Tag: ಮೆಹಂದಿ

  • ಹಸೆಮಣೆ ಏರಲಿದ್ದಾರೆ ಭಾವನಾ ಮೆನನ್-ಮಹೆಂದಿಯಲ್ಲಿ ಗೆಳತಿಯರೊಂದಿಗೆ ಮೋಜು ಮಸ್ತಿ

    ಹಸೆಮಣೆ ಏರಲಿದ್ದಾರೆ ಭಾವನಾ ಮೆನನ್-ಮಹೆಂದಿಯಲ್ಲಿ ಗೆಳತಿಯರೊಂದಿಗೆ ಮೋಜು ಮಸ್ತಿ

    ಬೆಂಗಳೂರು: ಸ್ಯಾಂಡಲ್ ವುಡ್‍ನ ಚೆಂದುಳ್ಳಿ ಚೆಲುವೆ ಭಾವನಾ ಮೆನನ್ ಬಹುದಿನಗಳ ಗೆಳೆಯ ಕಮ್ ನಿರ್ಮಾಪಕ ಬೆಂಗಳೂರಿನ ನವೀನ್ ಜೊತೆ ಇಂದು ಹಸೆಮಣೆ ಏರಲಿದ್ದಾರೆ.

    ಕೇರಳದ ತ್ರಿಶೂರ್‍ನ ಜವರ್‍ಲಾಲ್ ಕನ್ವೇಷನ್ ಹಾಲ್‍ನಲ್ಲಿ ಮದುವೆ ಸಮಾರಂಭ ನಡೆಯುತ್ತಿದೆ. ಭಾನುವಾರ ರಾತ್ರಿ ಮಹೆಂದಿ ಕಾರ್ಯಕ್ರಮ ನಡೆದಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಅದರ ಫೋಟೋಗಳು ಹರಿದಾಡುತ್ತಿವೆ.

    2017 ಮಾರ್ಚ್ 9ರಂದು ಕೊಚ್ಚಿಯಲ್ಲಿ ನಡೆದ ನಿಶ್ಚಿತಾರ್ಥ ಕಾರ್ಯಕ್ರಮದಲ್ಲಿ ಭಾವನಾ ಮತ್ತು ನವೀನ್ ಕುಟುಂಬದ ಸದಸ್ಯರು ಸೇರಿದಂತೆ ನಟಿಯರಾದ ಮಂಜುವಾರಿಯರ್ ಹಾಗೂ ಸಂಯುಕ್ತವರ್ಮಾ ಪಾಲ್ಗೊಂಡಿದ್ದರು. ಕೇರಳ ಮೂಲದವರಾದ ಭಾವನಾ ಅವರು ಮಲೆಯಾಳಂ, ತಮಿಳು, ತೆಲಗು, ಕನ್ನಡ ಚಿತ್ರಗಳಲ್ಲಿ ನಟಿಸಿದ್ದಾರೆ.

    ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿನಯದ `ಜಾಕಿ’ ಚಿತ್ರದ ಮೂಲಕ ಸ್ಯಾಂಡಲ್ ವುಡ್ ನಲ್ಲಿ ಫೇಮಸ್ ಆಗಿದ್ದರು. ನಂತರ ಬಂದ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ `ರೋಮಿಯೊ’, ಕಿಚ್ಚ ಸುದೀಪ್‍ನ ಅಭಿನಯದ `ವಿಷ್ಣುವರ್ಧನ್’ ಹಾಗೂ `ಬಚ್ಚನ್’ ಚಿತ್ರಗಳಿಂದ ಭಾವನಾ ಕನ್ನಡಿಗರಿಗೆ ಮನೆ ಮಗಳಾಗಿದ್ದಾರೆ.

  • ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

    ಅಣ್ಣನ ಮೆಹೆಂದಿಯಂದೇ ಮದ್ವೆ ಮನೆಯಲ್ಲಿ ತಮ್ಮನ ಹೆಣ ಬಿತ್ತು!

    ಬೆಂಗಳೂರು: ಅಣ್ಣನ ಮದ್ವೆ ಇಂದು ಆಗ್ಬೇಕಿತ್ತು. ಆದ್ರೆ ಅತ್ತ ತಮ್ಮನ ಹೆಣ ಬಿದ್ದಿದೆ. ಮದುವೆ ಖುಷಿಯಲ್ಲಿದ್ದ ಮನೆಯಲ್ಲಿ ಈಗ ಸೂತಕದ ಛಾಯೆ ಆವರಿಸಿದೆ. ನಗುನಗುತ್ತಾ ಓಡಾಡ್ತಿರಬೇಕಿದ್ದ ಮನೆಮಂದಿಯ ಆಕ್ರಂದನ ಮುಗಿಲು ಮುಟ್ಟಿದೆ.

