Tag: ಮೇಕಿಂಗ್ ವಿಡಿಯೋ

  • ದರ್ಶನ್ ಫ್ಯಾನ್ಸ್ ಗೆ ಭರ್ಜರಿ ನ್ಯೂಸ್: ಮೇ 10ಕ್ಕೆ ‘ಡೆವಿಲ್’ ಮೇಕಿಂಗ್ ವಿಡಿಯೋ ರಿಲೀಸ್

    ದರ್ಶನ್ ಫ್ಯಾನ್ಸ್ ಗೆ ಭರ್ಜರಿ ನ್ಯೂಸ್: ಮೇ 10ಕ್ಕೆ ‘ಡೆವಿಲ್’ ಮೇಕಿಂಗ್ ವಿಡಿಯೋ ರಿಲೀಸ್

    ಡೆವಿಲ್ ಸಿನಿಮಾದ ಚಿತ್ರೀಕರಣ ವೇಳೆ ಕೈಗೆ ಏಟು ಮಾಡಿಕೊಂಡು ಆಸ್ಪತ್ರೆ ಪಾಲಾಗಿದ್ದ ನಟ ದರ್ಶನ್, ಶಸ್ತ್ರ ಚಿಕಿತ್ಸೆಯ ನಂತರ ಇದೀಗ ಸುಧಾರಿಸಿಕೊಂಡಿದ್ದಾರೆ. ಮತ್ತೆ ಚಿತ್ರೀಕರಣಕ್ಕೆ ಹೋಗಲು ರೆಡಿ ಕೂಡ ಆಗುತ್ತಿದ್ದರು. ಈ ಸಮಯದಲ್ಲಿ ಅಭಿಮಾನಿಗಳಿಗೆ ಗುಡ್ ನ್ಯೂಸ್ ಕೂಡ ಕೊಟ್ಟಿದ್ದಾರೆ. ಸಿನಿಮಾ ತಂಡವೇ ಪೋಸ್ಟರ್ ಬಿಡುಗಡೆ ಮಾಡಿದಂತೆ ಮೇ 10ಕ್ಕೆ ಡೆವಿಲ್ ಚಿತ್ರದ ಮೇಕಿಂಗ್ ವಿಡಿಯೋ ರಿಲೀಸ್ ಆಗಲಿದೆ.

    ಫ್ಯಾನ್ಸ್ ಗೆ ನಿರಾಸೆ

    ಒಂದು ಸಿನಿಮಾ ಗೆದ್ದಾಕ್ಷಣ ಅದರ ಸಿಕ್ವೇಲ್ಮಾ (Sequel) ಡೋಕೆ ಹೊರಡೋದು ಸಾಮಾನ್ಯ ಸಂಗತಿಯಾಗಿದೆ. ಎಷ್ಟೋ ಸಿನಿಮಾಗಳು ಮೊದಲ ಚಿತ್ರ ಗೆದ್ದ ನಂತರವೇ ಭಾಗ 2 ಚಿತ್ರವನ್ನು ಮಾಡಿದ್ದೂ ಇದೆ. ಆದರೆ, ನಾನು ಆ ರೀತಿ ಮಾಡುವುದಿಲ್ಲ ಎಂದು ಹೇಳುವ ಮೂಲಕ ನಟ ದರ್ಶನ್ (Darshan) ಅಚ್ಚರಿ ಮೂಡಿಸಿದ್ದಾರೆ.

