Tag: ಮೆಹಂದಿ

  • ಸಹೋದರಿಯ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಲೇ ಕುಸಿದು ಬಿದ್ಳು!

    ಸಹೋದರಿಯ ಮೆಹಂದಿ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಲೇ ಕುಸಿದು ಬಿದ್ಳು!

    ಲಕ್ನೋ: ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸ್‌ ಮಾಡುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಯುವತಿಯೊಬ್ಬಳು ಮೃತಪಟ್ಟ ದಾರುಣ ಘಟನೆ ಉತ್ತರ ಪ್ರದೇಶದ ಮೀರತ್‌ನಲ್ಲಿ (Uttar Pradesh’s Meerut) ನಡೆದಿದೆ.

    ಮೃತಳನ್ನು ರಿಮ್ಶಾ (18) ಎಂದು ಗುರುತಿಸಲಾಗಿದೆ. ಶುಕ್ರವಾರ ಸಂಜೆ ಸಹೋದರಿಯ ಮೆಹಂದಿ ಕಾರ್ಯಕ್ರಮವಿತ್ತು. ಈ ವೇಳೆ ರಿಮ್ಶಾ ಮೃತಪಟ್ಟಿದ್ದಾಳೆ. ಇದೀಗ ರಿಮ್ಶಾ ಡ್ಯಾನ್ಸ್ ಮಾಡುತ್ತಾ ಕುಸಿದು ಬೀಳುತ್ತಿರುವ‌ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗುತ್ತಿದೆ.

    ಮದುವೆಗೂ ಮುನ್ನ ನಡೆಯುವ ಮೆಹಂದಿ ಕಾರ್ಯಕ್ರಮದಲ್ಲಿ ರಿಮ್ಶಾ ತನ್ನ ಕುಟುಂಬ ಸದಸ್ಯರೊಂದಿಗೆ ಡ್ಯಾನ್ಸ್‌ ಮಾಡುತ್ತಿರುತ್ತಾಳೆ. ಆದರೆ ಕೆಲವೇ ಸೆಕೆಂಡುಗಳಲ್ಲಿ ಆಕೆಗೆ ತಲೆಸುತ್ತು ಬಂದಂತೆ ಆಗಿದ್ದು, ಎದೆ ಹಿಡಿದುಕೊಂಡು ಅಲ್ಲೇ ಇದ್ದ ಪುಟ್ಟ ಹುಡುಗನ ಕೈ ಹಿಡಿದುಕೊಳ್ಳಲು ಪ್ರಯತ್ನಿಸುತ್ತಾಳೆ. ನಂತರ ಅಲ್ಲೇ ಕುಸಿದು ಬೀಳುತ್ತಾಳೆ. ಇದನ್ನೂ ಓದಿ: ಪ್ರಜ್ವಲ್ ರೇವಣ್ಣರನ್ನ ಪಕ್ಷದಿಂದ ಅಮಾನತು ಮಾಡಿ- ಹೆಚ್‌ಡಿಡಿಗೆ ಕಂದಕೂರು ಒತ್ತಾಯ

    ರಿಮ್ಶಾ ಬೀಳುತ್ತಿದ್ದಂತೆಯೇ ಕಾರ್ಯಕ್ರಮ ಬಂದ ಕೆಲವರು ಆಕೆಯನ್ನು ಕೂಡಲೇ ಸ್ಥಳೀಯ ಆಸ್ಪತ್ರೆಗೆ ಕರೆದುಕೊಂಡು ಹೋಗುತ್ತಾರೆ. ಆದರೆ ಆಕೆ ಅದಾಗಲೇ ಮೃತಪಟ್ಟಿರುವುದಾಗಿ ವೈದ್ಯರು ತಿಳಿಸುತ್ತಾರೆ. ಆಕೆಗೆ ಹೃದಯಾಘಾತವಾಗಿದೆ ಎಂದು ಶಂಕಿಸಲಾಗಿದೆ. ಸದ್ಯ ಮದುವೆ ಸಂಭ್ರಮದಲ್ಲಿದ್ದ ಕುಟುಂಬದಲ್ಲಿ ಇದೀಗ ನೀರವ ಮೌನ ಆವರಿಸಿದೆ.

  • ಅಭಿಷೇಕ್ ಅಂಗೈಯಲ್ಲಿ ಅರಳಿದ ಭಾವಿ ಪತ್ನಿ ಅವಿವಾ

    ಅಭಿಷೇಕ್ ಅಂಗೈಯಲ್ಲಿ ಅರಳಿದ ಭಾವಿ ಪತ್ನಿ ಅವಿವಾ

    ನಿನ್ನೆ  ಅರಿಶಿನ ಶಾಸ್ತ್ರ ಮುಗಿಸಿರುವ ಅಭಿಷೇಕ್ ಅಂಬರೀಶ್  (Abhishek Ambareesh)ಹಾಗೂ ಅವಿವಾ, ಇಂದು ಮೆಹಂದಿ (Mehndi) ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದಾರೆ. ತಮ್ಮ ಅಂಗೈಯಲ್ಲಿ ರೆಬಲ್, ಸುಮಾ, ಅವಿವಾ ಎಂದು ಮಹೆಂದಿಯಲ್ಲಿ ಅಭಿಷೇಕ್ ಬರೆಯಿಸಿಕೊಂಡಿದ್ದಾರೆ. ಅವಿವಾ ಅಂಗೈಯಲ್ಲಿ ಚಿತ್ತಾರ ಮೂಡಿದ್ದರೆ, ಅಭಿಷೇಕ್ ಕೈಯಲ್ಲಿ ಅಪ್ಪ ಅಮ್ಮ ಮತ್ತು ಭಾವಿ ಪತ್ನಿಯ ಹೆಸರು ಇದೆ.

    ಅಭಿಷೇಕ್ ಅಂಬರೀಶ್- ಅವಿವ ಬಿಡಪ (Aviva Bidapa) ಜೋಡಿ ಕಳೆದ ನಾಲ್ಕೈದು ವರ್ಷಗಳಿಂದ ಪ್ರೀತಿಸಿ, ಇದೀಗ ಮದುವೆ ಎಂಬ ಮುದ್ರೆ ಒತ್ತಲು ರೆಡಿಯಾಗಿದ್ದಾರೆ. ಜೂನ್ 5ರಂದು (ಸೋಮವಾರ) ಅದ್ದೂರಿಯಾಗಿ ಮದುವೆ (Wedding) ಕಾರ್ಯಕ್ರಮ ಜರುಗಲಿದೆ. ಜೂನ್ 7ರಂದು ಭರ್ಜರಿಯಾಗಿ ಆರತಕ್ಷತೆ ಸಮಾರಂಭ ನಡೆಯಲಿದೆ. ಅಭಿಷೇಕ್- ಅವಿವ ವಿವಾಹದ ಆಮಂತ್ರಣ ಪತ್ರ ವೈರಲ್ ಆಗಿದೆ. ಸದ್ಯ ವೈಟ್ ಬಣ್ಣದ ಉಡುಗೆಯಲ್ಲಿ ಅಭಿಷೇಕ್ ಅರಿಶಿನ ಶಾಸ್ತ್ರದಲ್ಲಿ (Arishina Shastra) ಮಿಂಚಿದ್ದಾರೆ. ಮನೆ ಕೂಡ ಅದ್ದೂರಿಯಾಗಿ ಅಲಂಕರಿಸಲಾಗಿದೆ. ಇದನ್ನೂ ಓದಿ:ಶಕುನಿ ಪಾತ್ರಧಾರಿ ಗೂಫಿ ಆರೋಗ್ಯ ಸ್ಥಿತಿ ಗಂಭೀರ

