Tag: ಮೇಕೆ ಮರಿ

  • ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಮಾನವನ ಮುಖ ಹೊತ್ತು ಜನಿಸಿದ ಮೇಕೆ ಮರಿ

    ಗಾಂಧಿನಗರ: ಆಗ ತಾನೇ ಜನಿಸಿದ ಮೇಕೆ ಮರಿಯೊಂದು ಮಾನವನಂತೆ ಮುಖ ಹೊಂದಿರುವ ಫೋಟೋ ಹಾಗೂ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.

    ಹೌದು. ಮಾನವನಂತೆ ಮುಖವಿರುವ ಮೇಕೆ ಮರಿಯೊಂದು ಜನಿಸಿರುವ ವಿಚಿತ್ರ ಘಟನೆ ಗುಜರಾತ್‍ನ ಸಾಂಗ್ದ್ ತಾಲೂಕಿನ ಟ್ಯಾಪಿ ನದಿಸಮೀಪದ ಸೆಲ್ಟಿಪಾಡಾ ಗ್ರಾಮದಲ್ಲಿ ನಡೆದಿದೆ. ಮೇಕೆಯಂತೆಯೇ, ಮೇಕೆ ಮರಿ ನಾಲ್ಕು ಕಾಲು ಹಾಗೂ ಕಿವಿಗಳನ್ನು ಹೊಂದಿದೆ. ಆದರೆ ಉಳಿದ ಅರ್ಧ ಭಾಗ ನೋಡಲು ಮನುಷ್ಯನಂತೆ ಕಾಣಿಸುತ್ತದೆ.

    ಈ ಮೇಕೆಯು ರೈತ ಅಜಯ್ಭಾಯ್ ಎಂಬವರ ಮನೆಯಲ್ಲಿ ಜನಿಸಿದ್ದು, ಹಣೆ, ಕಣ್ಣು, ಬಾಯಿ ಮತ್ತು ಗಲ್ಲ ಸೇರಿದಂತೆ ಕೆಲವು ಭಾಗಗಳು ಮನುಷ್ಯರಂತೆ ಇದೆ. ಅಲ್ಲದೆ ಮೇಕೆ ಬಾಲವನ್ನು ಸಹ ಹೊಂದಿಲ್ಲ. ಆದರೆ ಮೇಕೆ ಜನಿಸಿದ ಬಳಿಕ ಕೇವಲ ಹತ್ತು ನಿಮಿಷಗಳ ಕಾಲ ಮಾತ್ರ ಬದುಕಿತ್ತು.

    ವೈರಲ್ ಆಗಿರುವ ವೀಡಿಯೋದಲ್ಲಿ, ಮೇಕೆ ಮರಿಯನ್ನು ಗ್ರಾಮಸ್ಥರು ಸಮಾಧಿ ಮಾಡುವ ಮುನ್ನ ಪೂಜೆ ಮಾಡುವುದನ್ನು ಕಾಣಬಹುದಾಗಿದೆ. ಇದು ಪೂರ್ವಜರ ಜನ್ಮ ಎಂದು ಅವರು ಭಾವಿಸಿದ್ದಾರೆ.

  • ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ

    ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುತ್ತಿರುವ ಮೇಕೆ ಮರಿ

    ಬಾಗಲಕೋಟೆ: ಹುಟ್ಟಿದ ಮೂರೇ ದಿನಕ್ಕೆ ಮೇಕೆ ಮರಿಯೊಂದು ಹಾಲು ಕೊಡುವ ಮೂಲಕ ಪಶುವೈದ್ಯಕೀಯ ಲೋಕದಲ್ಲಿ ಅಚ್ಚರಿ ಮೂಡಿಸಿದೆ.

    ಬಾಗಲಕೋಟೆ ತಾಲೂಕಿನ ತುಳಸಿಗೇರಿ ಗ್ರಾಮದ ಹನಮಂತ ದಾಸನ್ನವರ ಎಂಬವರ ಮನೆಯಲ್ಲಿ ಇರುವ ಮೇಕೆ ಮರಿ ನಿತ್ಯ ಒಂದು ಕಪ್ ನಷ್ಟು ಹಾಲು ಕೊಡುತ್ತಿದೆ. ಮೇ 10 ರಂದು ಜನಿಸಿರುವ ಮೇಕೆ ಮರಿ ಹುಟ್ಟಿದ ಮೂರನೇ ದಿನದಲ್ಲಿ ಹಾಲು ಕೊಡುತ್ತಿದೆ.

