Tag: ಮೇಲ್ಛಾವಣಿ

  • ವಿಜಯಪುರ | ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಗೃಹಿಣಿ ಸಾವು

    ವಿಜಯಪುರ | ಭಾರೀ ಮಳೆಗೆ ಮನೆಯ ಮೇಲ್ಛಾವಣಿ ಕುಸಿದು ಗೃಹಿಣಿ ಸಾವು

    ವಿಜಯಪುರ: ರಾತ್ರಿಯಿಡಿ ಭಾರೀ ಮಳೆ (Heavy Rain) ಸುರಿದ ಪರಿಣಾಮ ಮನೆಯ ಮೇಲ್ಛಾವಣಿ (Roof) ಕುಸಿದು ಮನೆಯಲ್ಲಿ ಮಲಗಿದ್ದ ಗೃಹಿಣಿ ಸಾವನ್ನಪ್ಪಿದ ಘಟನೆ ವಿಜಯಪುರದಲ್ಲಿ ನಡೆದಿದೆ.

    ವಿಜಯಪುರ ಜಿಲ್ಲೆ ತಿಕೋಟಾ ತಾಲೂಕಿನ ಬಾಬಾನಗರದಲ್ಲಿ ಘಟನೆ ನಡೆದಿದೆ. ಸಂಗೀತಾ ಗಂಡ ಬಾಳಾಸಾಹೇಬ ಪಾಟೀಲ್ (30) ಮೃತ ಮಹಿಳೆ. ಇದನ್ನೂ ಓದಿ: ಹನಿಮೂನ್‌ಗೆ ತೆರಳಿದ್ದ ದಂಪತಿ ನಾಪತ್ತೆ ಕೇಸ್ – ಪತ್ನಿ ಅರೆಸ್ಟ್

    ಭಾನುವಾರ ತಡರಾತ್ರಿ ಮನೆಯಲ್ಲಿ ಮಲಗಿದ್ದಾಗ ಅವಘಡ ಸಂಭವಿಸಿದೆ. ಮಳೆಯಿಂದಾಗಿ ಮನೆ ಸೋರುತ್ತಿದ್ದ ವೇಳೆ ಮನೆಯಿಂದ ಎದ್ದು ಹೊರ ಬಂದು ಪತಿ ಹಾಗೂ ಮಕ್ಕಳು ಅಪಾಯದಿಂದ ಪಾರಾಗಿದ್ದಾರೆ. ಆದರೆ ಗೃಹಿಣಿ ಸಂಗೀತಾ ಮೇಲೆ ಮೇಲ್ಛಾವಣಿ ಬಿದ್ದ ಕಾರಣ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ತದನಂತರ ಸ್ಥಳೀಯರು ಮಣ್ಣಲ್ಲಿ ಮುಚ್ಚಿಹೋಗಿದ್ದ ಸಂಗೀತಾ ಮೃತದೇಹವನ್ನು ಹೊರತೆಗೆದಿದ್ದಾರೆ. ಇದನ್ನೂ ಓದಿ: ಎಕ್ಸ್‌ಪ್ರೆಸ್ ವೇಯಲ್ಲಿ ಕಾರುಗಳ ನಡುವೆ ಅಪಘಾತ – ಇಬ್ಬರು ಸಾವು, ನಾಲ್ವರು ಗಂಭೀರ

    ಮೃತದೇಹವನ್ನು ಮರಣೋತ್ತರ ಪರೀಕ್ಷೆಗಾಗಿ ತಿಕೋಟ ತಾಲೂಕು ಆಸ್ಪತ್ರೆಗೆ ರವಾನಿಸಲಾಗಿದೆ. ತಿಕೋಟಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ. ಇದನ್ನೂ ಓದಿ: ಹಾಸನ| ನಿಲ್ಲಿಸಿದ್ದ ಕಾರಿನ ಡೋರ್‌ ತೆಗೆದು 6.30 ಲಕ್ಷ ಹಣ ಎಗರಿಸಿದ ಕಳ್ಳ

  • ಚಿತ್ರದುರ್ಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 7 ಮನೆಗಳ ಮೇಲ್ಛಾವಣಿ ಕುಸಿತ

    ಚಿತ್ರದುರ್ಗದಲ್ಲಿ ಬಿರುಗಾಳಿ ಸಹಿತ ಭಾರೀ ಮಳೆ – 7 ಮನೆಗಳ ಮೇಲ್ಛಾವಣಿ ಕುಸಿತ

    ಚಿತ್ರದುರ್ಗ: ಚಿತ್ರದುರ್ಗ (Chitradurga) ಜಿಲ್ಲೆಯ ಹಲವೆಡೆ ಗುರುವಾರ ಬಿರುಗಾಳಿ ಸಹಿತ ಭಾರೀ ಮಳೆ (Rain) ಸುರಿದಿದ್ದು, ಮಿಡ್ಲುಗಟ್ಟೆ ಪಿಂಜಾರಹಟ್ಟಿ ಗ್ರಾಮದಲ್ಲಿ 7 ಮನೆಗಳ ಮೇಲ್ಛಾವಣಿ ಕುಸಿದಿವೆ.

