Tag: ಮೆಹಬೂಬಾ ಮುಫ್ತಿ

  • 24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ – ಕಾಶ್ಮೀರ ಮಾಜಿ ಸಿಎಂ ಮುಫ್ತಿ ಸೇರಿ 7 ಮಂದಿಗೆ ನೋಟಿಸ್‌

    24 ಗಂಟೆಯೊಳಗೆ ಸರ್ಕಾರಿ ವಸತಿ ಗೃಹ ಖಾಲಿ ಮಾಡಿ – ಕಾಶ್ಮೀರ ಮಾಜಿ ಸಿಎಂ ಮುಫ್ತಿ ಸೇರಿ 7 ಮಂದಿಗೆ ನೋಟಿಸ್‌

    ಶ್ರೀನಗರ: ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಹೌಸಿಂಗ್ ಕಾಲೋನಿ ಖಾನಬಲ್ ಪ್ರದೇಶದಲ್ಲಿನ ಸರ್ಕಾರಿ ವಸತಿ ಗೃಹಗಳನ್ನು ಖಾಲಿ ಮಾಡುವಂತೆ ಮಾಜಿ ಮುಖ್ಯಮಂತ್ರಿ ಮತ್ತು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ (Mehbooba Mufti) ಸೇರಿದಂತೆ ಏಳು ಮಾಜಿ ಶಾಸಕರಿಗೆ ಅಧಿಕಾರಿಗಳು ನೋಟಿಸ್‌ ನೀಡಿದ್ದಾರೆ.

    ಅನಂತನಾಗ್‌ನ ಕಾರ್ಯನಿರ್ವಾಹಕ ಮ್ಯಾಜಿಸ್ಟ್ರೇಟ್‌ ಅವರು ಜಿಲ್ಲಾಧಿಕಾರಿ ನಿರ್ದೇಶನದ ಮೇರೆಗೆ ಈ ನೋಟಿಸ್‌ ಹೊರಡಿಸಿದ್ದಾರೆ. ಮಾಜಿ ಶಾಸಕ ಮೊಹಮ್ಮದ್ ಅಲ್ತಾಫ್ ವಾನಿ, ಮಾಜಿ ಶಾಸಕ ಅಬ್ದುಲ್ ರಹೀಮ್ ರಾಥರ್, ಮಾಜಿ ಶಾಸಕ ಅಬ್ದುಲ್ ಮಜೀದ್ ಭಟ್ ಮತ್ತು ಮಾಜಿ ಸಿಎಂ ಮೆಹಬೂಬಾ ಮುಫ್ತಿ ಅವರು ವಸತಿ ಗೃಹ ತೆರವು ಮಾಡಬೇಕು ಎಂದು ಸೂಚಿಸಲಾಗಿದೆ. ಇದನ್ನೂ ಓದಿ: ತಿಹಾರ್ ಜೈಲಿನಲ್ಲಿ ಸತ್ಯೇಂದ್ರ ಜೈನ್ ಸೇವೆ ಮಾಡಲು ನೇಮಕವಾಗಿದ್ರು 10 ಜನ!

    ಇವರಿಗೆ ಸೇರಿದ ಸರ್ಕಾರಿ ವಸತಿ ಗೃಹ ಸಂಖ್ಯೆ 1, 4, 6 ಮತ್ತು 7 ರ ನಿವಾಸಗಳನ್ನು ತೆರವು ಮಾಡಲು ತಿಳಿಸಲಾಗಿದೆ. 24 ಗಂಟೆಗಳ ಒಳಗೆ ಖಾಲಿ ಮಾಡಬೇಕು ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಮಾಜಿ ಶಾಸಕ ಅಲ್ತಾಫ್ ಷಾ ಅಲಿಯಾಸ್ ಕಾಲೋ, ಮಾಜಿ ಎಂಎಲ್‌ಸಿ ಬಶೀರ್ ಶಾ ಅಲಿಯಾಸ್ ವೀರಿ, ಮಾಜಿ ಎಂಎಲ್‌ಸಿ ಚೌಧರಿ ನಿಜಾಮುದ್ದೀನ್, ಮಾಜಿ ಶಾಸಕ ಅಬ್ದುಲ್ ಕಬೀರ್ ಪಠಾಣ್ ಮತ್ತು ಎಂಸಿ ಕೌನ್ಸಿಲರ್ ಶೇಖ್ ಮೊಹಿಯುದ್ದೀನ್ ಸೇರಿದಂತೆ ಇತರರು ಸಹ ಸರ್ಕಾರಿ ವಸತಿ ಗೃಹ ಖಾಲಿ ಮಾಡುವಂತೆ ಸೂಚನೆ ನೀಡಲಾಗಿದೆ. ಇದನ್ನೂ ಓದಿ: ಪ್ರತಿಯೊಬ್ಬರಿಗೂ ಅನ್ವಯವಾಗುವಂತೆ ಜನಸಂಖ್ಯಾ ನಿಯಂತ್ರಣ ಮಸೂದೆ ಜಾರಿಗೊಳಿಸಿ – ಗಿರಿರಾಜ್ ಸಿಂಗ್

    ಹೌಸಿಂಗ್ ಕಾಲೋನಿ ಖಾನಬಾಳದಲ್ಲಿ ಸರ್ಕಾರಿ ಕ್ವಾರ್ಟರ್ಸ್ ಇದ್ದು, ನಿಗದಿತ ಸಮಯದೊಳಗೆ ನಿವೇಶನ ತೆರವು ಮಾಡದಿದ್ದರೆ ಕಾನೂನು ಪ್ರಕಾರ ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಲಾಗಿದೆ.

    Live Tv
    [brid partner=56869869 player=32851 video=960834 autoplay=true]

  • BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    BJP ಸರ್ಕಾರದಿಂದ ಹಿಂದುತ್ವ ಅಜೆಂಡಾ ಪ್ರಚಾರ- ಮೆಹಬೂಬಾ ಮುಫ್ತಿ ಆಕ್ಷೇಪ

    ಶ್ರೀನಗರ: ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವು (Central Government) ಕಾಶ್ಮೀರದಲ್ಲಿ ಹಿಂದುತ್ವ ಅಜೆಂಡಾ ಪ್ರಚಾರ ಮಾಡುತ್ತಿದೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (PDP) ಮುಖ್ಯಸ್ಥೆ ಮೆಹಬೂಬಾ ಮುಫ್ತಿ (Mehbooba Mufti) ಆಕ್ಷೇಪ ವ್ಯಕ್ತಪಡಿಸಿದ್ದಾರೆ.

