Tag: ಮೇಘನಾ

  • ‘ನಿನ್ನಂಥ ಮೃದು ಮನಸ್ಸಿನವನಿಗೆ ಇದು ವಿಧಿಯ ದೊಡ್ಡ ಹೊಡೆತ’

    ‘ನಿನ್ನಂಥ ಮೃದು ಮನಸ್ಸಿನವನಿಗೆ ಇದು ವಿಧಿಯ ದೊಡ್ಡ ಹೊಡೆತ’

    – ಸುಂದರ್ ರಾಜ್‍ಗೆ ಸಾಂತ್ವನ ಹೇಳಿದ ಟಿ.ಎನ್.ಸೀತಾರಾಮ್
    – ಮೇಘನಾಗೆ ನೀನು ಮಾತ್ರ ಧೈರ್ಯ ನೀಡಬಲ್ಲೆ ಸುಂದರ್

    ಬೆಂಗಳೂರು: ಎಲ್ಲರ ಪ್ರೀತಿಯ ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಅವರ ನಿಧನಕ್ಕೆ ಅನೇಕರು ಸಂತಾಪ ಸೂಚಿಸಿದ್ದಾರೆ. ಅಳಿಯ ಅಗಲಿಕೆ, ಪ್ರೀತಿಯ ಮಗಳ ದುಃಖವನ್ನು ಕಂಡು ಹಿರಿಯ ನಟ ಸುಂದರ್ ರಾಜ್ ಕಣ್ಣೀರಾಗಿದ್ದಾರೆ. ಅವರಿಗೆ ನಿರ್ದೇಶಕ ಟಿ.ಎನ್.ಸೀತಾರಾಮ್ ಅವರು ಸಾಂತ್ವನ ಹೇಳಿದ್ದಾರೆ.

    ತಮ್ಮ ಫೇಸ್‍ಬುಕ್‍ನಲ್ಲಿ ಚಿರಂಜೀವಿ ಸರ್ಜಾ ಫೋಟೋವನ್ನು ಪೋಸ್ಟ್ ಮಾಡಿರುವ ಟಿ.ಎನ್.ಸೀತಾರಾಮ್, ‘ಪ್ರೀತಿಯ ಸುಂದರ್ ರಾಜ’ ಎಂದು ಮಾತುಗಳನ್ನು ಆರಂಭಿಸಿದ್ದಾರೆ. “ಈ ಕ್ಷಣದಲ್ಲಿ ಎಲ್ಲ ಬಗೆಯ ಸಾಂತ್ವನದ ಮಾತುಗಳೂ ಕೂಡ ಯಾಂತ್ರಿಕವೆನ್ನಿಸುತ್ತದೆ. ಆದರೆ ನಿನ್ನಂಥ ಮೃದು ಮನಸ್ಸಿನ ಮನುಷ್ಯನಿಗೆ ಇದು ವಿಧಿ ಕೊಡುತ್ತಿರುವ ದೊಡ್ಡ ಹೊಡೆತ” ಎಂದು ವಿಧಿಯನ್ನು ದೂರಿದ್ದಾರೆ.

    “ಒಬ್ಬಳೇ ಪ್ರೀತಿಯ ಮಗಳ ಪತಿ ಇಷ್ಟು ಚಿಕ್ಕ ವಯಸ್ಸಿನಲ್ಲಿ ಹಠಾತ್ ನಿಧನರಾಗಿರುವುದು ನಿಮ್ಮ ಮನೆಯ ಎಲ್ಲರಿಗೂ ಚೇತರಿಸಿಕೊಳ್ಳಲು ಆಗದಂಥ ಆಘಾತ. ಅದರಲ್ಲೂ ಚಿರಂಜೀವಿ ಸದಾ ಜೀವ ಚೈತನ್ಯವನ್ನು ತುಂಬಿಕೊಂಡಿರುತ್ತಿದ್ದಂಥ ಹುಡುಗ. ಅವನ ಸಾವು ಮೇಘನಾಳ ಈಗಿನ ಸ್ಥಿತಿಯಲ್ಲಿ ಅಪಾರ ನೋವು ಮತ್ತು ಶಮನವಾಗದ ಸಂಕಟ ತಂದಿರುತ್ತದೆ” ಎಂದು ಸೀತಾರಾಮ್ ತಿಳಿಸಿದ್ದಾರೆ.

