Tag: ಮೆಸೇಜ್

  • ‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ‘ಪತ್ನಿ ಮನೆಯಲಿಲ್ಲ, ಬಂದು ಅಡುಗೆ ಮಾಡು’- ನಡುರಾತ್ರಿ ವಿದ್ಯಾರ್ಥಿನಿಗೆ ಪ್ರೊಫೆಸರ್ ಮೆಸೇಜ್

    ಡೆಹ್ರಾಡೂನ್: ವಿದ್ಯಾರ್ಥಿನಿಗೆ ನಡುರಾತ್ರಿ ಸಂದೇಶ ರವಾನೆ ಮಾಡಿದ್ದ ಪ್ರೊಫೆಸರ್, ತನ್ನ ಪತ್ನಿ ಮನೆಯಲ್ಲಿ ಇಲ್ಲ. ಬಂದು ಅಡುಗೆ ಮಾಡಿಕೊಡು ಎಂದು ಮೆಸೇಜ್ ಮಾಡಿ ಕಿರುಕುಳ ನೀಡಿರುವ ಘಟನೆ ಉತ್ತರಖಂಡ್ ಪಂತ್ ವಿಶ್ವವಿದ್ಯಾಲಯದಲ್ಲಿ ನಡೆದಿದೆ.

    ಪ್ರೊಫೆಸರ್ ಕೆಟ್ಟ ಸಂದೇಶದ ಕುರಿತು ವಿದ್ಯಾರ್ಥಿನಿ ವಿಶ್ವವಿದ್ಯಾಲಯದ ವಿಸಿ ಅವರಿಗೆ ದೂರು ನೀಡಿದ್ದು, ಮಹಿಳಾ ವಿದ್ಯಾರ್ಥಿಗಳ ಹಾಸ್ಟೆಲ್ ವಾರ್ಡನ್ ಆಗಿ ಜವಾಬ್ದಾರಿ ವಹಿಸಿಕೊಂಡಿದ್ದ ಪ್ರೊಫೆಸರ್ ವಿರುದ್ಧ ಕ್ರಮಕ್ಕೆ ವಿದ್ಯಾರ್ಥಿಗಳು ಆಗ್ರಹಿಸಿದ್ದಾರೆ.

    ಘಟನೆ ಸಂಬಂಧ ವಿದ್ಯಾರ್ಥಿನಿ ವಿಸಿ ಅವರಿಗೆ ಸಂದೇಶದ ಫೋಟೋವನ್ನು ಸಾಕ್ಷಿಯಾಗಿ ನೀಡಿದ್ದು, ವಿಶ್ವವಿದ್ಯಾಲಯ ಕಮಿಟಿ ಪ್ರೊಫೆಸರ್ ನನ್ನು ಹಾಸ್ಟೆಲ್ ವಾರ್ಡನ್ ಹುದ್ದೆಯಿಂದ ತೆರವು ಮಾಡಿದೆ ಎಂದು ಮಾಧ್ಯಮವೊಂದು ವರದಿ ಮಾಡಿದೆ. ಆದರೆ ಪ್ರೊಫೆಸರ್ ವಿರುದ್ಧ ಪೊಲೀಸ್ ದೂರು ದಾಖಲಾಗಿಲ್ಲ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.

    ಪ್ರಕರಣದ ಸಂಬಂಧ ಮಾಹಿತಿ ಪಡೆದಿರುವ ರಾಜ್ಯಪಾಲರು ಪ್ರೊಫೆಸರ್ ವಿರುದ್ಧ ಕ್ರಮಕೈಗೊಳ್ಳಲು ಸೂಚನೆ ನೀಡಿದ್ದಾರೆ. ಅಲ್ಲದೇ ವಿಶ್ವವಿದ್ಯಾಲಯದಲ್ಲಿ ವಿದ್ಯಾರ್ಥಿನಿಯರಿಗೆ ಸೂಕ್ತ ರಕ್ಷಣೆ ನೀಡುವಂತೆ ತಿಳಿಸಿದ್ದಾರೆ. ಪ್ರಕರಣದ ಕುರಿತಂತೆ ಮಾಧ್ಯಮಗಳಿಗೆ ಹೇಳಿಕೆ ನೀಡಿರುವ ವಿಶ್ವವಿದ್ಯಾಲಯ ರಿಜಿಸ್ಟ್ರಾರ್ ಎಪಿ ಶರ್ಮಾ, ರಾಜ್ಯಪಾಲರ ನಿರ್ದೇಶನದಂತೆ ವಾರ್ಡನ್ ಹುದ್ದೆಯಿಂದ ತೆಗೆದು ಹಾಕಲಾಗಿದ್ದು, ಹೆಚ್ಚಿನ ವಿಚಾರಣೆಯನ್ನು ನಡೆಸುತ್ತಿದ್ದೇವೆ. ವಿಶ್ವವಿದ್ಯಾಲಯದಲ್ಲಿರುವ ವಿದ್ಯಾರ್ಥಿಗಳಿಗೆ ಯಾವುದೇ ಸಮಸ್ಯೆ ಎದುರಾಗಂತೆ ಕ್ರಮಕೈಗೊಳ್ಳುತ್ತೇವೆ ಎಂದು ತಿಳಿಸಿದ್ದಾರೆ.

  • ಪುರುಷರ ಮರ್ಮಾಂಗಕ್ಕೆ ಯುವತಿ ಬಾಯಿಟ್ಟು ಎಡಿಟ್ – ಸೈಕೋ ಸ್ಟೂಡೆಂಟ್ ವಿರುದ್ಧ ದೂರು

    ಪುರುಷರ ಮರ್ಮಾಂಗಕ್ಕೆ ಯುವತಿ ಬಾಯಿಟ್ಟು ಎಡಿಟ್ – ಸೈಕೋ ಸ್ಟೂಡೆಂಟ್ ವಿರುದ್ಧ ದೂರು

    ಬೆಂಗಳೂರು: ನಗರದ ಪ್ರತಿಷ್ಠಿತ ಕಾಲೇಜಿನ ಯುವತಿಗೆ ಸೀನಿಯರ್ ವಿದ್ಯಾರ್ಥಿ ಲೈಂಗಿಕ ಕಿರುಕುಳ ನೀಡಿದ ಘಟನೆ ಬೆಳಕಿಗೆ ಬಂದಿದೆ.

    ಚೇತನ್ ಕಿರುಕುಳ ನೀಡಿದ ಸೀನಿಯರ್ ಸ್ಟೂಡೆಂಟ್. ಆರೋಪಿ ಚೇತನ್ ಸ್ನೇಹದ ನೆಪದಲ್ಲಿ ಯುವತಿಯ ನಂಬರ್ ಪಡೆಯುತ್ತಿದ್ದನು. ನಂತರ ಆ ವಿದ್ಯಾರ್ಥಿನಿಯ ಅಶ್ಲೀಲ ಫೋಟೋಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದನು. ಅಲ್ಲದೆ ಅಶ್ಲೀಲ ಫೋಟೊಗಳನ್ನು ಎಡಿಟ್ ಮಾಡಿ ಕಾಲೇಜಿನ ಗ್ರೂಪ್ ಹಾಗೂ ಕಾಲೇಜು ಪ್ರೊಫೆಸರಿಗೆ ಕಳುಹಿಸುತ್ತಿದ್ದನು.

