Tag: ಮೆಹೆಂದಿ

  • ಮದುವೆ‌ ಮೆಹೆಂದಿ ಶಾಸ್ತ್ರದಂದು ವಧು ಪಾಲಿಸಬೇಕಾದ ಬೆಸ್ಟ್ ಟಿಪ್ಸ್

    ಮದುವೆ‌ ಮೆಹೆಂದಿ ಶಾಸ್ತ್ರದಂದು ವಧು ಪಾಲಿಸಬೇಕಾದ ಬೆಸ್ಟ್ ಟಿಪ್ಸ್

    ದುವೆ ಮನೆಯಲ್ಲಿ (Wedding) ಮೆಹೆಂದಿ ಶಾಸ್ತ್ರ ಕೂಡ ಕುಟುಂಬದ ಸಂಭ್ರಮದ ಒಂದು ಭಾಗವಾಗಿದೆ. ಸಡಗರದೊಂದಿಗೆ ಆಚರಿಸುವ ಈ ದಿನದಂದು ವಧು ಯಾವುದೇ ಗೊಂದಲವಿಲ್ಲದೇ, ಹೆಚ್ಚು ಪ್ರಯಾಸವಿಲ್ಲದೇ ಕೈಗಳಿಗೆ ಸುಂದರವಾದ ಮೆಹೆಂದಿ ಚಿತ್ತಾರ ಮೂಡಿಸಿಕೊಳ್ಳುವುದು ಮುಖ್ಯ. ಇದಕ್ಕಾಗಿ ಒಂದಿಷ್ಟು ಸಿಂಪಲ್ ಟಿಪ್ಸ್ ಫಾಲೋ ಮಾಡಿದರೇ ಸಾಕು ಎನ್ನುವ ಮೆಹೆಂದಿ ವಿನ್ಯಾಸಕಾರರು ಈ ಕುರಿತಂತೆ ಒಂದಿಷ್ಟು ಟಿಪ್ಸ್ ನೀಡಿದ್ದಾರೆ.

    ವಧು ಮಾತ್ರವಲ್ಲದೇ, ಆಕೆಯ ಕುಟುಂಬದ ಸ್ನೇಹಿತೆಯರು ಕೂಡ ಈ ಸಮಯದಲ್ಲಿ ಮದರಂಗಿ ಹಾಕಿಸಿಕೊಳ್ಳುತ್ತಾರೆ. ಈ ಸಂದರ್ಭದಲ್ಲಿ ವಧುವಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ, ಸಮಯ ಮೀಸಲಿಡಬೇಕು. ನಂತರ ಉಳಿದವರಿಗೆ ಚಿತ್ತಾರ ಮೂಡಿಸಬೇಕು. ಸಿಗುವ ಸಮಯವನ್ನು ಸದುಪಯೋಗಪಡಿಸಿಕೊಳ್ಳಬೇಕು. ಈ ಸಮಯದಲ್ಲಿ, ಭಿನ್ನವಾಗಿ, ಫಟಾಫಟ್ ಆಗಿ ಹೇಗೆಲ್ಲಾ ಚಿತ್ತಾರ ಮೂಡಿಸಿಕೊಳ್ಳಬಹುದು ಎಂಬುದನ್ನು ತಿಳಿದುಕೊಳ್ಳುವುದು ಅಗತ್ಯ ಎನ್ನುತ್ತಾರೆ ಮೆಹೆಂದಿ ಬಗ್ಗೆ ಅರಿತ ವಿನ್ಯಾಸಕಿಯರು.

    ಮೊದಲು ವಧುವಿನ ಮೆಹೆಂದಿ ಚಿತ್ತಾರಕ್ಕೆ ಪ್ರಾಮುಖ್ಯತೆ ನೀಡಬೇಕು. ಯಾಕೆಂದರೇ, ಕೈಗಳು-ಕಾಲುಗಳಿಗೆ ಹಚ್ಚಲು ಕಡಿಮೆ ಎಂದರೂ 3-4 ಗಂಟೆ ಬೇಕಾಗುತ್ತದೆ. ಅಲ್ಲದೇ, ಡಿಸೈನ್‌ಗಳ ಫೋಟೋಶೂಟ್‌ಗೂ ಸಮಯ ಮೀಸಲಿಡಬೇಕಾಗುತ್ತದೆ. ಇದನ್ನೂ ಓದಿ:‘ಪರಿಷತ್’ನಲ್ಲಿ ಕನಸಿನ ರಾಣಿ ಮಾಲಾಶ್ರೀ ಕುರಿತು ಹಾಸ್ಯ ಚರ್ಚೆ

