Tag: ಮೆಸೆಂಜಿಂಗ್ ಅಪ್ಲಿಕೇಶನ್

  • ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಈ ಫೋನ್‍ಗಳಿಗೆ ಡಿಸೆಂಬರ್ 31ರ ನಂತರ ವಾಟ್ಸಪ್ ಸಪೋರ್ಟ್ ಮಾಡಲ್ಲ!

    ಲಂಡನ್: ವಿಶ್ವದ ನಂಬರ್ ಒನ್ ಚಾಟಿಂಗ್ ಅಪ್ಲಿಕೇಶನ್ ವಾಟ್ಸಪ್ ಡಿಸೆಂಬರ್ 31 ರ ನಂತರ ಆಯ್ದ ಮೊಬೈಲ್ ಓಎಸ್ ಗಳಿಗೆ ಸಪೋರ್ಟ್ ನೀಡದೇ ಇರಲು ನಿರ್ಧರಿಸಿದೆ. ಬ್ಲಾಕ್ ಬೆರಿ ಓಎಸ್, ಬ್ಲಾಕ್‍ಬೆರಿ 10 ಓಎಸ್, ವಿಂಡೋಸ್ ಫೋನ್ 8.0 ಮತ್ತು ಅದಕ್ಕಿಂತ ಹಳೆಯ ವಿಂಡೋಸ್ ಫೋನ್ ಗಳಿಗೆ ಸಪೋರ್ಟ್ ನೀಡುವುದಿಲ್ಲ ಎಂದು ತಿಳಿಸಿದೆ.

    ಈ ಫೋನ್ ಗಳಲ್ಲದೇ ಡಿಸೆಂಬರ್ 2018ರ ನಂತರ ನೋಕಿಯಾ ಎಸ್ 40 ಫೋನ್‍ ಗಳಲ್ಲಿ  ಆ್ಯಪ್ ಕೆಲಸ ಮಾಡುವುದಿಲ್ಲ ಎಂದು ಹೇಳಿದೆ. ಅಷ್ಟೇ ಅಲ್ಲದೇ ಆಂಡ್ರಾಯ್ಡ್ 2.3.7 ಆವೃತ್ತಿ ಫೋನ್ ಗಳಲ್ಲಿ 2020ರ ಫೆಬ್ರವರಿ 1ರ ನಂತರ ಸಪೋರ್ಟ್ ನೀಡುವುದಿಲ್ಲ ಎಂದು ವಾಟ್ಸಪ್ ಹೇಳಿದೆ.

    ತನ್ನ ಬ್ಲಾಗ್ ನಲ್ಲಿ ವಾಟ್ಸಪ್, ಕೆಲವು ಓಎಸ್ ಗಳಲ್ಲಿ ರನ್ ಆಗುತ್ತಿರುವ ಫೋನ್ ಗಳಿಗೆ ಬೆಂಬಲ ನೀಡದೇ ಇರಲು ನಿರ್ಧರಿಸಿದ್ದೇವೆ. ಹೀಗಾಗಿ ಈ ಫೋನ್ ಗಳನ್ನು ಬಳಸುವ ಗ್ರಾಹಕರು ಹೊಸ ಓಎಸ್ ಗೆ ಅಪ್ ಗ್ರೇಡ್ ಆಗಬೇಕು ಎಂದು ತಿಳಿಸಿದೆ. ಆಂಡ್ರಾಯ್ಡ್ 4.0 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಓಎಸ್, ಐಓಎಸ್ 7 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿ ಐಓಎಸ್ ಹೊಂದಿರುವ ಫೋನ್, ವಿಂಡೋಸ್ ಫೋನ್ 8.1 ಮತ್ತು ಅದಕ್ಕಿಂತ ಹೆಚ್ಚಿನ ಆವೃತ್ತಿಯ ಆಪರೇಟಿಂಗ್ ಸಿಸ್ಟಂ ಹೊಂದಿರುವ ಫೋನ್ ಗಳಿಗೆ ನೀಡುತ್ತಿರುವ ಬೆಂಬಲ ಮುಂದುವರಿಯುತ್ತದೆ ಎಂದು ಬರೆದುಕೊಂಡಿದೆ. ಇದನ್ನೂ ಓದಿ: ಗ್ರೂಪ್ ಅಡ್ಮಿನ್‍ಗಳಿಗೆ ಸುಪ್ರೀಂ ಪವರ್ ಕೊಟ್ಟ ವಾಟ್ಸಪ್!

    ಹೊಸ ಫೋನ್ ಪಡೆದುಕೊಂಡರೆ ವಾಟ್ಸಪ್ ಆ್ಯಪ್ ಇನ್ ಸ್ಟಾಲ್ ಮಾಡಿ ಫೋನ್ ನಂಬರ್ ವೆರಿಫೈ ಮಾಡಿ. ಆದರೆ ವಾಟ್ಸಪ್ ಆ್ಯಪ್ ಒಂದು ಬಾರಿ ಒಂದೇ ಫೋನಿನಲ್ಲಿ ಮಾತ್ರ ಆ್ಯಕ್ಟಿವೇಟ್ ಆಗಿರುತ್ತದೆ ಎನ್ನುವುದನ್ನು ಗಮನದಲ್ಲಿಟ್ಟುಕೊಳ್ಳಿ ಎಂದು ಹೇಳಿದೆ.

