Tag: ಮೇಸೆಜ್

  • ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಮದುವೆಯಲ್ಲಿ ಕೇಕ್ ಪೀಸ್ ತಿಂದಿದ್ದಕ್ಕೆ ಅತಿಥಿಗೆ 366 ರೂ. ಪಾವತಿಸಿ ಅಂದ ನವದಂಪತಿ

    ಲಂಡನ್: ಮದುವೆ ಸಮಾರಂಭವೊಂದರಲ್ಲಿ ಅತಿಥಿಯೊಬ್ಬರು ಕೇವಲ ಒಂದು ಪೀಸ್ ಕೇಕ್ ತಿಂದಿದ್ದಕ್ಕೆ ನವದಂಪತಿ ಹಣ ಪಾವತಿಸುವಂತೆ ಕೇಳಿದ ವಿಚಾರವನ್ನು ಬಹಿರಂಗ ಪಡಿಸಿದ್ದಾರೆ. ಇದನ್ನೂ ಓದಿ: ಪತಿ ಇಲ್ಲದ ಮೇಲೆ ಬದುಕಿ ಪ್ರಯೋಜನವಿಲ್ಲ – ಡೆತ್‍ನೋಟ್ ಬರೆದು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

    ನವದಂಪತಿಗಳು ತಮ್ಮ ಮದುವೆಯ ಸಿಸಿಟಿವಿ ದೃಶ್ಯವನ್ನು ವೀಕ್ಷಿಸಿದ್ದು, ಈ ವೇಳೆ ಅತಿಥಿಯೊಬ್ಬರು ಮದುವೆಯಲ್ಲಿ ಎರಡು ಕೇಕ್ ಪೀಸ್ ತಿಂದಿರುವುದನ್ನು ನೋಡಿದ್ದಾರೆ. ನಂತರ ಈ ವೀಡಿಯೋವನ್ನು ಅತಿಥಿಯ ವಾಟ್ಸಾಪ್‍ಗೆ ಕಳುಹಿಸಿದ್ದಾರೆ. ವೀಡಿಯೋದಲ್ಲಿ ಅತಿಥಿ ಎರಡನೇ ಬಾರಿ ಕೇಕ್ ಕತ್ತರಿಸಿ ತಿನ್ನುತ್ತಿರುವುದನ್ನು ನೋಡಿ. ಈ ವೀಡಿಯೋ ಕಳುಹಿಸಿದರ ಅರ್ಥವೇನು ಎಂದು ಕೇಳಿದ್ದಾರೆ.

    wedding

    ಆಗ, ನಾವು ಸಿಸಿಟಿವಿ ದೃಶ್ಯದಲ್ಲಿ ನೀವು ಎರಡು ಬಾರಿ ಕೇಕ್ ಪೀಸ್‍ನ್ನು ತಿನ್ನುತ್ತಿರುವುದನ್ನು ನೋಡಿದ್ದೇವೆ. ಮದುವೆಗೆ ಬಂದ ಪ್ರತಿ ಅತಿಥಿಗಳಿಗೆ ಒಂದು ಪೀಸ್ ಕೇಕ್‍ಗೆ ಹಣ ಪಾವತಿಸುವಂತೆ ಘೋಷಿಸಿದ್ದೇವೆ. ಆದರೆ ನೀವು ಒಂದು ಕೇಕ್ ಪೀಸ್‍ಗೆ ಮಾತ್ರ ಹಣ ಪಾವತಿಸಿದ್ದೀರಾ, ನೀವು ತಿಂದ ಮತ್ತೊಂದಕ್ಕೆ ಹಣ ಪಾವತಿಸಲಿಲ್ಲ. ಹೀಗಾಗಿ ದಯವಿಟ್ಟು 366 ರೂ.ವನ್ನು ಆದಷ್ಟು ಬೇಗ ಕಳುಹಿಸಿಕೊಡುತ್ತೀರಾ? ಎಂದು ಮೇಸೆಜ್ ಕಳುಹಿಸಿಕೊಟ್ಟಿದ್ದಾರೆ. ಇದನ್ನೂ ಓದಿ: ಯೂಟ್ಯೂಬ್ ನೋಡಿ ಬೈಕ್ ಕಳ್ಳತನ ಮಾಡುತ್ತಿದ್ದ ಗ್ಯಾಂಗ್ ಅಂದರ್

    ಸದ್ಯ ಈ ಮೇಸೆಜ್ ನೋಡಿ ಶಾಕ್ ಆಗಿರುವ ನೆಟ್ಟಿಗರು, ನವದಂಪತಿ ಹನಿಮೂನ್‍ಗೆ ಹೋಗುವ ಬದಲು ಸಿಸಿಟಿವಿ ದೃಶ್ಯ ನೋಡಿ ಅತಿಥಿಗಳಿಗೆ ಹಣಪಾವತಿಸುವಂತೆ ಕೇಳುತ್ತಿದ್ದಾರೆ ಎಂದು ಹಾಸ್ಯ ಮಾಡಿದ್ದಾರೆ. ಇನ್ನೂ ಈ ವಿಚಾರ ಅತಿಥಿಗಳಿಗೆ ಮುಜುಗರವನ್ನುಂಟು ಮಾಡಿದೆ.

  • ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

    ದೊಡ್ಮನೆಯಿಂದ ಹೊರ ಹೋದ ಅರವಿಂದ್‍ಗೆ ಬಂದ ಪ್ರಪೋಸಲ್ಸ್ ಎಷ್ಟು ಗೊತ್ತಾ?

    ಬೆಂಗಳೂರು: ಲಾಕ್‍ಡೌನ್ ಬಳಿಕ ಮತ್ತೆ ಬಿಗ್‍ಬಾಸ್ ಸೀಸನ್-8 ಕಾರ್ಯಕ್ರಮ ಆರಂಭವಾಗಿದೆ. ಸದ್ಯ ಕಾರ್ಯಕ್ರಮವನ್ನು ಕಂಟಿನ್ಯೂ ಮಾಡಿರುವ ಕಿಚ್ಚ ಸುದೀಪ್ ಸ್ಪರ್ಧಿಗಳನ್ನು ಮತ್ತೆ ದೊಡ್ಮನೆಗೆ ಬರಮಾಡಿಕೊಳ್ಳುತ್ತಾ, ಕೆಲವೊಂದು ಪ್ರಶ್ನೆಗಳನ್ನು ಕೇಳಿದ್ದಾರೆ.

    ಈ ಮಧ್ಯೆ ದೊಡ್ಮನೆಯಿಂದ ಹೊರ ಹೋದ ಕೆ.ಪಿ ಅರವಿಂದ್‍ರವರಿಗೆ ಎಷ್ಟು ಮದುವೆ ಪ್ರಪೋಸಲ್ಸ್ ಗಳು ಬಂದಿದೆ ಎಂಬ ವಿಚಾರ ವೇದಿಕೆ ಮೇಲೆ ಬಹಿರಂಗವಾಗಿದೆ.

    ಹೌದು, ಬಿಗ್‍ಬಾಸ್ ಮನೆಯಿಂದ ಹೊರಗಡೆ ಹೋದ ಮೇಲೆ ಸಿನಿಮಾ ಆಫರ್‌ಗಳು ಜಾಸ್ತಿ ಬಂತಾ, ಮದುವೆ ಆಫರ್‌ಗಳು ಜಾಸ್ತಿ ಬಂತಾ, ರೇಸ್ ಸರ್ಕಲ್‍ಗಳಿಂದ ಆಫರ್ ಜಾಸ್ತಿ ಬಂತಾ ಏನೇನು ಬಂತು ಎಂದು ಕಿಚ್ಚ ಸುದೀಪ್ ಅರವಿಂದ್‍ರವರಿಗೆ ಪ್ರಶ್ನೆ ಕೇಳಿದ್ದಾರೆ.

    ಆಗ ಅರವಿಂದ್ ಕೋವಿಡ್ ಇರುವ ಕಾರಣ ರೇಸ್ ಸರ್ಕಲ್‍ನಿಂದ ಜಾಸ್ತಿ ಆಫರ್‌ಗಳು ಬಂದಿಲ್ಲ. ಸದ್ಯಕ್ಕೆ ಸಿನಿಮಾ ಆಫರ್‌ಗಳು ಬಂದಿಲ್ಲ. ಆದರೆ ಮದುವೆ ಆಫರ್‌ಗಳು ಒಂದೆರಡು-ಮೂರು ಬಂದಿದೆ ಎಂದಿದ್ದಾರೆ. ಇದಕ್ಕೆ ಕಿಚ್ಚ, ಸತ್ಯ ಮಾತಾಡುತ್ತೇನೆ ಸತ್ಯ ಬಿಟ್ಟು ಬೇರೆನೂ ಮಾತನಾಡುವುದಿಲ್ಲ ಎಂದು ಈ ನೆಲ ಮುಟ್ಟಿ ಹೇಳಿ ಎಂದು ಕೇಳಿದಾಗ ಇದಕ್ಕೆ ನಗುತ್ತಾ ಅರವಿಂದ್, ನೆಲ ಮುಟ್ಟಿ ಸತ್ಯ ಮಾತನಾಡುತ್ತಿದ್ದೇನೆ ಸರ್, ಒಂದೆರಡು ಮೂರು ಪ್ರಪೋಸಲ್ಸ್ ಓದಿದ್ದೇನೆ. ಆದರೆ 1000ಕ್ಕೂ ಅಧಿಕ ಮೆಸೇಜ್‍ಗಳು ಬಂದಿದೆ ಎಂದು ಬಾಯ್ಬಿಟ್ಟಿದ್ದಾರೆ.

    ಅದರಲ್ಲಿ ಬಹಳಷ್ಟು ಇಂಟ್ರೆಸ್ಟಿಂಗ್ ಯಾವುದು ಎಂದು ಕೇಳಿದಾಗ, ಸ್ಟ್ರೆಟ್ ಆಗಿ ಮ್ಯಾರಿ ಮೀ ಎಂದು ಕಳುಹಿಸಿದ್ದರು ಎಂದು ಹೇಳಿದ್ದಾರೆ. ಇದನ್ನೂ ಓದಿ: ಬಿಗ್‍ಬಾಸ್ ಮನೆಯಲ್ಲಿ ನಾಮಿನೇಷನ್ ಬೆಂಕಿ ಶುರು