Tag: ಮೆಸೇಜ್

  • ತಾನು ಪ್ರೀತಿಸುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ!

    ತಾನು ಪ್ರೀತಿಸುತ್ತಿದ್ದ ಯುವತಿಗೆ ಮೆಸೇಜ್ ಮಾಡಿದ್ದಕ್ಕೆ ಸ್ನೇಹಿತನ ಮೇಲೆ ಮಾರಣಾಂತಿಕ ಹಲ್ಲೆ!

    ಬೆಂಗಳೂರು: ಪ್ರೀತಿ ಮಾಡುತ್ತಿದ್ದ ಯುವತಿಗೆ ಮೆಸೇಜ್ (Lover Message) ಮಾಡುತ್ತಿದ್ದ ಎಂಬ ಕಾರಣಕ್ಕೆ ಯುವಕನ ಮೇಲೆ ಮಾರಕಾಸ್ತ್ರಗಳಿಂದ ದಾಳಿ ಮಾಡಿ ತಲೆಮರೆಸಿಕೊಂಡಿದ್ದ ಪುಡಿ ರೌಡಿಗಳನ್ನ ಪೊಲೀಸರು ಬಂಧಿಸಿದ್ದಾರೆ.

    ಶಶಾಂಕ್ ಹಾಗೂ ನಂದನ್ ಬಂಧಿತ ಇಬ್ಬರು ಆರೋಪಿಗಳು. ಶಶಾಂಕ್, ಯುವತಿಯೊಬ್ಬಳನ್ನು ಪ್ರೀತಿ ಮಾಡುತ್ತಿರುತ್ತಾನೆ. ಈತನ ಸ್ನೇಹಿತ ಹರ್ಷಿತ್ ಕುಮಾರ್ ಬುಲ್ ಟೆಂಪಲ್ ರಸ್ತೆಯಲ್ಲಿ ಬರುವ ಉಮಾ ಟಾಕೀಸ್ ಬಳಿ ಫ್ಲವರ್ ಡೆಕೊರೇಷನ್ ಅಂಗಡಿ ಇಟ್ಟುಕೊಂಡಿರುತ್ತಾನೆ.

    ಶಶಾಂಕ್ ಲವರ್ ಹರ್ಷಿತ್ ಕುಮಾರ್ ಗೆ ಪರಿಚಯವಾಗಿರುತ್ತಾರೆ. ಹರ್ಷಿತ್ ಕುಮಾರ್ ಪರಿಚಯ ಸ್ನೇಹಕ್ಕೆ ತಿರುಗಿ ಯುವತಿ ಹಾಗೂ ಹರ್ಷಿತ್ ಇಬ್ಬರು ಚಾಟ್ ಮಾಡಿಕೊಂಡಿರುತ್ತಾರೆ. ಇದು ಶಶಾಂಕ್ ಗಮನಕ್ಕೆ ಬಂದು ಪ್ರಶ್ನೆ ಮಾಡಿದ್ದಾನೆ. ಯುವತಿ ಮುಂದೆ ಹರ್ಷಿತ್ ಫೋನ್ ಕೇಳಿದಾಗ ಆತ ಕೊಡಲು ನಿರಾಕರಿಸಿದ್ದಾನೆ. ಯುವತಿ ಮೊಬೈಲ್ ಕೊಡಲು ಸೂಚಿಸಿದಾಗ ಹರ್ಷಿತ್, ಶಶಾಂಕ್ ಕೈಯಲ್ಲಿ ಮೊಬೈಲ್ ಕೊಟ್ಟಿದ್ದಾರೆ.

    ಆರೋಪಿ ಮೊಬೈಲ್ ಪರಿಶೀಲನೆ ಮಾಡಿ ನೋಡಿದಾಗ ಹರ್ಷಿತ್ ಮತ್ತೆ ಶಶಾಂಕ್ ಲವರ್ ಚಾಟ್ ಮಾಡಿರುವು ಬೆಳಕಿಗೆ ಬರುತ್ತಿದ್ದಂತೆ ಸ್ನೇಹಿತ ನಂದನ್ ಜೊತೆ ಸೇರಿಕೊಂಡು ಹರ್ಷಿತ್ ಮಾರಕಾಸ್ತ್ರಗಳಿಂದ ಮಾರಣಾಂತಿಕವಾಗಿ ಹಲ್ಲೆ ಮಾಡಿ ಅಲ್ಲಿಂದ ಎಸ್ಕೇಪ್ ಆಗಿರುತ್ತಾರೆ. ಸ್ಥಳೀಯರು ಹಲ್ಲೆಗೆ ಒಳಗಾಗಿದ್ದ ಹರ್ಷಿತ್ ಗೆ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಿದ್ದಾರೆ. ಬಳಿಕ ಘಟನೆ ಸಂಬಂಧ ಶಂಕರಪುರ ಪೊಲೀಸ್ ಠಾಣೆಯಲ್ಲಿ ಹರ್ಷಿತ್ ಪೋಷಕರು ದೂರು ದಾಖಲಿಸುತ್ತಾರೆ. ಪ್ರಕರಣ ಸಂಬಂಧ ಕೇಸ್ ದಾಖಲಿಸಿಕೊಂಡ ಪೊಲೀಸರು ಆರೋಪಿ ಶಶಾಂಕ್ ಹಾಗೂ ನಂದನ್ ಬಂಧಿಸಿ ಜೈಲಿಗೆ ಕಳಿಸಿದ್ದಾರೆ.

  • Emergency Alert Test- ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್

    Emergency Alert Test- ಮೊಬೈಲ್‍ಗೆ ಬಂತು ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಮೆಸೇಜ್

    ಬೆಂಗಳೂರು: ಮುಂಬರುವ ದಿನಗಳಲ್ಲಿ ಸಂಭವಿಸುವ ವಿಕೋಪಗಳ ಕುರಿತು ಮುನ್ಸೂಚನೆ ನೀಡುವ ನಿಟ್ಟಿನಲ್ಲಿ ಪ್ರತಿಯೊಬ್ಬರ ಮೊಬೈಲ್‍ಗೆ ಇದೀಗ ಎಚ್ಚರಿಕೆ ರೀತಿಯ ಬೀಪ್ ಶಬ್ಧದೊಂದಿಗೆ ಫ್ಲ್ಯಾಶ್ ಸಂದೇಶವೊಂದು (Flash Message To Mobile) ಬಂದಿದೆ.

    ರಾಜ್ಯದಲ್ಲಿ ದೂರಸಂಪರ್ಕ ಇಲಾಖೆ (ಸಿ-ಡಾಟ್) ಸೆಲ್ ಬ್ರಾಡ್ ಕಾಸ್ಟಿಂಗ್ ಮೂಲಕ ಸ್ಮಾರ್ಟ್‍ಫೋನ್ ಬಳಕೆದಾರರಿಗೆ ತುರ್ತು ಎಚ್ಚರಿಕೆ ವ್ಯವಸ್ಥೆಯ ಕುರಿತು ಕಳೆದೆರಡು ದಿಗಳಿಂದ ಸಂದೇಶಗಳು ಬರುತ್ತಿದ್ದವು. ಅಂತೆಯೇ ಇಂದು (ಗುರುವಾರ) ಮಧ್ಯಾಹ್ನ 12 ಗಂಟೆ ಸುಮಾರಿಗೆ ಇಂಗ್ಲಿಷ್ ಮತ್ತು ಕನ್ನಡದಲ್ಲಿ 2 ಬಾರಿ ಫ್ಲ್ಯಾಶ್ ಮೆಸೇಜ್ ಜೊತೆ ವಿಭಿನ್ನ ಶಬ್ದ ಕೂಡ ಮೊಬೈಲ್‍ಗೆ ಬಂದಿದೆ.