    ಕಾಟೇರ ಸಿನಿಮಾ ಸೂಪರ್ ಹಿಟ್ ಆಗಿದೆ. ಶತದಿನೋತ್ಸವ ಕೂಡ ಆಚರಿಸಿಕೊಂಡಿದೆ. ಹಾಗಾಗಿ ಕಾಟೇರ 2 (Kaatera 2) ಸಿನಿಮಾ ಬರತ್ತಾ ಎನ್ನುವ ಕೆಟ್ಟ ಕುತೂಹಲ ಅವರ ಅಭಿಮಾನಿಗಳಲ್ಲಿ ಇತ್ತು. ಅದಕ್ಕೆ ದರ್ಶನ್ ಸ್ಪಷ್ಟನೆ ನೀಡಿದ್ದಾರೆ. ನಾನು ಗೆದ್ದಿತ್ತಿನ ಬಾಲ ಹಿಡಿಯೋದಿಲ್ಲ. ಹಾಗಾಗಿ ಕಾಟೇರ 2 ಬರಲ್ಲ ಅಂದಿದ್ದಾರೆ.

    ಕಾಟೇರ ಸಿನಿಮಾ ಕನ್ನಡದ ನೆಲದ ಸಿನಿಮಾ. 1970ರ ಕಾಲಘಟ್ಟದ ಕಥೆಯನ್ನು ಚೆಂದವಾಗಿ ತೆರೆಮೇಲೆ ತಂದಿದ್ದರು ನಿರ್ದೇಶಕ ತರುಣ್ ಸುಧೀರ್. ಮಾಲಾಶ್ರೀ ಪುತ್ರಿ ಆರಾಧನಾ ರಾಮ್ಗೂ ಕಾಟೇರ ದೊಡ್ಡ ಹಿಟ್ ನೀಡಿತ್ತು. ಕಥೆ ಬರೆದ ಜಡೇಶ್ ಕುಮಾರ್ ಹಂಪಿ, ಡೈಲಾಗ್ ಬರೆದ ಮಾಸ್ತಿಗೂ ಕಾಟೇರ ಸಿನಿಮಾ ಮರೆಯಲಾಗದ ಯಶಸ್ಸು ನೀಡಿತ್ತು. ಚಿತ್ರ ಶತದಿನೋತ್ಸವ ಕಂಡ ಬೆನ್ನಲ್ಲೇ ಬರಹಗಾರರಿಗೆ ನಿರ್ಮಾಪಕ ರಾಕ್ ಲೈನ್ ವೆಂಕಟೇಶ್ ಕಾರುಗಳನ್ನು ಉಡುಗೊರೆಯಾಗಿ ನೀಡಿದ್ದಾರೆ.

     

    ಈ ಹಿಂದೆ ‘ಕಾಟೇರ’ ಸಿನಿಮಾ ನೂರು ದಿನಗಳನ್ನು ಪೂರೈಸಿದ ಹಿನ್ನೆಲೆಯಲ್ಲಿ ನಿರ್ದೇಶಕ ತರುಣ್ ಸುಧೀರ್ ಮತ್ತು ತಂಡ ಕೇಕ್ ಕತ್ತರಿಸಿ ಸಂಭ್ರಮಿಸಿತ್ತು. ಈ ಸಂಭ್ರಮದಲ್ಲಿ ದರ್ಶನ್ ಕಾಣಿಸಿದೇ ಇದ್ದರೂ, ನೂರು ದಿನ ಖುಷಿಯನ್ನು ಅಭಿಮಾನಿಗಳಿಗಾಗಿ ಚಿತ್ರತಂಡ ಹಂಚಿಕೊಂಡಿತ್ತು. ನೂರು ದಿನಗಳನ್ನು (Hundred Days) ಪೂರೈಸಿದ ಬೆನ್ನಲ್ಲೇ ಕಾಟೇರ ಸಿನಿಮಾ ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರ ಕಂಡಿತ್ತು.