    ಈ ವೇಳೆ ಚಾಟ್ ಹಿಸ್ಟರಿಯನ್ನು ಎರಡು ಫೋನ್ ಗಳಿಗೆ ನೇರವಾಗಿ ವರ್ಗಾವಣೆ ಮಾಡಲು ಸಾಧ್ಯವಿಲ್ಲ. ಆದರೆ ಆದರೆ ಈ ಮೇಲ್ ಕೊಟ್ಟರೆ ಚಾಟ್ ಹಿಸ್ಟರಿಯನ್ನು ಕಳುಹಿಸಿಕೊಡುವುದಾಗಿ ವಾಟ್ಸಪ್ ಹಳೆಯ ಫೋನ್ ಗಳನ್ನು ಬಳಸುತ್ತಿರುವ ಗ್ರಾಹಕರಿಗೆ ತಿಳಿಸಿದೆ.

    2009 ಫೆಬ್ರವರಿ 9ರಂದು ಆರಂಭಗೊಂಡ ವಾಟ್ಸಪ್ ಕಂಪೆನಿಯನ್ನು 19 ಶತಕೋಟಿ ಡಾಲರ್ ನೀಡಿ ಫೇಸ್‍ಬುಕ್ 2014ರಲ್ಲಿ ಖರೀದಿಸಿದೆ. ಯಾವುದೇ ಕಾರಣಕ್ಕೂ ಜಾಹೀರಾತುಗಳನ್ನು ತೋರಿಸುವುದಿಲ್ಲ ಎಂದು ವಾಟ್ಸಪ್ ಹೇಳಿಕೊಂಡಿದೆ. ಪ್ರಸ್ತುತ ವಿಶ್ವದಲ್ಲಿ ಪ್ರತಿ ತಿಂಗಳು 102 ಕೋಟಿ ಸಕ್ರೀಯ ಬಳಕೆದಾರರಿದ್ದು, ಭಾರತದಲ್ಲೇ 20 ಕೋಟಿ ಮಂದಿ ವಾಟ್ಸಪ್ ಬಳಸುತ್ತಿದ್ದಾರೆ. ಇದನ್ನೂ ಓದಿ: ವಾಟ್ಸಪ್ ಅಡ್ಮಿನ್‍ಗಳೇ ಹುಷಾರ್! ನೀವು ಅಡ್ಮಿನ್‍ಗಳಾಗಿರುವ ಗ್ರೂಪ್‍ನಲ್ಲಿ ಗಲಾಟೆ ಆಗ್ತಿದ್ರೆ ಈ ಸ್ಟೋರಿ ಓದಿ

    ವಾಟ್ಸಪ್ 8ನೇ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ ಭಾರತದ ಮಾಧ್ಯಮದ ಜೊತೆ ವಾಟ್ಸಪ್ ಸಂಸ್ಥಾಪಕ ಬ್ರಿಯಾನ್ ಆಕ್ಟನ್ ಮಾತನಾಡಿ, ಡಿಜಿಟಲ್ ಪೇಮೆಂಟ್ ವ್ಯವಸ್ಥೆ ಅಳವಡಿಸಲು ಚಿಂತನೆ ನಡೆದಿದೆ. ವಿಚಾರದ ಬಗ್ಗೆ ಪ್ರಾಥಮಿಕ ಹಂತದ ಮಾತುಕತೆ ನಡೆಯುತ್ತಿದೆ, ಭಾರತೀಯ ಬಳಕೆದಾರರಿಗೆ ಕೆಲಸ ಮಾಡುವುದು ಸಂತದ ತಂದಿದೆ ಎಂದು ಅವರು ತಿಳಿಸಿದ್ದರು. ಇದನ್ನೂ ಓದಿ: ಜಾಹೀರಾತು ಸೆಂಡ್ ಮಾಡದೇ ಹಣ ಮಾಡಲು ಮುಂದಾದ ವಾಟ್ಸಪ್ 

  • ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

    ಇನ್ನು ಮುಂದೆ ವಾಟ್ಸಪ್ ನಲ್ಲಿ ಅಧಿಕೃತ ಖಾತೆಗಳನ್ನು ಗುರುತಿಸೋದು ಸುಲಭ!

    ನವದೆಹಲಿ: ಟ್ವಿಟ್ಟರ್, ಫೇಸ್‍ಬುಕ್ ನಲ್ಲಿ ನೀವು ಸೆಲೆಬ್ರಿಟಿ, ರಾಜಕೀಯ ಪಕ್ಷ, ಕಂಪೆನಿಗಳ ಅಧಿಕೃತ ಖಾತೆಗಳು ಇರುವುದನ್ನು ನೀವು ನೋಡಿರಬಹುದು. ಇನ್ನು ಮುಂದೆ ವಾಟ್ಸಪ್‍ನಲ್ಲೂ ಇದೇ ರೀತಿಯ ಅಧಿಕೃತ ಖಾತೆಗಳು ಇರಲಿದೆ.

