Tag: ಮೇಡ್ ಇನ್ ಚೈನಾ

  • ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

    ವಿಶ್ವಮಟ್ಟದಲ್ಲಿ ಮುಜುಗರ – ಮುಳುಗಿತು Made In China ಪರಮಾಣು ಚಾಲಿತ ಜಲಾಂತರ್ಗಾಮಿ ನೌಕೆ

    ವಾಷಿಂಗ್ಟನ್‌: ನಿರ್ಮಾಣ ಹಂತದಲ್ಲಿದ್ದ ಚೀನಾದ (Made In China) ಪರಮಾಣು-ಚಾಲಿತ ಜಲಾಂತರ್ಗಾಮಿ ನೌಕೆ (Nuclear Submarine) ನೀರಿನಲ್ಲಿ ಮುಳುಗಡೆಯಾಗಿದೆ ಎಂದು ಅಮೆರಿಕದ ಮಾಧ್ಯಮ (US Media) ವರದಿ ತಿಳಿಸಿದೆ.

    ಝೌ-ಕ್ಲಾಸ್‌ಗೆ ಸೇರಿದ ಜಲಾಂತರ್ಗಾಮಿ ನೌಕೆ ಈ ವರ್ಷದ ಮೇ ಮತ್ತು ಜೂನ್ ನಡುವೆ ಮುಳುಗಿದೆ. ಈ ನೌಕೆಯ ಉಪಗ್ರಹ ಚಿತ್ರ ಪ್ರಕಟವಾಗುವ ಮೂಲಕ ವಿಶ್ವಮಟ್ಟದಲ್ಲಿ ಚೀನಾಗೆ ದೊಡ್ಡ ಮುಜುಗರವಾಗಿದೆ.

    ಕ್ರೇನ್‌ ಮತ್ತು ರಕ್ಷಣಾ ಸಾಧನಗಳನ್ನು ಬಳಸಿ ಈ ನೌಕೆಯನ್ನು ವುಚಾಂಗ್ ನೌಕಾ ನೆಲೆಯಲ್ಲಿ ಈಗ ದುರಸ್ತಿ ಮಾಡಲಾಗುತ್ತಿದೆ. ಜೂನ್ ವೇಳೆ ಜಲಾಂತರ್ಗಾಮಿ ಸಂಪೂರ್ಣವಾಗಿ ನೀರಿನ ಅಡಿಯಲ್ಲಿದ್ದ ಬಗ್ಗೆ ಉಪಗ್ರಹ ಚಿತ್ರ ತೋರಿಸಿದೆ. ಇದನ್ನೂ ಓದಿ: Hangor Submarines: ಪಾಕ್‌ಗೆ ಸುಧಾರಿತ ಜಲಾಂತರ್ಗಾಮಿ ನೌಕೆ ನೀಡಲು ಚೀನಾ ಗ್ರೀನ್‌ ಸಿಗ್ನಲ್‌!

    2022ರ ವೇಳೆಗೆ ಚೀನಾ ನೌಕಾಪಡೆಯು ಆರು ಪರಮಾಣು-ಚಾಲಿತ ಬ್ಯಾಲಿಸ್ಟಿಕ್ ಕ್ಷಿಪಣಿ ಜಲಾಂತರ್ಗಾಮಿ ನೌಕೆಗಳು, ಆರು ಪರಮಾಣು-ಚಾಲಿತ ದಾಳಿ ಮಾಡಬಲ್ಲ ಜಲಾಂತರ್ಗಾಮಿ ನೌಕೆಗಳು ಮತ್ತು 48 ಡೀಸೆಲ್-ಚಾಲಿತ ಜಲಾಂತರ್ಗಾಮಿ ನೌಕೆಗಳನ್ನು ಒಳಗೊಂಡಿತ್ತು. ಇದನ್ನೂ ಓದಿ: ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ ಖಾಯಂ ಸದಸ್ಯರಾಗಿ ಭಾರತವನ್ನು ಸೇರಿಸಿ: ಫ್ರಾನ್ಸ್ ಅಧ್ಯಕ್ಷ ಒತ್ತಾಯ

    ಅಮೆರಿಕ ಮಿಲಿಟರಿ ಅಂದಾಜಿಸಿದ ಪ್ರಕಾರ ಚೀನಾದ ನೌಕಾಪಡೆಯು 2025 ರ ವೇಳೆಗೆ 65 ಜಲಾಂತರ್ಗಾಮಿ ನೌಕೆ ಹೊಂದಿರಲಿದ್ದರೆ 2035 ರ ವೇಳೆಗೆ ಈ ಸಂಖ್ಯೆ 80ಕ್ಕೆ ಏರಿಕೆಯಾಗುವ ಸಾಧ್ಯತೆಯಿದೆ.