  • ನಿರ್ದೇಶಕರ ಹುಟ್ಟು ಹಬ್ಬಕ್ಕೆ ‘ಫುಲ್ ಮೀಲ್ಸ್’ ಮೇಕಿಂಗ್ ವಿಡಿಯೋ

    ಸಂಕಷ್ಟಕರ ಗಣಪತಿ,  ಫ್ಯಾಮಿಲಿ ಪ್ಯಾಕ್, ಅಬ್ಬಬ್ಬ ಚಿತ್ರಗಳ ಖ್ಯಾತಿಯ ನಾಯಕ ನಟ ಲಿಖಿತ್ ಶೆಟ್ಟಿ ನಟಿಸಿ ನಿರ್ಮಿಸುತ್ತಿರುವ ‘ಫುಲ್ ಮೀಲ್ಸ್’ (Full Meals) ಚಿತ್ರದ ನಿರ್ದೇಶಕ ಎನ್ ವಿನಾಯಕ (N. Vinayak) ಹುಟ್ಟು ಹಬ್ಬದ (Birthday) ಅಂಗವಾಗಿ ಚಿತ್ರತಂಡ ಮೇಕಿಂಗ್ ವೀಡಿಯೋ  ಒಂದನ್ನು ಬಿಡುಗಡೆ ಮಾಡಿ ನಿರ್ದೇಶಕರಿಗೆ ಶುಭಾಶಯ ಕೋರಿದೆ.

    ಸಿನೆಮಾಗೆ ಕೊನೆಯ ಹಂತದ ಡಬ್ಬಿಂಗ್ ಕೆಲಸ ನಡೆಯುತ್ತಿದ್ದು, ಆದಷ್ಟು ಶೀಘ್ರದಲ್ಲಿ ಸಿನೆಮಾವನ್ನು ತೆರೆಗೆ ತರುವ ಪ್ರಯತ್ನದಲ್ಲಿ ಚಿತ್ರತಂಡವಿದೆ.  ಮೊದಲ ಬಾರಿಗೆ ನಿರ್ದೇಶನದ ಜವಾಬ್ದಾರಿ ಹೊತ್ತಿರುವ ಎನ್.ವಿನಾಯಕ, ಈ ಹಿಂದೆ ಹಲವು ಕಿರುಚಿತ್ರ ಮತ್ತು ಮ್ಯೂಸಿಕ್ ವೀಡಿಯೋ ಗಳ ಮೂಲಕ ಸಾಕಷ್ಟು ಗುರುತಿಸಿಕೊಂಡಿದ್ದರು. ಹಾಗೆಯೇ ಕಿರುಚಿತ್ರ ಮತ್ತು ಮ್ಯೂಸಿಕ್ ವೀಡಿಯೋಗಳಿಗಾಗಿ ಹಲವು ಪ್ರಶಸ್ತಿಗಳನ್ನೂ ಪಡೆದಿದ್ದರು.

    ವಿನಾಯಕ್ ಪ್ರತಿಭೆಯ ಮೇಲೆ ನಂಬಿಕೆ ಇಟ್ಟು ನಿರ್ದೇಶನದ ಜವಾಬ್ದಾರಿ ಕೊಟ್ಟಿದ್ದ ನಾಯಕ, ನಿರ್ಮಾಪಕ ‘ಲಿಖಿತ್ ಶೆಟ್ಟಿ’ ವಿನಾಯಕ್ ಅವರ ಕಾರ್ಯ ವೈಖರಿಯಿಂದ ಖುಷಿಯಾಗಿದ್ದಾರೆ. ಕನ್ನಡ ಮತ್ತೊಬ್ಬ ಭರವಸೆಯ ನಿರ್ದೇಶಕ ಸಿಗುವ ಭರವಸೆಯನ್ನು ವ್ಯಕ್ತಪಡಿಸಿದ್ದಾರೆ.  ವೆಡ್ಡಿಂಗ್ ಫೋಟೋಗ್ರಾಫರ್ ಸುತ್ತ ಸುತ್ತುವ ಕಥಾ ಹಂದರವನ್ನು ಹೊಂದಿರುವ ಸಿನೆಮಾ, ಮನೋರಂಜನೆಯ ಜೊತೆಗೆ ಸಾಕಷ್ಟು ಹೊಸ ವಿಷಯಗಳನ್ನು ಒಳಗೊಂಡಿದ್ದು, ಪ್ರೇಕ್ಷಕರು ಸಿನೆಮಾವನ್ನು ಇಷ್ಟಪಡುತ್ತಾರೆಂಬ ವಿಶ್ವಾಸ ಚಿತ್ರತಂಡಕ್ಕಿದೆ.  ಸಿನೆಮಾಗೆ ಹರೀಶ್ ಗೌಡ ಸಂಭಾಷಣೆ ಬರೆದಿದ್ದು, ಮನೋಹರ್ ಜೋಷಿ ಛಾಯಾಗ್ರಹಣ,  ಗುರು ಕಿರಣ್ ಸಂಗೀತ, ದೀಪು ಎಸ್ ಕುಮಾರ್ ಸಂಕಲನ ಚಿತ್ರಕ್ಕಿದೆ.

