Tag: ಮೆಸೇಜ್

  • ಕಾಲೇಜಿನ ಆವರಣದಲ್ಲೇ ಪ್ರೊಫೆಸರ್ ನ ಹಿಡಿದು ಎಳೆದಾಡಿ ಥಳಿಸಿದ ವಿದ್ಯಾರ್ಥಿನಿಯರು – ವಿಡಿಯೋ ವೈರಲ್

    ಕಾಲೇಜಿನ ಆವರಣದಲ್ಲೇ ಪ್ರೊಫೆಸರ್ ನ ಹಿಡಿದು ಎಳೆದಾಡಿ ಥಳಿಸಿದ ವಿದ್ಯಾರ್ಥಿನಿಯರು – ವಿಡಿಯೋ ವೈರಲ್

    ಚಂಡೀಗಢ: ಕಾಲೇಜಿನ ಆವರಣದಲ್ಲೇ ವಿದ್ಯಾರ್ಥಿನಿಯರು ಪ್ರೊಫೆಸರೊಬ್ಬರನ್ನು ಹಿಡಿದು ಎಳೆದಾಡಿ ಥಳಿಸಿರುವ ಘಟನೆ ಪಂಜಾಬ್ ನ ಪಟಿಯಾಲ ಕಾಲೇಜಿನಲ್ಲಿ ನಡೆದಿದೆ.

    ಪಟಿಯಾಲದ ಸರ್ಕಾರಿ ಮಹಿಳಾ ಕಾಲೇಜಿನಲ್ಲಿ ಈ ಘಟನೆ ನಡೆದಿದ್ದು, ಸರ್ಕಾರಿ ಮಹಿಳಾ ಕಾಲೇಜಿನ ಪ್ರೊಫೆಸರ್ ವಿದ್ಯಾರ್ಥಿನಿಯರಿಗೆ ಅಶ್ಲೀಲ ಸಂದೇಶವನ್ನು ಕಳುಹಿಸಿದ್ದಾನೆ. ಇದರಿಂದ ಕೋಪಗೊಂಡು ವಿದ್ಯಾರ್ಥಿನಿಯರು ಆತನನ್ನು ಹಿಡಿದು ಥಳಿಸಿದ್ದಾರೆ. ಈಗ ಈ ವಿಡಿಯೋ ವೈರಲ್ ಆಗಿದೆ.

    ಅತುಲ್ ಜೋಹ್ರಿ ಪ್ರಾಧ್ಯಾಪಕ ಆ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದ ಕೆಲ ವಿದ್ಯಾರ್ಥಿನಿಯರಿಗೆ ಅಶ್ಲೀಲವಾಗಿ ಮೆಸೇಜ್ ಕಳುಹಿಸಿದ್ದಾನೆ. ಇದರಿಂದ ಆಕ್ರೋಶಗೊಂಡ ವಿದ್ಯಾರ್ಥಿನಿಯರು ಆತ ಕಾಲೇಜಿನ ಆವರಣಕ್ಕೆ ಪ್ರವೇಶಿಸುತ್ತಿದ್ದಂತೆ, ಆತನನ್ನು ಹಿಡಿದು ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಮತ್ತೊಬ್ಬಳು ವಿದ್ಯಾರ್ಥಿನಿ ಈ ದೃಶ್ಯವನ್ನು ತನ್ನ ಮೊಬೈಲ್ ನಲ್ಲಿ ಸೆರೆಹಿಡಿದಿದ್ದಾಳೆ.

    ಆರೋಪಿ ಪ್ರಾಧ್ಯಾಪಕನ ವಿರುದ್ಧ ಕ್ರಮ ಕೈಗೊಳ್ಳಬೇಕೆಂದು ವಿದ್ಯಾರ್ಥಿನಿಯರು ಪ್ರತಿಭಟನೆ ಕೂಡ ಮಾಡಿದ್ದಾರೆ. ನಂತರ ದೆಹಲಿ ಪೊಲೀಸರು ಆರೋಪಿಯನ್ನ ಬಂಧಿಸಿದ್ದು, ಬಳಿಕ ಜಾಮೀನಿನ ಮೇಲೆ ಬಿಡುಗಡೆ ಮಾಡಲಾಗಿದೆ ಎಂದು ತಿಳಿದು ಬಂದಿದೆ.

    ಆರೋಪಿಯನ್ನ ಜಾಮೀನಿನ ಮೇಲೆ ಬಿಡುಗಡೆ ಮಾಡುತ್ತಿದ್ದಂತೆ ವಿದ್ಯಾರ್ಥಿನಿಯರು ವಿಶ್ವವಿದ್ಯಾನಿಲಯದ ಅಧಿಕಾರಿಗಳು ಮತ್ತು ದೆಹಲಿ ಪೊಲೀಸ್ ವಿರುದ್ಧ ಪ್ರತಿಭಟನೆ ಮಾಡಿದ್ದಾರೆ. ಪ್ರತಿಭಟನೆಗೆ ಮಹಿಳಾ ಸಂಘಟನೆಗಳು ಕೂಡ ಸಾಥ್ ನೀಡಿದ್ದವು.

    ಪ್ರೊಫೆಸರ್ ಈ ರೀತಿಯ ಅಸಭ್ಯವಾಗಿ ವರ್ತಿಸುತ್ತಿರುವುದು ಇದೇ ಮೊದಲೇನಲ್ಲ. ದೆಹಲಿಯ ಜವಾಹರಲಾಲ್ ನೆಹರು ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕನೋರ್ವ ಈ ಹಿಂದೆ ವಿದ್ಯಾರ್ಥಿನಿಯರಿಗೆ ಲೈಂಗಿಕವಾಗಿ ಕಿರುಕುಳ ನೀಡುತ್ತಿದ್ದಾನೆ ಎಂಬ ಆರೋಪ ಕೇಳಿ ಬಂದಿರುವುದಾಗಿ ವರದಿಯಾಗಿತ್ತು.

  • ಅಭಿಮಾನಿಗಳಿಗೆ ಪತ್ರ ಬರೆದ ಬಾಹುಬಲಿ ಪ್ರಭಾಸ್

    ಅಭಿಮಾನಿಗಳಿಗೆ ಪತ್ರ ಬರೆದ ಬಾಹುಬಲಿ ಪ್ರಭಾಸ್

    ಹೈದರಾಬಾದ್: ಭಾರತೀಯ ಚಿತ್ರರಂಗವನ್ನು ಹೆಮ್ಮೆ ಪಡುವಂತೆ ಮಾಡಿದ್ದ ಬಹುಬಲಿ ಸಿನಿಮಾ ಭಾಗ ಎರಡು ಬಿಡುಗಡೆಯಾಗಿ ಎರಡು ವರ್ಷ ಪೂರ್ಣಗೊಂಡ ಹಿನ್ನೆಲೆಯಲ್ಲಿ ನಟ ಪ್ರಭಾಸ್ ಅಭಿಮಾನಿಗಳಿಗೆ ಫೇಸ್‍ಬುಕ್ ನಲ್ಲಿ ಧನ್ಯವಾದ ತಿಳಿಸಿದ್ದಾರೆ.

