Tag: ಮೆಸೇಜ್

  • ಒಂದು ಗಂಟೆಗೆ 2 ಲಕ್ಷ ಕೊಡುವೆ ಎಂದ ಕಾಮುಕನ ಚಳಿ ಬಿಡಿಸಿದ ನಟಿ!

    ಒಂದು ಗಂಟೆಗೆ 2 ಲಕ್ಷ ಕೊಡುವೆ ಎಂದ ಕಾಮುಕನ ಚಳಿ ಬಿಡಿಸಿದ ನಟಿ!

    ಬೆಂಗಳೂರು: ಸಾಮಾಜಿಕ ಜಾಲತಾಣಗಳಲ್ಲಿ ಕಾಮುಕರು ಅಸಭ್ಯವಾಗಿ ಮೆಸೇಜ್ ಮಾಡಿ ಲೈಂಗಿಕವಾಗಿ ಕಿರುಕುಳ ನೀಡುತ್ತಿರುತ್ತಾರೆ. ಇಲ್ಲೊಬ್ಬ ಕಾಮುಕ ಒಂದು ರಾತ್ರಿಗೆ 2 ಲಕ್ಷ ಹಣ ಕೊಡುವೆ ಎಂದು ನಟಿಗೆ ಕಿರುಕುಳ ನೀಡಿದ್ದಾನೆ.

    ಮಲಯಾಳಂ ನಟಿ ಗಾಯತ್ರಿ ಅರುಣ್ ಅವರಿಗೆ ರೋಹನ್ ಕುರಿಯಾಕೋಸ್ ಎಂಬಾತ ಫೇಸ್‍ಬುಕ್ ನಲ್ಲಿ ಅಸಭ್ಯವಾಗಿ ಮೆಸೇಜ್ ಮಾಡುವ ಮೂಲಕ ಕಿರುಕುಳ ನೀಡಿದ್ದಾನೆ. ಆದರೆ ನಟಿ ಕಾಮುಕನಿಗೆ ತಿರುಗೇಟು ಕೊಡುವ ಮೂಲಕ ಆತನ ಚಳಿ ಬಿಡಿಸಿದ್ದಾರೆ.

    ರೋಹನ್ ಕುರಿಯಾಕೋಸ್, “ಎರಡು ಲಕ್ಷ ರೂ. ಕೊಡುವೆ. ನನ್ನ ಜೊತೆ ಒಂದು ರಾತ್ರಿ ಬರುತ್ತೀಯಾ. ಆದರೆ ಈ ವಿಚಾರ ನಮ್ಮಿಬ್ಬರ ನಡುವೆಯೇ ಇರಲಿದೆ. ಕೇವಲ ಒಂದು ಗಂಟೆಗೆ ಎರಡು ಲಕ್ಷ ಕೊಡುವೆ” ಎಂದು ನಟಿ ಗಾಯತ್ರಿ ಅರುಣ್ ಗೆ ಸಂದೇಶ ಕಳುಹಿಸಿದ್ದನು.

    ರೋಹನ್ ಕುರಿಯಾಕೋಸ್ ಸಂದೇಶಕ್ಕೆ ಪ್ರತಿಕ್ರಿಯಿಸಿದ ನಟಿ, “ಮಿಸ್ಟರ್ ರೋಹನ್ ಕುರಿಯಾಕೋಸ್… ನಿನ್ನ ತಾಯಿ ಹಾಗೂ ಸಹೋದರಿಯ ಸುರಕ್ಷತೆ ಬಗ್ಗೆ ಪ್ರಾರ್ಥಿಸಿಕೊಳ್ಳಲು ಖಂಡಿತವಾಗಿ ನಾನು ನೆನಪಿಸಿಕೊಳ್ಳುವೆ” ಎಂದು ತಿರುಗೇಟು ಕೊಟ್ಟಿದ್ದಾರೆ.

    ನಟಿ ಗಾಯತ್ರಿ ಅರುಣ್ ಮಲಯಾಳಂ ನ ‘ಪರಸ್ಪರಂ’ ಧಾರಾವಾಹಿಯಲ್ಲಿ ಅಭಿನಯಿಸಿದ್ದು, ಜನಪ್ರಿಯತೆ ಗಳಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಪ್ರಿಯತಮನಿಗೆ 1.59 ಲಕ್ಷ ಮೆಸೇಜ್ ಕಳುಹಿಸಿ ಅರೆಸ್ಟ್ ಆದ್ಳು..!

    ಪ್ರಿಯತಮನಿಗೆ 1.59 ಲಕ್ಷ ಮೆಸೇಜ್ ಕಳುಹಿಸಿ ಅರೆಸ್ಟ್ ಆದ್ಳು..!

    ವಾಷಿಂಗ್ಟನ್: ಸಾಮಾನ್ಯವಾಗಿ ಪ್ರೇಮಿಗಳ ಮಧ್ಯೆ ಜಗಳವಾದರೆ ಕೆಲವು ಮೆಸೇಜ್ ಮಾಡಿ ಅಥವಾ ಕರೆ ಮಾಡಿ ಮಾತನಾಡಿ ಸರಿ ಮಾಡಿಕೊಳ್ಳುತ್ತಾರೆ. ಆದರೆ ಇಲ್ಲೊಬ್ಬ ಮಹಿಳೆ ಪ್ರಿಯತಮನಿಗೆ ಬರೋಬ್ಬರಿ 1.59 ಲಕ್ಷ ಮೆಸೇಜ್ ಗಳನ್ನು ಕಳುಹಿಸಿದ್ದಾಳೆ.

    ಈ ಘಟನೆ ಅಮೆರಿಕದ ಅರಿಜೋನಾ ರಾಜ್ಯದಲ್ಲಿ ನಡೆದಿದ್ದು, 31 ವರ್ಷದ ಜಾಕ್ವೆಲಿನ್ ಅಡೆಸ್ ಎಂಬಾಕೆ ಪ್ರಿಯತಮನಿಗೆ 1.59 ಲಕ್ಷ ಮೆಸೇಜ್ ಮಾಡಿದ್ದಾಳೆ. ಈಕೆ ತನ್ನ ಪ್ರೀತಿ ಪ್ರಸ್ತಾಪವನ್ನು ತಿರಸ್ಕರಿಸಿದ ಕಾರಣಕ್ಕೆ 1.59 ಲಕ್ಷ ಮೆಸೇಜ್‍ಗಳನ್ನು ಕಳುಹಿಸಿದ್ದಾಳೆ. ಸದ್ಯಕ್ಕೆ ಪೊಲೀಸರು ಜಾಕ್ವೆಲಿನ್ ಅಡೆಸ್ ನನ್ನು ಬಂಧಿಸಿದ್ದಾರೆ.