    ರಾತ್ರಿ ವೇಳೆ ಚೇತನ್ ಯುವತಿಗೆ ಕಾಲ್ ಮಾಡಿ ಹಾಗೂ ಮೆಸೇಜ್ ಮಾಡಿ ಅಶ್ಲೀಲ ಪದಗಳಿಂದ ನಿಂದಿಸುತ್ತಿದ್ದನು. ಇದರಿಂದ ಮನನೊಂದ ಯುವತಿ ಸದಾಶಿವನಗರ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದು, ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

    ದೂರಿನಲ್ಲಿ ಏನಿದೆ?
    ನನ್ನ ಕಾಲೇಜಿನಲ್ಲಿಯೇ ಓದುತ್ತಿದ್ದ ಸಿನಿಯರ್ ಸ್ಟೂಡೆಂಟ್ ಚೇತನ್ ವಾಟ್ಸಾಪ್ ಗ್ರೂಪ್ ಮೂಲಕ ನನಗೆ ಮೆಸೇಜ್ ಮಾಡುತ್ತಿದ್ದನು. ನಂತರ ಚೇತನ್ ಜೊತೆ ಮಾತನಾಡಲು, ಮೆಸೇಜ್ ಮಾಡಲು ಆತನ ಸ್ನೇಹಿತರು ನನಗೆ ಒತ್ತಾಯಿಸುತ್ತಿದ್ದರು. ಆತನ ಸ್ನೇಹಿತರು ಎಚ್ಚರಿಕೆ ಮೆಸೇಜ್ ಮಾಡುವ ಮೂಲಕ ಆತನ ಸ್ನೇಹ ಮಾಡಲು ಒತ್ತಾಯಿಸಿದಾಗ ಸ್ನೇಹಿತೆಯಂತೆ ಮಾತನಾಡಲು ಆರಂಭಿಸಿದ್ದೆ.

    ಆದರೆ ಜೂನ್ ತಿಂಗಳಿನಲ್ಲಿ ಚೇತನ್ ನನಗೆ ಸಂಬಂಧಿಸಿದ ಫೋಟೋಗಳನ್ನು ಇನ್‍ಸ್ಟಾದಲ್ಲಿ ಹಾಕಿ ನನ್ನ ಮರ್ಯಾದೆಯನ್ನು ಹಾಳು ಮಾಡಿದ್ದಾನೆ. ನಾನು ಚೇತನ್ ನಂಬರ್ ಬ್ಲಾಕ್ ಮಾಡಿದೆ. ಆಗ ಆತ ನನ್ನ ಸ್ನೇಹಿತರ ಬಳಿ ನನ್ನ ಬಗ್ಗೆ ಕೆಟ್ಟದಾಗಿ ಮಾತನಾಡಿ ಗೌರವಕ್ಕೆ ಧಕ್ಕೆ ತಂದಿದ್ದಾನೆ. ಚೇತನ್ ಕೊನೆಯದಾಗಿ ನಾನು ನಿನ್ನ ಸ್ನೇಹಿತೆಯ ಕತುನ್ನು ಕೊಯ್ದು ಅವಳ ರಕ್ತದಿಂದ ಸ್ನಾನ ಮಾಡುತ್ತೇನೆ ಹಾಗೂ ನಿನ್ನ ಮತ್ತೊಬ್ಬ ಸ್ನೇಹಿತೆಯನ್ನು ರೇಪ್ ಮಾಡುವವರಿಗೆ 20 ಭಕ್ಷಿಸುಗಳನ್ನು ಕೊಡುತ್ತೇನೆ ಎಂದು ಮೆಸೇಜ್ ಮಾಡಿದ್ದನು.

    ಚೇತನ್ ಕೆಲವು ಮೊಬೈಲ್ ಸಿಮ್‍ಗಳನ್ನು ಪಡೆದುಕೊಂಡು ಕರೆ ಮಾಡಿ ಮಾತನಾಡಲು ಆರಂಭಿಸಿದ್ದಾಗ ನಾನು ಆತನ ಕರೆಗಳನ್ನು ಕಟ್ ಮಾಡುತ್ತಿದ್ದೆ. ಆಗ ಆತ ನನಗೆ ಕೆಟ್ಟದಾಗಿ ಬೆದರಿಕೆ ಹಾಗೂ ಎಚ್ಚರಿಕೆಯ ಮೆಸೇಜ್‍ಗಳನ್ನು ಕಳುಹಿಸುತ್ತಿದ್ದನು. ಅಲ್ಲದೆ ಸ್ನೇಹಿತೆಯಾಗುವಂತೆ ಬೆದರಿಕೆ ಹಾಕಿ ನನ್ನನ್ನು ಹಿಂಬಾಲಿಸುತ್ತಿದ್ದಾನೆ. ಅಲ್ಲದೆ ಪುರುಷನ ಮರ್ಮಾಂಗ ನನ್ನ ಬಾಯಿಯ ಬಳಿ ಇರುವುದನ್ನು ನಾನು ನೋಡಿ ನಗುತ್ತಿರುವಂತೆ ನನ್ನ ಫೋಟೋಗಳನ್ನು ಎಡಿಟ್ ಮಾಡಿದ್ದಾನೆ. ಈತನ ವಿರುದ್ಧ ಕ್ರಮ ಕೈಗೊಳ್ಳಬೇಕು.

  • ವಾಟ್ಸಪ್ ನಿಂದ ಫೋನ್ ಮೆಮೊರಿ ಫುಲ್ ಆಗಿದ್ಯಾ?

    ವಾಟ್ಸಪ್ ನಿಂದ ಫೋನ್ ಮೆಮೊರಿ ಫುಲ್ ಆಗಿದ್ಯಾ?

    ತಿ ಹೆಚ್ಚು ಜನರು ಬಳಸುವ ಮೆಸೇಜಿಂಗ್ ಅಪ್ಲಿಕೇಶನ್ ವಾಟ್ಸಪ್. ಡಿಜಿಟಲ್ ಲೋಕದಲ್ಲಿರುವ ಪ್ರತಿಯೊಬ್ಬರು ಸಹ ವಾಟ್ಸಪ್ ಮೆಸೇಜಿಂಗ್ ಅಪ್ಲಿಕೇಷನ್ ಬಳಕೆ ಮಾಡುತ್ತಿದ್ದಾರೆ. ಚಾಟಿಂಗ್ ಜೊತೆ ಫೋಟೋ, ವಿಡಿಯೋ ಕಾಲ್ ಸಹ ಸೌಲಭ್ಯ ವಾಟ್ಸಪ್ ನಲ್ಲಿ ಲಭ್ಯವಿದೆ. ವಾಟ್ಸಪ್ ನಲ್ಲಿ ಬರುವ ಫೋಟೋ ಮತ್ತು ವಿಡಿಯೋಗಳ ಡೌನ್ ಲೋಡ್ ನಿಂದ ಫೋನ್ ಮೆಮೊರಿ ಕಡಿಮೆಯಾಗುತ್ತದೆ.

    ಈ ರೀತಿ ನಿಮ್ಮ ಮೊಬೈಲ್ ಫೋನ್ ಮೆಮೊರಿ ವಾಟ್ಸಪ್ ನಿಂದ ಬರುವ ಸಂದೇಶಗಳಿಂದ ಭರ್ತಿಯಾಗಿದ್ರೆ ಕೆಲವು ಸಿಂಪಲ್ ಟ್ರಿಕ್ ಬಳಸುವ ಮೂಲಕ ಈ ಸಮಸ್ಯೆಯಿಂದ ದೂರವಾಗಬಹುದು. ವಾಟ್ಸಪ್ ಸೆಟ್ಟಿಂಗ್ ಗೆ ತೆರಳಿ ಕೆಲವು ಬದಲಾವಣೆ ಮಾಡಿಕೊಂಡಲ್ಲಿ ಫೋನ್ ಮೆಮೊರಿ ಸೇವ್ ಮಾಡಿಕೊಳ್ಳಬಹುದು.
    * ಮೊದಲು ನಿಮ್ಮ ಮೊಬೈಲಿನಲ್ಲಿಯ ವಾಟ್ಸಪ್ ಅಪ್ಲಿಕೇಶನ್ ಓಪನ್ ಮಾಡಿ
    * ಬಲಭಾಗದಲ್ಲಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ಸೆಟ್ಟಿಂಗ್ ನಲ್ಲಿ ಹೋಗಿ ಚಾಟ್ಸ್ ಮೇಲೆ ಕ್ಲಿಕ್ ಮಾಡಿ.
    * ಚಾಟ್ಸ್ ಮೇಲೆ ಕ್ಲಿಕ್ ಮಾಡಿದ ಬಳಿಕ ಕೆಲವು ಆಯ್ಕೆಗಳು ನಿಮ್ಮ ಮುಂದೆ ಕಾಣಿಸುತ್ತವೆ. ಮೀಡಿಯಾ ವಿಸಿಬಿಲಿಟಿಯ ಟಾಗಲ್ ಆಫ್ ಮಾಡಿ.

