ಉಡುಪಿ: ಭಾರತದ ಪ್ರಮುಖ ಹಡಗು ನಿರ್ಮಾಣ ಸಂಸ್ಥೆಯಾದ ಉಡುಪಿ (Udupi) ಕೊಚ್ಚಿನ್ ಶಿಪ್ ಯಾರ್ಡ್ (Cochin Shipyard) ಮಹತ್ವದ ಮೈಲಿಗಲ್ಲೊಂದನ್ನು ಸಾಧಿಸಿದೆ. ನಾರ್ವೆ (Norway) ದೇಶಕ್ಕೆ 3,800 ಟಿಡಬ್ಲ್ಯೂಡಿ ಸಾಮರ್ಥ್ಯದ ಬೃಹತ್ ಹಡಗನ್ನು ಪೂರೈಕೆ ಮಾಡಿದೆ.
ನಾರ್ವೆ ಭಾರತದ ಜೊತೆ ಸುಮಾರು 2,000 ಕೋಟಿ ರೂ. ಎಂಒಯು ಮಾಡಿಕೊಂಡಿದ್ದು, ಮೇಕ್ ಇನ್ ಇಂಡಿಯಾ ಯೋಜನೆಗಳು ಯಶಸ್ವಿ ಆಗಿರುವುದಕ್ಕೆ ಇದು ಸಾಕ್ಷಿ. ನಾರ್ವೆಯ ರಾಯಭಾರ ಕಚೇರಿಯ ಅಧಿಕಾರಿಗಳು ಮತ್ತು ನಾರ್ವೆ ವಿಲ್ಸನ್ ಕಂಪನಿ ಸಿಬ್ಬಂದಿ ಖರೀದಿ ಪ್ರಕ್ರಿಯೆ ಪೂರೈಸಿದರು. ಉಡುಪಿಯ ಮಲ್ಪೆ ಸಮೀಪದ ಬೋಟ್ ಬಿಲ್ಡಿಂಗ್ ಯಾರ್ಡ್‌ನಲ್ಲಿ ಒಪ್ಪಂದಕ್ಕೆ ಸಹಿ ಹಾಕುವ ಜೊತೆ ಭಾರತೀಯ ಸಂಸ್ಕೃತಿಯ ಪ್ರಕಾರ ಪೂಜೆ ನೆರವೇರಿಸಲಾಯಿತು. ಹಡಗಿಗೆ (Ship) ಕಾಯಿ ಒಡೆದು, ಆರತಿ ಎತ್ತಿ ಪೂಜೆ ಮಾಡಲಾಯಿತು. ಇದನ್ನೂ ಓದಿ: ಅದ್ದೂರಿಯಾಗಿ ನಡೆಯಿತು ಮುಚಖಂಡಿ ಶ್ರೀ ವೀರಭದ್ರೇಶ್ವರ ಜಾತ್ರಾ ಮಹೋತ್ಸವ
ಆತ್ಮನಿರ್ಭರ (Aatmanirbhar Bharat) ಮತ್ತು ಮೇಕ್ ಇನ್ ಇಂಡಿಯಾ (Make In India) ಕಾನ್ಸೆಪ್ಟ್‌ನಲ್ಲಿ ಈ ಬೃಹತ್ ಶಿಪ್ ತಯಾರಾಗಿದೆ. ಕೊಚ್ಚಿನ್ ಶಿಪ್ ಯಾರ್ಡ್‌ನಲ್ಲಿ ಸ್ಥಳೀಯರು ಸೇರಿದಂತೆ ರಾಜ್ಯದ ವಿವಿಧ ಭಾಗದ 1,000ಕ್ಕೂ ಹೆಚ್ಚು ಜನ ಈಗಾಗಲೇ ಉದ್ಯೋಗ ಪಡೆದಿದ್ದಾರೆ. ಕಾರ್ಗೋ ಹಡಗುಗಳ ನಿರ್ಮಾಣದಲ್ಲಿ ಭಾರತ ವಿಶ್ವದಲ್ಲೇ ಸದ್ಯ 17ನೇ ಸ್ಥಾನದಲ್ಲಿದೆ. 2030ರ ವೇಳೆಗೆ ಟಾಪ್ ಟೆನ್ ಆಗುವ ಗುರಿಯನ್ನು ಹೊಂದಿದೆ. 2047ರ ವೇಳೆಗೆ ಟಾಪ್ 5ರ ಗುರಿಮುಟ್ಟುವ ಟಾರ್ಗೆಟ್ ಅನ್ನು ಭಾರತ ಸರ್ಕಾರ ನೀಡಿದೆ. ಇದನ್ನೂ ಓದಿ: Video | ಹೊಸ ವರ್ಷಕ್ಕೆ ದರ ಏರಿಕೆ ಶಾಕ್ – ಆಟೋ ದರ ಪ್ರತಿ ಕಿಮೀಗೆ 5 ರೂ. ಏರಿಕೆ ಸಾಧ್ಯತೆ!
ಮಾಸ್ಕೋ: ಮೇಕ್ ಇನ್ ಇಂಡಿಯಾ (Make in India) ಮೂಲಕ ಸಣ್ಣ ಮತ್ತು ದೊಡ್ಡ ಗಾತ್ರದ ಉದ್ಯಮಗಳಿಗೆ ಭಾರತದ ನಾಯಕತ್ವ ಉತ್ತೇಜನ ನೀಡುತ್ತಿದೆ ಎಂದು ಭಾರತ ಸರ್ಕಾರ ಹಾಗೂ ನಾಯಕತ್ವವನ್ನು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಶ್ಲಾಘಿಸಿದ್ದಾರೆ.
ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಧಾನಿಯವರ ಮೇಕ್ ಇನ್ ಇಂಡಿಯಾ ಯೋಜನೆಗಾಗಿ ರಷ್ಯಾ ತನ್ನ ಉತ್ಪಾದನಾ ಘಟಕವನ್ನು ಭಾರತದಲ್ಲಿ ಸ್ಥಾಪಿಸಲು ಸಿದ್ಧತೆಯನ್ನು ನಡೆಸಿದೆ. ಇದಕ್ಕೆಲ್ಲಾ ಭಾರತದ ನಾಯಕತ್ವವೇ ಕಾರಣ. ಹೀಗಾಗಿ, ಭಾರತವು ತನ್ನ ಹಿತಾಸಕ್ತಿಗಳ ಈಡೇರಿಕೆಗಾಗಿ ಹೆಚ್ಚಿನ ಆದ್ಯತೆ ನೀಡುತ್ತದೆ ಎಂದು ಒತ್ತಿ ಹೇಳಿದರು.
ಭಾರತೀಯ ನಾಯಕತ್ವದಿಂದಾಗಿ ಭಾರತ (India) ಸರ್ಕಾರವು ಸ್ಥಿರವಾದ ಪರಿಸ್ಥಿತಿಗಳನ್ನು ಸೃಷ್ಟಿಸಿಕೊಳ್ಳುತ್ತಿದೆ. ಜೊತೆಗೆ ಭಾರತದಲ್ಲಿನ ಹೂಡಿಕೆಗಳು ಲಾಭದಾಯಕವೆಂದು ನಾವು ನಂಬುತ್ತೇವೆ ಎಂದು ತಿಳಿಸಿದರು.
ಗ್ರಾಹಕ ಸರಕುಗಳು, ಐಟಿ, ಉನ್ನತ ತಂತ್ರಜ್ಞಾನ ಮತ್ತು ಕೃಷಿ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ರಷ್ಯಾದ ಸಾಧನೆಯನ್ನು ಉಲ್ಲೇಖಿಸಿ, ಪಾಶ್ಚಾತ್ಯ ಬ್ರಾಂಡ್‌ಗಳನ್ನು ಬದಲಿಸುವ ಮೂಲಕ ಹೊಸ ರಷ್ಯಾದ ಬ್ರ‍್ಯಾಂಡ್‌ಗಳು ಯಶಸ್ಸು ಗಳಿಸಿದೆ. ಇದು ಆಮದು ಪರ್ಯಾಯ ಕಾರ್ಯಕ್ರಮದ ಭಾಗವಾಗಿ ವಿಶೇಷ ಪ್ರಸ್ತುತತೆಯನ್ನು ಹೊಂದಿದೆ. ಇನ್ನೂ ಕೃಷಿಯಲ್ಲಿ ತಯಾರಕರ ಮತ್ತು ಉತ್ಪಾದಕರ ಸಂಖ್ಯೆಯು ಬೆಳೆಯುತ್ತಲೇ ಇದೆ. 1988ರಲ್ಲಿ, ಸೋವಿಯತ್ ಒಕ್ಕೂಟವು ಯುಎಸ್‌ಡಿ 35 ಶತಕೋಟಿಗೆ ಧಾನ್ಯವನ್ನು ಆಮದು ಮಾಡಿಕೊಂಡಿತ್ತು. ಕಳೆದ ವರ್ಷ, ಯುಎಸ್‌ಡಿ 66 ಶತಕೋಟಿಯಷ್ಟು ಧಾನ್ಯವನ್ನು ರಫ್ತು ಮಾಡಿದ್ದೇವೆ. ಇದು ನಮ್ಮ ರೈತರ ಅರ್ಹತೆಯಾಗಿದೆ. ರಷ್ಯಾ ಒಕ್ಕೂಟದ ಎಲ್ಲಾ ಕ್ಷೇತ್ರಗಳಲ್ಲಿ, ಹೈಟೆಕ್ ಸೇರಿದಂತೆ, ಉತ್ಪನ್ನಗಳನ್ನು ಮಾರಾಟ ಮಾಡಲು ಮತ್ತು ರಫ್ತು ಮಾಡಲು ಅವಕಾಶಗಳನ್ನು ವಿಸ್ತರಿಸುವ ತೀವ್ರ ಅವಶ್ಯಕತೆಯಿದೆ ಎಂದರು.
ಇದೇ ವೇಳೆ, ಉದ್ಯಮಗಳ ಬೆಳವಣಿಗೆಯನ್ನು ಬೆಂಬಲಿಸಲು ಬ್ರಿಕ್ಸ್ ರಾಷ್ಟ್ರಗಳ ಸಹಕಾರಕ್ಕಾಗಿ ಪುಟಿನ್ ಕರೆ ನೀಡಿದರು. ಮುಂದಿನ ವರ್ಷ ಬ್ರೆಜಿಲ್‌ನಲ್ಲಿ ನಡೆಯಲಿರುವ ಶೃಂಗಸಭೆಯಲ್ಲಿ ಸಹಯೋಗಕ್ಕಾಗಿ ಪ್ರಾಥಮಿಕ ಕ್ಷೇತ್ರಗಳನ್ನು ಮೌಲ್ಯಮಾಪನ ಮಾಡಲು ಸದಸ್ಯ ರಾಷ್ಟ್ರಗಳಿಗೆ ವಿನಂತಿಸಿದರು.ಇದನ್ನೂ ಓದಿ: ಪ್ರವೀಣ್ ನೆಟ್ಟಾರು ಹತ್ಯೆ ಕೇಸ್ – NIAಯಿಂದ 16 ಕಡೆ ದಾಳಿ
ಬೆಂಗಳೂರು: ಪ್ರಧಾನಿಗಳ ಆತ್ಮನಿರ್ಭರ್ ಭಾರತ ಹಾಗೂ ಮೆಕ್ ಇನ್ ಇಂಡಿಯಾ ಪರಿಕಲ್ಪನೆಗಳು ಕೈಗಾರಿಕಾ ಕ್ಷೇತ್ರದ ಮೇಲೆ ಸಂಜೀವಿನಿಯಂತೆ ಸಕಾರಾತ್ಮಕ ಪರಿಣಾಮ ಬೀರುತ್ತಿವೆ ಎಂದು ಕೇಂದ್ರದ ಭಾರೀ ಕೈಗಾರಿಕೆ ಮತ್ತು ಉಕ್ಕು ಖಾತೆ ಸಚಿವ ಕುಮಾರಸ್ವಾಮಿ (HD Kumaraswamy) ತಿಳಿಸಿದ್ದಾರೆ.