    ಜಾಕ್ವೆಲಿನ್ ಅಡೆಸ್ ಅಷ್ಟಕ್ಕೆ ಸುಮ್ಮನಾಗದೇ ಅನೇಕ ಬಾರಿ ಪ್ರಿಯತಮನ ಮನೆಗೆ ನುಗ್ಗಿ ಆತನ ಬಾತ್ ರೂಮ್ ಕೂಡ ಬಳಸಿ ಬಂದಿದ್ದಳಂತೆ ಎಂದು ವರದಿಯಾಗಿದೆ. ಬಳಿಕ ಪ್ರಿಯತಮ ಪೊಲೀಸ್ರಿಗೆ ದೂರು ಕೊಟ್ಟಿದ್ದಾನೆ. ಆತನ ದೂರಿನ ಆಧಾರದ ಮೇರೆಗೆ ಪೊಲೀಸರು ಪೋನಿಕ್ಸ್ ನಲ್ಲಿರುವ ಆಕೆಯ ಮನೆಯಲ್ಲಿಯೇ ಬಂಧಿಸಿದ್ದಾರೆ. ಈ ವೇಳೆ ಆಕೆಯ ಕಾರಿನಲ್ಲಿ ಚಾಕು ಪತ್ತೆಯಾಗಿದ್ದು, ಅದನ್ನು ವಶಪಡಿಸಿಕೊಂಡಿದ್ದಾರೆ.

    ಅಂದಹಾಗೆ ಜಾಕ್ವೆಲಿನ್ ಅಡೆಸ್ ವೃತ್ತಿಯಲ್ಲಿ ಬ್ಯೂಟಿಷಿಯನ್ ಆಗಿದ್ದು, ಫ್ಲೋರಿಡಾದಿಂದ ಉದ್ಯೋಗಕ್ಕಾಗಿ ಪೋನಿಕ್ಸ್ ಗೆ ಬಂದಿದ್ದಳು. ಪ್ರಿಯತಮ ಸ್ಕಿನ್‍ಕೇರ್ ಪ್ರಾಡಕ್ಟ್ಸ್ ಕಂಪನಿಯ ಸಿಇಒ ಆಗಿದ್ದನು. ಇವರಿಬ್ಬರು ಡೇಟಿಂಗ್ ಸೈಟ್ ಮೂಲಕ ಭೇಟಿಯಾಗಿದ್ದು, ಒಮ್ಮೆ ಇಬ್ಬರೂ ಕೂಡ ಡೇಟ್ ಮಾಡಿದ್ದಾರೆ. ಬಳಿಕ ಜಾಕ್ವೆಲಿನ್ ಅಡೆಸ್ ಮತ್ತೆ ಆತನನ್ನು ಡೇಟ್‍ಗೆ ಕರೆದಿದ್ದಾಳೆ. ಆದರೆ ಆತನಿಗೆ ಜಾಕ್ವೆಲಿನ್ ಅಡೆಸ್ ಜೊತೆಗೆ ಹೋಗಲು ಇಷ್ಟವಿರಲಿಲ್ಲ. ಆದ್ದರಿಂದ ಆಕೆಯೊಂದಿಗೆ ಡೇಟಿಂಗ್ ಹೋಗಲು ನಿರಾಕರಿಸಿದ್ದಾನೆ.

    ಇದರಿಂದ ಕೋಪಗೊಂಡ ಜಾಕ್ವೆಲಿನ್ ಅಡೆಸ್ ಈ ರೀತಿಯಾಗಿ ಲಕ್ಷಗಟ್ಟಲೆ ಮೆಸೇಜ್ ಮಾಡಿದ್ದಾಳೆ. ಜಾಕ್ವೆಲಿನ್ ಅಡೆಸ್ ಮೆಸೇಜ್ ಗಳಲ್ಲಿ ಅನೇಕ ಕೋರಿಕೆಗಳಿದ್ದವು, ಜೊತೆಗೆ ಕೆಲವು ಎಚ್ಚರಿಕೆಗಳು ಮತ್ತು ಬೆದರಿಕೆ ಸಂದೇಶಗಳು ಕೂಡ ಇದ್ದವು.

    “ನೀನಿಲ್ಲಿಗೆ ಬರಲು ಅದೇನು ಬೇಕಾದರೂ ಮಾಡು, ಆದರೆ ನನ್ನನ್ನು ಬಿಟ್ಟಿರಲು ಪ್ರಯತ್ನಿಸಬೇಡ, ನಾನು ನಿನ್ನನ್ನು ಕೊಲೆ ಮಾಡುತ್ತೇನೆ. ಆದರೆ ನನಗೆ ಕೊಲೆಗಾರ್ತಿಯಾಗಲು ಇಷ್ಟವಿಲ್ಲ” ಎಂದೆಲ್ಲ ವಿಚಿತ್ರ ಸಂದೇಶ ಕಳುಹಿಸಿದ್ದಾಳೆ. ಈಗ ಇದೇ ಕಾರಣಕ್ಕೆ ಪೊಲೀಸರು ಈಕೆಯನ್ನು ಬಂಧಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ – ವಿದ್ಯಾರ್ಥಿಗಳಿಗೆ ವಿಂಗ್ ಕಮಾಂಡರ್​ನಿಂದ ಪೋಲಿ ಮೆಸೇಜ್

    – ಆ ವಿದ್ಯಾರ್ಥಿನಿಗೆ 5 ತಿಂಗಳಲ್ಲಿ ಮಾಡಿದ್ದು ಬರೋಬ್ಬರಿ 900 ಮೆಸೇಜ್
    – ಪೈಲೆಟ್ ಆಗೋ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡೋ ಕಾಮುಕ

    ಬೆಂಗಳೂರು: ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿರುವ ಮಾಜಿ ವಿಂಗ್ ಕಮಾಂಡರ್ ಅಮರ್ಜಿತ್ ಸಿಂಗ್ ಮೇಲೆ ಲೈಂಗಿಕ ಕಿರುಕುಳದ ಆರೋಪ ಕೇಳಿ ಬಂದಿದೆ.