    ಮೆಹೆಂದಿ ಶಾಸ್ತ್ರದ ದಿನದಂದು ಗಡಿಬಿಡಿಯಲ್ಲಿ ವಿನ್ಯಾಸ ಹುಡುಕಕೂಡದು. ಮದುವೆಗೆ ಮುನ್ನವೇ ಒಂದಿಷ್ಟು ಅಂತರ್ಜಾಲದಲ್ಲಿ ಹೊಸ ಡಿಸೈನ್ಸ್ ನೋಡಿ, ಚಿತ್ತಾರ ಮೂಡಿಸುವವರ ಬಳಿ ಮಾತನಾಡಿ, ಡಿಸೈನ್‌ಗಳ ಆಯ್ಕೆ ಮಾಡಿಡಬೇಕು. ಕೊನೆ ಕ್ಷಣದಲ್ಲಿ ಗೊಂದಲ ಬೇಡ.

    ಒಬ್ಬರೇ ಒಂದೊಂದೇ ಕೈ ಹಾಗೂ ಪಾದಗಳಿಗೆ ಮೆಹೆಂದಿ ಬಿಡಿಸುವುದಾದಲ್ಲಿ ಲೇಟಾಗಬಹುದು . ಕುಳಿತು ಪ್ರಯಾಸವಾಗಬಹುದು. ಹಾಗಾಗಿ ಈ ರಿಸ್ಕ್ ಬೇಡ. ಬದಲಿಗೆ ಕೈಗಳ ಚಿತ್ತಾರ ಮೂಡಿಸಲು, ಪಾದಗಳ ಚಿತ್ತಾರ ಮೂಡಿಸಲು ಒಂದಿಬ್ಬರು ಕಲಾವಿದರನ್ನು ಆಯ್ಕೆ ಮಾಡಿ, ಮದರಂಗಿ ಹಾಕಿಸಿಕೊಳ್ಳಿ. ಸಮಯ ಉಳಿಯುತ್ತದೆ. ಮೆಹೆಂದಿ ಚಿತ್ತಾರ ಮೂಡಿಸುವಾಗ ಆದಷ್ಟೂ ಧರಿಸಿದ ದುಬಾರಿ ಡಿಸೈನರ್‌ ವೇರ್‌ಗಳಿಗೆ ತಗುಲದಂತೆ, ಟವೆಲ್ ಅಥವಾ ಎಪ್ರಾನ್ ಧರಿಸಿ. ಇದಕ್ಕಾಗಿ ನಿಮ್ಮ ಸ್ನೇಹಿತೆ ಹಾಗೂ ಸಹೋದರಿಯ ಸಹಾಯ ಪಡೆದುಕೊಳ್ಳಿ. ಮಧ್ಯೆ ಮಧ್ಯೆ ಅಡಚಣೆ ಮಾಡುವುದು ಬೇಡ.

    ಊಟ-ತಿಂಡಿಯನ್ನು ಮೊದಲೇ ಮುಗಿಸಿಕೊಳ್ಳಿ. ಮೇಕಪ್ (Makeup) ಹಾಗೂ ಅಲಂಕಾರವನ್ನು ಮುನ್ನವೇ ಮಾಡಿಕೊಳ್ಳಿ. ಹಚ್ಚಿದ ನಾಲ್ಕೈದು ಗಂಟೆ ಸುಮ್ಮನೆ ಕೂರಬೇಕಾದ ಅಗತ್ಯವಿರುವುದರಿಂದ ಮುಖ್ಯವಾದ ಕೆಲಸಗಳನ್ನು ಪೂರೈಸಿ ಕುಳಿತುಕೊಳ್ಳಿ. ಅಗತ್ಯ ಬಿದ್ದಲ್ಲಿ ಸಹಾಯಕರನ್ನು ಜೊತೆಗಿರಿಸಿಕೊಳ್ಳಿ.

  • ಮದುವೆಗೆ 1 ಲಕ್ಷ ರೂ. ವೆಚ್ಚದ ಮೆಹಂದಿ ಬಳಸ್ತಿದ್ದಾರಂತೆ ಕತ್ರಿನಾ!

    ಮದುವೆಗೆ 1 ಲಕ್ಷ ರೂ. ವೆಚ್ಚದ ಮೆಹಂದಿ ಬಳಸ್ತಿದ್ದಾರಂತೆ ಕತ್ರಿನಾ!