    ಇನ್ನೂ 2022ರ ಡಿಸೆಂಬರ್ 11ರಂದು ಅಭಿಷೇಕ್ ಹಾಗೂ ಅವಿವ ನಿಶ್ಚಿತಾರ್ಥ ನೆರವೇರಿತು. ಕುಟುಂಬದವರು, ಆಪ್ತರು, ಗಣ್ಯರ ಸಮ್ಮುಖದಲ್ಲಿ ಈ ಶುಭ ಕಾರ್ಯ ನಡೆದಿತ್ತು. ಈಗ ಮದುವೆಗೆ ಸಿದ್ಧತೆ ನಡೆಯುತ್ತಿದೆ. ಜೂನ್ 4ರಂದು ಜೆಪಿ ನಗರದ ಅಂಬಿ ನಿವಾಸದಲ್ಲಿ ಚಪ್ಪರ ಪೂಜೆ ನಡೆಯಲಿದೆ. ಜೂನ್ 5ರಂದು ಮಾಣಿಕ್ಯ-ಚಾಮರ ವಜ್ರದಲ್ಲಿ ಬೆಳಿಗ್ಗೆ ಕರ್ಕಾಟಕ ಲಗ್ನದಲ್ಲಿ (9:30-10:30) ಮದುವೆ ಸಮಾರಂಭ ನಡೆಯಲಿದೆ. ಜೂನ್ 7ಕ್ಕೆ ಬೆಂಗಳೂರಿನ ಪ್ಯಾಲೇಸ್ ಗ್ರೌಂಡ್‌ನ ತ್ರಿಪುರ ವಾಸಿನಿಯಲ್ಲಿ ಅದ್ದೂರಿಯಾಗಿ ಆರತಕ್ಷತೆ ಕಾರ್ಯಕ್ರಮ ಜರುಗಲಿದೆ.

     

    ಸಿನಿಮಾ- ರಾಜಕೀಯ (Politics) ಎರಡೂ ಕ್ಷೇತ್ರದ ಗಣ್ಯರು ಅಭಿಷೇಕ್- ಅವಿವ ಆರತಕ್ಷತೆಗೆ ಬರಲಿದ್ದಾರೆ. ಮದುವೆಗೆ ಆಪ್ತ ಬಳಗದವರಿಗಷ್ಟೇ ಆಹ್ವಾನ ನೀಡಲಾಗಿದೆ. ಜೂನ್ 16ರಂದು ಮಂಡ್ಯದಲ್ಲಿ ಬೀಗರ ಊಟ ನಡೆಯಲಿದೆ. ಹೊಸ ಬಾಳಿಗೆ ಕಾಲಿಡುತ್ತಿರುವ ಹೊಸ ಜೋಡಿಗೆ ಅಭಿಮಾನಿಗಳು ಶುಭಹಾರೈಸುತ್ತಿದ್ದಾರೆ.

  • ಮೆಹಂದಿ ಡಿಸೈನೇ ಬ್ಲೌಸ್ ಆಯ್ತು – ಬ್ಲೌಸ್‌ ಹಾಕದ ಆಕೆಯ ವೀಡಿಯೋ ವೈರಲ್ ಆಯ್ತು!

    ಮೆಹಂದಿ ಡಿಸೈನೇ ಬ್ಲೌಸ್ ಆಯ್ತು – ಬ್ಲೌಸ್‌ ಹಾಕದ ಆಕೆಯ ವೀಡಿಯೋ ವೈರಲ್ ಆಯ್ತು!

    ಹಿಳೆಯೊಬ್ಬರು ಮೈ ಮೇಲೆ ಮೆಹಂದಿ ಡಿಸೈನ್ ಬಿಡಿಸಿಕೊಂಡು ಅದನ್ನೇ ಬ್ಲೌಸ್ (Henna Blouse) ಮಾಡಿಕೊಂಡಿರುವ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ (Viral Video) ಆಗುತ್ತಿದೆ.

    ದಿ ಮೋಸ್ಟ್ ಅಟ್ರಾಕ್ಟಿವ್ ಉಡುಪುಗಳಲ್ಲಿ ಸೀರೆ ಕೂಡ ಒಂದಾಗಿದೆ. ಸೀರೆಯ ಅಂದವನ್ನು ಹೆಚ್ಚಿಸುವಲ್ಲಿ ಬ್ಲೌಸ್ ಕೂಡ ಅಷ್ಟೇ ಮುಖ್ಯವಾದ ಪಾತ್ರವಹಿಸುತ್ತದೆ. ಸೀರೆಯ ಉಪಯೋಗವೆಂದರೆ ಒಂದು ಸೀರೆಗೆ ಹಲವಾರು ರೀತಿಯ ಡಿಸೈನ್ ಬ್ಲೌಸ್‌ಗಳನ್ನು ಧರಿಸಬಹುದು. ಆದರೆ ವಿಚಿತ್ರ ಎಂದರೆ ಮಹಿಳೆಯೊಬ್ಬರು ಮೈ ಮೇಲೆ ಮಹೆಂದಿ ಡಿಸೈನ್ ಬಿಡಿಸಿಕೊಂಡು ಅದನ್ನೇ ಬ್ಲೌಸ್‌ ಮಾಡಿಕೊಂಡಿದ್ದಾರೆ. ಇದನ್ನೂ ಓದಿ: ಪ್ರಿಯಾಂಕಾ ಚೋಪ್ರಾ, ನಿಕ್ ಜೋನಾಸ್‍ಗೆ 3ನೇ ವಿವಾಹ ವಾರ್ಷಿಕೋತ್ಸವದ ಸಂಭ್ರಮ

    ವೈರಲ್ ಆಗುತ್ತಿರುವ ಈ ವೀಡಿಯೋದಲ್ಲಿ ಮಹಿಳೆಯೊಬ್ಬಳು ಬಿಳಿ ಚಿಕಂಕಾರಿ ಸೀರೆಯನ್ನು ಧರಿಸಿದ್ದು, ಅದಕ್ಕೆ ಬಟ್ಟೆಯಿಂದ ವಿನ್ಯಾಸಗೊಳಿಸಿರುವ ಬ್ಲೌಸ್‌ ಧರಿಸುವುದರ ಬದಲಾಗಿ ಮೆಹಂದಿಯಿಂದ ಮಾಡಿದ ಬ್ಲೌಸ್‌ ಧರಿಸಿದ್ದಾಳೆ. ಮಹಿಳೆ ಬೆನ್ನಿನ ಸುತ್ತ, ಆಕೆಯ ತೋಳುಗಳ ಮೇಲೆ ಹಾಗೂ ಕತ್ತಿನ ಸುತ್ತ ಮೆಹಂದಿ ಡಿಸೈನ್ ಬಿಡಿಸಿರುವುದನ್ನು ಈ ವೀಡಿಯೋದಲ್ಲಿ ಕಾಣಬಹುದಾಗಿದೆ.

     

    View this post on Instagram

     

    A post shared by Thanos (@thanos_jatt)

    ಈ ವೀಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಂತೆಯೇ ಇಲ್ಲಿಯವರೆಗೂ ಸುಮಾರು 80,000 ಮಂದಿ ವೀಕ್ಷಿಸಿದ್ದು, ನೆಟ್ಟಿಗರಿಂದ ಕಾಮೆಂಟ್‍ಗಳ ಸುರಿಮಳೆಯೇ ಹರಿದುಬರುತ್ತಿದೆ. ಯಾರೋ ಒಬ್ಬರು ಮೆಹಂದಿ ಹಾಕುವುದನ್ನು ಕಲಿಯಬೇಕು ಎಂದು ಕಾಮೆಂಟ್ ಮಾಡಿದರೆ, ಮತ್ತೊಬ್ಬರು ನಾನು ಕ್ಯಾಪ್ಷನ್ ಪೂರ್ತಿ ಓದುವವರೆಗೂ ಇದು ಮೆಹಂದಿ ಡಿಸೈನ್‌ ಎಂದು ಗೊತ್ತಾಗಲಿಲ್ಲ ಎಂದು ಕಾಮೆಂಟ್ ಮಾಡಿದ್ದಾರೆ.