    “ಮಾತುಗಳು ದುಃಖವನ್ನು ಕಡಿಮೆ ಮಾಡಲು ಸಾಧ್ಯವಿಲ್ಲ. ಬದುಕಿನ ಬಗ್ಗೆ ಆಳವಾದ ಅರಿವನ್ನು ಪಡೆದಿರುವ ನಿನಗೆ ಹೆಚ್ಚು ಹೇಳಲಾರೆ. ಪ್ರಮೀಳಾ ಮತ್ತು ಮೇಘನಾಗೆ ನೀನು ಮಾತ್ರ ಧೈರ್ಯ ನೀಡಬಲ್ಲೆ. ಕಣ್ಣೀರನ್ನು ನಗುವಿನೊಂದಿಗೆ ಬೆರೆಸಬಲ್ಲ ನಿನ್ನ ಎಂದಿನ ಶಕ್ತಿ ನಿನ್ನೊಂದಿಗಿರಲಿ. ಚಿರು ಮನೆಯವರಿಗೂ ನೋವು ಸಹಿಸುವ ಶಕ್ತಿ ಬರಲಿ ಎಂದು ಹಾರೈಸುತ್ತೇನೆ” ಎಂದು ಟಿ.ಎನ್.ಸೀತಾರಾಮ್ ಅವರು ಸುಂದರ್ ರಾಜ್ ಅವರಿಗೆ ಧೈರ್ಯ ಹೇಳಿದ್ದಾರೆ.

  • ಪತಿಯ ಪಾರ್ಥಿವ ಶರೀರವನ್ನೇ ನೋಡುತ್ತಾ ಬಿಕ್ಕಿಬಿಕ್ಕಿ ಅತ್ತ ಮೇಘನಾ

    ಪತಿಯ ಪಾರ್ಥಿವ ಶರೀರವನ್ನೇ ನೋಡುತ್ತಾ ಬಿಕ್ಕಿಬಿಕ್ಕಿ ಅತ್ತ ಮೇಘನಾ

    ಬೆಂಗಳೂರು: ನಟಿ ಮೇಘನಾ ರಾಜ್ ತಮ್ಮ ಪತಿ ಚಿರಂಜೀವಿ ಸರ್ಜಾ ಪಾರ್ಥೀವ ಶರೀರದ ಮುಂದೆ ಕುಳಿತು ಬಿಕ್ಕಿ ಬಿಕ್ಕಿ ಅತ್ತಿದ್ದಾರೆ.

    ಮೇಘನಾ ರಾಜ್ ಪತಿಯ ಪಾರ್ಥೀವ ಶರೀರದ ಎದುರು ಕೆಲಹೊತ್ತು ಕುಳಿತಿದ್ದರು. ಆಗ ಪತಿಯನ್ನೇ ನೋಡುತ್ತಾ ಮೌನವಾಗಿ ಕುಳಿತಿದ್ದರು. ಮನೆಯವರು ಕಾಫಿ ಕೊಟ್ಟರು ಕುಡಿಯಲು ಸಾಧ್ಯವಿಲ್ಲ ಎಂದು ಅಳುತ್ತಲೇ ನಿರಾಕರಿಸಿದ್ದಾರೆ. ಆಗ ಪತಿ ಚಿರುವನ್ನು ನೋಡಿ ಬಿಕ್ಕಿ ಬಿಕ್ಕಿ ಅತ್ತಿದ್ದಾರೆ. ಕೊನೆಗೆ ದುಃಖ ತಾಳಲಾರದೇ ಮೇಘನಾ ಮನೆಯೊಳಗೆ ಹೋಗಿದ್ದಾರೆ.