ಬೆಂಗಳೂರಿನ (Bengaluru) ಮೈಸೂರು (Mysuru) ರಸ್ತೆಯಲ್ಲಿರುವ ಭಾರತ್ ಹೆವಿ ಎಲೆಕ್ಟ್ರಿಕಲ್ ಲಿಮಿಟೆಡ್ (BHEL)ನ ವಿದ್ಯುನ್ಮಾನ ಘಟಕಕ್ಕೆ ಭೇಟಿ ನೀಡಿದ್ದರು. ಈ ವೇಳೆ ಅಧಿಕಾರಿಗಳು ಮತ್ತು ಕಾರ್ಮಿಕರ ಜೊತೆ ಸಂವಾದ ನಡೆಸುತ್ತಾ ಮಾತನಾಡಿದ ಅವರು, ದೇಶದ ಒಟ್ಟಾರೆ ಅಭಿವೃದ್ಧಿಗೆ ಪ್ರಧಾನಿಗಳು ದೊಡ್ಡ ದೊಡ್ಡ ಹೆಜ್ಜೆಗಳನ್ನು ಇಡುತ್ತಿದ್ದಾರೆ. ಅವರನ್ನು ನಾವು ನಿಕಟವಾಗಿ ಹಿಂಬಾಲಿಸುತ್ತಿದ್ದೇವೆ. ಸಾರ್ವಜನಿಕ ಸ್ವಾಮ್ಯದ ಉದ್ಯಮಗಳಿಗೆ ಕಾಯಕಲ್ಪ ನೀಡುವ ನಿಟ್ಟಿನಲ್ಲಿ ಎಲ್ಲಾ ಸಾಧ್ಯತೆಗಳನ್ನು ಮುಂದಿಟ್ಟುಕೊಂಡು ಪರಿಶೀಲನೆ ಹಾಗೂ ನಿರಂತರವಾಗಿ ಚರ್ಚೆಗಳನ್ನು ನಡೆಸಲಾಗುತ್ತಿದೆ. ಪ್ರಧಾನಿಗಳ ಸ್ಪಷ್ಟ ಮತ್ತು ನಿಖರ ಗುರಿಗಳನ್ನು ಇಟ್ಟುಕೊಂಡಿದ್ದಾರೆ ಎಂದರು.ಇದನ್ನೂ ಓದಿ: ರಾಜ್ಯದ ಎಲ್ಲಾ ಕಾರಾಗೃಹಗಳ ವ್ಯವಸ್ಥೆಯ ವರದಿ ಆಧರಿಸಿ ಶಾಶ್ವತ ಕ್ರಮ: ಪರಮೇಶ್ವರ್
ಭಾರತವನ್ನು ಮೂರನೇ ಬೃಹತ್ ಆರ್ಥಿಕ ಶಕ್ತಿಯನ್ನಾಗಿ ರೂಪಿಸುವುದು ಹಾಗೂ ಆರ್ಥಿಕ ವ್ಯವಸ್ಥೆಗೆ ಶಕ್ತಿ ತುಂಬಲು ಕೈಗಾರಿಕಾ ಉತ್ಪನ್ನವನ್ನು ಹೆಚ್ಚಳ ಮಾಡುವುದು ಅವರ ಉದ್ದೇಶವಾಗಿದೆ. ಅದಕ್ಕಾಗಿ ಅವರ ಕನಸಿನ ಮೇಕ್ ಇನ್ ಇಂಡಿಯಾ (Mack In India) ಹಾಗೂ ಆತ್ಮನಿರ್ಭರ್ ಭಾರತ್ (Athmanirbar Bharat) ಪರಿಕಲ್ಪನೆಗಳು ಹೆಚ್ಚು ಪರಿಣಾಮಕಾರಿ ಆಗಿವೆ. ಇದೇ ಪರಿಕಲ್ಪನೆ ಅಡಿಯಲ್ಲಿ ಭಾರತ್ ಹೆವಿ ಎಲೆಕ್ಟ್ರಿಕಲ್ ಕಾರ್ಖಾನೆಯನ್ನು ಮತ್ತಷ್ಟು ಸಶಕ್ತಗೊಳಿಸಲಾಗುವುದು ಎಂದು ಹೇಳಿದರು. ಇದನ್ನೂ ಓದಿ: ಸ್ವಾಮೀಜಿಗಳು ಭ್ರಷ್ಟಾಚಾರ ವಿರೋಧಿಸಬೇಕು, ಸಪೋರ್ಟ್ ಮಾಡೋದು ಸರಿಯಲ್ಲ- ಛಲವಾದಿ ನಾರಾಯಣಸ್ವಾಮಿ
ದೇಶದ ಸಾರ್ವಜನಿಕ ಸ್ವಾಮ್ಯದ ಕಂಪನಿಗಳ ಪೈಕಿ ಬಿಹೆಚ್‌ಇಎಲ್ ಉತ್ತಮವಾಗಿ ನಡೆಯುತ್ತಿದೆ. ಮೈಸೂರು ಅರಸರು, ಸರ್ ಎಂ.ವಿಶ್ವೇಶ್ವರಯ್ಯ ಅವರ ದೂರದೃಷ್ಟಿ ಹಿನ್ನೆಲೆಯಲ್ಲಿ ಇದು ಸ್ಥಾಪನೆಯಾಯಿತು. ಕೈಗಾರಿಕೆ ಕ್ಷೇತ್ರದಲ್ಲಿ ದೇಶಕ್ಕೆ ದೊಡ್ಡ ಮಟ್ಟದ ಕೊಡುಗೆ ಕೊಟ್ಟಿದೆ. ದೇಶದಲ್ಲಿ ಸಾರ್ವಜನಿಕ ಕೈಗಾರಿಕೆಗಳು ಅನೇಕ ಸವಾಲುಗಳನ್ನು ಎದುರಿಸುತ್ತಿವೆ. ಇಂತಹ ಸವಾಲಿನ ನಡುವೆಯೂ ಬಿಹೆಚ್‌ಇಎಲ್ ಲಾಭದಾಯಕವಾಗಿ ಮುನ್ನಡೆಯುತ್ತಿದೆ. ವಿದ್ಯುತ್ ಕ್ಷೇತ್ರದಲ್ಲಿ ಕೊಡುಗೆ ಅಸಾಧಾರಣವಾಗಿದೆ. ಥರ್ಮಲ್ ವಿದ್ಯುತ್ ಕ್ಷೇತ್ರದಲ್ಲಿ ಶೇ.40ಕ್ಕೂ ಹೆಚ್ಚು ಮಾರುಕಟ್ಟೆ ಪಾಲನ್ನು ಕಂಪನಿ ಹೊಂದಿದೆ. ಭಾರತೀಯ ಸೇನೆ, ಬಾಹ್ಯಾಕಾಶ ಕ್ಷೇತ್ರದಲ್ಲಿ ಈ ಕಂಪನಿ ಕೊಡುಗೆ ಅನನ್ಯವಾಗಿದೆ ಎಂದರು. ಇದನ್ನೂ ಓದಿ: ಅಬಕಾರಿ ನೀತಿ ಹಗರಣ; ಬಿಆರ್‌ಎಸ್ ನಾಯಕಿ ಕವಿತಾಗೆ ‘ಸುಪ್ರೀಂ’ ಜಾಮೀನು
ನವದೆಹಲಿ: ದೇಶದ ರಕ್ಷಣಾ ರಫ್ತು (Indian Defence Exports) ಅಭೂತಪೂರ್ವ ಎತ್ತರಕ್ಕೆ ಏರಿದೆ. ಸ್ವತಂತ್ರ ಭಾರತದ ಇತಿಹಾಸದಲ್ಲೇ ಮೊದಲ ಬಾರಿಗೆ 21,000 ಕೋಟಿ ರೂ. ರಕ್ಷಣಾ ರಫ್ತು ಗಡಿ ದಾಟಿದೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ (Rajnath Singh) ತಿಳಿಸಿದ್ದಾರೆ.
Delighted to inform everyone that the Indian Defence Exports have scaled to unprecedented heights and crossed Rs 21000 crore mark for the first time in the history of Independent India!