  • ನಿಮ್ಮ ಪಾದಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಸೂಕ್ತ

    ನಿಮ್ಮ ಪಾದಗಳ ಅಂದ ಹೆಚ್ಚಿಸಲು ಈ ಮೆಹಂದಿ ಡಿಸೈನ್ ಸೂಕ್ತ

    ದುವೆ ಎಂದ ಕೂಡಲೇ ಮಹಿಳೆಯರಿಗೆ ತಕ್ಷಣ ನೆನಪಾಗುವುದು ಸೀರೆ, ಆಭರಣ, ಮೇಕಪ್, ಹೇರ್ ಸ್ಟೈಲ್, ಮೆಹಂದಿ ಹೀಗೆ ಅನೇಕ ಅಲಂಕಾರ ವಸ್ತುಗಳು. ವಧು ಮದುವೆ ವೇಳೆ ಉಡುಪು, ಆಭರಣ, ಮೇಕಪ್‍ಗೆ ಎಷ್ಟು ಪ್ರಾಮುಖ್ಯತೆ ನೀಡುತ್ತಾರೆ ಅಷ್ಟೇ ಪ್ರಾಮುಖ್ಯತೆ ಮೆಹಂದಿಗೂ ನೀಡುತ್ತಾರೆ.

    Foot Mehndi Designs

    ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ಮಹೆಂದಿ ಭಾರತದ ಹಳೆಯ ಸಂಸ್ಕೃತಿ ಮತ್ತು ಸಂಪ್ರದಾಯವನ್ನು ಸೂಚಿಸುತ್ತದೆ.

    Foot Mehndi Designs

    ಮದುವೆ ಸಮಯದಲ್ಲಿ ವಧುವಿನ ಕೈಗಳಿಗೆ ಮೆಹಂದಿ ಎಷ್ಟು ಮುಖ್ಯವೋ ಕಾಲಿಗೂ ಸಹ ಅಷ್ಟೇ ಮುಖ್ಯ. ಮೆಹಂದಿ ವಧುವಿನ ಕೈಗಳನ್ನು ಎಷ್ಟು ಸುಂದವಾಗಿ ಕಾಣಿಸುವಂತೆ ಮಾಡುತ್ತದೆಯೋ ಪಾದಗಳನ್ನು ಕೂಡ ಅಷ್ಟೇ ಆಕರ್ಷಕವಾಗಿ ಕಾಣಿಸುವಂತೆ ಮಾಡುತ್ತದೆ. ಮೆಹಂದಿ ವಧುವಿನ ಅಂದವನ್ನು ಹೆಚ್ಚಿಸುತ್ತದೆ. ಎಷ್ಟೋ ಮಹಿಳೆಯರು ಕೈಗಳಿಗೆ ಸುಲಭವಾಗಿ ಮೆಹಂದಿ ಡಿಸೈನ್ ಸೆಲೆಕ್ಟ್ ಮಾಡಿ ಹಾಕಿಸಿಕೊಳ್ಳುತ್ತಾರೆ. ಆದರೆ ಕಾಲಿಗೆ ಯಾವ ರೀತಿಯ ಮೆಹಂದಿ ಡಿಸೈನ್ ಸೂಟ್ ಆಗುತ್ತದೆ ಎಂದು ಮಾತ್ರ ತಿಳಿದಿರುವುದಿಲ್ಲ. ಅಂತವರಿಗೆ ಪಾದಕ್ಕೆ ಹಾಕಬಹುದಾದ ಕೆಲವೊಂದು ಮೆಹಂದಿ ಡಿಸೈನ್‍ಗಳ ಕುರಿತ ಮಾಹಿತಿ ಈ ಕೆಳಗೆ ನೀಡಲಾಗಿದೆ. ಇದನ್ನೂ ಓದಿ:  ಹಿಂದೂಗಳಿಲ್ಲದೆ ಭಾರತವಿಲ್ಲ, ಭಾರತವಿಲ್ಲದೆ ಹಿಂದೂಗಳಿಲ್ಲ: ಮೋಹನ್ ಭಾಗವತ್

    ಟ್ರೆಡಿಶನಲ್ ಫೂಟ್ ಮೆಹಂದಿ ಡಿಸೈನ್:
    ಕಾಲ್ಬೆರಳುಗಳ ಮೇಲೆ ಬಿಡಿಸುವ ಮೆಹಂದಿ ಡಿಸೈನ್‍ಗಳು ಸಾಮಾನ್ಯವಾಗಿ ಎದ್ದು ಕಾಣಿಸುತ್ತದೆ. ಅದರಲ್ಲಿಯೂ ಪಾದಗಳ ಮೇಲೆ ನವಿಲಿನ ಆಕೃತಿ, ಎಲೆಗಳು, ಚುಕ್ಕೆಗಳು ಹಾಗೂ ಹೂವಿನ ಮಾದರಿಯ ಡಿಸೈನ್ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಮೆಹಂದಿ ಡಿಸೈನ್‍ಗಳ ಜೊತೆಗೆ ಕೆಂಪು ಬಣ್ಣದ ನೈಲ್ ಪಾಲೀಷ್ ಪಾದಗಳಿಗೆ ಕಂಪ್ಲೀಟ್ ಲುಕ್ ನೀಡುತ್ತದೆ.

    ಫೂಟ್ ಮೆಹಂದಿ ವಿತ್ ಡಿಫರೆಂಟ್ ಫಿಗರ್ಸ್:
    ಮೆಹಂದಿ ಕಲಾವಿದರೊಬ್ಬರು ಇದರಲ್ಲಿ ವಿವಿಧ ರೀತಿಯ ಡಿಸೈನ್‍ಗಳನ್ನು ಬಿಡಿಸಿದ್ದಾರೆ. ತ್ರಿಕೋನಗಳು, ಹೃದಯಗಳು, ಹೂಗಳ ಡಿಸೈನ್, ಪಾದಗಳ ಜಿಗ್‍ಜಾಗ್ ರೀತಿಯಲ್ಲಿ ಚುಕ್ಕೆಗಳನ್ನು ಬಿಡಿಸಿದ್ದು, ಪಾದಗಳನ್ನು ಸುಂದರಗೊಳಿಸಿದ್ದಾರೆ.  ದನ್ನೂ ಓದಿ: ಶ್ರೀ ಕ್ಷೇತ್ರ ಕೈವಾರದಲ್ಲೊಂದು ಅಪರೂಪದ ಮದುವೆ

    Foot Mehndi with Different Figures

    ಅರೆಬಿಕ್ ಮೆಹಂದಿ ಡಿಸೈನ್ಸ್:
    ಇದೊಂದು ಸುಂದರವಾದ ಅರೇಬಿಕ್ ಮೆಹಂದಿ ಡಿಸೈನ್ ಆಗಿದ್ದು, ಬಹಳ ಸುಲಭವಾಗಿ ಬಿಡಿಸಬಹುದಾದ ಚಿಕ್ಕ ಡಿಸೈನ್ ಆಗಿದೆ. ಈ ಮೆಹಂದಿ ಡಿಸೈನ್‍ಗಳ ತುದಿಯಲ್ಲಿ ಎಲೆಗಳನ್ನು, ಹೂವುಗಳನ್ನು ಬಿಡಿಸಲಾಗಿದೆ. ಇದರ ವಿಶೇಷತೆ ಏನೆಂದರೆ ನೀವು ಬಯಸುವಂತಹ ಡಿಸೈನ್ ಅನ್ನು ಸಹ ಇದರ ಮಧ್ಯ, ಮಧ್ಯದಲ್ಲಿ ಸೇರಿಸಬಹುದಾಗಿದೆ.