    ಹೌದು. ಗುರುವಾರ ರಾತ್ರಿ ಬೆಂಗಳೂರಿನ ಡಿಜೆ ಹಳ್ಳಿಯ ಉಮರ್ ಫಾರುಕ್ ಮಸ್ಜೀದ್ ಬಳಿ 22 ವರ್ಷದ ಶೇಖ್ ರಿಜ್ವಾನ್ ಅನ್ನೋ ಯುವಕನನ್ನು ದುಷ್ಕರ್ಮಿಗಳು ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿದ್ದಾರೆ. ಶಾಹಿದ್, ಚೆನ್ನೈ ಶಾಹಿದ್ ಹಾಗೂ ಇನ್ನೊಬ್ಬ ಅಪರಿಚಿತ ಸೇರಿ ಮೂವರಿಂದ ಈ ಕೃತ್ಯ ಎಸಗಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

    ಇಂದು ರಿಜ್ವಾನ್ ಅಣ್ಣ ಇರ್ಫಾನ್ ಮದುವೆ ನಿಗದಿಯಾಗಿತ್ತು. ಹೀಗಾಗಿ ನಿನ್ನೆ ರಾತ್ರಿ ಮೆಹೆಂದಿ ಕಾರ್ಯಕ್ರಮವಿತ್ತು. ಅಂತೆಯೇ ಮನೆ ಮಂದಿಯೆಲ್ಲಾ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಈ ವೇಳೆ ಬಂದ ಚೋಟ ಶಾಹಿದ್ ಅತನ ಸಹಚರರು ಮಾತುಕತೆಯ ನೆಪದಲ್ಲಿ ಮಸೀದಿ ಬಳಿ ಕರೆದುಕೊಂಡು ಹೋಗಿ ಡ್ರ್ಯಾಗರ್‍ನಿಂದ ಇರಿದು ಬರ್ಬರವಾಗಿ ಕೊಲೆ ಮಾಡಿ ಪರಾರಿಯಾಗಿದ್ದಾರೆ.

    ತಕ್ಷಣವೇ ರಿಜ್ವಾನನ್ನು ನಗರದ ಅಂಬೇಡ್ಕರ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಹೆಚ್ಚಿನ ಚಿಕಿತ್ಸೆ ಅಗತ್ಯವಿದ್ದ ಕಾರಣಕ್ಕೆ ಬೋರಿಂಗ್ ಆಸ್ಪತ್ರೆಗೆ ಸಾಗಿಸಲು ವೈದ್ಯರು ಸೂಚಿಸಿದ್ದರು. ಅಂತೆಯೇ ಬೌರಿಂಗ್ ಆಸ್ಪತ್ರೆಗೆ ಸಾಗಿಸುವಷ್ಟರಲ್ಲಿ ಆತ ಮಾರ್ಗ ಮಧ್ಯೆ ಕೊನೆಯುಸಿರೆಳೆದಿದ್ದಾನೆ.

    ಸದ್ಯ ಸ್ಥಳ ಪರಿಶೀಲನೆ ನಡೆಸಿ, ಪ್ರಕರಣ ದಾಖಲಿಸಿಕೊಂಡಿರುವ ಡಿಜೆ ಹಳ್ಳಿ ಪೊಲೀಸರು ತಲೆಮರೆಸಿಕೊಂಡಿರುವ ಆರೋಪಿಗಳಿಗಾಗಿ ಬಲೆ ಬೀಸಿದ್ದಾರೆ.

  • ಅಮ್ಮು ಜಗ್ಗಿ ಕಲ್ಯಾಣೋತ್ಸವ: ಫೋಟೋಗಳಲ್ಲಿ ಅರಿಶಿಣ ಶಾಸ್ತ್ರ, ಮೆಹಂದಿ ಕಾರ್ಯಕ್ರಮ

    ಅಮ್ಮು ಜಗ್ಗಿ ಕಲ್ಯಾಣೋತ್ಸವ: ಫೋಟೋಗಳಲ್ಲಿ ಅರಿಶಿಣ ಶಾಸ್ತ್ರ, ಮೆಹಂದಿ ಕಾರ್ಯಕ್ರಮ

    ಬೆಂಗಳೂರು: ಬಂತು ಬಂತು ಅನ್ನುವಷ್ಟರಲ್ಲಿ ಅಮೂಲ್ಯ ಯ ಮದುವೆ ಬಂದೇ ಬಿಟ್ಟಿತು. ಇನ್ನೇನು ಶುಕ್ರವಾರ ಬೆಳಗಾದರೆ ಅಮ್ಮುಗೆ ತಾಳಿ ಕಟ್ಟುವ ಶುಭವೇಳೆ ಕಣ್ಣೆದುರು ಬರುತ್ತದೆ. ಆದಿಚುಂಚನಗಿರಿ ಮಠದಲ್ಲಿ ಈಗಾಗಲೇ ಇದಕ್ಕಾಗಿ ಎಲ್ಲಾ ತಯಾರಿಗಳು ನಡೆಯುತ್ತಿದೆ. ಕುಟುಂಬದ ಆಪ್ತರು, ಬಂಧುಗಳು, ಸ್ನೇಹಿತರು ಹಾಜರಿರಲಿದ್ದಾರೆ.