    ಚಿರಂಜೀವಿ ಮತ್ತು ಮೇಘನಾ ಪರಸ್ಪರ ಪ್ರೀತಿಸಿ ಮನೆಯವರನ್ನು ಒಪ್ಪಿಸಿ 2018ರಲ್ಲಿ ಮದುವೆಯಾಗಿದ್ದರು. ಈ ಜೋಡಿ ಸದಾ ಸ್ನೇಹಿತರಂತೆ ಇದ್ದರು. ಆದರೆ ಚಿರಂಜೀವಿಯ ಅಕಾಲಿಕ ಮರಣಕ್ಕೆ ಕುಟುಂಬ ಮಾತ್ರವಲ್ಲ ಇಡೀ ಚಿತ್ರರಂಗವೇ ಶಾಕ್ ಆಗಿದೆ.

    ಸ್ಯಾಂಡಲ್‍ವುಡ್ ನಟ ಚಿರಂಜೀವಿ ಸರ್ಜಾ ಹೃದಯಾಘಾತದಿಂದ ಭಾನುವಾರ ಮಧ್ಯಾಹ್ನ ಮೃತಪಟ್ಟಿದ್ದಾರೆ. ಸದ್ಯಕ್ಕೆ ಚಿರು ನಿವಾಸದಲ್ಲಿ ಅವರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದೆ. ಈಗಾಗಲೇ ಸಿನಿಮಾ ಗಣ್ಯರು, ಸ್ನೇಹಿತರು ಬಂದು ಚಿರಂಜೀವಿ ಅಂತಿಮ ದರ್ಶನ ಪಡೆದುಕೊಂಡಿದ್ದಾರೆ.

  • ಇಷ್ಟೊತ್ತಿಗೆ ಗುಡ್‍ನ್ಯೂಸ್ ಕೊಡ್ಬೇಕಿತ್ತು ಅಂತ ಪರಿಮಳ ನಾನು ಮಾತಾಡಿಕೊಂಡ್ವಿ: ಜಗ್ಗೇಶ್

    ಇಷ್ಟೊತ್ತಿಗೆ ಗುಡ್‍ನ್ಯೂಸ್ ಕೊಡ್ಬೇಕಿತ್ತು ಅಂತ ಪರಿಮಳ ನಾನು ಮಾತಾಡಿಕೊಂಡ್ವಿ: ಜಗ್ಗೇಶ್

    – ಮಲಗಿದ್ದ ನನಗೆ ಚಾಲಕ ವಿಷಯ ತಿಳಿಸಿದಾಗ ಹುಚ್ಚನಂತೆ ಅತ್ತುಬಿಟ್ಟೆ

    ಬೆಂಗಳೂರು: ಚಿರು ಮೇಘನಾಳನ್ನು ತುಂಬಾ ಇಷ್ಟ ಪಡುತ್ತಿದ್ದ. ಅವರ ಮದುವೆಗೆ ಪೋಷಕರನ್ನು ಒಪ್ಪಿಸಿ ನಾನೇ ಮದುವೆ ಮಾಡಿಸಿದ್ದೆ ಎಂದು ಜಗ್ಗೇಶ್, ಚಿರಂಜೀವಿ ಮದುವೆ ಮಾಡಿಸಿದ ಘಟನೆ ನೆನಪಿಸಿಕೊಂಡು ಕಂಬನಿ ಮಿಡಿದಿದ್ದಾರೆ.