    ಯೂನಿಕ್ ಫೂಟ್ ಮೆಹಂದಿ ಡಿಸೈನ್ಸ್:
    ಇದೊಂದು ಯೂನಿಕ್ ಲುಕ್ ನೀಡುವ ಮೆಹಂದಿ ಡಿಸೈನ್ ಆಗಿದ್ದು, ಚಿಕ್ಕ ಚಿಕ್ಕ ಹೂವು ಹಾಗೂ ಎಲೆಗಳ ಡಿಸೈನ್ ಅನ್ನು ಪಾದದ ಮುಂಭಾಗ ಮತ್ತು ಹಿಂಭಾಗ ಎರಡು ಕಡೆಗಳಲ್ಲಿ ವಿನ್ಯಾಸಗೊಳಿಸಲಾಗಿದೆ ಮತ್ತು ಇದರಲ್ಲಿಟ್ಟಿರುವ ಚುಕ್ಕೆಗಳು ಬಹಳ ಆಕರ್ಷಕವಾಗಿ ಕಾಣಿಸುತ್ತದೆ. ಇದನ್ನೂ ಓದಿ: ನನ್ನ ಆರೋಗ್ಯ ಸ್ಥಿರವಾಗಿದೆ, ಸುಧಾರಣೆಗಳ ಸುಂದರ ಕಥೆಗಳನ್ನು ಓದಿಕೊಳ್ಳುತ್ತಿದ್ದೇನೆ: ಹಂಸಲೇಖ

    ಷೇಡೆಡ್ ಮೆಹಂದಿ ಡಿಸೈನ್‍ಗಳು:
    ಷೇಡೆಡ್ ಮೆಹಂದಿ ಡಿಸೈನ್‍ಗಳು ಶಾರ್ಟ್ ಆ್ಯಂಡ್ ಸ್ವೀಟ್ ಲುಕ್ ನೀಡುತ್ತದೆ. ಈ ಡಿಸೈನ್‍ಗಳು ಯಾವುದೇ ಸಮಾರಂಭಗಳಿಗೂ ಬಹಳ ಸುಂದರವಾಗಿ ಕಾಣಿಸುತ್ತದೆ. ಈ ಮೆಹಂದಿ ಡಿಸೈನ್‍ಗಳನ್ನು ಸುಲಭವಾಗಿ ಬಿಡಿಸಬಹುದಾಗಿದೆ ಮತ್ತು ಇದು ನಿಮ್ಮ ಮುದ್ದಾದ ಪಾದಗಳನ್ನು ಮತ್ತಷ್ಟು ಅಂದಗೊಳಿಸುತ್ತದೆ.

    o

  • ಉಡುಪಿ ಜಿಲ್ಲಾಡಳಿತಕ್ಕೆ ಮೆಹಂದಿ ಟೆನ್ಷನ್ – ಮದುವೆ ಮನೆಗಳಿಗೆ ನಿಗಾ ಇಡಲು ಡಿಸಿ ಸೂಚನೆ

    ಉಡುಪಿ ಜಿಲ್ಲಾಡಳಿತಕ್ಕೆ ಮೆಹಂದಿ ಟೆನ್ಷನ್ – ಮದುವೆ ಮನೆಗಳಿಗೆ ನಿಗಾ ಇಡಲು ಡಿಸಿ ಸೂಚನೆ

    ಉಡುಪಿ: ಕೊರೊನಾ ಲಾಕ್‍ಡೌನ್ ಕಠಿಣ ನಿಯಮಗಳ ನಡುವೆ ಉಡುಪಿಯಲ್ಲೀಗ ಮೆಹಂದಿ ಕಾಟ ಶುರುವಾಗಿದೆ. ಕರಾವಳಿಯಲ್ಲಿ ಮದುವೆಗೆ ಮುನ್ನಾದಿನ ಮೆಹಂದಿ ಶಾಸ್ತ್ರ ಇರುತ್ತದೆ. ಇದರಲ್ಲಿ ಜನ ಸೇರುತ್ತಿರುವುದರಿಂದ ಕೊರೊನಾ ಪ್ರಕರಣ ಹೆಚ್ಚಾಗುತ್ತಿದೆ ಹಾಗಾಗಿ ಮೆಹಂದಿ ಜಿಲ್ಲಾಡಳಿತಕ್ಕೆ ಮತ್ತು ಮದುವೆ ಆಗುವ ಕುಟುಂಬಗಳಿಗೆ ಟೆನ್ಷನ್ ತಂದಿಟ್ಟಿದೆ.

    ಹೊಸ ನಿಯಮದ ಪ್ರಕಾರ 40 ಜನ ಇದ್ದು ಮದುವೆ ಆಗಬಹುದು. ಮದುವೆಗೆ ಮಾತ್ರ ಜಿಲ್ಲಾಡಳಿತ ಪರವಾನಿಗೆ ಕೊಡುತ್ತದೆ. ಪರವಾನಿಗೆ ಪಡೆದ ಕುಟುಂಬದವರು ಜನ ಸೇರಿಸಿ ಮೆಹಂದಿಯನ್ನು ಆಚರಿಸುತ್ತಿರುವುದು ಕಂಡುಬಂದಿದೆ. ಇದನ್ನು ಮನಗಂಡು ಕಟ್ಟುನಿಟ್ಟಿನ ಕ್ರಮಕ್ಕೆ ಉಡುಪಿ ಜಿಲ್ಲಾಡಳಿತ ಮುಂದಾಗಿದೆ.

    ಈ ಬಗ್ಗೆ ಪ್ರಕಟಣೆ ನೀಡಿರುವ ಉಡುಪಿ ಡಿಸಿ ಜಿ. ಜಗದೀಶ್, ಮಹಂದಿಗೆ ಅನುಮತಿ ನೀಡಿಲ್ಲ. ಅನುಮತಿ ಇಲ್ಲದೆ ಕಾರ್ಯಕ್ರಮ ಮಾಡಿದರೆ ಕ್ರಿಮಿನಲ್ ಕೇಸ್ ದಾಖಲಿಸುತ್ತೇವೆ. ಕಾರ್ಯಕ್ರಮದಲ್ಲಿ ಭಾಗವಹಿಸುವ ವೀಡಿಯೋ ಮತ್ತು ಫೊಟೋಗ್ರಾಫರ್ ವಿರುದ್ಧವೂ ಕ್ರಮ ಕೈಗೊಳ್ಳುತ್ತೇವೆ. ಈಗಾಗಲೇ ಮೆಹಂದಿ ಆಚರಿಸಿದ್ದಕ್ಕೆ ಒಂದು ಎಫ್.ಐ.ಆರ್ ದಾಖಲಾಗಿದೆ ಎಂದು ಎಚ್ಚರಿಕೆ ನೀಡಿದ್ದಾರೆ.

    ಕುಂದಾಪುರದ ಅಸೋಡಿಯಲ್ಲಿ ಏಳು ಯುವಕರು ಮಾಸ್ಕ್ ಧರಿಸದೆ ಹುಲಿ ಕುಣಿತ ಮಾಡಿದ್ದರು. ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿತ್ತು. ನೂರಾರು ಜನ ಸುತ್ತಮುತ್ತಲಿನ ಮನೆಯವರು ಸೇರಿ ಮೆಹಂದಿ ಆಚರಿಸಿರುವುದು ಬೆಳಕಿಗೆ ಬಂದಿದೆ. ಈ ಬಗ್ಗೆ ಹಲವಾರು ದೂರುಗಳು ಬಂದ ನಂತರ ತಹಶೀಲ್ದಾರರು, ಪಿಡಿಒಗಳಿಗೆ ಕ್ರಮ ಕೈಗೊಳ್ಳಲು ಅಧಿಕಾರ ಕೊಡಲಾಗಿದೆ ಎಂದು ಮಾಹಿತಿ ನೀಡಿದರು.