    ಅಮರ್ಜಿತ್ ಜಕ್ಕೂರು ವೈಮಾನಿಕ ತರಬೇತಿ ಕೇಂದ್ರದಲ್ಲಿ ತರಬೇತುದಾರರಾಗಿದ್ದು, ಪೈಲೆಟ್ ಆಗುವ ಕನಸು ಹೊತ್ತ ಹೆಣ್ಣುಮಕ್ಕಳ ಬಾಳುಹಾಳು ಮಾಡುತ್ತಿದ್ದಾರೆ ಎಂದ ನೊಂದ ವಿದ್ಯಾರ್ಥಿಗಳು ಆರೋಪಿಸಿದ್ದಾರೆ. ವಿದ್ಯಾರ್ಥಿನಿಗಳಿಗೆ ಮಂಚಕ್ಕೆ ಬಾರೇ ರೊಮ್ಯಾನ್ಸ್ ಮಾಡೋಣ ಎಂದು ಹೇಳಿ ಬೆಡ್ ರೂಂ ಫೋಟೋ ಕಳುಹಿಸಿ ಕಿರುಕುಳ ನೀಡುತ್ತಿದ್ದಾರೆ ಎನ್ನುವ ಆರೋಪ ಅಮರ್ಜಿತ್ ಸಿಂಗ್ ಮೇಲೆ ಬಂದಿದೆ.

    ಸ್ಟೂಡೆಂಟ್ಸ್ ನ್ನು ಮಂಚಕ್ಕೆ ಬಾರೇ ಎಂದು ಕರೆದು ಬೆಡ್ ರೂಂ ಫೋಟೋ ಕಳುಹಿಸುತ್ತಾರೆ. ಅಲ್ಲದೇ ವಿದ್ಯಾರ್ಥಿನಿಗೆ ಐದು ತಿಂಗಳಲ್ಲಿ ಬರೋಬ್ಬರಿ 900 ಮೆಸೇಜ್ ಮಾಡಿದ್ದಾರೆ. ಅಮರ್ಜಿತ್ ವಿದ್ಯಾರ್ಥಿನಿಯರಿಗೆ ಕಳುಹಿಸಿರುವ ಪೋಲಿ ವಾಟ್ಸಪ್ ಮಸೇಜ್ ಗಳ ಸ್ಕ್ರೀನ್ ಶಾಟ್ಸ್ ಪಬ್ಲಿಕ್ ಟಿವಿಗೆ ಲಭ್ಯವಾಗಿದೆ.

    ಲೈಂಗಿಕ ಕಿರುಕುಳ ಆರೋಪ ಅಮರ್‍ಜಿತ್ ಮೇಲೆ ಬರುತ್ತಿರುವುದು ಇದೇ ಮೊದಲಲ್ಲ. ವಿದ್ಯಾರ್ಥಿಗಳು 2017ರಲ್ಲಿ ದೂರು ಕೊಡುತ್ತಿದ್ದಂತೆ ಅಮರ್‍ಜಿತ್ ರಾಜೀನಾಮೆಯನ್ನು ಕೂಡ ಕೊಟ್ಟಿದ್ದರು. ಆದರೆ ಅಮರ್‍ಜಿತ್ ಮೇಲೆ ಕೈ ಮುಖಂಡ, ಕ್ರೀಡಾ ಸಚಿವ ಪ್ರಮೋದ್ ಮಧ್ವರಾಜ್ ಕೃಪಾಕಟಾಕ್ಷವಿದ್ದು ರಾಜೀನಾಮೆ ನೀಡುವುದು ಬೇಡ ಎಂದು ಹೇಳಿದ್ದರಂತೆ. ಹೀಗಾಗಿ ಅಮಾನತು ಆಗಬೇಕಿದ್ದ ಅಮರ್ಜಿತ್ ರಾಜೀನಾಮೆ ನೀಡದೇ ಹುದ್ದೆಯಲ್ಲಿ ಮುಂದುವರಿದಿದ್ದಾರೆ.

    ಪ್ರಮೋದ್ ಮದ್ವರಾಜ್ ಬೆನ್ನಿಗೆ ನಿಲ್ಲುತ್ತಿದ್ದಂತೆ ಅಮರ್ಜಿತ್ ಹಿಡಿಯೋರೆ ಇರಲಿಲ್ಲ. ನವೆಂಬರ್ ನಲ್ಲಿ ಅಮರ್ಜಿತ್ ಗುತ್ತಿಗೆ ಅವಧಿ ಮುಗಿದರೂ ಮತ್ತೆ ಮುಂದುವರಿಸಲು ಸರ್ಕಾರ ಆದೇಶ ನೀಡಿದೆ. ತನ್ನ ವಿರುದ್ಧ ಮಾತನಾಡಿದ ಯುವತಿಯರಿಗೆ ಅಮರ್ಜಿತ್ ಸಿಂಗ್ ಗೇಟ್‍ಪಾಸ್ ನೀಡುತ್ತಿದ್ದ ವಿಚಾರ ತಿಳಿದು ಭಯಗೊಂಡು ವಿದ್ಯಾರ್ಥಿನಿಯರು ಸುಮ್ಮನಾಗುತ್ತಿದ್ದರು ಎನ್ನುವ ವಿಚಾರ ತಿಳಿದು ಬಂದಿದೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • `ತಾಯಿ ಜೊತೆ ಸೆಕ್ಸ್ ಆಗಿದೆ, ಈಗ ನಿನ್ನ ಸರದಿ, ನಿನ್ನನ್ನು ನಾನು ಟ್ರೈ ಮಾಡ್ಬೇಕು’

    `ತಾಯಿ ಜೊತೆ ಸೆಕ್ಸ್ ಆಗಿದೆ, ಈಗ ನಿನ್ನ ಸರದಿ, ನಿನ್ನನ್ನು ನಾನು ಟ್ರೈ ಮಾಡ್ಬೇಕು’

    – ಕಾಮುಕನ ವಿರುದ್ಧ ದೂರು ದಾಖಲಿಸಿಕೊಳ್ಳದ ಪೊಲೀಸರು
    – ಪೊಲೀಸರಿಂದ ನಂಬರ್ ಬದಲಾಯಿಸು ಎಂದು ಬಿಟ್ಟಿ ಸಲಹೆ

    ಬೆಂಗಳೂರು: ವಾಟ್ಸಪ್ ಮೂಲಕ ಯುವತಿಗೆ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ರವಾನಿಸುತ್ತಿದ್ದ ಯುವಕನ ವಿರುದ್ಧ ಕ್ರಮ ಕೈಗೊಳ್ಳಬೇಕಾದ ಪೊಲೀಸರು ಮೊಬೈಲ್ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ.

