Tag: ಮೇಘನಾ ಗಾಂವ್ಕರ್

  • ಮಧ್ಯರಾತ್ರಿಯಲ್ಲಿ ಸಿಕ್ಕ ರಿಯಲ್ ಲೈಫ್ ಹೀರೋನನ್ನು ಪರಿಚಯಿಸಿದ ನಟಿ ಮೇಘನಾ

    ಮಧ್ಯರಾತ್ರಿಯಲ್ಲಿ ಸಿಕ್ಕ ರಿಯಲ್ ಲೈಫ್ ಹೀರೋನನ್ನು ಪರಿಚಯಿಸಿದ ನಟಿ ಮೇಘನಾ

    ಬೆಂಗಳೂರು: ಸ್ಯಾಂಡಲ್‍ವುಡ್ ನಟಿ ಮೇಘನಾ ಗಾಂವ್ಕರ್ ಮಧ್ಯರಾತ್ರಿ ಸಿಕ್ಕ ತಮ್ಮ ರಿಯಲ್ ಲೈಫ್ ಹೀರೋನನ್ನು ಪರಿಚಯಿಸಿದ್ದಾರೆ. ಮೇಘನಾ ಆ ವ್ಯಕ್ತಿಯ ಫೋಟೋವನ್ನು ತಮ್ಮ ಫೇಸ್‍ಬುಕ್‍ನಲ್ಲಿ ಹಂಚಿಕೊಂಡು ನಿಜ ಜೀವನದ ಹೀರೋ ಎಂದು ಬರೆದುಕೊಂಡಿದ್ದಾರೆ.

    ಪೋಸ್ಟ್ ನಲ್ಲಿ ಏನಿದೆ?
    ಅಣ್ಣನನ್ನು ಮೀಟ್ ಮಾಡಿ. (ಇದು ಅವರ ನಿಜವಾದ ಹೆಸರು). ಅಣ್ಣ ನಿಜ ಜೀವನದ ಹೀರೋ.

    ಒಂದು ರಾತ್ರಿ ನಾನು ನನ್ನ ಕಾರನ್ನು ಪಾರ್ಕ್ ಮಾಡಿ ಚಿತ್ರ ನೋಡಲು ಥಿಯೇಟರ್ ಗೆ ಹೋಗಿದೆ. ನಾನು ಹಿಂತಿರುಗಿ ಬಂದಾಗ ತುಂಬ ಕತ್ತಲಾಗಿತ್ತು. ಅಲ್ಲದೆ ಅಣ್ಣ ನನ್ನ ಕಾರಿನ ಬಳಿ ನನಗಾಗಿ ಕಾಯುತ್ತಿದ್ದರು. ನಾನು ಪಾರ್ಕಿಂಗ್ ಶುಲ್ಕ ಕಟ್ಟಿದ್ದೇನೆ ಆದರೂ ಇವರು ಯಾಕೆ ಇಲ್ಲಿ ನಿಂತಿದ್ದಾರೆ ಎಂದು ಯೋಚಿಸುತ್ತಿದ್ದೆ. ಬಳಿಕ ನಾನು ನನ್ನ ಕಾರಿನ ಕಿಟಕಿಯನ್ನು ಅರ್ಧ ತೆರೆದಿರುವುದನ್ನು ಗಮನಿಸಿದೆ. ನಾನು ಕಾರಿನ ಕಿಟಕಿ ಅರ್ಧ ತೆರೆದಿದ್ದಾಗ ಕೆಲವರು ಆ ಸಮಯವನ್ನು ಯಾರೂ ಲಾಭ ಪಡೆಯಬಾರದು ಎಂದು ಈ ವ್ಯಕ್ತಿ ನನಗಾಗಿ ನನ್ನ ಕಾರಿನ ಬಳಿ ಸುಮಾರು 3-4 ಗಂಟೆಯವರೆಗೂ ಕಾಯುತ್ತಿದ್ದರು.

