟನಹಳ್ಳಿ ಗ್ರಾಮದಲ್ಲಿ ನಡೆದಿದೆ.
22 ವರ್ಷದ ಕಿರಣ್ ವಿದ್ಯುತ್ ಶಾಕ್‍ಗೆ ಬಲಿಯಾದ ಯುವಕನಾಗಿದ್ದು, ಮಧ್ಯಾಹ್ನದ ವೇಳೆಗೆ ಘಟನೆ ನಡೆದಿದೆ. ಇಂದು ಮಂಚೇನಹಳ್ಳಿ ಕ್ರಾಸ್ ಬಳಿ ಕ್ರಿಕೆಟ್ ಟೂರ್ನಿ ಏರ್ಪಡಿಸಲಾಗಿತ್ತು. ಈ ಹಿನ್ನೆಲೆಯಲ್ಲಿ ಮೃತ ಕಿರಣ್ ಸ್ಥಳದಲ್ಲಿ ಅಳವಡಿಸಿದ್ದ ಮೈಕಿನಲ್ಲಿ ಮಾತನಾಡುತ್ತಿದ್ದ.
ಕ್ರಿಕೆಟ್ ಮೈದಾನದ ಬಳಿ ಟೂರ್ನಿಯ ಬಗ್ಗೆ ಮಾಹಿತಿ ನೀಡಲು ಮೈಕ್ ಅಳವಡಿಸಲಾಗಿತ್ತು. ಕಿರಣ್ ಪಂದ್ಯದಲ್ಲಿ ವೇಳೆ ಮಾಹಿತಿ ನೀಡುತ್ತಿದ್ದರು. ಈ ವೇಳೆ ಅವರಿಗೆ ವಿದ್ಯುತ್ ಶಾಕ್ ತಗುಲಿತ್ತು. ಕೂಡಲೇ ವಿದ್ಯುತ್ ತಂತಿಯನ್ನ ಕಿತ್ತೆಸೆದು ಕಿರಣ್‍ನನ್ನು ಆಸ್ಪತ್ರೆಗೆ ಕರೆತರುವ ಪ್ರಯತ್ನ ನಡೆಸಿದ್ದೆವು. ಆದರೆ ಮಾರ್ಗ ಮಧ್ಯದಲ್ಲೇ ಕಿರಣ್ ಸಾವನ್ನಪ್ಪಿದ್ದಾಗಿ ಆತನ ಗೆಳೆಯರು ಮಾಹಿತಿ ನೀಡಿದ್ದಾರೆ.
ಸದ್ಯ ಮೃತ ಕಿರಣ್ ಮೃತದೇಹವನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಆಸ್ಪತ್ರೆಯ ಬಳಿ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ನೆಲಮಂಗಲ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.