India’s defence exports have recahed to the level of Rs.21,083 Crore in the financial year…
— Rajnath Singh (मोदी का परिवार) (@rajnathsingh) April 1, 2024
2023-24ರ ಹಣಕಾಸು ವರ್ಷದಲ್ಲಿ ಭಾರತದ ರಕ್ಷಣಾ ರಫ್ತು 21,083 ಕೋಟಿಗೆ ತಲುಪಿದೆ. ಇದು ಹಿಂದಿನ ಹಣಕಾಸು ವರ್ಷಕ್ಕಿಂತ 32.5% ಹೆಚ್ಚಿಗೆಯಾಗಿದೆ. ಈ ವಿಚಾರವನ್ನು ಭಾರತದ ಜನರಿಗೆ ತಿಳಿಸಲು ಸಂತೋಷವಾಗುತ್ತಿದೆ ಎಂದು ಅವರು ಎಕ್ಸ್‍ನಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ಆವರಣದಲ್ಲಿ ಪೂಜೆಗೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಣೆ
ಮೇ, 2023 ರಲ್ಲಿ ನೈಜೀರಿಯಾದಲ್ಲಿ ಭಾರತೀಯ ಡಯಾಸ್ಪೊರಾ ಸದಸ್ಯರೊಂದಿಗೆ ಸಂವಾದದ ಸಮಯದಲ್ಲಿ, ರಕ್ಷಣಾ ಸಚಿವರು ಆತ್ಮನಿರ್ಭರ್ ಭಾರತ್ (Aatmanirbharta) ಮತ್ತು ಇತ್ತೀಚಿನ ವರ್ಷಗಳಲ್ಲಿ ರಕ್ಷಣಾ ರಫ್ತು ಮಹತ್ವದ ಪ್ರಗತಿಯ ಗುರಿಯನ್ನು ಸಾಧಿಸುವ ಬಗ್ಗೆ ಚರ್ಚಿಸಿದ್ದರು. ಈ ವೇಳೆ ಮೇಕ್ ಇನ್ ಇಂಡಿಯಾ (Make in India), ಮೇಕ್ ಫಾರ್ ವರ್ಲ್ಡ್ ಎಂದು ಪ್ರತಿಪಾದಿಸಿದ್ದರು. ಇದನ್ನೂ ಓದಿ: ಮಹಿಳೆಗೆ ಅವಾಚ್ಯ ಪದ ಬಳಕೆ ಆರೋಪ: ನಟ ಶಿವರಾಜ್ ಕೆ.ಆರ್ ಪೇಟೆ ವಿರುದ್ಧ ದೂರು
ಗಲ್ವಾನ್ ಘರ್ಷಣೆಯ ಬಳಿಕ ಚೀನಿ ಆಪ್‌ಗಳನ್ನು ನಿಷೇಧಿಸಿದ್ದ ಭಾರತ ಈಗ ಚೀನಾದ ಲ್ಯಾಪ್‌ಟಾಪ್/ಕಂಪ್ಯೂಟರ್ ಆಮದಿಗೆ ನಿರ್ಬಂಧ ಹೇರಿದೆ. 2020-21 ರಲ್ಲಿ ಗಲ್ವಾನ್‌ನಲ್ಲಿ ಘರ್ಷಣೆ ನಡೆದ ಬಳಿಕ ಚೀನಿ ಸಾಫ್ಟ್‌ವೇರ್ ಕ್ಷೇತ್ರಕ್ಕೆ ಶಾಕ್ ನೀಡಿದ್ದ ಭಾರತ ಈಗ ಹಾರ್ಡ್‌ವೇರ್ ಕ್ಷೇತ್ರಕ್ಕೆ ಶಾಕ್ ನೀಡಿದೆ. ಹೀಗಾಗಿ ಭಾರತ ಈಗ ದಿಢೀರ್ ಲ್ಯಾಪ್‌ಟಾಪ್, ಕಂಪ್ಯೂಟರ್ ಆಮದಿಗೆ ನಿರ್ಬಂಧ ಹೇರಿದ್ದು ಯಾಕೆ? ಚೀನಾ ಚಿಪ್ ಫ್ಯಾಕ್ಟರಿಯಾಗಿದ್ದು ಹೇಗೆ? ಹಾರ್ಡ್‌ವೇರ್ ಕ್ಷೇತ್ರದಲ್ಲಿ ಚೀನಾವನ್ನು ಸೋಲಿಸಲು ಸಾಧ್ಯವೇ? ಇತ್ಯಾದಿ ವಿಷಯಗಳ ಬಗ್ಗೆ ವಿವರವಾದ ಮಾಹಿತಿಯನ್ನು ಇಲ್ಲಿ ನೀಡಲಾಗಿದೆ.
ಚೀನಾ ಚಿಪ್ ಫ್ಯಾಕ್ಟರಿಯಾಗಿದ್ದು ಹೇಗೆ?
ಒಂದು ದೇಶ ಅಭಿವೃದ್ಧಿಯಾಗಬೇಕಾದರೆ ಮೂಲಸೌಕರ್ಯ ಅಭಿವೃದ್ಧಿಯಾಗಬೇಕು ಎಂಬುದನ್ನು ಅರಿತ ಚೀನಾ ಮೂಲಸೌಕರ್ಯಕ್ಕೆ ಹೆಚ್ಚಿನ ಹಣವನ್ನು ಹೂಡಿಕೆ ಮಾಡಿತು. 1980-2000 ಅವಧಿಯಲ್ಲಿ ರಸ್ತೆ, ರೈಲು, ಬಂದರು ಅಭಿವೃದ್ಧಿ ಮಾಡಲು ಮುಂದಾಯಿತು. ಮೂಲಸೌಕರ್ಯ ಅಭಿವೃದ್ಧಿಯಾದಂತೆ ವಸ್ತುಗಳು ಎಲ್ಲೇ ತಯಾರಾದರೂ ಅದು ಸುಲಭವಾಗಿ ರೈಲು ಮತ್ತು ಬಂದರು ತಲುಪುವಂತೆ ವ್ಯವಸ್ಥೆ ಮಾಡಿತು. ಸಂಪರ್ಕ ವ್ಯವಸ್ಥೆ ಚೆನ್ನಾಗಿ ಆಗುತ್ತಿದ್ದಂತೆ ವಿದೇಶಿ ಕಂಪನಿಗಳನ್ನು ಹೂಡಿಕೆ ಮಾಡಲು ಆಹ್ವಾನಿಸಿತು.
ಚೀನಾದಲ್ಲಿ ಜನಸಂಖ್ಯೆ ಹೆಚ್ಚಾದ ಪರಿಣಾಮ ಕಾರ್ಮಿಕರ ಸಮಸ್ಯೆ ಇರಲಿಲ್ಲ. ಈ ಕಾರಣಕ್ಕೆ ವಿದೇಶಿ ಕಂಪನಿಗಳು ಹೆಚ್ಚು ಹೂಡಿಕೆ ಮಾಡಿದವು. ವಿಶೇಷ ಆರ್ಥಿಕ ವಲಯವನ್ನು ಸ್ಥಾಪಿಸಿ ಕಂಪನಿಗಳಿಗೆ ಹಲವು ರಿಯಾಯಿತಿ ಘೋಷಿಸಿತು. ಇದರ ಜೊತೆ ಚೀನಾ ಸರ್ಕಾರ ಕಂಪನಿಗಳ ಪರವಾಗಿಯೇ ಕಾನೂನು ರೂಪಿಸಿತ್ತು. ಇದೆಲ್ಲದರ ಪರಿಣಾಮ ವಿಶ್ವದ ದೊಡ್ಡ ದೊಡ್ಡ ಎಲೆಕ್ಟ್ರಾನಿಕ್ಸ್ ಕಂಪನಿಗಳು ಚಿಪ್ ಘಟಕವನ್ನು ಸ್ಥಾಪಿಸಲು ಮುಂದಾದವು. ಈ ನಿರ್ಧಾರದಿಂದ ಚೀನಾಕ್ಕೆ ಎರಡು ಲಾಭವಾಯಿತು. ಒಂದನೇಯದ್ದಾಗಿ ಜನರಿಗೆ ಉದ್ಯೋಗ ಸಿಕ್ಕಿದರೆ ಎರಡನೇಯದ್ದಾಗಿ ಚೀನಾದ ಆರ್ಥಿಕತೆ ಬೆಳವಣಿಗೆ ಆಯಿತು. ಈ ಮೂಲಕ ವಿಶ್ವದಲ್ಲೇ ಎರಡನೇ ಅತಿ ದೊಡ್ಡ ಆರ್ಥಿಕತೆ ಹೊಂದಿದ ದೇಶವಾಗಿ ಹೊರಹೊಮ್ಮಿತು.
ಭಾರತ ನಿರ್ಬಂಧ ಹೇರಿದ್ದು ಯಾಕೆ?
ಎಲೆಕ್ಟ್ರಾನಿಕ್ಸ್, ಮಷಿನರಿ, ಮೊಬೈಲ್ ಫೋನ್, ಲ್ಯಾಪ್‌ಟಾಪ್ ಬಿಡಿಭಾಗಗಳು, ಸೋಲಾರ್ ಸೆಲ್ ಮಾಡ್ಯೂಲ್ ಭಾರತ ಚೀನಾದಿಂಧ ಹೆಚ್ಚಿನ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳುತ್ತಿದೆ. ಚೀನಾದಿಂದ ಆಮದು ಮಾಡಿಕೊಳ್ಳುವ ವಸ್ತುಗಳ ಪೈಕಿ ಈ ವಸ್ತುಗಳ ಪಾಲು 65%. ಅದರಲ್ಲೂ ಭಾರತದ ಕಂಪ್ಯೂಟರ್ ಆಮದಿನಲ್ಲಿ ಚೀನಾ ಪಾಲು70%ರಿಂದ 80% ರಷ್ಟಿದೆ.
ಆಮದು ಮತ್ತು ರಫ್ತು ಎಷ್ಟಿದೆ?
2014ರಲ್ಲಿ ಭಾರತದ ರಫ್ತು 13,434 ಮಿಲಿಯನ್ ಡಾಲರ್ ಇದ್ದರೆ ಆಮದು 58,230 ಮಿಲಿಯನ್ ಡಾಲರ್ ಇತ್ತು. 2020 ರಲ್ಲಿ ರಫ್ತು 19,008 ಮಿಲಿಯನ್ ಡಾಲರ್ ಇದ್ದರೆ ಆಮದು 58,798 ಮಿಲಿಯನ್ ಡಾಲರ್ ಇತ್ತು. 20222 ರಲ್ಲಿ ಭಾರತದ ರಫ್ತು 15,743 ಮಿಲಿಯನ್ ಡಾಲರ್ ಇದ್ದರೆ ಚೀನಾದ ಆಮದು ಪ್ರಮಾಣ 1,26,851 ಮಿಲಿಯನ್ ಡಾಲರ್ ಇತ್ತು. ಈ ವರ್ಷದ ಏಪ್ರಿಲ್ ಜೂನ್ ಅವಧಿಯಲ್ಲಿ ಎಲೆಕ್ಟ್ರಾನಿಕ್ಸ್, ಲ್ಯಾಪ್‌ಟಾಪ್,ಕಂಪ್ಯೂಟರ್, ಟ್ಯಾಬ್ಲೆಟ್ಸ್ ಸೇರಿ ಒಟ್ಟು 19.7 ಬಿಲಿಯನ್ ಡಾಲರ್ ಮೊತ್ತದ ವಸ್ತುಗಳನ್ನು ಭಾರತ ಚೀನಾದಿಂದ ಆಮದು ಮಾಡಿಕೊಂಡಿದೆ.
ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆಲ್ ಇನ್ ಒನ್ ಕಂಪ್ಯೂಟರ್‌ಗಳು, ಸಣ್ಣ ಕಂಪ್ಯೂಟರ್‌ಗಳು, ಸರ್ವರ್‌ಗಳು, ಡಾಟಾ ಸಂಸ್ಕರಣಾ ಮಷಿನ್‌ಗಳು ಆಮದಿಗೆ ನಿರ್ಬಂಧ ಹೇರಿದೆ. ಆದರೆ ಇದು ಸಂಪೂರ್ಣ ನಿಷೇಧವಲ್ಲ. ನಿರ್ಬಂಧ ಮಾತ್ರ ಹೇರಲಾಗಿದೆ. ಈ ಮೇಲೆ ತಿಳಿಸಿದ ಯಾವುದೇ ವಸ್ತುಗಳನ್ನು ವ್ಯಾಪಾರಿಗಳು ಭಾರಿ ಪ್ರಮಾಣದಲ್ಲಿ ಆಮದು ಮಾಡಿಕೊಳ್ಳಬೇಕು ಎಂದರೆ ಕೇಂದ್ರ ಸರ್ಕಾರದ ಅನುಮತಿ ಅಥವಾ ಲೈಸೆನ್ಸ್ ಪಡೆಯುವುದನ್ನು ಕಡ್ಡಾಯ ಮಾಡಲಾಗಿದೆ.