    ದಕ್ಷಿಣ ಕಾಶ್ಮೀರದ ಕುಲ್ಗಾಮ್‌ನಲ್ಲಿರುವ ಸರ್ಕಾರಿ ಪ್ರೌಢಶಾಲೆಯ ವಿದ್ಯಾರ್ಥಿಗಳು (Students) `ರಘುಪತಿ ರಾಘವ ರಾಜಾ ರಾಂ’ ಹಾಡುತ್ತಿರುವ ವೀಡಿಯೋವನ್ನು (Viral Video) ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದ ಮುಫ್ತಿ, ಇದು ಕೇಂದ್ರ ಸರ್ಕಾರದ ಹಿಂದುತ್ವ (Hindutva) ಅಜೆಂಡಾವನ್ನು ಸೂಚಿಸುತ್ತದೆ ಎಂದು ಆಕ್ಷೇಪಿಸಿದ್ದಾರೆ. ಇದನ್ನೂ ಓದಿ: ತೆರವು ಪ್ರಹಸನಕ್ಕೆ ಬಿತ್ತಾ ಬ್ರೇಕ್..?- ವಿಲ್ಲಾಗಳ ಕಡೆ ಮುಖಮಾಡದ ಜೆಸಿಬಿ!

    `ಧಾರ್ಮಿಕ ವಿದ್ವಾಂಸರನ್ನು ಜೈಲಿಗಟ್ಟುವುದು, ಜಮ್ಮಾ ಮಸೀದಿಯನ್ನು (Jama Masjid) ಮುಚ್ಚುವುದು ಮತ್ತು ಶಾಲಾ ಮಕ್ಕಳಿಗೆ ಹಿಂದೂ ಸ್ತೋತ್ರ ಹಾಡಲು ನಿರ್ದೇಶಿಸುವುದು ಕಾಶ್ಮೀರದಲ್ಲಿ ಭಾರತ ಸರ್ಕಾರದ ನಿಜವಾದ ಹಿಂದುತ್ವವನ್ನು ಬಿಂಬಿಸಿದೆ ಎಂದು ಮುಫ್ತಿ ಟ್ವೀಟ್‌ನಲ್ಲಿ ಉಲ್ಲೇಖಿಸಿದ್ದಾರೆ.

    1 ನಿಮಿಷ 45 ಸೆಕೆಂಡುಗಳಿರುವ ಈ ವೀಡಿಯೋನಲ್ಲಿ ವಿದ್ಯಾರ್ಥಿಗಳು ಶಾಲಾ ಸಮವಸ್ತ್ರ ಧರಿಸಿಯೇ `ರಘುಪತಿ ರಾಘವ ರಾಜಾ ರಾಂ’ (Raghupati Raghav Raja Ram) ಭಜನೆಯನ್ನು ಪಠಿಸುತ್ತಿದ್ದಾರೆ. ಇದನ್ನೂ ಓದಿ: ವಿದ್ಯಾರ್ಥಿನಿಯರ ಸ್ನಾನದ ವೀಡಿಯೋ ಲೀಕ್ ಪ್ರಕರಣ – ಬಾಯ್‌ಫ್ರೆಂಡ್‌ಗೆ ಹೆದರಿ ವೀಡಿಯೋ ಮಾಡಿದ್ಲು ಸಹಪಾಠಿ

    bjP

    ಇದಕ್ಕೆ ಪ್ರತಿಕ್ರಿಯಿಸಿರುವ ಬಿಜೆಪಿ ನಾಯಕ (BJP Leader) ಕವೀಂದರ್ ಗುಪ್ತಾ, ಮುಫ್ತಿಯವರು ಎಲ್ಲವನ್ನೂ ವಿವಾದಾತ್ಮಕವಾಗಿ ಪ್ರಯತ್ನಿಸುತ್ತಿದ್ದಾರೆ. ಕಾಶ್ಮೀರದ ಶಾಲೆಯೊಂದರಲ್ಲಿ ಹಾಡಿದ ಭಜನೆಯನ್ನು ತಪ್ಪುದಾರಿಗೆ ಎಳೆಯುತ್ತಿದ್ದಾರೆ. ಈ ಭಜನಾ ಗೀತೆಯಲ್ಲಿ `ಈಶ್ವರ ಅಲ್ಲಾ ತೇರೋ ನಾಮ್, ಸಬ್ಕೋ ಸನ್ಮತಿ ದೇ ಭಗವಾನ್’ ಕೂಡ ಇದೆ. ಮೆಹಬೂಬಾ ಮುಫ್ತಿಗೆ ಈ ಸನ್ಮತಿ ಸಿಗಲಿ ಎಂದು ಕುಟುಕಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಪಂಡಿತ್‌ ಕುಟುಂಬದ ಭೇಟಿ ತಡೆಯಲು ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ: ಮುಫ್ತಿ

    ಪಂಡಿತ್‌ ಕುಟುಂಬದ ಭೇಟಿ ತಡೆಯಲು ನನ್ನನ್ನು ಗೃಹ ಬಂಧನದಲ್ಲಿ ಇರಿಸಲಾಗಿದೆ: ಮುಫ್ತಿ

    ಶ್ರೀನಗರ: ಇತ್ತೀಚೆಗೆ ಶೋಪಿಯಾನ್‍ನಲ್ಲಿ ಭಯೋತ್ಪಾದಕರ ಗುಂಡಿಗೆ ಬಲಿಯಾದ ಕಾಶ್ಮೀರಿ ಪಂಡಿತ್ ಸುನೀಲ್ ಕುಮಾರ್ ಭಟ್ ಅವರ ಕುಟುಂಬವನ್ನು ಭೇಟಿ ಮಾಡುವುದನ್ನು ತಡೆಯಲು ನನ್ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ ಎಂದು ಪಿಡಿಪಿ ಅಧ್ಯಕ್ಷೆ ಮೆಹಬೂಬಾ ಮುಫ್ತಿ ಆರೋಪಿಸಿದರು.

    ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಗುಪ್ಕರ್ ಪ್ರದೇಶದಲ್ಲಿನ ತಮ್ಮ ನಿವಾಸದ ಗೇಟ್‍ಗೆ ಬೀಗ ಹಾಕಿರುವ ಹಾಗೂ ಮನೆ ಹೊರಗೆ ಸಿಆರ್‍ಪಿಎಫ್ ವಾಹನಗಳನ್ನು ನಿಲ್ಲಿಸಿರುವ ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಇದನ್ನೂ ಓದಿ: ಒಂದೆಡೆ ಧರ್ಮ ಒಡೆಯೋ, ಮತ್ತೊಂದೆಡೆ ಸಾವರ್ಕರ್‌ಗೆ ಅವಹೇಳನ ಮಾಡ್ತಿರೋದನ್ನ ಜನ ಗಮನಿಸ್ತಿದ್ದಾರೆ: ಸಿದ್ದುಗೆ ವಿಜಯೇಂದ್ರ ಗುದ್ದು

    ಕೇಂದ್ರದ ಕಠಿಣ ನೀತಿಯಿಂದಾಗಿ ಕಾಶ್ಮೀರಿ ಪಂಡಿತರ ಹತ್ಯೆ ಆಗುತ್ತಿದೆ. ಮುಖ್ಯ ವಾಹಿನಿಯಲ್ಲಿ ನನ್ನನ್ನು ಶತ್ರು ಎಂದು ಬಿಂಬಿಸುತ್ತಿದ್ದಾರೆ. ಆದರೆ ಇಂದು ನನ್ನನ್ನೇ ಗೃಹ ಬಂಧನದಲ್ಲಿ ಇರಿಸಲಾಗಿದೆ. ಈ ಬಗ್ಗೆ ಸರ್ಕಾರವನ್ನು ಪ್ರಶ್ನಿಸಿದರೆ, ಗೃಹ ಬಂಧನ ಮಾಡಿರುವುದು ಸ್ವಂತ ಭದ್ರತೆಗಾಗಿ ಎಂದು ಹೇಳುತ್ತದೆ ಎಂದು ಕಿಡಿಕಾರಿದರು. ಇದನ್ನೂ ಓದಿ: ಮಧ್ಯಾಹ್ನ ನಾಟಿ ಕೋಳಿ ಊಟ ಮಾಡಿ ಸಂಜೆ ದೇವಸ್ಥಾನಕ್ಕೆ ಭೇಟಿ ಕೊಟ್ರಾ ಸಿದ್ದರಾಮಯ್ಯ?

