Tag: ಮೇಘನ್ ಮರ್ಕೆಲ್

  • ತನ್ನ ಮದ್ವೆಯಲ್ಲಿ ಕಣ್ಣೀರು ಹಾಕಿದ ರಾಜಕುಮಾರ ಹ್ಯಾರಿ

    ತನ್ನ ಮದ್ವೆಯಲ್ಲಿ ಕಣ್ಣೀರು ಹಾಕಿದ ರಾಜಕುಮಾರ ಹ್ಯಾರಿ

    ಲಂಡನ್: ಭಾರತೀಯ ಮದುವೆಗಳಲ್ಲಿ ವಧು ತವರು ಮನೆಯಿಂದ ಪತಿಯ ಮನೆಗೆ ತೆರಳುವಾಗ ಕಣ್ಣೀರು ಹಾಕೋದನ್ನು ನಾವು ನೋಡಿರುತ್ತೇವೆ. ಕಳೆದ ಕೆಲವು ದಿನಗಳಿಂದ ಬ್ರಿಟನ್ ರಾಜಕುಮಾರ್ ಹ್ಯಾರಿ ಮತ್ತು ಮೇಘನ್ ಮರ್ಕೆಲ್ ಮದುವೆ ಅತಿ ಸಂಭ್ರಮದಿಂದ ನಡೆಯುತ್ತಿದೆ.

    ರಾಜಕುಮಾರ ಹ್ಯಾರಿ ಪತ್ನಿ ಮೇಘನ್ ಮರ್ಕೆಲ್ ಜೊತೆ ಬರುವಾಗ ಭಾವುಕರಾಗಿ ಕಣ್ಣೀರು ಹಾಕಿರುವ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ವಿವಾಹ ಸಂದರ್ಭದಲ್ಲಿ ಹ್ಯಾರಿ ಕಣ್ಣೀರು ಹಾಕಿದ್ದನ್ನು ನೋಡಿದ ಹಲವರು ಸಹಾನುಭೂತಿ ತೋರಿದ್ದಾರೆ. ಹ್ಯಾರಿ ಮದುವೆ ಸಂದರ್ಭದಲ್ಲಿ ತಮ್ಮ ತಾಯಿಯನ್ನು ನೆನೆದು ಕಣ್ಣೀರು ಹಾಕಿದ್ದಾರೆ ಅಂತಾ ಹೇಳಲಾಗ್ತಿದೆ.

    ವೈಭವದ ವಿವಾಹ ಸಂಧರ್ಭದಲ್ಲಿ ಹ್ಯಾರಿ ಅಲ್ಲದೆ ರಾಜಕುಮಾರಿ ತಾಯಿ ಡೋರಿಸ್ ರಾಗ್ಲ್ಯಾಂಡ್ ಕೂಡ ಭಾವುಕರಾಗಿ ಕಂಬನಿ ಮಿಡಿದರು. ಹ್ಯಾರಿ ನೀಲಿ ಬಣ್ಣದ ರಾಯಲ್ಸ್ ಫ್ರಾಕ್ ಕೋಟ್ ಅನ್ನು ತೊಟ್ಟಿದ್ದರು. ರಾಜಕುಮಾರಿ ಮೇಘನ್ ಶ್ವೇತ ವರ್ಣದ ಗಿವೆಂಚಿ ಗೌನ್ ಧರಿಸಿ ಮಿಂಚುತ್ತಿದ್ರು.

     

     

    https://twitter.com/codruc1/status/997805808867045376