Tag: ಮೇಟ್ರೋ

  • ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

    ವೈಟ್‍ಫೀಲ್ಡ್ ಮೆಟ್ರೋ ಸಂಚಾರ – ವೋಲ್ವೋ ಬಸ್ ಸಂಚಾರಕ್ಕೆ ಹೊಡೆತ

    ಬೆಂಗಳೂರು: ಒಂದು ಕಾಲದಲ್ಲಿ ಬೆಂಗಳೂರಿನ (Bengaluru) ರಸ್ತೆಗಳಲ್ಲಿ ರಾಜನಂತೆ ಮೆರೆದಾಡಿದ ವೋಲ್ವೋ ಬಸ್‍ಗಳು (Volvo Bus) ಈಗ ಮೂಲೆ ಸೇರಿವೆ. ಅಳಿದುಳಿದ ಬಸ್‍ಗಳೂ (Bus) ಐಟಿ, ಬಿಟಿ ಮಂದಿಯನ್ನು ನಂಬಿ ರಸ್ತೆಗಿಳಿಯುತ್ತಿವೆ. ಆದರೆ ಇದೀಗ ಈ ಐಟಿ ಮಂದಿಯೂ ಮೆಟ್ರೋ (Metro) ದತ್ತ ಮುಖಮಾಡೋದು ಖಚಿತವಾಗ್ತಿದ್ದಂತೆ, ಬಿಎಂಟಿಸಿಗೆ (BMTC) ಹೊಸ ಟೆಂಕ್ಷನ್ ಶುರುವಾಗಿದೆ.

    ಸದ್ಯ ಬಿಎಂಟಿಸಿ ಬಳಿ 750 ಐಷಾರಾಮಿ ವೋಲ್ವೋ ಬಸ್‍ಗಳಿವೆ. ಇವುಗಳ ಪೈಕಿ ರಸ್ತೆಗಿಳಿಯುತ್ತಿರೋದು ಕೇವಲ 250 ಮಾತ್ರ. ಈ 250 ಬಸ್‍ಗಳು ಓಡ್ತಿರೋದು ಐಟಿ ಬಿಟಿ ಕಾರಿಡಾರ್‍ನಲ್ಲಿ. ಆದರೆ ಇದೀಗ ಈ ಐಟಿ, ಬಿಟಿ ಕಾರಿಡಾರ್‌ನತ್ತ ಮೆಟ್ರೋ ಮುಖಮಾಡುತ್ತಿದೆ. ಈಗಾಗಲೇ ವೈಟ್‍ಫೀಲ್ಡ್ ಮಾರ್ಗದಲ್ಲಿ ಟ್ರಯಲ್ ರನ್ ಆರಂಭಿಸಿರುವ ಮೆಟ್ರೋ ಮುಂದಿನ ವರ್ಷಾರಂಭದಲ್ಲೇ ವಾಣಿಜ್ಯ ಸಂಚಾರವನ್ನೂ ಆರಂಭಿಸುವ ಉತ್ಸಾಹದಲ್ಲಿದೆ. ಹೀಗಾಗಿ ಬಿಎಂಟಿಸಿಗೆ ಹೊಸ ಬಗೆಯ ಟೆಂಕ್ಷನ್ ಶುರುವಾಗಿದೆ.

    ಈ ಹಿಂದೆ ಬಿಎಂಟಿಸಿ ಪ್ರತಿನಿತ್ಯ ಸರಿ ಸುಮಾರು 50 ಲಕ್ಷದವರೆಗೂ ಪ್ರಯಾಣಿಕರನ್ನ ಹೊಂದಿತ್ತು. ಆದರೆ ಕೋವಿಡ್ ಬಳಿಕ ಈ ಪ್ರಯಾಣಿಕರ ಸಂಖ್ಯೆ ಇಳಿಮುಖವಾಗಿ ಕೇವಲ 30 ರಿಂದ 35 ಲಕ್ಷಕ್ಕೆ ಬಂದು ನಿಂತಿದೆ. ಇನ್ನೊಂದ್ಕಡೆಯಲ್ಲಿ ಮೆಟ್ರೋ ವಿಸ್ತರಣೆ ಆಗ್ತಿರೋದು ಸಹ ಬಿಎಂಟಿಸಿಗೆ ದೊಡ್ಡ ಹೊಡೆತ ಕೊಡುತ್ತಲೇ ಬಂದಿದೆ. ಇದನ್ನೂ ಓದಿ: ಚನ್ನಪಟ್ಟಣದಲ್ಲಿ HDK V/s CPY- ಕ್ರೆಡಿಟ್ ವಾರ್‌ನಿಂದ ಕಾಮಗಾರಿ ಕುಂಠಿತ

    ಈಗ ಐಟಿ ಕಾರಿಡಾರ್ಗೂ ಮೆಟ್ರೋ ಬಂದಿದ್ದೇ ಆದರೆ ಬಿಎಂಟಿಸಿ ಪ್ರಯಾಣಿಕರಲ್ಲಿ ಗಣನೀಯ ಇಳಿಕೆಯಾಗುವ ಭೀತಿ ಶುರುವಾಗಿದೆ. ಅದರಲ್ಲೂ ಅಷ್ಟೋ ಇಷ್ಟೋ ರಸ್ತೆಗಿಳಿಯುತ್ತಿದ್ದ ವೋಲ್ವೋ ಬಸ್‍ಗಳು ಮೂಲೆ ಸೇರುವುದು ಬಹುತೇಕ ಪಕ್ಕಾ ಆಗಿದೆ. ಆದರೆ ಇದಕ್ಕೆ ಬಿಎಂಟಿಸಿ ಪರ್ಯಾಯ ಪ್ಲಾನ್ ರೂಪಿಸಿಬೇಕಾದ ಅನಿವಾರ್ಯತೆ ಎದುರಾಗಿದೆ. ಇದನ್ನೂ ಓದಿ: ಚುನಾವಣೆ ಹೊಸ್ತಿಲಲ್ಲಿ ಡಿಕೆಶಿ ರಾಮನಗರ ಸಸ್ಪೆನ್ಸ್- ಡಿಕೆಸು ಬದಲಿಗೆ ಇಕ್ಬಾಲ್‍ಗೆ ಟಿಕೆಟ್ ಸಾಧ್ಯತೆ