    ಕಳೆದ ವರ್ಷ ಏಪ್ರಿಲ್ 28 ರಂದು ಬಿಡುಗಡೆಯಾಗಿದ್ದ ಬಾಹುಬಲಿ-2 ಭಾರತದಲ್ಲಿ ಮಾತ್ರವಲ್ಲದೇ ವಿಶ್ವದ್ಯಾಂತ ಯಶ್ವಸಿ ಪ್ರದರ್ಶನಗೊಂಡು ಬಾಕ್ಸ್ ಆಫೀಸ್ ಗಳಿಕೆಯಲ್ಲಿ ದಾಖಲೆ ನಿರ್ಮಾಣ ಮಾಡಿತ್ತು.

    ಈ ಕುರಿತು ನಟ ಪ್ರಭಾಸ್ ಸಂತಸ ವ್ಯಕ್ತಪಡಿಸಿದ್ದು, “ಬಾಹುಬಲಿ ಚಿತ್ರ ಜರ್ನಿ ತನ್ನ ಜೀವನದಲ್ಲಿ ಅತ್ಯಂತ ಭಾವನಾತ್ಮಕವಾದದ್ದು. ಈ ಚಿತ್ರ ನೀಡಿದ ನಿರ್ದೇಶಕ ರಾಜಮೌಳಿ, ಚಿತ್ರ ತಂಡ ಹಾಗೂ ಯಶ್ವಸಿ ಬೆಂಬಲ ನೀಡಿದ ಅಭಿಮಾನಿಗಳಿಗೆ ಧನ್ಯವಾದ” ಎಂದು ತಿಳಿಸಿದ್ದಾರೆ.

    ಸದ್ಯಕ್ಕೆ ನಟ ಪ್ರಭಾಸ್ ನಿರ್ದೇಶಕ ಸುಜೇತ್ ಅವರ `ಸಹೋ’ ಚಿತ್ರದ ಚಿತ್ರೀಕರಣದಲ್ಲಿ ಬ್ಯುಸಿಯಾಗಿದ್ದಾರೆ. ಸಹೋ ಚಿತ್ರ ತೆಲುಗು, ತಮಿಳು ಸೇರಿದಂತೆ ಹಿಂದಿಯಲ್ಲೂ ಏಕಕಾಲದಲ್ಲಿ ನಿರ್ಮಾಣವಾಗುತ್ತಿದೆ. ಚಿತ್ರದಲ್ಲಿ ಬಾಲಿವುಡ್ ನ ಶ್ರದ್ಧಾ ಕಪೂರ್ ನಾಯಕಿಯಾಗಿ ನಟಿಸುತ್ತಿದ್ದಾರೆ.

  • ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಶಿವಣ್ಣ ಹೇಳಿದ್ದಕ್ಕೆ `I Love Your Eyes’ ಎಂದು ನಟಿಗೆ ಮೆಸೇಜ್ ಕಳುಹಿಸಿದ ನಟ ಶ್ರೀಮುರಳಿ

    ಬೆಂಗಳೂರು: ನಟ ಶ್ರೀಮುರಳಿ `ಮಫ್ತಿ’ ಸಿನಿಮಾದ ಯಶಸ್ವಿಯ ಖುಷಿಯಲ್ಲಿದ್ದು, ಇತ್ತೀಚೆಗೆ ಕಾರ್ಯಕ್ರಯವೊಂದರಲ್ಲಿ ಶಿವಣ್ಣ ಹೇಳಿದ್ದಕ್ಕೆ ಸ್ಯಾಂಡಲ್ ವುಡ್ ನಟಿಯೊಬ್ಬರಿಗೆ ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ ಎಂದು ಮೆಸೇಜ್ ಕಳುಹಿಸಿದ್ದಾರೆ.

    ಖಾಸಗಿ ವಾಹಿನಿಯಲ್ಲಿ ಪ್ರಸಾರವಾಗುವ `ನಂ.1 ಯಾರಿ ವಿತ್ ಶಿವಣ್ಣ’ ಕಾರ್ಯಕ್ರಮದಲ್ಲಿ ಭಾನುವಾರ ನಟ ಶ್ರೀಮುರಳಿ ಹಾಗೂ ನಿರ್ದೇಶಕ ನರ್ತನ್ ಅತಿಥಿಗಳಾಗಿ ಭಾಗವಹಿಸಿದ್ದರು. ಈ ಕಾರ್ಯಕ್ರಮದ ಮೊದಲ ಹಂತದಲ್ಲಿ (ಸತ್ಯನಾ.. ಧೈರ್ಯನಾ..) ಎಂಬ ಆಯ್ಕೆ ಇತ್ತು. ಅದರಲ್ಲಿ ಶ್ರೀಮುರಳಿ `ಧೈರ್ಯ’ ವನ್ನ ಆಯ್ಕೆ ಮಾಡಿಕೊಂಡಿದ್ದರು. ನಂತರ ಶಿವಣ್ಣ ನಿಮ್ಮ ಜೊತೆ ಅಭಿನಯಿಸಿದ ನಟಿಯರಲ್ಲಿ ಯಾವ ಹೀರೋಯಿನ್ ಕಣ್ಣು ನಿಮಗೆ ತುಂಬಾ ಇಷ್ಟ.? ಆ ಹೀರೋಯಿನ್ ಫೋನ್ ಗೆ `ಐ ಲವ್ ಯುವರ್ ಐಸ್’ ಎಂದು ಸಂದೇಶ ಕಳುಹಿಸಬೇಕು ಎಂದು ಹೇಳಿದ್ದಾರೆ.


    ಶಿವಣ್ಣ ಹೇಳಿದಂತೆ ಮುರಳಿ ಅವರು ಧೈರ್ಯವಾಗಿ “ಐ ಲವ್ ಯುವರ್ ಐಸ್” (ನಿಮ್ಮ ಕಣ್ಣುಗಳೆಂದರೆ ನನಗೆ ಇಷ್ಟ) ಎಂದು ನಟಿ ಮಾನ್ಯ ಅವರ ಫೋನ್ ನಂಬರ್ ಗೆ ಮೆಸೇಜ್ ಕಳುಹಿಸಿದ್ದು, ಕಾರ್ಯಕ್ರಮದಲ್ಲಿ ಶಿವಣ್ಣ ಕೊಟ್ಟ ಟಾಸ್ಕ್ ನ ಪೂರ್ಣಗೊಳಿಸಿದ್ದಾರೆ.

