Tag: ಮೇಕಪ್ ಕಲಾವಿದೆ

  • ಮೇಕಪ್ ಆರ್ಟಿಸ್ಟ್‌ ಮದುವೆ ನಡೆಸಿಕೊಟ್ಟ ಶ್ರದ್ಧಾ ಕಪೂರ್

    ಮೇಕಪ್ ಆರ್ಟಿಸ್ಟ್‌ ಮದುವೆ ನಡೆಸಿಕೊಟ್ಟ ಶ್ರದ್ಧಾ ಕಪೂರ್

    ಮುಂಬೈ: ಬಾಲಿವುಡ್ ನಟಿ ಶ್ರದ್ಧಾ ಕಪೂರ್ ಇತ್ತೀಚೆಗೆ ತಮ್ಮ ಮೇಕಪ್ ಆರ್ಟಿಸ್ಟ್‍ನ ಮದುವೆಯನ್ನು ನೆರವೇರಿಸಿಕೊಟ್ಟಿದ್ದಾರೆ. ಶ್ರದ್ಧಾ ತಮ್ಮ ಮೇಕಪ್ ಕಲಾವಿದೆಯ ಮದುವೆ ನಡೆಸಿಕೊಟ್ಟಿರುವ ವೀಡಿಯೋ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿದೆ.

    ಶ್ರದ್ಧಾ ಕಪೂರ್ ಅವರ ಮೇಕಪ್ ಕಲಾವಿದೆ ಶ್ರದ್ಧಾ ನಾಯಕ್ ತಮ್ಮ ಮದುವೆಯ ಅಮೂಲ್ಯ ಕ್ಷಣದ ವೀಡಿಯೋವನ್ನು ಇನ್ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದಾರೆ. ವೀಡಿಯೋವನ್ನು ಹಂಚಿಕೊಂಡ ಶ್ರದ್ಧಾ ನಾಯಕ್, ಆತ್ಮೀಯ ಶ್ರದ್ಧೀ… 12 ವರ್ಷಗಳ ಹಿಂದೆ ನಮ್ಮಿಬ್ಬರ ಪರಿಚಯ ವೃತ್ತಿಜೀವನದಲ್ಲಿ ಆಯಿತು. ಅಂದಿನಿಂದ ನಾವು ಉತ್ತಮ ಸ್ನೇಹಿತೆಯರಾಗಿದ್ದು, ಇಂದು ನನ್ನ ಮದುವೆಯನ್ನು ನಿರ್ವಹಿಸಿದ್ದೀರಿ. ನಾವು ಬಹಳ ಮುಂದೆ ಸಾಗಿದ್ದೇವೆ. ನಮ್ಮ ಮದುವೆಯ ಕಾರ್ಯ ನಡೆಸಿಕೊಟ್ಟಿದ್ದಕ್ಕೆ ಧನ್ಯವಾದಗಳು ಎಂದು ಬರೆದುಕೊಂಡಿದ್ದಾರೆ. ಇದನ್ನೂ ಓದಿ: ನನ್ನ ಕನಸು ನನಸಾಗಿದೆ: ಗೃಹ ಪ್ರವೇಶದ ಫೋಟೋ ಶೇರ್‌ ಮಾಡಿದ ಪೂಜಾ ಹೆಗ್ಡೆ

     

    View this post on Instagram

     

    A post shared by Shraddha Naik (@shraddha.naik)

    ಈ ಪೋಸ್ಟ್‍ಗೆ ಪ್ರತಿಕ್ರಿಯಿಸಿದ ಶ್ರದ್ಧಾ ಕಪೂರ್, ನನ್ನ ಶ್ರದ್ಧಿ, ನಿಮ್ಮ ಮದುವೆಯನ್ನು ನಡೆಸಿದ್ದಕ್ಕಾಗಿ ಹಾಗೂ ವಧುವಿನ ಸಹಾಯಕಿಯಾಗಿ ಗೌರವ ಸಲ್ಲಿಸಲು ಅವಕಾಶ ನೀಡಿದ್ದಕ್ಕೆ ಧನ್ಯವಾದಗಳು. ನಮ್ಮಿಬ್ಬರ 12 ವರ್ಷಗಳ ಸ್ನೇಹಿಬಂಧವನ್ನು ನೀನು ನೆನಪಿಸಿದ್ದೀಯಾ. ನಿನ್ನನ್ನು ಪದಗಳಿಂದ ಬಣ್ಣಿಸುವುದಕ್ಕಿಂತಲೂ ಹೆಚ್ಚಾಗಿ ಪ್ರೀತಿಸುತ್ತೇನೆ ಎಂದು ಬರೆದಿದ್ದಾರೆ. ಇದನ್ನೂ ಓದಿ: 6 ತಿಂಗಳಿಗೆ ಹುಟ್ಟಿದ ಹೆಣ್ಣು ಮಗುವಿನ ಪೋಷಕರಾದ ಪ್ರಿಯಾಂಕಾ