    ಉಳಿದಂತೆ ತಾರಾಗಣದಲ್ಲಿ ರಂಗಾಯಣ ರಘು, ವಿಜಯ್ ಚಂಡೂರ್, ರವಿ ಶಂಕರ್ ಗೌಡ, ರಾಜೇಶ್ ನಟರಂಗ, ಸುಜಯ್ ಶಾಸ್ತ್ರಿ, ಚಂದ್ರಕಲಾ ಮೋಹನ್, ಸೂರಜ್ ಲೋಕ್ರೆ, ಹೂನ್ನವಳ್ಳಿ ಕೃಷ್ಣ, ರಮೇಶ್ ಪಂಡಿತ್, ನಾಗೇಂದ್ರ ಅರಸ್, ಮೂಗು ಸುರೇಶ್ ಸೇರಿದಂತೆ ದೊಡ್ಡ ತಾರಾ ಬಳಗವೇ ಇದೆ.

  • ಸುದೀಪ್ ಅಳಿಯನ ‘ಜಿಮ್ಮಿ’ ಚಿತ್ರದ ಕ್ಯಾರೆಕ್ಟರ್ ಗ್ಲಿಂಪ್ಸ್ ಮೇಕಿಂಗ್ ವಿಡಿಯೋ ರಿಲೀಸ್

    ಸುದೀಪ್ ಅಳಿಯನ ‘ಜಿಮ್ಮಿ’ ಚಿತ್ರದ ಕ್ಯಾರೆಕ್ಟರ್ ಗ್ಲಿಂಪ್ಸ್ ಮೇಕಿಂಗ್ ವಿಡಿಯೋ ರಿಲೀಸ್

    ಕಿಚ್ಚ ಸುದೀಪ್ (Sudeep) ಅವರ ಸಹೋದರಿಯ ಮಗ ಸಂಚಿತ್ ನಟಿಸಿ, ನಿರ್ದೇಶನ ಮಾಡುತ್ತಿರುವ ಜಿಮ್ಮಿ (Jimmy) ಸಿನಿಮಾದ ಕ್ಯಾರೆಕ್ಟರ್ (Character Glimpses) ಗ್ಲಿಂಪ್ಸ್ ಮೇಕಿಂಗ್ ವಿಡಿಯೋ ಇಂದು ರಿಲೀಸ್ ಆಗಿದೆ. ವಿಡಿಯೋ ತುಣುಕೊಂದನ್ನು ಲಹರಿ ಮ್ಯೂಸಿಕ್ (Lahari Music) ಯೂಟ್ಯೂಬ್ ಚಾನೆಲ್ ನಲ್ಲಿ ಬಿಡುಗಡೆಯಾಗಿದ್ದು, ಸಂಚಿತ್ ಚೆನ್ನಾಗಿ ಕಾಣಿಸಿಕೊಂಡಿದ್ದಾರೆ. ಪಕ್ಕಾ ತಯಾರಿ ಮಾಡಿಕೊಂಡೇ ಈ ಸಿನಿಮಾ ಮಾಡುತ್ತಿರುವುದು ಆ ವಿಡಿಯೋದಿಂದ ಗೊತ್ತಾಗುತ್ತದೆ.