    Live Tv
    [brid partner=56869869 player=32851 video=960834 autoplay=true]

  • ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ – ಪ್ರತಿಪಕ್ಷಗಳ ಆಕ್ರೋಶ

    ಜಮ್ಮು-ಕಾಶ್ಮೀರದಲ್ಲಿ ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ – ಪ್ರತಿಪಕ್ಷಗಳ ಆಕ್ರೋಶ

    ಶ್ರೀನಗರ: ಜಮ್ಮು ಮತ್ತು ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ತೆರವುಗೊಳಿಸಿದ ನಂತರ ಇದೇ ಮೊದಲಬಾರಿಗೆ ಚುನಾವಣೆ ನಡೆಯುತ್ತಿದ್ದು, ಸ್ಥಳೀಯರಲ್ಲದವರಿಗೂ ಮತದಾನಕ್ಕೆ ಅವಕಾಶ ನೀಡಲಾಗಿದೆ.

    ಜಮ್ಮು ಮತ್ತು ಕಾಶ್ಮೀರದಲ್ಲಿ 2019 ರಲ್ಲಿ 370ನೇ ವಿಧಿಯ ಅಡಿಯಲ್ಲಿ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ನಂತರ, ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆಯಾಗಲಿದೆ. ಇದರಿಂದ ಕಾಶ್ಮೀರೇತರೂ ಮತ ಚಲಾಯಿಸಲು ಮತ್ತು ಭೂಮಿಯನ್ನು ಹೊಂದಲು ಅನುವು ಮಾಡಿಕೊಡಲಿದೆ. ಇದನ್ನೂ ಓದಿ: ಹಬ್ಬಕ್ಕೂ ಮುನ್ನ ಎಕೆ 47 ಒಳಗೊಂಡ ದೋಣಿ ಪತ್ತೆ – ಮಹಾರಾಷ್ಟ್ರದಲ್ಲಿ ಹೈ ಅಲರ್ಟ್

    ಜಮ್ಮು ಹಾಗೂ ಕಾಶ್ಮೀರ ಮುಖ್ಯ ಚುನಾವಣಾ ಅಧಿಕಾರಿ ಹಿರ್ದೇಶ್ ಕುಮಾರ್, ಚುನಾವಣೆಗೆ ಮುನ್ನ 20 ಲಕ್ಷಕ್ಕೂ ಅಧಿಕ ಹೊಸ ಮತದಾರರು ಈ ಪ್ರದೇಶದಲ್ಲಿ ನೋಂದಣಿಯಾಗುವ ಸಾಧ್ಯತೆ ಇದೆ. ಇದರಿಂದ ಮತದಾರರ ಸಂಖ್ಯೆ ಶೇ.33ಕ್ಕೂ ಹೆಚ್ಚಾಗುವ ಸಾಧ್ಯತೆಯಿದೆ. ಸದ್ಯ ಈ ಕೇಂದ್ರಾಡಳಿತ ಪ್ರದೇಶದಲ್ಲಿ 76 ಲಕ್ಷ ಮತದಾರರಿದ್ದಾರೆ ಎಂದು ಹೇಳಿದ್ದಾರೆ.

    370ನೇ ವಿಧಿಯನ್ನು ತೆಗೆದುಹಾಕಿದ ಬಳಿಕ ಈ ಮೊದಲು ಮತ ಹಾಕಲು ಸಾಧ್ಯವಿಲ್ಲದವರೂ ಈಗ ಮತದಾರರಾಗಿ ನೋಂದಣಿ ಮಾಡಿಸಿಕೊಳ್ಳಬಹುದು. ಈ ಹಿನ್ನೆಲೆ ಕಾಶ್ಮೀರಿಯಲ್ಲದವರು ಸೇರಿ ಮತದಾರರ ಅಂತಿಮ ಪಟ್ಟಿಯಲ್ಲಿ 20 – 25 ಲಕ್ಷ ಹೊಸ ಮತದಾರರು ಸೇರ್ಪಡೆಯಾಗುವ ಸಾಧ್ಯತೆಯಿದೆ. ಜಮ್ಮು ಹಾಗೂ ಕಾಶ್ಮೀರದಲ್ಲಿ ವಾಸಿಸುತ್ತಿರುವ ಹಾಗೂ ಕೆಲಸ ಮಾಡುತ್ತಿರುವ ಯಾರಾದರೂ ಅಲ್ಲಿ ಇನ್ಮುಂದೆ ಮತ ಹಾಕಬಹುದಾಗಿದೆ ಎಂದು ಹಿರ್ದೇಶ್ ಕುಮಾರ್ ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯ ದಿನಾಚರಣೆ ವೇಳೆ ಇನ್ಸ್‌ಪೆಕ್ಟರ್, ಕಾನ್‍ಸ್ಟೇಬಲ್ ನಾಗಿಣಿ ಡ್ಯಾನ್ಸ್ – ಇಬ್ಬರು ಎತ್ತಂಗಡಿ

    ಚುನಾವಣಾ ಆಯೋಗದ ಈ ನಡೆಗೆ ರಾಜಕೀಯ ಪಕ್ಷಗಳು ವಿರೋಧ ವ್ಯಕ್ತಪಡಿಸಿವೆ. ಈ ಕುರಿತು ಟ್ವೀಟ್ ಮಾಡಿರುವ ನ್ಯಾಷನಲ್ ಕಾನ್ಫರೆನ್ಸ್ ನಾಯಕ ಓಮರ್ ಅಬ್ದುಲ್ಲಾ, `ಜಮ್ಮು ಮತ್ತು ಕಾಶ್ಮೀರದಲ್ಲಿ ತನ್ನ ಸ್ಥಾನಗಳನ್ನು ಗೆಲ್ಲಲು ಬಿಜೆಪಿ ತಾತ್ಕಾಲಿಕ ಮತದಾರರನ್ನು ಆಮದು ಮಾಡಿಕೊಳ್ಳುವ ಅಗತ್ಯವಿದೆಯೇ? ಜಮ್ಮು ಹಾಗೂ ಕಾಶ್ಮೀರದ ಜನರಿಗೆ ತಮ್ಮ ಹಕ್ಕು ಚಲಾಯಿಸಲು ಅವಕಾಶ ನೀಡಿದಾಗ ಇವುಗಳಲ್ಲಿ ಯಾವುದೂ ಬಿಜೆಪಿಗೆ ಸಹಾಯ ಮಾಡುವುದಿಲ್ಲ ಎಂದು ಅವರು ಟೀಕಿಸಿದ್ದಾರೆ.