ಜನಸಂಖ್ಯೆಯಲ್ಲಿ ದೊಡ್ಡ ದೇಶವಾಗಿರುವ ಭಾರತ ವಿಶ್ವದ ದೊಡ್ಡ ಮಾರುಕಟ್ಟೆಯೂ ಹೌದು. ಈ ಕಾರಣಕ್ಕೆ ಈಗ ಆಮದು ಕಡಿಮೆ ಮಾಡಿ ದೇಶದಲ್ಲೇ ಉತ್ಪಾದನೆ ಹೆಚ್ಚಳ ಮಾಡಲು ಚೀನಾದ ವಸ್ತುಗಳಿಗೆ ನಿರ್ಬಂಧ ಹೇರಿದೆ. ಇದರ ಜೊತೆ ಇನ್ನೊಂದು ಕಾರಣವೂ ಇದೆ. ಭಾರತ ತನ್ನ ದೊಡ್ಡ ಮಾರುಕಟ್ಟೆ ಎಂದು ತಿಳಿದಿದ್ದರೂ ಚೀನಾ ಗಡಿಯಲ್ಲಿ ಕಿರಿಕ್ ಮಾಡುತ್ತಲೇ ಇದೆ. ನಮ್ಮದೇ ದುಡ್ಡು ಪಡೆದು ನಮ್ಮ ವಿರುದ್ಧವೇ ತಿರುಗಿ ಬೀಳುವ ಚೀನಾವನ್ನು ಆರ್ಥಿಕವಾಗಿ ಕುಗ್ಗಿಸಬೇಕಾದೆ ನಾವು ಆಮದು ಕಡಿಮೆ ಮಾಡಲೇಬೇಕು. ಈ ಕಾರಣಕ್ಕೆ ಸರ್ಕಾರ ಈಗ ನಿರ್ಬಂಧ ಹೇರುವ ಮಹತ್ವದ ನಿರ್ಧಾರ ಕೈಗೊಂಡಿದೆ.
ಬೆಲೆ ಹೆಚ್ಚಳ:
ಪೋಸ್ಟ್ ಅಥವಾ ಕೊರಿಯರ್ ಮೂಲಕ ಲ್ಯಾಪ್‌ಟಾಪ್, ಟ್ಯಾಬ್ಲೆಟ್, ಆನ್ ಇನ್ ಒನ್ ಕಂಪ್ಯೂಟರ್, ಅಲ್ಟ್ರಾ ಸ್ಮಾಲ್ ಕಂಪ್ಯೂಟರ್‌ಗಳನ್ನು ಆಮದು ಮಾಡಿಕೊಳ್ಳಲು ಅವಕಾಶ ನೀಡಲಾಗಿದೆ. ಆದರೆ ಇದಕ್ಕೆ ಸೂಕ್ತ ಸುಂಕ (ಕಸ್ಟಮ್ಸ್) ಪಾವತಿ ಮಾಡಬೇಕಾಗುತ್ತದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸುಂಕ ವಿಧಿಸಿದ್ದರಿಂದ ಉತ್ಪನ್ನಗಳ ಬೆಲೆ ಹೆಚ್ಚಾಗುತ್ತದೆ. ಹೀಗಾಗಿ ಆಮದಿಗೆ ತನ್ನಿಂತಾನೇ ಕಡಿವಾಣ ಬೀಳಬಹುದು ಎಂಬುದು ಸರ್ಕಾರದ ಲೆಕ್ಕಾಚಾರ. ಈ ಕಾರಣಕ್ಕೆ ಕಂಪನಿಗಳು ಭಾರತದಲ್ಲಿ ಲ್ಯಾಪ್‌ಟಾಪ್, ಕಂಪ್ಯೂಟರ್ ತಯಾರಿಕೆಗೆ ಹೂಡಿಕೆ ಮಾಡಬಹುದು ಎಂಬ ಲೆಕ್ಕಾಚಾರವನ್ನು ಕೇಂದ್ರ ಸರ್ಕಾರ ಹಾಕಿಕೊಂಡಿದೆ. ಕೇಂದ್ರ ಸರ್ಕಾರ ಹೇರಿದ ನಿರ್ಬಂಧ ಅಕ್ಟೋಬರ್ 31ವರೆಗೆ ಜಾರಿಯಾಗುವುದಿಲ್ಲ. ಹೀಗಾಗಿ ಸದ್ಯಕ್ಕೆ ಈ ಉತ್ಪನ್ನಗಳ ಬೆಲೆ ಏರಿಕೆಯಾಗುವುದಿಲ್ಲ.
ಏನಿದು ಪಿಎಲ್‌ಐ ಸ್ಕೀಂ?
ಆಮದು ಕಡಿಮೆ ಮಾಡಿ ರಫ್ತು ಹೆಚ್ಚಳ ಮಾಡಲು ಭಾರತ ಸರ್ಕಾರ 2014ರಲ್ಲೇ ವಿದೇಶಿ ಹೂಡಿಕೆಯನ್ನು ಆಕರ್ಷಿಸಲು ಮೇಕ್ ಇನ್ ಇಂಡಿಯಾ ಯೋಜನೆಯನ್ನು ಆರಂಭಿಸಿತ್ತು. ಈ ಯೋಜನೆಯಿಂದ ಹಲವು ಕಂಪನಿಗಳು ಭಾರತದಲ್ಲಿ ಹೂಡಿಕೆ ಮಾಡಿವೆ. ಚೀನಾ ಹೇಗೆ ಉತ್ಪದನಾ ವಲಯದಲ್ಲಿ ದೊಡ್ಡ ದೇಶವಾಗಿ ಹೊರಹೊಮ್ಮಿದೆಯೋ ಅದೇ ರೀತಿ ಭಾರತವು ಹೊರಹೊಮ್ಮುವಂತಾಗಲು ಪ್ರೊಡಕ್ಷನ್-ಲಿಂಕ್ಡ್ ಇನ್ಸೆಂಟಿವ್ಸ್ (PLI) ಸ್ಕೀಂ ಆರಂಭಿಸಿತು. ಆತ್ಮನಿರ್ಭರ ಭಾರತದ ಅಭಿಯಾನವಾಗಿ ಈ ಯೋಜನೆ ಜಾರಿಗೆ ಬಂದಿದೆ. ಪ್ರಸ್ತುತ ವಿಶ್ವದ ಚಿಪ್ ಮಾರುಕಟ್ಟೆಯಲ್ಲಿ ಚೀನಾ ಮತ್ತು ತೈವಾನ್ ಕಂಪನಿಗಳೇ ಹೆಚ್ಚು ಪ್ರಾಬಲ್ಯವನ್ನು ಹೊಂದಿದೆ. ಭಾರತವನ್ನು ಚಿಪ್, ಮೊಬೈಲ್ ಉತ್ಪಾದನಾ ಹಬ್ ದೇಶವನ್ನಾಗಿ ಪರಿವರ್ತಿಸಲು ಕೇಂದ್ರ ಸರ್ಕಾರ ಪಿಎಲ್ಐ ಯೋಜನೆಯನ್ನು ಆರಂಭಿಸಿದೆ. ಉದ್ಯೋಗ ಸೃಷ್ಟಿಗಾಗಿ ಆರಂಭಿಸಲಾದ ಈ ಯೋಜನೆ ಅಡಿ ಮುಂದಿನ 5 ವರ್ಷದಲ್ಲಿ 1.5 ಲಕ್ಷ ಕೋಟಿ ಮೌಲ್ಯದ ಮೊಬೈಲ್ ಫೋನ್ ಹಾಗೂ ಬಿಡಿಭಾಗಗಳನ್ನು ಉತ್ಪಾದಿಸುವ ಗುರಿಯನ್ನು ಹಾಕಿಕೊಳ್ಳಲಾಗಿದೆ. ಪಿಎಲ್‌ಐ ಯೋಜನೆ ಅಡಿ ಲಾಭ ಪಡೆದುಕೊಳ್ಳಲು ದೇಶದ ಹಲವು ಕಂಪನಿಗಳು ಮತ್ತು ವಿದೇಶದ ಕಂಪನಿಗಳು ಆಯ್ಕೆಯಾಗಿವೆ. ಆಯ್ಕೆಯಾದ ಕಂಪನಿಗಳು ನಿಗದಿತ ಟಾರ್ಗೆಟ್ ತಲುಪಿದರೆ ಕಂಪನಿಗಳಿಗೆ ಕ್ಯಾಶ್‌ಬ್ಯಾಕ್ ನೀಡಲಾಗುತ್ತದೆ. ಇದನ್ನೂ ಓದಿ: ತಾಲಿಬಾನ್ ಉಗ್ರರಿಗೆ ಪಾಕ್ ಮೇಲೆ ಸಿಟ್ಯಾಕೆ?
ಐಫೋನ್ ಉತ್ಪಾದನೆಯಲ್ಲಿ ಕ್ರಾಂತಿ
ಹಿಂದೆ ಭಾರತ ಆಪಲ್ ಕಂಪನಿಯ ಐಫೋನ್‌ಗಳನ್ನು ಆಮದು ಮಾಡಿಕೊಳ್ಳುತ್ತಿತ್ತು.ಆದರೆ ಈಗ ಭಾರತವೇ ರಫ್ತು ಮಾಡುವ ದೇಶವಾಗಿ ಹೊರಹೊಮ್ಮುತ್ತಿದೆ. ಸದ್ಯ ಭಾರತದಲ್ಲಿ ಐಫೋನ್ 12, 13, 14 ಮತ್ತು 14+ ಐಫೋನ್ ತಯಾರಾಗುತ್ತಿದೆ. ಭಾರತದಲ್ಲಿ ಫಾಕ್ಸ್‌ಕಾನ್, ವಿಸ್ಟ್ರಾನ್, ಪೆಗಟ್ರಾನ್ ಕಂಪನಿ ಐಫೋನ್ ತಯಾರಿಸುತ್ತಿದೆ. 2023ರ ಹಣಕಾಸು ವರ್ಷದಲ್ಲಿ 5 ಬಿಲಿಯನ್ ಡಾಲರ್ ಮೊತ್ತದ ಐಫೋನ್‌ಗಳನ್ನು ಭಾರತ ರಫ್ತು ಮಾಡಿದೆ. ಇಷ್ಟೊಂದು ಫೋನ್ ರಫ್ತು ಮಾಡಿದ ಮೊದಲ ದೇಶದ ಮೊದಲ ಬ್ರಾಂಡ್ ಎಂಬ ಹೆಗ್ಗಳಿಕೆಗೆ ಐಫೋನ್ ಪಾತ್ರವಾಗಿದೆ, ಈ ಮೂಲಕ ಚೀನಾ ಬಿಟ್ಟರೆ ಎರಡನೇ ಅತಿದೊಡ್ಡ ಐಫೋನ್ ಉತ್ಪಾದನಾ ದೇಶವಾಗಿ ಭಾರತ ಹೊರಹೊಮ್ಮಿದೆ. ಆಪಲ್ ಐಫೋನ್ ಉತ್ಪಾದನಾ ಮಾಡುವ ಫಾಕ್ಸ್‌ಕಾನ್ ಕಂಪನಿ ಭಾರತದಲ್ಲಿ 2 ಶತಕೋಟಿ ಡಾಲರ್ ಹೂಡಿಕೆ ಮಾಡುವುದಾಗಿ ಘೋಷಣೆ ಮಾಡಿದೆ. 2017 ರಿಂದ ಭಾರತದಲ್ಲಿ ಐಫೋನ್ ಉತ್ಪಾದನೆ ಮಾಡಲು ಆರಂಭಿಸಿದ್ದು ಮುಂದಿನ ದಿನಗಳಲ್ಲಿ ಮತ್ತಷ್ಟು ಹೂಡಿಕೆ ಮಾಡವುದಾಗಿ ಆಪಲ್ ಹೇಳಿದೆ.