    ಸಂದೇಶದಲ್ಲಿ ಏನಿತ್ತು..?: ಇದು ಭಾರತ ಸರ್ಕಾರದ ದೂರಸಂಪರ್ಕ ಇಲಾಖೆಯಿಂದ ಸೆಲ್ ಬ್ರಾಡ್ ಕಾಸ್ಟಿಂಗ್ ಸಿಸ್ಟಮ್ ಮೂಲಕ ಕಳುಹಿಸಲಾದ ಮಾದರಿ ಪರೀಕ್ಷಾ (Alert Test Message) ಸಂದೇಶವಾಗಿದೆ. ನಿಮ್ಮ ಕಡೆಯಿಂದ ಯಾವುದೇ ರೀತಿಯ ಪ್ರತಿಕ್ರಿಯೆಯ ಅಗತ್ಯವಿಲ್ಲದ ಕಾರಣ ದಯವಿಟ್ಟು ಈ ಸಂದೇಶವನ್ನು ನಿರ್ಲಕ್ಷಿಸಿ. ರಾಷ್ಟ್ರೀಯ ವಿಪತ್ತು ನಿರ್ವಹಣಾ ಪ್ರಾಧಿಕಾರವು ಜಾರಿಗೊಳಿಸುತ್ತಿರುವ ಪ್ಯಾನ್-ಇಂಡಿಯಾ ತುರ್ತು ಎಚ್ಚರಿಕೆ ವ್ಯವಸ್ಥೆಯನ್ನು ಪರೀಕ್ಷಿಸಲು ಈ ಸಂದೇಶವನ್ನು ಕಳುಹಿಸಲಾಗಿದೆ. ಇದು ಸಾರ್ವಜನಿಕ ಸುರಕ್ಷತೆಯನ್ನು ಹೆಚ್ಚಿಸಲು ಮತ್ತು ತುರ್ತು ಸಂದರ್ಭಗಳಲ್ಲಿ ಸಕಾಲಿಕ ಎಚ್ಚರಿಕೆಗಳನ್ನು ಒದಗಿಸುವ ಗುರಿಯನ್ನು ಹೊಂದಿದೆ ಎಂದು ತಿಳಿಸಲಾಗಿದೆ.  ಇದನ್ನೂ ಓದಿ: ಗಾಝಾ ನಗರಕ್ಕೆ ಇಸ್ರೇಲ್ ದಿಗ್ಬಂಧನ – ಅನ್ನ, ನೀರಿಗೂ ಪ್ಯಾಲೆಸ್ತೀನಿಯರ ಪರದಾಟ

    ಭಯಪಡಬೇಡಿ: ಈ ಮೊದಲು ಕಳುಹಿಸಲಾಗಿದ್ದ ಸಂದೇಶದಲ್ಲಿ ಫೋನ್ ಜೋರಾಗಿ ಎಚ್ಚರಿಕೆಯ ರೀತಿಯ ಬೀಪ್ ಶಬ್ಧದೊಂದಿಗೆ ಸಂದೇಶ ಫ್ಲ್ಯಾಶ್ ಆಗಲಿದೆ. ಬಳಕೆದಾರರು ಓಕೆ ಕೊಡುವವರೆಗೂ ಈ ಶಬ್ಧ ಬರುತ್ತಲೇ ಇರುತ್ತದೆ. ಈ ಮೂಲಕ ಎಚ್ಚರಿಕೆ ಸಂದೇಶವನ್ನು ಓದಲಾಗಿದೆಯೇ ಎಂದು ಖಚಿತಪಡಿಸಿಕೊಳ್ಳುವುದು ಇದರ ಉದ್ದೇಶವಾಗಿದೆ. ಆದರೆ ಇದಕ್ಕೆ ಸಾರ್ವಜನಿಕರು ಭಯಪಡುವ ಅಗತ್ಯವಿಲ್ಲ ಎಂದು ಹೇಳಲಾಗಿತ್ತು.

    Web Stories
    [web_stories title=”true” excerpt=”false” author=”false” date=”false” archive_link=”false” archive_link_label=”” circle_size=”150″ sharp_corners=”false” image_alignment=”left” number_of_columns=”1″ number_of_stories=”10″ order=”DESC” orderby=”post_date” view=”carousel” /]

  • ಪ್ರಿಯತಮೆಗೆ ಮೆಸೇಜ್ ಮಾಡಿದ ರೂಂಮೇಟ್‍ಗೆ ಚಾಕುವಿನಿಂದ ಇರಿದ!

    ಪ್ರಿಯತಮೆಗೆ ಮೆಸೇಜ್ ಮಾಡಿದ ರೂಂಮೇಟ್‍ಗೆ ಚಾಕುವಿನಿಂದ ಇರಿದ!

    ಮೈಸೂರು: ತನ್ನ ಪ್ರಿಯತಮೆಗೆ ಮೆಸೇಜ್ (Message to Lover) ಮಾಡಿದನೆಂದು ಯುವಕನೊಬ್ಬ ತನ್ನ ರೂಮೇಟ್‍ಗೆ ಚಾಕು ಇರಿದ ಪ್ರಸಂಗವೊಂದು ಅರಮನೆ ನಗರಿ ಮೈಸೂರಿ (Mysuru) ನಲ್ಲಿ ನಡೆದಿದೆ. ಗಾಯಾಳುವನ್ನು ಶಿವಕುಮಾರ್ ಎಂದು ಗುರುತಿಸಲಾಗಿದ್ದು, ಈತನಿಗೆ ಸ್ನೇಹಿತ ಶ್ರೇಯಸ್ ಚಾಕು ಇರಿದಿದ್ದಾನೆ.

    ನಡೆದಿದ್ದೇನು..?: ಶ್ರೇಯಸ್ ಹಾಗೂ ಶಿವಕುಮಾರ್ ಇಬ್ಬರು ಸ್ನೇಹಿತರಾಗಿದ್ದು, ಜನತಾನಗರದಲ್ಲಿ ಒಂದೇ ರೂಮಿನಲ್ಲಿ ವಾಸವಾಗಿದ್ದರು. ಶ್ರೇಯಸ್ ಯುವತಿಯೊಬ್ಬಳನ್ನು ಪ್ರೀತಿಸುತ್ತಿದ್ದನು. ಆದರೆ ಅದೇ ಯುವತಿ ಜೊತೆ ಸ್ನೇಹಿತ ಹಾಗೂ ರೂಮೇಟ್ ಆಗಿರುವ ಶಿವಕುಮಾರ್ ಕಾಂಟಾಕ್ಟ್ ಮಾಡಿದ್ದಾನೆ. ಹೀಗೆ ಶ್ರೇಯಸ್ ಪ್ರೀತಿಸುತ್ತಿದ್ದ ಯುವತಿಗೆ ಶಿವಕುಮಾರ್ ಮೆಸೇಜ್ ಮಾಡುತ್ತಿದ್ದ. ಈ ಮೂಲಕ ಸ್ನೇಹಿತನ ಪ್ರಿಯತಮೆ ಜೊತೆ ಶಿವಕುಮಾರ್ ನಿರಂತರ ಸಂಪರ್ಕದಲ್ಲಿದ್ದನು.