    ನಟಿ ಮಾನ್ಯ ಅವರು ಕನ್ನಡದಲ್ಲಿ ದರ್ಶನ್, ಶ್ರೀಮುರಳಿ ಮತ್ತು ಸಾಹಸ ಸಿಂಹ ಡಾ.ವಿಷ್ಣುವರ್ಧನ್ ಅವರ ಜೊತೆ ಅಭಿಯಿಸಿದ್ದಾರೆ. 2005 ರಲ್ಲಿ ತೆರೆಕಂಡ ದಿವಂಗತ ಡಾ.ವಿಷ್ಣುವರ್ಧನ್ ನಟನೆಯ `ವರ್ಷ’, ದರ್ಶನ್ ಅಭಿನಯದ `ಶಾಸ್ತ್ರಿ’ ಮತ್ತು ಶ್ರೀಮುರಳಿ ಅಭಿನಯದ `ಶಂಭು’ ಸಿನಿಮಾಗಳಲ್ಲಿ ನಾಯಕಿ ಆಗಿ ಅಭಿನಯಿಸಿದ್ದಾರೆ. ಮಾನ್ಯ ಅವರು ಸ್ಯಾಂಡಲ್ ವುಡ್ ಮಾತ್ರವಲ್ಲದೇ ಮಾಲಿವುಡ್, ಟಾಲಿವುಡ್ ಮತ್ತು ಕಾಲಿವುಡ್ ಅಭಿನಯಿಸಿದ್ದಾರೆ.

    ಸದ್ಯಕ್ಕೆ ನಟಿ ಮಾನ್ಯ ಮದುವೆಯಾಗಿ ಮಗುವಿನ ತಾಯಿಯಾಗಿ ವಿದೇಶದಲ್ಲಿ ನೆಲೆಸಿದ್ದಾರೆ. ಮಾನ್ಯ ಮತ್ತು ಶ್ರೀಮುರಳಿ ಇಬ್ಬರು ಮಾನ್ಯ ಒಳ್ಳೆಯ ಸ್ನೇಹಿತರು. ಅಷ್ಟೇ ಅಲ್ಲದೇ ಶ್ರೀಮುರಳಿ ಅವರ ಪತ್ನಿ ವಿದ್ಯಾ ಹಾಗೂ ಮಾನ್ಯ ಕೂಡ ಸ್ನೇಹಿತರಾಗಿದ್ದಾರೆ. ಇತ್ತೀಚೆಗಷ್ಟೇ ಶ್ರೀಮುರಳಿ ಪತ್ನಿ ವಿದ್ಯಾ ಅವರು ನ್ಯೂಯಾರ್ಕ್ ಗೆ ಹೋಗಿದ್ದಾಗ ಮಾನ್ಯ ಜೊತೆಗೆ ಸೆಲ್ಫಿ ಕ್ಲಿಕ್ಕಿಸಿಕೊಂಡಿದ್ದಾರೆ.

  • ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

    ಕೆಲವೇ ನಿಮಿಷದಲ್ಲಿ 5,55,55,555 ರೂ.ಗೆ ಒಡೆಯನಾದ ಪಿಯು ವಿದ್ಯಾರ್ಥಿ!

    ಲಕ್ನೋ: ಬ್ಯಾಂಕ್ ಮಾಡಿದ ಚಿಕ್ಕ ತಪ್ಪಿನಿಂದಾಗಿ ಪಿಯುಸಿ ಓದುತ್ತಿರುವ ಯುವಕ ಕೆಲವೇ ಕ್ಷಣದಲ್ಲಿ ಕೋಟ್ಯಾಧಿಪತಿ ಆದ ಘಟನೆ ಉತ್ತರ ಪ್ರದೇಶದ ಬಾರಾಬಂಕಿಯಲ್ಲಿ ನಡೆದಿದೆ.

    ಕೇಶವ್ ಶರ್ಮಾ ಪಿಯುಸಿ ಓದುತ್ತಿದ್ದು, ಬ್ಯಾಂಕ್ ಸಿಬ್ಬಂದಿ ಎಸಗಿದ ಚಿಕ್ಕ ತಪ್ಪಿನಿಂದಾಗಿ ಈತನ ಖಾತೆಯಲ್ಲಿ 5 ಕೋಟಿ ರೂ. ಗೂ ಹೆಚ್ಚು ಹಣ ಟ್ರಾನ್ಸ್ ಫರ್ ಆಗಿದೆ. ಟ್ರಾನ್ಸ್ ಫರ್ ಆದ ಬಳಿಕ ಬ್ಯಾಂಕ್ ಕಡೆಯಿಂದ ಕೇಶವ್ ಮೊಬೈಲಿಗೆ ಮೆಸೇಜ್ ಬಂದಿದೆ.

    ವರದಿಗಳ ಪ್ರಕಾರ ಬಾರಾಬಂಕಿನಲ್ಲಿರುವ ಅವಾಸ್ ವಿಕಾಸ್ ಕಲೋನಿಯ ನಿವಾಸಿ ಕೇಶವ್ ಶರ್ಮಾ ಅವರ ಎಸ್‍ಬಿಐ ಸೇವಿಂಗ್ಸ್ ಅಕೌಂಟ್‍ನಲ್ಲಿ ಹಣ ಜಮೆಯಾಗಿತ್ತು. ಮಾರ್ಚ್ 16ರಂದು ಕೇಶವ್ ಅವರ ತಂದೆಯ ಫೋನಿನಲ್ಲಿ ಬ್ಯಾಂಕ್ ಕಡೆಯವರಿಂದ ಮೆಸೇಜ್ ಬಂದಿದೆ. ಮೆಸೇಜ್ ನೋಡಿದ್ದಾಗ ತನ್ನ ಮಗ ಕೇಶವ್ ಖಾತೆಯಲ್ಲಿ 5,55,55,555 ರೂ. ಜಮೆ ಆಗಿತ್ತು.

    ಕೇಶವ್ ಮೊದಲು ಆ ಮೆಸೇಜ್ ನೋಡಿ ನಾನು ಕೋಟ್ಯಾಧಿಪತಿ ಹೇಗೆ ಆದೆ ಎಂಬುದು ಆತನಿಗೆ ನಂಬಲಿಕ್ಕೆ ಆಗಲಿಲ್ಲ. ಈ ಮೆಸೇಜ್ ನೋಡಿದ ಕೇಶವ್ ತಂದೆ ಕೂಡ ದಂಗಾಗಿದ್ದಾರೆ. ಆದರೆ ಇದರ ಬಗ್ಗೆ ಬ್ಯಾಂಕಿನವರು ಯಾವುದೇ ಪ್ರತಿಕ್ರಿಯೆ ನೀಡುತ್ತಿಲ್ಲ.

    ದೊಡ್ಡ ಮೊತ್ತ ಅಕೌಂಟ್‍ನಲ್ಲಿ ಜಮೆ ಆಗಿ ಕೆಲವೇ ನಿಮಿಷಗಳಲ್ಲಿ ಬ್ಯಾಂಕಿನವರಿಗೆ ಅವರ ತಪ್ಪು ಗೊತ್ತಾಗಿದೆ. ಜಮೆ ಆಗಿದ್ದ ಹಣದ ಜೊತೆ ಕೇಶವ್ ಖಾತೆಯಲ್ಲಿ ಮೊದಲು ಇದ್ದ ಹಣ ಕೂಡ ತೆಗೆದಿದ್ದಾರೆ ಎಂದು ವರದಿಯಾಗಿದೆ.