    – ಮದುವೆಗೆ ಆಗಮಿಸುವವರಿಗೆ ಮೊಬೈಲ್ ಬ್ಯಾನ್

    ಮುಂಬೈ: ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿರುವ ನಟಿ ಕತ್ರಿನಾ ಕೈಫ್ ಹಾಗೂ ವಿಕ್ಕಿ ಕೌಶಲ್ ಅವರ ಮದುವೆ ಶಾಸ್ತ್ರಗಳು ಒಂದೊಂದಾಗಿಯೇ ಪ್ರಾರಂಭವಾಗಿವೆ. ಮೆಹಂದಿ ಕಾರ್ಯಕ್ರಮಕ್ಕೆ ಬಳಸುತ್ತಿರುವ ಗೋರಂಟಿ ಬೆಲೆ ಇದೀಗ ಎಲ್ಲೆಡೆ ಸುದ್ದಿಯಾಗುತ್ತಿದೆ.

    ಜೋಧ್‍ಪುರದ ಪಾಲಿ ಜಿಲ್ಲೆಯ ಸೋಜತ್ ಮೆಹೆಂದಿ ಎಂಬ ವಿಶೇಷ ರೀತಿಯ ಗೋರಂಟಿ ವಧು-ವರರಿಗೆ ಬಳಸಲಾಗುತ್ತಿದೆ. ಸೋಜತ್‍ನ ಕುಶಲಕರ್ಮಿಗಳು ಸ್ವಾಭಾವಿಕವಾಗಿ ಮೆಹಂದಿಯನ್ನು ತಯಾರಿಸುತ್ತಿದ್ದಾರೆ ಮತ್ತು ಅದಕ್ಕೆ ಯಾವುದೇ ರಾಸಾಯನಿಕವನ್ನು ಸೇರಿಸುವುದಿಲ್ಲ. ಸೋಜತ್ ಗೋರಂಟಿಯನ್ನು ಕೈಯಿಂದ ತಯಾರಿಸಿ ಕತ್ರಿನಾಗೆ ಕಳುಹಿಸಲಾಗುವುದು. ಸೋಜತ್‍ನ ಮೆಹಂದಿ ಮಾರಾಟಗಾರರ ಪ್ರಕಾರ, ಕತ್ರಿನಾ ಅವರ ಮದುವೆಗೆ ಮೆಹಂದಿ ತಯಾರಿಗೆ ಸುಮಾರು 50,000 ರಿಂದ 1 ಲಕ್ಷ ರೂಪಾಯಿ ವೆಚ್ಚವಾಗುತ್ತದೆ. ಉದ್ಯಮಿ ಅದಕ್ಕಾಗಿ ಯಾವುದೇ ಹಣವನ್ನು ತೆಗೆದುಕೊಳ್ಳುವುದಿಲ್ಲ ಎನ್ನುವ ಸುದ್ದಿಯೊಂದು ಬಾಲಿವುಡ್ ಅಂಗಳಲ್ಲಿ ಹರಿದಾಡುತ್ತಿದೆ. ಇದನ್ನೂ ಓದಿ: ಯಶ್‌, ಪ್ರಶಾಂತ್‌ ನೀಲ್‌ ಬಳಿ ಕ್ಷಮೆ ಕೇಳಿದ ಅಮೀರ್‌ ಖಾನ್‌

    ಡಿಸೆಂಬರ್ 12ರಿಂದ 17ರ ಅವಧಿಯಲ್ಲಿ ರಾಜಸ್ಥಾನದ ಹೋಟೆಲೊಂದರಲ್ಲಿ ಕತ್ರಿನಾ ಹಾಗೂ ವಿಕ್ಕಿ ವಿವಾಹ ನಡೆಯಲಿದೆ. ತಮ್ಮ ವಿವಾಹದ ಸಂದರ್ಭದಲ್ಲಿ ಅತಿಥಿಗಳು ಮೊಬೈಲ್ ಬಳಸದಂತೆ ನೋಡಿಕೊಳ್ಳಬೇಕು ಎಂದು ಸಮಾರಂಭ ಆಯೋಜಕರಿಗೆ ನಿರ್ದೇಶನ ನೀಡಿದ್ದಾರೆ ಎನ್ನಲಾಗಿದೆ. ವಿವಾಹದ ಫೆÇೀಟೋ ಮತ್ತು ವೀಡಿಯೋಗಳನ್ನು ತೆಗೆದುಕೊಂಡು ಸಾಮಾಜಿಕ ಮಾಧ್ಯಮದಲ್ಲಿ ಹರಡುವುದಕ್ಕೆ ಅವಕಾಶ ನೀಡಬಾರದು. ವಿವಾಹ ಸಮಾರಂಭದ ಸ್ಥಳದಲ್ಲಿ ನಮ್ಮ ಖಾಸಗಿತನಕ್ಕೆ ಧಕ್ಕೆಯಾಗದಂತೆ ಭದ್ರತೆ ವ್ಯವಸ್ಥೆ ಕಲ್ಪಿಸಬೇಕು ಎಂದು ಸೂಚನೆ ನೀಡಿದ್ದಾರೆ. ಇದನ್ನೂ ಓದಿ: ಭಯೋತ್ಪಾದಕರಿಗೆ ಹಣ ವರ್ಗವಣೆ – ಮಂಗ್ಳೂರಿನ ದಂಪತಿಗೆ 10 ವರ್ಷ ಕಠಿಣ ಶಿಕ್ಷೆ