    ಈ ವಿಚಾರ ಶ್ರೇಯಸ್ ಗೆ ಗೊತ್ತಾಗಿ ಇಬ್ಬರ ನಡುವೆ ವಾಗ್ವಾದಗಳು ನಡೆದಿವೆ. ಅಲ್ಲದೆ ನನ್ನ ಲವ್ವರ್‍ಗೆ ಮೆಸೇಜ್ ಮಾಡಬೇಡ ಎಂದು ಶ್ರೇಯಸ್ ಎಚ್ಚರಿಕೆ ನೀಡಿದ್ದನು. ಆದರೂ ಶಿವಕುಮಾರ್ ಆಗಾಗ ಯುವತಿಗೆ ಮೆಸೇಜ್ ಮಾಡುತ್ತಿದ್ದ. ಈ ವಿಚಾರವಾಗಿ ನಂಜನಗೂಡು ರಿಂಗ್ ರಸ್ತೆ ಬಳಿ ಇಬ್ಬರ ನಡುವೆ ದೊಡ್ಡ ಗಲಾಟೆ ನಡೆದಿದ್ದು, ಜಗಳ ತಾರಕಕ್ಕೇರಿ ಶ್ರೇಯಸ್, ಶಿವಕುಮಾರ್ ಗೆ ಚಾಕುವಿನಿಂದ ಇರಿದಿದ್ದಾನೆ. ಕೂಡಲೇ ಶಿವಕುಮಾರ್ ನನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿದೆ.

    ಘಟನೆ ಸಂಬಂಧ ವಿದ್ಯಾರಣ್ಯಪುರಂ ಪೊಲೀಸ್ ಠಾಣೆ (Vidyaranyapuram Police Station) ಯಲ್ಲಿ ಪ್ರಕರಣ ದಾಖಲಾಗಿದೆ. ಇದನ್ನೂ ಓದಿ: ಅಪ್ರಾಪ್ತೆಯನ್ನು ವಿವಾಹವಾಗಿ ಗರ್ಭಿಣಿ ಮಾಡಿದ 17ರ ಹುಡುಗ ಅರೆಸ್ಟ್

  • ಕಳುಹಿಸಿದ ಮೆಸೇಜ್ ಎಡಿಟ್ ಮಾಡ್ಬೋದು – ವಾಟ್ಸಪ್‌ನಲ್ಲಿ ಹೊಸ ಆಯ್ಕೆ

    ಕಳುಹಿಸಿದ ಮೆಸೇಜ್ ಎಡಿಟ್ ಮಾಡ್ಬೋದು – ವಾಟ್ಸಪ್‌ನಲ್ಲಿ ಹೊಸ ಆಯ್ಕೆ

    ವಾಷಿಂಗ್ಟನ್: ವಿಶ್ವದಲ್ಲೇ ಅತ್ಯಂತ ಜನಪ್ರಿಯ ಮೆಸೇಜಿಂಗ್ ಪ್ಲಾಟ್‌ಫಾರ್ಮ್ ವಾಟ್ಸಪ್ (Whatsapp) ಇದೀಗ ಅತ್ಯಂತ ನಿರೀಕ್ಷಿತ ಫೀಚರ್ (Feature) ಒಂದನ್ನು ಹೊರ ತಂದಿದೆ. ಇದೀಗ ಬಳಕೆದಾರರು ತಮ್ಮ ಸ್ನೇಹಿತರಿಗೆ ತಪ್ಪಾಗಿ ಕಳುಹಿಸಿದ ಸಂದೇಶವನ್ನು (Message)  ಎಡಿಟ್ (Edit) ಮಾಡಲು ಹೊಸ ಆಯ್ಕೆಯನ್ನು ವಾಟ್ಸಪ್ ಪರಿಚಯಿಸಿದೆ.

    ಈ ಹಿಂದೆ ವಾಟ್ಸಪ್‌ನಲ್ಲಿ ಬಳಕೆದಾರರು ತಪ್ಪಾಗಿ ಸಂದೇಶವನ್ನು ಕಳುಹಿಸಿದ್ದಲ್ಲಿ ಅದನ್ನು ನೇರವಾಗಿ ಡಿಲೀಟ್ ಮಾಡಲು ಆಯ್ಕೆ ನೀಡಲಾಗಿತ್ತು. ಇದೀಗ ಬಳಕೆದಾರರು ಆ ಸಂದೇಶವನ್ನು ಅಳಿಸುವ ಅಗತ್ಯವಿಲ್ಲ. ಸಂದೇಶವನ್ನು ಎಡಿಟ್ ಮಾಡುವ ಮೂಲಕ ತಪ್ಪನ್ನು ಸರಿಪಡಿಸಿಕೊಳ್ಳಬಹುದಾಗಿದೆ.

    ವಾಟ್ಸಪ್ ಕಳುಹಿಸಿದ ಸಂದೇಶಗಳಲ್ಲಿ ಅಕ್ಷರ ತಪ್ಪುಗಳಿಂದ ಹಿಡಿದು ಹೆಚ್ಚಿನ ಪದಗಳನ್ನು ಸೇರಿಸುವವರೆಗೂ ಎಡಿಟ್ ಮಾಡಲು ಅವಕಾಶ ನೀಡುತ್ತಿದೆ. ಸಂದೇಶಗಳನ್ನು ಎಡಿಟ್ ಮಾಡಲು ಸರಳವಾಗಿ ಕಳುಹಿಸಿದ ಸಂದೇಶದ ಮೇಲೆ ದೀರ್ಘವಾಗಿ ಒತ್ತಿ. ನಂತರ ಮೆನುವಿನಲ್ಲಿ ಕಾಣಿಸುವ ಎಡಿಟ್ ಆಯ್ಕೆಯನ್ನು ಬಳಸಿದರೆ ಸುಲಭವಾಗಿ ಸಂದೇಶವನ್ನು ಸರಿಪಡಿಸಬಹುದು. ಇದನ್ನೂ ಓದಿ: ಕೆಲ Gmail ಖಾತೆಗಳನ್ನು ಡಿಲೀಟ್ ಮಾಡಲು ಮುಂದಾದ Google!

    ಒಂದು ಸಂದೇಶವನ್ನು ಕಳುಹಿಸಿದ 15 ನಿಮಿಷಗಳ ವರೆಗೆ ಎಡಿಟ್ ಮಾಡಲು ಸಾಧ್ಯವಾಗುತ್ತದೆ. ಒಮ್ಮೆ ಸಂದೇಶವನ್ನು ಎಡಿಟ್ ಮಾಡಿದ್ದಲ್ಲಿ, ಅದರ ಪಕ್ಕದಲ್ಲಿ ‘Edited’ (ಎಡಿಟ್ ಮಾಡಲಾಗಿದೆ) ಎಂಬುದನ್ನು ಸೂಚಿಸುತ್ತದೆ. ಇದು ಸಂದೇಶವನ್ನು ಎಡಿಟ್ ಮಾಡಲಾಗಿದೆಯೇ ಎಂಬುದನ್ನು ಸುಲಭವಾಗಿ ತಿಳಿಸುತ್ತದೆ.

    ಈಗಾಗಲೇ ವಾಟ್ಸಪ್ ಜಾಗತಿಕವಾಗಿ ಬಳಕೆದಾರರಿಗೆ ಈ ಫೀಚರ್ ಅನ್ನು ಹೊರ ತರಲು ಪ್ರಾರಂಭಿಸಿದೆ. ಮುಂದಿನ ವಾರಗಳಲ್ಲಿ ಜಾಗತಿಕವಾಗಿ ಎಲ್ಲಾ ಬಳಕೆದಾರರಿಗೂ ಲಭ್ಯವಾಗಲಿದೆ. ಇದನ್ನೂ ಓದಿ: Layoff: 11 ಸಾವಿರ ಜಾಬ್ ಕಟ್‌ಗೆ ವೊಡಾಫೋನ್ ಪ್ಲ್ಯಾನ್

  • ಪತ್ನಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗೆಳೆಯ ಮಟಾಶ್!

    ಪತ್ನಿಗೆ ಮೆಸೇಜ್ ಮಾಡಿದ್ದನ್ನು ಪ್ರಶ್ನಿಸಿದ್ದಕ್ಕೆ ಗೆಳೆಯ ಮಟಾಶ್!

