Tag: ಮೇಘನ್

  • ಸಿಇಟಿ ಫಲಿತಾಂಶ ಪ್ರಕಟ – ಐದು ವಿಭಾಗದಲ್ಲೂ ಮೈಸೂರಿನ ಮೇಘನ್‍ಗೆ ಫಸ್ಟ್ ರ್‍ಯಾಂಕ್

    ಸಿಇಟಿ ಫಲಿತಾಂಶ ಪ್ರಕಟ – ಐದು ವಿಭಾಗದಲ್ಲೂ ಮೈಸೂರಿನ ಮೇಘನ್‍ಗೆ ಫಸ್ಟ್ ರ್‍ಯಾಂಕ್

    – ಈ ವರ್ಷ 6 ಗ್ರೇಸ್ ಮಾರ್ಕ್ಸ್

    ಬೆಂಗಳೂರು: ಇಂದು ರಾಜ್ಯದಲ್ಲಿ ಸಿಇಟಿ ಫಲಿತಾಂಶ ಪ್ರಕಟಗೊಂಡಿದೆ. ಅಗ್ರಿಕಲ್ಚರ್, ಎಂಜಿನಿಯರಿಂಗ್ ಸೇರಿ ಎಲ್ಲಾ 5 ವಿಭಾಗದಲ್ಲೂ ಮೈಸೂರಿನ ಮೇಘನ್ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ.

    2021ನೇ ಸಾಲಿನ ಸಿಇಟಿ ಫಲಿತಾಂಶವನ್ನು ಉನ್ನತ ಶಿಕ್ಷಣ ಸಚಿವ ಅಶ್ವಥ್ ನಾರಾಯಣ ಅವರು ಪ್ರಕಟಿಸಿದರು. ಕೆಇಎ ಕಾರ್ಯ ನಿರ್ವಾಹಕ ನಿರ್ದೇಶಕಿ ರಮ್ಯ ಉಪಸ್ಥಿತಿಯಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಫಲಿತಾಂಶ ಪ್ರಕಟಿಸಿ ರ್‍ಯಾಂಕ್ ಪಡೆದ ವಿದ್ಯಾರ್ಥಿಗಳಿಗೆ ಅಭಿನಂದನೆ ಸಲ್ಲಿಸಿದರು. ಇದನ್ನೂ ಓದಿ: ಸಣ್ಣ ಮಳೆಗೆ ನದಿಯಂತಾದ ಬೆಂಗಳೂರು ರಸ್ತೆ

    ಈ ವರ್ಷ 6 ಗ್ರೇಸ್ ಮಾರ್ಕ್ಸ್ ನೀಡಲಾಗಿದ್ದು, ಗಣಿತ 3 ಅಂಕ ಮತ್ತು ಭೌತಶಾಸ್ತ್ರ 3 ಗ್ರೇಸ್ ಮಾರ್ಕ್ಸ್ ನೀಡಲಾಗಿದೆ. ಮುಂದಿನ ವರ್ಷದ ವ್ಯಾಸಂಗಕ್ಕೆ ಸಿಇಟಿ ಫಲಿತಾಂಶವನ್ನು ಆಧರಿಸಿ ಮೂಲ ದಾಖಲಾಗಿ ಪರಿಶೀಲನೆಗೆ ಪ್ರತಿ ಜಿಲ್ಲಾ ಕೇಂದ್ರದಲ್ಲಿ ಸೌಲಭ್ಯ ಕೇಂದ್ರ ಪ್ರಾರಂಭವಾಗಲಿದ್ದು, ಸೆಪ್ಟೆಂಬರ್ 30 ರಿಂದ ದಾಖಲಾತಿ ಪರಿಶೀಲನೆ ಪ್ರಾರಂಭಿಸಲಾಗುವುದು. ಅಭ್ಯರ್ಥಿಗಳು ಹತ್ತಿರದ ಕೇಂದ್ರಕ್ಕೆ ಹೋಗಿ ದಾಖಲಾತಿ ನೀಡಬೇಕು ಎಂದು ಮಾಹಿತಿ ಹಂಚಿಕೊಂಡರು.

    ಮೈಸೂರಿನ ಮೇಘನ್, ಎಂಜಿನಿಯರಿಂಗ್, ಅಗ್ರಿಕಲ್ಚರ್, ಯೋಗ ಮತ್ತು ನ್ಯಾಚುರೋಪತಿ, ಪಶು ಸಂಗೋಪನೆ, ಕೃಷಿ, ಬಿ. ಫಾರ್ಮ್, ಐದು ವಿಭಾಗದಲ್ಲೂ ಪ್ರಥಮ ರ್‍ಯಾಂಕ್ ಪಡೆದಿದ್ದಾರೆ. ಇದನ್ನೂ ಓದಿ: ಕಾಂಗ್ರೆಸ್‍ನ ಹಲವು ಶಾಸಕರು ಬಿಜೆಪಿಗೆ ಬರ್ತಾರೆ: ಬಿಎಸ್‍ವೈ