    ಲೈಂಗಿಕ ದೌರ್ಜನ್ಯ ದೂರು ಕೊಡಲು ಹೋದರೆ ಎಲೆಕ್ಟ್ರಾನಿಕ್ ಸಿಟಿ ಪೊಲೀಸರು ಪ್ರಕರಣ ದಾಖಲಿಸದೇ ಮೆಸೇಜ್ ಬಂದರೆ ನಿರ್ಲಕ್ಷ್ಯ ಮಾಡಿ ಅಥವಾ ನಂಬರ್ ಬದಲಾಯಿಸುವಂತೆ ಸಲಹೆ ನೀಡಿದ್ದಾರೆ. ಇದು ಬೆಂಗಳೂರು ಪೊಲೀಸರು ನೀಡುವ ನ್ಯಾಯದ ಪರಿಯೆಂದು ದೌರ್ಜನ್ಯಕ್ಕೆ ಒಳಗಾದ ಯುವತಿಯ ಪರವಾಗಿ ಸ್ನೇಹಿತೆಯೊಬ್ಬರು ಟ್ವೀಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.

    ಯುವತಿ ನಂಬರಿಗೆ ವೇಶ್ಯೆಯೆಂದು ಹಾಕಿ ಅಶ್ಲೀಲ ಸಂದೇಶ ಹಾಗೂ ಚಿತ್ರಗಳನ್ನು ಯುವಕರು ಹಾಕುತ್ತಿದ್ದರು. ಈ ಬಗ್ಗೆ ದೂರು ನೀಡಲು ಹೋದ ಯುವತಿಗೆ ಪೊಲೀಸರು ಇಂತಹ ಬಿಟ್ಟಿ ಸಲಹೆ ನೀಡಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿ ಸಾರ್ವಜನಿಕರು ಆಕ್ರೋಶ ಹೊರಹಾಕುತ್ತಿದ್ದಾರೆ.

    https://twitter.com/ChaudhuriPooja/status/1051747241528975360

    ಸ್ನೇಹಿತೆ ಹೇಳಿದ್ದು ಏನು?
    ನನಗೆ ಲೈಂಗಿಕ ದೌರ್ಜನ್ಯ ನೀಡುತ್ತಿದ್ದಾರೆ. ಅಲ್ಲದೇ ನಿನ್ನ ತಾಯಿಯ ಜೊತೆ ದೈಹಿಕ ಸಂಬಂಧ ಬೆಳೆಸಿದ್ದೇನೆ, ಈಗ ನಿನ್ನ ಸರದಿ. ನಿನ್ನನ್ನು ನಾನು ಟ್ರೈ ಮಾಡಬೇಕು ಎಂದು ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದಾರೆ ಅಂತಾ ಪೊಲೀಸರಿಗೆ ದೂರು ನೀಡಲು ಸ್ನೇಹಿತೆ ಹೋಗಿದ್ದಾಳೆ. ಈ ವೇಳೆ ಪೊಲೀಸರು ಆಕೆಯನ್ನು ಬೈದು ಫೋನ್ ನಂಬರ್ ಚೇಂಚ್ ಮಾಡು ಇಲ್ಲದಿದ್ದರೆ ಆ ಮೆಸೇಜ್ ನಿರ್ಲಕ್ಷ್ಯಿಸು ಎಂದು ಸಲಹೆ ನೀಡಿದ್ದಾರೆ.

    ಆ ವ್ಯಕ್ತಿ ನನ್ನ ಸ್ನೇಹಿತೆಯ ಸಹದ್ಯೋಗಿಗಳಿಗೂ ಇಂತಹ ಅಶ್ಲೀಲ ಮೆಸೇಜ್‍ಗಳನ್ನು ಮಾಡುತ್ತಾನೆ. ನಾನು ನನ್ನ ಸ್ನೇಹಿತೆಗೆ ಬಂದ ಮೆಸೇಜ್ ಸ್ಕ್ರೀನ್ ಶಾಟ್ ಹಾಕಿದ್ದೇನೆ. ಆಕೆಯ ಸುರಕ್ಷಿತೆಗಾಗಿ ನಾನು ಆಕೆಯ ಮುಖ ಹಾಗೂ ನಂಬರ್ ಅನ್ನು ಬ್ಲರ್ ಮಾಡಿದ್ದೇನೆ. ನನ್ನ ಸ್ನೇಹಿತೆ ಇದುವರೆಗೂ 60 ಫೋನ್ ನಂಬರ್ ಬ್ಲಾಕ್ ಮಾಡಿದ್ದಾಳೆ. ಕೆಲವರು ಫೇಕ್ ಐಡಿ ಕ್ರಿಯೇಟ್ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಆಕೆಗೆ ಬೆದರಿಕೆ ಹಾಕುತ್ತಾರೆ. ಈ ಪ್ರಕರಣವನ್ನು ನಿಲ್ಲಿಸುವುದ್ದಕ್ಕೆ ಆತ 40 ಸಾವಿರ ರೂ. ಬೇಡಿಕೆಯಿಟ್ಟಿದ್ದಾನೆ. ಸದ್ಯ ನನ್ನ ಸ್ನೇಹಿತೆ ಬ್ಲಾಕ್ ಮಾಡಿದ ಆ 60 ಫೋನ್ ನಂಬರ್ ಅನ್ನು ಪೊಲೀಸರಿಗೆ ನೀಡಿದ್ದಾಳೆ.