    ಬುಧವಾರ ಮತ್ತು ಗುರುವಾರ ಬೆಂಗಳೂರಿನ ವಧು ವರರ ಮನೆಗಳಲ್ಲಿ ಹಲವು ವಿಶೇಷ ಪೂಜೆಗಳು ನಡೆಯಿತು. ಬುಧವಾರ ಮದುಮಗ ಜಗದೀಶ್ ಮನೆಯಲ್ಲಿ ಅದ್ಧೂರಿಯಾಗಿ ಅರಿಶಿಣ ಶಾಸ್ತ್ರ ನೆರವೇರಿದರೆ, ನಟ ಗಣೇಶ್ ಮನೆಯಲ್ಲಿ ಮೆಹಂದಿ ಮತ್ತು ಸಂಗೀತ ಸಂಜೆ ಕಾರ್ಯಕ್ರಮಗಳು ನಡೆಯಿತು. ಇಂದು ಅದರ ಮುಂದುವರಿದ ಭಾಗವಾಗಿ ಅಮೂಲ್ಯ ಅರಿಶಿಣ ಶಾಸ್ತ್ರದಲ್ಲಿ ಪಾಲುಗೊಂಡರು. ಮನೆ ಮಂದಿ ಸೇರಿದಂತೆ ಬಂಧು ಬಾಂಧವರು ಅಮ್ಮುಗೆ ಅರಿಶಿಣ ಹಚ್ಚುವ ಮೂಲಕ ಮದುಮಗಳ ಕಳೆ ತಂದರು.

    ಅರಿಶಿಣ ಶಾಸ್ತ್ರ ಮುಗಿಸಿದ ಮೇಲೆ ಅಮೂಲ್ಯ ಮತ್ತವರ ಕುಟುಂಬ ನೇರವಾಗಿ ಆದಿಚುಂಚನಗಿರಿಗೆ ಪ್ರಯಾಣ ಬೆಳೆಸಿತು. ದೇವರ ದರ್ಶನ ಪಡೆದ ನಂತರ ಮಠದಲ್ಲಿ ಊಟದ ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಟುಂಬದ ಎಲ್ಲಾ ಸದಸ್ಯರು ಮಧ್ಯಾಹ್ನದ ಭೋಜನವನ್ನು ಅಲ್ಲಿಯೇ ಮುಗಿಸಿದರು. ಇತ್ತ ಜಗದೀಶ್ ಮನೆಯಲ್ಲಿ ಪೂಜೆ ನಡೆಯಿತು. ಅವರೂ ಮಧ್ಯಾಹ್ನದ ಹೊತ್ತಿಗೆ ಆದಿಚುಂಚನಗಿರಿಗೆ ಹೊರಟರು.

    ವರನನ್ನು ಮದುಮಗಳ ಕುಟುಂಬ ಆತ್ಮೀಯವಾಗಿ ಬರ ಮಾಡಿಕೊಂಡಿತು. ಎಲ್ಲರ ಮುಖಗಳಲ್ಲಿ ಅದಾಗಲೇ ಅಮ್ಮು ಮದುವೆಯ ಕಳೆಯೇ ನಲಿದಾಡುತ್ತಿತ್ತು. ಇನ್ನೇನು ಕೆಲವೇ ಗಂಟೆಗಳಲ್ಲಿ ಅಮ್ಮುಗೆ ತಾಳಿ ಕಟ್ಟುವ ಶುಭ ವೇಳೆ ಬರಲಿದೆ ಅನ್ನೋದೆ ಎದ್ದು ಕಾಣುತ್ತಿತ್ತು. ಗುರುವಾರ ಸಂಜೆಯಿಂದಲೇ ಅಮ್ಮು ಮತ್ತು ಜಗ್ಗಿ ಅನೇಕ ಕಾರ್ಯಕ್ರಮಗಳಲ್ಲಿ ಭಾಗವಹಿಸಿದ್ದಾರೆ. ಎಲ್ಲವೂ ಅವರ ಸಂಪ್ರದಾಯದ ಪ್ರಕಾರ ನಡೆಯುತ್ತಿದೆ.