    ಆಟೋ ಡೌನ್‍ಲೋಡ್ ಮಾಡಲು ಇಚ್ಛಿಸದಿದ್ದಲ್ಲಿ ಈ ಕೆಳಗಿನ ಸ್ಟೆಪ್ಸ್ ಫಾಲೋ ಮಾಡಿ
    * ವಾಟ್ಸಪ್ ಓಪನ್ ಮಾಡಿ, ನೀವು ಆಟೋ ಡೌನ್‍ಲೋಡ್ ಇಚ್ಚಿಸದ ಖಾತೆಯ ಮೇಲೆ ಕ್ಲಿಕ್ಕಿಸಿ, ಅಲ್ಲಿ ಬಲಭಾಗದಲ್ಲಿರುವ ಮೂರು ಡಾಟ್ ಮೇಲೆ ಕ್ಲಿಕ್ಕಿಸಿ. ಸೆಟ್ಟಿಂಗ್ ಪ್ರವೇಶಿಸಿ
    * ಅಲ್ಲಿ View Contact ಮೇಲೆ ಕ್ಲಿಕ್ಕಿಸಿದಾಗ ಆ ಖಾತೆಯ ಮಾಹಿತಿ ಬರುತ್ತದೆ.
    * ತದನಂತರ Media visibility ಕ್ಲಿಕ್ಕಿಸಿದಾಗ ನಿಮ್ಮ ಸ್ಕ್ರೀನ್ ಮೇಲೆ ‘Show newly downloaded media from this chat in your phone’s gallery? ಪ್ರಾಂಪ್ಟ್ ಕಾಣಿಸಿದಾಗ NO ಆಯ್ಕೆ ಮಾಡಿಕೊಳ್ಳಿ

    ಈ ರೀತಿ ಮಾಡುವದರಿಂದ ನಿಮ್ಮ ವಾಟ್ಸಪ್ ಗೆ ಬಂದಿರುವ ಫೈಲ್ ಗಳು ತನ್ನಿಂದ ತಾನೇ ಡೌನ್‍ಲೋಡ್ ಆಗುವುದಿಲ್ಲ. ಈ ಸೆಟ್ಟಿಂಗ್ ಬಳಿಕ ಬಂದಿರುವ ನಿಮಗೆ ಬೇಕಾಗಿರುವ ಫೈಲ್ ಮಾತ್ರ ಡೌನ್ ಲೋಡ್ ಮಾಡಬಹುದು.

     

    ಐಫೋನ್ ಬಳಕೆದಾರರು:
    * ವಾಟ್ಸಪ್ ಓಪನ್ ಮಾಡಿ, ಕೆಳಗಡೆ ಬಲಭಾಗದಲ್ಲಿರುವ ಸೆಟ್ಟಿಂಗ್ ಪ್ರವೇಶಿಸಿ.
    * ಚಾಟ್ಸ್ ಮೇಲೆ ಟ್ಯಾಪ್ ಮಾಡಿ Save to camera roll ಹೋಗಿ ಟಾಗಲ್ ಆಫ್ ಮಾಡಿ

    ಐಫೋನ್ ನಲ್ಲಿ ಮೀಡಿಯಾ ಡೌನ್‍ಲೋಡ್ ಆಗದಂತೆ ತಡೆಯಲು ಪ್ರಿಫರೆಂಸ್ ನಲ್ಲಿ ಸೆಟ್ ಮಾಡಿಕೊಳ್ಳಬಹುದು.
    * ವಾಟ್ಸಪ್ ಸೆಟ್ಟಿಂಗ್ ನಲ್ಲಿ ಹೋಗಿ ಡೇಟಾ ಆ್ಯಂಡ್ ಸ್ಟೋರೆಜ್ ಪ್ರವೇಶಿಸಿ, ಇಲ್ಲಿ ನಿಮಗೆ ಮೊಬೈಲ್ ಡೇಟಾ, ವೈಫೈ ಮತ್ತು ರೋಮಿಂಗ್ ಆಯ್ಕೆ ಸಿಗುತ್ತದೆ.
    * ಇಲ್ಲಿ ಯಾವ ಡೇಟಾದಲ್ಲಿ ಮೀಡಿಯಾ ಫೈಲ್ ಆಟೋ ಡೌನ್‍ಲೋಡ್ ಮಾಡಿಕೊಳ್ಳಲು ಇಚ್ಛಿಸುತ್ತಿರಿ ಒಂದು ಆಯ್ಕೆಯ ಮೇಲೆ ಕ್ಲಿಕ್ಕಿಸಬಹುದು.

  • Plz ನನ್ನ ಜೊತೆ ಸೆಕ್ಸ್ ಮಾಡ್ತೀರಾ – ನಟಿಗೆ ವ್ಯಕ್ತಿ ಮೆಸೇಜ್

    Plz ನನ್ನ ಜೊತೆ ಸೆಕ್ಸ್ ಮಾಡ್ತೀರಾ – ನಟಿಗೆ ವ್ಯಕ್ತಿ ಮೆಸೇಜ್

    ಮುಂಬೈ: ಇತ್ತೀಚೆಗೆ ಸಾಮಾಜಿಕ ಜಾಲತಾಣಗಳಲ್ಲಿ ಬೇರೆ ಬೇರೆ ಹೆಸರಿನಲ್ಲಿ ಮಹಿಳೆಯರಿಗೆ ಮತ್ತು ನಟಿಯರಿಗೆ ಅಶ್ಲೀಲವಾಗಿ ಮೆಸೇಜ್ ಮಾಡುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಇದೀಗ ಬಾಲಿವುಡ್ ನಟಿ, ಗಾಯಕಿಯೊಬ್ಬರಿಗೆ ಅಸಭ್ಯವಾಗಿ ವ್ಯಕ್ತಿಯೊಬ್ಬ ಮೆಸೇಜ್ ಮಾಡಿದ್ದಾನೆ.

    ನಟಿ ಸುಚಿತ್ರಾ ಕೃಷ್ಣಮೂರ್ತಿ ಅವರಿಗೆ ಫೇಸ್‍ಬುಕ್ ಮೂಲಕ ವ್ಯಕ್ತಿಯೊಬ್ಬ ಅಸಭ್ಯವಾಗಿ ಸಂದೇಶ ಕಳುಹಿಸಿದ್ದಾನೆ. ಈ ಮೆಸೇಜಿನ ಸ್ಕ್ರೀನ್‍ಶಾಟ್ ತೆಗೆದು ನಟಿ ಮುಂಬೈ ಪೊಲೀಸರಿಗೆ ದೂರು ನೀಡಿದ್ದಾರೆ. ವ್ಯಕ್ತಿ ನಟಿಗೆ “ಕೃಷ್ಣಮೂರ್ತಿ ಅವರೇ ನೀವು ನನ್ನೊಂದಿಗೆ ಸೆಕ್ಸ್ ಮಾಡುತ್ತೀರಾ” ಎಂದು ಅಸಭ್ಯವಾಗಿ ಮೆಸೇಜ್ ಮಾಡಿದ್ದಾನೆ.

    ನಟಿ ಸುಚಿತ್ರಾ ಅವರು “ರಾಷ್ಟ್ರೀಯ ಅಪರಾಧ ತಡೆಗಟ್ಟುವಿಕೆ ವಿಭಾಗದಲ್ಲಿ ಕೆಲಸ ಮಾಡುತ್ತಿರುವುದಾಗಿ ವ್ಯಕ್ತಿ ತನ್ನ ಬಳಿ ಹೇಳಿಕೊಂಡಿದ್ದಾನೆ. ಆದರೆ ಈತ ಮಹಿಳೆಯರಿಗೆ ಈ ರೀತಿಯಾಗಿ ಕಿರುಕುಳ ನೀಡುತ್ತಿದ್ದಾನೆ. ಹೀಗಾಗಿ ದಯವಿಟ್ಟು ಇದರ ಬಗ್ಗೆ ಗಮನಹರಿಸಿ” ಎಂದು ನಟಿ ಆತನ ಫೇಸ್‍ಬುಕ್ ಖಾತೆಯನ್ನು ಮುಂಬೈ ಪೊಲೀಸರಿಗೆ ಟ್ಯಾಗ್ ಮಾಡಿ ದೂರಿದ್ದಾರೆ.