    ಶೂಟಿಂಗ್ ಸಮಯದಲ್ಲಿ ತಾತ, ಅಜ್ಜಿ, ತಾಯಿ ಮತ್ತು ಸುದೀಪ್ ಮಗಳು ಕೂಡ ಹಾಜರಿದ್ದು, ಸಂಚಿತ್ ಗೆ ಪ್ರೋತ್ಸಾಹಿಸುತ್ತಿರುವ ವಿವರಗಳು ಕೂಡ ವಿಡಿಯೋದಲ್ಲಿ ಲಭ್ಯವಿದೆ. ಸಾಹಸ ಸನ್ನಿವೇಶವೊಂದನ್ನು ಚಿತ್ರೀಕರಿಸುವ ದೃಶ್ಯ ಕೂಡ ವಿಡಿಯೋದಲ್ಲಿದೆ. ಸಖತ್ತಾಗಿರುವ ಲೈಟಿಂಗ್ ಮತ್ತು ಡೈರೆಕ್ಷನ್ ಅನ್ನು ಅದು ಒಳಗೊಂಡಿದೆ. ಇದನ್ನೂ ಓದಿ:ಗಂಡು ಮಗುವಿಗೆ ಜನ್ಮ ನೀಡಿದ ರಾಧಿಕಾ ರಾವ್

    ಸಕಲ ತಯಾರಿಯೊಂದಿಗೆ ಸಂಚಿತ್ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ್ದಾರೆ. ವಿಶೇಷ ಅಂದ್ರೆ ತಾವು ನಟಿಸುವ ಚೊಚ್ಚಲ ಚಿತ್ರವನ್ನು ತಾವೇ ನಿರ್ದೇಶನ ಕೂಡ ಮಾಡುತ್ತಿದ್ದಾರೆ. ಕಿಚ್ಚ ಕ್ರಿಯೇಷನ್ಸ್ ಬ್ಯಾನರ್ ಜೊತೆ ಕೆ.ಪಿ ಶ್ರೀಕಾಂತ್, ಮನೋಹರ್ ನಾಯ್ಡು ಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ.

    ತಮ್ಮ ಮೊದಲ ಸಿನಿಮಾದಲ್ಲೇ ನಟನೆಯ ಜೊತೆ ನಿರ್ದೇಶನ (Direction) ಕೂಡ ಸಂಚಿತ್ ಮಾಡ್ತಿದ್ದಾರೆ. ಮೂಲಕ ಚಿತ್ರರಂಗಕ್ಕೆ ಯುವನಟ ಸಂಚಿತ್ ಹೊಸ ಹೆಜ್ಜೆ ಇಟ್ಟಿದ್ದಾರೆ. ಇದೊಂದು ಕ್ರೈಂ ಡ್ರಾಮಾ ಆಧರಿಸಿದ ಸಿನಿಮಾವಾಗಿದ್ದು, ತಂದೆಮಗನ ಬಾಂಧವ್ಯವನ್ನು ಸಾರುವ ಕಥೆಯನ್ನು ಚಿತ್ರದ ಮೂಲಕ ತೋರಿಸಲಿದ್ದಾರೆ.

     