    ಮಾಜಿ ಸಿಎಂ ಮೆಹಬೂಬಾ ಮುಫ್ತಿ, ಬಿಜೆಪಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವತ್ತ ಗಮನ ಹರಿಸಿದೆ. ಸ್ಥಳೀಯರಲ್ಲದವರಿಗೆ ಮತ ಚಲಾಯಿಸಲು ಅವಕಾಶ ನೀಡುವುದು ಅಂದರೆ ನಿಸ್ಸಂಶಯವಾಗಿ ಚುನಾವಣಾ ಫಲಿತಾಂಶಗಳ ಮೇಲೆ ಪ್ರಭಾವ ಬೀರುವುದು. ಸ್ಥಳೀಯರನ್ನು ಬಲಹೀನಗೊಳಿಸಲು ಕಬ್ಬಿಣದ ಮುಷ್ಟಿಯೊಂದಿಗೆ ಜಮ್ಮು ಹಾಗೂ ಕಾಶ್ಮೀರದ ಆಡಳಿತವನ್ನು ಮುಂದುವರಿಸುವುದು ನಿಜವಾದ ಗುರಿಯಾಗಿದೆ. ಅದಕ್ಕಾಗಿ ಹಿಂಬಾಗಿಲಿನಿಂದ 25 ಲಕ್ಷ ಬಿಜೆಪಿ ಮತದಾರರನ್ನು ತರುವ ಪ್ರಯತ್ನ ಮಾಡುತ್ತಿದೆ ಎಂದು ಟ್ವೀಟ್ ಮೂಲಕ ಕಿಡಿ ಕಾರಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ

    ನಿರ್ಗಮಿತ ರಾಷ್ಟ್ರಪತಿಗೆ ಮುಫ್ತಿ ಅಪಮಾನ- ಖರ್ಗೆಗೆ ಆಸನ ನಿಗದಿಯಲ್ಲಿ ಶಿಷ್ಟಾಚಾರ ಉಲ್ಲಂಘನೆ

    ನವದೆಹಲಿ: ನಿರ್ಗಮಿತ ರಾಷ್ಟ್ರಪತಿ ರಾಮನಾಥ್ ಕೋವಿಂದ್‍ಗೆ ಎಲ್ಲೆಡೆಯಿಂದ ಗೌರವಯುತ ಬೀಳ್ಕೊಡುಗೆ ಸಿಗುತ್ತಿದೆ. ಆದರೆ ಈ ವಿಚಾರದಲ್ಲಿಯೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ, ಕೋವಿಂದ್‍ರನ್ನು ಅಪಮಾನಿಸುವ ರೀತಿ ಟ್ವೀಟ್ ಮಾಡಿದ್ದಾರೆ.

    ನಿರ್ಗಮಿತ ರಾಷ್ಟ್ರಪತಿಗಳು, ದೇಶದ ಸಂವಿಧಾನಕ್ಕೆ ಅನೇಕ ಬಾರಿ ವಿರುದ್ಧವಾಗಿ ನಡೆದುಕೊಳ್ಳುವ ಪರಂಪರೆಯನ್ನು ಬಿಟ್ಟು ಹೋಗಿದ್ದಾರೆ ಎಂದು ಬರೆದುಕೊಂಡಿದ್ದಾರೆ. ತಮ್ಮ ವಾದವನ್ನು ಸಮರ್ಥನೆ ಮಾಡಿಕೊಳ್ಳಲು ಆರ್ಟಿಕಲ್ 370 ರದ್ದು, ಸಿಎಎ, ಅಲ್ಪಸಂಖ್ಯಾತರು ಮತ್ತು ದಲಿತರನ್ನು ನಿರ್ಲಜ್ಜವಾಗಿ ಗುರಿಯಾಗಿಸಿ ದಾಳಿ ನಡೆಸಲಾಗುತ್ತಿದೆ. ಬಿಜೆಪಿಯ ಅಜೆಂಡಾಗಳನ್ನು ಈಡೇರಿಸಲು ಕೋವಿಂದ್ ಅವರು ಸಂವಿಧಾನಕ್ಕೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಇದಕ್ಕೆ ಭಾರೀ ಆಕ್ರೋಶ ವ್ಯಕ್ತವಾಗುತ್ತಿದೆ. ಇದನ್ನೂ ಓದಿ: ಜುಲೈ 25ರಂದೇ ರಾಷ್ಟ್ರಪತಿ ಅಧಿಕಾರ ಸ್ವೀಕಾರ ಯಾಕೆ?

    ಇತ್ತ ನೂತನ ರಾಷ್ಟ್ರಪತಿ ದ್ರೌಪದಿ ಮುರ್ಮು ಅವರ ಪದಗ್ರಹಣ ಕಾರ್ಯಕ್ರಮಲ್ಲಿ ರಾಜ್ಯಸಭೆ ವಿಪಕ್ಷ ನಾಯಕ ಮಲ್ಲಿಕಾರ್ಜುನ ಖರ್ಗೆಯವರಿಗೆ ಅವರ ಸ್ಥಾನಮಾನಕ್ಕೆ ಅನುಗುಣವಾಗಿ ಆಸನ ವ್ಯವಸ್ಥೆ ಮಾಡದೇ ಅಪಮಾನಿಸಲಾಗಿದೆ ಎಂಬ ಆರೋಪ ಕೇಳಿಬಂದಿದೆ. ಪ್ರೊಟೋಕಾಲ್ ಉಲ್ಲಂಘಿಸಲಾಗಿದೆ ಎಂದು ಆರೋಪಿಸಿ ಕಾಂಗ್ರೆಸ್ ರಾಜ್ಯಸಭೆ ಚೇರ್ಮನ್‍ಗೆ ಪತ್ರ ಬರೆದಿದೆ. ಈ ಕಾರ್ಯಕ್ರಮಕ್ಕೆ ಬಿಹಾರ ಸಿಎಂ ನಿತೀಶ್ ಗೈರಾಗಿರುವುದು ಸಹ ಚರ್ಚೆಗೆ ಎಡೆ ಮಾಡಿಕೊಟ್ಟಿದೆ. ಬಿಜೆಪಿಯಿಂದ ಆಹ್ವಾನ ಇದ್ದರೂ, ಕಳೆದ ಒಂದು ವಾರದಲ್ಲಿ ನಿತೀಶ್ ಕುಮಾರ್ ಗೈರಾಗುತ್ತಿರುವ ಮೂರನೇ ಕಾರ್ಯಕ್ರಮ ಇದು. ಎನ್‍ಡಿಎಯಿಂದ ನಿತೀಶ್ ದೂರ ಸರಿಯುತ್ತಿದ್ದಾರಾ ಎಂಬ ಪ್ರಶ್ನೆ ಎದ್ದಿದೆ.