    ಸುಚಿತ್ರಾ ಅವರ ಟ್ವೀಟ್‍ಗೆ ಮುಂಬೈ ಪೊಲೀಸರು ಪ್ರತಿಕ್ರಿಯಿಸಿದ್ದು, “ನಾವು ನಿಮ್ಮನ್ನು ಹಿಂಬಾಲಿಸುತ್ತಿದ್ದೇವೆ. ದಯವಿಟ್ಟು ನೀವು ನಿಮ್ಮ ದೂರವಾಣಿ ವಿವರಗಳನ್ನು ನೀಡಿ” ಎಂದು ರೀಟ್ವೀಟ್ ಮಾಡಿದ್ದಾರೆ. ಇದಕ್ಕೆ ತಕ್ಷಣ “ನಿಮ್ಮ ಶೀಘ್ರ ಪ್ರತಿಕ್ರಿಯೆಗೆ ಧನ್ಯವಾದಗಳು, ಕೇವಲ ನಿಮ್ಮ ಗಮನಕ್ಕೆ ತರಲು ಮಾತ್ರ ಈ ಬಗ್ಗೆ ತಿಳಿಸಿದೆ. ಇದರಿಂದ ನಾನು ಯಾವುದೇ ಬೆದರಿಕೆಗೆ ಒಳಗಾಗುವುದಿಲ್ಲ. ಆತ ನನ್ನಂತ ಅನೇಕರಿಗೆ ಈ ರೀತಿಯಾಗಿ ಮೆಸೇಜ್ ಮಾಡಿದರೆ ಸಾಮಾಜಿಕ ಜಾಲತಾಣಗಳಲ್ಲಿರುವ ಬೇರೆ ಯುವತಿಯ ಪರಿಸ್ಥಿತಿ ಏನು? ಎಂದು ಪೊಲೀಸರಿಗೆ ಮತ್ತೆ ಟ್ವೀಟ್ ಮಾಡಿದ್ದಾರೆ.

    ಇದಕ್ಕೆ ಮತ್ತೆ ಪೊಲೀಸರು “ಮೇಡಂ ನಾವು ಈಗಾಗಲೇ ಆ ಖಾತೆಯ ಬಗ್ಗೆ ಪರಿಶೀಲನೆ ಮಾಡುತ್ತಿದ್ದೇವೆ. ಜೊತೆಗೆ ನೀವು ನೀಡಿದ ಮಾಹಿತಿಯನ್ನು ಸೈಬರ್ ಕ್ರೈಂ ವಿಭಾಗಕ್ಕೂ ರವಾನೆ ಮಾಡಿಸಿದ್ದೇವೆ. ಮುಂದೆ ನಿಮಗೆ ಏನಾದರೂ ಸಮಸ್ಯೆಯಾದರೆ 100 ನಂಬರಿಗೆ ಫೋನ್ ಮಾಡಿ ಅಥವಾ ಟ್ವೀಟ್ ಮಾಡಿ” ಎಂದು ಪೊಲೀಸರು ಧೈರ್ಯ ತುಂಬಿದ್ದಾರೆ.

    ನಟಿ ಸುಚಿತ್ರಾ ಕೃಷ್ಣಮೂರ್ತಿ ಕಿರುತೆಯಲ್ಲಿ ನಟಿಸಿದ್ದು, ಜೊತೆಗೆ ಕೆಲವು ಸಿನಿಮಾದಲ್ಲೂ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಇವರು ಗಾಯಕಿ ಕೂಡ ಆಗಿದ್ದಾರೆ.

  • ವಾಟ್ಸಪ್​ನಲ್ಲಿ ಸೀಕ್ರೆಟ್ ಗ್ರೂಪ್ – ಗೌಪ್ಯವಾಗಿ ಇರಿಸಬಹುದು ಫೋಟೋ, ವಿಡಿಯೋ, ಲಿಂಕ್

    ವಾಟ್ಸಪ್​ನಲ್ಲಿ ಸೀಕ್ರೆಟ್ ಗ್ರೂಪ್ – ಗೌಪ್ಯವಾಗಿ ಇರಿಸಬಹುದು ಫೋಟೋ, ವಿಡಿಯೋ, ಲಿಂಕ್

    ನವದೆಹಲಿ: ವಾಟ್ಸಪ್ ವಿಶ್ವದೆಲ್ಲಡೆ ಅತಿ ಹೆಚ್ಚು ಬಳಕೆಯಾಗುವ ಆ್ಯಪ್‍ಗಳಲ್ಲಿ ಒಂದಾಗಿದೆ. ವಾಟ್ಸಪ್ ಮೂಲಕ ವೈಯಕ್ತಿಕ ಅಥವಾ ಗ್ರೂಪ್ ಮುಖಾಂತರ ಸಂದೇಶ, ಫೋಟೋ, ವಿಡಿಯೋಗಳನ್ನು ಹಂಚಿಕೊಳ್ಳಬಹುದು. ಇತ್ತೀಚೆಗೆ ವಾಟ್ಸಪ್ ಮೂಲಕವೇ ಹಲವು ದಾಖಲೆಗಳನ್ನು ರವಾನಿಸಲಾಗುತ್ತಿದೆ. ಕೆಲವೊಮ್ಮೆ ವಾಟ್ಸಪ್ ನಲ್ಲಿ ಬರುವ ಲಿಂಕ್ ಅಥವಾ ಫೋಟೋಗಳನ್ನು ಸೇವ್ ಮಾಡಿಕೊಳ್ಳಲು ಇಚ್ಛಿಸುತ್ತೇವೆ. ಆದ್ರೆ ವಾಟ್ಸಪ್ ನಲ್ಲಿ ಈ ಸೌಲಭ್ಯವಿಲ್ಲ. ಸಣ್ಣದೊಂದು ಟ್ರಿಕ್ ಮೂಲಕ ನೀವು ನಿಮಗೆ ಇಷ್ಟವಾದ ಫೋಟೋ, ವಿಡಿಯೋ ಲಿಂಕ್ ಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಬಹುದು.

    ನಿಮ್ಮ ಫೋಟೋ, ವಿಡಿಯೋ ಅಥವಾ ರಹಸ್ಯ ಮಾಹಿತಿಗಳನ್ನು ವಾಟ್ಸಪ್ ನಲ್ಲಿ ಸೇವ್ ಮಾಡಿಕೊಳ್ಳಲು ನಿಮಗೆ ಒಂದು ನಿಮಿಷಕ್ಕಾಗಿ ಓರ್ವ ಗೆಳೆಯನ ಅವಶ್ಯಕತೆ ಇದೆ. ವಾಟ್ಸಪ್ ನಲ್ಲಿ ನಿಮ್ಮ ಸೀಕ್ರೆಟ್ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಲು ಈ ಕೆಳಗಿನ ವಿಧಾನಗಳನ್ನು ಅನುಸರಿಸಿ

    1. ಮೊದಲಿಗೆ ಹೊಸ ಗ್ರೂಪ್ ಕ್ರಿಯೇಟ್ ಮಾಡಲು ವಾಟ್ಸಪ್ ಬಲ ಬದಿಯಲ್ಲಿರುವ ಮೂರು ಡಾಟ್ ಗಳ ಮೇಲೆ ಕ್ಲಿಕ್ ಮಾಡಿ, ನ್ಯೂ ಗ್ರೂಪ್ ಮೇಲೆ ಪ್ರೆಸ್ ಮಾಡಿ.
    2. ನ್ಯೂ ಗ್ರೂಪ್ ಎಂದು ಕ್ಲಿಕ್ ಮಾಡಿದಾಗ, ನಿಮ್ಮ ಕಾಂಟೆಕ್ಸ್ ಲಿಸ್ಟ್ ಓಪನ್ ಆಗುತ್ತೆ. ನಿಮಗೆ ಬೇಕಾದ ಓರ್ವ ಗೆಳೆಯನನ್ನು ಸೆಲೆಕ್ಟ್ ಮಾಡಿ ಒಂದು ಹೆಸರನ್ನು ಇರಿಸಿ ಗ್ರೂಪ್ ಕ್ರಿಯೇಟ್ ಮಾಡಿಕೊಳ್ಳಿ.