  • ಮದುವೆ ವೇಳೆ ವಧುವಿಗೆ ಯಾವ ಮೆಹಂದಿ ಡಿಸೈನ್ ಸೂಟ್ ಆಗುತ್ತೆ ಗೊತ್ತಾ?

    ಮದುವೆ ವೇಳೆ ವಧುವಿಗೆ ಯಾವ ಮೆಹಂದಿ ಡಿಸೈನ್ ಸೂಟ್ ಆಗುತ್ತೆ ಗೊತ್ತಾ?

    ಮದುವೆ ಸಮಾರಂಭ ಅಂದರೆ ಸಾಕು. ಹೆಣ್ಣು ಮಕ್ಕಳಿಗೆ ಮೆಹಂದಿ ಇರಲೇ ಬೇಕು. ಚಿಕ್ಕ-ಮಕ್ಕಳಿಂದ ದೊಡ್ಡವರವರೆಗೂ ಮೆಹಂದಿ ಎಂದರೆ ಎಲ್ಲರಿಗೂ ಅಚ್ಚು-ಮೆಚ್ಚು. ಮದುವೆ ಸಮಾರಂಭಗಳಲ್ಲಂತೂ ಮದುಮಗಳು ಮೆಹಂದಿ ಹಾಕದೇ ಇದ್ದರೆ ಮದುವೆ ಕಂಪ್ಲೀಟ್ ಆಗಿದೆ ಎಂದು ಎನಿಸುವುದೇ ಇಲ್ಲ. ನಿಜವಾಗಿ ಹೇಳಬೇಕೆಂದರೆ ವಧುವಿನ ಮಹೆಂದಿ ಭಾರತ ಹಳೆಯ ಸಂಸ್ಕøತಿ ಮತ್ತು ಸಾಂಪ್ರದಾಯವನ್ನು ಸೂಚಿಸುತ್ತದೆ.

    ಮದುವೆ ಸಮಾರಂಭಗಳಲ್ಲಿ ವಧುವಿನ ಎರಡು ಕೈಗಳು ಮತ್ತಷ್ಟು ಸುಂದರ ಹಾಗೂ ಆಕರ್ಷಕವಾಗಿ ಎದ್ದು ಕಾಣಿಸಲು ಮೆಹಂದಿಯನ್ನು ಬಳಸಲಾಗುತ್ತದೆ. ಅಲ್ಲದೆ ಮದುವೆ ಸಂದರ್ಭದಲ್ಲಿ ವಧುವಿಗಷ್ಟೇ ಅಲ್ಲದೆ ವರನಿಗೂ ಮೆಹಂದಿ ಹಚ್ಚಲಾಗುತ್ತದೆ. ಹಿಂದಿನಿಂದಲೂ ಮದುವೆಯ ಎಲ್ಲ ಶಾಸ್ತ್ರಗಳಲ್ಲಿ ಮೆಹಂದಿ ಶಾಸ್ತ್ರ ಕೂಡ ಒಂದಾಗಿದೆ. ಮದುವೆ ಸಮಯದಲ್ಲಿ ವಧು-ವರನ ಕುಟುಂಬದವರು ಮೆಹಂದಿ ಶಾಸ್ತ್ರವನ್ನು ಆಯೋಜಿಸಿ ಮೆಹಂದಿ ಹಾಕಿಸಿಕೊಳ್ಳುವ ಹಳೆಯ ಸಂಪ್ರದಾಯವನ್ನು ಇಂದಿಗೂ ಮುಂದುವರಿಸಿಕೊಂಡು ಬಂದಿದ್ದಾರೆ.

    ಕೆಲವರು ಮೆಹಂದಿ ಹಾಕಿಸಿಕೊಂಡ ಬಳಿಕ ಅದು ಅತಿಯಾದ ಬಣ್ಣ ನೀಡಿದರೆ ತಮ್ಮ ಜೀವನ ಸಂಗಾತಿ ನಿಮ್ಮನ್ನು ಹೆಚ್ಚು ಪ್ರೀತಿಸುತ್ತಾರೆ ಎಂದು ಹೇಳುತ್ತಾರೆ. ಇನ್ನೂ ಕೆಲವರು ನಿಮ್ಮ ದೇಹದಲ್ಲಿ ಉಷ್ಣಾಂಶ ಅಧಿಕವಾಗಿದ್ದರೆ ಮೆಹಂದಿ ಹೆಚ್ಚು ಬಣ್ಣ ಕೊಡುತ್ತದೆ ಎಂದು ಕೂಡ ಹೇಳುತ್ತಾರೆ. ಇಷ್ಟೆಲ್ಲಾ ಗಾಢವಾದ ಪ್ರಾಮುಖ್ಯತೆ ಇರುವ ಮೆಹಂದಿ ಬಗ್ಗೆ ತಿಳಿದಿದ್ದು, ಸಮಾರಂಭಗಳಲ್ಲಿ ಯಾವ ಮೆಹಂದಿ ಡಿಸೈನ್ಸ್ ಹಾಕಿಕೊಳ್ಳಬೇಕೆಂದು ತಿಳಿಯದೇ ಇರುವವರಿಗೆ ಒಂದಷ್ಟು ಮೆಹಂದಿ ಡಿಸೈನ್ಸ್ ಈ ಕೆಳಗಿನಂತಿವೆ.

    ನವಿಲು ಡಿಸೈನ್ಸ್
    ಈ ಸುಂದರವಾದ ಮೆಹಂದಿ ಡಿಸೈನ್‍ನಲ್ಲಿ ಕೈನ ಮೇಲಿನ ತುದಿಯಲ್ಲಿ ಎರಡು ನವಿಲುಗಳು ಅದಲು-ಬದಲಾಗಿ ತಲೆ ಬಾಗಿಸಿಕೊಂಡಿದ್ದು, ಕೈನ ಮಧ್ಯದಲ್ಲಿ ವಧು-ವರನನ್ನು ಮಂಟಪಕ್ಕೆ ಕರೆದೊಯ್ಯಲಾಗುತ್ತಿರುವಂತೆ ಚಿತ್ರ ಬಿಡಿಸಲಾಗಿದೆ. ಜೊತೆಗೆ ವಧು-ವರ ಇಬ್ಬರು ಹಾರ ಬದಲಿಸಿಕೊಳ್ಳುವಂತಿದ್ದು ಒಂದು ಸುಂದರ ಮದುವೆ ಕಥೆ ಹೇಳುವಂತೆ ತೋರುತ್ತದೆ.

    ಮಿಕ್ಕಿ ಮೌಸ್ ಡಿಸೈನ್
    ಈ ಮೆಹಂದಿ ಡಿಸೈನ್‍ನಲ್ಲಿ ವಧು ಬಹಳ ಸಿಂಪಲ್ ಹಾಗೂ ಡಿಫರೆಂಟ್ ಆಗಿರುವ ಮಿಕ್ಕಿಮೌಸ್‍ನ ಚಿತ್ರವನ್ನು ಕೈ ಮೇಲೆ ಬರೆಸಿಕೊಂಡಿದ್ದಾರೆ. ಈ ಡಿಸೈನ್ ಒಂದು ರೀತಿ ಮಹಿಳೆಯರಿಗೆ ಯುನಿಕ್ ಲುಕ್ ನೀಡುತ್ತದೆ.