    ನಾನು ಈ ವ್ಯಕ್ತಿಗೆ ಧನ್ಯವಾದ ತಿಳಿಸಿ ಅವರು ಮಾಡಿದ ಕೆಲಸಕ್ಕೆ ಹಣ ನೀಡಲು ಮುಂದಾದೆ. ಆದರೆ ಅವರು ಹಣ ತೆಗೆದುಕೊಳ್ಳಲು ನಿರಾಕರಿಸಿದರು. ನನ್ನ ದೇಶ ಇಂತಹ ವ್ಯಕ್ತಿಗಳಿಂದ ಕೂಡಿದೆ. ಇವರಲ್ಲಿ ಮಾನವಿಯತೆ, ಘನತೆ ಹಾಗೂ ಒಳ್ಳೆತನ ಇದೆ. ಈ ಘಟನೆ ನಡೆದು ಈಗ ಮೂರು ವರ್ಷವಾಗಿದೆ. ನಾನು ಈಗಲೂ ಆ ಸ್ಥಳಕ್ಕೆ ಹೋದಾಗ ಅದೇ ಜಾಗದಲ್ಲೇ ಕಾರು ಪಾರ್ಕ್ ಮಾಡುತ್ತೇನೆ. ಕಾರು ಪಾರ್ಕ್ ಮಾಡಿದ್ದಾಗ ಕಿಟಕಿ ಕ್ಲೋಸ್ ಇದೆಯಾ ಎಂಬುದನ್ನು ಚೆಕ್ ಮಾಡುತ್ತೇನೆ.

    ಇದು ಸಣ್ಣ ವಿಷಯ ಎಂದು ಎಲ್ಲರಿಗೂ ಅನಿಸುತ್ತದೆ. ಆದರೆ ಈ ವ್ಯಕ್ತಿಯ ಒಳ್ಳೆಯ ಹೃದಯ ನೋಡಿದರೆ, ಈ ಜಗತ್ತಿನಲ್ಲಿ ಏನೂ ಬಯಸದೇ ಒಳ್ಳೆಯ ಜನರು ಇದ್ದಾರೆ ಎಂದು ಅನಿಸುತ್ತದೆ. ನಾವಿಬ್ಬರು ಈಗ ಸ್ನೇಹಿತರಾಗಿದ್ದೇವೆ. ಇಬ್ಬರು ಚಹಾ ಕುಡಿಯಲು ಹೋಗುತ್ತೇವೆ ಹಾಗೂ ಪಾರ್ಕಿಂಗ್‍ಗಾಗಿ ಅಲ್ಲಿ ನಿಗದಿ ಪಡಿಸಿದ ಬೆಲೆಯನ್ನು ನಾನು ನೀಡುತ್ತೇನೆ. ನನಗೆ ಈ ವ್ಯಕ್ತಿ ಪರಿಚಯವಿದೆ ಎಂಬುದು ನನಗೆ ಹೆಮ್ಮೆ ವಿಷಯ.

    ಕಳೆದ ವಾರ ಆ ವ್ಯಕ್ತಿ ಜೊತೆ ಫೋಟೋ ತೆಗೆದುಕೊಳ್ಳೋಣ ಎಂದು ಕೇಳಿದೆ. ಆಗ ಅವರು ಸರಿ ಎಂದು ಹೇಳಿದರು. ನಾನು ಮೊದಲ ಬಾರಿಗೆ ಒಬ್ಬ ವ್ಯಕ್ತಿ ಜೊತೆ ಫೋಟೋ ಕೇಳಿದರೆ ಅದು ಇವರ ಜೊತೆಗೆ ಎಂದು ಮೇಘನಾ ತಮ್ಮ ಫೇಸ್‍ಬುಕ್‍ನಲ್ಲಿ ಪೋಸ್ಟ್ ಮಾಡಿದ್ದಾರೆ.

  • ಕಾಳಿದಾಸನ ಸಂಗಾತಿ ಮೇಘನಾ ಗಾಂವ್ಕರ್!

    ಕಾಳಿದಾಸನ ಸಂಗಾತಿ ಮೇಘನಾ ಗಾಂವ್ಕರ್!