ಚೀನಾವನ್ನು ಸೋಲಿಸಲು ಸಾಧ್ಯವೇ?
ಚೀನಾವನ್ನು ಸೋಲಿಸಲು ಸಾಧ್ಯವೇ ಎಂಬ ಪ್ರಶ್ನೆಗೆ ಉತ್ತರ ತಿಳಿಯವ ಮೊದಲು ಚೀನಾ ಉತ್ಪಾದನಾ ಕ್ಷೇತ್ರದಲ್ಲಿ ಯಾವ ಸ್ಥಾನದಲ್ಲಿ ಇದೆ ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಚೀನಾವನ್ನು ʼವಿಶ್ವದ ಫ್ಯಾಕ್ಟರಿʼ ಎಂದೇ ಕರೆಯಲಾಗುತ್ತದೆ. ಸಾಫ್ಟ್‌ವೇರ್ ಕ್ಷೇತ್ರದಲ್ಲಿ ಭಾರತ, ಅಮೆರಿಕ ದೇಶಗಳು ಮುಂದೆ ಇದ್ದರೆ ಹಾರ್ಡ್‌ವೇರ್ ಕ್ಷೇತ್ರದಲ್ಲಿ ಚೀನಾವೇ ನಂಬರ್ ಒನ್. ಸಣ್ಣ ಸೂಜಿ, ಅಟಿಕೆಯಿಂದ ಹಿಡಿದು ದೊಡ್ಡ ವಸ್ತುಗಳು ಚೀನಾದಲ್ಲಿ ತಯಾರಾಗುತ್ತಿದೆ. ಭಾರತದಲ್ಲೇ ವಸ್ತು ಉತ್ಪಾದನೆಯಾದರೂ ಚೀನಾದಂತೆ ಕಡಿಮೆ ದರದಲ್ಲಿ ಕೊಡಲು ಸಾಧ್ಯವಿಲ್ಲ ಎಂಬ ಮಾತು ಪ್ರಚಲಿತದಲ್ಲಿದೆ. ಈ ರೀತಿ ಮಾತು ಬರಲು ಕಾರಣವಿದೆ. ಚೀನಾದಲ್ಲಿ ಕಡಿಮೆ ಸಂಬಳಕ್ಕೆ ಕಾರ್ಮಿಕರು ಸಿಗುತ್ತಾರೆ. ಅಲ್ಲಿ ಬಾಲ ಕಾರ್ಮಿಕರು, ಕನಿಷ್ಠ ವೇತನ ನಿಯಮಗಳನ್ನು ಪರಿಗಣನೆಯಾಗುವುದಿಲ್ಲ. ಎರಡನೇಯದಾಗಿ ಸಪ್ಲೈ ಚೈನ್ ವ್ಯವಸ್ಥೆ ಬಹಳ ಚೆನ್ನಾಗಿದೆ. ರಸ್ತೆ, ರೈಲು, ಬಂದರು ನೆಟ್‌ವರ್ಕ್ ಸಂಪರ್ಕ ಉತ್ತಮವಾಗಿದೆ.
ಅಲ್ಲಿಯ ಬಿಸಿನೆಸ್ ವ್ಯವಸ್ಥೆ ಈಗ ಆರಂಭಗೊಂಡಿದಲ್ಲ. 30 ವರ್ಷದ ಹಿಂದೆಯೇ ಆರಂಭಗೊಂಡಿದೆ. ಮೂಲ ಸೌಕರ್ಯ ಚೆನ್ನಾಗಿದೆ. ಚೀನಿಯರು ಅಲ್ಪ ಅವಧಿಯ ಲಾಭ ನೋಡುವುದಿಲ್ಲ. ದೀರ್ಘ ಅವಧಿಯ ಲಾಭ ನೋಡಿಕೊಂಡು ವ್ಯವಹಾರ ಉತ್ಪಾದನೆ ಮಾಡುತ್ತಾರೆ. ಭಾರೀ ಪ್ರಮಾಣದಲ್ಲಿ ಉತ್ಪನ್ನಗಳನ್ನು ಉತ್ಪಾದಿಸುತ್ತಾರೆ ಮತ್ತು ಕಡಿಮೆ ಪ್ರಮಾಣದ ಲಾಭ ಇಡುತ್ತಾರೆ. ಪರಿಣಾಮ ವಿಶ್ವದ ಮಾರುಕಟ್ಟೆಗೆ ಚೀನಿ ವಸ್ತುಗಳು ಸುಲಭವಾಗಿ ನುಗ್ಗುತ್ತವೆ.
ಪ್ರಮುಖವಾಗಿ ಅಲ್ಲಿಯ ಭೂಮಿಯ ಮಾಲೀಕತ್ವ ಸರ್ಕಾರದ ಕೈಯಲ್ಲಿ ಇದೆ. ಈ ಕಾರಣಕ್ಕೆ ಕಂಪನಿಗಳಿಗೆ ಸರ್ಕಾರ ಜಾಗವನ್ನು ಸುಲಭವಾಗಿ ನೀಡುತ್ತದೆ. ಯಾವುದೇ ಕಾನೂನಿನ ಸಮಸ್ಯೆ ಇರುವುದಿಲ್ಲ. ನಮ್ಮಲ್ಲಿ ಕಂಪನಿಗಳಿಗೆ ಜಾಗ ನೀಡುವುದೇ ದೊಡ್ಡ ಸಮಸ್ಯೆ. ಹೋರಾಟಗಾರರು ಕೈ ಜೋಡಿಸಿ ಕೊನೆಗೆ ನ್ಯಾಯಾಲಯದ ಮೆಟ್ಟಿಲು ಏರಿದರೆ ಪ್ರಕರಣ ಇತ್ಯರ್ಥ್ಯವಾಗಲು ಹಲವು ವರ್ಷ ಬೇಕಾಗುತ್ತದೆ. ಇದನ್ನೂ ಓದಿ: ಡಾಲರ್‌ಗೆ ರೂಪಾಯಿ ಸೆಡ್ಡು – ಇಂಟರ್‌ನ್ಯಾಷನಲ್ ಕರೆನ್ಸಿ ಆಗುತ್ತಾ?
ಕೊನೆಯದಾಗಿ ಬಹಳ ಮುಖ್ಯ ಚೀನದಲ್ಲಿ ಕಮ್ಯೂನಿಸ್ಟ್ ಸರ್ಕಾರ ಇದೆ. ನಾಯಕರು ಬದಲಾದರೂ ಸರ್ಕಾರದ ನೀತಿಗಳು ಬದಲಾಗುವುದಿಲ್ಲ. ಸದೃಢ ಸರ್ಕಾರವೇ ಇರುತ್ತದೆ. ಸ್ಥಿರ ಸರ್ಕಾರ ಇರುವ ಕಾರಣ ವಿದೇಶಿ ಕಂಪನಿಗಳು ಹೂಡಿಕೆ ಮಾಡುತ್ತವೆ.
ಭಾರತ ವಿಶ್ವದ ಫ್ಯಾಕ್ಟರಿ ಆಗುತ್ತಾ?
ಭಾರತ ವಿಶ್ವದ ಫ್ಯಾಕ್ಟರಿ ಆಗುತ್ತಾ ಇಲ್ಲವೋ ಗೊತ್ತಿಲ್ಲ. ಈ ನಿಟ್ಟಿನಲ್ಲಿ ಪ್ರಯತ್ನ ನಡೆಯುತ್ತಿದೆ. 2014 ರಲ್ಲಿ ಮೇಕ್ ಇನ್ ಇಂಡಿಯಾ ಯೋಜನೆ ಬಂದ ಬಳಿಕ 27 ಕ್ಷೇತ್ರಗಳಲ್ಲಿ ಹೂಡಿಕೆಯಾಗಿದೆ. ವಿಶ್ವ ಬ್ಯಾಂಕ್ ಪ್ರಕಟಿಸುವ ಉದ್ಯಮ ಸ್ನೇಹಿ ರಾಷ್ಟ್ರಗಳ ಪಟ್ಟಿಯಲ್ಲಿ ಭಾರತದ ಸ್ಥಾನ ಉತ್ತಮವಾಗುತ್ತಿದೆ. 2014 ರಲ್ಲಿ 142, 2017 ರಲ್ಲಿ 100, 2022 ರಲ್ಲಿ 63ನೇ ಸ್ಥಾನಕ್ಕೆ ಜಿಗಿದಿದೆ. ದೊಡ್ಡ ದೊಡ್ಡ ಕ್ಷೇತ್ರಗಳಲ್ಲಿ ಭಾರತ ಚೀನಾಗೆ ಸ್ಪರ್ಧೆ ನೀಡುವುದು ಕಷ್ಟವಾದರೂ ಸಣ್ಣ ಸಣ್ಣ ಕ್ಷೇತ್ರಗಳಲ್ಲಿ ನಾವು ಸ್ಪರ್ಧೆ ನೀಡಬಹುದು.
10 ವರ್ಷಗಳ ಹಿಂದೆ ಆಪಲ್ ಐಫೋನ್ ಬಿಡುಗಡೆಯಾಗಿ 7-8 ತಿಂಗಳ ನಂತರ ಭಾರತದಲ್ಲಿ ಬಿಡುಗಡೆಯಾಗುತ್ತಿತ್ತು. ಆದರೆ ಈಗ ಬಿಡುಗಡೆ ಅಲ್ಲ, ಭಾರತದಲ್ಲೇ ಫೋನ್ ತಯಾರಾಗಿ ವಿಶ್ವಕ್ಕೆ ರಫ್ತು ಮಾಡುವ ಹಂತಕ್ಕೆ ಬೆಳೆದಿದ್ದೇವೆ. ನಿಜಕ್ಕೂ ಇದು ದೊಡ್ಡ ಸಾಧನೆಯಾದರೂ ಚೀನಾವನ್ನು ಉತ್ಪದನಾ ಕ್ಷೇತ್ರದಲ್ಲಿ ಸೋಲಿಸಬೇಕಾದರೆ ಭಾರತ ತುಂಬಾ ಶ್ರಮ ಪಡಬೇಕು. ಹೀಗಾಗಿ ಈಗ ಬಿತ್ತಿದ ಬೀಜ ಮುಂದೆ ಮರವಾಗಿ ಬೆಳೆದು ಫಲ ನೀಡುವಂತೆ ಇನ್ನು ಮುಂದೆ ದೇಶದಲ್ಲಿ ಆರಂಭವಾಗಲಿರುವ ಫ್ಯಾಕ್ಟರಿಗಳಿಂದ ವಸ್ತುಗಳ ಉತ್ಪಾದನೆ ಹೆಚ್ಚಾದರೆ ನಾವು ಚೀನಾವನ್ನು ಸೋಲಿಸಬಹುದು. ಸರ್ಕಾರದ ಎಲ್ಲಾ ಪ್ರಯತ್ನಗಳು ಫಲ ನೀಡಿದರೆ ಮುಂದೆ ನಮ್ಮ ಕೈಯಲ್ಲಿ ಅಲ್ಲ ವಿದೇಶಿಯರ ಕೈಯಲ್ಲೂ ಮೇಕ್ ಇನ್ ಇಂಡಿಯಾ ಉತ್ಪನ್ನಗಳನ್ನು ನೋಡಬಹುದು.