    ಹೂವಿನ ರಾಶಿ ಡಿಸೈನ್
    ಇದೊಂದು ಯುನಿಕ್ ಮೆಹಂದಿ ಡಿಸೈನ್ ಆಗಿದ್ದು, ಹಲವಾರು ಮೆಹಂದಿ ಡಿಸೈನ್‍ಗಳ ಮಧ್ಯೆ ಒನ್ ಆಫ್ ದಿ ಬೆಸ್ಟ್ ಡಿಸೈನ್ ಎಂದೇ ಹೇಳಬಹುದು. ಕೈ ತುಂಬಾ ಹೂವಿನ ರಾಶಿಗಳಿಂದ ತುಂಬಿಕೊಂಡಿರುವ ಈ ಡಿಸೈನ್ ನೋಡಲು ಅತ್ಯಂತ ಆಕರ್ಷಕವಾಗಿದ್ದು, ಬಹಳ ಸುಂದರವಾಗಿ ಕಾಣಿಸುತ್ತದೆ.

    ವಧು-ವರ ಡಿಸೈನ್
    ವಧು ವರನ ಚಿತ್ರ ಹೊಂದಿರುವ ಈ ಮೆಹಂದಿ ಕಲಾ ವಿನ್ಯಾಸದಲ್ಲಿ, ನವಿಲು, ಕಮಲ, ಹೂಗಳಿದೆ ಹಾಗೂ ಇವೆಲ್ಲವೂ ವಧು-ವರರನ್ನು ಮದುವೆಗೆ ಸ್ವಾಗತ ಕೋರುವ ರೀತಿಯಲ್ಲಿದ್ದು, ಈ ಡಿಸೈನ್ ನೋಡಲು ಎರಡು ಕಣ್ಣುಗಳು ಸಾಲದು ಎಂದು ಹೇಳಿದರೆ ತಪ್ಪಾಗಲಾರದು.

    ರಾಧಾ-ಕೃಷ್ಣ ಡಿಸೈನ್
    ಒಂದು ಕೈನಲ್ಲಿ ರಾಧಾ-ಕೃಷ್ಣನೊಂದಿಗೆ ಒಟ್ಟಾಗಿ ಕಾಣಿಸಿಕೊಂಡಿದ್ದು, ಕೃಷ್ಣನ ಜೊತೆ ರಾಧೆ ಕೊಳಲನ್ನು ಹಿಡಿದುಕೊಂಡಿರುವಂತೆ ಚಿತ್ರವನ್ನು ಬಿಡಿಸಲಾಗಿದೆ. ಮತ್ತೊಂದು ಕೈ ಮೇಲೆ ದೇವಾಲಯ, ಮಕ್ಕಳು, ಓಂ, ಸ್ವಸ್ತಿಕ್ ಚಿತ್ರದ ಜೊತೆ ದಿನಾಂಕ, ವರ್ಷವನ್ನು ಬರೆಯಲಾಗಿದೆ.

  • ಮೆಹಂದಿಯಲ್ಲಿ ಭಾಗಿಯಾಗಿದ್ದ 7 ಮಂದಿಗೆ ಕೊರೊನಾ

    ಮೆಹಂದಿಯಲ್ಲಿ ಭಾಗಿಯಾಗಿದ್ದ 7 ಮಂದಿಗೆ ಕೊರೊನಾ

    ಉಡುಪಿ: ಮದುವೆ ಕಾರ್ಯಕ್ರಮದಲ್ಲಿ ಪಾಲ್ಗೊಂಡ ಉಡುಪಿಯ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿದೆ. ಉಡುಪಿ ಜಿಲ್ಲೆಯ ಮಲ್ಲಾರಿಲ್ಲಿ ಈ ಘಟನೆ ನಡೆದಿದೆ. ನವ ವಧುವಿನ ಕುಟುಂಬದ ಏಳು ಮಂದಿಗೆ ಕೊರೊನಾ ವಕ್ಕರಿಸಿದೆ.

    ಕೊರೊನಾ ಪೀಡಿತರು ಕಾಪು ತಾಲೂಕು ಮಲ್ಲಾರಿನ ಕೊಂಬಗುಡ್ಡೆಯ ನಿವಾಸಿಗಳು ಎಂದು ಆರೋಗ್ಯಾಧಿಕಾರಿಗಳು ಮಾಹಿತಿ ನೀಡಿದ್ದಾರೆ. ಉಡುಪಿಯ ವಧುವನ್ನು ಶಿವಮೊಗ್ಗ ಹೊಸನಗರಕ್ಕೆ ಮದುವೆ ಮಾಡಿಕೊಡಲಾಗಿತ್ತು. ನವ ವಧುವಿಗೆ ಜುಲೈ 6 ರಂದು ಸೋಂಕು ದೃಢಪಟ್ಟಿತ್ತು. ವಿವಾಹಗೂ ಮುನ್ನ ನಡೆದ ಮೆಹೆಂದಿ ಕಾರ್ಯಕ್ರಮದಲ್ಲಿ ಭಾಗವಹಿಸಿದವರ ಗಂಟಲ ದ್ರವ ಪರೀಕ್ಷೆಗೆ ಕಳುಹಿಸಲಾಗಿತ್ತು.

    80ಕ್ಕೂ ಹೆಚ್ಚು ಮಂದಿ ಮೆಹೆಂದಿಯಲ್ಲಿ ಭಾಗವಹಿಸಿದ್ದರು. ಮೂವರು ಮಕ್ಕಳು, 3 ಮಂದಿ ಮಹಿಳೆಯರ ಸಹಿತ ಏಳು ಮಂದಿಗೆ ಪಾಸಿಟಿವ್ ಇರುವ ಬಗ್ಗೆ ಲ್ಯಾಬ್ ವರದಿ ಬಂದಿದೆ. ಎಲ್ಲರನ್ನು ಕೋವಿಡ್ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಕೊರೊನಾ ನೋಡಲ್ ಅಧಿಕಾರಿ ಡಾ. ಪ್ರಶಾಂತ್ ಭಟ್ ಪಬ್ಲಿಕ್ ಟಿವಿಗೆ ಮಾಹಿತಿ ನೀಡಿದರು.

  • ಮದುವೆಯಲ್ಲಿ ಮೆಹಂದಿ ಹಾಕಿ ಮಿಂಚಿದ ರಾಗಿಣಿ

    ಮದುವೆಯಲ್ಲಿ ಮೆಹಂದಿ ಹಾಕಿ ಮಿಂಚಿದ ರಾಗಿಣಿ

    ಬೆಂಗಳೂರು: ತುಪ್ಪದ ಹುಡುಗಿ ರಾಗಿಣಿ ದ್ವಿವೇದಿ ತಮ್ಮ ಸಹೋದರನ ಮದುವೆಯಲ್ಲಿ ಮೆಹಂದಿ ಹಾಕಿಕೊಂಡು ಮಿಂಚಿದ್ದಾರೆ.

    ತಮ್ಮ ಸಹೋದರನ ಮದುವೆಯಲ್ಲಿ ಎರಡು ಕೈಗಳಿಗೆ ಮೆಹಂದಿ ಹಾಕಿಕೊಂಡು ಫೋಟೋ ತೆಗೆಸಿಕೊಂಡಿರುವ ರಾಗಿಣಿ ಅವರು, ಈ ಫೋಟೋಗಳನ್ನು ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ.

    ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಮೂರು ಫೋಟೋಗಳನ್ನು ಹಂಚಿಕೊಂಡಿರುವ ರಾಗಿಣಿ ಅವರು, ಎರಡು ಕೈಗಳಿಗೆ ಸಂಪೂರ್ಣವಾಗಿ ಮೆಹಂದಿಯನ್ನು ಬಿಡಿಸಿಕೊಂಡು ಫೋಟೋಗೆ ಪೋಸ್ ನೀಡಿದ್ದಾರೆ. ಸ್ಮೈಲ್ ಅಂಡ್ ಪೋಸ್ ಸಹೋದರನ ಮದುವೆ ಸಂಭ್ರಮದಲ್ಲಿ ಮೆಹಂದಿ ರಾತ್ರಿಯನ್ನು ಕುಟುಂಬದ ಜೊತೆ ಕಳೆಯುವುದು ತುಂಬ ಖುಷಿಕೊಡುತ್ತದೆ. ನಮ್ಮ ಸಂಪ್ರದಾಯಗಳು ಯಾವಾಗಲೂ ನಮ್ಮನ್ನು ಖುಷಿಯಾಗಿ ಇರುವಂತೆ ಮಾಡುತ್ತವೆ ಎಂದು ಬರೆದುಕೊಂಡಿದ್ದಾರೆ.

    https://www.instagram.com/p/B8TVs3TAZ8i/

    ಸದಾ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯವಾಗಿರುವ ರಾಗಿಣಿ ಆಗಾಗ ತಮ್ಮ ಇನ್‍ಸ್ಟಾಗ್ರಾಮ್ ಖಾತೆಯಲ್ಲಿ ಫೋಟೋಗಳು ಮತ್ತು ವಿಡಿಯೋಗಳನ್ನು ಹಂಚಿಕೊಳ್ಳುತ್ತಿರುತ್ತಾರೆ. ಇತ್ತೀಚೆಗೆ ಸಿನಿಮಾ ಚಿತ್ರೀಕರಣಕ್ಕೆಂದು ಬಾದಾಮಿಗೆ ಹೋಗಿದ್ದ ರಾಗಿಣಿ ಅಲ್ಲಿಯ ಕಾವೇರಿ ಹೋಟೆಲ್‍ನಲ್ಲಿ ನಾಟಿ ಶೈಲಿಯ ಊಟವನ್ನು ತಿಂದು ಅದನ್ನು ವಿಡಿಯೋ ಮಾಡಿ ತಮ್ಮ ಇನ್‍ಸ್ಟಾಗ್ರಾಮ್‍ನಲ್ಲಿ ಹಂಚಿಕೊಂಡಿದ್ದರು.

    ಇದಕ್ಕೂ ಮುನ್ನ ರಾಗಿಣಿ ಲೇಸ್‍ನಲ್ಲಿ ಆಮ್ಲೆಟ್ ತಯಾರಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿ ನೆಟ್ಟಿಗರು ತರಾಟೆ ಕ್ಲಾಸ್ ತೆಗೆದುಕೊಂಡಿದ್ದರು. ರಾಗಿಣಿ ತಮ್ಮ ಮನೆಯಲ್ಲಿ ಹೊಸ ರೆಸಿಪಿಯನ್ನು ತಯಾರಿಸಿದ್ದರು. ಅಡುಗೆ ಮಾಡುತ್ತಿರುವ ವಿಡಿಯೋವನ್ನು ರಾಗಿಣಿ ತಮ್ಮ ಇನ್‍ಸ್ಟಾದಲ್ಲಿ ಹಂಚಿಕೊಂಡಿದ್ದರು. ಈ ವಿಡಿಯೋ ವೈರಲ್ ಆಗುತ್ತಿದ್ದಂತೆ ನೆಟ್ಟಿಗರು ರಾಗಿಣಿ ಅವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು.

    ಈ ವಿಡಿಯೋದಲ್ಲಿ ರಾಗಿಣಿ `ಲೇಸ್ ಆಮ್ಲೆಟ್’ ಎನ್ನುವ ಹೊಸ ರೆಸಿಪಿ ಮಾಡಿದ್ದರು. ಮೊದಲಿಗೆ ನಾಲ್ಕು ಮೊಟ್ಟೆಯನ್ನು ಒಂದು ಬೌಲ್‍ಗೆ ಹಾಕಿಕೊಂಡು, ಅದಕ್ಕೆ ಈರುಳ್ಳಿ, ಮಸಾಲೆ ಪುಡಿ, ಮೆಣಸಿನ ಪುಡಿ, ಉಪ್ಪು ಹಾಕಿ ಮಿಕ್ಸ್ ಮಾಡಿದ್ದಾರೆ. ನಂತರ ಅದನ್ನು ಲೇಸ್ ಚಿಪ್ಸ್ ಪಾಕೆಟ್‍ಗೆ ಸ್ವಲ್ಪ ಹಾಕಿ ಕುದಿಯುತ್ತಿರುವ ನೀರಿನೊಳಗೆ ಇಟ್ಟು ಬೇಯಿಸಿದ್ದರು. ಈ ವಿಡಿಯೋ ನೋಡಿದ ಅಭಿಮಾನಿಗಳು ರಾಗಿಣಿ ಅವರನ್ನು ಟ್ರೋಲ್ ಮಾಡಲು ಶುರು ಮಾಡಿದ್ದರು. ಈ ರೀತಿ ಪ್ಲಾಸ್ಟಿಕ್‍ನೊಳಗೆ ಬೇಯಿಸಿದ ಆಹಾರ ತಿನ್ನಬಾರದು, ಇದು ವಿಷ. ನಿಮ್ಮನ್ನು ಫಾಲೋ ಮಾಡುವ ಅಭಿಮಾನಿಗಳಿಗೆ ಇದೇನಾ ನೀವು ಹೇಳುವ ಸಂದೇಶ ಎಂದು ರಾಗಿಣಿ ವಿರುದ್ಧ ತಮ್ಮ ಆಕ್ರೋಶ ಹೊರಹಾಕಿದ್ದರು.

    https://www.instagram.com/p/B46n4aIguSh/

    ರಾಗಿಣಿ ತಯಾರಿಸಿದ ಈ ಹೊಸ ರೆಸಿಪಿಯ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿ ಕೆಲವರು, ರೆಪಿಸಿ ತುಂಬಾ ಚೆನ್ನಾಗಿದೆ ನಾವು ಮನೆಯಲ್ಲಿ ಟ್ರೈ ಮಾಡುತ್ತೇವೆ ಎಂದು ಕಮೆಂಟ್ ಮಾಡುವ ಮೂಲಕ ಮೆಚ್ಚುಗೆ ವ್ಯಕ್ತಪಡಿಸಿದ್ದರು.

  • ನಿಖಿಲ್‍ಗೆ ವೋಟು ಹಾಕಿ- ಕೈತುಂಬಾ ಮೆಹಂದಿ ಹಾಕಿಸಿಕೊಂಡು ಪೋರಿ ಮನವಿ

    ನಿಖಿಲ್‍ಗೆ ವೋಟು ಹಾಕಿ- ಕೈತುಂಬಾ ಮೆಹಂದಿ ಹಾಕಿಸಿಕೊಂಡು ಪೋರಿ ಮನವಿ

    ಬೆಂಗಳೂರು: ಮಂಡ್ಯ ಲೋಕಸಭಾ ಚುನಾವಣೆಯ ಮೈತ್ರಿ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರಿಗೆ ವೋಟ್ ಹಾಕಿ ಎಂದು ಪುಟ್ಟ ಪೋರಿಯೊಬ್ಬಳು ಕೈತುಂಬಾ ಮೆಹಂದಿ ಹಾಕಿಸಿಕೊಂಡಿದ್ದಾಳೆ.