    ದಾವಣಗೆರೆ: ಆತ ಬಡತನದಲ್ಲಿದ್ದರೂ ಕಷ್ಟಪಟ್ಟು ದುಡಿದು ಸಂಸಾರ ತೂಗಿಸಿಕೊಂಡು ಹೋಗುತ್ತಿದ್ದ. ಹೆಂಡತಿ ಜೊತೆ ಆಗಾಗಾ ಜಗಳ ಮಾಡಿದರೂ ತನ್ನ ಹೆಂಡತಿ ಮಕ್ಕಳ ಜೊತೆ ಸಂತೋಷ ದಿಂದ ಜೀವನ ನಡೆಸುತ್ತಿದ್ದ, ಸ್ನೇಹಿತರ ಜೊತೆ ಕೂಡ ಅತ್ಮೀಯತೆಯಿಂದ ಇದ್ದ. ಆದರೆ ಆತನ ಸ್ನೇಹಿತನೇ ಆತನಿಗೆ ಯಮರೂಪಿಯಾದ. ಕ್ಷುಲ್ಲಕ ಕಾರಣಕ್ಕೆ ಆತನ ಹೆಣ ಬಿದ್ದಿದೆ.

    ಮೃತನನ್ನು ಪ್ರಶಾಂತ್ ಎಂದು ಗುರುತಿಸಲಾಗಿದ್ದು, ಈತ ದಾವಣಗೆರೆ (Davanagere) ಯ ಕಬ್ಬೂರು ಬಸಪ್ಪ ನಗರದ ನಿವಾಸಿ. ಮದುವೆಯಾಗಿದ್ದು ಒಂದು ಮಗು ಕೂಡ ಇದೆ. ಬಡತನವಿದ್ದರೂ ಟೈಲ್ಸ್ ಜೋಡಿಸುವ ಕೆಲಸ ಮಾಡಿಕೊಂಡು ಯಾವುದಕ್ಕೂ ಕೊರತೆಯಾಗದಂತೆ ಸಂಸಾರ ನಡೆಸುತ್ತಿದ್ದ, ಅದರಲ್ಲೂ ಅದೇ ಏರಿಯಾದ ಕೆಲ ಯುವಕರ ಜೊತೆ ಸೇರಿ ಕೆಲಸವಿಲ್ಲದ ಸಮಯದಲ್ಲಿ ಗುಂಪು ಕಟ್ಟಿಕೊಂಡು ಒಡಾಡುತ್ತಿದ್ದ. ಆದರೆ ಅದೇನಾಯಿತೋ ಗೊತ್ತಿಲ್ಲ ಕಳೆದ ರಾತ್ರಿ ಅವರ ಮನೆ ಪಕ್ಕದಲ್ಲಿರುವ ಎಲವಟ್ಟಿ ರೈಸ್ ಮಿಲ್ ಬಳಿ ಇರುವ ಪಾಳು ಬಿದ್ದ ಜಾಗದಲ್ಲಿ ಶವ ಪತ್ತೆಯಾಗಿದೆ. ಇದನ್ನೂ ಓದಿ: ದಯವಿಟ್ಟು ನನ್ನನ್ನು ಜೈಲಿಂದ ಹೊರಗೆ ಕಳಿಸ್ಬೇಡಿ – ಎನ್‌ಕೌಂಟರ್ ಭೀತಿಗೆ ನ್ಯಾಯಾಲಯ ಮೊರೆ ಹೋದ UP ಗ್ಯಾಂಗ್‌ಸ್ಟರ್

    ಕಳೆದ ರಾತ್ರಿ 8 ಗಂಟೆಗೆ ಅದೇ ಏರಿಯಾದ ಪ್ರಶಾಂತ್ ಸ್ನೇಹಿತ ರಾಕೇಶ್ ಜೊತೆ ಹೋಗಿದ್ದ, ತದಂತರ ಫೋನ್ ಸ್ವಿಚ್ ಆಪ್ ಆಗಿತ್ತು. ಎಷ್ಟು ಹುಡುಕಿದರು ಪತ್ತೆಯಾಗದ ಹಿನ್ನೆಲೆ ಎಲ್ಲೋ ಸ್ನೇಹಿತರ ಜೊತೆ ಹೋಗಿದ್ದಾನೆ ಎಂದುಕೊಂಡಿದ್ದರು. ಆದರೆ ಪ್ರಶಾಂತ್ ಸ್ನೇಹಿತ ರಾಕೇಶ್ ಆರ್ ಎಂಸಿ ಠಾಣೆಗೆ ಹೋಗಿ ಪ್ರಶಾಂತ್‍ನನ್ನು ಕೊಲೆ ಮಾಡಿದ್ದೇನೆ ಎಂದು ಒಪ್ಪಿಕೊಂಡು ಸರೆಂಡರ್ ಆದಾಗ ಪ್ರಶಾಂತ್ ಬರ್ಬರವಾಗಿ ಕೊಲೆಯಾಗಿರುವುದು ಬಯಲಾಗಿದೆ. ಇದನ್ನೂ ಓದಿ: ಬೆಂಗ್ಳೂರಲ್ಲಿ ಯುವತಿಯ ಬರ್ಬರ ಹತ್ಯೆ- 16 ಬಾರಿ ಚುಚ್ಚಿ ಕೊಂದ ಪಾಗಲ್ ಪ್ರೇಮಿ!

    ರಾಕೇಶ್ ಹಾಗೂ ಪ್ರಶಾಂತ್ ಇಬ್ಬರು ಕೂಡ ಸ್ನೇಹಿತರು ಯಾವಾಗಲೂ ಜೊತೆಯಲ್ಲಿ ಇದ್ದವರು, ಕೆಲ ತಿಂಗಳುಗಳಿಂದ ರಾಕೇಶ್, ಪ್ರಶಾಂತ್ ಪತ್ನಿಗೆ ಮೆಸೇಜ್ Message) ಮಾಡ್ತಾ ಇದ್ದ ಎನ್ನುವುದು ಪ್ರಶಾಂತ್‍ಗೆ ಗೊತ್ತಾಗಿದೆ. ಇದರಿಂದ ಗಲಾಟೆ ಕೂಡ ಆಗಿತ್ತು, ರಾಜಿ ಪಂಚಾಯಿತಿ ಕೂಡ ನಡೆದಿತ್ತು. ಅಲ್ಲದೆ ಇದರಿಂದ ಮನನೊಂದು ಅತ್ಮಹತ್ಯೆಗೆ ಕೂಡ ಪ್ರಶಾಂತ್ ಯತ್ನಿಸಿದ್ದು ಆಸ್ಪತ್ರೆಗೆ ಕರೆದೊಯ್ದು ಉಳಿಸಿಕೊಂಡು ಬಂದಿದ್ದರು. ಆದರೆ ಕಳೆದ ರಾತ್ರಿ ಕೂಡ ರಾಕೇಶ್ ಹಾಗೂ ಪ್ರಶಾಂತ್ ನಡುವೆ ಗಲಾಟೆಯಾಗಿದ್ದು ಇದರಿಂದ ಆತನ ತಲೆಗೆ ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ್ದಾನೆ.

    ಒಟ್ಟಾರೆಯಾಗಿ ಮೆಸೇಜ್ ಕಾರಣಕ್ಕೆ ಕೊಲೆಯಾಗಿದ್ಯೋ ಇಲ್ಲ ಬೇರೆ ಏನಾದ್ರು ಕಾರಣ ಇದೆಯೋ ಎನ್ನುವುದು ಪೊಲೀಸರು ವಿಚಾರಣೆ ನಡೆಸುತ್ತಿದ್ದು, ಕೊಲೆಯಾದ ಸ್ಥಳಕ್ಕೆ ನಗರ ಡಿವೈಎಸ್‍ಪಿ ಮಲ್ಲೇಶ್ ದೊಡ್ಡಮನಿ ಭೇಟಿ ಪರಿಶೀಲನೆ ನಡೆಸಿದ್ದು ಆರ್‍ಎಂಸಿ ಠಾಣೆ (RMC Police Station) ಯಲ್ಲಿ ಪ್ರಕರಣ ದಾಖಲಾಗಿದೆ.

  • ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತು

    ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್ ಕಳುಹಿಸಿದ ಶಿಕ್ಷಕ ಅಮಾನತು

    ತುಮಕೂರು: ವಿದ್ಯಾರ್ಥಿ ತಾಯಿಗೆ ಅಶ್ಲೀಲ ಮೆಸೇಜ್‌ ಕಳುಹಿಸಿದ ಶಿಕ್ಷಕನನ್ನು ಅಮಾನತು ಮಾಡಿರುವ ಘಟನೆ ಮಧುಗಿರಿ ತಾಲ್ಲೂಕಿನ ದೊಡ್ಡಹಟ್ಟಿಯಲ್ಲಿ ನಡೆದಿದೆ.

    ದೊಡ್ಡಹಟ್ಟಿ ಸರ್ಕಾರಿ ಶಾಲೆಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಸುರೇಶ್‌ ಅಮಾನತುಗೊಂಡ ಶಿಕ್ಷಕ. ಈತ ವಿದ್ಯಾರ್ಥಿಗಳ ಪೋಷಕರ ಮೊಬೈಲ್‌ ಸಂಖ್ಯೆ ಪಡೆದು ಅಶ್ಲೀಲವಾಗಿ ಮೆಸೇಜ್‌ ಕಳುಹಿಸುತ್ತಿದ್ದ. ಇದನ್ನೂ ಓದಿ: ಕೆಲಸ ಕೊಡಿಸುವುದಾಗಿ ವಂಚನೆ – ಯುವತಿಯರನ್ನು ಲೈಂಗಿಕವಾಗಿ ಬಳಸಿಕೊಂಡ ತಂಡ

    ಶಾಲೆಗೆ ಬರುತ್ತಿದ್ದ ವಿದ್ಯಾರ್ಥಿಗಳ ತಾಯಂದಿರ ನಂಬರ್‌ಗಳನ್ನು ಶಿಕ್ಷಕ ಪಡೆಯುತ್ತಿದ್ದ. ವಿದ್ಯಾರ್ಥಿಗಳ ತಾಯಂದಿರ ವಾಟ್ಸಪ್‌ಗೆ ಅಶ್ಲೀಲವಾಗಿ ಮೆಸೇಜ್ ಮಾಡಿ‌ ಕಿರುಕುಳ ನೀಡುತ್ತಿದ್ದ. ಇದರಿಂದ ಬೇಸತ್ತಿದ್ದ ಗ್ರಾಮದ ಮಹಿಳೆಯರು ಶಿಕ್ಷಕ ಸುರೇಶ್ ವಿರುದ್ದ ಡಿಡಿಪಿಐಗೆ ದೂರು ನೀಡಿದ್ದರು.

    ಗ್ರಾಮದ ಯುವಕರೊಂದಿಗೆ ಶಿಕ್ಷಕ ಸುರೇಶ್ ಪ್ರತಿನಿತ್ಯ ಪಾರ್ಟಿ ಮಾಡುತ್ತಿದ್ದ ಎಂದು ಸಹ ದೂರಿನಲ್ಲಿ ಆರೋಪಿಸಲಾಗಿದೆ. ಈ ಸಂಬಂಧ ತನಿಖೆ ನಡೆಸಿದ ಬಳಿಕ ಶಿಕ್ಷಕನನ್ನು ಅಮಾನತು ಮಾಡಲಾಗಿದೆ. ಮಧುಗಿರಿ ಡಿಡಿಪಿಐ ರೇವಣ್ಣ ಸಿದ್ದಪ್ಪ ಈ ಆದೇಶ ಹೊರಡಿಸಿದ್ದಾರೆ. ಇದನ್ನೂ ಓದಿ: ಪ್ರಧಾನಿಗೆ ವರದಿ ಕೊಟ್ಟ ಬಳಿಕ ಕ್ವಾಲಿಟಿ ಚೆಕ್‍ಗಿಳಿದ ಬಿಬಿಎಂಪಿ

    Live Tv

  • ಅತ್ತೆ ಮಗನ ಮೆಸೇಜ್‍ನಿಂದ ಆರಂಭವಾದ ಕಲಹ – ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ

    ಅತ್ತೆ ಮಗನ ಮೆಸೇಜ್‍ನಿಂದ ಆರಂಭವಾದ ಕಲಹ – ದಂಪತಿ ಆತ್ಮಹತ್ಯೆಯಲ್ಲಿ ಅಂತ್ಯ

    ಚಿತ್ರದುರ್ಗ: ಅತ್ತೆ ಮಗನೋರ್ವ ವಿವಾಹಿತ ಮಹಿಳೆಗೆ ಮೊಬೈಲ್ ಸಂದೇಶ ಕಳುಹಿಸಿದ ಹಿನ್ನೆಲೆಯಲ್ಲಿ ಆರಂಭವಾದ ಕೌಟಂಬಿಕ ಕಲಹ, ದಂಪತಿಯ ಆತ್ಮಹತ್ಯೆಯಿಂದ ಅಂತ್ಯವಾಗಿರುವ ಘಟನೆ ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನಯಾದಲಗಟ್ಟ ಗ್ರಾಮದಲ್ಲಿ ನಡೆದಿದೆ.

    ಯಾದಲಗಟ್ಟೆ ಗ್ರಾಮದಲ್ಲಿ ಪತ್ನಿ ಶೈಲ ಮತ್ತು ಪತಿ ಮಹಂತೇಶ್ ಇಬ್ಬರು 9 ವರ್ಷಗಳ ಹಿಂದೆ ಮದುವೆಯಾಗಿದ್ದರು. ಇವರಿಗೆ 4 ವರ್ಷದ ಹಾಗೂ 6 ವರ್ಷದ ಇಬ್ಬರು ಗಂಡು ಮಕ್ಕಳಿದ್ದಾರೆ. ಆದರೆ ಕಳೆದ ಆರೇಳು ತಿಂಗಳಿಂದ ಶೈಲ ಅವರ ಮೊಬೈಲ್ ಗೆ ಪತಿ ಕರೆ ಮಾಡಿದಾಗ ಅವರ ಮೊಬೈಲ್ ಸದಾ ಎಂಗೇಜ್ ಬರುತ್ತಿತ್ತು. ಅಲ್ಲದೇ ಪ್ರತಿದಿನ ಸಾಕಷ್ಟು ಮೆಸೇಜ್ ಗಳು ಸಹ ಶೈಲ ಅವರ ಮೊಬೈಲ್ ಗೆ ಬರುತ್ತಿದ್ದವಂತೆ. ಹೀಗಾಗಿ ಮೊಬೈಲ್ ಗಮನಿಸಿದ ಪತಿ ಮಹಂತೇಶ್, ಪತ್ನಿ ಶೈಲ ಜೊತೆ ಜಗಳವಾಡಿದ್ದಾನೆ. ಅಲ್ಲದೆ ಪತ್ನಿಗೆ ಎಚ್ಚರಿಕೆ ನೀಡಿದ್ದನು. ಬಳಿಕ ಎಲ್ಲಾ ವಿಚಾರದಲ್ಲೂ ಅನುಮಾನಿಸುತ್ತಿದ್ದನು. ಇದನ್ನೂ ಓದಿ: ಮಹಿಳೆಯನ್ನು ನಗ್ನ ಮಾಡಿ ಪೈಶಾಚಿಕ ಹಲ್ಲೆ ನಡೆಸಿದ ಕಿರಾತಕರು

    ಗಂಡನ ಅನುಮಾನ ಹಾಗೂ ಗಲಭೆಯಿಂದ ಮನನೊಂದ ಪತ್ನಿ ಶೈಲ ಭಾನುವಾರ ರಾತ್ರಿ ನೇಣಿಗೆ ಶರಣಾಗಿದ್ದಾಳೆ. ಆಗ ಪತ್ನಿಯ ಸಾವಿನಿಂದ ಮನನೊಂದ ಪತಿ ಮಹಂತೇಶ್ ಕೂಡ ಗಾಬರಿಯಾಗಿ ಸೋಮವಾರ ಬೆಳಗ್ಗೆ ನೇಣು ಹಾಕಿಕೊಂಡು ಸಾವನ್ನಪ್ಪಿದ್ದಾನೆ. ಇದಿರಿಂದಾಗಿ ಏನು ಅರಿಯದ ಕಂದಮ್ಮಗಳು ಅನಾಥರಾಗಿದ್ದಾರೆ.