    Live Tv
    [brid partner=56869869 player=32851 video=960834 autoplay=true]

  • ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜ ಕೊಳ್ಳುವಂತೆ ಸ್ಥಳೀಯ ಆಡಳಿತದಿಂದಲೇ ಜನರಿಗೆ ಒತ್ತಾಯ

    ಹರ್ ಘರ್ ತಿರಂಗಾ ಅಭಿಯಾನ: ರಾಷ್ಟ್ರಧ್ವಜ ಕೊಳ್ಳುವಂತೆ ಸ್ಥಳೀಯ ಆಡಳಿತದಿಂದಲೇ ಜನರಿಗೆ ಒತ್ತಾಯ

    ಶ್ರೀನಗರ: ಪ್ರತಿ ಮನೆಯಲ್ಲೂ ತ್ರಿವರ್ಣ ಧ್ವಜ ಹಾರಾಡಲೇಬೇಕೆಂಬ ಉದ್ದೇಶದಿಂದ ಜಮ್ಮು ಮತ್ತು ಕಾಶ್ಮೀರ ಕೇಂದ್ರಾಡಳಿತ ಪ್ರದೇಶದಲ್ಲಿ ತ್ರಿವರ್ಣ ಧ್ವಜವನ್ನು ಕೊಂಡುಕೊಳ್ಳುವಂತೆ ಅಲ್ಲಿನ ಆಡಳಿತವೇ ಜನರನ್ನು ಒತ್ತಾಯಿಸುತ್ತಿದೆ ಎಂದು ಜಮ್ಮು ಕಾಶ್ಮೀರದ ಮಾಜಿ ಸಿಎಂ ಹಾಗೂ ಪಿಡಿಪಿ ಮುಖ್ಯಸ್ಥೆ ಮೆಹಬೂಬಾ ಮುಫ್ತಿ ಆರೋಪಿಸಿದ್ದಾರೆ.

    75ನೇ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಕೇಂದ್ರ ಸರ್ಕಾರದಿಂದ ಹರ್ ಘರ್ ತಿರಂಗಾ ಅಭಿಯಾನ ಹಮ್ಮಿಕೊಳ್ಳಲಾಗಿದೆ. ಅದಕ್ಕಾಗಿ ಆಗಸ್ಟ್ 13 ರಿಂದ ಆಗಸ್ಟ್ 15ರ ನಡುವೆ ದೇಶದ ನಾಗರಿಕರು ತಮ್ಮ ಮನೆಯಲ್ಲಿ ತ್ರಿವರ್ಣ ಧ್ವಜ ಹಾರಾಡುವಂತೆ ಪ್ರೇರೇಪಿಸುತ್ತಿದೆ. ಆದರೆ ಕಾಶ್ಮೀರ ಆಡಳಿತ ತ್ರಿವರ್ಣ ಧ್ವಜವನ್ನು ಕೊಂಡುಕೊಳ್ಳುವಂತೆ ಜನತೆಗೆ ಒತ್ತಾಯ ಮಾಡುತ್ತಿದೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ಸ್ವಾತಂತ್ರ್ಯದ ಅಮೃತ ಮೋತ್ಸವಕ್ಕೆ ‘ಹರ್ ಘರ್ ತಿರಂಗಾ’ ಅಭಿಯಾನ – ದೇಶಾದ್ಯಂತ 20 ಕೋಟಿ ಮನೆಗಳಲ್ಲಿ ಹಾರಲಿದೆ ತ್ರಿವರ್ಣ ಧ್ವಜ

    ಧ್ವಜಕ್ಕೆ 20 ರೂ. ನೀಡಿ ಎಂದು ಘೋಷಣೆ..?
    ಈ ಕುರಿತು ಪ್ರಚಾರದ ವೀಡಿಯೋ ಒಂದನ್ನು ಹಂಚಿಕೊಂಡಿರುವ ಮುಫ್ತಿ ಅವರು, ದಕ್ಷಿಣ ಕಾಶ್ಮೀರದ ಅನಂತನಾಗ್ ಜಿಲ್ಲೆಯ ಬಿಜ್‌ಬೆಹಾರಾದಲ್ಲಿ ನಗರಪಾಲಿಕೆಯೇ ತ್ರಿವರ್ಣ ಧ್ವಜ ಕೊಂಡುಕೊಳ್ಳುವಂತೆ ಒತ್ತಾಯಿಸುತ್ತಿದೆ. ಪ್ರತಿ ಅಂಗಡಿಯವರೂ ಅಭಿಯಾನಕ್ಕಾಗಿ ಒಂದು ಧ್ವಜವನ್ನಾದರೂ ಕೊಂಡುಕೊಳ್ಳಿ. ಅದಕ್ಕಾಗಿ 20 ರೂ. ಡೆಪಾಸಿಟ್ ಮಾಡಿ ಎಂದು ಸಾರ್ವಜನಿಕವಾಗಿ ವಾಹನವೊಂದರ ಮೇಲೆ ಲೌಡ್‌ಸ್ಪೀಕರ್ ಮೂಲಕ ಸಾರಲಾಗುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಸಿಎಎ ಬೆಂಬಲಿಸಿ ಗದಗದಲ್ಲಿ ಬೃಹತ್ ತಿರಂಗಾ ರ‍್ಯಾಲಿ

    ವಿದ್ಯಾರ್ಥಿಗಳು, ಅಂಗಡಿಯವರಿಗೆ ಹಾಗೂ ಸಿಬ್ಬಂದಿಗೆ ರಾಷ್ಟ್ರಧ್ವಜ ಹಾರಿಸುವಂತೆ ಜಮ್ಮು ಕಾಶ್ಮೀರ ಆಡಳಿತ ಒತ್ತಾಯಿಸುತ್ತಿರುವ ರೀತಿ ಹೇಗಿದೆ ಎಂದರೆ, ಕಾಶ್ಮೀರ ವಶಪಡಿಸಿಕೊಳ್ಳಬೇಕಾದ ಶತ್ರು ಪ್ರದೇಶ ಎನ್ನುವಂತಿದೆ ಎಂದು ಮುಫ್ತಿ ಟ್ವೀಟ್‌ನಲ್ಲಿ ಕಿಡಿಕಾರಿದ್ದಾರೆ.

    ಸಿಪಿಐಎಂ ನಾಯಕ ಎಂ.ವೈ.ತಾರಿಗಾಮಿ ಸಹ ಟ್ವೀಟ್ ಮೂಲಕ ಆಕ್ರೋಶ ವ್ಯಕ್ತಪಡಿಸಿದ್ದಾರೆ. ವ್ಯಾಪಾರಿಗಳು ಧ್ವಜ ಕೊಂಡುಕೊಳ್ಳಲು 20 ರೂ. ಹಣ ಡೆಪಾಸಿಟ್ ಮಾಡಿ ಎಂದು ಆಡಳಿತ ಘೋಷಣೆ ಮಾಡುತ್ತಿದೆ. ಕೇಂದ್ರ ಸರ್ಕಾರದ ಹರ್ ಘರ್ ತಿರಂಗಾ ಅಭಿಯಾನದಡಿ ಧ್ವಜ ಹಾರಾಡಿಸುವಂತೆ ಒತ್ತಾಯಿಸಲಾಗುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದ್ದಾರೆ.