    ಕೇಶವ್ ತಂದೆ ಅವರ ಪ್ರಕಾರ ಖಾತೆಯಲ್ಲಿ ಮೊದಲೇ 1,50,000 ರೂ. ಇತ್ತು. ಆದರೆ ಈಗ ಕೋಟಿ ರೂ. ಜೊತೆ ಈ ಹಣವನ್ನು ತೆಗೆದ ಕಾರಣ ಕೇಶವ್ ಅವರ ತಂದೆ ಅಸಮಾಧಾನಗೊಂಡಿದ್ದಾರೆ.

  • ಪ್ರಿಯಕರನಿಗೆ ಮಿಸ್ಸಾಗಿ ಫೋಟೋ ಕಳ್ಸಿ ಆತ್ಮಹತ್ಯೆ ಮಾಡ್ಕೊಂಡ 17ರ ಯುವತಿ!

    ಪ್ರಿಯಕರನಿಗೆ ಮಿಸ್ಸಾಗಿ ಫೋಟೋ ಕಳ್ಸಿ ಆತ್ಮಹತ್ಯೆ ಮಾಡ್ಕೊಂಡ 17ರ ಯುವತಿ!

    ಇಂಗ್ಲೆಂಡ್: 17 ವರ್ಷದ ಯುವತಿಯೊಬ್ಬಳು ಆಕಸ್ಮಿಕವಾಗಿ ಆಕೆಯ ಪ್ರಿಯಕರನಿಗೆ ಫೋಟೋವೊಂದನ್ನು ಕಳುಹಿಸಿ, ಬಳಿಕ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇಂಗ್ಲೆಂಡ್‍ನಲ್ಲಿ ನಡೆದಿದೆ.

    ಷಾರ್ಲೆಟ್ ತನ್ನ ಮನೆಯ ಹೊರಗೆ ಇದ್ದ ಮರಕ್ಕೆ ನೇಣು ಬಿಗಿದುಕೊಂದು ಆತ್ಮಹತ್ಯೆ ಮಾಡಿಕೊಂಡ ಯುವತಿ. ಕಳೆದ ಎರಡು ವರ್ಷಗಳಿಂದ ಈಕೆ 20 ವರ್ಷದ ಜ್ಯಾಕ್ ಹಸ್ಟ್ರ ನನ್ನು ಪ್ರೀತಿಸುತ್ತಿದ್ದಳು. ನಂತರ ಅವರಿಬ್ಬರ ಸಂಬಂಧ ಕಡಿತಗೊಂಡಿತ್ತು.

    ಇತ್ತೀಚೆಗೆ ಆಕೆ ಬೇರೊಬ್ಬ ಸ್ನೇಹಿತನ ಜೊತೆ ಮಲಗಿದ್ದ ಫೋಟೋವನ್ನು ಅಕಸ್ಮತಾಗಿ ಜ್ಯಾಕ್ ಗೆ ಕಳುಹಿಸಿದ್ದಾಳೆ. ಬಳಿಕ ತನ್ನ ತಪ್ಪನ್ನು ಅರಿತುಕೊಂಡು ಕ್ಷಮೆಯನ್ನು ಕೇಳಿದ್ದಾಳೆ. ನಂತರ ಜ್ಯಾಕ್‍ಗೆ `ಗುಡ್ ಬೈ, ದಯವಿಟ್ಟು ನನ್ನನ್ನು ಕ್ಷಮಿಸಿ’ ಎಂದು ಮೆಸೇಜ್ ಕಳುಹಿಸಿದಳು. ನಂತರ ಮತ್ತೆ “ನಾನು ನಿನ್ನನ್ನು ಪ್ರೀತಿಸುತ್ತೇನೆ. ಆದರೆ ನೀನು ನನ್ನನ್ನು ದ್ವೇಷಿಸುತ್ತಿದ್ದಿಯಾ ಎಂದು ನನಗೆ ತಿಳಿದಿದೆ” ಎಂದು ಮರು ಮೆಸೇಜ್ ಕಳುಹಿಸಿ ಬಳಿಕ ಆತ್ಮಹತ್ಯೆಗೆ ಶರಣಾಗಿದ್ದಾಳೆ.

    ಷಾರ್ಲೆಟ್‍ಗೆ ನನ್ನ ಮೇಲೆ ನಂಬಿಕೆ ಇಲ್ಲ. ಆದ್ದರಿಂದ ಅವಳು ನನ್ನಿಂದ ದೂರವಾಗಲು ಬಯಸಿದ್ದಳು. ಕೆಲ ದಿನಗಳ ಹಿಂದೆಯಷ್ಟೇ ನನಗೆ ಕರೆ ಮಾಡುತ್ತಿದ್ದಳು ಮತ್ತು ಕೋಪದಿಂದ ನಾನು ಮಾಡಿದ ಮೆಸೇಜ್‍ಗೆ ಉತ್ತರಿಸುತ್ತಿದ್ದಳು. ಯಾರೋ ನನ್ನ ಬಗ್ಗೆ ಅವಳಿಗೆ ಕೆಟ್ಟದಾಗಿ ಹೇಳಿರಬಹುದು. ಆಕೆಗೆ ನನ್ನ ಜಗತ್ತು ಸರಿಹೊಂದುವುದಿಲ್ಲ ಮತ್ತು ಅವಳು ಎಂದಿಗೂ ನನ್ನ ಬಳಿ ಬರುವುದಿಲ್ಲ ಎಂದು ಭಾವಿಸಿದ್ದೆ ಎಂದು ಆಕೆಯೆ ಗೆಳೆಯ ಜ್ಯಾಕ್ ಹೇಳಿದ್ದಾರೆ.

    ಘಟನೆಗೂ ಸ್ವಲ್ಪ ದಿನದ ಮೊದಲು ಆಕೆ ಕಾಲೇಜಿಗೆ ಹೋಗಲಾರಂಭಿಸಿದ್ದಾಳೆ. ಅಲ್ಲಿ ಹೊಸ ಸ್ನೇಹಿತರನ್ನು ಭೇಟಿ ಮಾಡಿ ಮಾಡಿಕೊಂಡು ಸಂತೋಷದಿಂದ ಇದ್ದಳು. ಆತ್ಮಹತ್ಯೆ ಮಾಡಿಕೊಳ್ಳುವ ಎರಡು ದಿನಗಳ ಹಿಂದೆ ಆಕೆ ತನ್ನ ಸ್ನೇಹಿತರೊಂದಿಗೆ ಹೊರ ಹೋಗಿದ್ದಳು. ಆದರೆ ಈ ವಿಚಾರವನ್ನು ಮರುದಿನ ನನ್ನ ಬಳಿ ಪ್ರಸ್ತಾಪಿಸಿದ್ದು, ಆ ರಾತ್ರಿ ನಾನು ಬೇರೊಬ್ಬನಿಗೆ ಕಿಸ್ ಮಾಡಿದ್ದೆ ಎಂದು ಹೇಳಿದ್ದಳು ಎಂದು ಜ್ಯಾಕ್ ವಿವರಿಸಿದ್ದಾರೆ.