    ಸದ್ಯ ಬೆಂಗಳೂರು ಸಿಟಿ ಪೊಲೀಸರು ಸ್ನೇಹಿತೆಯ ಟ್ವೀಟ್ ಗೆ ರೀ-ಟ್ವೀಟ್ ಮಾಡಿ ಆ ಪೊಲೀಸ್ ಠಾಣೆಯ ಮಾಹಿತಿ ಕೇಳಿದ್ದಾರೆ. ಆಗ ಯುವತಿ ಎಲೆಕ್ಟ್ರಾನಿಕ್ ಪೊಲೀಸ್ ಠಾಣೆಯೆಂದು ಟ್ವೀಟ್ ಮಾಡಿ ಉತ್ತರಿಸಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ವಾಟ್ಸಪ್ ಗ್ರೂಪಿನಲ್ಲಿ ಹಾಯ್, ಬಾಯ್ ಸಂದೇಶ – ವಿದ್ಯಾರ್ಥಿಗಳನ್ನು ಬಸ್ಕಿ ಹೊಡೆಸಿದ ಪ್ರಾಧ್ಯಾಪಕರು

    ವಾಟ್ಸಪ್ ಗ್ರೂಪಿನಲ್ಲಿ ಹಾಯ್, ಬಾಯ್ ಸಂದೇಶ – ವಿದ್ಯಾರ್ಥಿಗಳನ್ನು ಬಸ್ಕಿ ಹೊಡೆಸಿದ ಪ್ರಾಧ್ಯಾಪಕರು

    ಕೋಲಾರ: ವಿದ್ಯಾರ್ಥಿಗಳು ಸಾಮಾಜಿಕ ಜಾಲತಾಣವಾದ ವಾಟ್ಸಪ್ ಗ್ರೂಪ್ ಮೂಲಕ ಹಾಯ್ ಮತ್ತು ಬಾಯ್ ಸಂದೇಶ ಕಳುಹಿಸಿದ್ದಕ್ಕೆ ಎನ್‍ಸಿಸಿ ಪ್ರಾಧ್ಯಾಪಕರೊಬ್ಬರು ಬಸ್ಕಿ ಹೊಡೆಸುವ ಮೂಲಕ ಶಿಕ್ಷೆ ಕೊಟ್ಟಿದ್ದಾರೆ.

    ಕೋಲಾರ ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಈ ರೀತಿಯ ಶಿಕ್ಷೆಯನ್ನು ವಿದ್ಯಾರ್ಥಿಗಳಿಗೆ ನೀಡಿದ್ದಾರೆ. ಎನ್‍ಸಿಸಿ ಪ್ರಾಧ್ಯಾಪಕ ಲಾರೆನ್ಸ್ ಅವರು ವಿದ್ಯಾರ್ಥಿಗಳಿಗೆ ಶಿಕ್ಷೆ ನೀಡಿದ್ದಾರೆ. ನಗರದ ಸರ್ಕಾರಿ ಬಾಲಕರ ಕಾಲೇಜಿನಲ್ಲಿ ಎನ್‍ಸಿಸಿಗೆ ಸೇರಿದ ವಿದ್ಯಾರ್ಥಿಗಳಿಗಾಗಿಯೇ ಒಂದು ವಾಟ್ಸಪ್ ಗ್ರೂಪ್ ಮಾಡಲಾಗಿತ್ತು. ಈ ಗ್ರೂಪಿನಲ್ಲಿ ಪ್ರಾಧ್ಯಾಪಕರಾದ ಲಾರೆನ್ಸ್ ಅಡ್ಮಿನ್ ಆಗಿದ್ದರು. ಅವರು ವಿದ್ಯಾರ್ಥಿಗಳಿಗೆ ಈ ಗ್ರೂಪಿನಲ್ಲಿ ಅನವಶ್ಯಕವಾಗಿ ಹಾಯ್, ಬಾಯ್, ಗುಡ್ ನೈಟ್, ಗುಡ್ ಮಾರ್ನಿಂಗ್ ಮತ್ತು ಫೋಟೋಗಳನ್ನು ಮಾಡಬಾರದು ಎಂದು ಎಚ್ಚರಿಕೆ ಕೊಟ್ಟಿದ್ದರು.

    ಪ್ರಾಧ್ಯಾಪಕರು ಎಚ್ಚರಿಕೆ ನೀಡಿದ್ದರೂ ವಿದ್ಯಾರ್ಥಿಗಳು ವಾಟ್ಸಪ್ ಗ್ರೂಪಿನಲ್ಲಿ ಅನವಶ್ಯಕವಾಗಿ ಹಾಯ್, ಬಾಯ್ ಮೆಸೇಜ್ ಮಾಡುತ್ತಿದ್ದರು. ಇದರಿಂದ ಕೋಪಗೊಂಡ ಪ್ರಾಧ್ಯಾಪಕರು ಇಂದು ಕಾಲೇಜಿಗೆ ಬಂದಾಗ ಯಾರು ಯಾರು ಅನವಶ್ಯಕ ಸಂದೇಶ ಮಾಡಿದ್ದರು ಅಂತಹವರನ್ನು ತರಗತಿ ಕೊಠಡಿಯಲ್ಲಿ ಹೊರ ಹಾಕಿ ಶಿಕ್ಷೆ ಕೊಟ್ಟಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv

  • ಅಶ್ಲೀಲ ಮೆಸೇಜ್ ಮಾಡ್ತಿದ್ದ ಯುವಕನಿಗೆ ಧರ್ಮದೇಟು

    ಅಶ್ಲೀಲ ಮೆಸೇಜ್ ಮಾಡ್ತಿದ್ದ ಯುವಕನಿಗೆ ಧರ್ಮದೇಟು

    ಬೆಂಗಳೂರು: ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದ ಯುವಕನಿಗೆ ಧರ್ಮದೇಟು ಬಿದ್ದ ಘಟನೆ ಬೆಂಗಳೂರಿನ ಬಸವೇಶ್ವರನಗರದಲ್ಲಿ ನಡೆದಿದೆ.

    ಮೈಸೂರು ಮೂಲದ ಸಿದ್ದು ಗೌಡ ಧರ್ಮದೇಟು ತಿಂದ ಯುವಕ. ಹೋಟೆಲ್ ಒಂದರಲ್ಲಿ ಕೆಲಸ ಮಾಡುತ್ತಿದ್ದ ಸಿದ್ದು, ಫೇಕ್ ಐಡಿ ಕ್ರಿಯೇಟ್ ಮಾಡಿ ಮಹಿಳೆಗೆ ಅಶ್ಲೀಲ ಮೆಸೇಜ್ ಮಾಡುತ್ತಿದ್ದನು. ಕಳೆದ ಆರು ತಿಂಗಳಿಂದ ನಿರಂತರವಾಗಿ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿದ್ದನು.

    ಇಂದು ಬಸವೇಶ್ವರನಗರಕ್ಕೆ ಯುವಕನನ್ನು ಕರೆಸಿ ಜನರು ಧರ್ಮದೇಟು ನೀಡಿದ್ದಾರೆ. ಸದ್ಯ ಕರ್ನಾಟಕ ನವ ನಿರ್ಮಾಣ ವೇದಿಕೆಯ ಕಾರ್ಯಕರ್ತರು ಯುವಕನನ್ನು ಪೊಲೀಸರಿಗೆ ಒಪ್ಪಿಸಿದ್ದಾರೆ. ಬಸವೇಶ್ವರನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿದೆ.