    ಇಂದಿಗೂ ಒಂದು ಕಪ್ ಹಾಲು ಕೊಡುತ್ತಿದೆ. ಈ ವಿಷಯ ತಿಳಿದು ಗ್ರಾಮಕ್ಕೆ ಭೇಟಿ ನೀಡಿರುವ ಇಲಾಖೆ ಪ್ರಭಾರ ಡಿಡಿ ಡಾ. ಆರ್.ಎಸ್ ಪದರಾ ನೇತೃತ್ವದಲ್ಲಿ ಅಧಿಕಾರಿಗಳು ಮೇಕೆ ಮರಿ ಆರೋಗ್ಯ ತಪಾಸಣೆ ಮಾಡಿದ್ದಾರೆ. ಅಲ್ಲದೆ ಹಾಲು ಕೊಡುವುದನ್ನು ಕಂಡು ಅಧಿಕಾರಿಗಳು ಅಚ್ಚರಿಗೊಂಡಿದ್ದಾರೆ.

    ಸದ್ಯ ಮೇಕೆ ಮರಿಯ 10 ಎಂಎಂ ಹಾಲು ಸಂಗ್ರಹಿಸಿರುವ ಅಧಿಕಾರಿಗಳು ಹುಟ್ಟಿದ ಮೂರೇ ದಿನಕ್ಕೆ ಹಾಲು ಕೊಡುವ ಬಗ್ಗೆ ಅಧ್ಯಯನ ನಡೆಸಲು ಬೆಂಗಳೂರು ಪ್ರಯೋಗಾಲಯಕ್ಕೆ ಮೇಕೆ ಮರಿ ಹಾಲನ್ನು ಕಳುಹಿಸಿದ್ದಾರೆ.

  • ಮೇಕೆ ಮರಿಗಳಿಗೆ ಹಾಲುಣಿಸುವ ಆಕಳು!

    ಮೇಕೆ ಮರಿಗಳಿಗೆ ಹಾಲುಣಿಸುವ ಆಕಳು!

    ರಾಯಚೂರು: ಲಿಂಗಸಗೂರು ತಾಲೂಕಿನ ಕನ್ನಾಪುರಹಟ್ಟಿ ಗ್ರಾಮದಲ್ಲಿ ಹಸುವೊಂದು ನಿತ್ಯವೂ ಮೇಕೆ ಮರಿಗಳಿಗೆ ಹಾಲುಣಿಸುವ ಮೂಲಕ ಅಚ್ಚರಿಯನ್ನುಂಟು ಮಾಡಿದೆ.

    ಕನ್ನಾಪುರಹಟ್ಟಿ ಗ್ರಾಮದ ಯಮನೂರು ಮೇಗೂರು ಅವರ ಮನೆಯಲ್ಲಿ ಈ ಅಚ್ಚರಿ ನಡೆದಿದ್ದು, ಯಮನೂರು ಅವರಿಗೆ ಮಾತ್ರ ಹಾಲು ಕರಿಯಲು ಅವಕಾಶ ನೀಡುತ್ತದೆ. ಬೇರೆಯವರು ಕೆಚ್ಚಲಿಗೆ ಕೈ ಹಾಕುವಂತಿಲ್ಲ. ಒಂದು ವೇಳೆ ಹಾಗೇ ಗೊತ್ತಿಲ್ಲದೇ ಹಾಲು ಕರಿಯಲು ಹೋದರೆ ಆಕಳು ಒದೆಯುತ್ತದೆ.

    ಯಮನೂರು ಅವರು ಆಕಳು ಜೊತೆಗೆ ಮೇಕೆಯನ್ನೂ ಸಾಕಿದ್ದಾರೆ. ಕೆಲವು ದಿನಗಳ ಹಿಂದಷ್ಟೇ ಮೇಕೆಯೂ ನಾಲ್ಕು ಮರಿಗಳಿಗೆ ಜನ್ಮ ನೀಡಿದೆ. ಆದರೆ ಅದರ ಮೊಲೆಯಲ್ಲಿ ಹಾಲು ಬರುತ್ತಿಲ್ಲ. ಹೀಗಾಗಿ ಮೇಕೆ ಮರಿಗಳು ಕೊಟ್ಟಿಗೆಯಲ್ಲಿದ್ದ ಆಕಳು ಮೊಲೆಗೆ ಬಾಯಿ ಇಟ್ಟು ಹಾಲು ಕುಡಿಯುತ್ತಿವೆ. ಇದನ್ನೇ ಅಭ್ಯಾಸ ಮಾಡಿಕೊಂಡಿರುವ ಮರಿಗಳು ನಿತ್ಯವೂ ಆಕಳಿನ ಮೊಲೆ ಹಾಲನ್ನು ಕುಡಿದು ಬೆಳೆಯುತ್ತಿರುವುದು ಗ್ರಾಮಸ್ಥರ ಅಚ್ಚರಿಗೆ ಕಾರಣವಾಗಿದೆ.