    ಬೆಂಗಳೂರು: ನಟಿ ಮೇಘನಾ ಗಾಂವ್ಕರ್ ಎರಡು ವರ್ಷದಿಂದೀಚೆಗೆ ಚಿತ್ರರಂಗದಿಂದ ನಾಪತ್ತೆಯಾದಂತಿದ್ದರು. ಇದೀಗ ಈ ಸುದೀರ್ಘಾವಧಿಯ ನಂತರ ವಿಶಿಷ್ಟವಾದೊಂದು ಚಿತ್ರದ ಮೂಲಕ ಅವರು ವಾಪಾಸಾಗಿದ್ದಾರೆ. ಈ ಚಿತ್ರದಲ್ಲಿ ಇದೇ ಮೊದಲ ಬಾರಿಗೆ ಮೇಘನಾ ನವರಸ ನಾಯಕ ಜಗ್ಗೇಶ್ ಅವರಿಗೆ ನಾಯಕಿಯಾಗಿದ್ದಾರೆ!

    ಈ ಚಿತ್ರದ ಹೆಸರು ಕಾಳಿದಾಸ ಕನ್ನಡ ಮೇಷ್ಟ್ರು. ಇದನ್ನು ಖ್ಯಾತ ಗೀತ ಸಾಹಿತಿ ಕವಿರಾಜ್ ನಿರ್ದೇಶನ ಮಾಡಲಿದ್ದಾರೆ. ಬದುಕಿಗೆ ಹತ್ತಿರಾದ ಕಥೆಯೊಂದಕ್ಕೆ ಕವಿರಾಜ್ ಕಮರ್ಶಿಯಲ್ ಚೌಕಟ್ಟು ನೀಡಲು ಅಣಿಯಾಗಿದ್ದಾರೆ. ಈ ಚಿತ್ರಕ್ಕೆ ಮೇಘನಾ ಗಾಂವ್ಕರ್ ಅವರನ್ನು ನಾಯಕಿಯಾಗಿ ಆಯ್ಕೆ ಮಾಡಿದ್ದಾರೆ.

    ಈ ಹಿಂದೆ 8 ಎಂಎಂ ಚಿತ್ರದ ಮೂಲಕ ಜಗ್ಗೇಶ್ ಭಿನ್ನವಾದ ಪಾತ್ರದಲ್ಲಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿಯೂ ಕೂಡಾ ವಿಶೇಷವಾದ ಪಾತ್ರವನ್ನು ಕವಿರಾಜ್ ಸೃಷ್ಟಿ ಮಾಡಿದ್ದಾರಂತೆ. ಮದುವೆಯ ಮಮತೆಯ ಕರೆಯೋಲೆ ಚಿತ್ರದ ನಂತರ ಈ ಕಥೆ ರಚನೆಯಲ್ಲಿ ತೊಡಗಿಕೊಂಡಿದ್ದ ಕವಿರಾಜ್ ಇದೀಗ ಹೊಸಾ ಹುರುಪಿನೊಂದಿಗೆ ಮತ್ತೆ ಆಗಮಿಸಿದ್ದಾರೆ.

    ಮೇಘನಾ ಗಾಂವ್ಕರ್ ಕೂಡಾ ಎರಡು ವರ್ಷದಿಂದ ಯಾವ ಚಿತ್ರದಲ್ಲಿಯೂ ನಟಿಸಿರಲಿಲ್ಲ. ಅವರ ಪಾತ್ರವೂ ಈ ಚಿತ್ರದಲ್ಲಿ ವಿಶೇಷವಾಗಿದೆಯಂತೆ. ಈ ಮೂಲಕ ಮತ್ತೆ ವಾಪಾಸಾಗುತ್ತಿರೋದರ ಬಗ್ಗೆ ಮೇಘನಾ ಕೂಡಾ ಖುಷಿಗೊಂಡಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಲವ್ಲಿ ದಂಪತಿಯ ಫೋಟೋ ಕ್ಲಿಕ್ಕಿಸಿದ ಮಗಳು