    ಜಲಾಂತರ್ಗಾಮಿ ನೌಕೆ ಮುಳುಗಿರುವುದನ್ನು ಚೀನಾ ಸರ್ಕಾರ ಇನ್ನೂ ಅಧಿಕೃತವಾಗಿ ಒಪ್ಪಿಕೊಂಡಿಲ್ಲ. ವಾಷಿಂಗ್ಟನ್‌ನಲ್ಲಿರುವ ಚೀನೀ ರಾಯಭಾರ ಕಚೇರಿಯ ವಕ್ತಾರರು, ನೀವು ಹೇಳಿದ ವಿಷಯದ ಬಗ್ಗೆ ನಮಗೆ ಗೊತ್ತಿಲ್ಲ ಮತ್ತು ಪ್ರಸ್ತುತ ಯಾವುದೇ ಮಾಹಿತಿ ಇಲ್ಲ ಎಂದಿದ್ದಾರೆ.

    ಮುಳುಗಡೆಯಾಗುವ ವೇಳೆ ಜಲಾಂತರ್ಗಾಮಿ ನೌಕೆ ಪರಮಾಣು ಇಂಧನ ಚಾಲನೆಯಲ್ಲಿತ್ತಾ ಅಥವಾ ಅದರ ರಿಯಾಕ್ಟರ್ ಸಕ್ರಿಯವಾಗಿತ್ತಾ ಎಂಬ ವಿಚಾರ ಇನ್ನೂ ಅಸ್ಪಷ್ಟವಾಗಿ ಉಳಿದಿದೆ. ಅಮೆರಿಕ ಅಧಿಕಾರಿಗಳು ಯಾವುದೇ ವಿಕಿರಣ ಸೋರಿಕೆಗಳು ವರದಿಯಾಗಿಲ್ಲ ಎಂದು ದೃಢಪಡಿಸಿದ್ದರೂ ಸಂಭಾವ್ಯ ಪರಿಸರ ಹಾನಿಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

    ವಿಶ್ವದ ಸೂಪರ್‌ ಪವರ್‌ ದೇಶವಾಗುವ ನಿಟ್ಟಿನಲ್ಲಿ ಚೀನಾ ಎರಡು ದಶಕಗಳಲ್ಲಿ ರಕ್ಷಣಾ ವಲಯದಲ್ಲಿ (Defence sector) ಹೂಡಿಕೆ ಮಾಡಿದೆ. ಅದರಲ್ಲೂ ದಕ್ಷಿಣ ಚೀನಾ ಸಮುದ್ರದಲ್ಲಿ ಪ್ರಭಾವ ಹೆಚ್ಚಿಸಲು ನೌಕಾ ಸಾಮರ್ಥ್ಯಗಳ ಮೇಲೆ ಭಾರೀ ಹೂಡಿಕೆ ಮಾಡುತ್ತಿದೆ.

    ರಕ್ಷಣಾ ಉತ್ಪಾದನೆಗಳನ್ನು ವಿದೇಶಗಳಿಗೆ ರಫ್ತು ಮಾಡಲು ಮುಂದಾಗುತ್ತಿದ್ದಾಗ ಈಗ ಮೇಡ್‌ ಇನ್‌ ಚೈನಾ ಜಲಾಂತರ್ಗಾಮಿ ನೌಕೆ ಮುಳುಗಿರುವುದು ಚೀನಾಗೆ ದೊಡ್ಡ ಹೊಡೆತ ನೀಡಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.

     

  • ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಮೇಡ್ ಇನ್ ಚೈನಾ ಅಂತಿದ್ದಾರೆ ನಾಗಭೂಷಣ್

    ಕೊರೋನಾ ವೈರಸ್ ಮಾಡಿದ ಆವಾಂತರ ನೂರಾರು. ಸಾವಿರಾರು ಜನ ಪ್ರಾಣ ಕಳೆದುಕೊಂಡರೆ, ಸಾಕಷ್ಟು ಜನರ ಬದುಕನ್ನೇ ಈ ಕೋವಿಡ್ ಕಸಿದುಕೊಂಡಿತು. ಕೊರೋನಾ ವೈರಸ್ ಕಾಣಿಸಿಕೊಳ್ಳುತ್ತಿದ್ದಂತೆಯೇ ಇಡೀ ಜಗತ್ತೇ ತಲ್ಲಣಗೊಂಡಿತು. ಒಂದು ರೀತಿಯಲ್ಲೇ ಜಗತ್ತಿಗೇ ಬೀಗ ಹಾಕಿದ ರೀತಿಯಲ್ಲಿ ಲಾಕ್ ಡೌನ್ ಘೋಷಣೆಯಾಯಿತು. ಈ ಸಂದರ್ಭದಲ್ಲಿ ಹುಟ್ಟಿದ ಕಥೆಯನ್ನೇ ಕನ್ನಡದಲ್ಲಿ ಸಿನಿಮಾ ಮಾಡಿದ್ದಾರೆ. ಈ ಚಿತ್ರಕ್ಕೆ ‘ಮೇಡ್ ಇನ್ ಚೈನಾ’ ಎಂದು ಹೆಸರಿಟ್ಟಿದ್ದಾರೆ. ಇದನ್ನೂ ಓದಿ: ರಣವೀರ್ ಹೊಸ ಸ್ಟೈಲ್‍ಗೆ ಆಲಿಯಾ ಬೌಲ್ಡ್