    ಈ ಸಂಬಂಧ ತಳಕು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಘಟನೆ ಕುರಿತು ತನಿಖೆಯನ್ನು ಚುರುಕುಗೊಳಿಸಲಾಗಿದೆ ಎಂದು ಜಿಲ್ಲಾ ಪೊಲೀಸ್ ಎಸ್ಪಿ ಜಿ.ರಾಧಿಕಾ ತಿಳಿಸಿದ್ದಾರೆ. ಇದನ್ನೂ ಓದಿ: ಯಾದಗರಿಯಲ್ಲಿ ಮಹಿಳೆಯನ್ನು ನಗ್ನಗೊಳಿಸಿ ಥಳಿಸಿದ ನಾಲ್ವರು ಅರೆಸ್ಟ್

  • ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು

    ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿದ ಗ್ರಾಮಸ್ಥರು

    -ಮಹಿಳೆಯ ಕೊಲೆ ಮಾಡಿ ರಸ್ತೆ ಬದಿಗೆ ಬೀಸಾಕಿದ ದುಷ್ಕರ್ಮಿಗಳು

    ಚಿಕ್ಕೋಡಿ: ಮಹಿಳೆಯರನ್ನು ಚುಡಾಯಿಸುತ್ತಿದ್ದ ವ್ಯಕ್ತಿಯ ತಲೆ ಬೋಳಿಸಿ ಗ್ರಾಮಸ್ಥರು ಬುದ್ಧಿ ಕಲಿಸಿರುವ ಘಟನೆ ಬೆಳಗಾವಿ ಜಿಲ್ಲೆಯ ಅಥಣಿ ತಾಲೂಕಿನ ಮಹೇಶವಾಡಗಿ ಗ್ರಾಮದಲ್ಲಿ ನಡೆದಿದ್ದರೆ, ಇನ್ನೊಂದೆಡೆ ಮಹಿಳೆಯನ್ನು ಕೊಲೆ ಮಾಡಿ ರಸ್ತೆ ಬದಿಗೆ ಬೀಸಾಕಿ ದುಷ್ಕರ್ಮಿಗಳು ಪಾರಾರಿಯಾಗಿರುವ ಘಟನೆ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ನಡೆದಿದೆ.

    ವಾಟ್ಸಪ್ ನಲ್ಲಿ ಅಸಹ್ಯವಾಗಿ ಮೆಸೇಜ್ ಮಾಡುತ್ತಿದ್ದ ಸುಧಾಕರ್ ಡುಮ್ಮಗೋಳ ಎಂಬಾತನಿಗೆ ಗ್ರಾಮಸ್ಥರೆಲ್ಲರೂ ಸೇರಿ ಧರ್ಮದೇಟು ನೀಡಿ ತಲೆ ಬೋಳಿಸಿ ಪಾಠ ಕಲಿಸಿದ್ದಾರೆ. ಹಲವು ಬಾರಿ ಎಚ್ಚರಿಕೆ ನೀಡಿದರೂ ಸಹ ತನ್ನ ಖಯಾಲಿ ಮುಂದುವರೆಸಿದ್ದ ಸುಧಾಕರ್‍ಗೆ ವಾನಿರ್ಂಗ್ ಮಾಡಿದರೂ ಸಹ ಕೇಳದ ಸುಧಾಕರ್‍ನನ್ನು ಹಿಡಿದು ಗ್ರಾಮಸ್ಥರು ತಲೆ ಬೋಳಿಸಿದ್ದಾರೆ. ಸದ್ಯ ಈ ವೀಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದ್ದು, ಘಟನೆಯಿಂದ ಅವಮಾನಗೊಂಡ ಸುಧಾಕರ್ ಇದೀಗ ಊರು ಬಿಟ್ಟು ತಲೆ ಮರೆಸಿಕೊಂಡಿದ್ದಾನೆ. ಅಲ್ಲದೇ ಈ ಘಟನೆ ಅಥಣಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಇದನ್ನೂ ಓದಿ:ಅನ್ನದಾತರ ಬಾಳು ಹಸನಾಗಲು ಸಮಗ್ರ ಕೃಷಿ ಅಭಿಯಾನ ಸಹಕಾರಿ: ಶಶಿಕಲಾ ಜೊಲ್ಲೆ

    ಮತ್ತೊಂದೆಡೆ ಕೊಲೆ ಮಾಡಿ ರಸ್ತೆ ಪಕ್ಕದಲ್ಲಿ ಮಹಿಳೆಯ ಶವ ಎಸೆದು ಹೋಗಿರುವ ಘಟನೆ ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಕೋಳಿಗುಡ್ಡ ಗ್ರಾಮದಲ್ಲಿ ನಡೆದಿದೆ. ಗ್ರಾಮದ ಹೊರವಲಯದ ರಾಜ್ಯ ಹೆದ್ದಾರಿ 31ರ ಪಕ್ಕದ ಕಬ್ಬಿನ ಗದ್ದೆಯಲ್ಲಿ ದುಷ್ಕರ್ಮಿಗಳು ಶವ ಎಸೆದು ಹೋಗಿದ್ದಾರೆ ಎಂದು ಶಂಕಿಸಲಾಗಿದೆ. ಅಂದಾಜು 35 ವರ್ಷದ ಅಪರಚಿತ ಮಹಿಳೆಯ ಶವವನ್ನು ಬೀಸಾಕಿ ಹೋಗಿರುವ ಕಾರಣ ಸ್ಥಳಕ್ಕೆ ಹಾರೂಗೇರಿ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಲ್ಲದೇ ಮಹಿಳೆಯ ಪರಿಚಯ ಸಿಗುತ್ತಿದ್ದಂತೆ ದುಷ್ಕರ್ಮಿಗಳ ಹುಡುಕಾಟಕ್ಕೆ ಬಲೆ ಬೀಸಲಿದ್ದಾರೆ. ಹಾರೂಗೇರಿ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಇದನ್ನೂ ಓದಿ:ಪಂಚರ್ ಆಗಿ ಹಿಮ್ಮುಖವಾಗಿ ಚಲಿಸಿ ಟ್ರ್ಯಾಕ್ಟರ್ ಪಲ್ಟಿ

  • ಪುಟ್ಟ ಜಗಳದಿಂದ 4 ವರ್ಷದ ಪ್ರೀತಿ ದುರಂತದಲ್ಲಿ ಅಂತ್ಯ

    ಪುಟ್ಟ ಜಗಳದಿಂದ 4 ವರ್ಷದ ಪ್ರೀತಿ ದುರಂತದಲ್ಲಿ ಅಂತ್ಯ

    -ಮೆಸೇಜ್ ಮಾಡಿ ಆತ್ಮಹತ್ಯೆಗೆ ಶರಣಾದ ಯುವತಿ
    -ಮನನೊಂದು ಯುವಕ ನೇಣಿಗೆ ಶರಣು
    -ಮದುವೆ ಕನಸು ಕಂಡಿದ್ದ ಜೋಡಿ

    ಹೈದರಾಬಾದ್: ನಾಲ್ಕು ವರ್ಷದ ಪ್ರೀತಿ ದುರಂತ ಅಂತ್ಯ ಕಂಡಿದೆ. ಕೆಲವೇ ದಿನಗಳಲ್ಲಿ ಮದುವೆಯಾಗುತ್ತಿದ್ದ ಪ್ರೇಮಿಗಳಿಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಆಂಧ್ರ ಪ್ರದೇಶದ ವಿಶಾಖಪಟ್ಟಣಂನಲ್ಲಿ ನಡೆದಿದೆ.