    ಲವ್ಲಿ ದಂಪತಿಯ ಫೋಟೋ ಕ್ಲಿಕ್ಕಿಸಿದ ಮಗಳು

    ಬೆಂಗಳೂರು: ಇತ್ತೀಚೆಗೆ ನಟ ಸುದೀಪ್ ಅವರು ತನ್ನ ಮಗಳು ಮತ್ತು ಪತ್ನಿ ಪ್ರಿಯಾ ಸುದೀಪ್ ಜೊತೆ ವಿದೇಶಕ್ಕೆ ಹೋಗಿದ್ದರು. ಈಗ ಈ ದಂಪತಿಯ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ.

    ಪತ್ನಿ ಪ್ರಿಯಾ ಹೆಗಲ ಮೇಲೆ ನಟ ಸುದೀಪ್ ಒರಗಿಕೊಂಡು ಕುಳಿತಿರುವ ಫೋಟೋ ಸಾಮಾಜಿಕ ಜಾಲತಾಣಗಲ್ಲಿ ವೈರಲ್ ಆಗಿದೆ. ಈ ಫೋಟೋ ನೋಡಿದರೆ ಸುದೀಪ್ ದಂಪತಿ ಹೋಟೆಲ್ ಇರುವುದನ್ನು ಕಾಣಬಹುದು. ಈ ಫೋಟೋವನ್ನು ನಟಿ ಮೇಘನಾ ಗಾಂವ್ಕರ್ ಅವರು ತಮ್ಮ ಟ್ವೀಟ್ ನಲ್ಲಿ ಅಪ್ಲೋಡ್ ಮಾಡಿದ್ದಾರೆ.

    ಮೇಘನಾ ಅವರು ಫೋಟೋ ಅಪ್ಲೋಡ್ ಮಾಡಿ, ಕಳೆದ ಕೆಲವು ದಿನಗಳಿಂದ ನನ್ನ ಇನ್ ಸ್ಟಾಗ್ರಾಂನಲ್ಲಿ ಅತ್ಯದ್ಭುತವಾದ ಫೋಟೋ ಇದೆ. ಈ ಫೋಟೋವನ್ನು ನಾನು ಶೇರ್ ಮಾಡಿಕೊಳ್ಳಲು ಇಷ್ಟಪಡುತ್ತೇನೆ. ಏಕೆಂದರೆ ಈ ಫೋಟೋ ನೋಡಿದಾಗ ನನ್ನ ಮುಖದ ಮೇಲೆ ನಗು ಬರುತ್ತದೆ” ಎಂದು ಬರೆದುಕೊಂಡಿದ್ದಾರೆ.

    ಮೇಘನಾ ಅವರು ಮಾಡಿದ್ದ ಟ್ವೀಟ್ ಪ್ರಿಯಾ ಸುದೀಪ್ ಅವರು, ಜಾರ್ಜಿಯಾದ ಟಿಬಿಲಿಸಿಯಲ್ಲಿ ಈ ಫೋಟೋವನ್ನು ಸಾನ್ವಿ ತೆಗೆದಿದ್ದಾಳೆ. ಧನ್ಯವಾದಗಳು ಮೇಘನಾ ಎಂದು ರೀಟ್ವೀಟ್ ಮಾಡಿದ್ದಾರೆ.

    ಇತ್ತೀಚೆಗೆ ಸುದೀಪ್ ಮತ್ತು ಪ್ರಿಯಾ ಅವರ ವಿವಾಹ ವಾರ್ಷಿಕೋತ್ಸವ ಇತ್ತು. ಅಂದು ಕೂಡ ಇವರಿಬ್ಬರ ಜೋಡಿ ಫೋಟೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ರಾಜಕಾರಣಕ್ಕಿಳೀತಾರಾ ಮೇಘನಾ ಗಾಂವ್ಕರ್?

    ರಾಜಕಾರಣಕ್ಕಿಳೀತಾರಾ ಮೇಘನಾ ಗಾಂವ್ಕರ್?