    Live Tv
    [brid partner=56869869 player=32851 video=960834 autoplay=true]

  • ಮುಸ್ಲಿಮರಿಗೆ ತೊಂದರೆ ಕೊಡೋದನ್ನ ನೋಡಲು ಸಿಎಂಗಳ ಪೈಪೋಟಿ : ಮುಫ್ತಿ

    ಮುಸ್ಲಿಮರಿಗೆ ತೊಂದರೆ ಕೊಡೋದನ್ನ ನೋಡಲು ಸಿಎಂಗಳ ಪೈಪೋಟಿ : ಮುಫ್ತಿ

    ಶ್ರೀನಗರ: ಮುಸ್ಲಿಮರಿಗೆ ಯಾರು ಹೆಚ್ಚು ತೊಂದರೆ ಕೊಡ್ತಾರೆ ಎಂಬುದನ್ನು ನೋಡಲು ದೇಶದ ಮುಖ್ಯಮಂತ್ರಿಗಳು ಪೈಪೋಟಿಗೆ ಬಿದ್ದಿದ್ದಾರೆ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಹಾಗೂ ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ವಾಗ್ದಾಳಿ ನಡೆಸಿದ್ದಾರೆ.

    ನಿನ್ನೆ ಆರ್‌ಎಸ್‌ಎಸ್ ಕಾರ್ಯಕ್ರಮವೊಂದರಲ್ಲಿ ಅಸ್ಸಾಂ ಮುಖ್ಯಮಂತ್ರಿ ಬಿಸ್ವಾ ಶರ್ಮಾ ಮದರಸಾಗಳ ವಿರುದ್ಧ ವಾಗ್ದಾಳಿ ನಡೆಸಿದ್ದರು. ಇದಾದ ಒಂದು ದಿನದ ಬಳಿಕ ಪ್ರತಿಕ್ರಿಯಿಸಿರುವ ಮುಫ್ತಿ ಮುಖ್ಯಮಂತ್ರಿ ಹೇಳಿಕೆಗೆ ತಿರುಗೇಟು ನೀಡಿದ್ದಾರೆ. ಇದನ್ನೂ ಓದಿ: ರಾಷ್ಟ್ರೀಯತೆ ಪರಿಕಲ್ಪನೆ ಸಂವಿಧಾನದಿಂದ ಬಂದಿಲ್ಲ, ಅದು ಪ್ರಾಚೀನ ಬೇರುಗಳನ್ನು ಹೊಂದಿದೆ: JNU ಕುಲಪತಿ

    Mehbooba Mufti

    ಮುಸ್ಲಿಮರಿಗೆ ಯಾರು ಹೆಚ್ಚು ತೊಂದರೆ ಕೊಡ್ತಾರೆ ಎಂಬುದನ್ನು ನೋಡಲು ಸಿಎಂಗಳು ಪರಸ್ಪರ ಪೈಪೋಟಿ ನಡೆಸುತ್ತಿದ್ದಾರೆ. ಹಾಗಾಗಿಯೇ ಮಂದಿರ, ಮಸೀದಿಗಳ ವಿಚಾರಗಳನ್ನು ಎತ್ತಲಾಗುತ್ತಿದೆ. ಗುಜರಾತ್ ಮತ್ತು ಉತ್ತರ ಪ್ರದೇಶಗಳಲ್ಲಿ ಮುಸ್ಲಿಮರು ಪ್ರತಿಕ್ರಿಯಿಸುವಂತೆ ಪ್ರಚೋದನೆ ನೀಡಲಾಗುತ್ತಿದೆ ಎಂದು ಅಸಮಧಾನ ವ್ಯಕ್ತಪಡಿಸಿದ್ದಾರೆ. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಜಿಲ್ಲಾ ನ್ಯಾಯಾಲಯದಿಂದ ನಾಳೆ ಮಹತ್ವದ ಆದೇಶ

    modi (1)

    ಬ್ರಿಟಿಷರಂತೆ ಬಿಜೆಪಿ: ಬ್ರಿಟಿಷರು ಹಿಂದೂಗಳನ್ನು ಮುಸ್ಲಿಮರ ವಿರುದ್ಧ ಎತ್ತಿಕಟ್ಟುತ್ತಿದ್ದರು. ಬಿಜೆಪಿಯೂ ಈಗ ಅದನ್ನೇ ಮಾಡುತ್ತಿದೆ. ಪ್ರಧಾನಿ ನರೇಂದ್ರ ಮೋದಿ ಮೌನವಾಗಿ ನೋಡುತ್ತಿದ್ದಾರೆ. ಅವರ ಪಕ್ಷವು ಮಾಡುತ್ತಿರುವುದೇ ಸರಿ ಎಂದು ಭಾವಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.

  • ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

    ಕಾಶ್ಮೀರದಲ್ಲಿ ನಡೆದ ಹಿಂಸಾಚಾರಕ್ಕೆ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ: ಮೆಹಬೂಬಾ ಮುಫ್ತಿ

    ಶ್ರೀನಗರ: ಕಾಶ್ಮೀರ ಕಣಿವೆಯಲ್ಲಿ ಇತ್ತೀಚೆಗೆ ನಡೆದ ಹಿಂಸಾಚಾರಕ್ಕೆ ವಿವೇಕ್ ಅಗ್ನಿಹೋತ್ರಿ ನಿರ್ದೇಶನದ ‘ದಿ ಕಾಶ್ಮೀರ್ ಫೈಲ್ಸ್’ ಚಿತ್ರವೇ ಕಾರಣ ಎಂದು ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ(ಪಿಡಿಪಿ) ಮುಖ್ಯಸ್ಥೆ ಮತ್ತು ಜಮ್ಮು ಮತ್ತು ಕಾಶ್ಮೀರದ ಮಾಜಿ ಸಿಎಂ ಮೆಹಬೂಬಾ ಮುಫ್ತಿ ಆರೋಪಿಸಿದರು.

    ಸರ್ಕಾರಿ ನೌಕರಾಗಿದ್ದ ಕಾಶ್ಮೀರಿ ಪಂಡಿತ್ ರಾಹುಲ್ ಭಟ್ ಹತ್ಯೆ ಕುರಿತು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ನಮ್ಮ ಸರ್ಕಾರವು ನನ್ನ ಅಧಿಕಾರಾವಧಿಯಲ್ಲಿ ಕಾಶ್ಮೀರಿ ಪಂಡಿತರಿಗೆ ಸುರಕ್ಷಿತ ವಾತಾವರಣವನ್ನು ನಿರ್ಮಿಸಿತ್ತು. 2016 ರಲ್ಲಿ ಈ ರೀತಿಯ ಯಾವುದೇ ಹತ್ಯೆ ನಡೆದಿಲ್ಲ. ‘ದಿ ಕಾಶ್ಮೀರ್ ಫೈಲ್ಸ್’ ಸಿನಿಮಾ ಈ ರೀತಿಯ ಹಿಂಸಾಚಾರವನ್ನು ಪ್ರಚೋದಿಸಿದೆ ಎಂದು ಆಕ್ರೋಶ ಹೊರಹಾಕಿದರು. ಈ ವೇಳೆ ಮುಫ್ತಿ ಅವರು ದೇಶದಲ್ಲಿ ದ್ವೇಷದ ವಾತಾವರಣವನ್ನು ಸೃಷ್ಟಿಸಿದ ‘ದಿ ಕಾಶ್ಮೀರ ಫೈಲ್ಸ್’ ಸಿನಿಮಾವನ್ನು ಬ್ಯಾನ್ ಮಾಡಬೇಕು ಎಂದು ಕರೆ ಕೊಟ್ಟರು. ಇದನ್ನೂ ಓದಿ: ಬಾಗಲಕೋಟೆ ಕೇಸ್‍ಗೆ ಟ್ವಿಸ್ಟ್ – ಮೊದಲು ಸಂಗೀತಾ ಹಲ್ಲೆ ಮಾಡಿದ್ದ ವೀಡಿಯೋ ವೈರಲ್ 