    ಕನ್ನಡದ ಮೊದಲ ವರ್ಚುವಲ್ ಸಿನಿಮಾ ಇದಾಗಿದ್ದು, ಲಾಕ್ ಡೌನ್ ಸಂದರ್ಭದಲ್ಲಿ ಪತಿಯು ವಿದೇಶದಲ್ಲಿ ಲಾಕ್ ಆಗುತ್ತಾನೆ. ಹೆಂಡತಿ ಭಾರತದಲ್ಲಿರುತ್ತಾಳೆ. ಇವರ ನಡುವೆ ನಡೆಯುವ ಕಥೆಯೇ ‘ಮೇಡ್ ಇನ್ ಚೈನಾ’. ಇಕ್ಕಟ್ ಸಿನಿಮಾದ ಮೂಲಕ ಪ್ರೇಕ್ಷಕರಿಗೆ ಸಖತ್ ಮನರಂಜನೆ ನೀಡಿರುವ ನಾಗಭೂಷಣ್ ಈ ಸಿನಿಮಾದ ನಾಯಕ. ಇದನ್ನೂ ಓದಿ : ಬೆಂಗಳೂರು ಅಂತರಾಷ್ಟ್ರೀಯ ಫಿಲ್ಮಂ ಫೆಸ್ಟಿವಲ್‍ನಲ್ಲಿ ಗಮನ ಸೆಳೆಯಲಿದೆ ಸೈಕಲಾಜಿಕಲ್ ಥ್ರಿಲ್ಲರ್ ‘ರುಗ್ನ’

    “ಲಾಕ್ ಡೌನ್ ಟೈಮ್ ನಲ್ಲಿ ವಿದೇಶದಲ್ಲಿ ಲಾಕ್ ಆಗುವ ಪತಿ. ಸ್ವದೇಶಿ ನೆಲದಲ್ಲಿ ಪತ್ನಿ. ಈ ಗಂಡ ಹೆಂಡ್ತಿ‌ ನಡುವಿನ ಪ್ರೀತಿ-ಗೀತಿ-ಇತ್ಯಾದಿ ನಡುವೆ ಒಂದಷ್ಟು ಜಗಳ ಓವರ್ ಆಲ್ ಆಗಿ‌ ಮೇಡ್ ಇನ್ ಚೈನಾ ಫ್ಯಾಮಿಲಿ ಡ್ರಾಮಾ” ಎಂದಿದೆ ಚಿತ್ರತಂಡ. ಇದನ್ನೂ ಓದಿ :ಎಂತವರಿಗೂ ಮರುಕ ಹುಟ್ಟಿಸುತ್ತೆ ಕನ್ನೇರಿ ಚಿತ್ರದ ‘ಕಾಣದ ಊರಿಗೆ ಕೂಲಿಗೆ ಹೊರಟವಳೆ’ ಹಾಡು

    ಅಯೋಗ್ಯ, ರತ್ನಮಂಜರಿ ಸಿನಿಮಾಗಳಿಗೆ ಸಿನಿಮಾಟೋಗ್ರಾಫರ್ ಆಗಿದ್ದ ಪ್ರೀತಮ್ ತೆಗ್ಗಿನಮನೆ ಚಿತ್ರಕ್ಕೆ ಆಕ್ಷನ್ ಕಟ್ ಹೇಳುವುದ ಜೊತೆಗೆ ಗ್ರಾಫಿಕ್, ಎಡಿಟಿಂಗ್ ಹಾಗೂ ಸಿನಿಮಾಟೋಗ್ರಾಫಿ ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ನಾಗಭೂಷಣ್ ಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್ ನಟಿಸಿದ್ದಾರೆ. ಗೌರವ್ ಶೆಟ್ಟಿ, ಅಶ್ವಿನಿ ರಾವ್ ಪಲ್ಲಕ್ಕಿ, ಅರುಣ ಬಾಲರಾಜ್, ರವಿ ಭಟ್ ಸೇರಿದಂತೆ ಹಲವು ಕಲಾವಿದರು ತಾರಾ ಬಳಗದಲ್ಲಿ ಇದ್ದಾರೆ.