    ಲಹರಿ ಸಂಸ್ಥೆಯ (Lahari Films) ಮನೋಹರ್ ನಾಯ್ಡು, ವೀನಸ್ ಮೂವಿಸ್ ಕೆ. ಪಿ ಶ್ರೀಕಾಂತ್ ಈಗಾಗಲೇ 2 ಸಿನಿಮಾ ನಿರ್ಮಿಸ್ತಿದ್ದಾರೆ. ಉಪೇಂದ್ರ ನಟನೆಯಯುಐಚಿತ್ರಕ್ಕೆ ಬಂಡವಾಳ ಹೂಡಿದ್ದಾರೆ. ಇನ್ನು ಸೆಟ್ಟೇರಿ ನಿಂತೇ ಹೋಗಿದ್ದ ವಿನಯ್ ರಾಜ್ಕುಮಾರ್ ನಟನೆಯಗ್ರಾಮಾಯಣಮರುಜೀವ ಕೊಟ್ಟಿದ್ದಾರೆ. ನಂತರ ಸಂಚಿತ್ ನಟನೆಯ ಚಿತ್ರಕ್ಕೆ ಜೋಡಿ ಬಂಡವಾಳ ಹೂಡಿದೆ.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಕುರುಕ್ಷೇತ್ರದ ಅದ್ಧೂರಿ ಮೇಕಿಂಗ್ ರಿಲೀಸ್ – ನೋಡೋಕೆ ಮಸ್ತಾಗೈತೆ ಮುನಿರತ್ನ ಮೇಕಿಂಗ್

    ಕುರುಕ್ಷೇತ್ರದ ಅದ್ಧೂರಿ ಮೇಕಿಂಗ್ ರಿಲೀಸ್ – ನೋಡೋಕೆ ಮಸ್ತಾಗೈತೆ ಮುನಿರತ್ನ ಮೇಕಿಂಗ್

    ಬೆಂಗಳೂರು: ಸ್ಯಾಂಡಲ್‍ವುಡ್‍ನ ಮಹತ್ವಕಾಂಕ್ಷೆಯ, ಕನ್ನಡ ಚಿತ್ರರಂಗದಲ್ಲಿ ಹೊಸ ಮೈಲಿಗಲ್ಲು ಬರೆಯಲು ಸಿದ್ಧವಾಗಿರುವ `ಮುನಿರತ್ನ ಕುರುಕ್ಷೇತ್ರ’ ಚಿತ್ರದ ಮೇಕಿಂಗ್ ರಿಲೀಸ್ ಆಗಿದೆ.

    ಚಾಲೆಂಜಿಂಗ್ ಸ್ಟಾರ್ ದರ್ಶನ್, ಕ್ರೇಜಿಸ್ಟಾರ್ ರವಿಚಂದ್ರನ್, ಅರ್ಜುನ್ ಸರ್ಜಾ, ರೆಬಲ್ ಸ್ಟಾರ್ ಅಂಬರೀಶ್, ನಿಖಿಲ್ ಕುಮಾರ್ ಹಾಗೂ ಕುರುಕ್ಷೇತ್ರದ ಅಷ್ಟು ಕಲಾವಿದರು ಶೂಟಿಂಗ್ ಟೈಮಲ್ಲಿ ಹೇಗಿದ್ದರು. ಹೈದ್ರಾಬಾದ್‍ನ ರಾಮೋಜಿರಾವ್ ಫಿಲ್ಮ್ ಸಿಟಿಯಲ್ಲಿ ಚಿತ್ರೀಕರಣ ವೇಳೆ ಏನೆಲ್ಲಾ ಫನ್ ನಡೀಯಿತು. ನಿರ್ಮಾಪಕ ಮುನಿರತ್ನ ಚಿತ್ರತಂಡದ ಜೊತೆ ಹೇಗೆಲ್ಲಾ ಕಾಲ ಕಳೆದರೂ ಅನ್ನೋದನ್ನು ಮೇಕಿಂಗ್‍ನಲ್ಲಿ ತೋರಿಸಲಾಗಿದೆ.