ಮಾಸ್ಕೋ: ಪ್ರಧಾನಿ ನರೇಂದ್ರ ಮೋದಿಯವರ (Narendra Modi) `ಮೇಕ್ ಇನ್ ಇಂಡಿಯಾ’ (Make In India) ಪರಿಕಲ್ಪನೆ ಭಾರತದ ಆರ್ಥಿಕತೆಯ ಮೇಲೆ ಭಾರೀ ಪರಿಣಾಮ ಬೀರಿದೆ ಎಂದು ರಷ್ಯಾ (Russia) ಅಧ್ಯಕ್ಷ ವ್ಲಾಡಿಮಿರ್ ಪುಟಿನ್ (Vladimir Putin) ಬಣ್ಣಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿಯವರು, 2014ರಲ್ಲಿ ಮೇಕ್ ಇನ್ ಇಂಡಿಯಾ ಪರಿಕಲ್ಪನೆಯನ್ನು ಬಿತ್ತಿದ್ದರು. ಇದು ಭಾರತದ ಆರ್ಥಿಕತೆಯ ಮೇಲೆ ಯಶಸ್ವಿ ಪರಿಣಾಮವನ್ನು ಬೀರಿದೆ. ಭಾರತದ ಉತ್ತಮ ನಾಯಕ ಮತ್ತು ರಷ್ಯಾದ ಉತ್ತಮ ಸ್ನೇಹಿತ ನರೇಂದ್ರ ಮೋದಿಯವರಿಂದ ಇದು ಸಾಧ್ಯವಾಗಿದೆ ಎಂದು ಅವರು ಹೊಗಳಿದ್ದಾರೆ. ರಷ್ಯಾದಲ್ಲಿ ದೇಶೀಯ ಉತ್ಪನ್ನಗಳನ್ನು ಉತ್ತೇಜಿಸುವ ಸಲುವಾಗಿ ಭಾರತದ ಈ ವಿಚಾರವನ್ನು ಅವರು ಚರ್ಚಿಸಿದ್ದಾರೆ. ಇದನ್ನೂ ಓದಿ: ಅಕ್ರಮ ಆಸ್ತಿ ಕೇಸ್; ಕೆ.ಆರ್. ಪುರಂ ತಹಶೀಲ್ದಾರ್ ಸಹೋದರ ಸೇರಿ ನಾಲ್ವರಿಗೆ ಲೋಕಾಯುಕ್ತ ನೋಟಿಸ್
ನವದೆಹಲಿಯಲ್ಲಿ ರಷ್ಯಾದ ರಾಯಭಾರಿ ಡೆನಿಸ್ ಅಲಿಪೋವ್ ಇತ್ತೀಚೆಗೆ ಮಾತನಾಡಿ, ರಷ್ಯಾ ಮತ್ತು ಭಾರತದ ಪಾಲುದಾರಿಕೆ ವಿಶ್ವಕ್ಕೆ ಬಲವನ್ನು ತೋರಿಸಿದೆ. ಇದರಿಂದಾಗಿ ಜಗತ್ತಿನಲ್ಲಿ ಎರಡೂ ದೇಶಗಳು ಬಲವಾಗಿ ಬೆಳೆಯುತ್ತಿವೆ ಎಂದಿದ್ದರು. ಆದರೆ ರಷ್ಯಾದ ಬಗ್ಗೆ ಪ್ರತಿದಿನ ಜಾಗತಿಕ ಮಟ್ಟದಲ್ಲಿ ಸುಳ್ಳು ಸುದ್ದಿಗಳು ಹಬ್ಬುತ್ತಿವೆ. ಅಲ್ಲದೇ ರಷ್ಯಾ ಮತ್ತು ಭಾರತದ ಸಂಬಂಧವನ್ನು ಅಡ್ಡಿಪಡಿಸುವ ಪ್ರಯತ್ನಗಳನ್ನು ಮಾಡಲಾಗುತ್ತಿದೆ ಎಂದಿದ್ದರು. ಇದನ್ನೂ ಓದಿ: ಚಾಮುಂಡಿಬೆಟ್ಟದಲ್ಲಿ ಆಷಾಢ ಸಂಭ್ರಮ – 60 ವರ್ಷ ಮೇಲ್ಪಟ್ಟವರಿಗೆ ನೇರ ದರ್ಶನ
ತುಮಕೂರು: ವಿಧಾನಸಭಾ ಚುನಾವಣೆ ಸಮೀಪಿಸುತಿದ್ದಂತೆ ಪ್ರಧಾನಿ ಮೋದಿ (PM Narendra Modi) ಅವರ ರಾಜ್ಯ ಪ್ರವಾಸವೂ ಜೋರಾಗಿದೆ. ಫೆ.6 ರಂದು ತುಮಕೂರಿನಲ್ಲಿ (Tumakuru) ನಿರ್ಮಾಣವಾಗಿರುವ ಎಚ್‌ಎಎಎಲ್ ಹೆಲಿಕಾಪ್ಟರ್ ಘಟಕ ಉದ್ಘಾಟನೆಗೆ ಪ್ರಧಾನಿ ಆಗಮಿಸಲಿದ್ದಾರೆ.
ಹಳೇ ಮೈಸೂರು (Old Mysuru) ಭಾಗದಲ್ಲಿ ಬಿಜೆಪಿಯನ್ನು ಬಲಗೊಳಿಸಬೇಕು ಎಂದು ಸಂಕಲ್ಪ ತೊಟ್ಟ ಕಮಲ ಪಡೆ ಪಧಾನಿ ಮೋದಿ ಅವರನ್ನು ಕರೆತಂದು ಎರಡನೇ ಹಂತದ ಪ್ರಚಾರ ಆರಂಭಿಸುತ್ತಿದೆ. ಅಂದು ಗುಬ್ಬಿ ತಾಲೂಕಿನ ನಿಟ್ಟೂರು ಬಳಿಯ ಬಿದರೆ ಕಾವಲ್ ಬಳಿಯಲ್ಲಿ ನೂತನವಾಗಿ ನಿರ್ಮಾಣಗೊಂಡಿರುವ ಹೆಲಿಕಾಪ್ಟರ್ ಘಟಕವನ್ನು (HAL Helicopter Manufacturing Unit) ಮೋದಿ ಲೋಕಾರ್ಪಣೆ ಮಾಡಲಿದ್ದಾರೆ.
ಅಂದು ಮಧ್ಯಾಹ್ನ 3 ಗಂಟೆಗೆ ಎಚ್‌ಎಎಲ್ ಹೆಲಿಪ್ಯಾಡ್‌ಗೆ ಪ್ರಧಾನಿ ಮೋದಿ ಆಗಮಿಸಲಿದ್ದಾರೆ. ಬಳಿಕ 3:15 ರಿಂದ ಪ್ರಾರಂಭವಾಗಲಿರುವ ವೇದಿಕೆ ಕಾರ್ಯಕ್ರಮದಲ್ಲಿ ಭಾಗಿಯಾಗಿ ಎಚ್‌ಎಎಲ್ ಘಟಕ ಉದ್ಘಾಟನೆ ಜೊತೆಗೆ ಜಲ ಜೀವನ್ ಮಿಷನ್ ಯೋಜನೆಗೆ ಚಾಲನೆ ನೀಡಲಿದ್ದಾರೆ.
ಯಾವ ಹೆಲಿಕಾಪ್ಟರ್ ತಯಾರಾಗುತ್ತೆ?
ಮೇಕ್ ಇನ್ ಇಂಡಿಯಾಗೆ ಒತ್ತು ನೀಡಲು ಸಂಪೂರ್ಣ ಸ್ವದೇಶದಲ್ಲೇ ಸೇನೆಗೆ ಅಗತ್ಯ ಇರುವ ಶಸ್ತ್ರ ಹಾಗೂ ವಾಹನಗಳನ್ನು ತಯಾರಿಸಿರುವ ದೂರ ದೃಷ್ಟಿ ಹಿನ್ನೆಯಲ್ಲಿ ಮೋದಿಯವರೇ 2016 ರಲ್ಲಿ ಈ ಘಟಕಕ್ಕೆ ಶಂಕುಸ್ಥಾಪನೆ ಮಾಡಿದ್ದರು. 2018 ರಲ್ಲಿ ಪ್ರಯೋಗಾರ್ಥವಾಗಿ ಹೆಲಿಕಾಪ್ಟರ್ ಹಾರಾಟ ಮಾಡಿತ್ತು. ಈ ಘಟಕ ಮೊದಲೇ ಕಾರ್ಯಾರಂಭ ಮಾಡಬೇಕಿತ್ತು. ಆದರೆ ಕೋವಿಡ್ ಇತ್ಯಾದಿ ಕಾರಣಗಳಿಂದ ತಡವಾಗಿ ಲೋಕಾರ್ಪಣೆಯಾಗುತ್ತಿದೆ.
ಒಟ್ಟು 616 ಎಕರೆ ಭೂ ಪ್ರದೇಶದಲ್ಲಿ 5 ಸಾವಿರ ಕೋಟಿ ರೂ. ವೆಚ್ಚದಲ್ಲಿ ಲಘು ಯುದ್ದ ಹೆಲಿಕಾಪ್ಟರ್‌ಗಳು ಇಲ್ಲಿ ತಯಾರಾಗಲಿದೆ. ಈ ಘಟಕದಲ್ಲಿ ತಯಾರಾದ 5 ರಿಂದ 6 ಮಂದಿ ಕುಳಿತುಕೊಳ್ಳುವ ಕಾಪ್ಟರ್‌ಗಳು ಭೂ ಸೇನೆ, ವಾಯುಸೇನೆಗೆ ಬಳಕೆಯಾಗಲಿದೆ. ಒಟ್ಟು 5 ಸಾವಿರ ಜನರಿಗೆ ಈ ಘಟಕದ ಮೂಲಕ ಉದ್ಯೋಗ ಲಭಿಸಲಿದೆ. ಇದನ್ನೂ ಓದಿ: ಫೆ.13 ರಿಂದ ಬೆಂಗ್ಳೂರಲ್ಲಿ ಏರ್ ಶೋ – LCA Tejas ಪ್ರಮುಖ ಆಕರ್ಷಣೆ
ಪ್ರಧಾನಿ ಮೋದಿ ಹಾಗೂ ಬಿಜೆಪಿ ಸರ್ಕಾರದ ಕನಸಿನ ಕೂಸು ಎಂದೇ ಬಿಂಬಿತವಾಗಿರುವ ಎಚ್‌ಎಎಲ್ ಘಟಕದ 614 ಎಕರೆ ಜಾಗದ ಪೈಕಿ 529 ಎಕರೆ ಜಾಗದಲ್ಲಿ ಹೆಲಿಕಾಪ್ಟರ್ ಬಿಡಿ ಭಾಗ ತಯಾರಿಸುವ, ಜೋಡಿಸುವ ಕಟ್ಟಡಗಳ ಘಟಕಗಳ ನಿರ್ಮಾಣವಾಗಿದೆ. ಈ ಘಟಕದಲ್ಲಿ ರನ್‌ವೇ, ಆಸ್ಪತ್ರೆ, ಆಡಳಿತ ವಿಭಾಗ ಸೇರಿದಂತೆ ಇನ್ನಿತರೆ ಕಚೇರಿಗಳನ್ನು ಒಳಗೊಂಡಿದೆ. ಈ ಘಟಕ ಸ್ಥಾಪನೆ ತುಮಕೂರು ಜಿಲ್ಲೆಯ ಪಾಲಿಗೆ ಹೊಸ ಮೈಲಿಗಲ್ಲನ್ನು ಸೃಷ್ಟಿಸಲಿದೆ ಎಂಬ ವಿಶ್ಲೇಷಣೆ ಕೇಳಿ ಬಂದಿದೆ.