    ಷಾರ್ಲೆಟ್ ಜ್ಯಾಕ್ ಜೊತೆ ಈ ವಿಚಾರದ ಬಗ್ಗೆ ಮಾತನಾಡಲು ಬಯಸಿದ್ದಳು. ಆದರೆ ಜ್ಯಾಕ್ ಬ್ಯುಸಿಯಾಗಿದ್ದ. ಮತ್ತೆ ಅವಳು ಬೇರೊಬ್ಬನ ಜೊತೆ ಮಲಗಿದ್ದ ಫೋಟೋ ಕಳುಹಿಸಿದ್ದಾಳೆ. ಆದರೂ ಜ್ಯಾಕ್ ಯಾವುದೇ ಪ್ರತಿಕ್ರಿಯೆ ಮಾಡಿಲ್ಲ. ಕೊನೆಗೆ ಸರಿ ನಾನು ಉತ್ತರ ಪಡೆದಿದ್ದೇನೆ ಎಂದು ಮೆಸೇಜ್ ಮಾಡಿದ್ದಾಳೆ. ತಕ್ಷಣ ಜ್ಯಾಕ್ ಅವಳಿಗೆ ಕರೆ ಮಾಡಲು ಪ್ರಯತ್ನಿಸಿದನು. ಆದರೆ ಅವಳು ಯಾವುದೇ ಪ್ರತಿಕ್ರಿಯೆ ಮಾಡಲಿಲ್ಲ. ನಂತರ ಜ್ಯಾಕ್ ಪೊಲೀಸರಿಗೆ ಮಾಹಿತಿ ನೀಡಿ ಅವರ ಜೊತೆ ಅವಳ ಮನೆಗೆ ಹೋಗಿದ್ದಾನೆ. ಆದರೆ ಅಷ್ಟರಲ್ಲಿ ಅವಳು ಆತ್ಮಹತ್ಯೆಗೆ ಶರಣಾಗಿದ್ದಳು ಎಂಬುದಾಗಿ ವರದಿಯಾಗಿದೆ.

    ಷಾರ್ಲೆಟ್ ಮರಣೋತ್ತರ ಪರೀಕ್ಷೆಯ ಬಳಿಕ ಆಕೆ ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಮದ್ಯಪಾನ ಮಾಡಿದ್ದಳು ಎಂದು ಪೊಲೀಸರು ತಿಳಿಸಿದ್ದಾರೆ.

  • ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಅನ್ಯ ಧರ್ಮದ ಯುವಕರ ಜೊತೆ ಕಾಣಿಸಿಕೊಂಡರೆ ಧರ್ಮದೇಟು ಗ್ಯಾರಂಟಿ-ವಾರ್ನಿಂಗ್ ಮೆಸೇಜ್ ವೈರಲ್

    ಚಿಕ್ಕಮಗಳೂರು: ಧನ್ಯಶ್ರೀ ಆತ್ಮಹತ್ಯೆಯ ಬೆನ್ನಲ್ಲೆ ಸಾಮಾಜಿಕ ಜಾಲತಾಣಗಳಲ್ಲಿ ಬಜರಂಗದಳದ ಕಾರ್ಯಕರ್ತರು ಹರಿಬಿಟ್ಟಿರುವ ಎಚ್ಚರಿಕೆ ಮೆಸೇಜ್‍ಗಳು ಮೂಡಿಗೆರೆ ನಗರದಲ್ಲಿ ವೈರಲ್ ಆಗುತ್ತಿವೆ.

    ಅನ್ಯ ಧರ್ಮದ ಯುವಕರೊಂದಿಗೆ ಸಾರ್ವಜನಿಕರ ಜೊತೆ ಕಾಣಿಸಿಕೊಂಡರ ಧರ್ಮದೇಟು ಬೀಳೋದು ಗ್ಯಾರಂಟಿ ಎಂಬ ಎಚ್ಚರಿಕೆಯ ಸಂದೇಶಗಳು ವಾಟ್ಸಪ್ ಸೇರಿದಂತೆ ಇತರೆ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.

    ಮೆಸೇಜ್‍ನಲ್ಲಿ ಏನಿದೆ?: ಮೂಡಿಗೆರೆ ನಗರದ ಆಸುಪಾಸಿನ ಎಲ್ಲಾ ಹುಡುಗಿಯರಿಗೆ ಕೊನೆಯ ಎಚ್ಚರಿಕೆ ಸಂದೇಶ ನೀಡುತ್ತಿದ್ದೇವೆ. ಕಾಲೆಜಿನಲ್ಲಿ ತನ್ನ ಸಹಪಾಠಿ ಎಂಬ ಸಲುಗೆಯಿಂದ ಅನ್ಯಧರ್ಮದ ಯುವಕರೊಂದಿಗೆ ಚಕ್ಕಂದವಾಡುತ್ತಿರುವುದು ಎಲ್ಲೇ ಕಂಡರು ಅಲ್ಲಿ ನಿಮ್ಮ ಮಾತಿಗೆ ಅವಕಾಶ ಕೊಡದೇ ಧರ್ಮದೇಟು ಗ್ಯಾರಂಟಿ. ನಮಗೆ ಹಿಂದೂ ಧರ್ಮ ಮುಖ್ಯ ಧರ್ಮವನ್ನು ರಕ್ಷಣೆ ಮಾಡುವುದು ನಮ್ಮೆಲ್ಲರ ಕರ್ತವ್ಯ.
    #ಧರ್ಮೋ ರಕ್ಷತಿ ರಕ್ಷಿತಃ#
    * ಮೂಡಿಗೆರೆ ಬಜರಂಗದಳ

    ಬೇರೆಯವರಿಗೆ ಹೇಳಲು ಇವರು ಯಾರು?
    ಬೇರೆ ಮನೆಯ ಯುವತಿಯರಿಗೆ ಬೆದರಿಕೆ ಹಾಕುವುದು ತಪ್ಪಾಗುತ್ತದೆ. ಧನ್ಯಶ್ರೀ ಮನೆಗೆ ಬಂದ ಹಿಂದೂ ಯುವಕರ ಪೋಷಕರಿಗೆ ಬೆದರಿಕೆ ಹಾಕಿದ್ದಾರೆ. ಇದ್ರಿಂದ ಮನನೊಂದ ಧನ್ಯಶ್ರೀ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಹಿಂದೂ ಸಂಘಟನೆ ಪರೋಕ್ಷವಾಗಿ ಧನ್ಯಶ್ರೀ ಸಾವಿಗೆ ಕಾರಣವಾಗುತ್ತದೆ. ಧನ್ಯಶ್ರೀಗೆ ಐವರು ಬೆದರಿಕೆ ಹಾಕಿದೆ ಎಂದು ಗೊತ್ತಿದ್ದರೂ, ಮೂಡಿಗೆರೆ ಪೊಲೀಸರು ಒಬ್ಬನ ಹೆಸರನ್ನು ಮಾತ್ರ ಎಫ್‍ಐಆರ್ ನಲ್ಲಿ ದಾಖಲಿಸಿದ್ದಾರೆ. ಪೊಲೀಸರು ಉಳಿದ ಪ್ರಭಾವಿ ವ್ಯಕ್ತಿಗಳ ಹೆಸರನ್ನು ಮರೆಮಾಚುವ ಪ್ರಯತ್ನ ಮಾಡುತ್ತಿದ್ದಾರೆ. ಬುಧವಾರ ಬೆಳಗ್ಗೆ 11 ಗಂಟೆಗೆ ಈ ಬಗ್ಗೆ ನಗರದ ಆಜಾದ್ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ನಡೆಸಲಾಗುವುದು. ಬೆದರಿಕೆ ಹಾಕುತ್ತಿರುವ ತಮ್ಮ ಮನೆಯ ಹೆಣ್ಣು ಮಕ್ಕಳನ್ನು ನೋಡಿಕೊಳ್ಳಲಿ. ಬೇರೆಯವರ ಮನೆಯ ಹೆಣ್ಣು ಮಕ್ಕಳಿಗೆ ಹೇಳೋರು ಇವರ್ಯಾರು? ಮುಸ್ಲಿಂ ಸಮುದಾಯದ ಹಲವು ಯುವತಿಯರು ಹಿಂದೂ ಧರ್ಮದ ಯುವಕರನ್ನು ಮದ್ವೆಯಾಗಿ ಚೆನ್ನಾಗಿದ್ದಾರೆ. ನಾವುಗಳು ಅವರಿಗೆ ಯಾವುದೇ ಬೆದರಿಕೆಯನ್ನು ಹಾಕಿಲ್ಲ ಅಂತಾ ಕೋಮು ಸೌಹಾರ್ದ ವೇದಿಕೆಯ ನಾಯಕ ಗೌಸ್ ಮೊಹಿದ್ದೀನ್ ಪಬ್ಲಿಕ್ ಟಿವಿಗೆ ತಿಳಿಸಿದ್ದಾರೆ.