    ಹೌದು. ಬಿಸಿನೆಸ್ ಪೇಜ್ ಹೊಂದಿರುವ ಮಂದಿಗೆ ಹೊಸ ವಿಶೇಷತೆ ಸೇರಿಸಲು ವಾಟ್ಸಪ್ ಪರೀಕ್ಷೆ ನಡೆಸುತ್ತಿದ್ದು, ಅಧಿಕೃತ ವಾಟ್ಸಪ್ ನಂಬರ್ ಹೊಂದಿರುವ ಬಳಕೆದಾರಿಗೆ ಟಿಕ್ ಮಾರ್ಕ್ ನೀಡಲು ಮುಂದಾಗಿದೆ.

    ಬಿಸಿನೆಸ್ ಪೇಜ್ ಹೆಸರಿನ ಸಮೀಪವೇ ಹಸಿರು ಬಣ್ಣದ ಮಧ್ಯೆ ಬಿಳಿ ಟಿಕ್‍ಮಾರ್ಕ್ ಚಿಹ್ನೆಯನ್ನು ವಾಟ್ಸಪ್ ನೀಡಲಿದೆ. ಮೆಸೇಜ್ ಗಳು ಅಧಿಕೃತ ಪೇಜ್ ನಿಂದಲೇ ಬಂದಿದೆ ಎಂದು ಬಳಕೆದಾರರಿಗೆ ಗುರುತಿಸಲು ಚಾಟ್ ಮಾಡುವ ವೇಳೆ ಹಳದಿ ಬಣ್ಣದ ಮೆಸೇಜ್ ಬರುತ್ತದೆ ಮತ್ತು ಈ ಚಾಟ್ ಗಳನ್ನು ಡಿಲೀಟ್ ಮಾಡಲು ಸಾಧ್ಯವಿಲ್ಲ ಎಂದು ವಾಟ್ಸಪ್ ಹೇಳಿದೆ.

    ಒಂದು ವೇಳೆ ನಿಮ್ಮ ಫೋನಲ್ಲಿ ಮೊದಲೇ ಬಿಸೆನೆಸ್ ಪೇಜ್ ಗಳ ಫೋನ್ ನಂಬರ್ ಸೇವ್ ಆಗಿದ್ದರೆ, ಮೆಸೇಜ್ ನೀವು ಸೇವ್ ಮಾಡಿದ ಹೆಸರಿನಲ್ಲೇ ಬರುತ್ತದೆ ಎಂದು ತಿಳಿಸಿದೆ.

    ಈಗ ಇದು ಆರಂಭಿಕ ಹಂತದಲ್ಲಿದ್ದು, ವಾಟ್ಸಪ್ ಬೀಟಾದ ಆಂಡಾಯ್ಡ್ ಬಳಕೆದಾರರಿಗೆ ಲಭ್ಯವಾಗಲಿದೆ. ಪರೀಕ್ಷಾರ್ಥವಾಗಿ ಕೆಲ ಬುಸಿನೆಸ್ ಪೇಜ್ ಗಳಿಗೆ ಈ ವಿಶೇಷತೆ ನೀಡಿದ ಬಳಿಕ ಈ ಸೇವೆ ಎಲ್ಲ ಬಳಕೆದಾರರಿಗೆ ಲಭ್ಯವಾಗಲಿದೆ.

    ಯಾವುದೇ ಕಾರಣಕ್ಕೂ ನಾವು ಜಾಹೀರಾತುಗಳನ್ನು ಪ್ರಕಟಿಸಿ ಬಳಕೆದಾರರಿಗೆ ಕಿರಿಕಿರಿ ಮಾಡುವುದಿಲ್ಲ ಎಂದು ಹೇಳಿರುವ ವಾಟ್ಸಪ್ ಕೆಲ ವರ್ಷಗಳಿಂದ ಜಾಹೀರಾತು ಮೂಲಗಳನ್ನು ಹುಡುಕುತ್ತಿದೆ. ಹೀಗಾಗಿ ಈಗ ಹೊಸದಾಗಿ ಆರಂಭಿಸಲಿರುವ ಈ ಬಿಸಿನೆಸ್ ಸೇವೆ ಉಚಿತವೇ ಎನ್ನುವ ಪ್ರಶ್ನೆಗೆ ಸದ್ಯಕ್ಕೆ ಉತ್ತರ ಸಿಕ್ಕಿಲ್ಲ.

    ಇದನ್ನೂ ಓದಿ: ನೀವು ವಾಟ್ಸಪ್ ಅಡ್ಮಿನ್ ಆಗಿದ್ದೀರಾ? ಹಾಗಾದ್ರೆ ಹುಷಾರಾಗಿರಿ