Tag: ಮೇಘಸ್ಪೋಟ

  • ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ

    ಉಡುಪಿಯಲ್ಲಿ ಮೇಘಸ್ಪೋಟ – ನಾಪತ್ತೆಯಾದ ವೃದ್ಧೆ ಶವವಾಗಿ ಪತ್ತೆ

    ಉಡುಪಿ: ಹೆಬ್ರಿ (Hebri) ತಾಲೂಕಿನ ಮುದ್ರಾಡಿಯಲ್ಲಿ ಭಾನುವಾರ ಸಂಭವಿಸಿದ ಮೇಘಸ್ಪೋಟದಲ್ಲಿ (Cloudburst) ನಾಪತ್ತೆಯಾದ ವೃದ್ಧೆ ದೇಹ ಶವವಾಗಿ ಪತ್ತೆಯಾಗಿದೆ.

    ಮೇಘಸ್ಪೋಟದ ಮಾದರಿಯಲ್ಲಿ ಏಕಾಏಕಿ ಮಳೆ ಸುರಿದಿದ್ದರಿಂದ ಚಂದ್ರ ಗೌಡ್ತಿ (85) ನೆರೆಯ ನೀರಿನಲ್ಲಿ ಕೊಚ್ಚಿ ಹೋಗಿದ್ದರು. ಇಂದು ಬಲ್ಲಾಡಿ (Balladi) ಪರಿಸರದ ಗದ್ದೆ ಬದಿಯಲ್ಲಿ ಮೃತದೇಹ ಪತ್ತೆಯಾಗಿದೆ. ಇದನ್ನೂ ಓದಿ: ಮುಡಾ ಜಟಾಪಟಿ ಮಧ್ಯೆ ಕಾಂಗ್ರೆಸ್‌ನಲ್ಲಿ ಆಂತರಿಕ ಸಭೆ – ಮಾತುಕತೆಗೆ ಬ್ರೇಕ್ ಹಾಕುತ್ತಾ ಹೈಕಮಾಂಡ್‌?

    ಹೆಬ್ರಿ ತಾಲೂಕಿನ ಮುದ್ರಾಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಬಲ್ಲಾಡಿ ವ್ಯಾಪ್ತಿಯ ಪಶ್ಚಿಮ ಘಟ್ಟದ ಕೆಳಗಿನ ಕಬ್ಬಿನಾಲೆಯ ಹಳ್ಳದಲ್ಲಿ ಭಾನುವಾರ ಸಂಜೆ ದಿಢೀರ್ ನೀರಿನ ಹರಿವು ಉಂಟಾಗಿದ್ದು, 10ಕ್ಕೂ ಹೆಚ್ಚು ಮನೆಗಳು ಜಲಾವೃತಗೊಂಡಿವೆ. ಇದನ್ನೂ ಓದಿ: ಒಸಿಐ ಕಾರ್ಡ್ ಹೊಂದಿರುವ ಸಾಗರೋತ್ತರ ಭಾರತೀಯ ನಾಗರಿಕರು ವಿದೇಶಿಗರೇ? ಕೇಂದ್ರ ಸರ್ಕಾರ ಹೇಳೋದೇನು?

    ಘಟನೆಯಲ್ಲಿ ಎರಡು ಕಾರು ಹಾಗೂ ಎರಡು ಬೈಕ್‌ಗಳು ಕೊಚ್ಚಿ ಹೋಗಿವೆ. ಪ್ರವಾಹದಿಂದ ಸುಮಾರು 150 ಎಕರೆ ಪ್ರದೇಶದಲ್ಲಿ ಬೆಳೆದ ಭತ್ತ, ರಬ್ಬರ್, ಅಡಿಕೆ, ತೆಂಗು, ಬಾಳೆ ಬೆಳೆ ಹಾನಿಯಾಗಿದೆ. ಭಾನುವಾರ ಮಧ್ಯಾಹ್ನ 2:30ರ ಸುಮಾರಿಗೆ ಧಾರಾಕಾರ ಮಳೆ ಸುರಿದಿದ್ದು, ಬಳಿಕ ನದಿಯಲ್ಲಿ ಪೂರ್ಣ ಪ್ರಮಾಣದಲ್ಲಿ ನೀರು ಹರಿಯಲಾರಂಭಿಸಿದೆ ಎಂದು ಸ್ಥಳೀಯರು ತಿಳಿಸಿದ್ದಾರೆ. ಇದನ್ನೂ ಓದಿ: ಕರಾಚಿಯಲ್ಲಿ ಸ್ಫೋಟ| ಇಬ್ಬರು ಚೀನಿ ಪ್ರಜೆಗಳು ಬಲಿ – 8 ಮಂದಿಗೆ ಗಾಯ