    ತಡರಾತ್ರಿ ಸುರಿದ ಗಾಳಿ ಸಹಿತ ಮಳೆಗೆ ಚಳ್ಳಕೆರೆ (Challakere) ತಾಲೂಕಿನ ಮಿಡ್ಲುಗಟ್ಟೆ ಪಿಂಜಾರಹಟ್ಟಿ ಗ್ರಾಮದಲ್ಲಿ 7 ಮನೆಗಳ ಮೇಲ್ಛಾವಣಿ (Roof) ಕುಸಿದು ಬಿದ್ದಿದೆ. ಗಾಳಿಯ ರಭಸಕ್ಕೆ ಮೇಲ್ಛಾವಣಿಯ ಶೀಟುಗಳು, ಹೆಂಚುಗಳು ಪುಡಿಪುಡಿಯಾಗಿ ಬಿದ್ದಿದೆ. ತಾಲೂಕಿನಾದ್ಯಂತ ಸುರಿದ ಧಾರಾಕಾರ ಮಳೆಗೆ ಗ್ರಾಮಸ್ಥರು ಕಂಗಾಲಾಗಿದ್ದಾರೆ. ಇದನ್ನೂ ಓದಿ: ಬಿಪೊರ್‌ಜೊಯ್‌ ಸೈಕ್ಲೋನ್‌ ಎಫೆಕ್ಟ್‌; ಕರ್ನಾಟಕ ಸೇರಿ 5 ರಾಜ್ಯಗಳಲ್ಲಿ ಭಾರೀ ಮಳೆ ಸಾಧ್ಯತೆ

    ಈ ಮನೆಗಳು ಗ್ರಾಮದ ರುಸೂಬಿ ಕಾಸಿಂಸಾಬ್, ರೇಷ್ಮ ಷರೀಫ್, ಬಿ.ದಾದು, ರುದ್ರಪ್ಪ, ಮಹಬೂಬ್ ಸಾಬ್, ಖಾಸಿಂಪೀರ್ ಎಂಬವರಿಗೆ ಸೇರಿದ್ದು, ಸೂಕ್ತ ಪರಿಹಾರ ಒದಗಿಸುವಂತೆ ಸರ್ಕಾರಕ್ಕೆ ಆಗ್ರಹಿಸಿದ್ದಾರೆ. ಇದನ್ನೂ ಓದಿ: ಸಿಹಿ ಸುದ್ದಿ – ಕೇರಳಕ್ಕೆ ಮುಂಗಾರು ಪ್ರವೇಶ

  • ಗಾಳಿಯ ಹೊಡೆತಕ್ಕೆ ಕಿತ್ತೇ ಹೋಯ್ತು ಟೋಲ್ ಗೇಟ್‌ನ ಮೇಲ್ಛಾವಣಿ

    ಗಾಳಿಯ ಹೊಡೆತಕ್ಕೆ ಕಿತ್ತೇ ಹೋಯ್ತು ಟೋಲ್ ಗೇಟ್‌ನ ಮೇಲ್ಛಾವಣಿ

    ಧಾರವಾಡ: ತಾಲೂಕಿನ ಕೆಲವು ಕಡೆಗಳಲ್ಲಿ ಭಾರೀ ಗಾಳಿಯ (Wind) ಕಾರಣ ರಾಜ್ಯ ಹೆದ್ದಾರಿಯಲ್ಲಿರುವ ಟೋಲ್ ಗೇಟ್‌ನ (Toll Gate) ಮೇಲ್ಛಾವಣಿ (Rooftop) ಕಿತ್ತು ಹೋಗಿರುವ ಘಟನೆ ಮರೇವಾಡ ರಸ್ತೆಯಲ್ಲಿ ಸಂಭವಿಸಿದೆ.

    ಸಂಜೆ ಹೊತ್ತಿಗೆ ಧಾರವಾಡ ತಾಲೂಕಿನ ಕೆಲ ಗ್ರಾಮಗಳಲ್ಲಿ ಭಾರೀ ಗಾಳಿ ಎದ್ದಿದೆ. ಈ ವೇಳೆ ಟೋಲ್ ಗೆಟ್‌ನ ತಗಡಿನ ಮೇಲ್ಛಾವಣಿ ಕಿತ್ತು ಹೋಗಿದೆ. ಕಬ್ಬಿಣದ ರಾಡ್ ಸಮೇತ ತಗಡುಗಳು ಹೊಲದಲ್ಲಿ ಹಾರಿ ಬಿದ್ದಿವೆ. ಗಾಳಿಯ ರಭಸಕ್ಕೆ ಟೋಲ್ ಗೇಟ್ ಹತ್ತಿರವೇ ಇದ್ದ ಕೆಲ ವಿದ್ಯುತ್ ಕಂಬಗಳು ಸಹ ಮುರಿದು ಬಿದ್ದಿವೆ. ಇದನ್ನೂ ಓದಿ: ಬೆಂಗಳೂರು ಮೆಟ್ರೋ ಲಿಖಿತ ಪರೀಕ್ಷೆ ಮುಂದೂಡಿಕೆ