    ರಾಜಸ್ಥಾನದಲ್ಲಿ ತಮ್ಮ ವಿವಾಹದ ಆಚರಣೆಗಳಿಗೆ ಮುನ್ನ, ವಿಕ್ಕಿ ಮತ್ತು ಕತ್ರಿನಾ ಮುಂದಿನ ವಾರ ಮುಂಬೈನಲ್ಲಿ ಮದುವೆಯಾಗಲಿದ್ದಾರೆ ಎಂದು ವರದಿಯಾಗಿದೆ. ರಣಥಂಬೋರ್ ಬಳಿಯ ರೆಸಾರ್ಟ್‍ನಲ್ಲಿ ತಮ್ಮ ರಾಜಮನೆತನದ ವಿವಾಹಕ್ಕಾಗಿ ಜೈಪುರಕ್ಕೆ ತೆರಳುವ ಮೊದಲು ವಿಕ್ಕಿ ಮತ್ತು ಕತ್ರಿನಾ ಮುಂದಿನ ವಾರ ಮುಂಬೈನಲ್ಲಿ ವಿವಾಹ ನಡೆಯಲಿದೆ ಎಂದು ಮೂಲಗಳು ತಿಳಿಸಿವೆ.

  • ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

    ಪ್ರೇಮಿಗಳ ದಿನ: ಮದರಂಗಿ ಚಿತ್ತಾರದಲ್ಲಿ ಚೆಲುವನಿಗೆ ಚೆಂದದ ಒಲವಿನ ಉಡುಗೊರೆ

    ಬೆಂಗಳೂರು: ಫೆಬ್ರವರಿ 14 ಬಂದರೆ ಪ್ರೇಮಿಗಳಿಗೆ ಹಬ್ಬ. ಪ್ರತಿ ವ್ಯಾಲೇಂಟೆನ್ಸ್ ಡೇಗೂ ನನ್ನ ಹುಡ್ಗಾನೇ ಗಿಫ್ಟ್ ಕೊಡತ್ತಾನೆ. ಆದರೆ ಈ ವರ್ಷ ನನ್ನ ಹೀರೋಗೆ ಏನಾದ್ರೂ ಕೊಡೋಣ ಎಂದು ಯುವತಿಯರು ಫುಲ್ ರೆಡಿಯಾಗಿದ್ದಾರೆ.

    ಸಿಲಿಕಾನ್ ಸಿಟಿ ಬೆಡಗಿಯರ ಕೈಯಲ್ಲಿ ಪ್ರೇಮ ಚಿತ್ತಾರಗಳು ಮೂಡಿದೆ. ಕೈಯಲ್ಲಿ ಮೆಹಂದಿ ಇದೆ ಎಂದರೆ ಅಲ್ಲೊಂದು ಖುಷಿ, ಸಂತೋಷ ಇದೆ ಎಂದು ಅರ್ಥ. ಹೌದು. ಸಿಲಿಕಾನ್ ಸಿಟಿಯಲ್ಲಿ ಪ್ರೇಮಿಗಳ ದಿನಕ್ಕೆ ಮೆಹಂದಿ, ಟ್ಯಾಟೂ ಟ್ರೆಂಡ್ ಹುಟ್ಟಿಕೊಂಡಿದೆ. ಪೋಟ್ ರೇಟ್ ಮದರಂಗಿಯಲ್ಲೇ ತಮ್ಮ ಗೆಳೆಯನ ಹೆಸರನ್ನು ಹಾಕಿಸಿಕೊಳ್ಳುತ್ತಿದ್ದಾರೆ.