    ನಟ ಜಗ್ಗೇಶ್ ಈ ಬಗ್ಗೆ ಟ್ವೀಟ್ ಮಾಡುವ ಮೂಲಕ ಚಿರಂಜೀವಿ ಮತ್ತು ಮೇಘನಾ ಮದುವೆಯ ಸಂದರ್ಭದಲ್ಲಿ ನಡೆದುದ್ದನ್ನು ಹಂಚಿಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಒಂದು ದಿನ ರಾತ್ರಿ 11ಗಂಟೆಗೆ ನನಗೆ ಕರೆಬಂತು. ನಾನು ಸಿಟ್ಟಿನಿಂದ ಯಾರು ಅಂದೆ?, ಆಗ ನಾನು ಮಾಮ ಚಿರು ಅಂದ. ಯಾರೋ ನನ್ನ ನಂಬರ್ ನಿನಗೆ ಕೊಟ್ಟಿದ್ದು ಅಂದೆ. ನಕ್ಕು ದಯವಿಟ್ಟು ಮಾಮ ಅದು ಬಿಡಿ ಅಂದ. ವಿಷಯ ನಾನು ಮೇಘನಾ ಮದುವೆ ಆಗಬೇಕು, ನಿಮ್ಮ ಆಶೀರ್ವಾದ ಬೇಕು. ಜೊತೆಗೆ ನೀವೇ ಅವಳ ಅಪ್ಪ ಅಮ್ಮನ ಜೊತೆ ಮಾತಾಡಬೇಕು ಎಂದನು.

    ಸುಂದರ್ ಮನೆಗೆ ಹೋಗಿ ಇದರ ಬಗ್ಗೆ ಮಾತಾಡಿ ನನ್ನ ಸ್ನೇಹಿತರಾದ ಜೋತಿಷಿ ಪ್ರಕಾಶ ಅಮ್ಮಣ್ಯರ ಬಳಿ ಇಬ್ಬರ ಜಾತಕ ಕೊಟ್ಟು ಚರ್ಚಿಸಿದೆ. ಆಗ ಅವರು “ಜಗ್ಗೇಶ್, ಅಷ್ಟಮಕುಜ ದೋಷ, ಅದಕ್ಕೆ ಕೆಲ ಪೂಜೆ ಮುಖ್ಯ. ಅದಮಾಡಿ ಮುಂದುವರೆಯಿರಿ” ಎಂದರು. ನಂತರ ಆ ಪೂಜೆ ಬಗ್ಗೆ ನನಗೆ ಮಾಹಿತಿ ಇಲ್ಲ. ಮದುವೆ ನಿಶ್ಚಯ ಆಯಿತು. ಗಣೇಶನ ಜೊತೆ ಒಂದು ಅತಿಥಿ ಪಾತ್ರ ಮಾಡುತ್ತಿದೆ. ಆ ಚಿತ್ರಿಕರಣ ಮೇಘನಾ ಮನೆ ಮುಂದೆಯೇ ಇತ್ತು. ಚಿತ್ರಿಕರಣ ಮುಗಿಸಿ ಅವರ ಮನೆಗೆ ಹೋಗಿ ಕಾಫಿ ಕುಡಿದು ಅವರ ಮದುವೆಯ ವಿಷಯ ಮಾತಾಡಿದೆ. ನಂತರ ಮದುವೆ ಫಿಕ್ಸ್ ಆಗಿ ಮೇಘನಾ ಹಾಗೂ ಚಿರು ಜೊತೆ ಮಾತಾಡಿ ಸಂತೋಷವಾಗಿ ಮನೆಗೆ ಬಂದು ನಾನು ಪರಿಮಳ ಈ ವಿಷಯ ಪ್ರಸ್ತಾಪ ಮಾಡಿದೆವು.

    ದೇವರ ದಯೆಯಿಂದ ಮದುವೆಯು ಮುಗಿಯಿತು. ನಂತರ ಚಿರು ಅನೇಕ ಬಾರಿ ಕರೆಮಾಡಿ “ಮಾಮ ದಯವಿಟ್ಟು ಅಜ್ಜಿಯ ಕೈ ರುಚಿ ಸವಿಯಲು ಮನೆಗೆ ಬನ್ನಿ” ಎಂದು ಕರೆಯುತ್ತಿದ್ದ. ನನ್ನದು ವಿಚಿತ್ರ ಜನ್ಮ, ಹೂಂ ಎನ್ನುತ್ತಿದ್ದೆ ಆದರೆ ಹೋಗಲಿಲ್ಲ. ಯಾಕೋ ಇಂದು ನಾನು ಪರಿಮಳ ಚಿರು ಬಗ್ಗೆ ಮಾತಾಡುತ್ತಾ “ಏನ್ ಹುಡುಗರೋ, ಮದುವೆ ಆದ ಮೇಲೆ ಯಾಕೆ ಗ್ಯಾಪ್? ಇಷ್ಟೊತ್ತಿಗೆ ಗುಡ್‍ನ್ಯೂಸ್ ಬೇಕಿತ್ತು” ಎಂದು ಮಾತಾಡಿಕೊಂಡೆವು ಎಂದರು.