    ಈ ರೀತಿ ಮೆಸೇಜ್‍ಗಳು ಚಿಕ್ಕಮಗಳೂರು ಜಿಲ್ಲೆಯಾದ್ಯಂತ ವೈರಲ್ ಆಗುತ್ತಿವೆ. ಈ ಸಂದೇಶದ ಬಗ್ಗೆ ಎಸ್‍ಪಿ ಅಣ್ಣಾಮಲೈ ಗಮನಕ್ಕೂ ಬಂದಿದ್ದೂ, ಮೆಸೇಜ್‍ಗಳು ಎಲ್ಲಿಂದ ಮತ್ತು ಯಾರಿಂದ ಬರುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಇನ್ನೂ ಈ ಬಗ್ಗೆ ಯಾರು ವೈಯಕ್ತಿಕವಾಗಿ ದೂರು ದಾಖಲಿಸಿಲ್ಲ.

    https://youtu.be/bFv6ywT51-Y

  • ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಕ್ಯಾಲಿಫೋರ್ನಿಯಾ: ವಾಟ್ಸಪ್ ಗ್ರೂಪ್ ನಲ್ಲಿರುವ ಸದಸ್ಯನೊಬ್ಬ ಸಮಾಜದ ಸಾಮರಸ್ಯ ಕೆಡಿಸುವ, ವೈಯಕ್ತಿಕವಾಗಿ ನಿಂದಿಸುವ ಮೆಸೇಜ್ ಕಳುಹಿಸಿದ್ರೆ ಗ್ರೂಪ್ ಅಡ್ಮಿನ್ ಗಳು ಜೈಲಿಗೆ ಹೋಗಿರುವುದನ್ನು ನೀವು ಕೇಳಿರಬಹುದು. ಆದರೆ ಈಗ ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ನೀಡುವ ವಿಶೇಷತೆಯನ್ನು ಸೇರಿಸಲು ವಾಟ್ಸಪ್ ಮುಂದಾಗಿದೆ.

    ಹೌದು, ಫೇಸ್ ಬುಕ್ ಮಾಲೀಕತ್ವದ ವಾಟ್ಸಪ್ ನಲ್ಲಿ ಹೊಸ ಸೆಟ್ಟಿಂಗ್ಸ್ ‘ರಿಸ್ಟ್ರಿಕ್ಟೆಡ್ ಗ್ರೂಪ್ಸ್’ ನೀಡಲು ಮುಂದಾಗಿದೆ. ಈ ಹೊಸ ಸೆಟ್ಟಿಂಗ್ಸ್ ಆಯ್ಕೆ ಮಾಡಿದ್ರೆ ಆ ಗ್ರೂಪ್ ನಲ್ಲಿ ಅಡ್ಮಿನ್ ಬಿಟ್ಟು ಬೇರೆ ಸದಸ್ಯರು ಯಾವುದೇ ಮೆಸೇಜ್ ಕಳುಹಿಸಲು ಸಾಧ್ಯವಿಲ್ಲ.

    ಒಂದು ವೇಳೆ ಈ ಆಯ್ಕೆ ಮಾಡಿದರೆ ಅಡ್ಮಿನ್ ಕಳುಹಿಸಿದ ಮೆಸೇಜ್ ಗಳನ್ನು ಮೆಂಬರ್ ಗಳು ವೀಕ್ಷಿಸಬಹುದೇ ವಿನಾಃ ಅದಕ್ಕೆ ಪ್ರತಿಕ್ರಿಯೆ ನೀಡಲು ಸಾಧ್ಯವಿಲ್ಲ. ಒಂದು ವೇಳೆ ಸದಸ್ಯರು ಮೆಸೇಜ್ ಸೆಂಡ್ ಮಾಡಿದ್ರೂ ಅಡ್ಮಿನ್ ಅನುಮತಿ ಇಲ್ಲದೇ ಇದ್ದರೆ ಅದು ಯಾರಿಗೂ ಕಾಣಿಸುವುದಿಲ್ಲ.

    ಈ ಸುದ್ದಿ ಅಡ್ಮಿನ್ ಗಳಿಗೂ ಸಂತೋಷವಾದರೂ ಈಗಲೇ ಈ ಸೇವೆ ಬಳಕೆ ಸಿಗುವುದಿಲ್ಲ. ವಾಟ್ಸಪ್ ಬೀಟಾ ಆವೃತ್ತಿಯನ್ನು ಬಳಸುತ್ತಿರುವ ಮಂದಿಗೆ ಈ ವಿಶೇಷತೆ ಮೊದಲು ಲಭ್ಯವಾಗಲಿದೆ. ಬಳಿಕ ಎಲ್ಲ ಬಳಕೆದಾರರಿಗೆ ಇದು ಲಭ್ಯವಾಗಲಿದೆ. (ಇದನ್ನೂ ಓದಿ: ಕರ್ನಾಟಕದಲ್ಲಿ ಫಸ್ಟ್: ಅವಹೇಳನಕಾರಿ ಪೋಸ್ಟ್ ಪ್ರಕಟವಾಗಿದ್ದಕ್ಕೆ ವಾಟ್ಸಪ್ ಅಡ್ಮಿನ್ ಅರೆಸ್ಟ್ )

    ಫೇಸ್ ಬುಕ್ ಗ್ರೂಪ್ ನಲ್ಲಿ ಈಗಾಗಲೇ ಈ ವಿಶೇಷತೆ ಇದೆ. ಅಡ್ಮಿನ್ ಗಳು ಅನುಮೋದನೆ ಕೊಟ್ಟರೆ ಮಾತ್ರ ಆ ಗ್ರೂಪಿನಲ್ಲಿ ಪೋಸ್ಟ್ ಪ್ರಕಟವಾಗುತ್ತದೆ.

