ಬೆಂಗಳೂರು: ಜ್ಯೂನಿಯರ್ ಚಿರು ಹೇಗಿದ್ದಾನೆ ಎಂಬ ಅಭಿಮಾನಿಗಳ ಕಾತರದ ಪ್ರಶ್ನೆಗೆ ಪ್ರೇಮಿಗಳ ದಿನಾಚರಣೆಯಂದು ನಟಿ ಮೇಘನಾ ಸರ್ಜಾ ಫೋಟೋ ಬಿಡುಗಡೆ ಮಾಡುವ ಮೂಲಕ ಸಿಹಿ ಸುದ್ದಿ ನೀಡಿದ್ದಾರೆ.

ಪ್ರೇಮಿಗಳ ದಿನದಂದೇ ಸ್ಯಾಂಡಲ್‍ವುಡ್ ನಟ ದಿ. ಚಿರಂಜೀವಿ ಸರ್ಜಾ ಹಾಗೂ ನಟಿ ಮೇಘನಾ ರಾಜ್ ದಂಪತಿಯ ಮುದ್ದಿನ ಪುತ್ರ ತಮ್ಮ ಅಭಿಮಾನಿಗಳಿಗೆ ‘ಹಲೋ’ ಹೇಳಿದ್ದಾನೆ.

ಈ ಸಂಬಂಧ ನಟಿ ಮೇಘನಾ ಅವರು ಇನ್‌ಸ್ಟಾಗ್ರಾಮನ್‌ನಲ್ಲಿ ಕಿರು ವಿಡಿಯೋ ಅಪ್ಲೋಡ್ ಮಾಡಿ ಜ್ಯೂನಿಯರ್ ಚಿರು ಮುಖವನ್ನು ಅಭಿಮಾನಿಗಳಿಗೆ ತೋರಿಸಿದ್ದಾರೆ. 2017ರ ಅಕ್ಟೋಬರ್ 22 ರಂದು ಚಿರು ಜೊತೆ ನಿಶ್ಚಿತಾರ್ಥ ಮಾಡಿಕೊಂಡ ವಿಡಿಯೋದ ಜೊತೆ ಮಗುವಿನ ವಿಡಿಯೋವನ್ನು ಮೇಘನಾ ತೋರಿಸಿದ್ದಾರೆ. ಜ್ಯೂನಿಯರ್ ಚಿರು ಮಲಗಿಕೊಂಡು ನಗುತ್ತಿರುವ ಫೋಟೋ ಮತ್ತು ಚಿರಂಜೀವಿ ಸರ್ಜಾಗೆ ಮಗುವನ್ನು ತೋರಿಸುವ ಫೋಟೋ ಈ ವಿಡಿಯೋದಲ್ಲಿದೆ.

ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಹಾಕಿದ್ದ ಮೇಘನಾ, ಫೆಬ್ರವರಿ 12ರಂದು ರೋಮಾಂಚನಕಾರಿ ಸುದ್ದಿಯೊಂದು ಹೊರ ಬೀಳಲಿದೆ. ಆ ದಿನಕ್ಕಾಗಿ ನಾನು ಕೂಡ ಕಾಯುತ್ತಿದ್ದೇನೆ ಎಂದು ಬರೆದುಕೊಂಡಿದ್ದರು. ಆದರೆ ಸಮಯ ತಿಳಿಸಿರಲಿಲ್ಲ. ಬಳಿಕ ಫೆ.13 ರಂದು ಮತ್ತೊಂದು ಪೋಸ್ಟ್ ಹಾಕಿ ರಾತ್ರಿ 12 ಗಂಟೆಗೆ ಜ್ಯೂನಿಯರ್ ಚಿರುವನ್ನು ನಿಮಗೆ ಪರಿಚಯ ಮಾಡುತ್ತೇನೆ ಎಂದು ಮತ್ತೊಂದು ಪೋಸ್ಟ್ ಹಾಕಿದ್ದರು. ಇಂದು ರಾತ್ರಿ 12 ಗಂಟೆಗೆ ನಮ್ಮ ಪ್ರೀತಿಯ ಸಂಕೇತವಾಗಿರುವ ನನ್ನ ಮಗನನ್ನು ಪರಿಚಯಿಸಲು ಚಿರು ಮತ್ತು ನಾನು ಹೆಮ್ಮೆ ಪಡುತ್ತೇವೆ ಎಂದು ಬರೆದಿದ್ದರು.

2018ರ ಮೇ 26 ರಂದು ಚಿರು ಮತ್ತು ಮೇಘನಾ ಸರ್ಜಾ ಪ್ರೀತಿಸಿ ಮದುವೆಯಾಗಿದ್ದರು. 2020 ಅಕ್ಟೋಬರ್ 22 ರಂದು ಮೇಘನಾ ಸರ್ಜಾ ಬೆಂಗಳೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಗುವಿಗೆ ಜನ್ಮ ನೀಡಿದ್ದರು.
View this post on Instagram


ಇಂದು ನಡೆದ ತೊಟ್ಟಿಲು ಶಾಶ್ತ್ರದ ಸಂಭ್ರಮದ ವಿಚಾರವಾಗಿ ಸುದ್ದಿಗಾರರೊಂದಿಗೆ ಮಾತನಾಡಿದ ಮೇಘನಾ, ಒಂದೇ ಮಗು ಎಂದು ಹೇಳಿ ಅವಳಿ ಮಕ್ಕಳು ಹುಟ್ಟಿರುವುದನ್ನು ಕೇಳಿದ್ದೆನೆ. ನಾನು ಕೂಡಾ ನನಗೆ ಅವಳಿ ಮಕ್ಕಳು ಹುಟ್ಟುತ್ತಾರೆ ಎಂದುಕೊಂಡಿದ್ದೆ. ನಾನು ಡಾಕ್ಟರ್ ಬಳಿ ನನಗೆ ಅವಳಿ ಮಕ್ಕಳು ಆಗುತ್ತಾ ಎಂದು ವಿಚಾರಿಸಿದ್ದೆ ಎಂದಿದ್ದಾರೆ.