    ಸಿನಿಮಾದಿಂದ ರಾಜಕಾರಣಕ್ಕೆ ಜಿಗಿಯೋದು ಕನ್ನಡ ಮಾತ್ರವಲ್ಲದೇ ಬೇರೆ ಭಾಷೆಗಳಲ್ಲಿಯೂ ನಡೆದುಕೊಂಡು ಬಂದಿರೋ ಸಾಮಾನ್ಯ ಪ್ರಕ್ರಿಯೆ. ನಟಿ ಮೇಘನಾ ಗಾಂವ್ಕರ್ ಕೂಡಾ ಅದೇ ಹಾದಿಯಲ್ಲಿದ್ದಾರಾ ಎಂಬ ಪ್ರಶ್ನೆಯೊಂದು ಇದೀಗ ಅವರ ಅಭಿಮಾನಿ ವಲಯವನ್ನು ಕಾಡುತ್ತಿದೆ. ಅದಕ್ಕೆ ಕಾರಣವಾಗಿರೋದು ಅವರೇ ಕೊಟ್ಟ ಒಂದು ಸುಳಿವು!

    ಮೇಘನಾ ಅವರ ಅಜ್ಜಿ ಮಲ್ಲಮ್ಮ ಇತ್ತೀಚೆಗಷ್ಟೇ ಕಲಬುರಗಿಯ ಮೇಯರ್ ಆಗಿ ಆಯ್ಕೆಯಾಗಿದ್ದಾರೆ. ಈ ಸಂಭ್ರಮವನ್ನು ಟ್ವಿಟ್ಟರ್ ಮೂಲಕ ಮೇಘನಾ ಹಂಚಿಕೊಂಡಿದ್ದಾರೆ. ಈ ಹಿನ್ನೆಲೆಯಲ್ಲಿಯೇ ಅವರೂ ಕೂಡಾ ಅಜ್ಜಿಯಿಂದ ಸ್ಫೂರ್ತಿಗೊಂಡು ರಾಜಕಾರಣದತ್ತ ವಾಲಿಕೊಂಡಿರೋ ಸುಳಿವನ್ನೂ ಕೊಟ್ಟಿದ್ದಾರೆ.

    ಮೇಘನಾ ತನ್ನ ಅಜ್ಜಿ ಮೇಯರ್ ಆದ ಖುಷಿಯನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದರಲ್ಲಾ? ಅದಕ್ಕೆ ಪ್ರತಿಕ್ರಿಯಿಸಿದ ಪತ್ರಕರ್ತೆಯೊಬ್ಬರು `ನೀವೂ ರಾಜಕೀಯಕ್ಕೆ ಎಂಟ್ರಿ ಕೊಡಿ. ಅಲ್ಲಿ ಬುದ್ಧಿವಂತರ ಅಭಾವವಿದೆ’ ಅಂತ ಕಮೆಂಟ್ ಮಾಡಿದ್ದಾರೆ. ಅದಕ್ಕೆ ಪ್ರತಿಕ್ರಿಯೆ ನೀಡಿರುವ ಮೇಘನಾ ರಾಜಕೀಯದ ಬಗ್ಗೆ ಬಾಲ್ಯದಿಂದಲೂ ಆಸಕ್ತಿ ಇದೆ. ಮುಂದೇನಾಗುತ್ತೋ ನೋಡೋಣ ಎಂಬರ್ಥದಲ್ಲಿ ಉತ್ತರ ಕೊಟ್ಟಿದ್ದಾರೆ.

