Tag: ಮೆಸ್ಸಿ

  • ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಮೆಸ್ಸಿ ಆಟ ನೋಡಲು ಕಿಕ್ಕಿರಿದ ಅಭಿಮಾನಿಗಳು – 28 ವರ್ಷಗಳ ಇತಿಹಾಸದಲ್ಲಿ ಮೊದಲ ಬಾರಿಗೆ ಇಷ್ಟೊಂದು ಜನ!

    ಕತಾರ್: ಫಿಫಾ ವಿಶ್ವಕಪ್ (FIFA World Cup)  ಇತಿಹಾಸದಲ್ಲಿ ನಿನ್ನೆ ನಡೆದ ಅರ್ಜೆಂಟೀನಾ (Argentina) ಮತ್ತು ಮೆಕ್ಸಿಕೋ (Mexico) ನಡುವಿನ ಪಂದ್ಯದಲ್ಲಿ ಬರೋಬ್ಬರಿ 88,966 ಪ್ರೇಕ್ಷಕರು ಸ್ಟೇಡಿಯಂಗೆ ಆಗಮಿಸಿ ಪಂದ್ಯ ನೋಡಿ ದಾಖಲೆ ಬರೆದಿದ್ದಾರೆ.

    ಶನಿವಾರ ರಾತ್ರಿ 12:30ಕ್ಕೆ ಲುಸೈಲ್ ಕ್ರೀಡಾಂಗಣದಲ್ಲಿ ನಡೆದ ಅರ್ಜೆಂಟೀನಾ ಮತ್ತು ಮೆಕ್ಸಿಕೋ ನಡುವಿನ ಪಂದ್ಯಕ್ಕೆ ಅಭಿಮಾನಿಗಳು ಕಿಕ್ಕಿರಿದು ಆಗಮಿಸಿದರು. ವಿಶ್ವಕಪ್‍ನಲ್ಲಿ ಅಳಿವು ಉಳಿವಿನ ಪರಿಸ್ಥಿತಿಯೊಂದಿಗೆ ಮಾಡು ಇಲ್ಲವೇ ಮಡಿ ಪಂದ್ಯದಲ್ಲಿ ಅರ್ಜೆಂಟೀನಾ ತಂಡ ಒತ್ತಡದಲ್ಲಿತ್ತು. ಹಾಗಾಗಿ ಅರ್ಜೆಂಟೀನಾ ಮತ್ತು ಮೆಸ್ಸಿ (Lionel Messi) ಅಭಿಮಾನಿಗಳು ಒಟ್ಟಿಗೆ ತಂಡಕ್ಕೆ ಚಿಯರ್ ಅಪ್ ಮಾಡಲು ಕ್ರೀಡಾಂಗಣಕ್ಕೆ ಆಗಮಿಸಿದರು. ಇದನ್ನೂ ಓದಿ: ಡು ಆರ್ ಡೈ ಪಂದ್ಯದಲ್ಲಿ ಮಿಂಚಿದ ಮೆಸ್ಸಿ – ನಾಕೌಟ್ ರೇಸ್‍ನಲ್ಲಿ ಉಳಿದುಕೊಂಡ ಅರ್ಜೆಂಟೀನಾ