    ತಗಡಿನ ಮೇಲ್ಛಾವಣಿ ಹಾರಿ ಹೋಗುವ ಸಂದರ್ಭದಲ್ಲಿ ಟೋಲ್ ಸಿಬ್ಬಂದಿ ಕೂಡ ಒಳಗಡೆಯೇ ಇದ್ದರು. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾವುದೇ ಅನಾಹುತಗಳು ಸಂಭವಿಸಿಲ್ಲ. ಇದನ್ನೂ ಓದಿ: ಎಂಜಿನಿಯರ್ ಮನೆಯಲ್ಲಿ ಜಿಂಕೆ ಕೊಂಬು ಸಮೇತ 4.75 ಕೋಟಿ ರೂ. ಆಸ್ತಿ ಪತ್ತೆ

  • ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮೇಲ್ಛಾವಣಿ ಕುಸಿತ – 8 ಮಂದಿ ದುರ್ಮರಣ

    ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮೇಲ್ಛಾವಣಿ ಕುಸಿತ – 8 ಮಂದಿ ದುರ್ಮರಣ

    ಲಕ್ನೋ: ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ (Potato Cold Storage) ಮೇಲ್ಛಾವಣಿ (Roof) ಕುಸಿದು ಬಿದ್ದ ಪರಿಣಾಮ 8 ಮಂದಿ ಸಾವನ್ನಪ್ಪಿದ ಘಟನೆ ಉತ್ತರ ಪ್ರದೇಶದ (Uttar Pradesh) ಸಂಭಾಲ್ ಚಂದೌಸಿ ಪ್ರದೇಶದಲ್ಲಿ ನಡೆದಿದೆ.

    ಆಲೂಗಡ್ಡೆ ಕೋಲ್ಡ್ ಸ್ಟೋರೇಜ್‍ನ ಮಾಲೀಕರನ್ನು ಅಂಕುರ್ ಅಗರ್ವಾಲ್ ಮತ್ತು ರೋಹಿತ್ ಅಗರ್ವಾಲ್ ಎಂದು ಗುರುತಿಸಲಾಗಿದ್ದು, ಘಟನೆಗೆ ಸಂಬಂಧಿಸಿ ಇಬ್ಬರ ವಿರುದ್ಧವೂ ಪ್ರಕರಣ ದಾಖಲಾಗಿದೆ. ಈ ಹಿಂದೆಯೇ ಕೋಲ್ಡ್ ಸ್ಟೋರೇಜ್‍ ಶಿಥಿಲಾವಸ್ಥೆಯಲ್ಲಿದೆ ಎಂದು ವರದಿಯಾಗಿತ್ತು. ಆದರೆ ಕಟ್ಟಡ ಕುಸಿತಕ್ಕೆ ನಿಜವಾದ ಕಾರಣ ಇನ್ನೂ ತಿಳಿದುಬಂದಿಲ್ಲ.

    ರಾಷ್ಟ್ರೀಯ ವಿಪತ್ತು ನಿರ್ವಹಣಾ ಪಡೆ (NDRF) ಮತ್ತು ರಾಜ್ಯ ವಿಪತ್ತು ನಿರ್ವಹಣಾ ಪಡೆ (SDRF) ತಂಡಗಳು ರಕ್ಷಣಾ ಕಾರ್ಯಾಚರಣೆ ನಡೆಸುತ್ತಿವೆ. ಈ ಬಗ್ಗೆ ಮೊರಾಬಾದ್ ಡಿಐಜಿ ಶಲಭ್ ಮಾಥುರ್ ಮಾತನಾಡಿ, ಘಟನೆಯಲ್ಲಿ 8 ಮಂದಿ ಸಾವನ್ನಪ್ಪಿದ್ದಾರೆ. 11 ಮಂದಿಯನ್ನು ರಕ್ಷಿಸಲಾಗಿದೆ. ಕಟ್ಟಡದಲ್ಲಿ ನೆಲಮಾಳಿಗೆಯಿದ್ದು, ಅಲ್ಲಿಯೂ ಯಾರಾದರೂ ಸಿಲುಕಿಕೊಂಡಿದ್ದಾರಾ ಎಂದು ಹುಡುಕುವ ಪ್ರಯತ್ನ ನಡೆಸುತ್ತಿದ್ದೇವೆ ಎಂದು ತಿಳಿಸಿದರು. ಇದನ್ನೂ ಓದಿ: ಮದುವೆಯಾಗಿ ಮೂರೇ ದಿನಕ್ಕೆ ಪರಾರಿ – ಇದು ಫೋಟೋಶೂಟ್ ಮದ್ವೆ ಎಂದ ಪತಿ