    ಇವುಗಳ ಜೊತೆ ಟ್ಯಾಟೂ ಟ್ರೆಂಡ್ ಸಹ ಸ್ಟಾರ್ಟ್ ಆಗಿದ್ದು, ತಮ್ಮ ಇನಿಯನ ನೆನಪಿಗಾಗಿ ಲವ್ ಸಿಂಬಲ್ ಗಳನ್ನು ರಂಗೇರಿಸಿ ಕೊಳ್ಳುತ್ತಿದ್ದಾರೆ. ಜೀವವಿಲ್ಲದ ವಸ್ತುಗಳನ್ನು ಕೊಡುವುದಕ್ಕಿಂತ ತನ್ನ ಕೈಗಳ ಮೂಲಕ ಪ್ರೀತಿಯನ್ನು ವ್ಯಕ್ತಪಡಿಸುತ್ತಿದ್ದಾರೆ.

    ಈ ಡಿಸೈನ್‍ಗಳು ಕನಿಷ್ಟ 1 ವಾರವಿರುವುದರಿಂದ ಯುವತಿಯರು, ತಾತ್ಕಾಲಿಕ ಹಾಗೂ ಪರ್ಮೇನೆಂಟ್ ಟ್ಯಾಟೂಗಳನ್ನು ಹಾಕಿಸಿಕೊಳ್ಳುತ್ತಿದ್ದಾರೆ. ಈ ಡಿಸೈನ್‍ಗಳು ಚೆಲುವೆಯರ ಕೈಗೆ ನ್ಯೂ ಲುಕ್ ನೀಡುತ್ತಿವೆ. ಜೊತೆಗೆ ಪ್ರೀತಿಯನ್ನು ರಂಗೇರಿಸಿವೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮದ್ವೆಯ ಫೋಟೋವನ್ನು ಒಂದೊಂದಾಗಿ ರಿವೀಲ್ ಮಾಡುತ್ತಿರುವ ದೀಪ್‍ವೀರ್

    ಮದ್ವೆಯ ಫೋಟೋವನ್ನು ಒಂದೊಂದಾಗಿ ರಿವೀಲ್ ಮಾಡುತ್ತಿರುವ ದೀಪ್‍ವೀರ್

    ನವದೆಹಲಿ: ಬಾಲಿವುಡ್ ಸ್ಟಾರ್ ಕಪಲ್ ದೀಪಿಕಾ ಪಡುಕೋಣೆ ಹಾಗೂ ರಣ್‍ವೀರ್ ಸಿಂಗ್ ಇಟಲಿಯಲ್ಲಿ ತಮ್ಮ ಆಪ್ತ ಸಂಬಂಧಿಕರ ಸಮ್ಮುಖದಲ್ಲಿ ಮದುವೆಯಾಗಿದ್ದಾರೆ. ಈಗ ದೀಪಿಕಾ ಅವರ ಮೆಹೆಂದಿ ಕಾರ್ಯಕ್ರಮದ ಫೋಟೋ ರಣ್‍ವೀರ್ ಸಿಂಗ್ ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ದೀಪ್‍ವೀರ್ ನ. 14 ಹಾಗೂ ನ. 15ರಂದು ಕೊಂಕಣಿ ಹಾಗೂ ಸಿಂಧ್ ಸಂಪ್ರದಾಯದಲ್ಲಿ ಮದುವೆಯಾಗಿದ್ದರು. ಮದುವೆಗೂ ಮುನ್ನ ನಡೆದ ಕಾರ್ಯಕ್ರಮದ ಫೋಟೋವನ್ನು ಇದುವರೆಗೂ ನವದಂಪತಿ ರಿವೀಲ್ ಮಾಡಿರಲಿಲ್ಲ. ಸದ್ಯ ರಣ್‍ವೀರ್ ಈಗ ದೀಪಿಕಾ ಅವರ ಮೆಹೆಂದಿ ಕಾರ್ಯಕ್ರಮದ ಫೋಟೋವನ್ನು ಟ್ವಿಟ್ಟರಿನಲ್ಲಿ ಹಾಕಿದ್ದಾರೆ.