ಪ್ರತಿ ವರ್ಷ 75 ಹೆಲಿಕಾಪ್ಟರ್ ತಯಾರಿಸುವ ಸಾಮರ್ಥ್ಯ ಈ ಘಟಕಕ್ಕಿದೆ. 1 ಲಘು ಹೆಲಿಕಾಪ್ಟರ್ ಉತ್ಪಾದನೆಗೆ 30 ಕೋಟಿ ರೂ. ವೆಚ್ಚವಾಗಲಿದ್ದು ಪ್ರತೀ ವರ್ಷ 2 ಸಾವಿರ ಕೋಟಿ ರೂ. ವಹಿವಾಟು ನಡೆಯಬಹುದು ಎಂದು ಅಂದಾಜಿಸಲಾಗಿದೆ.
ಮಾರ್ಗ ಬದಲಾವಣೆ:
ಮೋದಿ ಆಗಮನದ ಹಿನ್ನೆಲೆಯಲ್ಲಿ ಬೆಂಗಳೂರು ಹೊನ್ನಾವರ ರಾಷ್ಟ್ರೀಯ ಹೆದ್ದಾರಿಯ ಮಾರ್ಗ ಬದಲಿಸಲಾಗಿದೆ. ಫೆ.6 ರಂದು ತಿಪಟೂರು ಶಿವಮೊಗ್ಗ ಕಡೆಗೆ ಹೋಗುವ ವಾಹನಗಳು ನಿಟ್ಟೂರು, ಟಿ.ಬಿ.ಕ್ರಾಸ್, ತುರುವೇಕೆರೆ ಮೂಲಕ ಕೆ.ಬಿ.ಕ್ರಾಸ್ ಬದಲಾಯಿಸಲಾಗಿದೆ. ಅದೇ ರೀತಿ ಶಿವಮೊಗ್ಗ, ತಿಪಟೂರಿಂದ ಬೆಂಗಳೂರಿಗೆ ಹೋಗುವ ವಾಹನಗಳು ಕೂಡ ಕೆ.ಬಿ.ಕ್ರಾಸ್, ತುರುವೇಕೆರೆ, ಟಿ.ಬಿ.ಕ್ರಾಸ್ ಮೂಲಕ ನಿಟ್ಟೂರು ಮೂಲಕ ಸಾಗಬಹುದಾಗಿದೆ.
1 ಲಕ್ಷ ಜನ ಭಾಗಿ ಸಾಧ್ಯತೆ:
ಈ ಕಾರ್ಯಕ್ರಮಕ್ಕೆ ಸುಮಾರು ಒಂದು ಲಕ್ಷ ಜನ ಸೇರುವ ಸಾಧ್ಯತೆ ಇದೆ. ಸಾರ್ವಜನಿಕರೆಲ್ಲರಿಗೂ ಊಟದ ವ್ಯವಸ್ಥೆ ಮಾಡಲಾಗಿದೆ. ಕಾರ್ಯಕ್ರಮಕ್ಕೆ ಹಾಜರಾಗುವ ಸಾರ್ವಜನಿಕರು ನೀರಿನ ಬಾಟಲ್, ಬಟ್ಟೆ, ಸೇರಿದಂತೆ ಯಾವುದೇ ವಸ್ತುಗಳನ್ನು ತರುವಂತಿಲ್ಲ. ಸುಮಾರು 2.5 ಸಾವಿರ ಪೊಲೀಸರನ್ನು ಭದ್ರತೆಗೆಗಾಗಿ ನಿಯೋಜನೆ ಮಾಡಲಾಗಿದೆ.
Live Tv
[brid partner=56869869 player=32851 video=960834 autoplay=true]
ಬೆಂಗಳೂರು: ಕೆಎಸ್‌ಆರ್‌ಟಿಸಿಯ(KSRTC) ಅಂತರ ನಗರ ಎಲೆಕ್ಟ್ರಿಕ್ ಬಸ್(Electric Bus) ಸೇವೆಗೆ ಶಾಂತಿನಗರದಲ್ಲಿರುವ ಕೇಂದ್ರ ಕಚೇರಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಚಾಲನೆ ನೀಡಲಾಗಿದೆ.
ಭಾರತ ಸರ್ಕಾರದ ಮೇಕ್ ಇನ್ ಇಂಡಿಯಾ(Make In India) ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸಲಿದೆ.
ನಿಗಮವು ತನ್ನ ವಿದ್ಯುತ್ ವಾಹನಗಳಿಗೆ ‘ಇವಿ ಪವರ್ ಪ್ಲಸ್’ ಎಂದು ಹೆಸರಿಸಲಾಗಿದ್ದು ‘ಅತ್ಯುತ್ತಮ ಅನುಭವ’ ಎಂದು ಟ್ಯಾಗ್‍ಲೈನ್ ನೀಡಲಾಗಿದೆ.
ಈ ಪ್ರಾಯೋಗಿಕ ಯಶಸ್ವಿ ಕಾರ್ಯಾಚರಣೆ ನಂತರ ಬೆಂಗಳೂರಿನಿಂದ ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರು ಮಾರ್ಗಗಳಲ್ಲಿ ಕಾರ್ಯಚರಣೆಗೊಳಿಸಲು ಯೋಜಿಸಲಾಗಿದೆ. ವಿದ್ಯುತ್ ವಾಹನಗಳ ಚಾರ್ಜಿಂಗ್ ಕೇಂದ್ರವನ್ನು ಬೆಂಗಳೂರಿನ ಕೆಂಪೇಗೌಡ ಬಸ್ ನಿಲ್ದಾಣ, ಮೈಸೂರು, ಮಡಿಕೇರಿ, ವಿರಾಜಪೇಟೆ, ದಾವಣಗೆರೆ, ಶಿವಮೊಗ್ಗ ಹಾಗೂ ಚಿಕ್ಕಮಗಳೂರಿನಲ್ಲಿ ಸ್ಥಾಪಿಸಲಾಗುವುದು.
ಕೇಂದ್ರ ಸರ್ಕಾರದ “ಮೇಕ್ ಇನ್ ಇಂಡಿಯಾ” ವಿದ್ಯುತ್ ಬಸ್ ಫೇಮ್-2 ಯೋಜನೆ ಅಡಿಯಲ್ಲಿ 50 ಅಂತರ ನಗರ ಹವಾ ನಿಯಂತ್ರಿತ ವಿದ್ಯುತ್ ಚಾಲಿತ ಬಸ್ಸುಗಳನ್ನು ಮುಂದಿನ ದಿನಗಳಲ್ಲಿ ಕಾರ್ಯಾಚರಣೆಗೊಳಿಸುವ ಗುರಿಯನ್ನು ಹೊಂದಲಾಗಿದೆ. 2/5
ಎಂಇಐಎಲ್ ಹಾಗೂ ಕೆಎಸ್‌ಆರ್‌ಟಿಸಿ ಜಂಟಿಯಾಗಿ ರಸ್ತೆಗಿಳಿಸುತ್ತಿರುವ ಪರಿಸರ ಸ್ನೇಹಿ ಬಸ್ ಎರಡೂವರೆ ತಾಸು ಚಾರ್ಜ್ ಮಾಡಿದರೆ 300 ಕಿ.ಮೀ ಕ್ರಮಿಸುವಷ್ಟು ಸಾಮರ್ಥ್ಯ ಹೊಂದಿದೆ. ಸಂಪೂರ್ಣ ಹವಾನಿಯಂತ್ರಿತ ವ್ಯವಸ್ಥೆಯಿದೆ.
ಸಂಚರಿಸುವ ಹೊತ್ತಲ್ಲೇ ಅರ್ಧದಷ್ಟು ಬ್ಯಾಟರಿ ರಿಚಾರ್ಜ್ ಆಗುವ ರಿ ಜನರೇಷನ್ ಆಗುವ ಸಿಸ್ಟಮ್ ಇದಾಗಿದೆ. ಬಸ್ ಒಳಗೆ ಪ್ರಯಾಣಿಕರ ಅನುಕೂಲಕ್ಕೆ ಮೊಬೈಲ್ ಚಾರ್ಜಿಂಗ್ ಸ್ಪಾಟ್, ಮನರಂಜನೆಗಾಗಿ 2 ಟಿವಿ ಅಳವಡಿಸಲಾಗಿದೆ. ಒಟ್ಟಾರೆ ಬಸ್ 43 + 2 ಸೀಟಿಂಗ್ ಕೆಪಾಸಿಟಿ ಹೊಂದಿದೆ. ಬಸ್ ಸಂಪೂರ್ಣ ಸೆನ್ಸರ್ ಇರಲಿದೆ. ಮುಂದುಗಡೆ ಮತ್ತು ಹಿಂದುಗಡೆ ಕ್ಯಾಮೆರಾ ವ್ಯವಸ್ಥೆ ಇರಲಿದೆ. ಇದನ್ನೂ ಓದಿ: ಸಾಲ ಮಾಡಿ ವಿದೇಶಕ್ಕೆ ಪರಾರಿ – ಫೆಬ್ರವರಿಯಲ್ಲಿ ನೀರವ್ ಮೋದಿ ಆಸ್ತಿ ಹರಾಜು
ಈ ವೇಳೆ, ಅಪಘಾತದಲ್ಲಿ ಮೃತಪಟ್ಟ ಚಾಲಕನ ಕುಟುಂಬದ ಅವಲಂಬಿತರಿಗೆ ಅಪಘಾತ ಪರಿಹಾರ ವಿಮಾ ಸೌಲಭ್ಯದ 1 ಕೋಟಿ ರೂ. ಚೆಕ್ ಹಸ್ತಾಂತರಿಸಲಾಯ್ತು. ಅಂತರ ನಿಗಮ ವರ್ಗಾವಣೆ 1013 ನೌಕರರಿಗೆ ವರ್ಗಾವಣೆ ಆದೇಶವನ್ನು ನೀಡಲಾಯಿತು.
Live Tv
[brid partner=56869869 player=32851 video=960834 autoplay=true]
ಕೋಲಾರ/ಬೆಂಗಳೂರು: ಆಪಲ್ ಕಂಪನಿಗೆ ಐಫೋನ್ (Apple iPhone) ತಯಾರಿಸಿಕೊಡುವ ವಿಸ್ಟ್ರಾನ್ (Wistron Infocomm Manufacturing (India) Private Limited) ಕಂಪನಿಯನ್ನ ಖರೀದಿಸಲು ಟಾಟಾ ಸಮೂಹ (TaTa Group) ಉತ್ಸಾಹ ತೋರಿದೆ ಅನ್ನೋ ಮಾಹಿತಿ ಲಭ್ಯವಾಗಿದೆ.