    ಅವಶೇಷಗಳಡಿ ಸಿಲುಕಿರುವ ಜನರನ್ನು ಹುಡುಕಲು ಅಧಿಕಾರಿಗಳು ಸ್ನಿಫರ್ ಡಾಗ್‍ಗಳನ್ನು ಬಳಸುತ್ತಿದ್ದಾರೆ ಎಂದು ಮಾಹಿತಿ ನೀಡಿದರು. ಘಟನೆಗೆ ಸಂಬಂಧಿಸಿ ಕೋಲ್ಡ್ ಸ್ಟೋರೇಜ್‍ನ ಮಾಲೀಕ ಹಾಗೂ ಇತರ ಇಬ್ಬರ ವಿರುದ್ಧ ಪ್ರಕರಣ ದಾಖಲಾಗಿದೆ. ಜೊತೆಗೆ ನಾಲ್ವರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ನಾಪತ್ತೆಯಾದ ಆರೋಪಿಗಳಿಗಾಗಿ ಹುಡುಕಾಟ ನಡೆಸುತ್ತಿದ್ದಾರೆ. ಇದನ್ನೂ ಓದಿ: ಬೇಸಿಗೆಯಲ್ಲಿ ಆಲಿಕಲ್ಲು ಮಳೆ – ಕಲಬುರಗಿಯಲ್ಲಿ ‘ಹಿಮಾಲಯದ ರಸ್ತೆ’!

  • ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಅವಾಂತರ – ಭಾರೀ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ

    ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಅವಾಂತರ – ಭಾರೀ ಬಿರುಗಾಳಿ, ಆಲಿಕಲ್ಲು ಸಹಿತ ಮಳೆ

    ಚಿಕ್ಕೋಡಿ: ಬೆಳಗಾವಿ ಜಿಲ್ಲೆಯಲ್ಲಿ ಅಕಾಲಿಕ ಮಳೆ ಅವಾಂತರ ಸೃಷ್ಟಿಸಿದೆ. ಭಾರೀ ಬಿರುಗಾಳಿ, ಆಲಿಕಲ್ಲು ಸಹಿತ ಭಾರೀ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ.

    ಚಿಕ್ಕೋಡಿ ತಾಲೂಕಿನ ವಿವಿಧೆಡೆ ಆಲೆಕಲ್ಲು ಸಹಿತ ಭಾರೀ ಮಳೆ ಸುರಿದಿದ್ದು, ರಾಯಭಾಗ ತಾಲೂಕಿನಲ್ಲಿ ಮಳೆ ಅವಾಂತರ ಸೃಷ್ಟಿಸಿದೆ. ರಾಯಭಾಗ ತಾಲೂಕಿನ ಅಳಗವಾಡಿ ಗ್ರಾಮದಲ್ಲಿ 4 ಮನೆಗಳ ಮೇಲ್ಛಾವಣಿ ಹಾರಿ ಹೋಗಿದ್ದು, ಮನೆಯ ಮೇಲ್ಛಾವಣಿಯ ಶೆಡ್ ಬಿದ್ದು 12 ವರ್ಷದ ವಿಠ್ಠಲ ಧರ್ಮಟ್ಟಿ ಎಂಬ ಬಾಲಕನ ತಲೆಗೆ ಪೆಟ್ಟು ಬಿದ್ದಿದೆ. ಇದನ್ನೂ ಓದಿ: ಸತತ 15ನೇ ದಿನ ಏರಿಕೆ – ಪೆಟ್ರೋಲ್, ಡೀಸೆಲ್ 80 ಪೈಸೆ ಏರಿಕೆ

    ರಾಯಭಾಗ ತಾಲೂಕಿನ ಗುಂಡವಾಡ ಗ್ರಾಮದಲ್ಲಿ ಆಯೋಜಿಸಿದ್ದ ಪಂಚ ಕಲ್ಯಾಣ ಮಹೋತ್ಸವ ಮೇಲೂ ಅಕಾಲಿಕ ಮಳೆ ಅವಾಂತರವನ್ನುಂಟು ಮಾಡಿದ್ದು ಭಾರೀ ಬಿರುಗಾಳಿಯಿಂದ ಪಂಚ ಕಲ್ಯಾಣ ಮಹೋತ್ಸವದಲ್ಲಿ ಅಳವಡಿಸಿದ್ದ ಮೇಲ್ಚಾಚಣಿಗಳು ಗಾಳಿಗೆ ಹಾರಿ ಹೋಗಿವೆ.