    3. ಈಗ ನೀವು ಕ್ರಿಯೆಟ್ ಮಾಡಿರುವ ಗ್ರೂಪ್‍ಗೆ ಹೋಗಿ. ಅಲ್ಲಿ ನಿಮಗೆ ಗ್ರೂಪ್ ಮಾಹಿತಿ ಲಭ್ಯವಾಗುತ್ತದೆ. ಅಲ್ಲಿ ನಿಮ್ಮ ಗೆಳೆಯನನ್ನು ರಿಮೂ ಮಾಡಿ.
    4. ಈಗ ನೀವು ಕ್ರಿಯೆಟ್ ಮಾಡಿದ ಗ್ರೂಪಿನಲ್ಲಿ ಅಡ್ಮಿನ್ ಆಗಿ ಒಬ್ಬರೇ ಉಳಿಯುತ್ತಿರಿ.
    5. ನಿಮಗೆ ಬಂದಿರುವ ಮೆಸೇಜ್ ಗಳನ್ನು ಹೊಸ ಗ್ರೂಪಿಗೆ ಫಾರ್ವಡ್ ಮಾಡಿಕೊಳ್ಳುವ ಮೂಲಕ ಸೇವ್ ಮಾಡಿಕೊಳ್ಳಬಹುದು.

  • ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷಮೆ

    ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷಮೆ

    ಹಾವೇರಿ: ಜಿಲ್ಲೆಯ ಹಿರೇಕೆರೂರಿನ ಕಾಂಗ್ರೆಸ್ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಕ್ಕೆ ಬಿ.ಸಿ.ಪಾಟೀಲ್ ಕ್ಷೇತ್ರದ ಕಾರ್ಯಕರ್ತರಲ್ಲಿ ವಾಟ್ಸಪ್ ಗ್ರೂಪ್ ಮೂಲಕ ಕ್ಷಮೆ ಕೇಳಿದ್ದಾರೆ.

    ಬಿ.ಸಿ.ಪಾಟೀಲ್ ಅವರು ಮಂತ್ರಿ ಸ್ಥಾನ ಕೊಡದೇ ಪಕ್ಷ ತಾಲೂಕಿಗೆ ಅನ್ಯಾಯ ಮಾಡಿದೆ ಎಂಬ ಸಂದೇಶವನ್ನ ಹಾಕಿದ್ದು, ವಾಟ್ಸಪ್ ಗ್ರೂಪ್ ಮೂಲಕ ಕಾರ್ಯಕರ್ತರಲ್ಲಿ ಕ್ಷಮೆ ಕೇಳಿದ್ದಾರೆ. ನಿಮ್ಮ ಸಲಹೆ ಸೂಚನೆ ಪಡೆದು ಮುಂದಿನ ನಿರ್ಧಾರ ತೆಗೆದುಕೊಳ್ಳತ್ತೇನೆ ಎಂಬ ಸಂದೇಶವನ್ನ ತಾಲೂಕಿನ ಕಾರ್ಯಕರ್ತರಿಗೆ ರವಾನಿಸಿದ್ದಾರೆ.

    ಸಂದೇಶ:
    ಆತ್ಮೀಯ ಬಂಧುಗಳೇ ರಾಜಕೀಯ ಗೊತ್ತಿಲ್ಲದ ನನಗೆ ಆಕಸ್ಮಿಕವಾಗಿ ರಾಜಕಾರಣಕ್ಕೆ ಬಂದಾಗ ಮೂರು ಬಾರಿ ನನ್ನನ್ನು ಶಾಸಕನನ್ನಾಗಿ ಆಯ್ಕೆ ಮಾಡಿದ್ದೀರಿ. ಇದುವರೆಗೂ ನಾನು ನನ್ನ ಕೈಲಾದ ಅಭಿವೃದ್ಧಿ ಕೆಲಸವನ್ನು ಸರ್ಕಾರದಿಂದ ಮಾಡಿ ತಾಲೂಕು ಅಭಿವೃದ್ಧಿಯ ಕಡೆಗೆ ದಾಪುಗಾಲಿಟ್ಟಿದೆ. ಈಗ ತಮ್ಮೆಲ್ಲರಿಗೂ ಗೊತ್ತಿರುವ ಹಾಗೆ ನಮ್ಮ ತಾಲೂಕಿಗೆ ಸಾಕಷ್ಟು ಅನ್ಯಾಯವನ್ನು ಮಾಡಿ ಕಾಂಗ್ರೆಸ್ ಪಕ್ಷ ಬೇರೆಯವರಿಗೆ ಮಂತ್ರಿ ಪದವಿಯನ್ನು ಕೊಟ್ಟು ನಮ್ಮ ತಾಲೂಕಿಗೆ ದೊಡ್ಡ ದ್ರೋಹವನ್ನು ಮಾಡಿದೆ. ಇದರಿಂದಾಗಿ ಸರ್ವತೋಮುಖ ಅಭಿವೃದ್ಧಿಗೆ ಕುಂಠಿತವಾಗುತ್ತದೆ.

    ಅಲ್ಲದೆ ಮುಂದಿನ ತಾಲೂಕಿನ ಬೃಹತ್ ಭವಿಷ್ಯವನ್ನು ನೆನೆದು ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಗಾಗಿ ನಾನು ನನ್ನ ಶಾಸಕ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಿದ್ದೇನೆ. ತಮ್ಮ ಕ್ಷಮೆ ಇರಲಿ, ಮುಂದಿನ ದಿನಗಳಲ್ಲಿ ತಮ್ಮ ಸಲಹೆ ಸೂಚನೆಗಳನ್ನು ಪಡೆದು ಮುಂದಿನ ನಿರ್ಧಾರವನ್ನು ಕೈಗೊಳ್ಳುತ್ತೇನೆ. ತಾಲೂಕಿನ ಸರ್ವಾಂಗೀಣ ಅಭಿವೃದ್ಧಿಯೇ ನನ್ನ ಗುರಿಯಾಗಿದ್ದು, ಸದಾ ನಿಮ್ಮ ಆಶೀರ್ವಾದ ಬೇಕೆಂದು ಕೇಳಿ ಮತ್ತೊಮ್ಮೆ ತಮ್ಮಲ್ಲಿ ಕ್ಷಮೆಯನ್ನು ಕೇಳಿ ತಮ್ಮ ಆಶೀರ್ವಾದವನ್ನು ಬೇಡುತ್ತಿದ್ದೇನೆ ಇಂತಿ ನಿಮ್ಮ ವಿಶ್ವಾಸಿ ಬಿ.ಸಿ ಪಾಟೀಲ್ ಎಂದು ವಾಟ್ಸಪ್ ಗ್ರೂಪಿಗೆ ಸಂದೇಶ ರವಾನೆ ಮಾಡಿದ್ದಾರೆ.