    ಮುನಿರತ್ನ ಅವರ ಕನಸಿನ ಸಿನಿಮಾ `ಕುರುಕ್ಷೇತ್ರ’ ಬರೋಬ್ಬರಿ 50 ರಿಂದ 60 ಕೋಟಿ ರೂ. ವೆಚ್ಚದಲ್ಲಿ ವೃಷಭಾದ್ರಿ ಪ್ರೊಡಕ್ಷನ್ ಅಡಿಯಲ್ಲಿ ನಿರ್ಮಾಣವಾಗುತ್ತಿದೆ. ನಿರ್ದೇಶಕ ನಾಗಣ್ಣ ಸಾರಥ್ಯದಲ್ಲಿ ಕುರುಕ್ಷೇತ್ರ ಅದ್ಧೂರಿಯಾಗಿ ಮೂಡಿಬಂದಿದ್ದು, ಈ ಮೊದಲು ದರ್ಶನ್ ಅಭಿನಯದ `ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ಚಿತ್ರವನ್ನು ನಾಗಣ್ಣ ನಿರ್ದೇಶಿಸಿದ್ದರು. ಇನ್ನೇನು ಕೆಲವೇ ದಿನಗಳಲ್ಲಿ ವಿಶ್ವಾದ್ಯಂತ ತೆರೆಕಾಣಲಿದೆ.

    ದುರ್ಯೋಧನ ಪಾತ್ರದಲ್ಲಿ ದರ್ಶನ್ ಮಿಂಚುತ್ತಿದ್ದು, ಅರ್ಜುನ್ ಸರ್ಜಾ (ಕರ್ಣ), ರವಿಚಂದ್ರನ್ (ಶ್ರೀಕೃಷ್ಣ), ಅಂಬರೀಶ್ (ಭೀಷ್ಮ), ಸೋನು ಸೂದ್ (ಅರ್ಜುನ), ನಿಖಿಲ್ ಕುಮಾರ್ (ಅಭಿಮನ್ಯು), ಮೇಘನಾ ರಾಜ್ (ಭಾನುಮತಿ), ಸ್ನೇಹಾ (ದ್ರೌಪದಿ) ಸೇರಿದಂತೆ ಹಲವರು ಅಭಿನಯಿಸಿದ್ದಾರೆ.

  • 3D ಯಲ್ಲಿ ರೋಬೋ 2.0 ಮೂಡಿ ಬಂದಿದ್ದು ಹೇಗೆ? ಮೇಕಿಂಗ್ ವಿಡಿಯೋ ನೋಡಿ

    3D ಯಲ್ಲಿ ರೋಬೋ 2.0 ಮೂಡಿ ಬಂದಿದ್ದು ಹೇಗೆ? ಮೇಕಿಂಗ್ ವಿಡಿಯೋ ನೋಡಿ

    ಬೆಂಗಳೂರು: ಭಾರತೀಯ ಸಿನಿ ರಸಿಕರು ಕಾತುರದಿಂದ ಕಾಯುತ್ತಿರುವ ರೋಬೋ 2.0 ಸಿನಿಮಾದ ಮತ್ತೊಂದು ಮೇಕಿಗ್ ವಿಡಿಯೋ ರಿಲೀಸ್ ಆಗಿದ್ದು, ಸಿನಿಮಾ ಹೇಗೆ ನಿರ್ಮಾಣವಾಗಿದೆ ಎಂಬುದನ್ನು ನೋಡಬಹುದಾಗಿದೆ.

    ಎಂದಿರನ್ (ರೋಬೋಟ್) ಮುಂದುವರೆದ ಭಾಗ ಇದಾಗಿದ್ದು, ಸಿನಿಮಾ ಸೆಟ್ಟೇರಿದಾಗಿನಿಂದಲೂ ಸಖತ್ ಕ್ರೇಜ್ ಹುಟ್ಟು ಹಾಕಿದೆ. ಕೆಲವು ತಿಂಗಳು ಹಿಂದೆ ರಜನೀಕಾಂತ್ ಮತ್ತು ಅಕ್ಷಯ್ ಕುಮಾರ್ ಇಬ್ಬರೂ ಸಿನಿಮಾಗಾಗಿ ರೆಡಿಯಾಗುವ ಮೇಕಿಂಗ್ ವಿಡಿಯೋ ಬಿಡುಗಡೆ ಮಾಡಲಾಗಿತ್ತು.