    ಉಡುಪಿ ಜಿಲ್ಲೆಯ ಕುಂದಾಪುರದ ಎಲ್‍ಐಸಿ ಕಾಲೋನಿಯ ಜಾವೇದ್ ಎಂಬಾತ ಪ್ರತಿ ದಿನ ಬೆಳಗ್ಗೆ ದಾರಿಯಲ್ಲಿ ಹೋಗುವ ಮಹಿಳೆಯರಿಗೆ ಚುಡಾಯಿಸುತ್ತಿದ್ದನು. ಸೀಟಿ ಹೊಡೆದು ಕಣ್ಸನ್ನೆ ಮಾಡುತ್ತಿದ್ದನು. ಕೆಲವರ ಬಳಿ ಫೋನ್ ನಂಬರ್ ಕೂಡ ಕೇಳುತ್ತಿದ್ದ. ಕೊನೆಗೆ ಜಾವೇದ್ ಕಿರುಕುಳದಿಂದ ಬೇಸತ್ತ ಮಹಿಳೆಯರು ಗುರುವಾರ ಆತನನ್ನು ನಗರದ ಮಧ್ಯೆ ಕಂಬಕ್ಕೆ ಕಟ್ಟಿ ಥಳಿಸಿ, ಕೊನೆಗೆ ಪೊಲೀಸರ ವಶಕ್ಕೆ ನೀಡಿದ್ದರು.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictvnews

  • ಆದಾಯ ತೆರಿಗೆ ಹೆಸರಲ್ಲಿ ಮೆಸೇಜ್ ಬಂದ್ರೆ ಎಚ್ಚರ!

    ಆದಾಯ ತೆರಿಗೆ ಹೆಸರಲ್ಲಿ ಮೆಸೇಜ್ ಬಂದ್ರೆ ಎಚ್ಚರ!

    ಬೆಂಗಳೂರು: ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ಏನಾದರೂ ಮೆಸೇಜ್ ಬಂದರೆ ಹುಷಾರಾಗಿರಿ. ಒಂದೇ ಒಂದು ಕ್ಷಣ ಯಾಮಾರಿದರೆ ನಿಮ್ಮ ಬ್ಯಾಂಕ್ ಖಾತೆಯಲ್ಲಿರುವ ಹಣ ಸಂಪೂರ್ಣ ಖಾಲಿ ಆಗಲಿದೆ.

    ಹೌದು. ಆದಾಯ ತೆರಿಗೆ ರೀಫಂಡ್ ಹೆಸರಲ್ಲಿ ಬಹುದೊಡ್ಡ ವಂಚನೆ ನಡೆಯುತ್ತಿದೆ. ನೂ ಮೂಡ್ ಆಥ್ ಬ್ಯಾಂಕ್ ಹೆಸರಿನಲ್ಲಿ ವಂಚಕರು ಜನರನ್ನು ವಂಚಿಸುತ್ತಿದ್ದಾರೆ. ಆದಾಯ ತೆರಿಗೆಯ ರೀಫಂಡ್ ಅಪ್ರವ್ಡೂ (Income tax refund approved) ಹೆಸರಿನ ಲಿಂಕಿನ ಮೇಸೆಜ್ ನಿಮ್ಮ ಮೊಬೈಲಿಗೆ ಬರುತ್ತದೆ. ಅಷ್ಟೇ ಅಲ್ಲದೇ ಆ ಲಿಂಕಿಗೆ ನಿಮ್ಮ ಬ್ಯಾಂಕಿನ ವಿವರಗಳನ್ನು ಹಾಕುವಂತೆ ಹೇಳುತ್ತಾರೆ.

     

    ಒಂದು ವೇಳೆ ನೀವು ಯಾಮಾರಿ ನಿಮ್ಮ ಬ್ಯಾಂಕಿನ ವಿವರಗಳನ್ನು ಹಾಕಿದರೆ ಲಿಂಕ್ ಒಪನ್ ಮಾಡುತ್ತಿದ್ದಂತೆ ನಿಮ್ಮ ಖಾತೆಯಿಂದ ದುಡ್ಡು ಕಟ್ ಆಗಿರುವ ಮೆಸೇಜ್ ಬರುತ್ತದೆ. ನಕಲಿ ಆದಾಯ ತೆರಿಗೆ ಮೆಸೇಜ್ ನಂಬಿ ಸಿಲಿಕಾನ್ ಸಿಟಿಯಲ್ಲಿ ಈಗಾಗಲೇ ಸಾಕಷ್ಟು ಮಂದಿ ಮೋಸ ಹೋಗುತ್ತಿದ್ದಾರೆ.

    ಮೋಸ ಹೋದವರು ಪೊಲೀಸರ ಮೊರೆ ಹೋಗುತ್ತಿದ್ದಾರೆ. ಈಗಾಗಲೇ ಸೈಬರ್ ಕ್ರೈಂ ಠಾಣೆಯಲ್ಲಿ ಈ ಬಗ್ಗೆ 10ಕ್ಕೂ ಹೆಚ್ಚು ಪ್ರಕರಣಗಳು ದಾಖಲಾಗಿದ್ದು, ಜನರು ಎಚ್ಚರಿಕೆಯಿಂದ ಇರುವಂತೆ ಪೊಲೀಸರು ಮನವಿ ಮಾಡಿದ್ದಾರೆ.

  • ಖಾಸಗಿ ಕಂಪೆನಿ ಎಂಡಿ ಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

    ಖಾಸಗಿ ಕಂಪೆನಿ ಎಂಡಿ ಯಿಂದ ಮಹಿಳೆಗೆ ಲೈಂಗಿಕ ಕಿರುಕುಳ

    ಬೆಂಗಳೂರು: ಕಂಪೆನಿಯೊಂದರಲ್ಲಿ ಕೆಲಸ ಮಾಡತ್ತಿದ್ದ ಮಹಿಳೆಗೆ ಕಂಪೆನಿಯ ಎಂಡಿ ಲೈಂಗಿಕ ಕಿರುಕುಳ ನೀಡುತ್ತಿದ್ದಾರೆ ಎಂದು ಅಶೋಕನಗರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ.

