Tag: ಮೇಕಪ್ ಕಿಟ್

  • ಚುನಾವಣೆಯಲ್ಲಿ ಗೆದ್ರೆ ಉಚಿತ ಮೇಕಪ್ ಕಿಟ್ ಕೊಡುತ್ತೇನೆ: ಅಭ್ಯರ್ಥಿಯ ಪೋಸ್ಟರ್ ವೈರಲ್

    ಚುನಾವಣೆಯಲ್ಲಿ ಗೆದ್ರೆ ಉಚಿತ ಮೇಕಪ್ ಕಿಟ್ ಕೊಡುತ್ತೇನೆ: ಅಭ್ಯರ್ಥಿಯ ಪೋಸ್ಟರ್ ವೈರಲ್

    ಚಂಡೀಗಢ: ಚುನಾವಣೆಯಲ್ಲಿ (Election) ಗೆಲ್ಲಲು ಅಭ್ಯರ್ಥಿಗಳು ಏನೆಲ್ಲಾ ಸರ್ಕಸ್ ಮಾಡಲ್ಲ? ಜನರ ಮತವನ್ನು ಸೆಳೆಯಲು ಭರವಸೆಗಳ ಸರಮಾಲೆಯನ್ನೇ ಹರಿಸುತ್ತಾರೆ. ಆದರೆ ಅವರ ಭರವಸೆಗಳು ನಿಜವಾಗುತ್ತೋ ಇಲ್ಲವೋ ಎಂಬುದು ಅವರು ಗೆದ್ದ ಬಳಿಕವೇ ಸಾಬೀತಾಗಬೇಕು.

    ಇಲ್ಲೊಬ್ಬ ಪಂಚಾಯತ್ ಚುನಾವಣಾ ಅಭ್ಯರ್ಥಿ (Candidate) ತಾನು ಗೆದ್ದರೆ, ಭವಿಷ್ಯದಲ್ಲಿ ಎಂತೆಂತಹ ಯೋಜನೆಗಳನ್ನು ಜಾರಿಗೆ ತರುತ್ತಾರೆ ಎಂದು ಒಂದು ಪೋಸ್ಟರ್‌ನಲ್ಲಿ (Poster) ಬರೆದು ಹಾಕಿದ್ದಾರೆ. ಅಭ್ಯರ್ಥಿಯ ಭರವಸೆಗಳ ಲಿಸ್ಟ್ ನೋಡಿ ನೆಟ್ಟಿಗರು ಹುಬ್ಬೇರಿಸಿದ್ದಾರೆ.

    ಹರಿಯಾಣದ (Haryana) ಸಿರ್ನಾದ್ ಗ್ರಾಮದಲ್ಲಿ ಸರಪಂಚ್ ಸ್ಥಾನಕ್ಕೆ ಸ್ಪರ್ಧಿಸುತ್ತಿರುವ ಅಭ್ಯರ್ಥಿ ಜೈಕರನ್ ಲಾಥ್ವಾಲ್ ಅವರು ಚುನಾವಣೆಯಲ್ಲಿ ಗೆದ್ದರೆ, ಭವಿಷ್ಯದಲ್ಲಿ ಅವರು ಕುಗ್ರಾಮದಲ್ಲಿ 3 ವಿಮಾನ ನಿಲ್ದಾಣಗಳನ್ನು ನಿರ್ಮಿಸಲು ಪ್ರಾರಂಭಿಸುತ್ತೇನೆ. ಪೆಟ್ರೋಲ್ ಬೆಲೆಯನ್ನು ಲೀಟರ್‌ಗೆ 20 ರೂ. ಹಾಗೂ ಗ್ಯಾಸ್ ಸಿಲಿಂಡರ್ ಬೆಲೆಯನ್ನು 100 ರೂ.ಗೆ ಇಳಿಸುತ್ತೇನೆ. ಸರಕು ಮತ್ತು ಸೇವಾ ತೆರಿಗೆಯನ್ನೂ (GST) ತೆಗೆದುಹಾಕುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: ಕಾರು ನಿಲ್ಲಿಸಿ ಅಭಿಮಾನಿಯಿಂದ ತಾಯಿಯ ಫೋಟೋ ಸ್ವೀಕರಿಸಿದ ಮೋದಿ