    ಕೆಲ ದಿನಗಳ ಹಿಂದೆ ವಾಟ್ಸಪ್ ಪಿಕ್ಚರ್ ಇನ್ ಪಿಕ್ಚರ್ (ಪಿಐಪಿ) ಮೋಡ್ ನೀಡಿತ್ತು. ಇದರಲ್ಲಿ ಬಳಕೆದಾರರಿಗೆ ವಾಟ್ಸಪ್ ನಲ್ಲಿ ಯೂ ಟ್ಯೂಬ್ ಲಿಂಕ್ ಬಂದಲ್ಲೇ ಪ್ರತ್ಯೇಕವಾಗಿ ಯೂಟ್ಯೂಬ್ ಆ್ಯಪ್/ ಬ್ರೌಸರ್ ನಲ್ಲಿ ಓಪನ್ ಆಗದೇ ಅಲ್ಲೇ ಪ್ಲೇ ಆಗುವ ವಿಶೇಷತೆಯನ್ನು ನೀಡಿತ್ತು. (ಇದನ್ನೂ ಓದಿ: ವಾಟ್ಸಪ್‍ನಲ್ಲಿ ಸ್ಮೈಲೀ ಕಳುಹಿಸಿದ್ರೆ ಬೀಳುತ್ತೆ ಕೇಸ್!  )

  • ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

    ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

    ನವದೆಹಲಿ: ಟ್ವಿಟ್ಟರ್, ಫೇಸ್‍ಬುಕ್ ನಲ್ಲಿ ನೀವು ಸೆಲೆಬ್ರಿಟಿ, ರಾಜಕೀಯ ಪಕ್ಷ, ಕಂಪೆನಿಗಳ ಅಧಿಕೃತ ಖಾತೆಗಳು ಇರುವುದನ್ನು ನೀವು ನೋಡಿರಬಹುದು. ಇನ್ನು ಮುಂದೆ ವಾಟ್ಸಪ್‍ನಲ್ಲೂ ಇದೇ ರೀತಿಯ ಅಧಿಕೃತ ಖಾತೆಗಳು ಇರಲಿದೆ.

    ಹೌದು. ಬಿಸಿನೆಸ್ ಪೇಜ್ ಹೊಂದಿರುವ ಮಂದಿಗೆ ಹೊಸ ವಿಶೇಷತೆ ಸೇರಿಸಲು ವಾಟ್ಸಪ್ ಪರೀಕ್ಷೆ ನಡೆಸುತ್ತಿದ್ದು, ಅಧಿಕೃತ ವಾಟ್ಸಪ್ ನಂಬರ್ ಹೊಂದಿರುವ ಬಳಕೆದಾರಿಗೆ ಟಿಕ್ ಮಾರ್ಕ್ ನೀಡಲು ಮುಂದಾಗಿದೆ.

    ಬಿಸಿನೆಸ್ ಪೇಜ್ ಹೆಸರಿನ ಸಮೀಪವೇ ಹಸಿರು ಬಣ್ಣದ ಮಧ್ಯೆ ಬಿಳಿ ಟಿಕ್‍ಮಾರ್ಕ್ ಚಿಹ್ನೆಯನ್ನು ವಾಟ್ಸಪ್ ನೀಡಲಿದೆ. ಮೆಸೇಜ್ ಗಳು ಅಧಿಕೃತ ಪೇಜ್ ನಿಂದಲೇ ಬಂದಿದೆ ಎಂದು ಬಳಕೆದಾರರಿಗೆ ಗುರುತಿಸಲು ಚಾಟ್ ಮಾಡುವ ವೇಳೆ ಹಳದಿ ಬಣ್ಣದ ಮೆಸೇಜ್ ಬರುತ್ತದೆ ಮತ್ತು ಈ ಚಾಟ್ ಗಳನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ವಾಟ್ಸಪ್ ಹೇಳಿದೆ.

    ಒಂದು ವೇಳೆ ನಿಮ್ಮ ಫೋನಲ್ಲಿ ಮೊದಲೇ ಬಿಸೆನೆಸ್ ಪೇಜ್ ಗಳ ಫೋನ್ ನಂಬರ್ ಸೇವ್ ಆಗಿದ್ದರೆ, ಮೆಸೇಜ್ ನೀವು ಸೇವ್ ಮಾಡಿದ ಹೆಸರಿನಲ್ಲೇ ಬರುತ್ತದೆ ಎಂದು ತಿಳಿಸಿದೆ.

    ಈಗ ಇದು ಆರಂಭಿಕ ಹಂತದಲ್ಲಿದ್ದು, ವಾಟ್ಸಪ್ ಬೀಟಾದ ಆಂಡಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಪರೀಕ್ಷಾರ್ಥವಾಗಿ ಕೆಲ ಬುಸಿನೆಸ್ ಪೇಜ್ ಗಳಿಗೆ ಈ ವಿಶೇಷತೆ ನೀಡಿದ ಬಳಿಕ ಈ ಸೇವೆ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.

    ಯಾವುದೇ ಕಾರಣಕ್ಕೂ ನಾವು ಜಾಹೀರಾತುಗಳನ್ನು ಪ್ರಕಟಿಸಿ ಬಳಕೆದಾರರಿಗೆ ಕಿರಿಕಿರಿ ಮಾಡುವುದಿಲ್ಲ ಎಂದು ಹೇಳಿರುವ ವಾಟ್ಸಪ್ ಕೆಲ ವರ್ಷಗಳಿಂದ ಜಾಹೀರಾತು ಮೂಲಗಳನ್ನು ಹುಡುಕುತ್ತಿದೆ. ಹೀಗಾಗಿ ಈಗ ಹೊಸದಾಗಿ ಆರಂಭಿಸಲಿರುವ ಈ ಬಿಸಿನೆಸ್ ಸೇವೆ ಉಚಿತವೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

    ಇದನ್ನೂ ಓದಿ: ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ

  • ತಪ್ಪಾಗಿ ಬೇರೆಯವರಿಗೆ ಮೆಸೇಜ್ ಮಾಡಿದ್ರೆ ಡೋಂಟ್‍ವರಿ, ಇನ್ನು ಮುಂದೆ ರಿಕಾಲ್ ಮಾಡಬಹುದು!

    ತಪ್ಪಾಗಿ ಬೇರೆಯವರಿಗೆ ಮೆಸೇಜ್ ಮಾಡಿದ್ರೆ ಡೋಂಟ್‍ವರಿ, ಇನ್ನು ಮುಂದೆ ರಿಕಾಲ್ ಮಾಡಬಹುದು!