  • ಮೇಘಸ್ಫೋಟಕ್ಕೆ ಸುಳ್ಯದ 4 ಗ್ರಾಮಗಳು ತತ್ತರ- ರಾತ್ರಿ ಇದ್ದ ಅಂಗಡಿ ಬೆಳಗ್ಗೆ ಮಾಯ!

    ಮೇಘಸ್ಫೋಟಕ್ಕೆ ಸುಳ್ಯದ 4 ಗ್ರಾಮಗಳು ತತ್ತರ- ರಾತ್ರಿ ಇದ್ದ ಅಂಗಡಿ ಬೆಳಗ್ಗೆ ಮಾಯ!

    ಮಂಗಳೂರು: ರಾಜ್ಯದಲ್ಲಿ ವರುಣನ ಆರ್ಭಟ ಮುಂದುವರಿದ್ದು, ಅದರಲ್ಲಿಯೂ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಹಿಂದೆಂದೂ ನೋಡಿರದ ಘಟನೆಗಳು ನಡೆಯುತ್ತಿವೆ. ಈ ಹಿನ್ನೆಲೆಯಲ್ಲಿ ಜನ ಈ ಬಾರಿಯ ಮಳೆಗೆ ತತ್ತರಿಸಿ ಹೋಗಿದ್ದಾರೆ.

    ಹೌದು. ದಕ್ಷಿಣ ಕನ್ನಡ ಜಿಲ್ಲೆಯ ಸುಳ್ಯ ತಾಲೂಕಿನಲ್ಲಿರುವ 4 ಗ್ರಾಮಗಳ ಜನ ತೀವ್ರ ಆತಂಕಕ್ಕೀಡಾಗಿದ್ದಾರೆ. ಹರಿಹರ, ಕೊಲ್ಲಮೊಗ್ರು, ಬಾಳುಗೋಡು ಹಾಗೂ ಕಲ್ಮಕಾರು ಗ್ರಾಮದಲ್ಲಿ ಮೇಘಸ್ಫೋಟ ಉಂಟಾಗಿದ್ದು, ಸಾಕಷ್ಟು ಹಾನಿ ಸಂಭವಿಸಿದೆ. ಇದನ್ನೂ ಓದಿ: ವರಮಹಾಲಕ್ಷ್ಮಿ ಹಬ್ಬದ ವಿಶೇಷ ‘ಹೋಳಿಗೆ’ – ಮಾಡುವ ಸುಲಭ ವಿಧಾನ

    ಹರಿಹರದ ಭೀಕರ ಪ್ರವಾಹಕ್ಕೆ ಹೊಳೆ ಪಕ್ಕದಲ್ಲಿದ್ದ ಅಂಗಡಿ ಹಾಗೂ ಮನೆಗಳು ಮಳೆ ನೀರಿಗೆ ಗುರುತು ಸಿಗದಂತೆ ಕೊಚ್ಚಿ ಹೋಗಿವೆ. ರಾತ್ರಿ ಹೋಗುವಾಗ ಇದ್ದ ಅಂಗಡಿ ಬೆಳಗ್ಗೆ ಬಂದು ನೋಡುವಾಗ ಮಾಯವಾಗದ್ದನ್ನು ನೋಡಿ ಸ್ಥಳೀಯರು ದಂಗಾಗಿದ್ದಾರೆ. ಹರಿದು ಬಂದ ಭಾರೀ ನೀರಿಗೆ ಹರಿಹರದಿಂದ ಬಾಳುಗೋಡು ಸಂಪರ್ಕಿಸುವ ರಸ್ತೆ ಸಂಪರ್ಕ ಕಡಿತಗೊಂಡಿದೆ. ನೆರೆ ನೀರಿಗೆ ರಸ್ತೆ ಅಂಚಿನಲ್ಲಿರುವ ಮಣ್ಣು ಕುಸಿದು ಬಿದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ

    ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದ ಅಮರನಾಥ ಯಾತ್ರೆ ಪುನಾರಂಭ

    ನವದೆಹಲಿ: ಅಮರನಾಥ ಯಾತ್ರೆ ಪುನಾರಂಭಿಸಲಾಗಿದೆ. ಮೇಘಸ್ಫೋಟದಿಂದ ತಾತ್ಕಾಲಿಕ ಬಂದ್ ಆಗಿದ್ದು, ಇದೀಗ ಹವಾಮಾನ ಪರಿಸ್ಥಿತಿ ಸುಧಾರಿಸಿದ ಹಿನ್ನೆಲೆ ಯಾತ್ರೆ ಮತ್ತೆ ಆರಂಭಿಸಲಾಗಿದೆ. ಜಮ್ಮು ಮಾರ್ಗವಾಗಿ ಬರುವ ಯಾತ್ರಾರ್ಥಿಗಳಿಗೆ ಬೇಸ್ ಕ್ಯಾಂಪ್‍ಗೆ ತೆರಳಲು ಅನುಮತಿ ನೀಡಲಾಗಿದೆ. ಪೆಹಲ್ಗಾಮ್ ಬೇಸ್ ಮಾರ್ಗವಾಗಿ ತೆರಳಲು ಅವಕಾಶ ನೀಡಲಾಗಿದೆ.

    ಮುಂಜಾನೆ 5 ಗಂಟೆಗೆ ಜಮ್ಮುವಿನ ಭಗವತಿ ನಗರ ಮೂಲ ಶಿಬಿರದಿಂದ ಯಾತ್ರಾರ್ಥಿಗಳು ಹೊರಟಿದ್ದಾರೆ. ಬಾಲ್ಟಾಲ್ ಮತ್ತು ನುನ್ವಾನ್ ನಿಂದ ಹೆಲಿಕಾಪ್ಟರ್ ಹಾರಾಟ ಆರಂಭವಾಗಿದೆ. ಭಾನುವಾರ ಲೆಫ್ಟಿನೆಂಟ್ ಗವರ್ನರ್ ಮನೋಜ್ ಸಿನ್ಹಾ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಈ ನಿರ್ಧಾರ ತೆಗೆದುಕೊಳ್ಳಲಾಗಿತ್ತು. ಸಭೆಯಲ್ಲಿ ಇಂದು ಹವಾಮಾನ ಪರಿಸ್ಥಿತಿ ಆಧರಿಸಿ ಅಧಿಕಾರಿಗಳು ತೀರ್ಮಾನ ಮಾಡುವುದಾಗಿ ತಿಳಿಸಿದ್ದರು. ಇದನ್ನೂ ಓದಿ: ಉಡುಪಿ, ದಕ್ಷಿಣ ಕನ್ನಡದಲ್ಲಿ ರೆಡ್ ಅಲರ್ಟ್ ವಿಸ್ತರಣೆ – ನೆರೆಯಿಂದಾಗಿ ಅಪಾರ ಪ್ರಮಾಣದ ಬೆಳೆಹಾನಿ