    Live Tv
    [brid partner=56869869 player=32851 video=960834 autoplay=true]

  • ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

    ನಾಳೆ ನೇರಳೆ ಮಾರ್ಗದ ಮೆಟ್ರೋ ಸಂಚಾರ ಸ್ಥಗಿತ

    ಬೆಂಗಳೂರು: ಸಿಲಿಕಾನ್ ಸಿಟಿಯ ನಮ್ಮ ಮೆಟ್ರೋ(Metro Rail) ನೇರಳೆ ಮಾರ್ಗದಲ್ಲಿ ರೈಲು ಸಂಚಾರ ಸ್ಥಗಿತವಾಗಲಿದೆ. ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ಇರುವುದಿಲ್ಲ. ಬೆಂಗಳೂರು ಮೆಟ್ರೋ ರೈಲು ನಿಗಮ ಇಂದು ಈ ಕುರಿತು ಪ್ರಕಟಣೆ ಹೊರಡಿಸಿದೆ.

    ಅಕ್ಟೋಬರ್ 9ರ ಸಂಜೆ 4 ಗಂಟೆಯಿಂದ ಅಕ್ಟೋಬರ್ 10ರ ಬೆಳಗ್ಗೆ 6 ಗಂಟೆ ತನಕ ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ರದ್ದುಗೊಳ್ಳಲಿದೆ ಎಂದು ಮಾಹಿತಿ ನೀಡಿದೆ. ಇದನ್ನೂ ಓದಿ: ಡಿಎಪಿ,ಪೊಟ್ಯಾಷ್‍ಗಾಗಿ ರಾಜ್ಯದಿಂದ ಕೇಂದ್ರಕ್ಕೆ ಬೊಮ್ಮಾಯಿ ಮನವಿ

    ಅಕ್ಟೋಬರ್ 9ರಂದು ನೇರಳೆ ಮಾರ್ಗದ ಟ್ರಿನಿಟಿ ಮತ್ತು ಹಲಸೂರು ಮೆಟ್ರೋ ನಿಲ್ದಾಣಗಳ ನಡುವೆ ದುರಸ್ತಿ ಕಾಮಗಾರಿಯನ್ನು ಕೈಗೊಳ್ಳಲಾಗುತ್ತಿದೆ. ಈ ಹಿನ್ನಲೆಯಲ್ಲಿ ಎಂ.ಜಿ.ರಸ್ತೆ ಮತ್ತು ಬೈಯಪ್ಪನಹಳ್ಳಿ ನಡುವೆ ರೈಲು ಸಂಚಾರ ನಡೆಸುವುದಿಲ್ಲ.  ಇದನ್ನೂ ಓದಿ: ಫ್ಯಾನಿಗೆ ನೇಣು ಬಿಗಿದ ಸ್ಥಿತಿಯಲ್ಲಿ ಮಹಿಳೆ ಶವ ಪತ್ತೆ – ಪತಿ ಮೇಲೆ ಅನುಮಾನ

    ಎಂ.ಜಿ.ರಸ್ತೆ-ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದವರೆಗೆ ವಾಣಿಜ್ಯ ಸೇವೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಲಾಗುತ್ತದೆ. ಕಾಮಗಾರಿ ಪೂರ್ಣಗೊಂಡ ಬಳಿಕ ಅಕ್ಟೋಬರ್ 10ರ ಭಾನುವಾರ ಬೆಳಗ್ಗೆ 6 ಗಂಟೆ ಬಳಿಕ ಮೆಟ್ರೋ ಸಂಚಾರ ಎಂದಿನಂತೆ ಇರಲಿದೆ ಎಂದು ಪ್ರಕಟಣೆಯಲ್ಲಿ ಸ್ಪಷ್ಟಪಡಿಸಲಾಗಿದೆ. ಈ ಅವಧಿಯಲ್ಲಿ ನೇರಳೆ ಮಾರ್ಗದಲ್ಲಿ ಎಂ.ಜಿ.ರಸ್ತೆ-ಕೆಂಗೇರಿ ತನಕ ಎಂದಿನಂತೆ ಮೆಟ್ರೋ ರೈಲುಗಳು ಸಂಚಾರ ನಡೆಸಲಿವೆ. ಹಸಿರು ಮಾರ್ಗದಲ್ಲಿನ ರೈಲು ಸಂಚಾರದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ ಎಂದು(BMRCL) Bangalore Metro Rail Corporation Limited ಹೇಳಿದೆ. ಇದನ್ನೂ ಓದಿ: ಫ್ಯಾಬ್ರಿಕ್ ಗೋಡೌನ್‍ನಲ್ಲಿ ಬೆಂಕಿ – ಸ್ಥಳಕ್ಕೆ ಆಗಮಿಸಿದ 18 ಅಗ್ನಿ ಶಾಮಕ ವಾಹನ