Tag: ಮೇವಿನ ಬಣವೆ

  • ಶಾರ್ಟ್ ಸರ್ಕ್ಯೂಟ್‌ನಿಂದ 20 ಕ್ಕೂ ಅಧಿಕ ಬಣವೆ ಸುಟ್ಟು ಭಸ್ಮ

    ಶಾರ್ಟ್ ಸರ್ಕ್ಯೂಟ್‌ನಿಂದ 20 ಕ್ಕೂ ಅಧಿಕ ಬಣವೆ ಸುಟ್ಟು ಭಸ್ಮ

    ಹಾವೇರಿ: ವಿದ್ಯುತ್ ಶಾರ್ಟ್ ಸರ್ಕ್ಯೂಟ್‌ನಿಂದ ಬೆಂಕಿ ಹೊತ್ತಿಕೊಂಡ ಪರಿಣಾಮ 20 ಕ್ಕೂ ಅಧಿಕ ಮೇವಿನ ಬಣವೆಗಳು ಹಾಗೂ ಐದಾರು ಮೆಕ್ಕೆಜೋಳದ ತೆನೆಗಳ ರಾಶಿ ಸುಟ್ಟು ಭಸ್ಮವಾದ ಘಟನೆ ಹಾವೇರಿ ತಾಲೂಕಿನ ಬಮ್ಮನಕಟ್ಟಿ ಗ್ರಾಮದಲ್ಲಿ ನಡೆದಿದೆ.

    ಸುಟ್ಟು ಹೋಗಿರುವ ಬಣವೆಗಳು ಗ್ರಾಮದ 15ಕ್ಕೂ ಅಧಿಕ ರೈತರಿಗೆ ಸೇರಿದ್ದಾಗಿವೆ. ಗ್ರಾಮದ ರೈತರಾದ ನಾಗಪ್ಪ, ಮಹಾದೇವಪ್ಪ, ಹನುಮಂತಪ್ಪ, ಬಸನಗೌಡ, ತಿಮ್ಮಣ್ಣ ಪೂಜಾರ ಸೇರಿದಂತೆ ಒಟ್ಟು 15 ರೈತರ ಬಣವೆ ಹಾಗೂ ಮೆಕ್ಕೆಜೋಳದ ರಾಶಿ ಶಾರ್ಟ್ ಸರ್ಕ್ಯೂಟ್‌ನಿಂದ ಸುಟ್ಟು ಭಸ್ಮವಾಗಿವೆ. ಇದನ್ನೂ ಓದಿ: ಜೇಮ್ಸ್ ಚಿತ್ರದ 1003 ಟಿಕೆಟ್ ಖರೀದಿ ಮಾಡಿದ ಅಪ್ಪು ಅಭಿಮಾನಿ

    ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಅಗ್ನಿಶಾಮಕ ದಳದ ಸಿಬ್ಬಂದಿ ಆಗಮಿಸಿ ಬೆಂಕಿ ನಂದಿಸುವ ಕಾರ್ಯದಲ್ಲಿ ತೊಡಗಿದ್ದಾರೆ. ಶಾರ್ಟ್ ಸಕ್ಯೂಟ್‌ನಿಮದ ನಷ್ಟ ಅನುಭವಿಸಿದ 15 ರೈತರಿಗೆ ಹೆಸ್ಕಾಂ ಪರಿಹಾರ ನೀಡಬೇಕು ಗ್ರಾಮಸ್ಥರು ಒತ್ತಾಯಿಸಿದ್ದಾರೆ. ಪ್ರಕರಣ ಗುತ್ತಲ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ: ಅಪ್ಪು ಹುಟ್ಟು ಹಬ್ಬಕ್ಕೆ ನೇತ್ರದಾನದ ವಾಗ್ದಾನ

  • ಆಕಸ್ಮಿಕ ಬೆಂಕಿಗೆ ಮೇವಿನ ಬಣವೆಗಳು ಭಸ್ಮ: ರೈತರು ಕಂಗಾಲು

    ಆಕಸ್ಮಿಕ ಬೆಂಕಿಗೆ ಮೇವಿನ ಬಣವೆಗಳು ಭಸ್ಮ: ರೈತರು ಕಂಗಾಲು

    ರಾಯಚೂರು: ನಾಡಿನೆಲ್ಲೆಡೆ ಜನ ಮಹಾಶಿವರಾತ್ರಿ ಸಂಭ್ರಮದಲ್ಲಿದ್ದರೆ ರಾಯಚೂರು ತಾಲೂಕಿನ ಜೇಗರಕಲ್ ಗ್ರಾಮದಲ್ಲಿ ಮೇವಿನ ಬಣವೆಗಳು ಸುಟ್ಟು ರೈತರು ಲಕ್ಷಾಂತರ ರೂಪಾಯಿ ನಷ್ಟ ಅನುಭವಿಸಿದ್ದಾರೆ.

    ಗ್ರಾಮದ ಈರಪ್ಪ, ಮಾಳಪ್ಪ ಅನ್ನೋ ಇಬ್ಬರು ರೈತರ ಒಟ್ಟು ಆರು ಬಣವೆಗಳು ಆಕಸ್ಮಿಕವಾಗಿ ತಗುಲಿದ ಬೆಂಕಿಗೆ ಸುಟ್ಟು ಭಸ್ಮವಾಗಿವೆ. ಬರಗಾಲ ಹಿನ್ನೆಲೆ ಮುನ್ನೆಚ್ಚರಿಕೆಯಾಗಿ ದನಕರುಗಳಿಗೆ ಶೇಖರಿಸಲಾಗಿದ್ದ ಸುಮಾರು 3 ಲಕ್ಷ ರೂಪಾಯಿ ಮೌಲ್ಯದ ಒಣ ಮೇವಿನ ಬಣವೆಗಳು ಬೂದಿಯಾಗಿವೆ.

    ಅಗ್ನಿ ಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಬೆಂಕಿ ನಂದಿಸಿದರಾದ್ರೂ ಎಲ್ಲಾ ಬಣವೆಗಳು ಸುಟ್ಟುಹೋಗಿವೆ. ಘಟನೆ ಹಿನ್ನೆಲೆ ರಾಯಚೂರು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.