    ಮಧ್ಯಾಹ್ನ ಊಟ ಮಾಡಿ ಮಲಗಿದೆ. ಚಾಲಕ ಪದ್ದು ಕರೆಮಾಡಿ, ಬಾಸ್  ಟಿವಿ ನೋಡಿದ್ರಾ? ಚಿರು ಹೋಗಿಬಿಟ್ಟಾ ಎಂದ. ಕೇಳಿ ಹುಚ್ಚನಂತೆ ಅತ್ತುಬಿಟ್ಟೆ. ಇಷ್ಟೇನಾ ಬದುಕು? ಇದಕ್ಕಾ ನಮ್ಮ ಹೋರಾಟ? ನಮ್ಮಂಥ ಹಿರಿಯರು ನಮ್ಮ ಕಣ್ಣ ಮುಂದಿನ ಕಿರಿಯರ ಸಾವು ನೋಡಬೇಕೆ? ಎಂಥ ದೌರ್ಭಾಗ್ಯ. ಶಂಕರ್ ನಾಗ್ ಇದೇ 39ನೇ ವಯಸ್ಸಿಗೆ ಕಾಲವಾದರು. ಆ ಸಾಲಿಗೆ ಚಿರು ಸೇರಿಬಿಟ್ಟನೆ? ಎಂದು ನೋವಿನಿಂದ ಹೇಳಿಕೊಂಡಿದ್ದಾರೆ.

    https://www.instagram.com/p/CBI-WYBs7fl/?igshid=1jcreel6jvr2m

    ಹುಟ್ಟಿಗೆ ಸಾವು ಖಚಿತ. ಆದರೆ ಇಷ್ಟು ಬೇಗವೇ? ಓ ದೇವರೆ ಈ ಸಾವು ನ್ಯಾಯವೆ ಎಂದು ದುಃಖದಿಂದ ಕಲಾಬಂಧುವಿಗೆ ವಿದಾಯ ಹೇಳಿದ್ದಾರೆ.

    ಭಾನುವಾರ ಚಿರಂಜೀವಿ ಅಂತಿಮ ದರ್ಶನ ಪಡೆದ ನಂತರ ಮಾತನಾಡಿದ್ದ ಜಗ್ಗೇಶ್, ಕಳೆದ ಎರಡು ದಿನಗಳ ಹಿಂದೆ ಅರ್ಜುನ್ ಸರ್ಜಾ ಅವರು ನನಗೆ ಕರೆ ಮಾಡಿದ್ದರು. ಆಗ ನಾವು ಇವರ ಬಗ್ಗೆ ಮಾತನಾಡಿದ್ದೇವು. ಅರ್ಜುನ್ ನಾವು ದಡ ಸೇರಿದ್ದೇವೆ. ಈಗ ಧ್ರುವ ಮತ್ತು ಚಿರು ಕೂಡ ಚೆನ್ನಾಗಿದ್ದಾರೆ ಎಂದು ಹೇಳಿದ್ದರು. ನೋಡಿದರೆ ಈಗ ಈ ರೀತಿಯ ವಿಚಾರ ಕೇಳಿ ಬಹಳ ಬೇಸರವಾಯ್ತು. ಈಗ ನನಗೆ ಚಿರು ಆತ್ಮಕ್ಕೆ ಶಾಂತಿಕೋರುವುದಕ್ಕೂ ಹಿಂಜರಿಕೆ ಆಗುತ್ತಿದೆ ಎಂದು ಜಗ್ಗೇಶ್ ದು:ಖ ವ್ಯಕ್ತಪಡಿಸಿದ್ದರು.

  • ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ 3 ಗೊಂಬೆಗಳು ಎಂಟ್ರಿ

    ವೈಲ್ಡ್ ಕಾರ್ಡ್ ಮೂಲಕ ಬಿಗ್ ಮನೆಗೆ 3 ಗೊಂಬೆಗಳು ಎಂಟ್ರಿ

    ಬೆಂಗಳೂರು: ಬಿಗ್ ಬಾಸ್ ಕಾರ್ಯಕ್ರಮದಲ್ಲಿ ಪ್ರತಿಬಾರಿ ವೈಲ್ಡ್ ಕಾರ್ಡ್ ಮೂಲಕ ಮನೆಗೆ ಹೊಸ ಸ್ಪರ್ಧಿಗಳು ಎಂಟ್ರಿ ಕೊಡುತ್ತಾರೆ. ಅದೇ ರೀತಿ ಈ ಬಾರಿಯೂ ಕೂಡ ವೈಲ್ಡ್ ಕಾರ್ಡ್ ಮೂಲಕ ಮೂವರು ನಟಿಯರು ಬಿಗ್ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ಬಿಗ್ ಬಾಸ್ ಸೀಸನ್ 6ರಲ್ಲಿ  ‘ವೈಲ್ಡ್ ಕಾರ್ಡ್’ ಮೂಲಕ ಮೂರು ಸ್ಪರ್ಧಿಗಳು ಎಂಟ್ರಿ ಕೊಟ್ಟಿದ್ದಾರೆ. ಮೊದಲಿಗೆ ಬಿಗ್ ಮನೆಯಲ್ಲಿ ಮೂರು ಗೊಂಬೆಗಳನ್ನಿಟ್ಟು ಬಳಿಕ ಆ ಮೂರು ಗೊಂಬೆಗಳಿಗೆ ಜೀವ ತುಂಬುವಂತಹ ಟಾಸ್ಕ್ ಮಾಡಿದ್ದಾರೆ. ಆಗ ಬಿಗ್ ಬಾಸ್ ಮನೆಯಲ್ಲಿ ‘ದಿ ವಿಲನ್’ ಸಿನಿಮಾದ ರಾವಣ ಹಾಡು ಬಂದಿದ್ದು, ಬಳಿಕ ನಟಿ ಮೇಘನಾ, ಜೀವಿತಾ ಹಾಗೂ ನಿವೇದಿತಾ ಗೌಡ ಮೂವರು ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

    ವೈಲ್ಡ್ ಕಾರ್ಡ್ ಮೂಲಕ ಬಂದಂತಹ ಮೂವರನ್ನು ಬಿಗ್ ಮನೆಯ ಸ್ಪರ್ಧಿಗಳು ಸ್ವಾಗತಿಸಿದ್ದಾರೆ. ನಿವೇದಿತಾ ಗೌಡ ಕಳೆದ ಬಾರಿಯ ಬಿಗ್ ಬಾಸ್ ಸ್ಪರ್ಧಿಯಾಗಿದ್ದು, ಜೀವಿತಾ ಅವರು ಒಬ್ಬ ಮಾಡೆಲ್ ಹಾಗೂ ನಟಿಯಾಗಿದ್ದಾರೆ. ಇದು ಬಿಟ್ಟು ಜೀವಿತಾ ಬಗ್ಗೆ ಅಷ್ಟೇನೂ ತಿಳಿದುಬಂದಿಲ್ಲ. ಇನ್ನೂ ಮೇಘನಾ ಅವರು ನಟಿಯಾಗಿದ್ದು, ಮೂಲತಃ ತೀರ್ಥಹಳ್ಳಿಯವರಾಗಿದ್ದಾರೆ.