    ವಾಪಸ್ ಪಡೆಯಲ್ಲ: ಕಳೆದ ದಿನ ರಾಜೀನಾಮೆ ನೀಡಿದ್ದೇನೆ. ಯಾವುದೇ ಕಾರಣಕ್ಕೂ ರಾಜೀನಾಮೆಯನ್ನು ವಾಪಸ್ಸ್ ಪಡೆಯುವುದಿಲ್ಲ. ಮುಂದೆ ಏನಾಗಬೇಕು, ಎನು ಮಾಡಬೇಕು ಅನ್ನೋ ಚರ್ಚೆ ಆಗಿಲ್ಲ. ಮುಂದೆ ಏನಾಗುತ್ತೆ ಕಾದುನೋಡೋಣ. ಕ್ಷೇತ್ರದ ಜನರ ಹಾಗೂ ಕಾರ್ಯಕರ್ತರ ಅಭಿಪ್ರಾಯ ಕೇಳಿದ್ದೇನೆ. ಕ್ಷೇತ್ರಕ್ಕೆ ಅನ್ಯಾಯವಾದ ಬಗ್ಗೆ ಕಾರ್ಯಕರ್ತರಿಗೆ ತಿಳಿಸಿದ್ದೇನೆ. ಅವರು ಸಹ ಸಹಮತ ನೀಡಿದ್ದಾರೆ. ನಾವೆಲ್ಲ ಮುಂಬೈನಲ್ಲಿ ಇದ್ದೇವೆ. ಬಿಜೆಪಿಗೆ ಹೋಗುವ ಬಗ್ಗೆ ಚರ್ಚೆ ಆಗಿಲ್ಲ. ಇನ್ನೂ ಕೆಲವು ಶಾಸಕರು ರಾಜೀನಾಮೆ ನೀಡಲಿದ್ದಾರೆ ಎಂದು ಪಬ್ಲಿಕ್ ಟಿವಿಗೆ ದೂರವಾಣಿ ಮೂಲಕ ಬಿಸಿ ಪಾಟೀಲ್ ಹೇಳಿಕೆ ನೀಡಿದ್ದಾರೆ.

  • ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್

    ಐಎಂಎ ದೋಖಾ- ಫೇಸ್‍ಬುಕ್‍ನಲ್ಲಿ ಮನ್ಸೂರ್ ಖಾನ್ ಫುಲ್ ಆ್ಯಕ್ಟೀವ್

    ಬೆಂಗಳೂರು: ಐಎಂಎ ಎಂಡಿ ಮನ್ಸೂರ್ ಖಾನ್ ತನ್ನ ಎರಡನೇ ಪತ್ನಿ ಹಾಗೂ ಮಕ್ಕಳ ಜೊತೆ ಶನಿವಾರ ರಾತ್ರಿ ದುಬೈಗೆ ಎಸ್ಕೇಪ್ ಆಗಿದ್ದಾನೆ. ಆದರೆ ಮನ್ಸೂರ್ ಈಗ ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ.

    ಮನ್ಸೂರ್ ಖಾನ್ ಸಾಯ್ತೀನಿ, ಆತ್ಮಹತ್ಯೆ ಮಾಡಿಕೊಳ್ತೀನಿ ಎಂದು ಹೇಳಿ ದುಬೈನಲ್ಲಿ ಕುಳಿತುಕೊಂಡು ಫೇಸ್‍ಬುಕ್‍ನಲ್ಲಿ ಫುಲ್ ಆ್ಯಕ್ಟೀವ್ ಆಗಿದ್ದಾನೆ. ಅಲ್ಲದೆ ಬೆಂಗಳೂರಲ್ಲಿ ನಡೆಯುತ್ತಿರೋದರ ಬಗ್ಗೆ ಎಲ್ಲಾ ಮಾಹಿತಿಯನ್ನು ಪಡೆಯುತ್ತಿದ್ದಾನೆ. ಯಾರಾದರೂ ಮೆಸೆಂಜರ್ ಅಲ್ಲಿ ಮೆಸೇಜ್ ಮಾಡಿದ್ರೆ ಮನ್ಸೂಲ್ ಅದಕ್ಕೆ ಪ್ರತಿಕ್ರಿಯಿಸುತ್ತಿಲ್ಲ. ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಇದ್ದು, ವಾಟ್ಸಾಪ್ ಡೀ ಆಕ್ಟೀವ್ ಮಾಡಿದ್ದಾನೆ. ಅಲ್ಲದೆ ತನ್ನ ಮೊಬೈಲ್ ಕೂಡ ಸ್ವೀಚ್ ಆಪ್ ಮಾಡಿಕೊಂಡಿದ್ದಾನೆ.

    ಈ ಪ್ರಕರಣಕ್ಕೆ ಸಂಬಂಧಿಸಿದಂತೆ ಮನ್ಸೂರ್ ಖಾನ್ ಎಲ್ಲಿ ಇದ್ದಾನೆ, ಏನು ಮಾಡುತ್ತಿದ್ದಾನೆ ಎಂಬುದು ಯಾರಿಗೂ ಗೊತ್ತಿಲ್ಲ. ಆದರೆ ಪೊಲೀಸರ ಪ್ರಕಾರ ಆತ ದೇಶ ಬಿಟ್ಟು ಹೋಗಿದ್ದಾನೆ ಎಂಬುದು ತಿಳಿದು ಬಂದಿದೆ. ಮನ್ಸೂರ್ ಪ್ರತಿ ಗಂಟೆಗೊಮ್ಮೆ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿ ಮತ್ತೆ ಡಿ ಆಕ್ಟೀವ್ ಮಾಡುತ್ತಿದ್ದಾನೆ. ಯಾರಾದರೂ ಮೆಸೆಂಜರ್‍ನಲ್ಲಿ ಮೆಸೇಜ್ ಮಾಡಿದ್ದರೆ, ಆ ಮೆಸೇಜ್ ಕೂಡ ಆತ ನೋಡುತ್ತಿಲ್ಲ. ಸಾಮಾಜಿಕ ಜಾಲತಾಣದಲ್ಲಿ ತನ್ನ ಬಗ್ಗೆ ಏನು ಚರ್ಚೆಯಾಗುತ್ತಿದೆ ಎನ್ನುವ ಕುತೂಹಲದಿಂದ ಮನ್ಸೂರ್ ಫೇಸ್‍ಬುಕ್‍ನಲ್ಲಿ ಆ್ಯಕ್ಟೀವ್ ಆಗಿದ್ದಾನೆ.

    ಮನ್ಸೂರ್ ವಾಯ್ಸ್ ಮೆಸೇಜ್ ಬಂದಾಗ ವಾಟ್ಸಾಪ್‍ನಲ್ಲಿ ಆಕ್ಟೀವ್ ಆಗಿದ್ದನು. ಅದಾದ ಬಳಿಕ ಆತ ತನ್ನ ವಾಟ್ಸಾಪ್ ಅನ್ನು ಡಿ ಆಕ್ಟೀವ್ ಮಾಡಿದ್ದಾನೆ. ಮನ್ಸೂರ್ ಇದುವರೆಗೂ ಮತ್ತೆ ವಾಟ್ಸಾಪ್‍ನಲ್ಲಿ ಆನ್ ಮಾಡಿಲ್ಲ. ಆತನ ಮೊಬೈಲ್ ನಂಬರ್ ಸ್ವಿಚ್ ಆಫ್ ಆಗಿದೆ.

  • ವಾಟ್ಸಪ್‍ನಲ್ಲಿಯ ಫೇಕ್ ಮೆಸೇಜ್ ಪತ್ತೆ ಮಾಡೋದು ಹೇಗೆ?

    ವಾಟ್ಸಪ್‍ನಲ್ಲಿಯ ಫೇಕ್ ಮೆಸೇಜ್ ಪತ್ತೆ ಮಾಡೋದು ಹೇಗೆ?

    ನವದೆಹಲಿ: ಭಾರತದಲ್ಲಿ ಲೋಕಸಭಾ ಚುನಾವಣೆಗೆ ಸಂಬಂಧಿಸಿದಂತೆ ಅಭ್ಯರ್ಥಿ, ಪಕ್ಷಗಳು ವಾಟ್ಸಪ್ ಮತ್ತು ಸಾಮಾಜಿಕ ಜಾಲತಾಣದಲ್ಲಿ ಪ್ರಚಾರವನ್ನು ಕೈಗೊಳ್ಳುತ್ತಿವೆ. ವಾಟ್ಸಪ್ ನಲ್ಲಿಯೂ ಕೆಲ ಅಭ್ಯರ್ಥಿ, ಪಕ್ಷಗಳ ಪರ-ವಿರೋಧದ ಮೆಸೇಜ್‍ಗಳು ಒಬ್ಬರಿಂದ ಒಬ್ಬರಿಗೆ ರವಾನೆ ಆಗುತ್ತಿರುತ್ತವೆ. ಹೀಗಾಗಿ ವಾಟ್ಸಪ್ ಬಳಕೆದಾರರು ಯಾವ ಮೆಸೇಜ್ ನಿಜ-ಸುಳ್ಳು ಎಂಬ ಗೊಂದಲಕ್ಕೊಳಗಾಗುವುದು ಸಹಜ. ಹೀಗಾಗಿ ವಾಟ್ಸಪ್ ಫೇಕ್ ಮೆಸೇಜ್ ಗಳನ್ನು ಪತ್ತೆ ಮಾಡಲು ಹೊಸ ಸೇವೆಯನ್ನು ಪರಿಚಯಿಸಿದೆ.