    ಲುಸೈಲ್ ಕ್ರೀಡಾಂಗಣದಲ್ಲಿ ಬರೋಬ್ಬರಿ 88,966 ಜನ ಕಿಕ್ಕಿರಿದು ತುಂಬಿದರು. ಇದು ಕಳೆದ 28 ವರ್ಷಗಳ ವಿಶ್ವಕಪ್ ಇತಿಹಾದಲ್ಲಿ ಅತೀ ಹೆಚ್ಚಿನ ಪ್ರೇಕ್ಷಕರು ಪಂದ್ಯ ವೀಕ್ಷಿಸಿದ ದಾಖಲೆ ಬರೆಯಿತು. ಸ್ಟೇಡಿಯಂನ ಹೊರ ಭಾಗದಲ್ಲೂ ಜನ ಮುಗಿಬಿದ್ದಿದ್ದರು. ವಿಶ್ವದಾದ್ಯಂತ ಫ್ಯಾನ್ಸ್ ಅಲ್ಲಲ್ಲಿ ಫ್ಯಾನ್ಸ್‌ ಆರ್ಮಿ ಸೇರಿ ಪಂದ್ಯ ವೀಕ್ಷಿಸಿದವರು. ಇದನ್ನೂ ಓದಿ: ಕಾಡಿದ ವರುಣ – 2ನೇ ಏಕದಿನ ಪಂದ್ಯ 12 ಓವರ್‌ಗಳಿಗೆ ಅಂತ್ಯ

    ಪಂದ್ಯದಲ್ಲಿ 64 ನಿಮಿಷದಲ್ಲಿ ಅರ್ಜೆಂಟೀನಾ ಪರ ನಾಯಕ ಮೆಸ್ಸಿ ಮೊದಲ ಗೋಲು ಬಾರಿಸಿ ಮುನ್ನಡೆ ತಂದುಕೊಟ್ಟರು. ಅರ್ಜೆಂಟೀನಾ ಎಲ್ಲಾ ವಿಭಾಗದಲ್ಲೂ ಮೆಕ್ಸಿಕೋ ವಿರುದ್ಧ ಪ್ರಬಲವಾಗಿ ಕಂಡಿತು. ಪರಿಣಾಮ 87ನೇ ನಿಮಿಷದಲ್ಲಿ ಎಂಝೋ ಫೆರ್ನಾಂಡಿಸ್ ಮತ್ತೊಂದು ಗೋಲು ಸಿಡಿಸುವ ಮೂಲಕ ಅರ್ಜೆಂಟೀನಾ 2-0 ಅಂತರದಲ್ಲಿ ಮುನ್ನಡೆ ಕಾಯ್ದುಕೊಳ್ಳಲು ಸಹಕರಿಸಿದರು. ಬಳಿಕ ಮೆಕ್ಸಿಕೋ ಗೋಲು ಸಿಡಿಸಲು ಶತಪ್ರಯತ್ನಿಸಿದರೂ ಅರ್ಜೆಂಟೀನಾ ಆಟಗಾರರು ಇದಕ್ಕೆ ಅವಕಾಶ ನೀಡಲಿಲ್ಲ.

    ಅಂತಿಮವಾಗಿ ಫುಲ್‍ಟೈಮ್ ಮುಕ್ತಾಯದ ವೇಳೆಗೆ 2-0 ಅಂತರದಲ್ಲಿ ಮುನ್ನಡೆ ಪಡೆದುಕೊಂಡಿದ್ದ ಅರ್ಜೆಂಟೀನಾ ಗೆಲುವಿನ ನಗೆ ಬೀರಿತು. ಈ ಮೂಲಕ ಸೌದಿ ಅರೇಬಿಯಾ ವಿರುದ್ಧ ಸೋತಿದ್ದ ನೋವು ಮರೆಸಿತು.

    Live Tv
    [brid partner=56869869 player=32851 video=960834 autoplay=true]

  • ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

    ಲೆಯೋನೆಲ್ ಮೆಸ್ಸಿಯನ್ನು ಹಿಂದಿಕ್ಕಿದ ವಿರಾಟ್ ಕೊಹ್ಲಿ

    ನವದೆಹಲಿ: ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಅರ್ಜೆಂಟೀನಾ ಫುಟ್‍ಬಾಲ್ ಸ್ಟಾರ್ ಆಟಗಾರ ಲಿಯೋನೆಲ್ ಮೆಸ್ಸಿಯನ್ನು ಅವರನ್ನು ಹಿಂದಿಕ್ಕಿದ್ದಾರೆ.