    ನಟಿ ಮೇಘನಾ ಅವರು ಈಗಾಗಲೇ ಸಂಚಾರಿ ವಿಜಯ್ ಅವರ ಜೊತೆ ‘ಕೃಷ್ಣ ತುಳಸಿ’ ಸಿನಿಮಾದಲ್ಲಿ ಅಂಧೆಯ ಪಾತ್ರವನ್ನು ಮಾಡಿದ್ದಾರೆ. ಈಗ ನಟ ವಿಜಯ ಸೂರ್ಯ ಜೊತೆಗೆ ನಟಿಯಾಗಿ ಅಭಿನಯಿಸಿರುವ ‘ಕದ್ದುಮುಚ್ಚಿ’ ಹಾಗೂ ಚಿರಂಜೀವಿ ಸರ್ಜ ಜೊತೆಗಿನ ‘ಮಾರ್ತಾಂಡ’ ಸಿನಿಮಾ ಬಿಡುಗಡೆಯ ನಿರೀಕ್ಷೆಯಲ್ಲಿದ್ದಾರೆ. ಕನ್ನಡ ಮಾತ್ರವಲ್ಲದೇ ತೆಲುಗು ಸಿನಿಮಾಗಳಲ್ಲೂ ಅಭಿನಯಸಿದ್ದಾರೆ.

    ಬಿಗ್ ಬಾಸ್ ಸೀಸನ್ 5ರಲ್ಲಿ ನಿವೇದಿತಾ ಗೌಡ ಅವರು ಸ್ಪರ್ಧಿಯಾಗಿದ್ದು, ಈ ಬಾರಿ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟಿದ್ದಾರೆ. ಆದರೆ ನಿವೇದಿತಾ ಗೌಡ ಯಾಕೆ ಬಿಗ್ ಮನೆಗೆ ಮತ್ತೆ ಬಂದಿದ್ದಾರೆ ಎಂದು ಎಲ್ಲರಿಗೂ ಕುತೂಹಲ ತಂದಿದೆ. ಇತ್ತ ಮೇಘನಾ ಮತ್ತು ಜೀವಿತಾ ಇಬ್ಬರನ್ನು ಬಿಟ್ಟು ನಿವೇದಿತಾ ಗೌಡ ಬಿಗ್ ಮನೆಯಿಂದ ವಾಪಸ್ ಹೋಗುವ ಸಾಧ್ಯತೆ ಇದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv ಮತ್ತು Live  ವೀಕ್ಷಿಸಲು  ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್  ಮಾಡಿ: play.google.com/publictv

  • ನೇಣಿಗೆ ಶರಣಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿನಿಯರಿಂದಲೇ ರ‍್ಯಾಗಿಂಗ್: ವಿಡಿಯೋ ನೋಡಿ

    ನೇಣಿಗೆ ಶರಣಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಲೆ ವಿದ್ಯಾರ್ಥಿನಿಯರಿಂದಲೇ ರ‍್ಯಾಗಿಂಗ್: ವಿಡಿಯೋ ನೋಡಿ

    ಬೆಂಗಳೂರು: ಆತ್ಮಹತ್ಯೆಗೆ ಶರಣಾಗಿದ್ದ ಎಂಜಿನಿಯರಿಂಗ್ ವಿದ್ಯಾರ್ಥಿನಿ ಮೇಘನಾ ಮೇಲೆ ವಿದ್ಯಾರ್ಥಿನಿಯರು ರ‍್ಯಾಗಿಂಗ್ ನಡೆಸುತ್ತಿರುವ ವಿಡಿಯೋ ಈಗ ಬಿಡುಗಡೆಯಾಗಿದೆ.