    ಇನ್ನೂ ಈ ಮೇಕಿಂಗ್ ವಿಡಿಯೋದಲ್ಲಿ ಎಲ್ಲ ತಂತ್ರಜ್ಞರು, ನಟರು ತಮ್ಮ ಅನುಭವಗಳನ್ನು ನೋಡುಗರೊಂದಿಗೆ ಹಂಚಿಕೊಂಡಿದ್ದಾರೆ. ರಜನಿಕಾಂತ್ ಸಹ ಸಿನಿಮಾ ನೋಡಿದ ಮೇಲೆ ಅಭಿಮಾನಿಗಳ ರಿಆ್ಯಕ್ಷನ್ ಕೇಳಲು ಕಾತುರನಾಗಿದ್ದೇನೆ ಎಂದು ತಿಳಿಸಿದ್ದಾರೆ. ಸಿನಿಮಾದಲ್ಲಿ ಅತಿ 3ಡಿ ತಂತ್ರಜ್ಞಾನವನ್ನು ಬಳಸಿಕೊಳ್ಳಲಾಗಿದೆ. ಈ ಸಿನಿಮಾದ ಬಳಿಕ ಭಾರತೀಯ ಸಿನಿಮಾ ಉದ್ಯಮದಲ್ಲಿ ಸಾಕಷ್ಟು ಬದಲಾವಣೆಗಳು ಆಗಲಿವೆ ಎಂದು ಚಿತ್ರತಂಡ ಹೇಳಿದೆ.

    2.0 ಸಿನಿಮಾದಲ್ಲಿ ರಜನಿಕಾಂತ್, ಅಕ್ಷಯ್ ಕುಮಾರ್ ಮತ್ತು ಆ್ಯಮಿ ಜಾಕ್ಸನ್ ಮುಖ್ಯಭೂಮಿಕೆಯಲ್ಲಿ ನಟಿಸಿದ್ದಾರೆ. ಎಸ್.ಶಂಕರ್ ಆ್ಯಕ್ಷನ್ ಕಟ್ ಹೇಳಿದ್ದು, ಎ.ಆರ್.ರೆಹಮಾನ್ ಸಂಗೀತದಲ್ಲಿ ಹಾಡುಗಳು ಮೂಡಿ ಬಂದಿವೆ. ಸಿನಿಮಾ ತೆಲಗು ಮತ್ತು ಹಿಂದಿಯಲ್ಲಿ ಮೂಡಿಬರಲಿದೆ.

    2010ರಲ್ಲಿ ಮೊದಲ ರೋಬೋಟ್ ಸಿನಿಮಾ ತೆರೆ ಕಂಡಿತ್ತು. ರಜನಿ ಮತ್ತು ಐಶ್ವರ್ಯ ರೈ ನಟಿಸಿದ್ದ ಸಿನಿಮಾ ಕೋಟಿ ಕೋಟಿ ಹಣವನ್ನು ಲೂಟಿ ಮಾಡಿತ್ತು. ಸುಮಾರು ಎರಡು ವರ್ಷಗಳ ಚಿತ್ರೀಕರಣದ ನಂತರ ತೆರೆ ಕಂಡಿದ್ದ ಅದು ರಜನಿ ವೃತ್ತಿ ಬದುಕಿಗೆ ಹೊಸ ಇಮೇಜ್ ನೀಡಿತ್ತು. ಭಾರತೀಯ ಚಿತ್ರರಂಗದಲ್ಲೂ ಹಾಲಿವುಡ್ ಲೆವೆಲ್‍ನ ಸಿನಿಮಾ ಮಾಡುವ ಪ್ರತಿಭಾವಂತ ನಿರ್ದೇಶಕರು, ತಂತ್ರಜ್ಞರು ಇದ್ದಾರೆಂದು ಎದೆ ತಟ್ಟಿಕೊಂಡು ಹೇಳಿತ್ತು.