    ಬಿರುಗಾಳಿಗೆ ಹೆದರಿ ಜನ ಆತಂಕದಲ್ಲಿ ಓಡಿ ಹೋಗಿದ್ದು, ಪಂಚ ಕಲ್ಯಾಣ ಮಹೋತ್ಸವಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಹಾನಿಯುಂಟಾಗಿದೆ. ಇನ್ನೂ ಅಥಣಿ ತಾಲೂಕಿನ ಕೊಕಟನೂರು ಗ್ರಾಮದಲ್ಲಿ ಮಳೆಯ ಕಾರಣ ವಿದ್ಯುತ್ ಟ್ರಾನ್ಸ್​ ಫಾರ್ಮರ್ ಮೂಲಕ ವಿದ್ಯುತ್ ಹರಿದ ಪರಿಣಾಮ ಎರಡು ಕುರಿಗಳು ಸಾವನ್ನಪ್ಪಿವೆ. ಇದನ್ನೂ ಓದಿ: ಖಾದಿ ತೊರೆದು ಕಾವಿ ತೊಡಲಿರುವ ಬಿಎಸ್‍ವೈ ಆಪ್ತ ಪುಟ್ಟಸ್ವಾಮಿ

  • ಕಲ್ಲಿದ್ದಲು ಗಣಿಯ ಮೇಲ್ಛಾವಣಿ ಕುಸಿದು ನಾಲ್ವರ ಸಾವು

    ಕಲ್ಲಿದ್ದಲು ಗಣಿಯ ಮೇಲ್ಛಾವಣಿ ಕುಸಿದು ನಾಲ್ವರ ಸಾವು

    ಹೈದರಾಬಾದ್: ಸಿಂಗರೇನಿ ಕಲಿಯೇರೀಸ್ ಕಂಪನಿ ಲಿಮಿಟೆಡ್ (ಎಸ್‍ಸಿಸಿಎಲ್)ನ ಕಲ್ಲಿದ್ದಲು ಗಣಿ ಯೋಜನೆಯ ಮೇಲ್ಛಾವಣಿ ಕುಸಿದು ನಾಲ್ವರು ಕಾರ್ಮಿಕರು ಮೃತಪಟ್ಟಿರುವ ಘಟನೆ ತೆಲಂಗಾಣದ ಮಂಚೇರಿಯಲ್ ಜಿಲ್ಲೆಯಲ್ಲಿ ನಡೆದಿದೆ.

    Coal Mine

    ಶ್ರೀರಾಂಪುರ ಪ್ರದೇಶದಲ್ಲಿ ಮೇಲ್ಛಾವಣಿ ಹೊದಿಸುತ್ತಿರುವ ವೇಳೆ ಈ ಘಟನೆ ಸಂಭವಿಸಿದೆ. ಮೇಲ್ಛಾವಣಿಯ ಒಂದು ಭಾಗ 32 ಮತ್ತು 60 ವರ್ಷ ವಯಸ್ಸಿನ ನಾಲ್ವರು ಕಾರ್ಮಿಕರ ಮೇಲೆ ಬಿದ್ದಿದ್ದು, ಅವರು ಅವಶೇಷಗಳಡಿಯಲ್ಲಿ ಸಿಲುಕಿ ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಕಾನ್ಪುರದಲ್ಲಿ ಝಿಕಾ ವೈರಸ್ ಪತ್ತೆ – ಮತ್ತೆ 3 ಪ್ರಕರಣ, ಸೋಂಕಿತರ ಸಂಖ್ಯೆ 91ಕ್ಕೆ ಏರಿಕೆ

    ಈ ಕುರಿತಂತೆ ಎಸ್‍ಸಿಸಿಎಲ್‍ನ ಅಧ್ಯಕ್ಷ ಮತ್ತು ವ್ಯವಸ್ಥಾಪಕ ನಿರ್ದೇಶಕ ಎನ್.ಶ್ರೀಧರ್ ಅವರು, ಮೃತರ ಕುಟುಂಬಸ್ಥರಿಗೆ ಸಂತಾಪ ಸೂಚಿಸಿದ್ದು, ಘಟನೆಯ ಕುರಿತು ತನಿಖೆ ನಡೆಸಿ ವರದಿ ಸಲ್ಲಿಸುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ತಿಳಿಸಿದ್ದಾರೆ. ಇಂತಹ ಘಟನೆಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಅಪ್ಪು ಪ್ರೇರಣೆ – ಸಪ್ತಪದಿಗೂ ಮುನ್ನವೇ ನವ ದಂಪತಿ ನೇತ್ರದಾನದ ಶಪಥ!

    ಈ ಸಂಬಂಧ ಉನ್ನತ ಅಧಿಕಾರಿಗಳು ಸಂತ್ರಸ್ತರ ಕುಟುಂಬದ ಒಬ್ಬ ಅರ್ಹ ಸದಸ್ಯರಿಗೆ ಉದ್ಯೋಗ ನೀಡುವುದಾಗಿ ತಿಳಿಸಿದ್ದಾರೆ. ಜೊತೆಗೆ 70 ಲಕ್ಷದಿಂದ 1 ಕೋಟಿ ನಡುವೆ ಪರಿಹಾರ ಘೋಷಿಸಿದ್ದಾರೆ.

  • ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

    ಮನೆ ಮೇಲ್ಛಾವಣಿ, ಗೋಡೆ ಕುಸಿತ- ಮನೆಯಲ್ಲಿದ್ದವರು ಪ್ರಾಣಾಪಾಯದಿಂದ ಪಾರು

    ಚಿತ್ರದುರ್ಗ: ಕೆಲ ದಿನಗಳಿಂದ ತುಂತುರು ಮಳೆಯಿಂದಾಗಿ, ನೆನೆದಿದ್ದ ಮನೆಯ ಮೇಲ್ಛಾವಣಿ ಹಾಗೂ ಗೋಡೆ ಕುಸಿತವಾಗಿರುವ ಘಟನೆ ಜಿಲ್ಲೆಯ ಹೊಳಲ್ಕೆರೆ ಪಟ್ಟಣದಲ್ಲಿ ನಡೆದಿದೆ.

    ಹೊಳಲ್ಕೆರೆಯ ಟಿಪ್ಪು ನಗರದ 1ನೇ ಕ್ರಾಸ್ ನಲ್ಲಿರುವ ಮುಮ್ತಾಜ್ ಅವರ ಮನೆ ದಿಡೀರ್ ಕುಸಿದಿದ್ದು, ಅದೃಷ್ಟವಶಾತ್ ಮನೆಯಲ್ಲಿದ್ದ ಮಹಿಳೆ ಮಮ್ತಾಜ್ ಹಾಗೂ ಅವರ ಮಕ್ಕಳು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದನ್ನೂ ಓದಿ: ಕೋರಮಂಗಲದಲ್ಲಿ ಭೀಕರ ಅಪಘಾತ – ಹೊಸೂರು ಶಾಸಕನ ಪುತ್ರ ಸಾವು

    ಮನೆ ಕಳೆದುಕೊಂಡು ಕಂಗಾಲಾಗಿರುವ ಕುಟುಂಬ ತೀವ್ರ ಸಂಕಷ್ಟಕ್ಕೆ ಸಿಲುಕಿದೆ. ಸರ್ಕಾರ ನಮಗೆ ಶೀಘ್ರ ಪರಿಹಾರ, ವಸತಿ ಸೌಲಭ್ಯ ಕಲ್ಪಿಸಬೇಕು ಎಂದು ಮುಮ್ತಾಜ್ ಆಗ್ರಹಿಸಿದ್ದಾರೆ. ಹೊಳಲ್ಕೆರೆ ನಗರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

  • ಹಾವೇರಿಯಲ್ಲಿ ಧಾರಾಕಾರ ಮಳೆ- 30ಕ್ಕೂ ಹೆಚ್ಚು ಗುಡಿಸಲು, ಶೆಡ್‍ಗಳಿಗೆ ಹಾನಿ

    ಹಾವೇರಿಯಲ್ಲಿ ಧಾರಾಕಾರ ಮಳೆ- 30ಕ್ಕೂ ಹೆಚ್ಚು ಗುಡಿಸಲು, ಶೆಡ್‍ಗಳಿಗೆ ಹಾನಿ

    ಹಾವೇರಿ: ಜಿಲ್ಲೆಯಲ್ಲಿ ಹಲವೆಡೆ ಬಿರುಗಾಳಿ ಸಹಿತ ಧಾರಾಕಾರ ಮಳೆಯಾಗಿದ್ದು, ರಟ್ಟೀಹಳ್ಳಿ ತಾಲೂಕಿನ ಖಂಡೇಬಾಗೂರು ಗ್ರಾಮದಲ್ಲಿ ಬಿರುಗಾಳಿ ಮಳೆಗೆ 30ಕ್ಕೂ ಅಧಿಕ ಗುಡಿಸಲು ಹಾಗೂ ತಗಡಿನ ಶೆಡ್‍ನ ಮೇಲ್ಛಾವಣಿಗಳು ಹಾರಿ ಹೋಗಿವೆ.

    ಹಿರೇಕೆರೂರು ಪಟ್ಟಣ ಮತ್ತು ಭೋಗಾವಿ ಗ್ರಾಮದಲ್ಲೂ ಅರ್ಧ ಗಂಟೆಗಳ ಕಾಲ ಧಾರಾಕಾರ ಮಳೆಯಾಗಿದೆ. 30ಕ್ಕೂ ಅಧಿಕ ಗುಡಿಸಲು ಹಾಗೂ ಶೆಡ್ಡಿನ ಮೇಲ್ಛಾವಣಿಗಳು ಹಾರಿ ಹೋಗಿದ್ದು ಜನಜೀವನ ಅಸ್ತವ್ಯಸ್ತಗೊಂಡಿದೆ.