    ಅಮರನಾಥ ಯಾತ್ರೆ ಪುನಾರಂಭಕ್ಕೆ ಜಿಲ್ಲಾಡಳಿತ ಕೂಡ ಉತ್ಸುಕವಾಗಿತ್ತು. ಗುಹೆ ದರ್ಶನಕ್ಕೆ ಸಾವಿರಾರು ಜನರು ಕಾಯುತ್ತಿರುವ ಹಿನ್ನೆಲೆ ಅವಕಾಶ ನೀಡಲು ಚಿಂತನೆ ನಡೆಸಲಾಗಿತ್ತು. ಅಲ್ಲದೆ ಮೇಘಸ್ಫೋಟದಿಂದ ಹಾಳಾದ ರಸ್ತೆಗಳನ್ನು ಜಿಲ್ಲಾಡಳಿತ ಸಿದ್ಧಪಡಿಸಿತ್ತು. ದರ್ಶನಕ್ಕೆ ಮಾಡಿಕೊಂಡಿರುವ ತಯಾರಿಗಳ ಬಗ್ಗೆ ನಿನ್ನೆ ಲೆಫ್ಟಿನೆಂಟ್ ಗವರ್ನರ್ ಗೆ ಮಾಹಿತಿ ನೀಡಿದ್ದರು. ಈ ಹಿನ್ನೆಲೆ ಇಂದು ದರ್ಶನಕ್ಕೆ ಅವಕಾಶ ನೀಡಲಾಗಿದೆ.

    ಇತ್ತ ಅಮರನಾಥ ಗುಹೆಯ ಬಳಿ ಮೇಘಸ್ಫೋಟ ಆಗಿ ನಾಪತ್ತೆಯಾದ 40 ಮಂದಿ ಬದುಕಿರುವುದು ಅನುಮಾನವಾಗಿದೆ. ಮೂರು ದಿನದ ಕಾರ್ಯಾಚರಣೆಯ ಬಳಿಕ ಯಾತ್ರಾರ್ಥಿಗಳು ಪತ್ತೆಯಾಗಿಲ್ಲ. ಹೀಗಾಗಿ ನೀರಿನಲ್ಲಿ ಕೊಚ್ಚಿ ಹೋಗಿರಬಹುದು ಎಂದು ರಕ್ಷಣಾ ತಂಡಗಳು ಅನುಮಾನ ವ್ಯಕ್ತಪಡಿಸಿವೆ. ಆದರೂ ಭದ್ರತಾ ಸಿಬ್ಬಂದಿ ಸಾಧ್ಯವಾದಷ್ಟು ಜನರನ್ನು ಜೀವಂತವಾಗಿ ಹುಡುಕುವ ಪ್ರಯತ್ನದಲ್ಲಿದ್ದಾರೆ. ಸ್ನಿಫರ್ ಡಾಗ್‍ಗಳು, ಥರ್ಮಲ್ ಇಮೇಜರ್ ಸೇರಿದಂತೆ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಹುಡುಕಾಟ ನಡೆಸುತ್ತಿದ್ದಾರೆ.

    ಅಮರನಾಥ ಗುಹೆ ಬಳಿ ಮೇಘಸ್ಫೋಟಕ್ಕೂ ಮುನ್ನ ಒಂದು ಲಕ್ಷಕ್ಕೂ ಅಧಿಕ ಯಾತ್ರಾರ್ಥಿಗಳು ದರ್ಶನ ಪಡೆದಿದ್ದರು. ಯಾತ್ರೆ ಶುರುವಾದ ಮೊದಲ ವಾರದಲ್ಲಿ ಒಂದು ಲಕ್ಷ ಮಂದಿ ದರ್ಶನ ಪಡೆದಿದ್ದರು. ಮೇಘಸ್ಫೋಟಕ್ಕೂ ಮುನ್ನ 10 ಬ್ಯಾಚ್‍ಗಳಲ್ಲಿ ಒಟ್ಟು 69,535 ಯಾತ್ರಾರ್ಥಿಗಳು ನುನ್ವಾನ್, ಪಹಲ್ಗಾಮ್, ಬಲ್ಟಾಲ್ ಮೂಲಕ ಭೇಟಿ ನೀಡಿದ್ದರು.

    Live Tv
    [brid partner=56869869 player=32851 video=960834 autoplay=true]