    ದೆಹಲಿ ಮೂಲದ ಲಾ ಕ್ಲಾಸಿ ಟ್ರಾನ್ಸ್ಲೇಷನ್ ಲಿಮಿಟೆಡ್‍ನ ಎಂಡಿ ಮನೋಹರ ರೋಷರ್ ಎಂಬವರು ತನಗೆ ಲೈಂಗಿಕ ಕಿರುಕುಳ ನೀಡಿದ್ದಾರೆಂದು ಮಹಿಳೆ ಆರೋಪಿಸಿದ್ದಾರೆ. ಮನೋಹರ್ ಮಹಿಳೆಗೆ ಆನ್ ಲೈನ್ ನಲ್ಲಿ ಕೆಲಸವೊಂದನ್ನು ಕೊಡಿಸಿದ್ದರು. ಮನೆಯಲ್ಲೇ ಕುಳಿತು ಮಹಿಳೆ ಆನ್ ಲೈನ್ ನಲ್ಲಿ ಕೆಲಸ ಮಾಡುತ್ತಿದ್ದರು.

    ಮನೋಹರ್ ಆ ಮಹಿಳೆಯ ದೂರವಾಣಿ ನಂಬರ್ ಪಡೆದು ಅಶ್ಲೀಲ ಮೆಸೇಜ್ ಗಳನ್ನು ಕಳಿಸುತ್ತಿದ್ದ. ಅಲ್ಲದೇ ಹೋಟೆಲ್ ಗೆ ಬರುವಂತೆ ವಾಟ್ಸಪ್ ಮೂಲಕ ಕಿರುಳ ನೀಡುತ್ತಿದ್ದ ಎಂದು ನೊಂದ ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

    ಮನನೊಂದ ಮಹಿಳೆ ಅಶೋಕನಗರ ಪೊಲೀಸ್ ಠಾಣೆಯಲ್ಲಿ ಮನೋಹರ ವಿರುದ್ಧ ಲೈಂಗಿಕ ದೌರ್ಜನ್ಯ ದೂರನ್ನು ದಾಖಲಿಸಿದ್ದಾರೆ. ಇತ್ತ ದೂರು ದಾಖಲಾಗುತ್ತಿದ್ದಂತೆ ಮನೋಹರ್ ಪರಾರಿಯಾಗಿದ್ದಾನೆ. ನಾಪತ್ತೆಯಾಗಿರುವ ಮನೋಹರ್‍ಗಾಗಿ ಪೊಲೀಸರು ಜಾಲ ಬೀಸಿದ್ದಾರೆ.

  • ಮತ್ತೊಮ್ಮೆ ಬಾಲಿವುಡ್ ನಟಿಯನ್ನು ಮಂಚಕ್ಕೆ ಕರೆದ ಕಿಡಿಗೇಡಿ!

    ಮತ್ತೊಮ್ಮೆ ಬಾಲಿವುಡ್ ನಟಿಯನ್ನು ಮಂಚಕ್ಕೆ ಕರೆದ ಕಿಡಿಗೇಡಿ!

    ಮುಂಬೈ: ಬಾಲಿವುಡ್ ನಟಿ ಹಾಗೂ ಮಾಡೆಲ್ ಸೋಫಿಯಾ ಹಯಾತ್‍ಗೆ ವ್ಯಕ್ತಿಯೊಬ್ಬ ಆಕೆಯ ರೇಟ್ ಕೇಳಿದ್ದಾನೆ. ಇದ್ದಕ್ಕೆ ಸೋಫಿಯಾ ಪ್ರತಿಕ್ರಿಯಿಸಿ ಆತನಿಗೆ ಖಡಕ್ ಉತ್ತರವನ್ನು ನೀಡಿದ್ದಾರೆ.

    ಸೋಫಿಯಾ ಯಾವಾಗಲೂ ಇನ್‍ಸ್ಟಾಗ್ರಾಂನಲ್ಲಿ ಸಕ್ರಿಯರಾಗಿರುತ್ತಾರೆ. ಆಗಾಗ ಫೋಟೋ, ವಿಡಿಯೋವನ್ನು ಹಾಕುತ್ತಿರುತ್ತಾರೆ. ಇತ್ತೀಚೆಗೆ ಸೋಫಿಯಾ ಇನ್‍ಸ್ಟಾಗ್ರಾಂನಲ್ಲಿ ಫೋಟೋ ಹಾಕಿದ್ದಾಗ ವ್ಯಕ್ತಿಯೋರ್ವ ನಟಿಗೆ ಮೆಸೇಜ್ ಮಾಡಿ ಒಂದು ರಾತ್ರಿಗೆ ನೀನು ಎಷ್ಟು ಹಣ ಪಡೆಯುತ್ತೀಯ? ಎಂದು ಕೇಳಿದ್ದಾನೆ.

    ವ್ಯಕ್ತಿಯ ಈ ಮೆಸೇಜ್ ನೋಡಿದ ಸೋಫಿಯಾ ಆ ಮೆಸೇಜ್‍ಗೆ ಪ್ರತಿಕ್ರಿಯಿಸಿದ್ದಾರೆ. “ಮೊದಲು ನೀನು ನಿನ್ನ ತಾಯಿ ಹತ್ತಿರ, ನಂತರ ನಿನ್ನ ಸಹೋದರಿ ಬಳಿಕ ನಿನ್ನ ಪತ್ನಿ ಹತ್ತಿರ ಅವರ ರೇಟ್ ಕೇಳು ಎಂದು ಖಡಕ್ ಉತ್ತರ ನೀಡಿ ಆ ವ್ಯಕ್ತಿ ಮಾಡಿದ ಮೆಸೇಜ್‍ನ ಸ್ಕ್ರೀನ್‍ಶಾಟ್ ತೆಗೆದು ತನ್ನ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿಕೊಂಡಿದ್ದಾರೆ.