    ಚೈತನ್ಯ, ನಿಖಿಲ್‍ನ ಅಭಿಮಾನಿ. ನಿಖಿಲ್ ಅಭಿನಯಿಸಿದ ‘ಜಾಗ್ವಾರ್’ ಹಾಗೂ ‘ಸೀತಾರಾಮ ಕಲ್ಯಾಣ’ ಸಿನಿಮಾ ಚೈತನ್ಯಳಿಗೆ ಇಷ್ಟವಾಗಿತ್ತು. ಈ ಸಿನಿಮಾ ನೋಡಿ ನಿಖಿಲ್ ಅವರನ್ನು ಇಷ್ಟಪಡಲು ಶುರು ಮಾಡಿದ್ದಾಳೆ. ಈಗ ನಿಖಿಲ್ ಲೋಕಸಭಾ ಚುನಾವಣೆಗೆ ಸ್ಪರ್ಧಿಸುತ್ತಿದ್ದು, ನಿಖಿಲ್‍ಗೆ ವೋಟ್ ಹಾಕಿ ಎಂದು ಚೈತನ್ಯ ಕೈತುಂಬಾ ಮೆಹಂದಿ ಹಾಕಿಸಿಕೊಂಡು ಕೇಳಿಕೊಳ್ಳುತ್ತಿದ್ದಾಳೆ. ಚೈತನ್ಯ ತನ್ನ ಮೆಹಂದಿಯಲ್ಲಿ ನಿಖಿಲ್ ಹೆಸರನ್ನು ಹಾಕಿಸಿಕೊಂಡಿದ್ದಾಳೆ.

    ಮಂಡ್ಯದಲ್ಲಿ ಯುವಕರೊಬ್ಬರು ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೇ ಉಳಿಯಬೇಕು ಎಂದು ತನ್ನ ಎದೆ ಮೇಲೆ ಮಂಡ್ಯದ ಮೈತ್ರಿ ಪಕ್ಷದ ಅಭ್ಯರ್ಥಿ ನಿಖಿಲ್ ಕುಮಾರಸ್ವಾಮಿ ಅವರ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಕೆಆರ್ ಪೇಟೆಯ ಹೊಸ ಹೊಳಲು ಗ್ರಾಮದ ಯುವಕ ಸಚಿನ್ ಎದೆ ಮೇಲೆ ನಿಖಿಲ್ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ನಾನೊಬ್ಬ ಹೊಸ ಮತದಾರ, ನನ್ನ ಮೊದಲ ವೋಟ್ ನಿಖಿಲ್‍ಗೆ ಹಾಕಬೇಕು. ಅಲ್ಲದೆ ನನ್ನ ಮೊದಲ ವೋಟ್ ಮನಸ್ಸಿನಲ್ಲಿ ಅಚ್ಚಳಿಯದೆ ಉಳಿಯಬೇಕು ಎಂದು ಸಚಿನ್, ನಿಖಿಲ್ ಮೇಲಿನ ಅಭಿಮಾನದಿಂದ ಹಚ್ಚೆ ಹಾಕಿಸಿಕೊಂಡಿದ್ದಾರೆ.

  • ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

    ಮದ್ವೆಯಲ್ಲಿ ವರನಿಗೆ ಟೊಮೆಟೋ, ಮೊಟ್ಟೆ, ಸಗಣಿ ನೀರು, ಹಾಕಿ ಸ್ನಾನ ಮಾಡಿಸಿದ ಸ್ನೇಹಿತರು

    ಮಂಗಳೂರು: ಮದುವೆಯ ದಿನ ಮಧುಮಗನಿಗೆ ಕೀಟಲೆ ಮಾಡೋದು ಮಾಮೂಲಿ. ಆದರೆ ದಕ್ಷಿಣ ಕನ್ನಡ ಜಿಲ್ಲೆಯ ಬಂಟ್ವಾಳದ ರಾಯಿ ಎಂಬಲ್ಲಿ ನಡೆದ ಮದುವೆ ಮಾತ್ರ ತುಂಬನೇ ಡಿಫರೆಂಟ್ ಆಗಿತ್ತು. ಇತರ ಸ್ನೇಹಿತರಿಗೆ ಮದುವೆಯ ದಿನ ಕೀಟಲೆ ಕೊಡುತ್ತಿದ್ದ ಆತನಿಗೆ ಆತನ ಸ್ನೇಹಿತರು ಸಖತ್ ಆಗಿಯೇ ಶಾಕ್ ಕೊಟ್ಟಿದ್ದಾರೆ.

    ಹೌದು. ಬಂಟ್ವಾಳದ ರಾಯಿ ನಿವಾಸಿ ಮಂಗಳೂರಿನ ಖಾಸಗಿ ಕಂಪನಿಯಲ್ಲಿ ಉದ್ಯೋಗದಲ್ಲಿರುವ ರಾಕೇಶ್‍ಗೆ ಕಳೆದ ಫೆಬ್ರವರಿ 19 ರಂದು ಮೆಹಂದಿ ಕಾರ್ಯಕ್ರಮ ಏರ್ಪಡಿಸಲಾಗಿತ್ತು. ಮಧುಮಗ ರಾಕೇಶ್ ಶಾಸ್ತ್ರೋಕ್ತವಾಗಿ ಮೆಹೆಂದಿ ಕಾರ್ಯಕ್ರಮಕ್ಕೆ ತಯಾರಾಗುತ್ತಿದ್ದರೆ ಇತ್ತ ರಾಕೇಶ್ ಸ್ನೇಹಿತರು ಮಾತ್ರ ಕುಚೇಷ್ಠೆಗೆ ತಯಾರಾಗಿದ್ದರು.

    ಮಧುಮಗನಿಗೆ ಮನೆಯವರು ಹಾಲು ಸುರಿಯುತ್ತಿದ್ದಂತೆ ಬಂದ ಸ್ನೇಹಿತರು ರಾಕೇಶ್ ಮೇಲೆ ಹಳಸಿದ ಟೊಮೆಟೋ, ಮೊಟ್ಟೆ, ಸಗಣಿ ನೀರು ಸುರಿದಿದ್ದಾರೆ. ಅಷ್ಟೇ ಅಲ್ಲದೇ ಮದುವೆ ದಿನಾನೂ ಮಧುಮಗನನ್ನು ಬಿಡದ ಸ್ನೇಹಿತರು, ವಿವಿಧ ತರಕಾರಿಗಳ ಮಾಲೆಯನ್ನು ಮಾಡಿ ಹೊರೆಕಾಣಿಕೆ ರೂಪದಲ್ಲಿ ಮದುವೆ ಮಂಟಪಕ್ಕೆ ತಂದಿದ್ರು. ಎಲ್ಲಾ ಸ್ನೇಹಿತರು ಒಂದೇ ರೀತಿಯ ಪಂಚೆ ಹಾಗೂ ಅಂಗಿ ಧರಿಸಿದ್ದು, ಎಲ್ಲರ ಗಮನ ಸೆಳೆದಿತ್ತು.

    ಅಲ್ಲದೆ “ರಾಪಾಟದ ರಾಕೇಶ್‍ನ ಮದುವೆ” ಎಂದು ಬ್ಯಾನರ್ ಕೂಡಾ ಊರು ತುಂಬಾ ಹಾಕಿದ್ದಾರೆ. ಅದರಲ್ಲಿ ಮದುವೆಯ ಕುರಿತು ಡಿಫರೆಂಟ್ ಡೈಲಾಗ್‍ಗಳನ್ನು ಹಾಕಿದ್ದು ಊರಿನವರ ಗಮನ ಸೆಳೆದಿತ್ತು. ಬೇರೆ ಸ್ನೇಹಿತರ ಮದುವೆಯಲ್ಲಿ ಮಧುಮಕ್ಕಳಿಗೆ ರೇಗಿಸುತ್ತಿದ್ದ ರಾಕೇಶ್ ಗೆ ಈ ಬಾರಿ ಸ್ನೇಹಿತರೂ ರೇಗಿಸಿ ಸಖತ್ ಮಜಾ ತೆಗೆದುಕೊಂಡರು.

    ಸದ್ಯ ಮಧುಮಗನಿಗೆ ಯುವಕರ ಕೀಟಲೆಯ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು ಜನ ಸಖತ್ ಎಂಜಾಯ್ ಮಾಡುತ್ತಿದ್ದಾರೆ.

    https://www.youtube.com/watch?v=_zP21lk-DnI