    ಇದುವೇ ಮುಂದಿನ ದಿನಗಳಲ್ಲಿ ಮೇಘನಾ ರಾಜಕೀಯದ ದಾರಿ ಹಿಡಿಯುವ ಮುನ್ಸೂಚನೆಯನ್ನೂ ರವಾನಿಸಿದೆ. ಮೇಘನಾ ನಟಿಸಿದ್ದು ಬೆರಳೆಣಿಕೆಯಷ್ಟು ಚಿತ್ರಗಳಲ್ಲಿಯೇ ಆದರೂ ಪ್ರೇಕ್ಷಕರ ಮನಸಲ್ಲುಳಿಯುವಂಥಾ ಪಾತ್ರಗಳನ್ನು ಮಾಡಿದ್ದಾರೆ. ಆದರೆ ಅದೇಕೋ ಇತ್ತೀಚೆಗೆ ಅವರು ಯಾವ ಚಿತ್ರಗಳಲ್ಲಿಯೂ ನಟಿಸಿಲ್ಲ. ಈ ಅವಧಿಯನ್ನವರು ರಾಜಕೀಯ ಎಂಟ್ರಿಗೆ ಪ್ಲಾನು ಮಾಡಲು ಮೀಸಲಿಟ್ಟಿದ್ದಾರಾ ಎಂಬುದಕ್ಕೆ ಕಾಲವೇ ಸ್ಪಷ್ಟನೆ ಕೊಡಲಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಒಂದೇ ಗಂಟೆಯಲ್ಲಿ ಹರಾಜಾದ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ

    ಒಂದೇ ಗಂಟೆಯಲ್ಲಿ ಹರಾಜಾದ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ

    ಬೆಂಗಳೂರು: ಸ್ಯಾಂಡಲ್‍ವುಡ್‍ನಲ್ಲಿ ಫಸ್ಟ್ ಟೈಂ ನಾಯಕಿಯರೆಲ್ಲ ಒಟ್ಟಿಗೆ ಸೇರಿ ತಮ್ಮ ಬಟ್ಟೆಗಳನ್ನ ಹರಾಜು ಮಾಡುವ ಕಾರ್ಯಕ್ರಮ ಆಯೋಜಿಸಿ ಅದರಿಂದ ಬಂದ ಹಣವನ್ನು ಉತ್ತಮ ಕಾರ್ಯಕ್ಕಾಗಿ ವಿನಿಯೋಗಿಸುವ ಕಾರ್ಯಕ್ರಮಕ್ಕೆ ಭರ್ಜರಿ ಪ್ರತಿಕ್ರಿಯೆ ಸಿಕ್ಕಿದೆ.

    `ದಿ ವ್ಯಾನಿಟಿ ಟ್ರಂಕ್ ಸೇಲ್’ ಹೆಸರಿನಲ್ಲಿ ಸ್ಯಾಂಡಲ್‍ವುಡ್ ನಾಯಕಿಯರ ಬೆಲೆ ಬಾಳುವ ಉಡುಗೆಗಳು ಹರಾಜು ಮಾಡಲಾಯಿತು. ಇಂದು ಬೆಳಗ್ಗೆ 12 ಗಂಟೆಯಿಂದ ಸಂಜೆ 5 ಗಂಟೆ ಬೆಂಗಳೂರಿನ ರೆಸಿಡೆನ್ಸಿ ರಸ್ತೆಯ ಬಿ ಹೈವ್ ನಲ್ಲಿ ಹರಾಜು ಪ್ರಕ್ರಿಯೆ ನಡೆಸುವ ಯೋಜನೆ ರೂಪಿಸಲಾಗಿತ್ತು. ಆದರೆ ಹರಾಜು ಪ್ರಕ್ರಿಯೆ ಆರಂಭವಾಗುತ್ತಿದಂತೆ ಕೇವಲ ಒಂದು ಗಂಟೆಯಲ್ಲಿ ಎಲ್ಲ ಬಟ್ಟೆಗಳು ಮಾರಾಟವಾಗಿದೆ. ಕೇವಲ ಒಂದು ಗಂಟೆಯಲ್ಲಿ ಸುಮಾರು 80 ಸಾವಿರ ಹಣ ಕಲೆಕ್ಷನ್ ಆಗಿದೆ.

    ಶೃತಿ ಹರಿಹರನ್ ಐಡಿಯಾ: ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೆ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.

    ಎನ್‍ಜಿಒಗೆ ಹಣ: ಶೃತಿ ಹರಿಹರನ್ ಯೋಚನೆಯಿಂದಾಗಿ “ದಿ ವ್ಯಾನಿಟಿ ಟ್ರಂಕ್ ಸೇಲ್’ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ.