    ಎಂಜಿನಿಯರಿಂಗ್‍ನಲ್ಲಿ ಪ್ರೇಮಾಂಕುರ್ ಚಕ್ರಬರ್ತಿ ಬೆಂಗಳೂರು ಪಡೆದರೆ, ಯೋಗ- ನ್ಯಾಚಿರೋಪತಿಯಲ್ಲಿ ವರುಣ್ ಆದಿತ್ಯಾ ಬೆಂಗಳೂರು, ಕೃಷಿಯಲ್ಲಿ ರೀಥಮ್ ಮಂಗಳೂರು, ಪಶು ಸಂಗೋಪನೆಯಲ್ಲಿ ವರುಣ್ ಅದಿತ್ಯಾ ಬೆಂಗಳೂರು ಮತ್ತು ಬಿ. ಫಾರ್ಮ್‍ನಲ್ಲಿ ಪ್ರೇಮಾಂಕುರ್ ಚಕ್ರಬರ್ತಿ ಬೆಂಗಳೂರು ದ್ವೀತಿಯ ರ್‍ಯಾಂಕ್ ಪಡೆದಿದ್ದಾರೆ.

    ಆಗಸ್ಟ್ 28 ರಿಂದ 30 ರವರೆಗೆ ಪರೀಕ್ಷೆ ನಡೆದಿತ್ತು. ಈ ಬಾರಿ 2,01,834 ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಿದ್ರು. 1,93,447 ಅಭ್ಯರ್ಥಿಗಳು ಪರೀಕ್ಷೆ ಹಾಜರಾಗಿದ್ದರು. 12 ಕೋವಿಡ್ ವಿದ್ಯಾರ್ಥಿಗಳು ಕೂಡ ಪರೀಕ್ಷೆ ಬರೆದಿದ್ದರು. ಎಂಜಿನಿಯರ್ 1,83,231 ವಿದ್ಯಾರ್ಥಿಗಳಿಗೆ ರ್‍ಯಾಂಕ್ ಬಂದರೆ, ಕೃಷಿಯಲ್ಲಿ 1,52,518 ವಿದ್ಯಾರ್ಥಿಗಳು, ಪಶು ಸಂಗೋಪನೆಯಲ್ಲಿ 1,55,770 ವಿದ್ಯಾರ್ಥಿಗಳು, ಯೋಗ- ನ್ಯಾಚೋರೋಪತಿಯಲ್ಲಿ 1,55,910 ವಿದ್ಯಾರ್ಥಿಗಳು ಮತ್ತು ಬಿ ಫಾರ್ಮ್, ಪಾರ್ಮ್ ಡಿಯಲ್ಲಿ- 1,86,638 ರ್‍ಯಾಂಕ್ ಬಂದಿದೆ.

    ಎಂಜಿನಿಯರ್
    1. ಮೇಘನ್ (ಮೈಸೂರು)
    2. ಪ್ರೇಮಾಂಕುರ್ ಚಕ್ರಬರ್ತಿ( ಬೆಂಗಳೂರು)
    3. ಬಿ.ಡಿ.ಅನುರುದ್( ಬೆಂಗಳೂರು)

    ಬಿಎನ್‍ವೈಎಸ್ ರಾಂಕ್
    1. ಮೇಘನ್( ಮೈಸೂರು)
    2. ವರುಣ್ ಆದಿತ್ಯಾ( ಬೆಂಗಳೂರು)
    3. ರೀಥಮ್( ಮಂಗಳೂರು)

    ಬಿಎಸ್ಸಿ- ಕೃಷಿ
    1. ಮೇಘನ್ – ಮೈಸೂರು
    2. ರೀಥಮ್- ಮಂಗಳೂರು
    3. ಆದಿತ್ಯಾ ಪ್ರಭಾಸ್- ಬೆಂಗಳೂರು

    ಬಿ.ವಿ.ಎಸ್.ಸಿ(ಪಶು ಸಂಗೋಪನೆ)
    1. ಮೇಘನ್- ಮೈಸೂರು
    2. ವರುಣ್ ಅದಿತ್ಯಾ-ಬೆಂಗಳೂರು
    3. ರೀಥಮ್- ಮಂಗಳೂರು

    ಬಿ ಫಾರ್ಮ್
    1. ಮೇಘನ್- ಮೈಸೂರು
    2. ಪ್ರೇಮಾಂಕುರ್ ಚಕ್ರಬರ್ತಿ- ಬೆಂಗಳೂರು
    3. ಬಿ.ಎಸ್. ಅನುರುದ್ – ಬೆಂಗಳೂರು

    60 ಕ್ಕೆ 55 ಕ್ಕೂ ಹೆಚ್ಚು ಅಂಕ ಪಡೆದವರು:
    ಭೌತಶಾಸ್ತ್ರ – 26
    ರಸಾಯನಶಾಸ್ತ್ರ- 217
    ಗಣಿತ – 199
    ಜೀವಶಾಸ್ತ್ರ- 5,235

    60 ಕ್ಕೆ 60 ಅಂಕ ಪಡೆದವರು:
    ಭೌತಶಾಸ್ತ್ರ -0
    ರಸಾಯನಶಾಸ್ತ್ರ-3
    ಗಣಿತ – 6
    ಜೀವಶಾಸ್ತ್ರ- 50

    ಪರೀಕ್ಷೆ ಬರೆದವರು ವಿವರ:
    ಒಟ್ಟು ಪರೀಕ್ಷೆ ಬರೆದವರು – 1,93,447
    ಹುಡುಗರು – 95,462
    ಹುಡುಗಿಯರು – 97,985