Tag: ಮೇಮ್

  • 25 ವರ್ಷದ ಹಿಂದೆಯೇ ಐಶ್ವರ್ಯಾ ರೈಗೆ ಆರ್‌ಟಿ‌ ಪಿಸಿಆರ್ ಟೆಸ್ಟ್

    25 ವರ್ಷದ ಹಿಂದೆಯೇ ಐಶ್ವರ್ಯಾ ರೈಗೆ ಆರ್‌ಟಿ‌ ಪಿಸಿಆರ್ ಟೆಸ್ಟ್

    ಮುಂಬೈ: ಕೋವಿಡ್ ಬರುವುದಕ್ಕಿಂತ ಮುಂಚೆಯೇ ಬಾಲಿವುಡ್‍ನ ಖ್ಯಾತ ನಟಿ ಐಶ್ವರ್ಯಾ ರೈ ಆರ್‍ಟಿಪಿಸಿಆರ್ ಸ್ವ್ಯಾಬ್ ಟೆಸ್ಟ್ ಮಾಡಿಸಿಕೊಂಡಿದ್ದರಂತೆ. ಹಾಗಂತ ಹೇಳಿದ್ದು ಬೇರೆ ಯಾರೂ ಅಲ್ಲ, ಬಾಲಿವುಡ್‍ನ ಖ್ಯಾತ ನಟ ಬಾಬಿ ಡಿಯೋಲ್. ಹಾಗಂತ ಸ್ವತಃ ಅವರೇ ವಿಡಿಯೋವೊಂದನ್ನು ಮಾಡಿ, ಸೋಷಿಯಲ್ ಮೀಡಿಯಾದಲ್ಲಿ ಹಾಕಿದ್ದಾರೆ.

    ಕೋವಿಡ್ ಬರುವುದಕ್ಕಿಂತ 25 ವರ್ಷಗಳ ಮುಂಚೆಯೇ ಇದು ಹೇಗೆ ಸಾಧ್ಯ ಎಂದು ಐಶ್ಶು ಅಭಿಮಾನಿಗಳು ತಲೆಕೆಡಿಸಿಕೊಂಡು ಕೂತಿದ್ದಾರೆ. ಬಾಬಿ ಡಿಯೋಲ್ ಸೋಷಿಯಲ್ ಮೀಡಿಯಾದಲ್ಲಿ ಸದಾ ಸಕ್ರೀಯರಾಗಿರುತ್ತಾರೆ. ಅದರಲ್ಲೂ ಮೇಮ್‍ಗಳ ಕುರಿತು ಅವರಿಗೆ ಸಖತ್ ಕ್ರೇಜ್ ಕೂಡ ಇದೆ. ಅನೇಕ ಮೇಮ್‍ಗಳಿಗೆ ಅವರು ಪ್ರತಿಕ್ರಿಯೆ ಕೂಡ ನೀಡಿದ್ದಾರೆ. ಇತ್ತೀಚೆಗಷ್ಟೇ ವೈರಲ್ ಆದ ಆರ್‍ಟಿ ಪಿಸಿಆರ್ ಸ್ವ್ಯಾಬ್ ಮೇಮ್‍ಗೆ ಪ್ರತಿಕ್ರಿಯಿಸಿರುವ ಬಾಬಿ, “ನನ್ನ ವೇಗ ಕಾಲಕ್ಕಿಂತಲೂ ಸೂಪರ್ ಫಾಸ್ಟ್. ಹಲವು ವಿಷಯಗಳಿಗೆ ನಾನು ಪೇಟೆಂಟ್ ಪಡೆಯಬೇಕಿದೆ. ಈ ಆರ್‍ಟಿಪಿಸಿಆರ್ ಕುರಿತು ನಾನು ನೆನಪಿಸಲೇಬೇಕು ಎಂದಿದ್ದಾರೆ. ಇದನ್ನೂ ಓದಿ : ಮಾರ್ಚ್ 27ಕ್ಕೆ ಕೆಜಿಎಫ್ 2 ಟ್ರೈಲರ್ ರಿಲೀಸ್

    ಐಶ್ವರ್ಯಾ ರೈ ಅವರು 25 ವರ್ಷಗಳ ಹಿಂದೆಯೇ ಆರ್‌ಟಿ‌ ಪಿಸಿಆರ್ ಸ್ವ್ಯಾಬ್ ಟೆಸ್ಟ್‌ಗೆ ಒಳಗಾಗಿದ್ದರು. ಇದು ಸುಳ್ಳು ಅನಿಸಿದರೆ ಔರ್ ಪ್ಯಾರ್ ಹೋಗಯಾ ಸಿನಿಮಾ ನೋಡಿ. 1997ರಲ್ಲಿ ತೆರೆಕಂಡ ಈ ಸಿನಿಮಾದ ಒಂದು ದೃಶ್ಯದಲ್ಲಿ ನಾನೇ ಐಶ್ವರ್ಯಾ ರೈ ಅವರಿಗೆ ಆರ್‌ಟಿಪಿಸಿಆರ್ ಟೆಸ್ಟ್ ಮಾಡಿದ್ದೇನೆ ಎಂದು ಕಾಲೆಳೆದಿದ್ದಾರೆ. ಜತೆಗೆ ಐಶ್ವರ್ಯಾ ರೈ ಅವರಿಗೆ ಈ ಕುರಿತು ಕ್ಷಮೆಯನ್ನೂ ಕೇಳಿದ್ದಾರೆ. ಇದನ್ನೂ ಓದಿ : ಜನಾರ್ದನ ರೆಡ್ಡಿ ಪುತ್ರನ ಸಿನಿಮಾದಲ್ಲಿ ಇಬ್ಬರು ನಾಯಕಿಯರು?

    ಬಾಬಿ ಡಿಯೋಲ್ ಮಾಡಿರುವ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಈಗಾಗಲೇ 5000 ಕ್ಕಿಂತ ಹೆಚ್ಚು ವಿವ್ಯೂ ಪಡೆದುಕೊಂಡಿದೆ. ಬಾಬಿ ಅವರ ಮುಂಬರುವ ಸಂದೀಪ್ ರೆಡ್ಡಿ ವಂಗಾ ನಿರ್ದೇಶನದ ‘ಅನಿಮಲ್’ ಚಿತ್ರದಲ್ಲಿ ನಟಿಸಲಿದ್ದಾರೆ. ಈ ಚಿತ್ರದ ತಾರಾಗಣದಲ್ಲಿ ರಣಬೀರ್ ಕಪೂರ್, ಅನಿಲ್ ಕಪೂರ್ ಮತ್ತು ಪರಿಣಿತಿ ಚೋಪ್ರಾ ಮುಂತಾದ ಕಲಾವಿದರು ಇದ್ದಾರೆ.