    ಯಾರೆಲ್ಲ ಕೈಜೋಡಿಸಿದ್ದರು?: ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡ, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವಾತ್ಸ, ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

  • ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

    ಹರಾಜಿಗಿದೆ ಸ್ಯಾಂಡಲ್‍ವುಡ್ ನಟಿಯರ ಬಟ್ಟೆ: ಖರೀದಿ ಹೇಗೆ?

    ಬೆಂಗಳೂರು: ಸ್ಯಾಂಡ್‍ಲ್‍ವುಡ್ ಮಹಿಳಾ ಅಭಿಮಾನಿಗಳಿಗೆ ಗುಡ್ ನ್ಯೂಸ್. ಬಹಳಷ್ಟು ಮಂದಿ ನಟಿಯರಿಗೆ ಅವರದ್ದೇ ಆದ ಮಹಿಳಾ ಅಭಿಮಾನಿಗಳಿದ್ದಾರೆ. ಈಗ ಈ ಮಹಿಳಾ ಅಭಿಮಾನಿಗಳಿಗಾಗಿ ನಟಿಯರು ತಮ್ಮ ಡ್ರೆಸ್ ಮಾರಾಟ ಮಾಡಲು ಮುಂದಾಗಿದ್ದಾರೆ.

    ಹೌದು, ನಟಿಯರು ಅಂದ್ರೆ ಡ್ರೆಸ್ ಗಳಿಗೆ ಕೊರತೆ ಇರುವುದಿಲ್ಲ. ಮನೆಯ ವಾರ್ಡ್ ರೋಬ್ ಫುಲ್ ಡ್ರೆಸ್ ಗಳಿಂದ ತುಂಬಿರುತ್ತದೆ. ತೊಡುವ ಉಡುಗೆಗಳು ಮತ್ತೆ ರಿಪೀಟ್ ಆಗಬಾರದು ಎನ್ನುವ ಕಾರಣಕ್ಕೆ ಹೊಸ ಉಡುಪುಗಳನ್ನು ಖರೀದಿಸುತ್ತಿರುತ್ತಾರೆ. ಇದರಿಂದಾಗಿ ವಾರ್ಡ್ ರೋಬ್ ಗಳು ಡ್ರೆಸ್ ಗಳಿಂದ ತುಂಬಿ ತುಳುಕುತ್ತಿರುತ್ತದೆ. ಈ ಉಡುಪುಗಳು ಬಳಸದೇ ಇದ್ದರೆ ಹಾಳಾಗುತ್ತದೆ. ಹೀಗಾಗಿ ನಟಿ ಮಣಿಯರು ಎಲ್ಲ ಸೇರಿಕೊಂಡು ಈಗ ತಾವು ಧರಿಸಿದ ಉಡುಪುಗಳನ್ನು ಮಾರಾಟ ಮಾಡಲು ಮುಂದಾಗಿದ್ದಾರೆ.

    ಶೃತಿಹರಿಹರನ್ ಐಡಿಯಾ:
    ನಟಿ ಶೃತಿ ಹರಿಹರನ್ ಅವರು ಒಮ್ಮೆ ವಾರ್ಡ್ ರೋಬ್ ತೆರೆದು ಬಟ್ಟೆಗಳ ರಾಶಿ ನೋಡಿದಾಗ ಈ ಡ್ರೆಸ್ ಗಳನ್ನು ಏನು ಮಾಡುವುದು ಎಂದು ಆಲೋಚಿಸಿದಾಗ ಇವುಗಳನ್ನು ಕಡಿಮೆ ಬೆಲೆಗೆ ಮಾರಾಟ ಮಾಡಬಹುದಲ್ಲ ಎನ್ನುವ ಯೋಚನೆ ಹೊಳೆಯಿತಂತೆ. ಈ ಯೋಚನೆಯನ್ನು ಇತರೇ ನಟಿಯರ ಜೊತೆ ಹಂಚಿಕೊಂಡಾಗ ಅವರು ಸಾಥ್ ನೀಡಿದ್ದು, ಈಗ ಯೋಚನೆ ಕಾರ್ಯರೂಪಕ್ಕೆ ಬಂದಿದೆ.

    ಎನ್‍ಜಿಒಗೆ ಹಣ:
    ಶೃತಿಹರಿಹರನ್ ಯೋಚನೆಯಿಂದಾಗಿ ‘ದಿ ವ್ಯಾನಿಟಿ ಟ್ರಂಕ್ ಸೇಲ್’ ನ ರೂಪ ಪಡೆದಿದ್ದು, ನಟಿಯರು ತಮ್ಮಲ್ಲಿರುವ ಬಟ್ಟೆ ಹಾಗೂ ಕೆಲವು ವಸ್ತುಗಳನ್ನು ಮಾರಾಟಕ್ಕಿಟ್ಟಿದ್ದಾರೆ. ಎಲ್ಲ ವಸ್ತುಗಳಿಗೂ ಕಡಿಮೆ ಬೆಲೆಯನ್ನೇ ನಿಗದಿಪಡಿಸಿದ್ದು, ಮಾರಾಟದಿಂದ ಬರುವ ಹಣ ಸರ್ಕಾರೇತರ ಸಂಸ್ಥೆಯಾದ ಜೆ.ಪಿ. ಫೌಂಡೇಶನ್ ಮತ್ತು ಆದ್ಯಾ ಫೌಂಡೇಶನ್ ಹೋಗುತ್ತದೆ. ಸಂಗ್ರಹವಾದ ಹಣ ಅನಾಥ ಮಕ್ಕಳ ಕಲ್ಯಾಣ ನಿಧಿಗೆ ಬಳಕೆಯಾಗಲಿದೆ.

    ಯಾರೆಲ್ಲ ಕೈಜೋಡಿಸಿದ್ದಾರೆ?
    ಶ್ರದ್ಧಾ ಶ್ರೀನಾಥ್, ಮಾನ್ವಿತಾ ಹರೀಶ್, ಸಂಯುಕ್ತಾ ಹೆಗ್ಡೆ, ಸಂಯುಕ್ತಾ ಹೊರ್ನಾಡು, ಸೋನು ಗೌಡ, ಕಾವ್ಯಾ ಶೆಟ್ಟಿ, ರಾಜಶ್ರೀ ಪೊನ್ನಪ್ಪ, ಹಿತಾ ಚಂದ್ರಶೇಖರ್, ಮೇಘನಾ ರಾಜ್, ಮೇಘನಾ ಗಾಂವ್ಕರ್, ನೀತು ಶೆಟ್ಟಿ, ಸಚಿನಾ ಹೆಗ್ಗಾರ್, ಶಾನ್ವಿ ಶ್ರೀವತ್ಸ,ಸಂಗೀತಾ ಭಟ್, ಪ್ರಜ್ಞಾ ಈ ಪ್ರಯತ್ನಕ್ಕೆ ಕೈ ಜೋಡಿಸಿದ್ದಾರೆ.

    ನೀವು ಏನು ಮಾಡಬೇಕು?
    ಈ ಸೇಲ್ ನಲ್ಲಿ ನಿಮಗೆ ಬಟ್ಟೆ/ ವಸ್ತುಗಳು ಬೇಕು ಎಂದಿದ್ದರೆ ಮೊದಲು ನೀವು https://insider.in/the-vanity-trunk-sale-nov12-2017/event ಹೆಸರು ನೊಂದಾಯಿಸಿಕೊಳ್ಳಬೇಕು. ನವೆಂಬರ್ 12ರ ಭಾನುವಾರ ಬೆಳಗ್ಗೆ 11ರಿಂದ ಸಂಜೆ 5ರವರೆಗೆ, ರೆಸಿಡೆನ್ಸಿ ರೋಡ್‍ನಲ್ಲಿರುವ ಬಿ ಹೈವ್ ವರ್ಕ್‍ಶಾಪ್‍ನಲ್ಲಿ ಈ ಸೇಲ್ ನಡೆಯುತ್ತದೆ.