    ಅವರ ಭರವಸೆಗಳ ಪಟ್ಟಿ ಇಷ್ಟಕ್ಕೇ ಮುಗಿಯದೇ ಇನ್ನೂ ಬೆಳೆಯುತ್ತಲೇ ಹೋಗಿದ್ದು, ಉಚಿತ ವೈ-ಫೈ, ಎಲ್ಲಾ ಮಹಿಳೆಯರಿಗೆ ಮೇಕಪ್ ಕಿಟ್‌ಗಳು, ಪ್ರತಿ ಕುಟುಂಬಕ್ಕೆ ಉಚಿತ ಬೈಕುಗಳು, ಮದ್ಯವ್ಯಸನಿಯಾಗಿದ್ದರೆ ದಿನಕ್ಕೆ ಒಂದು ಮದ್ಯದ ಬಾಟಲಿ, ಉಳಿದವರಿಗೆ ಇತರ ಉಚಿತ ವಸ್ತುಗಳು, ಸಿರ್ಸಾದ್‌ನಿಂದ ದೆಹಲಿಗೆ ಮೆಟ್ರೋ ಮಾರ್ಗ ಮತ್ತು ವಿಮಾನ ನಿಲ್ದಾಣಗಳನ್ನು ಹೊರತುಪಡಿಸಿ ಹಳ್ಳಿಯಿಂದ ಗೊಹಾನಾಗೆ ಪ್ರತಿ 5 ನಿಮಿಷಕ್ಕೆ ಹೆಲಿಕಾಪ್ಟರ್ ಸೇವೆಯನ್ನು ಒದಗಿಸುವುದಾಗಿ ತಿಳಿಸಿದ್ದಾರೆ.

    ಲಾಥ್ವಾಲ್ ಅವರ ಭರವಸೆಗಳಿಂದ ಅವರು ಪಂಚಾಯತ್ ಚುನಾವಣೆಯಲ್ಲಿ ಗೆಲ್ಲುತ್ತಾರೋ ಇಲ್ಲವೋ ಗೊತ್ತಿಲ್ಲ. ಆದರೆ ಅವರ ಪೋಸ್ಟರ್ ಇದೀಗ ಟ್ವಿಟ್ಟರ್‌ನಲ್ಲಿ ಭಾರೀ ವೈರಲ್ ಆಗುತ್ತಿದ್ದು, ನಗೆಪಾಟಲಿಗೀಡಾಗುತ್ತಿದೆ. ಇದನ್ನೂ ಓದಿ: ಪ್ರಯಾಣಿಕ ಖರೀದಿಸಿದ್ದ ಸಮೋಸಾದಲ್ಲಿ ಯೆಲ್ಲೋ ಕಲರ್ ಪೇಪರ್ – IRCTC ಹೇಳೋದೇನು?

    Live Tv
    [brid partner=56869869 player=32851 video=960834 autoplay=true]

  • ಹುಡುಗಿಯರ ಮೇಕಪ್ ಕಿಟ್‍ನಲ್ಲಿ ಇರಲೇಬೇಕಾದ 5 ಬ್ಯೂಟಿ ಪ್ರೊಡಕ್ಟ್‌ಗಳು

    ಹುಡುಗಿಯರ ಮೇಕಪ್ ಕಿಟ್‍ನಲ್ಲಿ ಇರಲೇಬೇಕಾದ 5 ಬ್ಯೂಟಿ ಪ್ರೊಡಕ್ಟ್‌ಗಳು

    ಮೇಕಪ್ ಮಾಡುವುದು ಬಹಳ ಸುಲಭ. ಮೇಕಪ್ ಮಾಡಿಕೊಳ್ಳಲು 15 ರಿಂದ 20 ನಿಮಿಷ ಬೇಕಾಗುತ್ತದೆ. ಆದರೆ ಕೆಲವೊಮ್ಮೆ ಝೂಮ್ ಮೀಟಿಂಗ್, ಕ್ಲೈಂಟ್ ಕರೆಗಳನ್ನು ಸ್ವೀಕರಿಸುವ ವೇಳೆ ತಕ್ಷಣಕ್ಕೆ ರೆಡಿಯಾಗಬೇಕಾಗುತ್ತದೆ. ಆಗ ತಯಾರಾಗಲು ನಮಗೆ ಅನೇಕ ಕೈಗಳ ಸಹಾಯ ಬೇಕಾಗುತ್ತದೆ. ಆದರೆ ಲಿಪ್‍ಸ್ಟಿಕ್, ಐ ಮೇಕಪ್ ನಿಮಗೆ ಬಹಳಷ್ಟು ಹೊಳಪು ನೀಡುತ್ತದೆ. ನೀವು ತಕ್ಷಣಕ್ಕೆ ರೆಡಿಯಾಗಬೇಕೆಂದರೆ ಈ 5 ಬ್ಯೂಟಿ ಪ್ರೊಡಕ್ಟ್‌ಗಳನ್ನು ನಿಮ್ಮ ಮೇಕಪ್ ಕಿಟ್‍ನಲ್ಲಿ ಎಲ್ಲೆ ಹೋದರೂ ತೆಗೆದುಕೊಂಡು ಹೋಗುವುದು ಉತ್ತಮ. ಏಕೆಂದರೆ ಈ ಬ್ಯೂಟಿ ಪ್ರೊಡಕ್ಟ್‌ಗಳು ನಿಮ್ಮ ಮುಖಕ್ಕೆ ತಕ್ಷಣ ಬದಲಾವಣೆ ನೀಡುತ್ತದೆ.