    ನ. 13ರಂದು ಮೆಹೆಂದಿ ಕಾರ್ಯಕ್ರಮ ನಡೆಯಿತು. ಫೋಟೋದಲ್ಲಿ ದೀಪಿಕಾ ಕೌಚ್ ಮೇಲೆ ಕುಳಿತು ತನ್ನ ಎರಡು ಕೈಗೆ ಮೆಹೆಂದಿ ಹಾಕಿಕೊಳ್ಳುತ್ತಿದ್ದಾರೆ. ರಣ್‍ವೀರ್ ಕೂಡ ಮೆಹೆಂದಿ ಹಾಕಿಕೊಂಡಿದ್ದು ಅವರು ತಮ್ಮ ಪತ್ನಿ ದೀಪಿಕಾ ಅವರ ಹೆಸರನ್ನು ಮಾತ್ರ ಹಾಕಿಕೊಂಡಿದ್ದಾರೆ.

    ದೀಪಿಕಾ ಕೂಡ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಮದುವೆಯ ಫೋಟೋಗಳನ್ನು ಹಂಚಿಕೊಂಡಿದ್ದಾರೆ. ಕೊಂಕಣಿ ಸಂಪ್ರದಾಯದಲ್ಲಿ ಮದುವೆಯಾದ ಫೋಟೋಗಳನ್ನು ಮಾತ್ರ ರಣ್‍ವೀರ್ ಹಾಗೂ ದೀಪಿಕಾ ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.

    ವಿವಾಹವಾದ ನಂತರ ಮೊದಲ ಬಾರಿಗೆ ಆಗಮಿಸಿದ ದೀಪಿಕಾ ಹಾಗೂ ರಣವೀರ್ ಬೆಂಗಳೂರಿಗೆ ಆಗಮಿಸಿದ್ದಾರೆ. ಸುಮಾರು 12ಗಂಟೆಗೆ ದೀಪಿಕಾ ಪಡುಕೋಣೆ ವಿಮಾನ ನಿಲ್ದಾಣಕ್ಕೆ ಕುಟುಂಬ ಸಮೇತ ಆಗಮಿಸಿದ್ದರು.

    ನಗರದ ಲೀಲಾ ಪ್ಯಾಲೇಸ್‍ನಲ್ಲಿ ನಾಳೆ ನವದಂಪತಿಯ ಅದ್ಧೂರಿ ಆರತಕ್ಷತೆ ಕಾರ್ಯಕ್ರಮ ನಿಗದಿಯಾಗಿದೆ. ಹೀಗಾಗಿ ನಾಳೆ ನಡೆಯಲಿರುವ ಆರತಕ್ಷತೆ ಕಾರ್ಯಕ್ರಮದಲ್ಲಿ ದಕ್ಷಿಣ ಭಾರತದ ಸಿನಿ ತಾರೆಯರು ಹಾಗೂ ಗಣ್ಯಾತಿಗಣ್ಯರು ಭಾಗವಹಿಸಿಲಿದ್ದಾರೆ.

    https://twitter.com/deepikapadukone/status/1064848534200086533

    https://twitter.com/deepikapadukone/status/1064849809134272518

    https://twitter.com/deepikapadukone/status/1064849907327078400

    https://twitter.com/deepikapadukone/status/1064850858729504768

    https://twitter.com/deepikapadukone/status/1064850941608898560

     

    View this post on Instagram

     

    A post shared by Deepika Padukone (@deepikapadukone) on

     

    View this post on Instagram

     

    A post shared by Deepika Padukone (@deepikapadukone) on

     

    View this post on Instagram

     

    A post shared by Ranveer Singh (@ranveersingh) on

     

    View this post on Instagram

     

    A post shared by Ranveer Singh (@ranveersingh) on

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv
    ಪಬ್ಲಿಕ್ ಟಿವಿ ಆಪ್ ಡೌನ್ ಲೋಡ್ ಮಾಡಿ: play.google.com/publictv
    ಯೂ ಟ್ಯೂಬ್‍ನಲ್ಲಿ ಪಬ್ಲಿಕ್ ಟಿವಿಯನ್ನು ಸಬ್ ಸ್ಕ್ರೈಬ್ ಮಾಡಿ: youtube.com/publictvnewskannada
    ಫೇಸ್‍ಬುಕ್‍ನಲ್ಲಿ ಪಬ್ಲಿಕ್ ಟಿವಿಯನ್ನು ಲೈಕ್ ಮಾಡಿ: facebook.com/publictv
    ಟ್ವಿಟ್ಟರ್‌ನಲ್ಲಿ ಪಬ್ಲಿಕ್ ಟಿವಿಯನ್ನು ಫಾಲೋ ಮಾಡಿ: twitter.com/publictvnews