Tag: ಮೇಲ್ಸೇತುವೆಗಳು

  • 12 ಮೇಲ್ಸೇತುವೆಗಳಿಗೆ ಕಾಯಕಲ್ಪ ನೀಡಲಿರುವ ಬಿಬಿಎಂಪಿ

    12 ಮೇಲ್ಸೇತುವೆಗಳಿಗೆ ಕಾಯಕಲ್ಪ ನೀಡಲಿರುವ ಬಿಬಿಎಂಪಿ

    ಬೆಂಗಳೂರು: ಸಿರ್ಸಿ ಫ್ಲೈಓವರ್ ಡಾಂಬರೀಕರಣ ಮಾದರಿಯಲ್ಲಿ ನಗರದ 12 ಮೇಲ್ಸೇತುವೆಗಳನ್ನ ಹಂತ ಹಂತವಾಗಿ ದುರಸ್ತಿ ಮಾಡಲು ಬಿಬಿಎಂಪಿ ಮುಂದಾಗಿದೆ.

    ಟಿಕ್ಕಿಟಾರ್ ಶೀಟ್ ಬಳಸಿ ಡಾಂಬರೀಕರಣಕ್ಕೆ ಬಿಬಿಎಂಪಿ ಯೋಜನೆಯನ್ನ ಸಿದ್ಧಪಡಿಸಿಕೊಂಡಿದೆ. ನಗರದ ಐಟಿಸಿ, ಆನಂದ್ ರಾವ್ ವೃತ್ತ, ಡೈರಿ ಸರ್ಕಲ್ ಫ್ಲೈಓವರ್, ರಿಚ್ಮಂಡ್ ಸರ್ಕಲ್ ಫ್ಲೈಓವರ್ ಸೇರಿದಂತೆ ಒಟ್ಟು 12 ಮೆಲ್ಸೇತುವೆಗಳಿಗೆ ಕಾಯಕಲ್ಪ ನೀಡಲು ಪಾಲಿಕೆ ಮುಂದಾಗಿದೆ.

    ಮೆಲ್ಸೇತುವೆಗಳ ನಿರ್ವಹಣೆ ಸರಿಯಾಗಿ ಆಗದೆ ಹಲವು ದೋಷಗಳು ಕಂಡು ಬಂದಿವೆ ಎಂದು ಸಂಚಾರಿ ತಜ್ಞರು ತಮ್ಮ ಅಭಿಪ್ರಾಯವನ್ನ ತಿಳಿಸಿದ್ದಾರೆ. ಆದ್ದರಿಂದ ನಗರದಲ್ಲಿ ಎಲ್ಲಾ ಮೆಲ್ಸೇತುವೆಗಳ ನಿರ್ವಾಹಣೆ ಮತ್ತು ದುರಸ್ತಿ ಕಾರ್ಯಕ್ಕೆ ಬಿಬಿಎಂಪಿ ಸಿದ್ಧವಾಗಿದೆ. ನಗರದ ಹಲವು ಮೇಲ್ಸೇತುವೆ ಮಾರ್ಗದಲ್ಲಿ ಸಾಕಷ್ಟು ಗುಂಡಿಗಳು ಬಿದ್ದಿವೆ. ಈ ಹಿಂದೆ ಸುಮ್ಮನಹಳ್ಳಿ ಫ್ಲೈಓವರ್, ಹೆಬ್ಬಾಳ ಫ್ಲೈಓವರ್‍ನಲ್ಲಿ ಗುಂಡಿ ಬಿದ್ದಿದ್ದು ವಾಹನ ಸವಾರರ ಆತಂಕಕ್ಕೆ ಕಾರಣವಾಗಿತ್ತು. ಇದರಿಂದ ವಾಹನ ಸವಾರರು ಪಾಲಿಕೆಯ ಮೇಲೆ ಕಿಡಿಕಾರಿದ್ದರು. ಪಾಲಿಕೆಯ ಮೇಲೆ ಆಕ್ರೋಶ ವ್ಯಕ್ತವಾದ ಹಿನ್ನೆಲೆಯಲ್ಲಿ ಇದೀಗ ಬಿಬಿಎಂಪಿ ಮೇಲ್ಸೇತುವೆಗಳ ಮರು ಡಾಂಬರೀಕರಣ ಮಾಡಲು ನಿರ್ಧರಿಸಿದೆ.

    ದುರಸ್ಥಿಯಾಗುವ 12 ಮೇಲ್ಸೇತುವೆಗಳ ಪಟ್ಟಿ:
    01) ಐಟಿಸಿ ಮೇಲ್ಸೇತುವೆ
    02) ಬೆಳ್ಳಂದೂರು ಮೇಲ್ಸೇತುವೆ
    03) ಆರ್ ಎಂಪಿ ಮೇಲ್ಸೇತುವೆ
    04) ಡೈರಿ ಸರ್ಕಲ್ ಮೇಲ್ಸೇತುವೆ
    05) ಲಿಂಗರಾಜಪುರ ಮೇಲ್ಸೇತುವೆ
    06) ನಾಗನಪಾಳ್ಯ ಮೇಲ್ಸೇತುವೆ


    07) ರಾಮಸ್ವಾಮಿ ಮೇಲ್ಸೇತುವೆ
    08) ರಿಚ್ಮಂಡ್ ಸರ್ಕಲ್ ಮೇಲ್ಸೇತುವೆ
    09) ನಾಯಂಡನಹಳ್ಳಿ ಮೇಲ್ಸೇತುವೆ
    10) ಸಿಲ್ಕ್ ಬೋರ್ಡ್ ಮೇಲ್ಸೇತುವೆ
    11) ಯಶವಂತಪುರ- ಮತ್ತಿಕೆರೆ ಮೇಲ್ಸೇತುವೆ
    12) ಎಚ್ ಎಸ್ ಆರ್ ಲೇಔಟ್
    13) ಆನಂದ್ ರಾವ್ ಸರ್ಕಲ್