    ಕುಮಾರಸ್ವಾಮಿ ಲೇಔಟ್ ನಲ್ಲಿರುವ ದಯಾನಂದಸಾಗರ ಕಾಲೇಜಿನ 2ನೇ ಸೆಮಿಸ್ಟರ್ ಸಿವಿಲ್ ವಿದ್ಯಾರ್ಥಿನಿ ಮೇಘನಾ ಬುಧವಾರ ರಾಜರಾಜೇಶ್ವರಿ ನಗರದ ಚನ್ನಸಂದ್ರದ ಶಬರಿ ಅಪಾರ್ಟ್ ಮೆಂಟ್ ನಲ್ಲಿರುವ ನಿವಾಸದಲ್ಲಿ ಆತ್ಮಹತ್ಯೆಗೆ ಶರಣಾಗಿದ್ದಳು. ಈ ವೇಳೆ ಪೋಷಕರು ರ‍್ಯಾಗಿಂಗ್ ನಡೆದ ಹಿನ್ನೆಲೆಯಲ್ಲಿ ಆಕೆ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ಆರೋಪಿಸಿದ್ದರು. ಈ ಆರೋಪಕ್ಕೆ ಪೂರಕ ಎಂಬಂತೆ ಎರಡು ವಿಡಿಯೋಗಳು ಈಗ ಲಭ್ಯವಾಗಿದೆ.

    ಈ ದೃಶ್ಯಗಳಲ್ಲಿ ಇತರೇ ವಿದ್ಯಾರ್ಥಿಗಳು ಮೇಘನಾ ಮೇಲೆ ರ‍್ಯಾಗಿಂಗ್ ಮಾಡುತ್ತಿರುವುದು ಸ್ಪಷ್ಟವಾಗಿದೆ. ದೃಶ್ಯಗಳಲ್ಲಿ ಕೆಲ ವಿದ್ಯಾರ್ಥಿಗಳು ಮೇಘನಾಳನ್ನು ಅವಾಚ್ಯ ಶಬ್ದಗಳಿಂದ ನಿಂದಿಸಿದ್ದಾರೆ. ಅಲ್ಲದೇ ಸಹಪಾಠಿ ಮೇಘನಾ ಮೇಲೆ ಹಲ್ಲೆ ಮಾಡಲು ಸಹ ಮುಂದಾಗಿದ್ದ ದೃಶ್ಯವು ಸೆರೆಯಾಗಿದೆ.

    ಕಳೆದ ಕೆಲ ದಿನಗಳ ಹಿಂದೆ ಕಾಲೇಜಿನಲ್ಲಿ ನಡೆದ ಎಲೆಕ್ಷನ್ ವಿಚಾರವಾಗಿ ತರಗತಿಯ ಇತರೇ ವಿದ್ಯಾರ್ಥಿಗಳು ಮೇಘನಾ ಮೇಲೆ ರ‍್ಯಾಗಿಂಗ್ ಮಾಡುತ್ತಿದ್ದರು. ಈ ಕುರಿತು ಕಾಲೇಜಿನ ಎಚ್‍ಒಡಿ ಗೆ ದೂರು ನೀಡಲಾಗಿತ್ತು. ಆದರೆ ಮೇಘನಾ ಸಿಇಟಿ ಮೂಲಕ ಪ್ರವೇಶ ಪಡೆದ ಕಾರಣ ಆಕೆಯ ದೂರನ್ನು ಪರಿಗಣಿಸಲಿಲ್ಲ ಎನ್ನುವ ಮಾತು ಈಗ ಕೇಳಿ ಬಂದಿದೆ. ಇದನ್ನೂ ಓದಿ : ಕಣ್ಣು ದಾನ ಮಾಡಿ ಸಾವಿನಲ್ಲೂ ಸಾರ್ಥಕತೆ ಮೆರೆದ ಮೇಘನಾ ಪೋಷಕರು

    ಪ್ರಸ್ತುತ ವಿಡಿಯೋ ಲಭ್ಯವಾಗಿರುವುದರಿಂದ ಮೇಘನಾ ಸಾವಿಗೆ ಪ್ರೇರಣೆ ನೀಡುವ ಕುರಿತು ಪೊಲೀಸರು ತನಿಖೆ ನಡೆಸುವ ಸಾಧ್ಯತೆಗಳಿದೆ.

    https://www.youtube.com/watch?v=_98DaNwldQU