    ಮಕಲಾ ಸಿರಿಶಾ (20) ಮತ್ತು ವೆಂಕಟೇಶ್ (22) ಮೃತ ಪ್ರೇಮಿಗಳು. ಇಬ್ಬರೂ ಯಲಮಂಚಿಲಿಯ ನಿವಾಸಿಗಳಾಗಿದ್ದು, ಇಬ್ಬರು ತಮ್ಮ ಪ್ರೀತಿಯ ವಿಚಾರವನ್ನು ಮನೆಯಲ್ಲಿ ಹೇಳಿದ್ದಾರೆ. ಮನೆಯವರು ಕೂಡ ಇವರ ಪ್ರೀತಿಗೆ ಒಪ್ಪಿ ಮದುವೆ ಮಾಡಲು ನಿರ್ಧರಿಸುತ್ತಾರೆ. ಆದರೆ ಮೊದಲು ಯುವತಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ನಂತರ ಆಕೆಯ ಗೆಳೆಯ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

    ಏನಿದು ಪ್ರಕರಣ:
    ಗೋಪಾಲಪಟ್ಟಣಂ ಮತ್ತು ಕಾಂಚರಾಪಲೆಂ ಪೊಲೀಸ್ ಠಾಣೆಯಲ್ಲಿ ಈ ಕುರಿತು ಪ್ರಕರಣ ದಾಖಲಾಗಿದೆ. ಮಕಲಾ ಸಿರಿಶಾ (20) ಯಲಮಂಚಿಲಿ ರಾಮ್‍ನಗರದಲ್ಲಿ ತನ್ನ ಪೋಷಕರು ಮತ್ತು ಸಹೋದರಿಯೊಂದಿಗೆ ವಾಸಿಸುತ್ತಿದ್ದಳು. ಈಕೆ ವಿದ್ಯಾಭ್ಯಾಸ ಮಾಡುತ್ತಿದ್ದಾಗ ಅದೇ ಪ್ರದೇಶದ ವೆಂಕಟೇಶ್‍ನನ್ನು ಪ್ರೀತಿಸುತ್ತಿದ್ದಳು. ಪ್ರೀತಿಯ ಬಗ್ಗೆ ಮನೆಯಲ್ಲಿ ಹೇಳಿದ್ದಾಳೆ. ನಂತರ ಆತನ ಜೊತೆಯೇ ಮದುವೆ ಮಾಡುವುದಾಗಿ ಪೋಷಕರು ಹೇಳಿದ್ದು, ಆ ಬಳಿಕ ಗೋಪಾಲಪಟ್ಟಣಂಗೆ ಕುಟುಂಬ ಸಮೇತ ಶಿಫ್ಟ್ ಆಗಿದ್ದಾರೆ. ಅಲ್ಲಿ ರೆಸ್ಟೋರೆಂಟ್ ನಡೆಸುತ್ತಿದ್ದರು.

    ಯುವತಿ ವೆಂಕಟೇಶ್ ಜೊತೆ ಫೋನ್‍ನಲ್ಲಿ ಮಾತನಾಡುತ್ತಿದ್ದಳು. ಮಂಗಳವಾರ ಸಂಜೆ ರೆಸ್ಟೋರೆಂಟ್ ಕೌಂಟರ್ ನಲ್ಲಿ ಕುಳಿತಿದ್ದ ವೇಳೆ ವೆಂಕಟೇಶ್, ಸಿರಿಶಾಗೆ ಫೋನ್ ಮಾಡಿದ್ದಾನೆ. ಸ್ವಲ್ಪ ಹೊತ್ತು ಮಾತಾಡಿದ ನಂತರ ಇಬ್ಬರು ಜಗಳ ಮಾಡಿಕೊಂಡಿದ್ದಾರೆ. ನಂತರ ಸಿರಿಶಾ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದೇನೆ ಎಂದು ಮೆಸೇಜ್ ಮಾಡಿ, ರೆಸ್ಟೋರೆಂಟ್‍ನಿಂದ ಮನೆಗೆ ತೆರಳಿದ್ದಳು. ಕೂಡಲೇ ಸಿರಿಶಾ ಸಹೋದರಿಗೆ ಫೋನ್ ಮಾಡಿದ್ದ ವೆಂಕಟೇಶ್ ವಿಚಾರವನ್ನು ಸಿರಿಶಾ ಸಹೋದರಿಗೆ ತಿಳಿಸಿದ್ದ. ಫೋನ್ ಕರೆ ಮಾಹಿತಿಯಂತೆ ಮನೆಗೆ ತೆರಳಿದ್ದ ಸಹೋದರಿಗೆ ಸಿರಿಶಾ ಕೊಠಡಿಯಲ್ಲಿ ಫ್ಯಾನ್‍ಗೆ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದು ಕಂಡು ಬಂದಿತ್ತು.

    ತಕ್ಷಣ ರೆಸ್ಟೋರೆಂಟ್ ಸಿಬ್ಬಂದಿಯ ನೆರವಿನಿಂದ ಸಿರಿಶಾಳನ್ನು ಗೋಪಾಲಪಟ್ಟಣದ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ದಾಖಲಿಸಿದ್ದಾರೆ. ಆದರೆ ಈಗಾಗಲೇ ಯುವತಿ ಮೃತಪಟ್ಟಿದ್ದಾಳೆ ಎಂದು ವೈದ್ಯರು ತಿಳಿಸಿದ್ದಾರೆ. ಈ ವಿಷಯ ತಿಳಿದ ಗೋಪಾಲಪಟ್ಟಣಂ ಪೊಲೀಸರು ಘಟನಾ ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ. ಮೃತಳ ತಾಯಿ ಹೇಳಿಕೆ ಮೇರೆಗೆ ಪ್ರಕರಣ ದಾಖಲಿಸಿದ್ದಾರೆ.

     

    ಮತ್ತೊಂದೆಡೆ, ಗೆಳತಿ ಮೃತಪಟ್ಟಿದ್ದಾಳೆ ಎಂದು ತಿಳಿದು ವೆಂಕಟೇಶ್ ತೀವ್ರ ಮನನೊಂದುಕೊಂಡಿದ್ದನು. ವೆಂಕಟೇಶ್ ಕಾಂಚರಪಲೆಂ ಪೊಲೀಸ್ ಠಾಣೆ ಬಳಿಯ ಬರ್ಮಾ ಕ್ಯಾಂಪ್ ಬಳಿ ವಾಸಿಸುತ್ತಿದ್ದನು. ಈತ ಬುಧವಾರ ಬೆಳಿಗ್ಗೆ ಮನೆಯ ಸಮೀಪವಿರುವ ಮರಕ್ಕೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಸ್ಥಳೀಯರು ನೋಡಿ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಮಾಹಿತಿ ತಿಳಿದು ತಕ್ಷಣ ಕಾಂಚರಾಪಲೆಂ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದಾರೆ.