    ಕ್ಯಾಲಿಫೋರ್ನಿಯಾ: ಇನ್ನು ಮುಂದೆ ವಾಟ್ಸಪ್ ನಲ್ಲಿ ನಿಮ್ಮ ಆಪ್ತರಿಗೆ ಸೆಂಡ್ ಮಾಡಬೇಕಿದ್ದ ಮೆಸೇಜ್ ತಪ್ಪಾಗಿ ಬೇರೆಯವರಿಗೆ ಸೆಂಡ್ ಮಾಡಿದ್ರೆ ಚಿಂತೆ ಮಾಡಬೇಕಿಲ್ಲ. ಆ ಮೆಸೇಜನ್ನು ‘ರಿಕಾಲ್’ ಮಾಡಬಹುದು.

    ಫೇಸ್‍ಬುಕ್ ಮಾಲೀಕತ್ವದ ವಾಟ್ಸಪ್ ಈಗ ರಿಕಾಲ್ ವಿಶೇಷತೆಯನ್ನು ಸೇರಿಸಲು ಮುಂದಾಗುತ್ತಿದೆ ಎಂದು ವಾಟ್ಸಪ್ ಬೀಟಾಇನ್ಫೋ ತಾಣ ವರದಿ ಮಾಡಿದೆ.

    ಈ ರಿಕಾಲ್ ವಿಶೇಷತೆಯಲ್ಲಿ ಬಳಕೆದಾರರು ಮೆಸೇಜ್, ಫೋಟೋ, ವಿಡಿಯೋ, ಜಿಫ್ ಫೈಲ್, ಡಾಕ್ಯುಮೆಂಟ್ ಗಳನ್ನು ರಿಕಾಲ್ ಮಾಡಬಹುದು. ಮುಂದಿನ ವಾಟ್ಸಪ್ ಅಪ್‍ಡೇಟ್ ನಲ್ಲಿ ಈ ವಿಶೇಷತೆ ಬಳಕೆದಾರರಿಗೆ ಲಭ್ಯವಾಗಲಿದೆ.

    ವಿಶ್ವದ 120 ಕೋಟಿ ಸಕ್ರಿಯ ಬಳಕೆದಾರರ ಪೈಕಿ 2 ಕೋಟಿ ಸಕ್ರಿಯ ಬಳಕೆದಾರರು ಭಾರತದಲ್ಲಿದ್ದಾರೆ. ಕನ್ನಡ ಸೇರಿದಂತೆ ಭಾರತದ 10 ಭಾಷೆ ವಿಶ್ವದ ಒಟ್ಟು 50 ಭಾಷೆಗಳಲ್ಲಿ ವಾಟ್ಸಪ್ ಲಭ್ಯವಿದೆ.

  • ಇನ್ಮುಂದೆ ಬೆಂಗ್ಳೂರಲ್ಲಿ ಕರೆಂಟ್ ಯಾವಾಗ ಹೋಗುತ್ತೆ ಅಂತ ಮೊದಲೇ ಗೊತ್ತಾಗುತ್ತದೆ!

    ಬೆಂಗಳೂರು: ಇಷ್ಟು ದಿನ ವಿದ್ಯುತ್ ಯಾವಾಗ ಕಡಿತಗೊಳ್ಳುತ್ತೆ ಪುನಃ ಯಾವಾಗ ಬರುತ್ತೆ ಅನ್ನೋದು ನಮಗೆ ತಿಳಿತಾನೇ ಇರಲಿಲ್ಲ. ಆದ್ರೆ ಇನ್ಮುಂದೆ ಇದೇ ಟೈಂಗೆ ಕರೆಂಟ್ ಹೋಗುತ್ತೆ ಅನ್ನೋದು ಜನರಿಗೂ ಗೊತ್ತಾಗತ್ತೆ. ಈ ಮೂಲಕ ಬೆಸ್ಕಾಂ ಗ್ರಾಹಕರಿಗೆ ಇನ್ನಷ್ಟು ಹತ್ತಿರವಾಗ್ತಿದೆ.

    ಕೇವಲ ಗ್ರಾಮೀಣ ಪ್ರದೇಶ ಮಾತ್ರವಲ್ಲ. ಸಿಲಿಕಾನ್ ಸಿಟಿಯಲ್ಲೂ ವಿದ್ಯುತ್ ಸಮಸ್ಯೆ ಇದ್ದೇ ಇದೆ. ಯಾವ ಕ್ಷಣದಲ್ಲಿ ವಿದ್ಯುತ್ ಕಡಿತಗೊಳ್ಳುತ್ತೆ ಅನ್ನೋದು ಗೊತ್ತೇ ಆಗಲ್ಲ. ಈ ಟೈಮಲ್ಲಿ ಬೆಸ್ಕಾಂಗೆ ಜನರು ಹಿಡಿಶಾಪ ಹಾಕ್ತಾರೆ. ಹೀಗಾಗಿ ಇದಕ್ಕೆ ಪರಿಹಾರವೆಂಬಂತೆ ಬೆಸ್ಕಾಂ ವಿದ್ಯುತ್ ಪೂರೈಕೆ ಕಡಿತಗೊಳಿಸೋಕು ಮುನ್ನ ಗ್ರಾಹಕರ ಗಮನಕ್ಕೆ ತರಲು ಮುಂದಾಗಿದೆ. ಕರೆಂಟ್ ಇನ್ನೇನು ಹೋಗುತ್ತೆ ಅನ್ನೋಕೂ ಹತ್ತು ನಿಮಿಷಗಳ ಮೊದಲು ಗ್ರಾಹಕರ ಸೆಲ್ ಫೋನ್‍ಗೆ ಅಲರ್ಟ್ ಮೆಸೇಜ್ ಬರಲಿದೆ.

    ಈಗಾಗಲೇ ಬೆಸ್ಕಾಂ ಅಧಿಕಾರಿಗಳು ಗ್ರಾಹಕರ ಮೊಬೈಲ್ ನಂಬರ್ ಕಲೆಕ್ಟ್ ಮಾಡ್ತಿದ್ದಾರೆ. ಬೆಂಗಳೂರಿನಲ್ಲಿ ಒಟ್ಟು 40 ಲಕ್ಷ ಗ್ರಾಹಕರಿದ್ದು, ಈಗಾಗ್ಲೆ 30 ಲಕ್ಷ ಗ್ರಾಹಕರ ನಂಬರ್ ಸಂಗ್ರಹಿಲಾಗಿದೆ. ಕೇವಲ ನಗರ ಪ್ರದೇಶಕ್ಕೆ ಮಾತ್ರವಲ್ಲದೇ ಸಿಲಿಕಾನ್ ಸಿಟಿ ಮುತ್ತಮುತ್ತಲ ಹಳ್ಳಿಗಳ ಗ್ರಾಹಕರು ಕೂಡ ಇದರ ಉಪಯೋಗ ಪಡೆಯಬಹುದಾಗಿದೆ.

    ವಿದ್ಯುತ್ ಸಮಸ್ಯೆ ಬಗ್ಗೆ ಮುಂದಾಲೋಚಿಸಿರೋ ಬೆಸ್ಕಾಂ ಈ ಹೊಸ ಐಡಿಯಾವನ್ನ ಚಾಲನೆಗೆ ತರ್ತಿದೆ. ಈ ಮೂಲಕ ಗ್ರಾಹಕ ಸ್ನೇಹಿ ಆಗಲು ಹೊರಟಿದೆ.