    Gyanvapi Masjid 1

    ಜ್ಞಾನವಾಪಿ ಮಸೀದಿಯ ವಿಷಯ ಕುರಿತು ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರವನ್ನು ಗುರಿಯಾಗಿಸಿಕೊಂಡು ಮಾತನಾಡಿದ ಅವರು, ನಿಜವಾದ ಸಮಸ್ಯೆಗಳನ್ನು ದೂರವಿಡಲು ಹಿಂದೂ-ಮುಸ್ಲಿಂ ಸಮಸ್ಯೆಗಳನ್ನು ಸೃಷ್ಟಿಸಲಾಗುತ್ತಿದೆ. ಈಗ ಜ್ಞಾನವಾಪಿ ಮಸೀದಿ ಸಮಸ್ಯೆ ಹಿಂದೆ ಇದ್ದಾರೆ. ನಾವು ಪೂಜಿಸುವುದೆಲ್ಲ ನಮ್ಮ ದೇವರು. ನೀವು ನೋಡುತ್ತಿರುವ ಎಲ್ಲ ಮಸೀದಿಗಳ ಪಟ್ಟಿಯನ್ನು ನಮಗೆ ನೀಡಿ ಎಂದು ಸವಾಲು ಹಾಕಿದರು. ಇದನ್ನೂ ಓದಿ: ಪಠ್ಯಕ್ರಮದಲ್ಲಿ RSS ಸಂಸ್ಥಾಪಕ ಹೆಡ್ಗೆವಾರ್ ಭಾಷಣ ಸೇರ್ಪಡೆ – ಶೀಘ್ರವೇ ಹಿಂತೆಗೆಯಲು ಕ್ಯಾಂಪಸ್ ಫ್ರಂಟ್ ಒತ್ತಾಯ 

  • ಓವೈಸಿ, ಮುಫ್ತಿ ಮತ್ತೊಮ್ಮೆ ಇತಿಹಾಸ ಓದಲಿ: ಕೇಂದ್ರ ಸಚಿವೆ

    ಓವೈಸಿ, ಮುಫ್ತಿ ಮತ್ತೊಮ್ಮೆ ಇತಿಹಾಸ ಓದಲಿ: ಕೇಂದ್ರ ಸಚಿವೆ

    ನವದೆಹಲಿ: ಎಐಎಮ್‍ಐಎಮ್ ಮುಖ್ಯಸ್ಥ ಅಸಾದುದ್ದಿನ್ ಓವೈಸಿ ಹಾಗೂ ಜಮ್ಮು- ಕಾಶ್ಮೀರದ ಮೆಹಬೂಬಾ ಮುಫ್ತಿ ಅವರು ಇತಿಹಾಸವನ್ನು ಮತ್ತೊಮ್ಮೆ ಓದಬೇಕು ಎಂದು ಸಲಹೆ ನೀಡುತ್ತೇನೆ ಎಂದು ಕೇಂದ್ರ ಸಚಿವೆ ಮೀನಾಕ್ಷಿ ಲೇಖಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಮುಫ್ತಿ ಹಾಗೂ ಓವೈಸಿ ಅವರು ಶಾಂತಿ ಮತ್ತು ಸಹೋದರತ್ವವನ್ನು ಕಾಪಾಡಬೇಕು. ಇದರ ಜೊತೆಗೆ ಸಮಾಜಕ್ಕೆ ಧಕ್ಕೆ ತರುವ ಯಾವುದೇ ಕೆಲಸವನ್ನು ಮಾಡಬಾರದು ಎಂದು ಮನವಿ ಮಾಡಿದರು.

    ಜ್ಞಾನವಾಪಿ ಮಸೀದಿಯ ವಿಷಯ ನ್ಯಾಯಾಲಯದಲ್ಲಿದೆ. ಈ ಬಗ್ಗೆ ಅವರು ಮಧ್ಯ ಪ್ರವೇಶಿಸಬಾರದು. ಜೊತೆಗೆ ಸಮಾಜಕ್ಕೆ ಧಕ್ಕೆಯನ್ನು ತರಬಾರದು ಎಂದರು.

    ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯದ ವೇಳೆ ಮಸೀದಿಯ ಬಾವಿಯೊಳಗೆ 12 ಅಡಿ, 8 ಇಂಚಿನ ಶಿವಲಿಂಗ ಪತ್ತೆಯಾದ ಹಿನ್ನೆಲೆಯಲ್ಲೇ ಓವೈಸಿ ಹಾಗೂ ಮೆಹಬೂಬಾ ಮುಫ್ತಿ ಟೀಕಿಸಿದ್ದರು. ಇದನ್ನೂ ಓದಿ: ಭಾರೀ ಮಳೆಗೆ ಕೊಚ್ಚಿ ಹೋಯ್ತು ಸೇತುವೆ, ಕುಸಿಯಿತು ರಸ್ತೆ

    ನ್ಯಾಯಾಲಯದ ಆದೇಶವನ್ನು ಟೀಕಿಸಿದ್ದ ಓವೈಸಿ, ಡಿಸೆಂಬರ್ 1949ರಲ್ಲಿ ಬಾಬರಿ ಮಸೀದಿಯಲ್ಲಿ ಪಠ್ಯಪುಸ್ತಕ ಪುನರಾವರ್ತನೆ ಆಗಿದೆ. ಈ ಆದೇಶವು ಮಸೀದಿಯ ಧಾರ್ಮಿಕ ಸ್ವರೂಪವನ್ನು ಬದಲಾಯಿಸುತ್ತದೆ. ಇದು ಆರಾಧನ ಸ್ಥಳ (1991 ಕಾಯಿದೆ) ಕಾಯಿದೆ ಉಲ್ಲಂಘನೆಯಾಗಿದೆ. ಇದು ನನ್ನ ಆತಂಕವಾಗಿತ್ತು ಮತ್ತು ಇದು ನಿಜವಾಗಿದೆ. ಜ್ಞಾನವಾಪಿ ಮಸೀದಿಯು ಮಸೀದಿಯಾಗಿತ್ತು. ಮಸೀದಿಯಾಗಿಯೇ ಉಳಿಯುತ್ತದೆ ಎಂದಿದ್ದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿ ವಿವಾದ – ಇಂದು ಸುಪ್ರೀಂ ಕೋರ್ಟ್ ವಿಚಾರಣೆ

  • ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೊಘಲರೇ ಕಾರಣ: ಮುಫ್ತಿ

    ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಕ್ಕೆ ಮೊಘಲರೇ ಕಾರಣ: ಮುಫ್ತಿ

    ಶ್ರೀನಗರ: ಭಾರತದಲ್ಲಿ ಶೇ.50ರಷ್ಟು ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಲು ಮೊಘಲರೇ ಕಾರಣ ಎಂದು ಜಮ್ಮು ಮತ್ತು ಕಾಶ್ಮೀರದ ಮಾಜಿ ಮುಖ್ಯಮಂತ್ರಿ ಮೆಹಬೂಬಾ ಮುಫ್ತಿ ತಿಳಿಸಿದರು.

    ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಔರಂಗಜೇಬ್ ಆಳ್ವಿಕೆಯಲ್ಲಿ ದೇವಾಲಯಗಳು ನಾಶವಾದವು ಎಂಬ ಚರ್ಚೆಯ ಕುರಿತು ಪ್ರತಿಕ್ರಿಯಿಸಿದರು. ಮೋಘಲರಿಂದಲೇ ಭಾರತದಲ್ಲಿ ಪ್ರವಾಸೋದ್ಯಮ ಕ್ಷೇತ್ರಗಳು ಹೆಚ್ಚಿದೆ. ಭಾರತದ ಪ್ರವಾಸೋದ್ಯಮ ಕ್ಷೇತ್ರವನ್ನು ನಾಶ ಮಾಡಲು ಬಿಜೆಪಿ ಬಯಸಿದೆ. ಇದರಿಂದಾಗಿ ಅವರು ಎಲ್ಲಾ ಮಸೀದಿಗಳ ಹಿಂದೆ ಬಿದ್ದಿದ್ದಾರೆ. ಇದೀಗ ಜ್ಞಾನವಾಪಿ ಮಸೀದಿಯ ಹಿಂದೆ ಬಿದ್ದಿದ್ದಾರೆ. ನಾವು ಎಲ್ಲಿ ಪೂಜಿಸುತ್ತೇವೆಯೋ ಅಲ್ಲಿ ನಮ್ಮ ದೇವರು ಇದ್ದಾನೆ. ನೀವು ನೋಡುತ್ತಿರುವ ಎಲ್ಲಾ ಮಸೀದಗಳ ಪಟ್ಟಿಯನ್ನು ನಮಗೆ ನೀಡಿ ಎಂದು ಒತ್ತಾಯಿಸಿದರು.

    ವಿವೇಕ್ ಅಗ್ನಿಹೋತ್ರಿಯವರ ದಿ ಕಾಶ್ಮೀರಿ ಫೈಲ್ಸ್ ಸಿನಿಮಾವನ್ನು ಟೀಕಿಸಿದ ಅವರು, ಇತ್ತೀಚೆಗೆ ಕಾಶ್ಮೀರದಲ್ಲಿ ಕಾಶ್ಮೀರ ಪಂಡಿತರನ್ನು ಗುರಿಯಾಗಿಸಿಕೊಂಡಿರುವ ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರ ಬಿಡುಗಡೆಯಾದ ನಂತರ ಹಿಂದೂಗಳು ಮತ್ತು ಮುಸ್ಲಿಮರ ನಡುವೆ ದ್ವೇಷ ಹೆಚ್ಚಿದೆ. ಅವರು ನೈಜ ಸಮಸ್ಯೆಗಳಿಂದ ದೂರವಿರಲು ಈ ಹಿಂದೂ, ಮುಸ್ಲಿಂ ಸಮಸ್ಯೆಯನ್ನು ಸೃಷ್ಟಿಸುತ್ತಿದ್ದಾರೆ ಎಂದು ವಾಗ್ದಾಳಿ ನಡೆಸಿದರು. ಇದನ್ನೂ ಓದಿ: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ, ನಂದಿ ವಿಗ್ರಹ ಪತ್ತೆ

    ಘಟನೆ ಏನು?: ವಾರಣಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಸರ್ವೇ ಕಾರ್ಯದ ವೇಳೆ ಶಿವಲಿಂಗ ಪತ್ತೆಯಾಗಿರುವುದಾಗಿ ವರದಿಯಾಗಿದೆ. ಮಸೀದಿಯ ಬಾವಿಯೊಳಗೆ ಪತ್ತೆಯಾದ ಶಿವಲಿಂಗ 12 ಅಡಿ, 8 ಇಂಚು ವ್ಯಾಸ ಹೊಂದಿದೆ ಎಂದು ಹಿಂದೂ ಪರ ವಕೀಲ ವಿಷ್ಣು ಜೈನ್ ತಿಳಿಸಿದ್ದಾರೆ.

    ಇತ್ತೀಚೆಗೆ ಉತ್ತರ ಪ್ರದೇಶದ ವಾರಣಾಸಿಯಲ್ಲಿರುವ ಜ್ಞಾನವಾಪಿ ಮಸೀದಿ ಬಗ್ಗೆ ದೇಶದ ಜನರ ಗಮನ ಸೆಳೆದಿತ್ತು. ಈ ಹಿನ್ನೆಲೆಯಲ್ಲಿ ಅಲ್ಲಿ ಸರ್ವೇ ಕಾರ್ಯ ಪ್ರಾರಂಭವಾಗಿತ್ತು. ಈ ವರೆಗೆ ಮಸೀದಿಯಲ್ಲಿ ಶೇ.65 ರಷ್ಟು ಸರ್ವೇ ಕಾರ್ಯ ಮುಗಿದಿದೆ. ಮಂಗಳವಾರ ನ್ಯಾಯಾಲಯಕ್ಕೆ ಸರ್ವೇ ರಿಪೋರ್ಟ್ ಸಲ್ಲಿಸಲಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

    ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿರುವ ಬಗ್ಗೆ ವರದಿಗಳು ತಿಳಿಸಿದ್ದು, ಮಸೀದಿಯ ವೀಡಿಯೋ ಚಿತ್ರೀಕರಣ ಸಂಪೂರ್ಣಗೊಂಡಿದೆ. ಮಸೀದಿಯಲ್ಲಿ ಇದ್ದ ನಂದಿಯ ಎದುರಿನ ಬಾವಿಯಲ್ಲಿ ಪುರಾತನ ಶಿವಲಿಂಗ ಪತ್ತೆಯಾಗಿದೆ ಎಂದು ವಿಷ್ಣು ಜೈನ್ ತಿಳಿಸಿದ್ದಾರೆ. ಇದನ್ನೂ ಓದಿ: ದ್ವೇಷದ ವಾತಾವರಣ ಸೃಷ್ಟಿಸಿರುವ ʼದಿ ಕಾಶ್ಮೀರ್‌ ಫೈಲ್ಸ್‌ʼ ಸಿನಿಮಾ ಬ್ಯಾನ್‌ ಮಾಡಿ: ಫಾರೂಕ್‌ ಅಬ್ದುಲ್ಲಾ ಒತ್ತಾಯ