  • ಆ್ಯಪ್ ಡೌನ್‍ಲೋಡ್ ಮಾಡಿ ಮಗನ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟಿದ್ದ 90 ಸಾವಿರ ಕಳೆದುಕೊಂಡ ತಂದೆ

    ಆ್ಯಪ್ ಡೌನ್‍ಲೋಡ್ ಮಾಡಿ ಮಗನ ಕ್ಯಾನ್ಸರ್ ಚಿಕಿತ್ಸೆಗೆ ಕೂಡಿಟ್ಟಿದ್ದ 90 ಸಾವಿರ ಕಳೆದುಕೊಂಡ ತಂದೆ

    ಮುಂಬೈ: ಮೊಬೈಲ್‍ಗೆ ಬಂದಿದ್ದ ಮೆಸೇಜ್ ನಂಬಿ ಆ್ಯಪ್ ಡೌನ್‍ಲೋಡ್ ಮಾಡಿ ವ್ಯಕ್ತಿಯೊಬ್ಬರು ತಮ್ಮ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಕೂಡಿಟ್ಟಿದ್ದ 90 ಸಾವಿರ ರೂ. ಹಣವನ್ನು ಕಳೆದುಕೊಂಡು ಕಂಗಾಲಾಗಿದ್ದಾರೆ.

    ಇತ್ತೀಚೆಗೆ ಆನ್‍ಲೈನ್ ವಂಚನೆ ಪ್ರಕರಣ ದಿನೇ ದಿನೇ ಹೆಚ್ಚಾಗುತ್ತಿದ್ದು, ಅಮಾಯಕರು ಸೈಬರ್ ವಂಚಕರ ಜಾಲಕ್ಕೆ ಬಿದ್ದು ತಮ್ಮ ಹಣವನ್ನು ಕಳೆದುಕೊಳ್ಳುತ್ತಿದ್ದಾರೆ. ಮುಂಬೈನ ಸಂಕೇತ್ ಕುಮಾರ್ ವರ್ಮಾ(35) ತಮ್ಮ ಮಗನ ಕ್ಯಾನ್ಸರ್ ಚಿಕಿತ್ಸೆಗಾಗಿ ಕಷ್ಟಪಟ್ಟು ಕೂಡಿಟ್ಟಿದ್ದ ಬರೋಬ್ಬರಿ 90 ಸಾವಿರ ರೂ. ಹಣವನ್ನು ಕಳೆದುಕೊಂಡಿದ್ದಾರೆ. ಡಿಸೆಂಬರ್ 24ಕ್ಕೆ ವರ್ಮಾ ಅವರ ಮೊಬೈಲ್‍ಗೆ ಒಂದು ಮೆಸೇಜ್ ಬಂದಿತ್ತು. ಅದರಲ್ಲಿ ನಿಮ್ಮ ವಾಲೆಟ್‍ನನ್ನು ಲಾಕ್ ಮಾಡಲಾಗುತ್ತದೆ. ನೀವು ನಿಮ್ಮ ಅಕೌಂಟ್‍ನ ಕೆವೈಸಿ ಪ್ರಕ್ರಿಯೆ ಪೂರ್ಣಗೊಳಿಸಿಲ್ಲ ಎಂದು ಬರೆದಿತ್ತು. ಇದನ್ನೂ ಓದಿ: ಒಎಲ್‍ಎಕ್ಸ್ ದೋಖಾ – ಓಮ್ನಿ ಆಸೆಗೆ ಬಿದ್ದ ಕಾರ್ಮಿಕರಿಗೆ ಪಂಗನಾಮ

    ಇದನ್ನು ನೋಡಿ ಗಾಬರಿಯಾದ ವರ್ಮಾ ಅವರು ತಕ್ಷಣ ಆ ಮೆಸೆಜ್‍ನಲ್ಲಿ ಇದ್ದ ನಂಬರ್‍ಗೆ ಫೋನ್ ಮಾಡಿ ವಿಚಾರಿಸಿದರು. ಆಗ ಫೋನ್‍ನಲ್ಲಿ ಮಾತನಾಡಿದ ವ್ಯಕ್ತಿ, ಮೆಸೆಜ್‍ನಲ್ಲಿರುವ ಲಿಂಕ್ ಓಪನ್ ಮಾಡಿ ಕ್ವಿಕ್ಕರ್ ಸಪೋರ್ಟ್ ಆ್ಯಪ್ ಡೌನ್‍ಲೋಡ್ ಮಾಡುವಂತೆ ಸೂಚಿಸಿದ್ದನು. ಆತನ ಸಲಹೆಯಂತೆ ವರ್ಮಾ ಅವರು ಆ್ಯಪ್ ಡೌನ್‍ಲೋಡ್ ಮಾಡಿ, ಅದರಲ್ಲಿ ನಮ್ಮ ವಿವರ ತುಂಬಿದರು. ಅವರ ಎರಡು ಬ್ಯಾಂಕ್ ಅಕೌಂಟ್ ವಿವರಗಳನ್ನು ಕೂಡ ವರ್ಮಾ ನೀಡಿದ್ದರು.

    ಎಲ್ಲಾ ವಿವರಗಳು ಬರ್ತಿ ಮಾಡಿದ ಕೆಲ ನಿಮಿಷದಲ್ಲಿಯೇ ವರ್ಮಾ ಅವರ ಎರಡು ಅಕೌಂಟ್‍ನಲ್ಲಿದ್ದ 90 ಸಾವಿರ ರೂ. ಕಡಿತಗೊಂಡಿದೆ. ಆಗ ಮತ್ತೆ ಮೆಸೇಜ್‍ನಲ್ಲಿ ನೀಡಲಾಗಿದ್ದ ನಂಬರ್‍ಗೆ ಕರೆ ಮಾಡಿದರೆ ಯಾರೂ ಪ್ರತಿಕ್ರಿಯೆ ನೀಡಲಿಲ್ಲ. ಇದರಿಂದ ಕಂಗಾಲಾದ ವರ್ಮಾ ಅವರು ತಕ್ಷಣ ಪೊಲೀಸರ ಮೊರೆ ಹೋದರು. ಮಗನ ಚಿಕಿತ್ಸೆಗೆ ಹಣ ಕೂಡಿಟ್ಟಿದ್ದೆ ಎಲ್ಲವೂ ವಂಚನೆಯಾಯ್ತು ಎಂದು ತಂದೆ ಕಣ್ಣೀರಿಡುತ್ತಿದ್ದಾರೆ.

    ಈ ಬಗ್ಗೆ ದೂರು ದಾಖಲಿಸಿದ್ದರು. ಸದ್ಯ ಈ ಬಗ್ಗೆ ತನಿಖೆ ನಡೆಸುತ್ತಿರುವ ಪೊಲೀಸರು, ವರ್ಮಾ ಅವರ ಬ್ಯಾಂಕ್ ಅಕೌಂಟ್‍ನಿಂದ ಯಾರ ಅಕೌಂಟ್‍ಗೆ ಹಣ ವರ್ಗಾವಣೆಯಾಗಿದೆ? ಆ ಅಕೌಂಟ್ ಯಾರ ಹೆಸರಿನಲ್ಲಿದೆ ಎನ್ನುವುದರ ಬಗ್ಗೆ ಮಾಹಿತಿ ಕಲೆಹಾಕುತ್ತಿದ್ದೇವೆ ಎಂದು ತಿಳಿಸಿದ್ದಾರೆ.

    ಈ ಹಿಂದೆ ಮುಂಬೈನ ವ್ಯಕ್ತಿಯೊಬ್ಬರು ಆನ್‍ಲೈನ್‍ನಲ್ಲಿ ವೈನ್ ಆರ್ಡರ್ ಮಾಡಿ 96 ಸಾವಿರ ರೂ. ಕಳೆದುಕೊಂಡಿದ್ದರು. ಆನ್‍ಲೈನ್ ವ್ಯವಹಾರದ ವೇಳೆ ಹಣ ಕಡಿತಗೊಂಡಿತ್ತು ಎಂದು ಸಂತ್ರಸ್ತ ವ್ಯಕ್ತಿ ಪೊಲೀಸರಿಗೆ ದೂರು ಕೊಟಿದ್ದರು.