Tag: ಮೈಕಲ್ ಕೊರ್ಸೇಲ್

  • ನಟಿ ಶ್ರುತಿ ಹಾಸನ್ ಲವ್ ಬ್ರೇಕಪ್

    ನಟಿ ಶ್ರುತಿ ಹಾಸನ್ ಲವ್ ಬ್ರೇಕಪ್

    ಹೈದರಾಬಾದ್: ನಟ ಕಮಲ್ ಹಾಸನ್ ಪುತ್ರಿ ಶ್ರುತಿ ಹಾಸನ್ ಇಟಲಿ ಮೂಲದ ಮೈಕಲ್ ಕೊರ್ಸೇಲ್ ಜೊತೆ ರಿಲೇಶನ್ ಶಿಪ್‍ನಲ್ಲಿದ್ದರು. ಇಬ್ಬರು ಮದುವೆಯಾಗುತ್ತಾರೆ ಎಂಬ ಸುದ್ದಿ ಹರಿದಾಡುತಿತ್ತು. ಇದೀಗ ಇವರಿಬ್ಬರ ಪ್ರೀತಿ ಬ್ರೇಕಪ್ ಆಗಿದ್ದು, ಈ ಬಗ್ಗೆ ಮೈಕಲ್ ಸ್ಪಷ್ಟಪಡಿಸಿದ್ದಾರೆ.

    ಶ್ರುತಿ ಹಾಸನ್ ಮತ್ತು ಮೈಕಲ್ ಕೊರ್ಸೇಲ್ ಕೆಲವು ವರ್ಷಗಳಿಂದ ಒಟ್ಟಿಗೆ ಕಾಣಿಸಿಕೊಳ್ಳುತ್ತಿದ್ದರು. ಕ್ರಿಸ್‍ಮಸ್, ನ್ಯೂ ಇಯರ್ ಆಚರಣೆಯನ್ನು ಒಟ್ಟಿಗೆ ಸ್ನೇಹಿತರ ಜೊತೆ ಸೇರಿ ಆಚರಣೆ ಮಾಡುತ್ತಿದ್ದರು. ಅಷ್ಟೇ ಅಲ್ಲಿದೇ ತಮ್ಮ ಕ್ಯೂಟ್ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಪ್ಲೋಡ್ ಮಾಡುತ್ತಿದ್ದರು. ಹೀಗಾಗಿ ಇವರಿಬ್ಬರು ಪರಸ್ಪರ ಪ್ರೀತಿಸುತ್ತಿದ್ದು, ಮದುವೆಯಾಗುತ್ತಾರೆ ಎಂದು ಹೇಳಲಾಗುತಿತ್ತು. ಆದರೆ ಇದೀಗ ಇವರ ಲವ್ ಬ್ರೇಕಪ್ ಆಗಿದೆ.

    ಈ ಬಗ್ಗೆ ಸ್ವತಃ ಮೈಕಲ್ ಸಾಮಾಜಿಕ ಜಾಲತಾಣದಲ್ಲಿ ಬಹಿರಂಗ ಪಡಿಸಿದ್ದಾರೆ. “ಜೀವನವು ನಮ್ಮಿಬ್ಬರನ್ನು ವಿರುದ್ಧ ಮಾರ್ಗದಲ್ಲಿ ತಂದು ನಿಲ್ಲಿಸಿದೆ. ದುರದೃಷ್ಟವಶಾತ್ ನಾವಿಬ್ಬರು ಇನ್ನು ಮುಂದೆ ಒಂಟಿ ಮಾರ್ಗದಲ್ಲಿ ಹೆಜ್ಜೆ ಹಾಕಬೇಕಿದೆ. ಆದರೂ ಈ ಯಂಗ್ ಲೇಡಿ ನನಗೆ ಒಳ್ಳೆಯ ಸ್ನೇಹಿತೆಯಾಗಿರುತ್ತಾಳೆ. ಆಕೆಯ ಜೀವನ ಪರ್ಯಂತ ಸ್ನೇಹಿತನಾಗಿರಲು ಹೆಮ್ಮೆಪಡುತ್ತೇನೆ” ಎಂದು ಬರೆದುಕೊಂಡು ಇಬ್ಬರ ಫೋಟೋವನ್ನು ಶೇರ್ ಮಾಡಿದ್ದಾರೆ.

    “ನಾನು ಸದ್ಯಕ್ಕೆ ಮದುವೆ ಆಗುವುದಿಲ್ಲ. ನನಗೆ ಮದುವೆ ಆಗಬೇಕು ಎಂದು ಅನಿಸಿಲ್ಲ. ಹೀಗಾಗಿ ಆ ಭಾವನೆ ಬಂದಾಗ ಮದುವೆಯಾಗುತ್ತೇನೆ” ಎಂದು ಸಂದರ್ಶನವೊಂದರಲ್ಲಿ ಶ್ರುತಿ ಮದುವೆ ಬಗ್ಗೆ ಹೇಳಿದ್ದರು.

    ಸದ್ಯಕ್ಕೆ ಸುಮಾರು ವರ್ಷಗಳ ಬಳಿಕ ಮತ್ತೆ ಶ್ರುತಿ ಹಾಸನ್ ಸಿನಿಮಾದತ್ತ ಮುಖ ಮಾಡಿದ್ದು, ವಿಜಯ್ ಸೇತುಪತಿ ಜೊತೆ ಅಭಿನಯಿಸುತ್ತಿದ್ದಾರೆ. ಜೊತೆಗೆ ಹಿಂದಿ ಸಿನಿಮಾದಲ್ಲೂ ಬ್ಯುಸಿಯಾಗಿದ್ದಾರೆ.

    https://www.instagram.com/p/Bws8P5gnqPh/