ಕೋಲಾರದ (Kolara) ನರಸಾಪುರ ಕೈಗಾರಿಕಾ ಪ್ರದೇಶದಲ್ಲಿರುವ ವಿಸ್ಟ್ರಾನ್ ಘಟಕದ ಖರೀದಿಗೆ ಟಾಟಾ ಸಮೂಹ ಆಸಕ್ತಿ ತೋರಿದೆ. ಸುಮಾರು 4,000 ರಿಂದ 5,000 ಕೋಟಿ ಮೌಲ್ಯದ ಘಟಕ ಇದಾಗಿದ್ದು, ಆಪಲ್ ಐಫೊನ್ (Apple iPhone) ತಯಾರಿಸುವ ದೇಶದ ಮೂರು ಪ್ರಮುಖ ಘಟಕಗಳಲ್ಲಿ ಒಂದಾಗಿದೆ. ಇದನ್ನೂ ಓದಿ: 2024ರೊಳಗೆ Air India ಜೊತೆ ವಿಸ್ತಾರಾ ವಿಲೀನ – 2 ಸಾವಿರ ಕೋಟಿ ಹೂಡಿಕೆಗೆ ಟಾಟಾ ಚಿಂತನೆ
ಟಾಟಾ ಎಲೆಕ್ಟ್ರಾನಿಕ್ಸ್ ಪ್ರೈವೇಟ್ ಲಿಮಿಟೆಡ್, ದೇಶದಲ್ಲಿ ಮೊಬೈಲ್ ಉತ್ಪಾದನಾ ಕ್ಷೇತ್ರದಲ್ಲಿ ಹೆಚ್ಚಿನ ಹೂಡಿಕೆಗೆ ಮುಂದಾಗಿದೆ. ಅದರಂತೆ ಮೇಕ್ ಇನ್ ಇಂಡಿಯಾ ಯೋಜನೆಯಡಿ ಆಪಲ್ ಉತ್ಪಾದನೆಯ ಕಾರ್ಖಾನೆಯನ್ನು ಖರೀದಿಸುವುದು ಟಾಟಾ ಗುರಿಯಾಗಿದೆ. ಈಗಾಗಲೇ ದೇಶದಲ್ಲಿ ವಿಸ್ಟ್ರಾನ್ ಕಂಪನಿ ಆಪಲ್ ಐಫೋನ್ (Apple iPhone) ಉತ್ಪಾದಿಸುತ್ತಿವೆ. ಇದನ್ನೂ ಓದಿ: 50 ಕೋಟಿ ವಾಟ್ಸಪ್ ಬಳಕೆದಾರರ ಮಾಹಿತಿ ಸೋರಿಕೆ – ಭಾರೀ ಮೊತ್ತಕ್ಕೆ ಸೇಲ್!
2020 ಡಿಸೆಂಬರ್ 12 ರಂದು ಈ ಪ್ರತಿಷ್ಟಿತ ಬಹುರಾಷ್ಟ್ರೀಯ ವಿಸ್ಟ್ರಾನ್ ಕಂಪನಿಯಲ್ಲಿ ಕೆಲಸ ಮಾಡುವ ಕಾರ್ಮಿಕರು ವಿವಿಧ ಕಾರಣಗಳಿಂದ ದಾಂಧಲೆ ಮಾಡಿ ಕಂಪನಿಯನ್ನ ಧ್ವಂಸ ಮಾಡಿದ್ದರು. ಈ ವಿಚಾರ ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಯಾಗಿತ್ತು.
Live Tv
[brid partner=56869869 player=32851 video=960834 autoplay=true]
– ವಡೋದರಾದಲ್ಲಿ ನಿರ್ಮಾಣ, ಅ.30ಕ್ಕೆ ಮೋದಿ ಶಂಕುಸ್ಥಾಪನೆ – ಯುರೋಪ್ ಹೊರಗಡೆ ತೆರೆಯುತ್ತಿರುವ ಮೊದಲ ಏರ್‌ಬಸ್ ಘಟಕ
ನವದೆಹಲಿ: ಏರ್ ಇಂಡಿಯಾ ಖರೀದಿಸಿದ್ದ ಟಾಟಾ ಸಮೂಹ(Tata Group) ಈಗ ವಿಮಾನ ತಯಾರಿಸಲು ಮುಂದಾಗಿದೆ.
ಹೌದು. ಜಗತ್ತಿನ ದೊಡ್ಡ ವಿಮಾನ ತಯಾರಿಕಾ ಕಂಪನಿಗಳ ಪೈಕಿ ಒಂದಾಗಿರುವ ಯುರೋಪ್ ಮೂಲದ ಏರ್‌ಬಸ್(Airbus) ಜೊತೆಗೂಡಿ ಮೇಕ್ ಇನ್ ಇಂಡಿಯಾ(Make In India) ಅಡಿ ಟಾಟಾ ಸಮೂಹ ವಾಯುಸೇನೆಗೆ C-295MW ವಿಮಾನವನ್ನು ನಿರ್ಮಾಣ ಮಾಡಲಿದೆ.
ಗುಜರಾತಿನ ವಡೋದರಾದಲ್ಲಿ(Vadodara) ನಿರ್ಮಾಣ ಘಟಕ ಆರಂಭವಾಗಲಿದ್ದು ಪ್ರಧಾನಿ ನರೇಂದ್ರ ಮೋದಿ(Narenndra Modi) ಅ.30 ರಂದು ಶಂಕುಸ್ಥಾಪನೆ ನಡೆಸಲಿದ್ದಾರೆ. ಯೋಜನೆಯ ಒಟ್ಟು ವೆಚ್ಚ 21,935 ಕೋಟಿ ರೂ. ಆಗಿದ್ದು ವಿಮಾನವನ್ನು ನಾಗರಿಕ ಉದ್ದೇಶಗಳಿಗಾಗಿಯೂ ಬಳಸಬಹುದಾಗಿದೆ.
ಏನಿದು ಯೋಜನೆ?
ರಕ್ಷಣೆಯಲ್ಲಿ ಸ್ವಾವಲಂಬಿಯಾಗಲು ಭಾರತ ಮುಂದಾಗುತ್ತಿದ್ದು ಈ ನಿಟ್ಟಿನಲ್ಲಿ ಮೇಕ್ ಇನ್ ಇಂಡಿಯಾದ ಅಡಿ ಹಲವು ಯೋಜನೆಗಳನ್ನು ಕೈಗೆತ್ತಿಕೊಂಡಿದೆ. 2021ರ ಸೆಪ್ಟೆಂಬರ್‌ನಲ್ಲಿ ರಕ್ಷಣೆಗೆ ಸಂಬಂಧಿಸಿದ ಉಪಸಮಿತಿ ಏರ್‌ಬಸ್ ಕಂಪನಿಯ ಜೊತೆ 56 C-295MW ಸರಕು ವಿಮಾನ ಖರೀದಿ ಸಂಬಂಧ ಒಪ್ಪಂದ ನಡೆಸಿತ್ತು. ಏರ್‌ಬಸ್ ಕಂಪನಿ ಮೊದಲು ಹಾರಾಟಕ್ಕೆ ಯೋಗ್ಯವಾಗಿರುವ 16 ವಿಮಾನಗಳನ್ನು ನೀಡಬೇಕು. ಬಳಿಕ 40 ವಿಮಾನಗಳನ್ನು ಭಾರತದಲ್ಲೇ ತಯಾರಿಸಿ ವಾಯುಸೇನೆಗೆ ಹಸ್ತಾಂತರಿಸಬೇಕು ಎಂದು ಒಪ್ಪಂದದಲ್ಲಿ ತಿಳಿಸಲಾಗಿತ್ತು.
ವಾಯುಸೇನೆಗೆ 56 ವಿಮಾನಗಳ ವಿತರಣೆಯನ್ನು ಪೂರ್ಣಗೊಳಿಸಿದ ನಂತರ, ಏರ್‌ಬಸ್ ಡಿಫೆನ್ಸ್ ಭಾರತದಲ್ಲಿ ತಯಾರಿಸಿದ ವಿಮಾನಗಳನ್ನು ಸಿವಿಲ್ ಆಪರೇಟರ್‌ಗಳಿಗೆ ಮಾರಾಟ ಮಾಡಬಹುದು. ಅಷ್ಟೇ ಅಲ್ಲದೇ ಭಾರತ ಸರ್ಕಾರ ಅನುಮತಿ ನೀಡಿದ ದೇಶಗಳಿಗೆ ರಫ್ತು ಮಾಡಬಹುದಾಗಿದೆ
C-295MW ಸಮಕಾಲೀನ ತಂತ್ರಜ್ಞಾನದೊಂದಿಗೆ 5-10 ಟನ್ ಸಾಮರ್ಥ್ಯದ ಸಾರಿಗೆ ವಿಮಾನವಾಗಿದ್ದು ಅದು ವಾಯುಸೇನೆಯ ಹಳೆಯ ಅವ್ರೋ ವಿಮಾನವನ್ನು ಬದಲಾಯಿಸುತ್ತದೆ. ಎಲ್ಲಾ 56 ವಿಮಾನಗಳಿಗೆ ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ ಮತ್ತು ಭಾರತ್ ಡೈನಾಮಿಕ್ಸ್ ಲಿಮಿಟೆಡ್ ಅಭಿವೃದ್ಧಿ ಪಡಿಸಿರುವ ಸ್ಥಳೀಯ ಎಲೆಕ್ಟ್ರಾನಿಕ್ ವಾರ್‌ಫೇರ್ ಸೂಟ್‌ಗಳನ್ನು ಅಳವಡಿಸಲಾಗುತ್ತದೆ.
ಮುಂದಿನ ದಿನಗಳಲ್ಲಿ ಭಾರತದಲ್ಲಿ ವಾಯು ಸಾರಿಗೆ ದೊಡ್ಡ ಉದ್ಯಮವಾಗಿ ಬೆಳೆಯುವುದರಿಂದ ಆಮದು ಅವಲಂಬನೆಯನ್ನು ಕಡಿಮೆ ಮಾಡಲಿದೆ. ಹೆಚಿನ ರಫ್ತು ಮಾಡುವುದರ ಜೊತೆಗೆ ದೇಶೀಯ ವಿಮಾನಯಾನ ತಯಾರಿಕೆಯನ್ನು ವೃದ್ಧಿಸಲಿದೆ.
ಭಾರತದಲ್ಲಿ ಮಿಲಿಟರಿ ವಿಮಾನಗಳನ್ನು ಎಚ್‌ಎಎಲ್ ಕಂಪನಿ ತಯಾರಿಸುತ್ತಿದೆ. ಆದರೆ ವಿದೇಶಿ ಕಂಪನಿ ಮಿಲಿಟರಿ ವಿಮಾನಗಳನ್ನು ದೇಶದಲ್ಲಿ ತಯಾರಿಸಲು ಮುಂದಾಗುತ್ತಿರುವುದು ಇದೇ ಮೊದಲು.
Live Tv
[brid partner=56869869 player=32851 video=960834 autoplay=true]