     

    ಸೋಫಿಯಾ ಉತ್ತರ ಪಡೆದ ಬಳಿಕ ಆ ವ್ಯಕ್ತಿ ನನ್ನ ತಾಯಿ, ತಂಗಿ ಹಾಗೂ ಪತ್ನಿ ನಿನ್ನ ತರಹ ದೇಹ ತೋರಿಸುವುದಿಲ್ಲ ‘ಗೋ ಟು ಹೆಲ್’ ಎಂದು ಹೇಳಿದ್ದಾನೆ. ಆಗ ಸೋಫಿಯಾ ನೀನು ಹುಟ್ಟಿದಾಗ ನಿನ್ನ ತಾಯಿ ತನ್ನ ದೇಹ ಹಾಗೂ ಕಾಲುಗಳನ್ನು ತೋರಿಸಿದ್ದರು. ನೀನು ನಿನ್ನ ಮನಸ್ಸನ್ನು ಶುದ್ಧಿಗೊಳಿಸು. ನಿನಗೆ ರಂಜಾನ್ ಎಂದರೆ ಏನೇನು ಅಲ್ಲ ತಿರುಗೇಟು ನೀಡಿದ್ದಾರೆ.

    ಈ ಹಿಂದೆ ಮತ್ತೊಬ್ಬ ವ್ಯಕ್ತಿ ಸೋಫಿಯಾಗೆ ಒಂದು ರಾತ್ರಿ ಕಳೆಯಲು 20 ಲಕ್ಷ ರೂ. ಆಫರ್ ಮಾಡಿದ್ದನು. ಇದ್ದಕ್ಕೆ ಸೋಫಿಯಾ ಪ್ರತಿಕ್ರಿಯಿಸಿ ಆತನಿಗೆ ಖಡಕ್ ಉತ್ತರವನ್ನು ನೀಡಿದ್ದರು. ಅಲ್ಲದೇ ಆತ ಮೆಸೇಜ್ ಮಾಡಿದ ಆ ಸ್ಕ್ರೀನ್ ಶಾಟ್ ಅನ್ನು ಕೂಡ ಸೋಫಿಯಾ ತಮ್ಮ ಇನ್‍ಸ್ಟಾಗ್ರಾಂನಲ್ಲಿ ಪೋಸ್ಟ್ ಮಾಡಿದ್ದರು. 20 ಲಕ್ಷ ಅಲ್ಲ 20 ಕೋಟಿ ರೂ. ಇದ್ದರೂ ನನ್ನನ್ನು ಖರೀದಿಸಲು ಸಾಧ್ಯವಿಲ್ಲ. ಆ 20 ಲಕ್ಷ ರೂ.ನಲ್ಲಿ ನಿನ್ನನ್ನು ಖರೀದಿಸಲಾಗುತ್ತಾ ಎಂದು ನಿನ್ನ ತಾಯಿಗೆ ಕೇಳಿ ನೋಡು ಎಂದು ಕೋಪದಲ್ಲಿ ಸೋಫಿಯಾ ವ್ಯಕ್ತಿಯ ಆ ಆಫರ್ ಗೆ ಖಡಕ್ ಉತ್ತರ ನೀಡಿದ್ದರು.

    And he asks so politely..

    A post shared by Sofia Hayat (@sofiahayat) on

    I wonder if he is fasting today his id us @abidhussain_1

    A post shared by Sofia Hayat (@sofiahayat) on

  • ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಪ್ರೇಯಸಿಯ “I Don’t Mind” ಮೆಸೇಜ್ ನೋಡಿ ಪ್ರಿಯಕರ ನೇಣಿಗೆ ಶರಣು!

    ಬೆಂಗಳೂರು: ನಾನು ಸಾಯುತ್ತೇನೆ ಎಂದು ಪ್ರೇಯಸಿಗೆ ಹೇಳಿ ಯುವಕನೊಬ್ಬ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಬುಧವಾರ ಸಂಜೆ ಬೆಂಗಳೂರಿನ ಭಾರತಿನಗರ ಪೊಲೀಸ್ ಠಾಣಾ ವ್ಯಾಪ್ತಿಯ ತಿಮ್ಮಯ್ಯ ರಸ್ತೆಯಲ್ಲಿ ನಡೆದಿದೆ.

    ಕೆವಿನ್ ಫೆಡರಿಕ್(21) ಆತ್ಮಹತ್ಯೆ ಮಾಡಿಕೊಂಡ ಯುವಕ. ಕೆವಿನ್ ಫೆಡರಿಕ್ ಖಾಸಗಿ ಕಾಲೇಜ್ ನಲ್ಲಿ ಹೊಟೆಲ್ ಮ್ಯಾನೇಜ್ ಮೆಂಟ್ ವ್ಯಾಸಂಗ ಮಾಡುತ್ತಿದ್ದ. ಪ್ರೀತಿ ವಿಚಾರಕ್ಕೆ ಆತ್ಮಹತ್ಯೆ ಮಾಡಿಕೊಂಡಿರುವುದು ಬೆಳಕಿಗೆ ಬಂದಿದೆ.

    ಕೆವಿನ್ ತನ್ನ ಮೊಬೈಲ್ ನಲ್ಲಿ ಯುವತಿ ಜೊತೆ ಚಾಟ್ ಮಾಡುತ್ತಿದ್ದ. ಈ ವೇಳೆ ಕೆವಿನ್ ತನ್ನ ಪ್ರೇಯಸಿಯೊಂದಿಗೆ ಚಾಟ್ ಮಾಡುವಾಗ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಮೇಸೆಜ್ ಮಾಡಿದ್ದಾನೆ. ನಂತರ ತನ್ನ ಪ್ರೇಯಸಿಯ ಪ್ರತಿಕ್ರಿಯೆ ನೋಡಿ ಕೆವಿನ್ ಆತ್ಮಹತ್ಯೆಗೆ ಶರಣಾಗಿದ್ದಾನೆ.

    ಕೆವಿನ್ ನಾನು ಸಾಯುತ್ತೇನೆ ಎಂದಾಗ ಯುವತಿ ‘ಐ ಡೋಂಟ್ ಮೈಂಡ್’ ಎಂದು ಮೇಸಜ್‍ಗೆ ರಿಪ್ಲೇ ಮಾಡಿದ್ದಾಳೆ. ಇದ್ದರಿಂದ ಮನನೊಂದು ಕೆವಿನ್ ತನ್ನ ಪ್ರೇಯಸಿಗೆ ತಾನು ಸಾಯುವ ಮುನ್ನ ಹಗ್ಗವನ್ನು ಫ್ಯಾನ್ ಗೆ ಕಟ್ಟಿರುವ ಫೋಟೋವನ್ನು ಕಳುಹಿಸಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಸದ್ಯ ಬೌರಿಂಗ್ ಆಸ್ಪತ್ರೆಯಲ್ಲಿ ಕೆವಿನ್ ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಲಾಗಿದೆ. ಭಾರತಿನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.