    ಮೇಲ್ಛಾವಣಿ ಹಾರಿ ಹೋಗಿದ್ದರಿಂದ ಉಳಿದುಕೊಳ್ಳಲು ಸೂರಿಲ್ಲದೆ ಕುಟುಂಬದ ಸದಸ್ಯರು ದಿಕ್ಕು ತೋಚದಂತೆ ಕುಳಿತಿದ್ದಾರೆ. ತಾಲೂಕು ಹಾಗೂ ಜಿಲ್ಲಾಡಳಿತ 30 ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಿ, ಶಾಶ್ವತ ಪರಿಹಾರ ನೀಡಬೇಕು ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

  • ಮೇಲ್ಛಾವಣಿ ಕುಸಿತ – ವ್ಯಕ್ತಿ ಬಲಿ, ಮೂವರಿಗೆ ಗಾಯ

    ಮೇಲ್ಛಾವಣಿ ಕುಸಿತ – ವ್ಯಕ್ತಿ ಬಲಿ, ಮೂವರಿಗೆ ಗಾಯ

    ನವದೆಹಲಿ: ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದು ವ್ಯಕ್ತಿ ಮೃತಪಟ್ಟಿದ್ದು, ಮೂವರು ಗಾಯಗೊಂಡಿರುವ ಘಟನೆ ದೇಹಲಿಯ ಪೂರ್ವ ಭಾಗ ಸರಿಟಾ ವಿಹಾರ್ ಪ್ರದೇಶದಲ್ಲಿ ನಡೆದಿದೆ.

    ಮೂರು ಅಂತಸ್ತಿನ ಮನೆ ಕಟ್ಟಡದ ಮೇಲಿನ ಮೂರನೇ ಮಹಡಿಯ ಟೆರೇಸ್‍ನಲ್ಲಿ ವೆಲ್ಡಿಂಗ್ ಕೆಲಸ ಮಾಡುತ್ತಿದ್ದ ವೇಳೆ ಈ ಮೇಲ್ಛಾಣಿ ಕುಸಿದಿದೆ. ಘಟನೆಯಲ್ಲಿ ಧರ್ಮ್ ಭೀರ್ ಎಂಬಾತ ಸಿಲುಕಿಕೊಂಡು ಸ್ಥಳದಲ್ಲಿಯೇ ಮೃತಪಟ್ಟಿದ್ದು, ಮೂವರು ತೀವ್ರವಾಗಿ ಗಾಯಗೊಂಡಿದ್ದಾರೆ. ಅಲ್ಲದೆ ಘಟನಾಸ್ಥಳಕ್ಕೆ ನಾಲ್ಕು ಅಗ್ನಿಶಾಮಕ ದಳವನ್ನು ಕರೆಸಲಾಗಿತ್ತು ಎಂದು ಅಗ್ನಿ ಶಾಮಕ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.

    ಘಟನೆ ಕುರಿತಂತೆ ತನಿಖೆ ನಡೆಸಿದಾಗ ಮಧ್ಯಾಹ್ನ 12.05ಕ್ಕೆ ಮನೆಯ ಮೇಲ್ಛಾವಣಿಯ ಒಂದು ಭಾಗ ಕುಸಿದಿದೆ. ಕಟ್ಟಡದ ಟೇರಸ್‍ನಲ್ಲಿ ವೆಲ್ಡಿಂಗ್ ಕೆಲಸಗಳಿಗೆ ಸಂಬಂಧಿಸಿದ ವಸ್ತುಗಳು ಬಿದ್ದಿದ್ದವು ಎಂದು ತಿಳಿದು ಬಂದಿದೆ.

    ಮದನ್ಪುರ್ ಖಾದರ್ ನಿವಾಸಿಯಾದ ಧರ್ಮ್‍ಬೀರ್ ಮೇಲ್ಛಾಣಿ ಕುಸಿದ ಸ್ಥಳದಲ್ಲಿಯೇ ಸಿಲುಕಿಕೊಂಡು ಪ್ರಾಣಬಿಟ್ಟಿದ್ದಾರೆ ಮತ್ತು ಹರೀಶ್ ರೊಟೆಲ್ಲಾ(ಮಾಲೀಕ), ಖಲೀಲ್ ಮತ್ತು ಶಿವಂ ಅವರನ್ನು ಹತ್ತಿರದ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ಪೊಲೀಸ್ ಅಧಿಕಾರಿ ಆರ್.ಪಿ ಮೀನಾ ಹೇಳಿದರು.