    ಫೋರ್ಬ್ಸ್ ನಿಯತಕಾಲಿಕೆ ಬುಧವಾರ ವಿಶ್ವದ ಅತ್ಯಂತ ಮೌಲ್ಯಯುತ ಕ್ರೀಡಾಪಟುಗಳ ಪಟ್ಟಿಯನ್ನು ಬಿಡುಗಡೆ ಮಾಡಿದ್ದು, ಈ ಪಟ್ಟಿಯಲ್ಲಿ ಕೊಹ್ಲಿ 7ನೇ ಸ್ಥಾನ ಪಡೆದರೆ, ಮೆಸ್ಸಿ 9ನೇ ಸ್ಥಾನ ಪಡೆದಿದ್ದಾರೆ.

    ಆಟಗಾರರ ವೇತನ, ಬೋನಸ್ ಸೇರಿದಂತೆ ಎಲ್ಲ ಹೂಡಿಕೆಗಳಿಂದ ಬರುವ ಆದಾಯವನ್ನು ಲೆಕ್ಕಹಾಕಿ ಈ ಪಟ್ಟಿಯನ್ನು ಫೋರ್ಬ್ಸ್ ಬಿಡುಗಡೆ ಮಾಡಿದೆ. ಟೆನ್ನಿಸ್ ಆಟಗಾರ ಸ್ವಿಜರ್‍ಲ್ಯಾಂಡಿನ  ರೋಜರ್ ಫೆಡರರ್ ಮೊದಲ ಸ್ಥಾನ ಪಡೆದಿದ್ದಾರೆ.

    ಟಾಪ್ ಆಟಗಾರರು ಯಾರು?
    1. ರೋಜರ್ ಫೆಡರರ್ – 37.2 ದಶಲಕ್ಷ ಡಾಲರ್ (ಅಂದಾಜು 241 ಕೋಟಿ ರೂ.)
    2. ಲೆಬ್ರೋನ್ ಜೇಮ್ಸ್ – 33.4 ದಶಲಕ್ಷ ಡಾಲರ್ (ಅಂದಾಜು 216 ಕೋಟಿ ರೂ.)
    3. ಉಸೇನ್ ಬೋಲ್ಟ್ – 27 ದಶಲಕ್ಷ ಡಾಲರ್ (ಅಂದಾಜು 175 ಕೋಟಿ ರೂ.)
    4. ಕ್ರಿಶ್ಚಿಯಾನೋ ರೊನಾಲ್ಡೊ – 21.5 ದಶಲಕ್ಷ ಡಾಲರ್ (ಅಂದಾಜು 139 ಕೋಟಿ ರೂ.)

    5. ಫಿಲ್ ಮೈಕ್ಲೆಸನ್ – 19.6 ದಶಲಕ್ಷ ಡಾಲರ್(ಅಂದಾಜು127 ಕೋಟಿ ರೂ.)
    6. ಟೈಗರ್ ವುಡ್ಸ್ – 16.6 ದಶಲಕ್ಷ ಡಾಲರ್(ಅಂದಾಜು107 ಕೋಟಿ ರೂ.)
    7. ವಿರಾಟ್ ಕೊಹ್ಲಿ – 14.5 ದಶಲಕ್ಷ ಡಾಲರ್(ಅಂದಾಜು 94 ಕೋಟಿ ರೂ.)
    8. ರೋರಿ ಮೆಕ್ರಾಯ್ – 13.6 ದಶಲಕ್ಷ ಡಾಲರ್(ಅಂದಾಜು 88 ಕೋಟಿ ರೂ.)
    8. ಲಿಯೋನೆಲ್ ಮೆಸ್ಸಿ -13.5 ದಶಲಕ್ಷ ಡಾಲರ್(ಅಂದಾಜು 87 ಕೋಟಿ ರೂ.)
    10. ಸ್ಟೆಫ್ ಕರ್ರಿ – 13.4 ದಶಲಕ್ಷ ಡಾಲರ್(ಅಂದಾಜು 86 ಕೋಟಿ ರೂ.)