    ಸನ್ ಸ್ಕ್ರೀನ್ ಸ್ಪೇ
    ಸನ್ ಸ್ಕ್ರೀನ್ ಸ್ಪ್ರೇ ತ್ವಚೆಗೆ ಬಹಳ ಮುಖ್ಯ. ಇದು ನಮ್ಮ ಮುಖದಲ್ಲಿನ ವೈಟ್ ಪ್ಯಾಚೇಸ್‍ಗಳನ್ನು ತಡೆಗಟ್ಟುತ್ತದೆ.

    ಕಣ್ಣಿನ ಪೆನ್ಸಿಲ್
    ಸೌಂದರ್ಯ ಎಂಬುದು ಕಣ್ಣಿನಲ್ಲಿ ಅಡಗಿರುತ್ತದೆ. ಅದರಲ್ಲಿಯೂ ಪೆನ್ಸಿಲ್ ಮೂಲಕ ಕಣ್ಣಿಗೆ ಬಣ್ಣ ಹಚ್ಚುವುದರಿಂದ ಅದು ನಿಮ್ಮ ಕಣ್ಣಿನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತದೆ.

    ಲಿಪ್‍ಸ್ಟಿಕ್
    ತುಟಿಗಳಿಗೆ ಲಿಪ್‍ಸ್ಟಿಕ್ ಹಚ್ಚುವುದರಿಂದ ನಿಮಗೆ ಅದು ಬೋಲ್ಡ್ ಲುಕ್ ನೀಡುತ್ತದೆ. ಆದರೆ ಲಿಪ್‍ಸ್ಟಿಕ್ ಬಳಸುವ ಮುನ್ನ ನಿಮ್ಮ ತುಟಿಗೆ ಸೂಟ್ ಆಗುವಂತಹ ಬಣ್ಣ ಯಾವುದು ಎಂದು ಅರಿತು ಹಾಕಿಕೊಳ್ಳುವುದು ಉತ್ತಮ. ಲಿಪ್‍ಸ್ಟಿಕ್ ನಿಮ್ಮ ತುಟಿಗೆ ಬಣ್ಣ ನೀಡುವುದರ ಮೂಲಕ ಸುಂದರವಾಗಿಸುತ್ತದೆ.

    ಮಿಲ್ಕಿ- ಲೋಷನ್
    ಹಾಲಿನ ಮೂಲಕ ತಯಾರಿಸಿರುವ ಈ ಲೋಷನ್ ತ್ವಚೆಗೆ ಕಾಂತಿಯನ್ನು ನೀಡುತ್ತದೆ. ಇದು ಬಿಸಿಲಿನಿಂದ ನಿಮ್ಮನ್ನು ರಕ್ಷಿಸಿ ಮುಖ ಹಾಗೂ ದೇಹ ಎರಡಕ್ಕೂ ಒಂದೇ ಬಣ್ಣ ನೀಡುತ್ತದೆ.

    ಹೇರ್ ಬ್ರಶ್
    ಹೇರ್ ಬ್ರಶ್‍ನನ್ನು ನಿಮ್ಮೊಂದಿಗೆ ಯಾವಾಗಲೂ ಕೊಂಡೊಯ್ಯಿರಿ ಇದು ನಿಮಗೆ ಎಂದಿಗದರೂ ಉಪಯೋಗಕ್ಕೆ ಬರಬಹುದು. ನೀವು ತುಂಬಾ ಒತ್ತಡದಲ್ಲಿರುವಾಗ ನಿಮ್ಮ ಕೂದಲನ್ನು ಬಾಚಿಕೊಳ್ಳುವುದರಿಂದ ನಿಮ್ಮ ನೆತ್ತಿಯ ಮೇಲಿನ ರಕ್ತ ಪರಿಚಲನೆಯನ್ನು ಇದು ಸುಧಾರಿಸುತ್ತದೆ ಹಾಗೂ ಒತ್ತಡ ಕಡಿಮೆ ಗೊಳಿಸುತ್ತದೆ.