  • ಸ್ಮಶಾನದಲ್ಲಿ ಮೇಲ್ಛಾವಣಿ ಕುಸಿದು 23 ಮಂದಿ ದಾರುಣ ಸಾವು

    ಸ್ಮಶಾನದಲ್ಲಿ ಮೇಲ್ಛಾವಣಿ ಕುಸಿದು 23 ಮಂದಿ ದಾರುಣ ಸಾವು

    – 38 ಮಂದಿ ಆಸ್ಪತ್ರೆಗೆ ದಾಖಲು
    – ಮೇಲ್ಛಾವಣಿ ಕೆಳಗೆ ಆಶ್ರಯ ಪಡೆದಿದ್ದಾಗ ಘಟನೆ

    ಲಕ್ನೋ: ಸ್ಮಶಾನದ ಮೇಲ್ಛಾವಣಿ ಕುಸಿದು 23 ಮಂದಿ ಮೃತಪಟ್ಟ ಘಟನೆ ಉತ್ತರ ಪ್ರದೇಶದ ಮುರಾದ್ನನಗರದಲ್ಲಿ ನಡೆದಿದೆ. ಘಟನೆಯಲ್ಲಿ ಗಾಯಗೊಂಡಿರುವ ಒಟ್ಟು 38 ಜನರನ್ನು ಜನರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ.

    ಈ ವಿಚಾರವಾಗಿ ತನಿಖೆ ಆರಂಭಿಸಲಾಗಿದ್ದು, ಘಟನೆಯಲ್ಲಿ 17 ಜನ ಸ್ಥಳದಲ್ಲಿಯೇ ಮೃತಪಟ್ಟಿದ್ದು, 38 ಜನರನ್ನು ರಕ್ಷಿಸಲಾಗಿದೆ. ಆದಷ್ಟು ಬೇಗ ತಪ್ಪಿತಸ್ಥರನ್ನು ಕಂಡು ಹಿಡಿದು ಅವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಾಗಿ ಮೀರತ್ ವಿಭಾಗೀಯ ಆಯುಕ್ತ ಅನಿತಾ ಸಿ ಮೆಶ್ರಮ್ ತಿಳಿಸಿದರು.

    ಘಟನೆ ಕುರಿತಂತೆ ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್, ಪರಿಹಾರ ಕಾರ್ಯಾಚರಣೆ ನಡೆಯುತ್ತಿದೆ ಮತ್ತು ಘಟನೆಯ ವರದಿಯನ್ನು ಸಲ್ಲಿಸುವಂತೆ ನಾನು ಜಿಲ್ಲಾ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ. ಘಟನೆಯಿಂದ ಹಾನಿಗೊಳಗಾಗಿರುವವರಿಗೆ ಸಾಧ್ಯವಾಗುವ ಎಲ್ಲ ಸಹಾಯವನ್ನು ನೀಡಲಾಗುವುದು ಎಂದು ಹೇಳಿದರು.

    ಸ್ಮಶಾನದಲ್ಲಿ ನಡೆದ ದುರಂತರದ ವಿಚಾರವಾಗಿ ಪ್ರಧಾನಿ ನರೇಂದ್ರ ಮೋದಿ ಟ್ವೀಟ್ ಮಾಡಿದ್ದಾರೆ. ಉತ್ತರ ಪ್ರದೇಶದ ಮುರಾದ್‍ನಗರದಲ್ಲಿ ನಡೆದ ದುರಾದೃಷ್ಟಕರ ಅವಘಡದ ಸುದ್ದಿ ಬಹಳ ದುಃಖವನ್ನುಂಟು ಮಾಡಿದೆ. ರಾಜ್ಯ ಸರ್ಕಾರ ಪರಿಹಾರ ಮತ್ತು ರಕ್ಷಣಾ ಕಾರ್ಯಗಳಲ್ಲಿ ನಿರತವಾಗಿದೆ. ಈ ಅಪಘಾತದಲ್ಲಿ ಪ್ರಾಣ ಕಳೆದುಕೊಂಡವರ ಸಂಬಂಧಿಕರಿಗೆ ಸಂತಾಪ ವ್ಯಕ್ತಪಡಿಸುತ್ತೇನೆ, ಹಾಗೆಯೇ ಗಾಯಾಳುಗಳು ಶೀಘ್ರವಾಗಿ ಗುಣಮುಖರಾಗಲಿ ಎಂದು ಹಾರೈಸುತ್ತೇನೆ ಎಂದು ತಿಳಿಸಿದರು.

    ಪೊಲೀಸರು ಮತ್ತು ಎನ್‍ಡಿಆರ್‍ಎಫ್ ತಂಡ ಘಟನಾ ಸ್ಥಳವನ್ನು ಪರಿಶೀಲಿಸುತ್ತಿದ್ದು, ಕಳೆದ ಎರಡು ದಿನಗಳಿಂದ ದೆಹಲಿಯಲ್ಲಿ ಮಳೆ ಸುರಿಯುತ್ತಿರುವ ಕಾರಣ ಕೆಲವರು ಮೇಲ್ಛಾವಣಿ ಕೆಳಗೆ ಆಶ್ರಯ ಪಡೆದಿದ್ದರು. ಈ ವೇಳೆ ದುರಂತ ಸಂಭವಿಸಿದೆ.