    ನಿಮ್ಮ ವಾಟ್ಸಪ್ ಖಾತೆಗೆ ಬರುವ ಮೆಸೇಜ್, ಲಿಂಕ್ಸ್ ಗಳನ್ನು ‘Checkpoint Tipline’ ಫಾರ್‍ವರ್ಡ್ ಮಾಡುವ ಮೂಲಕ ನಿಮ್ಮ ಸಂದೇಶದ ಸತ್ಯಾಂಶವನ್ನು ತಿಳಿಯಬಹುದು. ‘Checkpoint Tipline’ ಸಿಸ್ಟಮ್ ನಿಂದ ಟೆಕ್ಸ್ಟ್ ಮಸೇಜ್, ವಿಡಿಯೋ ಮತ್ತು ಇಮೇಜ್ ಗಳ ಸತ್ಯಾಂಶವನ್ನು ಪರಿಶೀಲಿಸಲಿದೆ. ಈ ಸರ್ವಿಸ್ ಇಂಗ್ಲಿಷ್, ಹಿಂದಿ, ಬಂಗಾಲಿ, ಮಲಯಾಳಂ ಮತ್ತು ತೆಲಗು ಭಾಷೆಗಳಲ್ಲಿ ಲಭ್ಯವಿದ್ದು ಕನ್ನಡದಲ್ಲಿ ಲಭ್ಯವಿಲ್ಲ.

    PROTO ಜೊತೆ ಪಾಲುದಾರಿಕೆ:
    ಸಂದೇಶಗಳ ಸತ್ಯಾಂಶ ತಿಳಿಯಲು ಇಂಟರ್ ನ್ಯಾಷನಲ್ ಸೆಂಟರ್ ಫಾರ್ ಜರ್ನಲಿಸ್ಟಸ್ (ICFJ) ಜೊತೆ ಅಸೋಸಿಯೇಟೆಡ್ ಮೀಡಿಯಾ ಸ್ಟಾರ್ಟ್ ಅಪ್ PROTO ಜೊತೆ ಪಾಲುದಾರಿಕೆಯ ಒಪ್ಪಂದವನ್ನು ಮಾಡಿಕೊಂಡಿದೆ. ಬಳಕೆದಾರ ಚೆಕ್‍ಪಾಯಿಂಟ್ ಸಹಾಯದಿಂದ ಕಳುಹಿಸುವ ಲಿಂಕ್ ಗಳನ್ನು PROTO ಪರಿಶೀಲನೆ ನಡೆಸುತ್ತದೆ.

    ಹೇಗೆ ಕೆಲಸ ಮಾಡುತ್ತೆ?
    ವಾಟ್ಸಪ್ ನಲ್ಲಿ ಕಳುಹಿಸುವ ಸಂದೇಶಗಳನ್ನು ಬಳಕೆದಾರ ಮಾತ್ರ ಓದಬಹುದು. ಅಂದ್ರೆ ಸೆಂಡರ್ ಮತ್ತು ರಿಸೀವರ್ ಇಬ್ಬರ ನಡುವಿನ ಸಂಭಾಷಣೆ ರಹಸ್ಯವಾಗಿರುತ್ತದೆ. ಹಾಗಾಗಿ ಮೂರನೇ ವ್ಯಕ್ತಿಯಾಗಿ PROTO ಸಂದೇಶ ಓದದೇ, ರಿಸೀವರ್ ಆದೇಶದಂತೆ ಕಾರ್ಯ ನಿರ್ವಹಿಸಲಿದೆ.

    ಪರಿಶೀಲನೆ ಹೇಗೆ?
    ಭಾರತದ ವಾಟ್ಸಪ್ ಬಳಕೆದಾರರು ಚೆಕ್‍ಪಾಯಿಂಟ್ ಟಿಪ್ ಲೈನ್ (+91-9643000888) ನಂಬರ್ ಗೆ ಮೆಸೇಜ್ ಕಳುಹಿಸಬೇಕು. ನೀವು ನೀಡಿರುವ ದತ್ತಾಂಶ, ಮೆಸೇಜ್, ಲಿಂಕ್, ವಿಡಿಯೋ ಮತ್ತು ಇಮೇಜ್ ಗಳನ್ನು ಪರಿಶೀಲಿಸಿ ಸುಳ್ಳು, ಭ್ರಮೆ (Misleading), ವಿವಾದಿತ ಸುದ್ದಿಗಳಂತೆ ವರ್ಗಿಕರಿಸಿ ಉತ್ತರಿಸುತ್ತದೆ.

  • ಬಾಯ್ ಫ್ರೆಂಡ್ಸ್ ಗಲಾಟೆ ಕೇಸ್ – ಮೆಸೇಜ್ ಮೂಲಕ ರಾಗಿಣಿ ಪ್ರತಿಕ್ರಿಯೆ

    ಬಾಯ್ ಫ್ರೆಂಡ್ಸ್ ಗಲಾಟೆ ಕೇಸ್ – ಮೆಸೇಜ್ ಮೂಲಕ ರಾಗಿಣಿ ಪ್ರತಿಕ್ರಿಯೆ

    ಬೆಂಗಳೂರು: ಸ್ಯಾಂಡಲ್‍ವುಡ್ ತುಪ್ಪದ ಬೆಡಗಿ ರಾಗಿಣಿ ದ್ವಿವೇದಿಯ ಬಾಯ್ ಫ್ರೆಂಡ್ಸ್ ಗಲಾಟೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಟಿ ಮೆಸೇಜ್ ಮೂಲಕ ಪ್ರತಿಕ್ರಿಯೆ ನೀಡಿದ್ದಾರೆ.

    ರಾಗಿಣಿ ಈ ವಿವಾದದ ಬಗ್ಗೆ ಪ್ರತಿಕ್ರಿಯಿಸಿ, “ಈ ಘಟನೆ ಶಿವಪ್ರಕಾಶ್ ಹಾಗೂ ರವಿ ಅವರಿಗೆ ಸಂಬಂಧಿಸಿದ ವಿಷಯ. ನಾನು ಈ ಸುದ್ದಿ ನೋಡಿ ಶಾಕ್ ಹಾಗೂ ಬೇಸರದಿಂದ್ದೇನೆ. ನಾನು ಶೂಟಿಂಗ್‍ನಲ್ಲಿ ಬ್ಯುಸಿಯಾಗಿದ್ದೇನೆ. ನನಗೆ ಹಾಗೂ ಈ ಘಟನೆಗೆ ಸಂಬಂಧ ಇಲ್ಲ. ನಾನು ಎಲ್ಲರಂತೆ ಅಲ್ಲಿ ಪ್ರತ್ಯಕ್ಷದರ್ಶಿ ಆಗಿದ್ದೆ” ಎಂದು ಹೇಳಿದ್ದಾರೆ.

    ಈ ವಿಚಾರದ ಬಗ್ಗೆ ನಾನು ಕೇವಲ ಪೊಲೀಸರಿಗೆ ಮಾತ್ರ ಉತ್ತರಿಸುತ್ತೇನೆ. ನನಗೆ ಸಂಬಂಧಿಸದ ವಿಷಯದಲ್ಲಿ ನನ್ನನ್ನು ಎಳೆದು ತರುತ್ತಿರುವುದು ಸರಿಯಲ್ಲ. ನನ್ನನ್ನು ಈ ವಿಚಾರದಲ್ಲಿ ಎಳೆದು ತರಬೇಡಿ. ಈ ಘಟನೆಯ ಬಗ್ಗೆ ಯಾರಾದರೂ ನನ್ನ ಫೋಟೋ ಬಳಸಿಕೊಂಡಲ್ಲಿ ಅವರ ವಿರುದ್ಧ ಕ್ರಮಕೈಗೊಳ್ಳಲಾಗುತ್ತದೆ ಎಂದು ರಾಗಿಣಿ ತಿಳಿಸಿದ್ದಾರೆ.

    ಏನಿದು ಪ್ರಕರಣ?:
    ಬೆಂಗಳೂರಿನ ಖಾಸಗಿ ಹೋಟೆಲ್ ರಿಟ್ಜ್ ಕಾರ್ಲ್ ಟನ್ ನಲ್ಲಿ ಉದ್ಯಮಿ ಶಿವಪ್ರಕಾಶ್ ಚಿಪ್ಪಿ ಹಾಗೂ ಆರ್ ಟಿಒ ಅಧಿಕಾರಿ ರವಿ ಕಿತ್ತಾಡಿಕೊಂಡಿದ್ದರು. ಶನಿವಾರ ರಾತ್ರಿ ಹೋಟೆಲ್ ನಲ್ಲಿ ಶಿವಪ್ರಕಾಶ್ ಪಾರ್ಟಿ ಮಾಡುತ್ತಿದ್ದರು. ಈ ವೇಳೆ ನಟಿ, ತಮ್ಮ ಗೆಳೆಯ ರವಿಯೊಂದಿಗೆ ಹೋಟೆಲ್‍ಗೆ ತೆರಳಿದ್ದರು. ಇದನ್ನು ಕಂಡ ಶಿವಪ್ರಕಾಶ್, ರವಿಯೊಂದಿಗೆ ಕಿರಿಕ್ ಮಾಡಿಕೊಂಡಿದ್ದಾರೆ. ಅಲ್ಲದೆ ಕೊಲೆ ಮಾಡುವುದಾಗಿ ಬೆದರಿಕೆ ಕೂಡ ಹಾಕಿದ್ದಾರೆ. ಇಬ್ಬರ ನಡುವೆ ಆರಂಭವಾದ ಜಗಳ ತಾರಕಕ್ಕೇರಿ ಬಳಿಕ ಬಿಯರ್ ಬಾಟಲಿಯಿಂದ ಪರಸ್ಪರ ಬಡಿದಾಡಿಕೊಂಡಿದ್ದಾರೆ. ಘಟನೆಯಿಂದ ಗಾಯಗೊಂಡ ಬಳಿಕ ರವಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದುಕೊಂಡು ನಂತರ ಅಶೋಕ ನಗರ ಪೊಲೀಸ್ ಠಾಣೆಗೆ ತೆರಳಿ ಲಿಖಿತ ದೂರು ನೀಡಿದ್ದಾರೆ. ರವಿ ನೀಡಿದ ದೂರಿನ ಅನ್ವಯ ಪೊಲೀಸರು ಎಫ್‍ಐಆರ್ ದಾಖಲಿಸಿ ಶಿವಪ್ರಕಾಶ್ ರನ್ನು ವಿಚಾರಣೆಗೆ ಒಳಪಡಿಸಿರುವುದಾಗಿ ಪೊಲೀಸ್ ಮೂಲಗಳಿಂದ ತಿಳಿದುಬಂದಿತ್ತು.

    ಇವರಿಬ್ಬರು ರಾಗಿಣಿ ವಿಚಾರದಲ್ಲಿ ಕಿತ್ತಾಡಿಕೊಂಡಿದ್ದರು ಎಂದು ವರದಿಯಾಗಿತ್ತು. ಆದರೆ ಈಗ ರಾಗಿಣಿ ಈ ವಿಚಾರಕ್ಕೂ ನನಗೂ ಯಾವುದೇ ಸಂಬಂಧವಿಲ್ಲ ಎಂದು ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

  • ತಾಯಿಗೆ ಮೆಸೇಜ್ ಮಾಡಿ ಕಿರುತೆರೆ ನಟಿ ಆತ್ಮಹತ್ಯೆ

    ತಾಯಿಗೆ ಮೆಸೇಜ್ ಮಾಡಿ ಕಿರುತೆರೆ ನಟಿ ಆತ್ಮಹತ್ಯೆ

    ಚೆನ್ನೈ: ತಮಿಳಿನ ಖ್ಯಾತ ನಟಿ ಯಶಿಕಾ ತನ್ನ ತಾಯಿಗೆ ಮೆಸೇಜ್ ಮಾಡಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಮಿಳುನಾಡಿನ ಚೆನ್ನೈನಲ್ಲಿರುವ ಪೆರಾವಲೂರ್ ನಲ್ಲಿ ನಡೆದಿದೆ.

    ಯಶಿಕಾ ಮೂಲ ಹೆಸರು ಮೇರಿ ಶೀಲಾ ಜೀಬ್ರಾನಿ ಆಗಿದ್ದು, ವದಪಾಲಾನಿಯ ಹಾಸ್ಟೆಲ್‍ವೊಂದರಲ್ಲಿ ವಾಸಿಸುತ್ತಿದ್ದರು. ಈ ವೇಳೆ ಆಕೆ ಮೋಹನ್ ಬಾಬು ಅಲಿಯಾಸ್ ಅರವಿಂದ್‍ನನ್ನು ಪ್ರೀತಿಸಲು ಶುರು ಮಾಡಿದ್ದರು.

    ಯಶಿಕಾ ಹಾಗೂ ಮೋಹನ್ ಇಬ್ಬರು ಪ್ರೀತಿಸಲು ಶುರು ಮಾಡಿ ಕೆಲವೇ ತಿಂಗಳಿನಲ್ಲಿ ಪೇರವಲೂರ್ ನ ಜಿಕೆಎಮದ ಕಾಲೋನಿಯಲ್ಲಿ ಬಾಡಿಗೆ ಮನೆಯಲ್ಲಿ ಲಿವಿಂಗ್ ರಿಲೇಶನ್‍ಶಿಪ್‍ನಲ್ಲಿದ್ದರು. ಇತ್ತೀಚೆಗೆ ಇವರಿಬ್ಬರ ನಡುವೆ ಜಗಳವಾಗಿ ಮೋಹನ್ ಮನೆ ಬಿಟ್ಟು ಹೋಗಿದ್ದನು ಎಂದು ಹೇಳಲಾಗುತ್ತಿದೆ.

    ಆತ್ಮಹತ್ಯೆ ಮಾಡಿಕೊಳ್ಳುವ ಮುನ್ನ ಯಶಿಕಾ ತನ್ನ ತಾಯಿಗೆ ವಾಟ್ಸಾಪ್‍ನಲ್ಲಿ ಮೆಸೇಜ್ ಮಾಡಿದ್ದು, ಮೋಹನ್ ಬಾಬು ನನ್ನನ್ನು ಮದುವೆ ಆಗಲು ನಿರಾಕರಿಸಿದ್ದಾನೆ. ಅಲ್ಲದೇ ನನಗೆ ನಿರಂತರವಾಗಿ ಕಿರುಕುಳ ನೀಡುತ್ತಿದ್ದಾನೆ. ಆತನಿಗೆ ಸರಿಯಾದ ಶಿಕ್ಷೆ ನೀಡಬೇಕು ಎಂದು ತಿಳಿಸಿದ್ದಾರೆ.

    ನಾವು ಮೋಹನ್ ಬಾಬು ವಿರುದ್ಧ ದೂರನ್ನು ದಾಖಲಿಸಿಕೊಂಡು ಆತನಿಗಾಗಿ ಹುಡುಕಾಡುತ್ತಿದ್ದೇವೆ. ಆತ ಸಿಕ್ಕಿದ ಮೇಲೆ ಯಶಿಕಾ ಸಾವಿನ ರಹಸ್ಯ ಗೊತ್ತಾಗುತ್ತದೆ. ಯಶಿಕಾ ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದ್ದು, ವರದಿಗಾಗಿ ಕಾಯುತ್ತಿದ್ದೇವೆ ಎಂದು ಪೆರಾವಲೂರ್ ಪೊಲೀಸ್ ಠಾಣೆಯ ಅಧಿಕಾರಿ ಹೇಳಿದ್ದಾರೆ.

    ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv